Tag: ಶ್ರೀಲಂಕಾ

  • Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    – ಭಾರತದ ವನಿತೆಯರಿಗೆ ವಿರೋಚಿತ ಸೋಲು

    ಡಂಬುಲ್ಲಾ: 2024ರ ಮಹಿಳಾ ಟಿ20 ಏಷ್ಯಾಕಪ್‌ (Women’s Asia Cup 2024) ಟೂರ್ನಿಯಲ್ಲಿ ಆಥಿತೇಯ ಶ್ರೀಲಂಕಾ ತಂಡ (SriLanka Womens Team) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ (Asian champions) ಆಗಿ ಹೊರಹೊಮ್ಮಿದ್ದು, 20 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದೆ. ಭಾರತ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಮಹಿಳಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 165 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಲಂಕಾ 18.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. 2012, 2016, 2018, 2022ರಲ್ಲಿ ಫೈನಲ್‌ ತಲುಪಿದ್ದ ಭಾರತ ಮೂರು ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಇನ್ನೂ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ 2022ರಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದ್ದ ಶ್ರೀಲಂಕಾ ಭಾರತದ ವಿರುದ್ಧವೇ 8 ವಿಕೆಟ್‌ಗಳ ಅಂತರದಿಂದ ಸೋತು ಚಾಂಪಿಯನ್‌ ಪಟ್ಟ ಕಳೆದುಕೊಂಡಿತ್ತು. ಇದೀಗ ಭಾರತದ ವಿರುದ್ಧವೇ ಗೆದ್ದು ಸೇಡು ತೀರಿಸಿಕೊಂಡಿದೆ.

    ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?
    13 ಓವರ್‌ಗಳ ವರೆಗೆ ಲಂಕಾ 2 ವಿಕೆಟ್‌ ಕಳೆದುಕೊಂಡಿದ್ದರೂ 99 ರನ್‌ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪೂಜಾ ವಸ್ತ್ರಕಾರ್‌ 14 ರನ್‌, 18ನೇ ಓವರ್‌ನಲ್ಲಿ ರಾಧಾ ಯಾದವ್‌ 17 ರನ್‌ ಬಿಟ್ಟುಕೊಟ್ಟರು. ಇದೂ ಲಂಕಾಗೆ ಬಹುದೊಡ್ಡ ಲಾಭವಾಯಿತು. ಅಲ್ಲದೇ ಕಳಪೆ ಫೀಲ್ಡಿಂಗ್‌, ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಭಾರತ ತಂಡ ಸೋಲು ಕಂಡಿತು.

    166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಲಂಕಾ 7 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ನಂತರದಲ್ಲಿ ತಾಳ್ಮೆಯ ಆಟದೊಂದಿಗೆ ಗೆಲುವಿನ ಹಾದಿಯತ್ತ ಸಾಗಿತ್ತು. ನಾಯಕಿ ಚಾಮರಿ ಚಾಮರಿ ಅಥಾಪತ್ತು (Chamari Athapaththu) ಹಾಗೂ ಹರ್ಷಿತಾ ಸಮರವಿಕ್ರಮ (Harshitha Samarawickrama) ಅವರ ಆಕರ್ಷಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತದ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಿತು.

    ಲಂಕಾ ಪರ ನಾಯಕಿ ಚಾಮರಿ ಅಥಾಪತ್ತು 43 ಎಸೆತಗಳಲ್ಲಿ 61 ರನ್‌ ಗಳಿಸಿದ್ರೆ, ಹರ್ಷಿತಾ 51 ಎಸೆತಗಳಲ್ಲಿ 69 ರನ್‌ ಬಾರಿಸಿದರು. ಇದರೊಂದಿಗೆ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ ಸ್ಫೋಟಕ 30 ರನ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಅಲ್ಲದೇ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ 19 ಎಸೆತಗಳಲ್ಲಿ 16 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌, ಉಮಾ ಚೆಟ್ರಿ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು ಇದು ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ನೀಡಿತ್ತು.

    ಮಂಧಾನ ಬ್ಯಾಟಿಂಗ್‌ ಕಮಾಲ್‌:
    ಒಂದೆಡೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಟೀಂ ಇಂಡಿಯಾ ಪರ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಬಾರಿಸುವ ಮೂಲಕ ಆಧಾರವಾದರು. 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸುವ ಮೂಲಕ ತಂಡದ ಮೊತ್ತ 160 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕೊನೆಯಲ್ಲಿ ರಿಚಾ ಘೋಷ್‌ 14 ಎಸೆತಗಳಲ್ಲಿ ಸ್ಫೋಟಕ 30 ರನ್‌, ಜೆಮಿಮಾ ರೊಡ್ರಿಗ್ಸ್‌ 16 ಎಸೆತಗಳಲ್ಲಿ 29 ರನ್‌ ಗಳ ಕೊಡುಗೆ ನೀಡಿದರು. ಪೂಜಾ ವಸ್ತ್ರಕಾರ್‌ 5 ರನ್‌, ರಾಧಾ ಯಾದವ್‌ 1 ರನ್‌, ಉಮಾ ಚೆಟ್ರಿ 9 ರನ್‌ ಹಾಗೂ ಕೌರ್‌ 11 ರನ್‌ ಗಳಿಸಿದರು.

  • ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಎಡಗೈಗೆ ಗಾಯ – ಮಹಿಳಾ ಏಷ್ಯಾಕಪ್‌ನಿಂದ ಔಟ್‌

    ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಎಡಗೈಗೆ ಗಾಯ – ಮಹಿಳಾ ಏಷ್ಯಾಕಪ್‌ನಿಂದ ಔಟ್‌

    ಕೊಲೊಂಬೊ: ಟೀಂ ಇಂಡಿಯಾ (Team India) ಮಹಿಳಾ ತಂಡದ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ (Shreyanka Patil) ಎಡಗೈಗೆ ಗಾಯವಾಗಿದ್ದು, ಮಹಿಳಾ ಏಷ್ಯಾ ಕಪ್ 2024 ನಿಂದ ಹೊರಗುಳಿದಿದ್ದಾರೆ.

    ಶ್ರೀಲಂಕಾದ (Sri Lanka) ಡಂಬುಲ್ಲಾದಲ್ಲಿರುವ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಮಹಿಳಾ ಏಷ್ಯಾ ಕಪ್ 2024 ರ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು, ಯುಎಇ ತಂಡದೊಂದಿಗೆ ಸೆಣಸಲಿದ್ದಾರೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

    ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ, ಶ್ರೇಯಾಂಕಾ ಎಡಗೈಯ ನಾಲ್ಕನೇ ಬೆರಳಿಗೆ ಗಾಯವಾಗಿದೆ ಎಂದು ತಿಳಿಸಿದೆ. ಶ್ರೇಯಾಂಕಾ ಬದಲಿಗೆ ವುಮೆನ್ ಇನ್ ಬ್ಲೂ ತಂಡದಲ್ಲಿ ತನುಜಾ ಕನ್ವರ್ (21) ಆಡಲಿದ್ದಾರೆ.

    ದಂಬುಲ್ಲಾದಲ್ಲಿ ನಡೆದ ಪಾಕಿಸ್ತಾನ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಯುವ ಆಟಗಾರ್ತಿ ತನ್ನ 3.2 ಓವರ್‌ಗಳಲ್ಲಿ 14 ರನ್‌ಗಳನ್ನು ಬಿಟ್ಟು ಎರಡು ವಿಕೆಟ್ ಕಿತ್ತಿದ್ದರು. ಇದನ್ನೂ ಓದಿ: Women’s Asia Cup 2024: ಸಿಂಹಿಣಿಯರ ಅಬ್ಬರಕ್ಕೆ ಪಾಕ್ ಧೂಳಿಪಟ – ಭಾರತಕ್ಕೆ ಗೆಲುವಿನ ಶುಭಾರಂಭ!

  • ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್‌ ಆಗಿ ʻಗಂಭೀರ್‌ ಹೊಸ ಅಧ್ಯಾಯʼ ಶುರು!

    ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್‌ ಆಗಿ ʻಗಂಭೀರ್‌ ಹೊಸ ಅಧ್ಯಾಯʼ ಶುರು!

    – ಯಾರಾಗ್ತಾರೆ ಭಾರತ ಟಿ20 ತಂಡದ ನಾಯಕ?

    ಕೊಲಂಬೊ: ಭಾರತ ಕ್ರಿಕೆಟ್‌ ತಂಡವು ಶ್ರೀಲಂಕಾ ಪ್ರವಾಸದ (India Tour Sri Lanka) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಇತ್ತೀಚೆಗೆ ನೂತನ ಮುಖ್ಯಕೋಚ್‌ ನೇಮಕಗೊಂಡ ಗೌತಮ್‌ ಗಂಭೀರ್‌ (Gautam Gambhir) ಅವರ ನೇತೃತ್ವದಲ್ಲಿ ಭಾರತ ಮೊದಲ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಈ ಸರಣಿಯೊಂದಿಗೆ ಗಂಭೀರ್‌ ತಮ್ಮ ಮುಖ್ಯಕೋಚ್‌ ಕೋಚ್‌ ಅಭಿಯಾನವನ್ನು ಶುರುಮಾಡಲಿದ್ದಾರೆ.

    ಪಂದ್ಯ ಎಲ್ಲಿ ಯಾವಾಗ?
    ಇದೇ ಜುಲೈ 26ರಿಂದ ಆಗಸ್ಟ್‌ 7ರ ವರೆಗೆ ಭಾರತ, ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಉಭಯ ತಂಡಗಳು ಮೂರು ಟಿ20 ಪಂದ್ಯಗಳು ಹಾಗೂ 3 ಏಕದಿನ ಪಂದ್ಯಗಳನ್ನಾಡಲಿವೆ. ಟಿ20 ಪಂದ್ಯಗಳು ಶ್ರೀಲಂಕಾದ ಪಲ್ಲೆಕೆಲೆ ಹಾಗೂ ಏಕದಿನ ಪಂದ್ಯಗಳು ರಾಜಧಾನಿ ಕೊಲಂಬೊ ಮೈದಾನದಲ್ಲಿ ನಡೆಯಲಿವೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಶುರುವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2:30ರಿಂದ ಆರಂಭವಾಗಲಿದೆ.

