Tag: ಶ್ರೀರಾಮ ಸೇನೆ

  • ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ಬೆಳಗಾವಿ: ಕರ್ನಾಟಕದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಮಕ್ಕಳೇ ಲವ್ ಜಿಹಾದ್‌ಗೆ ತುತ್ತಾಗಿದ್ದಾರೆ. ಆ ಪೊಲೀಸ್ ಅಧಿಕಾರಿಗಳು  ನಮ್ಮ ಬಳಿ ಬಳಿ ಸಹಾಯ ಕೇಳಿದ್ದಾರೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ (Pramod Muthalik) ಹೇಳಿದ್ದಾರೆ.

    ಪ್ರೇಮಿಗಳ ದಿನದಂದು (Valentine’s Day) ಲವ್ ಜಿಹಾದ್ (Love Jihad) ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಲವ್ ಜಿಹಾದ್ ತಡೆಯಲು ಈಗಾಗಲೇ ಸಹಾಯವಾಣಿ ತೆರೆದಿದ್ದೇವೆ. ಲವ್ ಜಿಹಾದ್ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರೇಮಿಗಳ ದಿನದಂದು ಯುವತಿಯರು‌ ತ್ರಿಶೂಲ‌ ಹಾಗೂ ಖಾರದ ಪುಡಿ ಇಟ್ಟುಕೊಂಡು ಓಡಾಡಬೇಕು. ಹಿಂದೂ ಸಮಾಜದ ಹಿತದೃಷ್ಟಿಯಿಂದ ತ್ರಿಶೂಲ ಧಿಕ್ಷೆ ನೀಡಲಾಗಿದೆ. ಲವ್ ಜಿಹಾದ್ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ

    ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಕೊಲೆ ಮಾಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಗಂಭೀರ ಕಾನೂನುಗಳಿಲ್ಲದೆ ಮಹಿಳೆಯರು ಇಂದು ಪರಿಪತಪಿಸುವಂತಾಗಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಶಿಕ್ಷೆ ಆಗಬೇಕಿದೆ ಎಂದು ಆಗ್ರಹಿಸಿದರು.

    ಈಗಾಗಲೇ ನಮ್ಮ ಸಹಾಯವಾಣಿಯ ಮೂಲಕ‌ 40% ರಷ್ಟು ಲವ್ ಜಿಹಾದ್ ತಡೆಯಲಾಗಿದೆ. 100 ಕಡೆಗಳಲ್ಲಿ ತ್ರಿಶೂಲ‌ ಧಿಕ್ಷಾ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

  • ವ್ಯಕ್ತಿತ್ವ ವಿಕಸನ ಶಿಬಿರದ ಹೆಸರಲ್ಲಿ ಗನ್, ಸಾಹಸ ತರಬೇತಿ – ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಕೇಸ್‌

    ವ್ಯಕ್ತಿತ್ವ ವಿಕಸನ ಶಿಬಿರದ ಹೆಸರಲ್ಲಿ ಗನ್, ಸಾಹಸ ತರಬೇತಿ – ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಕೇಸ್‌

    ಬಾಗಲಕೋಟೆ: ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಹೆಸರಲ್ಲಿ ಗನ್ ಹಾಗೂ ಇತರೆ ಸಾಹಸ ತರಬೇತಿ ನೀಡಿದ್ದಕ್ಕೆ ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತರ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ.

    ನಿಂಗಪ್ಪ ಹೂಗಾರ ದೂರಿನ‌ ಮೇರೆಗೆ ತರಬೇತಿಯಲ್ಲಿ ಭಾಗಿಯಾಗಿದ್ದ 27 ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Bengaluru Airport | 2024ರಲ್ಲಿ ದಾಖಲೆ – 4 ಕೋಟಿ ಮಂದಿಯಿಂದ ಪ್ರಯಾಣ

    ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ಡಿ.24 ರಿಂದ ಡಿ.29 ರವರೆಗೆ ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ದಂಡ ಪ್ರಯೋಗ, ಗನ್ ಟ್ರೈನಿಂಗ್, ಕರಾಟೆ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ‌ ನೀಡಲಾಗಿತ್ತು.

