Tag: ಶ್ರೀಲೇಶ್ ಎಸ್ ನಾಯರ್

  • ವಿನಯ್ ರಾಜ್ ಕುಮಾರ್ ಅಭಿನಯದ ‘ಪೆಪೆ’ ಸಿನಿಮಾ ಶೂಟಿಂಗ್ ಮುಕ್ತಾಯ

    ವಿನಯ್ ರಾಜ್ ಕುಮಾರ್ ಅಭಿನಯದ ‘ಪೆಪೆ’ ಸಿನಿಮಾ ಶೂಟಿಂಗ್ ಮುಕ್ತಾಯ

    ಟ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪೆಪೆ’. ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರದ ಟೀಸರ್ ಝಲಕ್ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಸಾಕಷ್ಟು ಉತ್ತಮ ರೆಸ್ಪಾನ್ಸ್ ಟೀಸರ್ ಪಡೆದುಕೊಂಡಿತ್ತು. ಹೀಗೆ ಆರಂಭದಿಂದಲೂ ಸಿನಿರಸಿಕರಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ‘ಪೆಪೆ’ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಾಗಿದೆ.

    ಶ್ರೀಲೇಶ್ ಎಸ್ ನಾಯರ್ ನಿರ್ದೇಶನಲ್ಲಿ ಮೂಡಿ ಬರ್ತಿರುವ ‘ಪೆಪೆ’ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇಷ್ಟು ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಕಲೇಶಪುರದಲ್ಲಿ ನಡೆದ ಕ್ಲೈಮ್ಯಾಕ್ಸ್ ಸೀನ್ ಶೂಟಿಂಗ್ ಬಳಿಕ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ. ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡಿದ ಕ್ಲೈಮ್ಯಾಕ್ಸ್ ಫೈಟಿಂಗ್ ಸೀನ್ ಸೆರೆ ಹಿಡಿಯುವ ಮೂಲಕ ‘ಪೆಪೆ’ ಚಿತ್ರೀಕರಣಕ್ಕೆ ಶುಭಂ ಹೇಳಲಾಗಿದೆ. ಇದನ್ನೂ ಓದಿ: ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

    ಆರಂಭದಿಂದ ಒಂದೇ ರೀತಿ ಸಿನಿಮಾಗಳಿಗೆ ಮೊರೆ ಹೋಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನತೆ ಕಾಪಾಡಿಕೊಂಡು ಬರ್ತಿರುವ ವಿನಯ್ ರಾಜ್ ಕುಮಾರ್ ಚಿತ್ರದಲ್ಲಿ ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್, ಪೋಸ್ಟರ್ ಝಲಕ್ ನಲ್ಲಿ ವಿನಯ್ ಕಂಡು ದೊಡ್ಮನೆ ಅಭಿಮಾನಿಗಳು, ಸಿನಿರಸಿಕರು ಥ್ರಿಲ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ಚಿತ್ರದಲ್ಲಿ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಒಳಗೊಂಡ ತಾರಾಬಳಗವಿದೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕೊಡಗು, ಸಕಲೇಶಪುರದಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಚಿತ್ರವನ್ನು ಉದಯ್ ಮತ್ತು ಶ್ರೀರಾಮ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. 2018ರಲ್ಲಿ ತೆರೆಕಂಡ ಅನಂತು v/s ನುಸ್ರುತ್ ಸಿನಿಮಾ ಬಳಿಕ ವಿನಯ್ ರಾಜ್ ಕುಮಾರ್ ಯಾವುದೇ ಸಿನಿಮಾ ತೆರೆಕಂಡಿಲ್ಲ. ‘ಪೆಪೆ’ ಜೊತೆಗೆ ‘ಗ್ರಾಮಾಯಣ’, ‘ಅದೊಂದಿತ್ತು ಕಾಲ’ ಸಿನಿಮಾಗಳಲ್ಲೂ ವಿನಯ್ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]