    ಯಾವ ದಿನ ಪಂದ್ಯ?
    ಟಿ20 ಪಂದ್ಯಗಳು:
    ಮೊದಲ ಪಂದ್ಯ – ಜುಲೈ 26
    2ನೇ ಪಂದ್ಯ – ಜುಲೈ 27
    3ನೇ ಪಂದ್ಯ – ಜುಲೈ 29
    ಸ್ಥಳ: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪಲ್ಲೆಕೆಲೆ

    ಏಕದಿನ ಪಂದ್ಯಗಳು
    ಮೊದಲ ಪಂದ್ಯ – ಆಗಸ್ಟ್‌ 1
    2ನೇ ಪಂದ್ಯ – ಆಗಸ್ಟ್‌ 4
    3ನೇ ಪಂದ್ಯ – ಆಗಸ್ಟ್‌ 7
    ಸ್ಥಳ: ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕೊಲಂಬೊ

    ಯಾರಾಗ್ತಾರೆ ಟಿ20 ತಂಡ ನಾಯಕ?
    2024ರ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಟಿ20 ಕ್ರಿಕೆಟ್‌ಗೆ ದಿಗ್ಗಜ ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಗುಡ್‌ಬೈ ಹೇಳಿದ್ದಾರೆ. ಹಾಗಾಗಿ ಮುಂದೆ ಟಿ20 ತಂಡಕ್ಕೆ ನಾಯಕ ಯಾರಾಗ್ತಾರೆ ಅನ್ನೋ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕೆಲವರು ಹಾರ್ದಿಕ್‌ ನಾಯಕನಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಕೆಂದರೆ 2023ರ ವರ್ಷಾರಂಭದಲ್ಲಿ ಪಾಂಡ್ಯ ನಾಯಕತ್ವದಲ್ಲೇ ಟೀಂ ಇಂಡಿಯಾ ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿತ್ತು. ಹಾಗಾಗಿ ಟಿ20 ತಂಡದ ನಾಯಕನಾಗಿ ಪಾಂಡ್ಯ ಅವರೇ ಮುಂದುವರಿಯುವ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

  • ಶ್ರೀಲಂಕಾ ಮಾಜಿ ಕ್ರಿಕೆಟಿಗನ ಕಾರಿಗೆ ಲಾರಿ ಡಿಕ್ಕಿ – ಆಸ್ಪತ್ರೆಗೆ ದಾಖಲು

    ಶ್ರೀಲಂಕಾ ಮಾಜಿ ಕ್ರಿಕೆಟಿಗನ ಕಾರಿಗೆ ಲಾರಿ ಡಿಕ್ಕಿ – ಆಸ್ಪತ್ರೆಗೆ ದಾಖಲು

    ಕೊಲಂಬೋ: ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ (Former Sri Lanka Skipper) ಲಾಹಿರು ತಿರಿಮನ್ನೆ (Lahiru Thirimanne) ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಅನುರಾಧಪುರ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅವರನ್ನು ಅನುರಾಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ತಿರಿಮನ್ನೆ ಅವರೊಂದಿಗೆ ಮತ್ತೋರ್ವ ಪ್ರಯಾಣಿಕನಿದ್ದು, ಅವರಿಗೂ ಸಹ ಗಾಯಗಳಾಗಿದ್ದು, ಅವರನ್ನೂ ಸಹ ಚಿಕಿತ್ಸೆಗೆ ದಾಖಲಿಸಲಾಗಿದೆ.

    ತಿರಿಮನ್ನೆ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್‍ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಪರ ಆಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಫ್ರಾಂಚೈಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

    ತಿರಿಮನ್ನೆ ಮತ್ತು ಅವರ ಕುಟುಂಬ ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅಪಘಾತದ  (Car Accident) ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

    2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ 34 ವರ್ಷ ಎಡಗೈ ದಾಂಡಿಗ ತಿರಿಮನ್ನೆ ವಿವಿಧ ಲೀಗ್​ಗಳಲ್ಲಿ ಕಣಕ್ಕಿಳಿಯುತ್ತಿದ್ದರು. ಇತ್ತೀಚೆಗೆ ನಡೆದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲೂ ಅವರು ಕಾಣಿಸಿಕೊಂಡಿದ್ದರು.

  • ಶ್ರೀಲಂಕಾದಿಂದ ತಂದು ಅಕ್ರಮ ಸಾಗಾಟ – ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1 ಕೆಜಿ ಚಿನ್ನ ಸೀಜ್‌

    ಶ್ರೀಲಂಕಾದಿಂದ ತಂದು ಅಕ್ರಮ ಸಾಗಾಟ – ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1 ಕೆಜಿ ಚಿನ್ನ ಸೀಜ್‌

    ಚಿಕ್ಕಬಳ್ಳಾಪುರ: ಬೆಂಗಳೂರಿನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 1 ಕೆಜಿಗೂ ಅಧಿಕ ಪ್ರಮಾಣದ ಚಿನ್ನವನ್ನು ಸೀಜ್‌ ಮಾಡಿದ್ದಾರೆ.

    ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 72.76 ಲಕ್ಷ ರೂ. ಮೌಲ್ಯದ 1 ಕೆಜಿ 166 ಗ್ರಾಂ ಚಿನ್ನವನ್ನ (Gold) ವಶಪಡಿಸಿಕೊಂಡಿದ್ದಾರೆ.

    ಪ್ರಕರಣಗಳಲ್ಲಿ ಶ್ರೀಲಂಕಾದ ಓರ್ವ ಹಾಗೂ ಮೂವರು ದೇಶಿಯ ಪ್ರಯಾಣಿಕರನ್ನ ಬಂಧಿಸಲಾಗಿದೆ. ಕೊಲಂಬೋದಿಂದ ಆಗಮಿಸಿ ಏರ್‌ಪೋರ್ಟ್‌ನಲ್ಲಿ ಬೇರೊಬ್ಬ ವ್ಯಕ್ತಿಗೆ ಚಿನ್ನ ಹಸ್ತಾಂತರಿಸುತ್ತಿದ್ದ ವೇಳೆ ಅಸಾಮಿ ಅರೆಸ್ಟ್ ಆಗಿದ್ದಾನೆ. ಇದನ್ನೂ ಓದಿ: ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೋಡ ಪತ್ನಿ, ಕಾಂಗ್ರೆಸ್‌ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

    ಉಳಿದ ಎರಡು ಪ್ರಕರಣಗಳಲ್ಲಿ ಚೈನ್ ಹಾಗೂ ಬಿಸ್ಕೆಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವಾಗ ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಡೆಗಣನೆ: ಕೋಟ ಶ್ರೀನಿವಾಸ ಪೂಜಾರಿ

  • ಪಾಥುಮ್ ನಿಸ್ಸಾಂಕಾ ದ್ವಿಶತಕದ ಅಬ್ಬರ – 24 ವರ್ಷಗಳಿಂದ ಜಯಸೂರ್ಯ ಹೆಸರಲ್ಲಿದ್ದ ದಾಖಲೆ ನುಚ್ಚುನೂರು!

    ಪಾಥುಮ್ ನಿಸ್ಸಾಂಕಾ ದ್ವಿಶತಕದ ಅಬ್ಬರ – 24 ವರ್ಷಗಳಿಂದ ಜಯಸೂರ್ಯ ಹೆಸರಲ್ಲಿದ್ದ ದಾಖಲೆ ನುಚ್ಚುನೂರು!

    – ವಿಶ್ವದ ಟಾಪ್‌ -10 ದಿಗ್ಗಜರ ಪಟ್ಟಿಗೆ ನಿಸ್ಸಾಂಕ ಲಗ್ಗೆ
    – ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್‌

    ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಪಾಥುಮ್‌ ನಿಸ್ಸಾಂಕಾ (Pathum Nissanka) ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿ ದ್ವಿಶತಕ (ODI Double Century) ಸಿಡಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಶ್ರೀಲಂಕಾದ ಕ್ರಿಕೆಟ್‌ ಇತಿಹಾಸದಲ್ಲೇ ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್‌ ಎನಿಸಿಕೊಳ್ಳುವ ಜೊತೆಗೆ 24 ವರ್ಷಗಳಿಂದ‌ ಮಾಜಿ ಕ್ರಿಕೆಟಿಗ ಸನತ್‌ ಜಯಸೂರ್ಯ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ. ಜೊತೆಗೆ ದ್ವಿಶತಕ ಸಿಡಿಸಿದ ವಿಶ್ವದ ಟಾಪ್‌-10 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2000ನೇ ಇಸವಿಯಲ್ಲಿ ಸನತ್‌ ಜಯಸೂರ್ಯ (Sanath Jayasuriya) ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ 189 ರನ್‌ ಗಳಿಸಿದ್ದರು. ಇದು ಶ್ರೀಲಂಕಾ ಬ್ಯಾಟರ್‌ಗಳ ಪೈಕಿ ಏಕದಿನ ಕ್ರಿಕೆಟ್‌ನಲ್ಲಿ ಆಟಗಾರರೊಬ್ಬರು ಗಳಿಸಿದ್ದ ಗರಿಷ್ಠ ಸ್ಕೋರ್‌ ಆಗಿತ್ತು. ಇದನ್ನೂ ಓದಿ: ಭಾರತದ ವಿರುದ್ಧ T20I ಸಮರಕ್ಕಿಳಿದ ಜಿಂಬಾಬ್ವೆ – ಜುಲೈ 6 ರಿಂದ 5 ಪಂದ್ಯಗಳ ಸರಣಿ