    ಮುಳ್ಳು ಕಂಟಿಯ ಗುಂಡಿಯಲ್ಲಿ ಹಾದುಹೋಗುವುದು, ಸಂಧಿಗ್ದ ಸ್ಥಳಗಳಲ್ಲಿ ಪಾರಾಗುವುದು, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ನೀಡಲಾಗಿತ್ತು. ಶ್ರೀರಾಮ ಸೇನೆ ಸ್ವಸುರಕ್ಷೆಗಾಗಿ ವಿವಿಧ ರಕ್ಷಾ ತರಬೇತಿ ನೀಡಿದ್ದೇವೆ ಎಂದು ಹೇಳಿಕೊಂಡಿತ್ತು.

     

  • ಹಲಾಲ್ ಮುಕ್ತ ಗಣೇಶ ಹಬ್ಬ ಆಚರಿಸಿ: ಪ್ರಮೋದ್ ಮುತಾಲಿಕ್ ಮನವಿ

    ಹಲಾಲ್ ಮುಕ್ತ ಗಣೇಶ ಹಬ್ಬ ಆಚರಿಸಿ: ಪ್ರಮೋದ್ ಮುತಾಲಿಕ್ ಮನವಿ

    ಚಿಕ್ಕೋಡಿ: ದೇಶಾದ್ಯಂತ ಗಣೇಶೋತ್ಸವ (Ganeshotsava) ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಹಲಾಲ್ ಮುಕ್ತ ಗಣೇಶ ಹಬ್ಬ ಆಚರಣೆ ಮಾಡುವಂತೆ ಶ್ರೀ ರಾಮ ಸೇನೆ (Sri Rama Sene) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮನವಿ ಮಾಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಗೋಭಕ್ಷಕರು, ಗೋಹಂತಕರಿಂದ ಯಾವುದೇ ವಸ್ತು ಖರೀದಿ ಮಾಡಬೇಡಿ. ಯಾರೂ ಕೂಡ ಈ ಅಪರಾಧ, ತಪ್ಪನ್ನು, ಅಪವಿತ್ರತೆ ಮಾಡಬಾರದು. ಶಾಸ್ತ್ರಬದ್ಧವಾಗಿ ಮಣ್ಣಿನ ಗಣಪತಿಯನ್ನೇ ಪೂಜೆ ಮಾಡಬೇಕು. ಪಿಒಪಿ ಗಣಪತಿ ಉಪಯೋಗ ಬೇಡ. ಇದು ಅಪವಿತ್ರವಾದದ್ದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಿನಿಮಾ, ಅಶ್ಲೀಲ ಗೀತೆ ಹಾಕಬೇಡಿ ಎಂದರು. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ನೆರೆಮನೆಯವನಿಂದ ಅತ್ಯಾಚಾರ – 14ರ ಹುಡುಗ ಅರೆಸ್ಟ್

    ಭಕ್ತಿ ಗೀತೆ ಹಾಕಿ ಗಣೇಶೋತ್ಸವ ಆಚರಿಸಿ ಪಟಾಕಿ, ಹೂವು ಹಣ್ಣು, ತರಕಾರಿ, ಎಲೆಕ್ಟ್ರಾನಿಕ, ಎಲೆಕ್ಟ್ರಿಕ್ ಸಾಮಗ್ರಿ ಪವಿತ್ರವಾದದ್ದನ್ನು ಪಡೆಯಬೇಕು. ಅಪವಿತ್ರವಾದ ವಸ್ತು ಖರೀದಿ ಮಾಡಿದರೆ ಶಾಸ್ತ್ರಕ್ಕೆ ವಿರೋಧ ಆಗುತ್ತದೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಮದ್ಯಪಾನ, ಗುಟ್ಕಾ ತಿನ್ನದಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: Haryana Polls Dates | ಹರಿಯಾಣ ಚುನಾವಣೆ ದಿನಾಂಕ ಬದಲು – ಅಕ್ಟೋಬರ್‌ 5ಕ್ಕೆ ಮತದಾನ

