Tag: ಶ್ರೀರಾಮ ಸೇನೆ

  • ವಿಧಾನಸಭಾ ಚುನಾವಣೆಗೆ ಕಾರ್ಕಳದಿಂದ ಸ್ಪರ್ಧೆ ಖಚಿತ – ಹುಟ್ಟುಹಬ್ಬದಂದೇ ಮುತಾಲಿಕ್ ಅಧಿಕೃತ ಘೋಷಣೆ

    ವಿಧಾನಸಭಾ ಚುನಾವಣೆಗೆ ಕಾರ್ಕಳದಿಂದ ಸ್ಪರ್ಧೆ ಖಚಿತ – ಹುಟ್ಟುಹಬ್ಬದಂದೇ ಮುತಾಲಿಕ್ ಅಧಿಕೃತ ಘೋಷಣೆ

    ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾರ್ಕಳದಿಂದಲೇ (Karkala) ಸ್ಪರ್ಧಿಸುತ್ತೇನೆ ಎಂದು ಶ್ರೀರಾಮ ಸೇನೆಯ (Sri Ram Sene) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಘೋಷಣೆ ಮಾಡಿದ್ದಾರೆ.

    ಕಾರ್ಕಳದಲ್ಲಿ 68ನೇ ಹುಟ್ಟುಹಬ್ಬದ ಆಚರಿಸಿಕೊಂಡ ಮುತಾಲಿಕ್, 2023ರ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು. ನಾನು ಕಾರ್ಕಳದಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ ಜನ ಬೆಂಬಲಿಸಿದ್ದಾರೆ. ಕ್ಷೇತ್ರದಲ್ಲಿ ಹಿಂದೂಗಳಿಗೆ ನೋವಾಗಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದುತ್ವ-ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮುತಾಲಿಕ್ ಶಪಥಗೈದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿದರು: ಬೊಮ್ಮಾಯಿ

    ನಾನು ಬಿಜೆಪಿ (BJP) ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳು, ಅವರ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು ಮನವಿ ಮಾಡಿಕೊಂಡಿದ್ದಾರೆ. ಕಾರ್ಕಳ ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಸ್ಪರ್ಧಿಸಿ ಗೆಲುವು ಕಂಡ ವಿಧಾನಸಭಾ ಕ್ಷೇತ್ರ. ಇದೀಗ ಪ್ರಮೋದ್‌ ಮುತಾಲಿಕ್‌  ಕಾರ್ಕಳದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲ್ಲ: ಯಡಿಯೂರಪ್ಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ

    ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ

    ಕಲಬುರಗಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಬಿಜೆಪಿಯಿಂದ (BJP) ಟಿಕೆಟ್ ನೀಡಿದರೆ ಖಂಡಿತವಾಗಿಯೂ ಸ್ಪರ್ಧಿಸುವೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಆಂದೋಲ ಶ್ರೀ (Andola Shree) ತಿಳಿಸಿದರು.

    ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನಾನು ಚುನಾವಣೆ ನಿಲ್ಲುತ್ತೇನೆ ಎಂಬುದರ ಬಗ್ಗೆ ವಿಷಯ ಕೇಳಿ ಬರುತ್ತದೆ. ಇಲ್ಲಿವರೆಗೆ ನಾವು ಯಾರನ್ನೂ ಟಿಕೆಟ್‌ಗಾಗಿ ಸಂಪರ್ಕ ಮಾಡಿಲ್ಲ. ನನ್ನನ್ನೂ ಯಾವುದೇ ಮಖಂಡರು ಸಂಪರ್ಕ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದ ಕಾಂಗ್ರೆಸ್ ಶಾಸಕ – ಬಿಜೆಪಿಯಿಂದ ಆಕ್ರೋಶ

    ಒಂದು ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುವೆ. ಸ್ವತಂತ್ರ್ಯ ಅಭ್ಯರ್ಥಿ ಅಥವಾ ಮತ್ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುವುದಿಲ್ಲ. ಹಿಂದುತ್ವ, ದೇಶದ ಅಭಿವೃದ್ಧಿ ಬಗ್ಗೆ ಚಿಂತನ ನಡೆಸುವವರನ್ನು ಬೆಂಬಲಿಸಲಾಗವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ

    ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ

    ಚಿಕ್ಕಮಗಳೂರು: ಪ್ರತಿವರ್ಷ ದತ್ತಪೀಠಕ್ಕೆ (Datta Peeta) ಬರುವುದು ಅಲ್ಲಿ ಹೆಣ ಇಲ್ಲದ ಗೋರಿಗಳನ್ನು ನೋಡಿಕೊಂಡು ಹೋಗುವುದು ಮಾಡುತ್ತಿರುವುದನ್ನು ನೋಡಿ ನಮಗೆ ಬಿಜೆಪಿ (BJP) ಸರ್ಕಾರದ ಮೇಲೆ ಹೇಸಿಗೆ ಬಂದಿದೆ ಎಂದು ಶ್ರೀರಾಮಸೇನೆ (Sri Rama Sene) ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ಚಿಕ್ಕಮಗಳೂರು (Chikkamagaluru) ನಗರದ ಶಂಕರ ಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿವರ್ಷ ನಾವು ಅವರಿಗೆ ಎಚ್ಚರಿಕೆ ನೀಡಿ, ನೀಡಿ ಬೇಜಾರಾಗಿದೆ. ಧರ್ಮದ ವಿಚಾರದಲ್ಲಿ ಈ ಡ್ರಾಮಾ ಒಳ್ಳೆದಲ್ಲ. ಏನಾದರೂ ಆಗಲಿ ಎಂದು ದತ್ತಪೀಠದ ವಿಚಾರದಲ್ಲಿ ಸರ್ಕಾರ ತಕ್ಷಣ ಗಟ್ಟಿ ನಿರ್ಧಾರ ಮಾಡಲಿ. ಕೂಡಲೇ ದತ್ತಪೀಠವನ್ನು ಹಿಂದೂಗಳ ಪೀಠವೆಂದು ಆದೇಶಿಸಿ, ಅಲ್ಲಿ ಹಿಂದೂ ಅರ್ಚಕರ ನೇಮಿಸಬೇಕೆಂದು ಆಗ್ರಹಿಸಿದರು.

    ಇಂದಿನಿಂದ 7 ದಿನಗಳ ಕಾಲ ನಡೆಯುವ ದತ್ತಮಾಲಾ ಅಭಿಯಾನದ ನ. 13ರಂದು ಕೊನೆಗೊಳ್ಳಲಿದೆ. ಅಷ್ಟರೊಳಗೆ ಹಿಂದೂ ಅರ್ಚಕರ ನೇಮಿಸಬೇಕು. ಇಲ್ಲವಾದರೆ, ಪರಿಸ್ಥಿತಿ ಕಠಿಣವಾಗಲಿದೆ. ಅಲ್ಲಿ ಹಿಂದೂಗಳು ಹಾಗೂ ದತ್ತಭಕ್ತರಿಂದ ಏನಾದರೂ ಅನಾಹುತವಾದರೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಅಷ್ಟೇ ಅಲ್ಲದೇ ಮಂಗಳೂರಿನಲ್ಲಿ ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರವೂ ಅಲುಗಾಡುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧಿಸದಿದ್ರೆ ಹೆಣ್ಮಕ್ಕಳು ಧರಣಿಗೆ ಕೂರ್ತಿವಿ ಅಂದಿದ್ದಾರೆ: ಸಿದ್ದರಾಮಯ್ಯ

    ‌ಕಳೆದ ವರ್ಷ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪನವರ ಪೀಠ ಹೋಗುತ್ತೆ ಎಂದು ಹೇಳಿದ್ದೆವು. ಅದರಂತೆ ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪನವರು ಪೀಠ ಕಳೆದುಕೊಂಡರು. ಈಗ ಬೊಮ್ಮಾಯಿಗೂ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದೆ ನಿಮ್ಮ ಸರ್ಕಾರ ಬರಬೇಕು ಎಂದರೆ ತಕ್ಷಣ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ. ಇಲ್ಲವಾದರೆ, ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತೆ ಎಂದರು.

    ಶ್ರೀರಾಮ ಸೇನೆ ವತಿಯಿಂದ ನಡೆಯುತ್ತಿರುವ 18ನೇ ವರ್ಷದ ಈ ದತ್ತಮಾಲಾ ಅಭಿಯಾನ ಇದೇ 13ರಂದು ಕೊನೆಗೊಳ್ಳಲಿದೆ. ಇಂದು ಚಿಕ್ಕಮಗಳೂರು ನಗರದಲ್ಲಿ 100ಕ್ಕೂ ಹೆಚ್ಚು ಜನ ಮಾಲಾಧಾರಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ದತ್ತಭಕ್ತರು ಮಾಲೆ ಧರಿಸಿದ್ದು, ರಾಜ್ಯಾದ್ಯಂತ ಸಾವಿರಾರು ಜನ ಮಾಲಾಧಾರಿಗಳಾಗಿದ್ದಾರೆ. ಇದೇ ತಿಂಗಳ 11ರಂದು ಶಂಕರಮಠದಲ್ಲಿ ದೀಪೋತ್ಸವ, 12ರಂದು ಪಡಿ ಸಂಗ್ರಹ ಹಾಗೂ 13ರಂದು ರಾಜ್ಯಾದ್ಯಂತ ಬರುವ 8 ಸಾವಿರಕ್ಕೂ ಅಧಿಕ ದತ್ತಭಕ್ತರು ನಗರದಲ್ಲಿ ಶೋಭಾಯಾತ್ರೆ ನಡೆಸಿ, ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ: ದೆಹಲಿ ರೇಪ್ ಕೇಸ್ – ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಖುಲಾಸೆಗೊಳಿಸಿದ ಸುಪ್ರೀಂ