    ದ್ವಿಶತಕ ಸಿಡಿಸಿದ ಲಂಕಾದ ಮೊದಲ ಬ್ಯಾಟರ್‌:
    ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲೇ ಶ್ರೀಲಂಕಾ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಕೇವಲ 3 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 381 ರನ್‌ ಗಳಿಸಿತು. ಪಲ್ಲೆಕೆಲೆಯಲ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಲಂಕಾ ಪರ ಆರಂಭಿಕ ಆಟಗಾರ ಪಾಥುಮ್‌ ನಿಸ್ಸಾಂಕ ಅಜೇಯ ದ್ವಿಶತಕ ಸಿಡಿಸುವ ಮೂಲಕ ದಿಗ್ಗಜರ ಎಲೈಟ್‌ ಪಟ್ಟಿ ಸೇರಿಕೊಂಡರು. 136 ಎಸೆತಗಳಲ್ಲಿ 200 ರನ್‌ (19 ಬೌಂಡರಿ, 7 ಸಿಕ್ಸರ್‌) ಬಾರಿಸಿದ ನಿಸ್ಸಾಂಕ, ಒಟ್ಟಾರೆ ಎದುರಿಸಿದ 139 ಎಸೆತಗಳಲ್ಲಿ ಅಜೇಯ 210 ರನ್‌ ಬಾರಿಸಿ ವಿಶೇಷ ಸಾಧನೆ ಮಾಡಿದರು. ಇದರಲ್ಲಿ 20 ಬೌಂಡರಿಗಳು ಹಾಗೂ 8 ಸಿಕ್ಸರ್‌ಗಳೂ ಸೇರಿವೆ. ಇದನ್ನೂ ಓದಿ: U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್‌ ಎದುರಾಳಿ – ಫೆ.11ರಂದು ಫೈನಲ್‌

    ದಿಗ್ಗಜರ ಎಲೈಟ್‌ ಪಟ್ಟಿಗೆ ನಿಸ್ಸಾಂಕ ಲಗ್ಗೆ:
    ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಆಟಗಾರರ ಪೈಕಿ ಟೀಂ ಇಂಡಿಯಾ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 264 ರನ್‌ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಈವರೆಗೂ ಅಗ್ರಸ್ಥಾನದಲ್ಲಿದ್ದಾರೆ. ಇದರೊಂದಿಗೆ ಮಾರ್ಟಿನ್‌ ಗಪ್ಟಿಲ್‌ (237 ರನ್‌), ವೀರೇಂದ್ರ ಸೆಹ್ವಾಗ್‌ (219 ರನ್‌), ಕ್ರಿಸ್‌ಗೇಲ್‌ (215 ರನ್‌), ಫಖರ್‌ ಝಮಾನ್‌ (210 ರನ್‌) ಮೊದಲ ಐದು ಸ್ಥಾನಗಳಲ್ಲಿದ್ದರೆ, ಪಾಥುಮ್‌ ನಿಸ್ಸಾಂಕ ಅಜೇಯ 210 ರನ್‌ ಗಳಿಸುವ ಮೂಲಕ 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ನಂತರದಲ್ಲಿ ಇಶಾನ್‌ ಕಿಶನ್‌ (210 ರನ್‌), ರೋಹಿತ್‌ ಶರ್ಮಾ (209, ಮತ್ತೊಮ್ಮೆ 208 ರನ್‌), ಶುಭಮನ್‌ ಗಿಲ್‌ (208 ರನ್‌), ಗ್ಲೇನ್‌ ಮ್ಯಾಕ್ಸ್‌ವೆಲ್‌ (201 ರನ್‌), ಸಚಿನ್‌ ತೆಂಡೂಲ್ಕರ್‌ (200 ರನ್‌) ರನ್‌ ಗಳಿಸಿದ ಸಾಧಕರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ರೋಹಿತ್‌ ಪತ್ನಿ ರಿತಿಕಾ ಅಸಮಾಧಾನ ಬೆನ್ನಲ್ಲೇ ಪಾಂಡ್ಯನಿಗೆ ಬಿಗ್‌ ವಾರ್ನಿಂಗ್‌!

  • ಶ್ರೀಲಂಕಾ ನೌಕಾಪಡೆಯಿಂದ ಮತ್ತೆ 23 ಭಾರತೀಯ ಮೀನುಗಾರರ ಬಂಧನ

    ಶ್ರೀಲಂಕಾ ನೌಕಾಪಡೆಯಿಂದ ಮತ್ತೆ 23 ಭಾರತೀಯ ಮೀನುಗಾರರ ಬಂಧನ

    ಚೆನ್ನೈ: ಶ್ರೀಲಂಕಾ ನೌಕಾಪಡೆ (Sri Lankan Navy) ತಮಿಳುನಾಡಿನ (Tamil Nadu) ರಾಮೇಶ್ವರಂನ (Rameswaram) ಕರಾವಳಿ ಭಾಗದಲ್ಲಿ ಗಡಿ ಉಲ್ಲಂಘಿಸಿದ 23 ಭಾರತೀಯ ಮೀನುಗಾರರನ್ನು ಬಂಧಿಸಿದೆ.

    ಮೀನುಗಾರರು ಪಾಲ್ಕ್‍ಬೇ ಸಮುದ್ರ ಪ್ರದೇಶದ ಡೆಲ್ಫ್ಟ್ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿದೆ. ಬಳಿಕ ಜಾಫ್ನಾದ ಮೈಲಾಟಿ ನೇವಲ್ ಕ್ಯಾಂಪ್‍ಗೆ ತನಿಖೆಗಾಗಿ ಕರೆದೊಯ್ದಿದೆ. ಈ ಬಗ್ಗೆ ರಾಮೇಶ್ವರಂ ಮೀನುಗಾರರ ಸಂಘ ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ತಾಯಿ ತನ್ನ ತಂಗಿಯನ್ನೇ ಹೆಚ್ಚು ಪ್ರೀತಿಸ್ತಾರೆ ಅಂತಾ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು

    ಕಳೆದ ತಿಂಗಳು ಶ್ರೀಲಂಕಾ ನೌಕಾಪಡೆ 18 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಲಂಕಾದ ಕರಾವಳಿ ಪ್ರದೇಶದಲ್ಲಿ ಎರಡು ಭಾರತೀಯ ಮೀನುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರನ್ನು ಬಂಧಿಸುತ್ತಿರುವುದು ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.