  • ಬಾಂಬ್ ಸ್ಫೋಟವಾಗಲು ಎರಡೂ ರಾಷ್ಟ್ರೀಯ ಪಕ್ಷದವರು ಕಾರಣ: ಪ್ರಮೋದ್ ಮುತಾಲಿಕ್

    ಬಾಂಬ್ ಸ್ಫೋಟವಾಗಲು ಎರಡೂ ರಾಷ್ಟ್ರೀಯ ಪಕ್ಷದವರು ಕಾರಣ: ಪ್ರಮೋದ್ ಮುತಾಲಿಕ್

    ಕಾರವಾರ: ಬೆಂಗಳೂರು ಬಾಂಬ್ ಸ್ಪೋಟ ಪೂರ್ವಯೋಜಿತ ಕೃತ್ಯ. ಸತ್ಯಾಸತ್ಯತೆ ಹೊರಬರಬೇಕಾದ್ರೆ NIA ತನಿಖೆಗೆ ವಹಿಸಬೇಕು. ಎರಡೂ ರಾಷ್ಟ್ರೀಯ ಪಕ್ಷಗಳು ಬಾಯಿ ಮುಚ್ಚಿಕೊಂಡು ಕೂರಬೇಕು. ನಿಮ್ಮ ನಿಮ್ಮ ಕಾಲದಲ್ಲಿ ಏನೇನು ಆಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಾಂಬ್ ಸ್ಫೋಟ ಆಗಲು ಎರಡೂ ಪಕ್ಷದವರು ಕಾರಣ ಇದ್ದೀರಿ. ನಿಮ್ಮ ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಹೇಳಿಕೆ ಕೊಡಬೇಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ‌

    ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಹೇಳಿಕೆಗಳು ತನಿಖೆಯ ದಾರಿ ತಪ್ಪಿಸಲಿದೆ. ಬಿಜೆಪಿ ಅವಧಿಯಲ್ಲಿಯೂ ಸ್ಫೋಟ ನಡೆದಿತ್ತು. ಕಾಂಗ್ರೆಸ್ ಅವಧಿಯಲ್ಲೂ ನಡೆದಿದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯದ ಪರಿಣಾಮವೇ ಪದೇ ಪದೇ ಬಾಂಬ್ ಸ್ಫೋಟಕ್ಕೆ ಕಾರಣ. ರಾಜ್ಯ ಸರ್ಕಾರದ ಬದಲು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು. ರಾಜ್ಯ ಸರ್ಕಾರ ಪೊಲೀಸರ ಕೈ ಕಟ್ಟಿಹಾಕಿದೆ. ಪೊಲೀಸರನ್ನು ಫ್ರೀಯಾಗಿ ತನಿಖೆಗೆ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಾರ ಅನುಮತಿ ಪಡೆದು ಪರೀಕ್ಷೆ ಮಾಡಿದ್ದಾರೆ- ಖಾಸಗಿ ಎಫ್‌ಎಸ್‌ಎಲ್‌ ವರದಿಗೆ ಪರಮೇಶ್ವರ್‌ ಗರಂ

    ಪಾಕಿಸ್ತಾನ ಪರ ಘೋಷಣೆ ಕೂಗುವವರು ದೇಶದ ಪಾಲಿಗೆ ಕ್ಯಾನ್ಸರ್ ವೈರಸ್ ಇದ್ದಂತೆ. ಮೊದಲು ನಾಸಿರ್ ಹುಸೇನ್ ಮೇಲೆ ಕ್ರಮ ಕೈಗೊಳ್ಳಬೇಕು. ಭಟ್ಕಳಕ್ಕೆ ಪಾಕಿಸ್ತಾನದ ನಂಟಿದೆ ಎಂದು ಜಗನ್ನಾಥ ಶೆಟ್ಟಿ ಆಯೋಗ ವರದಿ ನೀಡಿತ್ತು. ವರದಿಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಒಪ್ಪಲಿಲ್ಲ. ಬಿಜೆಪಿ, ಕಾಂಗ್ರೆಸ್ ಗೆ ಹೆಚ್ಚು ವ್ಯತ್ಯಾಸವಿಲ್ಲ ಎಂದರು. ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸುವುದಿಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ

    ಜಾತಿ ಗಣತಿ ವರದಿಗೆ ವಿರೋಧವಿದೆ. ದೇಶದಲ್ಲಿ ಒಟ್ಟಾಗಿ ಸಾಗಬೇಕಿದೆ. ರಾಜಕೀಯ ಪಕ್ಷಗಳು ಸಮುದಾಯಗಳನ್ನು ಒಡೆದು ಆಳಲು ಈ ವರದಿ ಸಿದ್ದಪಡಿಸಿವೆ. ಇದೊಂದು ಅವೈಜ್ಞಾನಿಕ ವರದಿ ಎಂದರು.