    Live Tv
    [brid partner=56869869 player=32851 video=960834 autoplay=true]

  • ಕನಕಪುರದಲ್ಲಿ ಮತ್ತೆ ಮತಾಂತರ ಸದ್ದು – ಪೊಲೀಸರಿಂದ 10ಕ್ಕೂ ಹೆಚ್ಚು ಮಂದಿ ವಿಚಾರಣೆ

    ಕನಕಪುರದಲ್ಲಿ ಮತ್ತೆ ಮತಾಂತರ ಸದ್ದು – ಪೊಲೀಸರಿಂದ 10ಕ್ಕೂ ಹೆಚ್ಚು ಮಂದಿ ವಿಚಾರಣೆ

    ರಾಮನಗರ: ಜಿಲ್ಲೆಯ ಕನಕಪುರದಲ್ಲಿ 10ಕ್ಕೂ ಹೆಚ್ಚು ಬಡ ಜನರನ್ನು ಟಾರ್ಗೆಟ್ ಮಾಡಿ, ಅವರೆಲ್ಲರನ್ನು ಮತಾಂತರಕ್ಕೆ (Conversion) ಯತ್ನಿಸಿದ ಆರೋಪ ಬಂದಿದೆ.

    ಕನಕಪುರ (Kanakpura) ಪಟ್ಟಣದ ನವಾಜಿಬಾರೆ ಬಡಾವಣೆಯ ಮನೆಯೊಂದರಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಮತಾಂತರ ಮಾಡಲಿ ಕೆಲ ಕ್ರೈಸ್ತ ಸಮುದಾಯದವರು ಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನು ತಡರಾತ್ರಿ ಮತಾಂತರ ಮಾಡಲು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ (Sri Ram Sena) ಮುಖಂಡರು ಟೌನ್ ಪೊಲೀಸರಿಗೆ (Police) ದೂರು ನೀಡಿದ್ದರು.

    ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಕನಕಪುರ ಟೌನ್ ಪೊಲೀಸರು 12 ಮಂದಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಎಲ್ಲರ ಮಾಹಿತಿ ಕಲೆಹಾಕಿ ಬಳಿಕ ವಾಪಸ್ ಕಳುಹಿಸಿದ್ದಾರೆ.

    ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ಮಾತನಾಡಿ, ಬಡ ಕುಟುಂಬಗಳನ್ನು ಗುರಿಯಾಗಿಸಿ ಮಾಡುತ್ತಿರುವ ಇಬ್ಬರು ಕ್ರೈಸ್ತ ಸಮುದಾಯದ ಮುಖಂಡರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಗಿಲ್ಲ ಎಂದು ಕಿಡಿಕಾರಿದರು.

    ಘಟನೆಗೆ ಸಂಬಂಧಿಸಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಪ್ರತಿಕ್ರಿಯಿಸಿ, ಮತಾಂತರ ಆಗಬಾರದು ಅಂತಲೇ ಕಾಯ್ದೆಯನ್ನು ತರಲಾಗಿದೆ. ಧರ್ಮದ ಬದಲಾವಣೆಗೆ ಅವಕಾಶ ಕೊಡಬಾರದು. ಜನತೆಯ ಭಾವನೆಗೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆ ರೀತಿ ಮತಾಂತರದಲ್ಲಿ ತೊಡಗಿದ್ದರೆ ಕಾನೂನಿನ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಕನಕಪುರ ಭಾಗದಲ್ಲಿ ಈ ರೀತಿ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನಿಂದಲೂ ಮತಾಂತರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಪಾಲಿ ಬೆಟ್ಟದ ಯೇಸು ಪ್ರತಿಮೆ ವಿಚಾರ ಇನ್ನೂ ಕೋರ್ಟ್‍ನಲ್ಲಿ ಇರುವಾಗಲೇ ಪಡಿತರ ಚೀಟಿ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ : ಅಧಿಕೃತ ಆಹ್ವಾನವಿಲ್ಲ, ಹೋಗಲ್ಲ ಎಂದ ಸಿದ್ಧರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ರೆ, ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ – ಮುತಾಲಿಕ್

    ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ರೆ, ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ – ಮುತಾಲಿಕ್

    ಬೆಳಗಾವಿ: ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ದರೆ, ಪೊಲೀಸ್‌ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಕರೆ ನೀಡಿದರು.

