Tag: ಶ್ರೀರಾಮ ಪ್ರತಿಮೆ

  • ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    ರಾಯಚೂರು: ಮಂತ್ರಾಲಯದ (Mantralaya) ಹೊರವಲಯದಲ್ಲಿ ಸ್ಥಾಪಿಸಲಾಗುವ ವಿಶ್ವದ ಅತಿ ಎತ್ತರದ 108 ಅಡಿಯ ಪಂಚಲೋಹ ಶ್ರೀರಾಮ ಪ್ರತಿಮೆ (Shreeram Idol) ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿಶ್ ಶಾ (Amit Shah) ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

    ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭೂಮಿ ಪೂಜೆ ಮಾಡಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ಹೈದರಾಬಾದ್ ಮೂಲದ ಜೈ ಶ್ರೀರಾಮ್ ಫೌಂಡೇಶನ್‌ನಿಂದ 300 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ: ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ

    ಗುಜರಾತ್‌ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಹಾಂಜಿ ಸುತಾರ್‌ಗೆ ಶ್ರೀರಾಮ ಪ್ರತಿಮೆ ತಯಾರಿಕೆ ಜವಾಬ್ದಾರಿ ನೀಡಲಾಗಿದೆ. ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ ವಿಶ್ವದಲ್ಲೇ ಅತಿ ಎತ್ತರದ ಶ್ರೀರಾಮ ಪ್ರತಿಮೆ ಮಂತ್ರಾಲಯದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 5 TMC ನೀರಿನ ಒಳಹರಿವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದಲ್ಲೇ ಅತೀ ಎತ್ತರದ ಪಂಚಲೋಹ ಶ್ರೀರಾಮನ ಪ್ರತಿಮೆ ನಿರ್ಮಾಣ- ಅಮಿತ್ ಶಾ ಶಂಕುಸ್ಥಾಪನೆ

    ವಿಶ್ವದಲ್ಲೇ ಅತೀ ಎತ್ತರದ ಪಂಚಲೋಹ ಶ್ರೀರಾಮನ ಪ್ರತಿಮೆ ನಿರ್ಮಾಣ- ಅಮಿತ್ ಶಾ ಶಂಕುಸ್ಥಾಪನೆ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ಬಳಿ ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹ ಶ್ರೀರಾಮ ವಿಗ್ರಹ (Shreeram Idol) ಸ್ಥಾಪನೆಗೆ ಇಂದು (ಭಾನುವಾರ) ಶಂಕುಸ್ಥಾಪನೆ ನೆರವೇರಲಿದೆ. ಮಂತ್ರಾಲಯದ ಹೊರವಲಯದಲ್ಲಿ ಪ್ರತಿಷ್ಠಾಪನೆಯಾಗಲಿರುವ 108 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್‌ಗೆ (Theme Park) ಇಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವರ್ಚೂವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಭೂಮಿ ಪೂಜೆ ನಡೆಯಲಿದೆ. ಹೈದರಾಬಾದ್ (Hyderabad) ಮೂಲದ ಜೈ ಶ್ರೀರಾಮ್ ಫೌಂಡೇಶನ್ 300 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಮಾಡಲಿದೆ. ಈ ಮೂಲಕ ಮಂತ್ರಾಲಯ – ಬೆಂಗಳೂರು ಮಾರ್ಗದಲ್ಲಿ ದೇವಾಲಯ ಹಾಗೂ ಪ್ರವಾಸಿ ತಾಣ ತಲೆ ಎತ್ತಲಿದೆ. ಇದನ್ನೂ ಓದಿ: ಭಾರೀ ಮಳೆ – ತುಂಬಿ ಹರಿಯುತ್ತಿದೆ ಮೂಕನಮನೆ ಜಲಪಾತ; ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

    ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಜಾಗದಲ್ಲಿ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದ್ದು, ಪ್ರತಿಮೆ ಬಳಿ ಶ್ರೀರಾಮ ದೇವಾಲಯ ಹಾಗೂ ಥೀಮ್ ಪಾರ್ಕ್‌ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಪ್ರತಿರೂಪದ ದೇವಾಲಯಗಳ ನಿರ್ಮಾಣ ನಡೆಯಲಿದೆ. ಗುಜರಾತ್‌ನಲ್ಲಿನ (Gujarat) ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಹಾಂಜಿ ಸುತಾರ್‌ಗೆ ಶ್ರೀರಾಮ ಪ್ರತಿಮೆ ನಿರ್ಮಾಣ ಜವಾಬ್ದಾರಿ ನೀಡಲಾಗಿದೆ. ದೆಹಲಿಯಲ್ಲಿ (Dehi) ಪ್ರತಿಮೆ ತಯಾರಿಕೆ ಕಾರ್ಯ ಆರಂಭವಾಗಿದ್ದು, ಮುಂದಿನ ವರ್ಷ ಅಂತ್ಯಕ್ಕೆ ಪ್ರತಿಮೆ ಪ್ರತಿಷ್ಠಾಪನೆ ಸಾಧ್ಯತೆಯಿದೆ. ಇದನ್ನೂ ಓದಿ: ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತೀ ಎತ್ತರದ ರಾಮನ ಪ್ರತಿಮೆ

    ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತೀ ಎತ್ತರದ ರಾಮನ ಪ್ರತಿಮೆ

    ಲಕ್ನೋ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಜಗತ್ತಿನ ಅತೀ ಎತ್ತರದ 251 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಿಸಲು ಸರ್ಕಾರ ಮುಂದಾಗಿದೆ.