    ದೇಶಕ್ಕೆ ಒಳಿತಾಗಬೇಕೆಂದರೆ ರಾಜ್ಯದ ಕೆಲ ಬಿಜೆಪಿ ನಾಯಕರು ಸ್ವಯಂ ನಿವೃತ್ತಿ ತೆಗೆದುಕೊಂಡು ಬೇರೆಯವರಿಗೆ ಮಾದರಿಯಾಗಲಿ. ಆದರೆ ನಿವೃತ್ತಿ ಆಗಬೇಕಾದವರ ಹೆಸರು ಬಹಿರಂಗವಾಗಿ ಹೇಳುವುದಿಲ್ಲ ಎಂದು ಹೇಳಿದರು.

  • ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ

    ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ

    ಚಿಕ್ಕಬಳ್ಳಾಪುರ: ಅಕ್ರಮವಾಗಿ ರಾಶಿರಾಶಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತರು (Activists) ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ನಗರದ ಐಬಿ ವೃತ್ತದಲ್ಲಿ ಆಂಧ್ರಪ್ರದೇಶದ ಹಿಂದೂಪುರ ಕಡೆಯಿಂದ ಗೌರಿಬಿದನೂರು-ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನ ಶಿವಾಜಿನಗರಕ್ಕೆ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅತಿ ವೇಗದಿಂದ ಕಾರು ತಡೆದಾಗ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕಾರು ತಡೆ ಹಿಡಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾರಿನ ಗಾಜು ಪುಡಿಪುಡಿ ಮಾಡಿ ಕಾರಿನಲ್ಲಿದ್ದ ರಾಶಿ ರಾಶಿ ಮಾಂಸವನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಂದ್ ಮಾಡಿದರೆ ಬ್ರ್ಯಾಂಡ್‌ ಬೆಂಗಳೂರಿಗೆ ಧಕ್ಕೆ – ಡಿಕೆಶಿ ಹೇಳಿಕೆಗೆ ಆಕ್ರೋಶ

    ಇದೇ ವೇಳೆ 4 ಬೊಲೆರೋ ಪಿಕ್‌ಅಪ್ ಹಾಗೂ 1 ಮಿನಿ ಟೆಂಪೋ ಮೂಲಕ ಲೋಡ್‌ಗಟ್ಟಲೆ ಗೋಮಾಂಸ (Beef) ಸಾಗಾಟ ಮಾಡುತ್ತಿದ್ದು, ಆ ವಾಹನಗಳಿಗೆ ಮುಂದೆ ಎಸ್ಕಾರ್ಟ್ ವಾಹನವಾಗಿ ಕಾರು ಆಗಮಿಸುತ್ತಿತ್ತು ಎಂದು ತಿಳಿದುಬಂದಿದೆ. ಈ 5 ವಾಹನಗಳನ್ನು ತಡೆದ ಶ್ರೀರಾಮ ಸೇನೆ ಕಾರ್ಯಕರ್ತರು ಗೋಮಾಂಸ ಸಾಗಾಟ ಮಾಡುತ್ತಿದ್ದವರ ಚಳಿ ಬಿಡಿಸಿದ ಬಳಿಕ ಅವರ ತಲೆಯ ಮೇಲೆ ಗೋವಿನ ಕಡಿದ ತಲೆ ಹೊರಿಸಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿಸಿದ್ದಾರೆ. ಘೋಷಣೆ ಕೂಗದೆ ಇದ್ದಾಗ, ತಲೆಯ ಮೇಲೆ ಗೋವು ಹೊರಲು ಹಿಂದೇಟು ಹಾಕಿದವರಿಗೆ ಕೋಲಿನಿಂದ ಬಾರಿಸಲಾಗಿದೆ. ಇದಾದ ನಂತರ ಕಾರಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೂ ಓದಿ: ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ವಿಷಯ ತಿಳಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಡಿವೈಎಸ್ಪಿ ರವಿ ಘಟನಾ ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತವಾರಣವಿದ್ದು, ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಒಂದೇ ದಿನ 19 ಮಂದಿ ಸಂಚಾರಿ ಪೊಲೀಸರ ಅಮಾನತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ರಮ ಸಾಗಾಣಿಕೆ ಮಾಡ್ತಿದ್ದ 11 ಗೋವುಗಳ ರಕ್ಷಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು

    ಅಕ್ರಮ ಸಾಗಾಣಿಕೆ ಮಾಡ್ತಿದ್ದ 11 ಗೋವುಗಳ ರಕ್ಷಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ (Expressway) ವೇಯಲ್ಲಿ ಅಕ್ರಮ ಗೋ ಸಾಗಾಟ (Cow Trafficking) ಮಾಡುತ್ತಿದ್ದ 11 ಗೋವುಗಳನ್ನು ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

    ಆರೋಪಿಗಳು 11 ಹಸುಗಳನ್ನು ಕ್ಯಾಂಟರ್ ಮೂಲಕ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ರಾಮನಗರ (Ramanagara) ತಾಲೂಕಿನ ಜಯಪುರ ಗೇಟ್ ಬಳಿ ಶ್ರೀರಾಮ ಸೇನೆ ಹಸುಗಳ ರಕ್ಷಣೆ ಮಾಡಿದೆ. ಖಚಿತ ಮಾಹಿತಿಯ ಮೇರೆಗೆ ವಾಹನ ಅಡ್ಡಗಟ್ಟಿದ್ದು, ಬಳಿಕ ರಾಮನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಾಕು ನಾಯಿ, ಬೀದಿ ನಾಯಿ ಕಚ್ಚಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ 2 ಕುಟುಂಬಗಳು

    ಕೆಎಂ ದೊಡ್ಡಿಯಿಂದ ಚಿಂತಾಮಣಿಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಸಂದರ್ಭ ಸ್ಥಳಕ್ಕೆ ಬಂದ ಪೊಲೀಸರು ಕ್ಯಾಂಟರ್ ವಾಹನವನ್ನು ಸೀಜ್ ಮಾಡಿ ಅದರಲ್ಲಿದ್ದ 11 ಹಸುಗಳ ರಕ್ಷಣೆ ಮಾಡಿದ್ದಾರೆ. ಅಲ್ಲದೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಲಗಿದ್ದಲ್ಲೇ ಅಸುನೀಗಿದ ಲಾರಿ ಚಾಲಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಪಬ್ಲಿಕ್ ಆಫ್ ಭಾರತ್‌ ಮರುನಾಮಕರಣ ಸ್ವಾಗತಿಸಿದ ಶ್ರೀರಾಮ ಸೇನೆ

    ರಿಪಬ್ಲಿಕ್ ಆಫ್ ಭಾರತ್‌ ಮರುನಾಮಕರಣ ಸ್ವಾಗತಿಸಿದ ಶ್ರೀರಾಮ ಸೇನೆ

    ಗದಗ: ರಿಪಬ್ಲಿಕ್ ಆಫ್ ಭಾರತ್‌ ಮರುನಾಮಕರಣ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆಯ (SriramaSene) ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.

    ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್‌ (Republican Bharat) ಮರು ನಾಮಕರಣ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿನ ಗ್ರಾಮ, ಪಟ್ಟಣ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಗುಲಾಮಗಿರಿ ಹೆಸರು ಇದ್ದವು. 2014 ರ ನಂತರ ಗುಲಾಮರಿ ಹೆಸರನ್ನು ತೆಗೆಯಲಾಗುತ್ತಿದೆ. ಭಾರತೀಯ ಹೆಸರು, ಹಿಂದೂ ಧರ್ಮದ ಹೆಸರುಗಳನ್ನು ಇಡಲಾಗುತ್ತಿದೆ ಎಂದರು.