    ತಾಲೂಕಿನ ಹಿರೇಬಾಗೆವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ ಮುಕ್ತವಾಗಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡಬೇಕು. ಡಿಜೆ ಹಾಕಬೇಡಿ, ಸೌಂಡ್ ಹಾಕಬೇಡಿ, ಅನುಮತಿ ಪಡೆಯಬೇಕು ಅಂತಾ ಕಿರಿಕಿರಿ ಮಾಡಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದರು. ಇದನ್ನೂ ಓದಿ: ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

    ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವ ಆಗಿರಲಿಲ್ಲ. ಈ ವರ್ಷದಿಂದ ಮುಕ್ತವಾದ ಗಣೇಶೋತ್ಸವ ಕಾರ್ಯಕ್ರಮ ನಡೀತಿದೆ. ಸೌಂಡ್ ಸಿಸ್ಟಮ್, ಲೈಟಿಂಗ್‌ನವರಿಗೆ ಯಾವುದೇ ರೀತಿಯ ನಿರ್ಬಂಧ ಹಾಕಬಾರದು ಎಂದು ಹೇಳಿದರು.

    ಸೌಂಡ್ ಸಿಸ್ಟಮ್, ಲೈಟಿಂಗ್‌ನವರು ಸಾಲಸೋಲ ಮಾಡಿ ಕಷ್ಟ ಅನುಭವಿಸಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆಗೆ ನಾನು ಹೇಳುತ್ತಿದ್ದೇನೆ. ಈ ಬಾರಿ ಗಣೇಶೋತ್ಸವದಿಂದ ಅವರ ಬದುಕಿಗೆ ಒಂದು ಆಧಾರ ಆಗುತ್ತದೆ. ಸ್ವತಂತ್ರವಾಗಿ ಆಚರಣೆಗೆ ಅವಕಾಶ ಕೊಡಿ. ಅವರ ಹೊಟ್ಟೆ ಮೇಲೆ ಕಲ್ಲು ಹಾಕಬೇಡಿ. ಡಿಜೆ ಸೀಜ್ ಮಾಡ್ತೀವಿ ಅಂತಾ ಹೆದರಿಸುವ ಪ್ರಕ್ರಿಯೆ ಮಾಡಬಾರದು. ವರ್ಷಕ್ಕೊಮ್ಮೆ ಡಿಜೆ ಹಾಕಿ ಆನಂದದಿಂದ ಹಬ್ಬದ ಆಚರಣೆ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ಇಂದು ತನಿಖಾಧಿಕಾರಿ ಕೈಗೆ ವಿದ್ಯಾರ್ಥಿನಿಯರ ಹೇಳಿಕೆ – ಮುರುಘಾ ಶ್ರೀಗೆ ಸಿಗುತ್ತಾ ಜಾಮೀನು..?

    ಸುಪ್ರೀಂ ಕೋರ್ಟ್ ಆಜ್ಞೆ ಬಗ್ಗೆ ನೀವು ಹೇಳುವುದಾದರೆ, ಪ್ರತಿ ದಿವಸ ಮಸೀದಿಗಳಲ್ಲಿ ಐದು ಬಾರಿ ನಮಾಜ್ ಮಾಡೋದು ಎಷ್ಟು ಕಿರಿಕಿರಿ ಆಗ್ತಿದೆ. ಒಂದೇ ಒಂದು ಮಸೀದಿಯ ಮೈಕ್ ಕೆಳಗಿಳಿಸಿ ಸೀಜ್ ಮಾಡಿದ್ದು ತೋರಿಸಿ. ನಿಮ್ಮ ಕಾನೂನು ಹಿಂದೂಗಳಿಗೆ ಮಾತ್ರ ಆಗುತ್ತಾ, ಮುಸ್ಲಿಮರಿಗೆ ಇಲ್ವಾ ಎಂದು ಪ್ರಶ್ನೆ ಮಾಡಿದ ಅವರು, ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ನಾನು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಹೇಳುತ್ತಿದ್ದೇ‌ನೆ. ಡಿಜೆಯನ್ನು ಹಚ್ಚಿ ಮೆರವಣಿಗೆ ಮಾಡಿ. ಯಾರು ತಡೀತಾರೆ ನೋಡೋಣ. ಅಕಸ್ಮಾತ್ ತಡೆದರೆ, ಪೊಲೀಸ್ ಠಾಣೆ ಎದುರು ಗಣೇಶನ ಇಟ್ಟುಕೊಂಡು ಧರಣಿ ಮಾಡಿ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮೋದಿ ಮಕ್ಕಳು ಮಾಡದಿದ್ರೆ ನನ್ನ ತಪ್ಪಾ? – ಸಿ.ಎಂ ಇಬ್ರಾಹಿಂ