    ಪ್ರತಿಮೆಯನ್ನು 100 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂಬಂಧ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿಗೆ ಅಗತ್ಯವಾದ ಯೋಜನೆಯನ್ನು ಸರ್ಕಾರ ರೂಪಿಸಲಿದೆ ಎಂದಿದ್ದಾರೆ.

    ಲಕ್ನೋದಲ್ಲಿ ಸೋಮವಾರ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಗುಜರಾತ್‍ನಲ್ಲಿನ ಸರ್ದಾರ್ ವಲ್ಲಭಾಬಾಯಿ ಪಟೇಲ್ ಪುತ್ಥಳಿಯು(ಏಕತಾ ಪ್ರತಿಮೆ) 183 ಮೀ ಎತ್ತರವಾಗಿದ್ದು, ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಹಾಗೆಯೇ ಉತ್ತರ ಪ್ರದೇಶದಲ್ಲಿ ಶ್ರೀರಾಮನ ಅತೀ ಎತ್ತರದ ಪ್ರತಿಮೆ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.

    ಪ್ರತಿಮೆ ನಿರ್ಮಾಣಕ್ಕೆ ತಾಂತ್ರಿಕ ಸಹಾಯವನ್ನು ಗುಜರಾತ್ ಸರ್ಕಾರದಿಂದ ಪಡೆಯಲಾಗುತ್ತದೆ. ಪ್ರತಿಮೆ ವೀಕ್ಷಿಸಿಲು ಬರುವ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಪಾರ್ಕಿಂಗ್, ವಾಚನಾಲಯ, ಆಹಾರ ವ್ಯವಸ್ಥೆ, ಮ್ಯೂಸಿಯಂ ಸೇರಿದಂತೆ ಇನ್ನಿತರ ಎಲ್ಲ ಅಗತ್ಯ ಸೌಕರ್ಯವನ್ನು ಪೂರೈಸಲು ಸರ್ಕಾರ ಯೋಜನೆ ರೂಪಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಕಾನ್ಪುರ ಐಐಟಿ ಹಾಗೂ ನಾಗ್ಪುರದ ರಾಷ್ಟ್ರೀಯ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಿಂದ ಈ ಬಗ್ಗ ಕಾರ್ಯಸಾಧ್ಯತಾ ವರದಿ ಹಾಗೂ ಜಮೀನು ಸರ್ವೇ ಇತ್ಯಾದಿಗಳನ್ನು ನಡೆಸಲಿದೆ. ಹಾಗೆಯೇ ಈ ಯೋಜನೆಗಾಗಿಯೇ ಸ್ಟೇಟ್ ಮ್ಯಾನ್ಯುಫ್ಯಾಕ್ಟರಿಂಗ್ ಕಾರ್ಪೊರೇಷನ್ ಎಂಬ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗುತ್ತದೆ. ಪ್ರತಿಮೆ ನಿರ್ಮಾಣ ಕಾರ್ಯ ಹಾಗೂ ಈ ಸಂಬಂಧ ಎಲ್ಲಾ ವಿಚಾರವನ್ನು ಈ ವಿಭಾಗವೇ ನೋಡಿಕೊಳ್ಳಲಿದೆ.

    ನ್ಯೂಯಾರ್ಕ್ ಲಿಬರ್ಟಿ ಪ್ರತಿಮೆ 93 ಮೀ ಎತ್ತರವಿದೆ, ಮುಂಬೈನ ಶಿವಾಜಿ ಮಹಾರಾಜ್ ಪ್ರತಿಮೆ 212 ಮೀ, ಗುಜರಾತ್‍ನ ಸರ್ದಾರ್ ವಲ್ಲಭಾಬಾಯಿ ಪಟೇಲ್ ಪ್ರತಿಮೆ 183 ಮೀ, ಮುಂಬೈನ ಡಾ. ಅಂಬೇಡ್ಕರ್ ಪ್ರತಿಮೆ 137.2 ಮೀ, ಚೀನಾದ ಗೌತಮ ಬುದ್ಧ ಪ್ರತಿಮೆ 208 ಮೀ ಎತ್ತರವಿದೆ. ಆದರೆ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣವಾದರೆ ಅದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