    ನಮ್ಮ ಸಂಸ್ಕೃತಿ, ಸಂಪ್ರದಾಯದ ಹೆಸರನ್ನು ಇಡಲಾಗುತ್ತಿದೆ. ಜಿ-20 ಸಮ್ಮೇಳನದಲ್ಲಿ ರಿಪಬ್ಲಿಕ್ ಆಫ್ ಭಾರತ್ ಅಂತಾ ಹೆಸರು ಇಡುತ್ತಿರುವುದು ಸ್ವಾಗತ. ಇಂಡಿಯಾ ಎಂಬ ಶಬ್ದದಲ್ಲೂ ಗುಲಾಮಗಿರಿ ಇದೆ. ಬ್ರಿಟಿಷರು ಇಂಡಿಯಾ ಅಂತಾ ಹೆಸರು ಇಟ್ಟಿದ್ದರು. ಭಾರತ ಎನ್ನುವುದು ಹೆಮ್ಮೆಯ ಶಬ್ದವಾಗಿದೆ. ಭಾರತ ಎಂಬುದು ಸ್ವಾಭಿಮಾನದ ಅರ್ಥ ಬರುವ ಶಬ್ದವಾಗಿದೆ. ರಿಪಬ್ಲಿಕ್ ಆಫ್ ಭಾರತ ನಾಮಕರಣವನ್ನು ಶ್ರೀ ರಾಮ ಸೇನೆ ಸಂಘಟನೆಯಿಂದ ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ರಾಮನಗರ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ (Sri Ram Sena) ಬ್ಯಾನ್ ಮಾಡಿದ್ದು ಯಾಕೆಂದು ಯೋಗಿ (Yogi Adityanath) ಹೇಳಬೇಕು ಎಂದು ಕಾಂಗ್ರೆಸ್ (Congress) ನಾಯಕ ಡಿ.ಕೆ ಸುರೇಶ್ (D.K. Suresh) ಕಿಡಿಕಾರಿದ್ದಾರೆ.

    ಕನಕಪುರದಲ್ಲಿ (Kanakapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಯಾಕೆ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿಗರು ಹೇಳಬೇಕು. ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗದೆ ಧರ್ಮದ ಹೆಸರಿನಲ್ಲಿ ಅಡ್ಡ ಬರುತ್ತಿರುವುದು ಒಳ್ಳೆಯದಲ್ಲ. ನಾವು ಸಹ ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಾಗಿಲ್ಲ. ನಾವೂ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಆದರೆ ಚುನಾವಣಾ ಪ್ರಚಾರದಲ್ಲಿ ರಾಮ ಮತ್ತು ಹನುಮನ ತಂದು ಪೂಜೆ ಮಾಡುವುದಿಲ್ಲ. ವೋಟಿಗಾಗಿ ಪೂಜೆ ಮಾಡುವವರಿಗೆ ಜನ ಉತ್ತರಿಸಲಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

    ಇನ್ನೂ ಕನಕಪುರದಲ್ಲಿ ಅಮಿತ್ ಶಾ ಪ್ರಚಾರದ ವಿಚಾರವಾಗಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಅಮಿತ್ ಶಾ ಬಂದರೂ ಸಂತೋಷ, ಮೋದಿ ಬಂದರೂ ಸಂತೋಷ. ಅವರಿಬ್ಬರೂ ಮೇಕೆದಾಟು ಯೋಜನೆಗೆ ಯಾವಾಗ ಅನುಮತಿ ಕೊಡುತ್ತೀರಾ? ಅದರ ಬಗ್ಗೆ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.

    ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಎಲ್ ಸಂತೋಷ್ ಅವರಿಗೆ ನಾನೇ ಎಲ್ಲಾ ರೀತಿಯ ರಕ್ಷಣೆ ನೀಡುತ್ತೇನೆ. ಅವರೇ ಮನೆಮನೆಗೆ ಬಂದು ಮತ ಕೇಳಲಿ. ನಾನು ಒಂದು ಮಾತು ಹೇಳಿದ್ರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ. ಅದಕ್ಕಾಗಿ ಬಿಎಸ್‍ಎಫ್‍ನ ಅಗತ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