    ಮೋದಿ ಮಕ್ಕಳು ಮಾಡದಿದ್ರೆ ನನ್ನ ತಪ್ಪಾ? – ಸಿ.ಎಂ ಇಬ್ರಾಹಿಂ

    ಕಲಬುರ್ಗಿ: ಕುಟುಂಬ ರಾಜಕಾರಣವಿದ್ದಷ್ಟು ವಂಶ ವೃಕ್ಷ ಬೆಳೆಯುತ್ತದೆ. ಪರಸ್ಪರ ಹಿರಿಯರಿಗೆ ಗೌರವ ಸಿಗುತ್ತದೆ. ಮೋದಿ ಅವರು ಮಕ್ಕಳು ಮಾಡದಿದ್ರೆ ಅದು ನನ್ನ ತಪ್ಪಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ರೈತರು ಕಾಳು ಬೆಳೆದರೆ ಮಾರುವ ಕಾಳು ಬೇರೆ, ಬಿತ್ತನೆ ಕಾಳು ಬೇರೆ ಎಂದು ಇಟ್ಟುಕೊಳ್ಳುತ್ತೇವೆ. ಹಾಗೆಯೇ ಬಿಜೆಪಿ ಅವರಿಗೆ ಮೋದಿ ಅಭಿಮಾನವಿದ್ದರೆ ನಮಗೆ ದೇವೇಗೌಡ ಅಭಿಮಾನ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು. ಇಂದಿರಾಗಾಂಧಿ ನಂತರ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ? ಈಗ ಮೋದಿ ಅವರು ಮಕ್ಕಳು ಮಾಡದೇ ಇದ್ರೆ ಅದು ನನ್ನ ತಪ್ಪಾ ಅಂದು ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಕಾಂಗ್ರೆಸ್ ಚಡ್ಡಿಯನ್ನು ದೇಶದ ಜನರೇ ಬಿಚ್ಚಿ ಕಳುಹಿಸಿದ್ದಾರೆ: ಆರಗ

    ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಕೈಮುಗಿದು ಕೇಳಿದ್ದೇವೆ ನಮಗೆ ಬೆಂಬಲಿಸಿ ಅಂತ. ಅಭ್ಯರ್ಥಿ ನಿಲ್ಲಿಸುವ ಮೊದಲೇ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಕೋಮವಾದಿ ಶಕ್ತಿ ಮಟ್ಟಹಾಕುವ ಇಚ್ಚೆ ಇದ್ದರೆ ನಮಗೆ ಸಹಾಯ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹುಚ್ಚ ಆತನಿಗೆ ಯಾವ ಆಸ್ಪತ್ರೆಯಲ್ಲೂ ಔಷಧಿ ಇಲ್ಲ: ಈಶ್ವರಪ್ಪ

    Congress

    ಪಠ್ಯಪುಸ್ತಕ ವಿಚಾರದಲ್ಲಿ ಬಸವಣ್ಣ, ಕುವೆಂಪು ಸೇರಿದಂತೆ ಅನೇಕರ ವಿಚಾರದಲ್ಲಿ ಅಪಮಾನ ನಡೆಯುತ್ತಿದೆ. ಹೀಗಿದ್ದೂ ಬೊಮ್ಮಾಯಿ ಅವರೇ, ಯಾಕೆ ಈ ತಪ್ಪು ಕೆಲಸ ಮಾಡುತ್ತಿದ್ದೀರಿ? ಬಸವ ಪರಂಪರೆಯಲ್ಲಿ ಹುಟ್ಟಿ ಯಾಕೆ ಈ ಅವಮಾನ ಮಾಡುತ್ತಿದ್ದೀರಿ? ಈ ಬಗ್ಗೆ ಕಮೀಟಿ ಮಾಡಿ ಅವರಿಗೆ ಶಿಕ್ಷೆಗೊಳಪಡಿಸಬೇಕು? ಎಂದು ಆಗ್ರಹಿಸಿದ್ದಾರೆ.