    ಕಳೆದ ಜುಲೈನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದ ಬಗ್ಗೆ ಚರ್ಚಿಸಿದ್ದರು. ಇದನ್ನೂ ಓದಿ: ವೆಬ್ ಸೀರಿಸ್‍ನಿಂದ ಪ್ರೇರಣೆ ಪಡೆದು ನಕಲಿ ನೋಟ್ ದಂಧೆ – ಇಬ್ಬರೂ ಆರೋಪಿಗಳು ಅರೆಸ್ಟ್

  • ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಕಂಪಾಲ (ಉಗಾಂಡಾ): ವಿದೇಶಾಂಗ ಸಚಿವ ಎಸ್. ಜೈಶಂಕರ್ (Jai Shankar) ಅವರು ಇಂದು ಉಗಾಂಡಾದ (Uganda) ಕಂಪಾಲಾದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಮತ್ತು ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ಡಾ.ರಿಯಾದ್ ಅಲ್-ಮಲಿಕಿ (Riyad al-Maliki) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಶುಕ್ರವಾರ ಆರಂಭವಾದ ಅಲಿಪ್ತ ಚಳವಳಿಯ (NAM) ಎರಡು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜೈಶಂಕರ್ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಜೈಶಂಕರ್ ಅವರು, ಡಾ. ರಿಯಾದ್ ಅಲ್-ಮಲಿಕಿ ಅವರನ್ನು ಭೇಟಿಯಾಗಲು ಸಂತೋಷವಾಯಿತು ಎಂದಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಅವರೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಅವರು ಕೂಡ ಸಂಘರ್ಷದ ಮಾನವೀಯ ಮತ್ತು ರಾಜಕೀಯ ಆಯಾಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

    ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಜೈಶಂಕರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಉಪಕ್ರಮಗಳ ಪ್ರಗತಿಯನ್ನು ಚರ್ಚಿಸಿದರು. ಕಂಪಲಾದಲ್ಲಿ ನಡೆದ NAM ಶೃಂಗಸಭೆಯ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಜೈಶಂಕರ್ ಅವರು ಪೋಸ್ಟ್ ಮಾಡಿದ್ದಾರೆ. ವಿದೇಶಿ ವಿನಿಮಯ ಮೀಸಲುಗಳ ತೀವ್ರ ಕೊರತೆಯಿಂದಾಗಿ 2022 ರಲ್ಲಿ ಶ್ರೀಲಂಕಾವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಭಾರತವು ತನ್ನ ‘ನೈಬರ್‌ಹುಡ್ ಫಸ್ಟ್’ ನೀತಿಗೆ ಅನುಗುಣವಾಗಿ ಸಾಲ ಸೌಲಭ್ಯಗಳು ಮತ್ತು ಕರೆನ್ಸಿ ಬೆಂಬಲದ ಮೂಲಕ ಬಹು ಆಯಾಮದ ಸಹಾಯವನ್ನು ನೀಡಿತು ಎಂದರು.

    ಒಟ್ಟಿನಲ್ಲಿ NAM ಶೃಂಗಸಭೆಯಲ್ಲಿ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಜೈಶಂಕರ್‌ ಅವರು ಧನ್ಯವಾದಗಳನ್ನು ತಿಳಿಸಿದರು. ಉಗಾಂಡಾದ ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಶ್ರೀಲಂಕಾ, ಪ್ಯಾಲೆಸ್ಟೇನ್‌ ಜೊತೆಗೆ ಬಹ್ರೇನ್, ಸರ್ಬಿಯಾ, ಬೊಲಿವಿಯಾ, ಅಜೆರ್ಬೈಜಾನ್ ಮತ್ತು ವೆನೆಜುವೆಲಾದ ತಮ್ಮ ಸಹವರ್ತಿಗಳೊಂದಿಗೆ ಕೂಡ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

  • 2024ರ ಕೆಲ ಐಪಿಎಲ್‌ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಾ?

    2024ರ ಕೆಲ ಐಪಿಎಲ್‌ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಾ?

