Tag: ಶ್ರೀಲಂಕಾ ಪ್ರಜೆ

  • ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    – ಶ್ರೀಲಂಕಾ ಪ್ರಜೆಯ ಮನವಿ ತಿರಸ್ಕರಿಸಿದ ಕೋರ್ಟ್‌

    ನವದೆಹಲಿ: ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ (Dharamshala) ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ (Supreme Court) ಶ್ರೀಲಂಕಾದ ತಮಿಳು ಪ್ರಜೆಯೊಬ್ಬರ ಬಂಧನದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

    ಯುಎಪಿಎ (UAPA) ಪ್ರಕರಣದಲ್ಲಿ ವಿಧಿಸಲಾದ 7 ವರ್ಷಗಳ ಶಿಕ್ಷೆ ಮುಗಿದ ತಕ್ಷಣ ಅರ್ಜಿದಾರ ಶ್ರೀಲಂಕಾ ಪ್ರಜೆಯು (Sri Lankan) ಭಾರತವನ್ನು ತೊರೆಯಬೇಕು ಎಂದು ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಅವರಿದ್ದ ದ್ವೀಸದಸ್ಯ ಪೀಠ ವಿಚಾರಣೆ ನಡೆಸಿತು. ಇದನ್ನೂ ಓದಿ: ಬಿಡದಿ ಅಪ್ರಾಪ್ತ ಬಾಲಕಿ ಹತ್ಯೆ ಕೇಸ್‌ಗೆ ಟ್ವಿಸ್ಟ್ – ರೈಲು ಡಿಕ್ಕಿ ಹೊಡೆದು ಸಾವು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಈ ವೇಳೆ ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು 140 ಕೋಟಿ ಜನಸಂಖ್ಯೆ ಹೊಂದಿದ್ದು ಕಷ್ಟಪಡುತ್ತಿದ್ದೇವೆ. ಇದು ಎಲ್ಲೆಡೆಯಿಂದ ಬಂದ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಬಹುದಾದ ಧರ್ಮ ಛತ್ರವಲ್ಲ ಎಂದು ಕೋರ್ಟ್‌ ಹೇಳಿತು. ಇದನ್ನೂ ಓದಿ: ಕೊನೆ ಕ್ಷಣದವರೆಗೂ ಆಪರೇಷನ್ ಸಿಂಧೂರದ ಟಾರ್ಗೆಟ್ ಟಾಪ್ ಸೀಕ್ರೆಟ್ – ಗೊತ್ತಿದ್ದಿದ್ದು ಅಜಿತ್ ದೋವಲ್‍ಗೆ ಮಾತ್ರ!

    ಏನಿದು ಪ್ರಕರಣ?
    ಈ ಹಿಂದೆ ಶ್ರೀಲಂಕಾದಲ್ಲಿ ಸಕ್ರೀಯವಾಗಿದ್ದ ಭಯೋತ್ಪಾದಕ ಸಂಘಟನೆಯಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ವಿದೇಶಿ ಪ್ರಜೆಯನ್ನು 2015 ರಲ್ಲಿ ಬಂಧಿಸಲಾಗಿತ್ತು. 2018 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್-10ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯವು ಅರ್ಜಿದಾರನನ್ನ ದೋಷಿ ಎಂದು ಘೋಷಿಸಿತು, 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಕೊನೆಗೆ 2022 ರಲ್ಲಿ, ಮದ್ರಾಸ್ ಹೈಕೋರ್ಟ್ ಆತನ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿತು. ಶಿಕ್ಷೆ ಅವಧಿ ಮುಗಿದ ಬಳಿಕ ಅವನು ಭಾರತವನ್ನ ತೊರೆಯಬೇಕು, ಅಲ್ಲಿಯವರೆಗೆ ನಿರಾಶ್ರಿತರ ಶಿಬಿರದಲ್ಲೇ ಇರಬೇಕು ಎಂದು ನಿರ್ದೇಶನ ನೀಡಿತ್ತು.

    ಇದಾದ ಬಳಿಕ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಅರ್ಜಿದಾರ, ಅವರ ತಾಯ್ನಾಡಿನಲ್ಲಿ ಜೀವಕ್ಕೆ ಅಪಾಯವಿದೆ ಎಂದು ಅರ್ಜಿದಾರನ ಪರ ವಕೀಲರು ತಿಳಿಸಿದ್ದರು. ಅಲ್ಲದೇ ಅವರು ಕಳೆದ ಮೂರು ವರ್ಷಗಳಿಂದ ಬಂಧನದಲ್ಲಿದ್ದಾರೆ, ಗಡೀಪಾರು ಪ್ರಕ್ರಿಯೆ ಕೂಡ ಆರಂಭವಾಗಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು. ಅಲ್ಲದೇ ಬಹು ಕಾಯಿಲೆಗಳಿಂದ ಬಳಲುತ್ತಿರುವ ಅರ್ಜಿದಾರನ ಪತ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಅವರ ಮಗ ಭಾರತದಲ್ಲಿ ನೆಲೆಸಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು.

    ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾ. ದತ್ತ ಅವರು, ಇಲ್ಲಿ ನೆಲೆಸಲು ನಿಮಗೆ ಏನು ಹಕ್ಕಿದೆ? ಎಂದು ಪ್ರಶ್ನಿಸಿದರು.. ಜೊತೆಗೆ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ದತ್ತ ಅವರಿದ್ದ ಪೀಠ ಬಂಧನವು ಕಾನೂನಿಗೆ ಅನುಸಾರವಾಗಿರುವುದರಿಂದ ಆರ್ಟಿಕಲ್ 21 ಉಲ್ಲಂಘಿಸಲಾಗಿಲ್ಲ. ಆರ್ಟಿಕಲ್-19ರ ಪ್ರಕಾರ ಭಾರತದಲ್ಲಿ ನೆಲೆಸುವ ಮೂಲಭೂತ ಹಕ್ಕು ನಾಗರಿಕರಿಗೆ ಮಾತ್ರ ಇದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರದಿಂದ 4,195 ಕೋಟಿ ಅನುದಾನ ಬಾಕಿ; ಸಿಎಂ ಬೂಟಾಟಿಕೆ ಪ್ರದರ್ಶನ – ಜೋಶಿ ವಾಗ್ದಾಳಿ

  • ಮಂಗಳೂರಿನಲ್ಲಿ 38 ಶ್ರೀಲಂಕಾ ಪ್ರಜೆಗಳ ಬಂಧನ

    ಮಂಗಳೂರಿನಲ್ಲಿ 38 ಶ್ರೀಲಂಕಾ ಪ್ರಜೆಗಳ ಬಂಧನ

    ಮಂಗಳೂರು: ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಮಂಗಳೂರಿನ ಎರಡು ಲಾಡ್ಜ್ ಹಾಗೂ ಎರಡು ಮನೆಗಳಲ್ಲಿ ತಂಗಿದ್ದ 38 ಮಂದಿ ಶ್ರೀಲಂಕಾ ನುಸುಳುಕೋರರನ್ನು ಅರೆಸ್ಟ್ ಮಾಡಲಾಗಿದೆ. ಇವರನ್ನು ಶ್ರೀಲಂಕಾದಲ್ಲಿನ ಎಜೆಂಟ್ ಒಬ್ಬ ಕೆನಡಾ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಶ್ರೀಲಂಕಾದಿಂದ ಮಾರ್ಚ್ 17ರಂದು ಬೋಟ್ ಮೂಲಕ ತಮಿಳುನಾಡು ರಾಜ್ಯದ ತೂತುಕುಡಿಗೆ ಕಳುಹಿಸಿಕೊಟ್ಟಿದ್ದನು.

    ಆದರೆ ಆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಚುನಾವಣೆಯಿದ್ದುದರಿಂದ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ತಾತ್ಕಾಲಿಕವಾಗಿ ಅವರನ್ನು ಅಲ್ಲಿಂದ ಮಥುರೈ, ಸೇಲಮ್, ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಈ ಬಗ್ಗೆ ತಮಿಳುನಾಡು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಹಿನ್ನೆಲೆ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆರೆಗೆ ಈಜಲು ಹೋದ ಇಬ್ಬರು ಯುವಕರು ನೀರು ಪಾಲು

    ಇವರಲ್ಲಿ ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರಾಗಿದ್ದಾರೆ. ಈ 38 ಜನರಿಂದಲೂ ಶ್ರೀಲಂಕಾದ ಎಜೆಂಟ್ ತಲಾ 5 ಲಕ್ಷದಿಂದ 10 ಲಕ್ಷ ಮೌಲ್ಯದ ಶ್ರೀಲಂಕನ್ ಕರೆನ್ಸಿ ಪಡೆದುಕೊಂಡಿದ್ದು, ಇವರನ್ನು ತಮಿಳುನಾಡಿನ ತೂತುಕುಡಿಯಿಂದಲೇ ಕಾರ್ಗೂ ಶಿಪ್, ಖಾಸಗಿ ಬೋಟ್ ಮೂಲಕವೇ ಕೆನಾಡಕ್ಕೆ ಕಳುಹಿಸುವ ಬಗ್ಗೆ ಪ್ಲ್ಯಾನ್ ಆಗಿತ್ತು. ಆದರೆ ಅದು ಆಗದೇ ಇದ್ದುದರಿಂದ ತಾತ್ಕಾಲಿಕವಾಗಿ ಅವರನ್ನು ಮಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಮಾನವ ಕಳ್ಳ ಸಾಗಾಣೆಯಲ್ಲಿ ಇರುವ ಎಜೆಂಟ್ ಹಾಗೂ ಈ ಲಿಂಕ್‍ನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ.

    ಮಾನವ ಕಳ್ಳ ಸಾಗಾಣಿಕೆಯ ಜೊತೆ ಫಾರಿನರ್ಸ್ ಆ್ಯಕ್ಟ್, ಪಾಸ್‌ಪೋರ್ಟ್ ಆ್ಯಕ್ಟ್ ಅಡಿಯೂ ಪ್ರಕರಣ ದಾಖಲಾಗಿದೆ. ಮಂಗಳೂರಿನಲ್ಲಿ ಇವರಿಗೆ ಆಶ್ರಯ ನೀಡಿದ ಸ್ಥಳೀಯ ಆರು ಜನರನ್ನು ಸಹ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 1,154 ಕೊರೊನಾ ಪ್ರಕರಣ- ರಾಜ್ಯದಲ್ಲಿ 8,249 ಜನಕ್ಕೆ ಸೋಂಕು

    ಒಟ್ಟಾರೆ ಸಮುದ್ರ ಮಾರ್ಗ ಮೂಲಕ ಅಕ್ರಮವಾಗಿ ದೇಶದಿಂದ ದೇಶಕ್ಕೆ ನುಸುಳುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.