    ಆಜಾನ್ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಹೋರಾಟದ ಬಗ್ಗೆ ಕಿಡಿ ಕಾರಿದ ಇಬ್ರಾಹಿಂ, ಪ್ರಮೋದ್ ಮುತಾಲಿಕ್‌ಗೆ ದೇವರು ಸದ್ಬುದ್ದಿ ನೀಡಲಿ. ಶ್ರೀರಂಗಪಟ್ಟಣದಲ್ಲಿ ಗಲಾಟೆ ಮಾಡಲು ಕೆಲವರು ತಪ್ಪು ಮಾಹಿತಿ ನೀಡ್ತಿದ್ದಾರೆ. ರಾಜ್ಯ ಸರ್ಕಾರ ಇಂತಹ ಕ್ಯಾಸೆಟ್‌ಗಳಿಗೆ ನಂಬಬಾರದು. ಅವರು ಮತೀಯ ಗಲಭೆಗೆ ಮುಂದಾಗಿದ್ದಾರೆ. ಚುನಾವಣೆ ಸಮೀಪ ಬಂದಾಗ ಮತೀಯ ಗಲೆಬೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

    `ಎಲ್ಲ ಮಸೀದಿಯಲ್ಲಿ ಲಿಂಗ ಹುಡುಕೋದು ಬೇಡ’ ಅನ್ನೋ ಮೋಹನ್ ಭಾಗವತ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಭಾಗವತ್ ಅವರು ಹೇಳಿದ್ರೆ ಒಳ್ಳೆ ಮನಸ್ಸಿನಿಂದಲೇ ಹೇಳಿದ್ದಾರೆ ಅಂದುಕೊಂಡಿದ್ದೇನೆ. ದಯವಿಟ್ಟು ಭಾಗವತ್ ಅವರು ಸರ್ಕಾರಕ್ಕೆ ಇದನ್ನು ಹೇಳಬೇಕು. ಕೇವಲ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಆರ್‌ಎಸ್‌ಎಸ್‌ನಲ್ಲಿ ಇದೀಗ ದೇಶಭಕ್ತಿ ಉಳಿದಿಲ. ಕೇಶವಕೃಪಾ ಸಿದ್ದಾಂತವಿದೆ. ಆದರೆ ನಮ್ಮದು ಬಸವಕೃಪಾ ಐಡಿಯಾಲಜಿ ಇರೋದು ಎಂದು ಹೇಳಿದ್ದಾರೆ.

  • ಮದರಸಾಗಳಲ್ಲಿ ಓದಿದವರು ಹಿಂದೂ ವಿರೋಧಿ, ಭಯೋತ್ಪಾದಕರಾಗಿ ಬರ್ತಾರೆ – ಮುತಾಲಿಕ್ ಕಿಡಿ

    ಮದರಸಾಗಳಲ್ಲಿ ಓದಿದವರು ಹಿಂದೂ ವಿರೋಧಿ, ಭಯೋತ್ಪಾದಕರಾಗಿ ಬರ್ತಾರೆ – ಮುತಾಲಿಕ್ ಕಿಡಿ

    ಧಾರವಾಡ: ಇಡೀ ದೇಶದಲ್ಲಿ 3 ಲಕ್ಷ ಮದರಸಾಗಳಿದ್ದು, ಅಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಅರೆದು ಕುಡಿಸಲಾಗುತ್ತಿದೆ. ಇದರಿಂದ ಮದರಸಾಗಳಲ್ಲಿ ತಯಾರಾಗುವ ವಿದ್ಯಾರ್ಥಿಗಳು ಹಿಂದೂ ವಿರೋಧಿಗಳು, ದೇಶ ವಿರೋಧಿ ಹಾಗೂ ಭಯೋತ್ಪಾದಕರಾಗಿ ಹೊರ ಬರ್ತಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌  ಮುತಾಲಿಕ್ ಹೇಳಿದ್ದಾರೆ.

    Pramod Muthali

    ಧಾರವಾಡದಲ್ಲಿ ಅವರಿಂದು ಮಾತನಾಡಿ, ದೇಶದಲ್ಲಿ ಕುರಾನ್ ಮತ್ತು ಶರಿಯಾ ಮುಸ್ಲಿಂ ಶಿಕ್ಷಣ ಕೊಡುವ ವಿಚಾರವಾಗಿ ಮದರಸಾ ತೆರೆಯಲಾಗಿದೆ. ಆದರೆ ಇಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಅರೆದು ಕುಡಿಸಲಾಗುತ್ತಿದೆ. ಇದರಿಂದ ಅವರು ಮುಂದೆ ಭಯೋತ್ಪಾದಕರಾಗಿ ಹೊರ ಬರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

    pramod muthalik

    ಪಾಕಿಸ್ತಾನದಲ್ಲೂ ಮದರಸಾ ಬಂದ್: ಮದರಾಗಳಲ್ಲಿ ಓದಿದ ಎಷ್ಟೋ ಮಂದಿ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಪಾಕಿಸ್ತಾನದಲ್ಲೂ ಈಗಾಗಲೇ ಮದರಸಾಗಳನ್ನು ಬಂದ್ ಮಾಡಲಾಗುತ್ತಿದೆ. ಮದರಸಾ ಯಾವ ರೀತಿ ಶಿಕ್ಷಣ ನೀಡುತ್ತಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

    ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮದರಸಾಗಳನ್ನು ಬ್ಯಾನ್ ಮಾಡಬೇಕು. ಜೊತೆಗೆ ಹಿಂದೂಗಳ ತೆರಿಗೆ ಹಣದಲ್ಲಿ ಸರ್ಕಾರದಿಂದ ಅನುದಾನ ಪಡೆದು ಬೋಗಸ್ ಆಗಿ ನಡೆಸುತ್ತಿರುವ ಮದರಸಾಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ಹಿಂದೂ ಕಾರ್ಯಕರ್ತರು ಪೊಲೀಸರ ವಶಕ್ಕೆ

    ಹಿಂದೂ ಕಾರ್ಯಕರ್ತರು ಪೊಲೀಸರ ವಶಕ್ಕೆ

    ಬೆಂಗಳೂರು: ನೀಲಸಂದ್ರದ ಆಂಜನೇಯ ದೇಗುಲದ ಮೈಕ್‍ನಲ್ಲಿ ಓಂಕಾರ ನಾದ ಹನುಮಾನ್ ಚಾಲೀಸ್ ಹಾಕಲು ಶ್ರೀರಾಮ ಸೇನೆ ಸಜ್ಜುಗೊಂಡಿದ್ದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆಜಾನ್ ವಿರೋಧಿಸಿ ಸುಪ್ರಭಾತ ಅಭಿಯಾನವನ್ನು ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ದರ್ಶನ ಮಾಡುತ್ತೇವೆ ಬಿಡಿ ಎಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.

    ಆದರೆ ಅವಕಾಶ ಕೊಡದ ಪೊಲೀಸರು ಯಾವ ಅವಕಾಶವನ್ನು ಕೊಡಲ್ಲ ಎಂದು ತಿಳಿಸಿದ್ದಾರೆ. ಆಗ ಹಿಂದೂ ಕಾರ್ಯಕರ್ತರು ಧಾರ್ಮಿಕ ಹಕ್ಕು ಇದೆ ಎಂದು ವಾದಿಸಿದ್ದಾರೆ. ಆದರೂ ಅಂಬೇಡ್ಕರ್ ಸರ್ಕಲ್ ನೀಲಸಂದ್ರ ದೇಗುಲದಿಂದ ಅರ್ಧ ಕಿಮೀ ದೂರದಲ್ಲೇ ಪೊಲೀಸರು ಹಿಂದೂ ಕಾರ್ಯಕರ್ತರನ್ನು ತಡೆದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

    ನಿಮಗೆ ತಾಕತ್ತಿದ್ದರೇ ಮಸೀದಿಗಳ ಆಜಾನ್ ತಡೆಯಿರಿ. ನಮ್ಮನ್ನು ತಡೆಯಬೇಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದ ಅಶೋಕ ನಗರ ಪೊಲೀಸರು ನಂತರ ಕಾರ್ಯಕರ್ತರನ್ನು ರಿಲೀಸ್ ಮಾಡಿದ್ದಾರೆ.  ಇದನ್ನೂ ಓದಿ: 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

  • ಎಚ್‍ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ: ಆಂದೋಲ ಶ್ರೀ

    ಎಚ್‍ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ: ಆಂದೋಲ ಶ್ರೀ

    ಕಲಬುರಗಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ. ಇವರ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಇವತ್ತು ದೊಂಬಿಗಳು ಆಗುತ್ತಿವೆ ಎಂದು ಆಂದೋಲ ಶ್ರೀ ಗರಂ ಆಗಿದ್ದಾರೆ.

    loudspeakers

    ಅಜಾನ್ ಮೈಕ್ ತೆರವಿಗೆ ಶ್ರೀರಾಮ್ ಸೇನೆ ಸರ್ಕಾರಕ್ಕೆ ಗಡುವು ನೀಡಿದೆ. ಈ ಬಗ್ಗೆ ವಾಗ್ದಾಳಿ ನಡೆಸಿದ್ದ ಎಚ್.ಡಿ ಕುಮಾರಸ್ವಾಮಿಗೆ ಆಂದೋಲನ ಶ್ರೀ ತೀರುಗೇಟು ನೀಡಿದ್ದು, ಮುಸ್ಲಿಮರಿಗೆ ಬೆಂಬಲ ನೀಡುವ ಇಂತಹ ರಾಜಕಾರಣಿಗಳನ್ನು ಮೊದಲು ಒಳಗಡೆ ಹಾಕಬೇಕು ಆಗಾ ಕರ್ನಾಟಕ, ಭಾರತ ಶಾಂತಿಯಿಂದ ಇರುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ – ಆರೋಪಿ ಗೊತ್ತಿದ್ರೂ ಕೇಸ್ ಮುಚ್ಚಾಕಿದ್ರಾ ಪೊಲೀಸರು?