  • ಮುತಾಲಿಕ್ ವಿರುದ್ಧ ಅಭ್ಯರ್ಥಿ ಹಾಕಿದ್ರೆ ಸಿ.ಟಿ.ರವಿ ವಿರುದ್ಧವೂ ಅಭ್ಯರ್ಥಿ : ಶ್ರೀರಾಮಸೇನೆ ಎಚ್ಚರಿಕೆ

    ಮುತಾಲಿಕ್ ವಿರುದ್ಧ ಅಭ್ಯರ್ಥಿ ಹಾಕಿದ್ರೆ ಸಿ.ಟಿ.ರವಿ ವಿರುದ್ಧವೂ ಅಭ್ಯರ್ಥಿ : ಶ್ರೀರಾಮಸೇನೆ ಎಚ್ಚರಿಕೆ

    ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ (Udupi) ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಶ್ರೀರಾಮಸೇನೆ (Sri Rama Sene) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ವಿರುದ್ಧ ಬಿಜೆಪಿ (BJP) ಅಭ್ಯರ್ಥಿ ಹಾಕದಂತೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್  ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಕ್ತ ವ್ಯಕ್ತಿಯೆಂದು ನಿರ್ಧಾರವಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸದೆ ಪ್ರಮೋದ್ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ, ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹಿಂದೂ ಸಂಘಟನೆಗಳು ಗಂಭೀರ ನಿಲುವು ತೆಗೆದುಕೊಳ್ಳುತ್ತೇವೆ. ಸಿ.ಟಿ ರವಿಯ (CT Ravi) ವಿರುದ್ಧವೂ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಮುತಾಲಿಕ್ 47 ವರ್ಷಗಳಿಂದ ಮನೆ ಬಿಟ್ಟು ಬ್ರಹ್ಮಚಾರಿಯಾಗಿ ಸಮಾಜವೇ ಕುಟುಂಬ, ದೇಶವೇ ನನ್ನ ಮನೆ ಎಂದು ದೇಶ, ಧರ್ಮಕ್ಕಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ಬಹಳಷ್ಟು ರಾಜಕೀಯ ಅವಕಾಶವಿದ್ದಾಗಲೂ ತಿರಸ್ಕರಿಸಿದ್ದರು. ‌ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಹಿಂದೂ ನಾಯಕರು ಮತ್ತು ಕಾರ್ಯಕರ್ತರ ಕಡೆಗಣನೆ, ಅನವಶ್ಯಕ ದೂರು ದಾಖಲು ಮುಂತಾದ ರೀತಿಯಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ಪ್ರಾಮಾಣಿಕ, ಬದ್ಧತೆಯ ಜನಪ್ರತಿನಿಧಿಗಳನ್ನು ಸಮಾಜ ನಿರೀಕ್ಷಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನ್ಯುಮೋನಿಯಾ ಚಿಕಿತ್ಸೆ ಎಂದು 3 ತಿಂಗಳ ಮಗುವಿನ ಹೊಟ್ಟೆಗೆ 51 ಬಾರಿ ಕಾದ ರಾಡ್ ಇಟ್ರು!

    ಬಿಜೆಪಿ ಬೆಳವಣಿಗೆಯಲ್ಲಿ ಪ್ರಮೋದ್ ಮುತಾಲಿಕ್ ಪಾತ್ರವೂ ಇದೆ. ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿ ನೆಲೆಯೂರಲು ಅವರೇ ಕಾರಣ ಎನ್ನುವುದು ಸಮಾಜಕ್ಕೆ ತಿಳಿದಿದೆ. ಹಾಗಾಗಿ ಪ್ರಮೋದ್ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಒತ್ತಾಯಿಸಿದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ 2 ವಿಕೆಟ್ ಪತನ- ಕಾಂಗ್ರೆಸ್ ಸೇರ್ತಾರಾ ಶಿವಲಿಂಗೇಗೌಡ, ಎಟಿಆರ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರ್ಕಳದಿಂದಲೇ ಸ್ಪರ್ಧೆ- ಸುನೀಲ್‌ ಕುಮಾರ್‌ಗೆ ಸೆಡ್ಡು

    ಕಾರ್ಕಳದಿಂದಲೇ ಸ್ಪರ್ಧೆ- ಸುನೀಲ್‌ ಕುಮಾರ್‌ಗೆ ಸೆಡ್ಡು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k