    ಮುಂಬೈ: ಈ ಬಾರಿಯ ಕೆಲ ಐಪಿಎಲ್‌ (IPL) ಪಂದ್ಯಗಳು ಶ್ರೀಲಂಕಾದಲ್ಲಿ (Sri Lanka) ನಡೆಯುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಬಿಸಿಸಿಐ (BCCI) ಮುಂದೆ ಶ್ರೀಲಂಕಾ ಕ್ರೀಡಾ ಸಚಿವಾಲಯ (Sri Lanka Sports Ministry) ಇಟ್ಟ ಪ್ರಸ್ತಾಪದಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಶ್ರೀಲಂಕಾದ ಕ್ರೀಡಾ ಸಚಿವ ಹರಿನ್ ಫರ್ನಾಂಡೋ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay shah) ಬಳಿ ಕೆಲ ಐಪಿಎಲ್‌ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲು ವಿನಂತಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಮೈಲುಗಲ್ಲು ಸಾಧಿಸುವತ್ತ ಹಿಟ್‌ಮ್ಯಾನ್ – ಕೊಹ್ಲಿಯನ್ನ ಹಿಂದಿಕ್ಕಿ ನಂ.1 ಪಟ್ಟಕ್ಕೇರುತ್ತಾರಾ ರೋಹಿತ್‌?

    ಶ್ರೀಲಂಕಾದಲ್ಲಿ ಐಪಿಎಲ್‌ ಆಯೋಜನೆ ಬಗ್ಗೆ ಇಲ್ಲಿಯವರೆಗೆ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವರದಿಗಳ ಪ್ರಕಾರ ಮಾರ್ಚ್‌ 22 ರಿಂದ ಐಪಿಎಲ್ ಆರಂಭವಾಗಲಿದೆ. ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆಯಲಿದ್ದು, ಜಯ್‌ ಶಾ ಅವರು ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

    ವಿದೇಶದಲ್ಲಿ ಐಪಿಎಲ್‌ ನಡೆದಿತ್ತು
    ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಐಪಿಎಲ್‌ಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಹೇಳಿತ್ತು. ಈ ವೇಳೆ ಸಂಪೂರ್ಣ ಐಪಿಎಲ್‌ ಟೂರ್ನಿಯನ್ನೇ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. 2021 ಕೋವಿಡ್‌ (Covid) ಸಮಯದಲ್ಲಿ ಭಾರತದಲ್ಲಿ ಐಪಿಎಲ್‌ ನಡೆಸುವುದು ಕಷ್ಟವಾಗಿದ್ದರಿಂದ ಟೂರ್ನಿಯನ್ನು ಯುಎಇಗೆ (UAE) ಸ್ಥಳಾಂತರಿಸಲಾಗಿತ್ತು.

     

  • World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್‌ ಮುಂದಿದೆ ಅಸಾಧ್ಯ ಸವಾಲು

    World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್‌ ಮುಂದಿದೆ ಅಸಾಧ್ಯ ಸವಾಲು

    ಬೆಂಗಳೂರು: ಸಂಘಟಿತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನದಿಂದ ನ್ಯೂಜಿಲೆಂಡ್‌ (New Zealand) ತಂಡವು ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ, ಸೆಮಿಫೈನಲ್‌ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ಆದ್ರೆ ಪಾಕಿಸ್ತಾನ (Pakistan) ತಂಡಕ್ಕೆ ಇದು ನುಂಗಲಾರದ ತುತ್ತಾಗಿದೆ.

    ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ 275+ ರನ್‌ಗಳ ಅಂತರದಿಂದ ಇಂಗ್ಲೆಂಡ್‌ (England) ತಂಡವನ್ನು ಸೋಲಿಸಬೇಕಿದೆ. ಅಥವಾ 2.3 ಓವರ್‌ಗಳಲ್ಲಿ ಇಂಗ್ಲೆಂಡ್‌ ಟಾರ್ಗೆಟ್‌ ಅನ್ನು ಚೇಸ್‌ ಮಾಡಬೇಕಿದೆ ಎಂದು ಕ್ರಿಕೆಟ್‌ ತಜ್ಞರು ಅಂದಾಜಿಸಿದ್ದಾರೆ. ಆದ್ರೆ ಇಂಗ್ಲೆಂಡ್‌ ತಂಡವನ್ನು ಅಷ್ಟು ಸುಲಭದಲ್ಲಿ ಸೋಲಿಸುವುದು ಪಾಕ್‌ಗೆ ಅಸಾಧ್ಯವಾಗಿದ್ದು, ಬಹುತೇಕ ಸೆಮಿ ಫೈನಲ್‌ ಕನಸು ಭಗ್ನ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಮುಡಿಗೆ 7 ವಿಶ್ವಕಪ್ ಏರಿಸಿದ್ದ ನಾಯಕಿ ಮೆಗ್ ಲ್ಯಾನಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಕಿವೀಸ್‌, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಶ್ರೀಲಂಕಾಗೆ (Sri Lanka) ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 171 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ್ದ ಕಿವೀಸ್‌ 23.2 ಓವರ್‌ಗಳಲ್ಲೇ 172 ರನ್‌ ಗಳಿಸಿ ಸೆಮಿಫೈನಲ್‌ ಹಾದಿಯನ್ನು ಸುಲಭವಾಗಿಸಿಕೊಂಡಿತು. ಇನ್ನೂ 2023ರ ಏಕದಿನ ವಿಶ್ವಕಪ್‌ ಆವೃತ್ತಿಯಲ್ಲಿ ಕೊನೆಯ ಲೀಗ್‌ ಪಂದ್ಯವನ್ನಾಡಿದ ಶ್ರೀಲಂಕಾ ಸೋಲಿನೊಂದಿಗೆ ವಿದಾಯ ಹೇಳಿತು. ಇದನ್ನೂ ಓದಿ: ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ಕಿವೀಸ್‌ ಪರ ಕಣಕ್ಕಿಳಿದ ರಚಿನ್‌ ರವೀಂದ್ರ (Rachin Ravindra) ಹಾಗೂ ಡಿವೋನ್‌ ಕಾನ್ವೆ ಜೋಡಿ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದರು. ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲೇ ಈ ಜೋಡಿ 86 ರನ್‌ ಸಿಡಿಸಿತ್ತು. ಕಾನ್ವೆ 45 ರನ್‌ (42 ಎಸೆತ, 9 ಬೌಂಡರಿ), ರವೀಂದ್ರ 42 ರನ್‌ (34 ಎಸೆತ, 3 ಬೌಂಡರಿ, 3 ಸಿಕ್ಸರ್)‌ ಬಾರಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇರಿಲ್‌ ಮಿಚೆಲ್‌ 43 ರನ್‌ (31 ಎಸೆತ, 5 ಬೌಂಡರಿ, 2 ಸಿಕ್ಸರ್), ಕೇನ್‌ ವಿಲಿಯಮ್ಸನ್‌ (Kane Williamson) 14 ರನ್‌,‌ ಮಾರ್ಕ್‌ ಚಾಪ್ಮನ್‌ 7 ರನ್‌ಗಳ ಕೊಡುಗೆ ನೀಡಿ ಔಟಾದರೆ, ಗ್ಲೇನ್‌ ಫಿಲಿಪ್ಸ್‌ 17 ರನ್‌, ಟಾಮ್‌ ಲ್ಯಾಥಮ್‌ 2 ರನ್‌ ಗಳಿಸಿ ಅಜೇಯರಾಗುಳಿದರು. ಲಂಕಾ ಪರ ಏಂಜಲೋ ಮ್ಯಾಥ್ಯೂಸ್‌ 2 ವಿಕೆಟ್‌ ಕಿತ್ತರೆ, ಮಹೀಶ್‌ ತೀಕ್ಷಣ ಮತ್ತು ದುಶ್ಮಂತ ಸಮೀರ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಬ್ಯಾಟಿಂಗ್‌ ಮಾಡಿದ ಲಂಕಾ ತಂಡ ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿತು. ಆರಂಭಿಕನಾಗಿ ಕಣಕ್ಕಿಳಿದ ಕುಸಾಲ್ ಪೆರೇರಾ 51 ರನ್‌ (28 ಎಸೆತ, 9 ಬೌಂಡರಿ, 2 ಸಿಕ್ಸರ್)‌, ಕೊನೆಯಲ್ಲಿ ಮಹೀಶ್ ತೀಕ್ಷಣ 91 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 38 ರನ್‌ ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪಮೊತ್ತಕ್ಕೆ ವಿಕೆಟ್‌ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲನುಭವಿಸಿದ ಬಳಿಕ ಲಂಕಾಗೆ ಇದು ಮತ್ತೆ ಮುಖಭಂಗ ಉಂಟುಮಾಡಿತು. ಇದನ್ನೂ ಓದಿ: ಮ್ಯಾಕ್ಸಿ ಬೆಂಕಿ ಆಟಕ್ಕೆ ಹಲವು ದಾಖಲೆಗಳು ಭಸ್ಮ – ವಿಶ್ವದಾಖಲೆಯ ಪಟ್ಟಿ ಓದಿ 

    ಶ್ರೀಲಂಕಾ ಪರ ಪಾಥುಮ್ ನಿಸ್ಸಾಂಕ 2 ರನ್‌, ಕುಸಲ್ ಮೆಂಡಿಸ್ 6ರನ್‌, ಸದೀರ ಸಮರವಿಕ್ರಮ 1 ರನ್‌, ಚರಿತ್ ಅಸಲಂಕ 8 ರನ್‌, ಏಂಜೆಲೊ ಮ್ಯಾಥ್ಯೂಸ್ 16 ರನ್‌, ಧನಂಜಯ ಡಿ ಸಿಲ್ವಾ 19 ರನ್‌, ಚಮಿಕ ಕರುಣಾರತ್ನೆ 6 ರನ್‌, ದುಷ್ಮಂತ ಚಮೀರ 1 ರನ್‌, ದಿಲ್ಶನ್ ಮಧುಶಂಕ 19 ರನ್‌ ಗಳಿಸಿ ಔಟಾದರು.

    ಕಿವೀಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಟ್ರೆಂಟ್‌ ಬೌಲ್ಟ್‌ 10 ಓವರ್‌ಗಳಲ್ಲಿ 37 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಬಳಿಸಿದರು. ಇನ್ನುಳಿದಂತೆ ಲಾಕಿ ಫರ್ಗುಸನ್, ಮಿಚೆಲ್‌ ಸ್ಯಾಂಟ್ನರ್‌ ಮತ್ತು ರಚಿನ್‌ ರವೀಂದ್ರ ತಲಾ 2 ವಿಕೆಟ್‌ ಹಾಗೂ ಟಿಮ್‌ ಸೌಥಿ ಒಂದು ವಿಕೆಟ್‌ ಪಡೆದು ಮಿಂಚಿದರು.