    ಮುಸ್ಲಿಮರು ರಂಜಾನ್‍ಗೆ ಹಿಂದೂಗಳ ಬಳಿ ಬಟ್ಟೆ ಖರೀದಿ ಮಾಡಬೇಡಿ, ಮಸ್ಲಿಮರ ಬಳಿಯೇ ಬಟ್ಟೆ ಖರೀದಿ ಮಾಡಿ ಎಂದು ಫತ್ವಾ ಹೊರಡಿಸಿದ್ದಾರೆ. ಅವರು ಫತ್ವಾ ಹೊರಡಿಸಿದ ಮೇಲೆ ನಾವು ಸುಮ್ಮನೆ ಕೂರೋಕೆ ಆಗುತ್ತಾ, ಅಕ್ಷಯ ತೃತೀಯ ದಿನ ಸಾವಿರಾರು ಕೋಟಿ ಚಿನ್ನದ ವ್ಯವಹಾರ ನಡೆಯುತ್ತದೆ. ಹೀಗಾಗಿ ನಾವು ಹಿಂದೂಗಳಿಗೆ ವಿನಂತಿ ಮಾಡುತ್ತಿದ್ದೇವೆ. ಯಾರು ಕೂಡ ಮುಸ್ಲಿಂ ಅಂಗಡಿಯಿಂದ ಚಿನ್ನ ಖರೀದಿ ಮಾಡಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಮ್ಯಾಂಗೋ ವಾರ್ ಬಳಿಕ ಇನ್ನೊಂದು ವಾರ್ ಶುರು- ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಅಭಿಯಾನ

    ಮಲಬಾರ್ ಗೋಲ್ಡ್ ಸೇರಿದಂತೆ ಮುಸ್ಲಿಮರ ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡಿದ್ರೆ ದೇಶದಲ್ಲಿ ಒಬ್ಬ ಶತ್ರುವನ್ನು ಬೆಳೆಸಿದಂತೆ ಆಗುತ್ತದೆ. ಹೀಗಾಗಿ ಮುಸ್ಲಿಮರ ಬಳಿ ಚಿನ್ನ ಖರೀದಿ ಮಾಡದೆ ಹಿಂದೂಗಳ ಬಳಿ ಚಿನ್ನ ಖರೀದಿ ಮಾಡಿ ಎಂದು ಶ್ರೀರಾಮ್ ಸೇನೆ ಸಂದೇಶ ನೀಡಿದೆ ಎಂದರು.

  • ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ: ಬೊಮ್ಮಾಯಿ

    ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ: ಬೊಮ್ಮಾಯಿ

    ಕಲಬುರಗಿ: ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಮೇ 9 ರಿಂದ ಶ್ರೀರಾಮ ಸೇನೆ ಆಜಾನ್ ಸೇ ಆಜಾದಿ ಅಭಿಯಾನ ಪ್ರಾರಂಭಿಸಲು ಸಿದ್ದತೆ ನಡೆಸಿದ ಹಿನ್ನೆಲೆ ರಾಜ್ಯದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕ ತೆರುವುಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಜಾನ್ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ಇದೆ ಎಂದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    mosque-loudspeakers

    ಯಾವ ಯಾವ ಸಂದರ್ಭದಲ್ಲಿ ಎಷ್ಟು ಶಬ್ದದ ಡೆಸಿಬಲ್ ಇರಬೇಕು ಅಂತಾ ಸ್ಪಷ್ಟವಾಗಿ ಹೇಳಿದೆ. ಡಿಜಿ ಅವರು ಕೂಡ ಸಕ್ರ್ಯೂಲರ್ ಪಾಸ್ ಮಾಡಿದ್ದಾರೆ. ಠಾಣೆಯಲ್ಲಿ ಶಾಂತಿ ಸಭೆ ನಡೆಸುವುದಕ್ಕೆ ಸೂಚಿಸಲಾಗಿದೆ. ಮಹಾ ಮಂಗಳಾರತಿ ಮಾಡುವುದರ ಬಗ್ಗೆ ಮುಂದೆ ನೋಡೊಣ ಎಂದು ಹೇಳಿದರು. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡುವುದಕ್ಕೆ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೆಸರು ಇಡುವ ವಿಚಾರದಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಅಸಮಾಧಾನ ಇಲ್ಲ ಅಂತ ಹೇಳಿದರು.