  • ಹೋರಾಟಗಾರರಂತೆ ರಾಮನ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸೋದು ಸರಿಯಲ್ಲ: ಅಯೋಧ್ಯೆ ದೇವಾಲಯದ ಹಿರಿಯ ಅರ್ಚಕ

    ಹೋರಾಟಗಾರರಂತೆ ರಾಮನ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸೋದು ಸರಿಯಲ್ಲ: ಅಯೋಧ್ಯೆ ದೇವಾಲಯದ ಹಿರಿಯ ಅರ್ಚಕ

    ಲಕ್ನೋ: ಅಯೋಧ್ಯೆಯಲ್ಲಿ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಯೋಗಿ ಸರ್ಕಾರದ ಕನಸಿನ ಯೋಜನೆಗೆ ಈಗ ವಿರೋಧ ವ್ಯಕ್ತವಾಗಿದೆ. ವಿವಾದ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ರಾಮನ ದೇವಾಲಯದ ಹಿರಿಯ ಅರ್ಚಕರು ಈ ಯೋಜನೆಯನ್ನು ವಿರೋಧಿಸಿದ್ದಾರೆ.

    ಕಳೆದ 25 ವರ್ಷಗಳಿಂದ ರಾಮನ ಜನ್ಮಭೂಮಿ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಮಹಾಂತ್ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿ, ರಾಮನ ಪ್ರತಿಮೆಯನ್ನು ದೇವಾಲಯದಲ್ಲಿ ನಿರ್ಮಿಸಿದರೆ ವಿರೋಧವಿಲ್ಲ, ಆದರೆ ಹೊರಾಂಗಣದಲ್ಲಿ ಪ್ರತಿಮೆ ನಿರ್ಮಿಸಿದರೆ ಅದನ್ನು ನೋಡಿಕೊಳ್ಳುವವರು ಯಾರು? ಪ್ರತಿನಿತ್ಯ ರಾಮನಿಗೆ ಪೂಜೆ ಸಲ್ಲಿಸುವವರು ಯಾರು ಇದು ಸರಿಯಲ್ಲ ಎಂದು ಸತ್ಯೇಂದ್ರ ದಾಸ್ ಪ್ರಶ್ನಿಸಿದ್ದಾರೆ.

    ಈ ಯೋಜನೆ ರಾಜಕೀಯ ಆಟವಲ್ಲ. ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸಿದ್ದಾರೆ, ಅವೆಲ್ಲವು ಈಗ ಯಾವ ಸ್ಥಿತಿಯಲ್ಲಿವೆ ಎಂದು ಎಲ್ಲರಿಗೂ ಗೊತ್ತು. ರಾಮನಿಗೂ ಅದೇ ಸ್ಥಿತಿ ಬರುವುದು ಬೇಡ ಎಂದು ಸತ್ಯೇಂದ್ರ ದಾಸ್ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ವಿರೋಧದ ಮಧ್ಯೆಯು ಸರ್ಕಾರ ಈ ಯೋಜನೆ ಮಾಡಬೇಕೆಂದು ಮುಂದಾದರೆ ಕೆಲವು ಸಲಹೆಯನ್ನು ಪಾಲಿಸಬೇಕು. ರಾಮನ ಮೂರ್ತಿಯನ್ನು ಅತೀ ಎತ್ತರವಾಗಿ ನಿರ್ಮಿಸಬೇಡಿ, ಪ್ರತಿಮೆಯನ್ನು ಸರಿಯಾಗಿ ನಿರ್ವಹಿಸುವ ರೀತಿ ನಿರ್ಮಿಸಿ ಎಂದು ಸಲಹೆ ನೀಡಿದರು.

    ರಾಮ ಮಂದಿರವನ್ನು ಪುನರ್ನಿರ್ಮಾಣ ಮಾಡುವ ಕುರಿತು ಮಾತನಾಡಿದ ಅರ್ಚಕರು, ರಾಮನಿಗೆ ದೇವಾಲಯ ಬೇಕೆಂದರೆ ಅವನೇ ಅದರ ಕುರಿತು ನೋಡಿಕೊಳ್ಳುತ್ತಾನೆ. ಇಲ್ಲವಾದರೆ ತಾತ್ಕಾಲಿಕ ದೇವಾಲಯದಲ್ಲಿಯೇ ಪೂಜೆ ಪಡೆಯುತ್ತಾನೆ. ಎಲ್ಲವೂ ರಾಮನ ಇಚ್ಚೆ. ಬಾಬ್ರಿ ಮಸೀದಿ ಪ್ರಕರಣದಿಂದ ಹೆಚ್ಚು ನೋವಾಗಿರುವುದು ಮುಸ್ಲಿಂ ಧರ್ಮದವರಿಗಲ್ಲ ಹಿಂದೂಗಳಿಗೆ. ಈ ಎಲ್ಲಾ ಯೋಜನೆ ಒಂದು ರಾಜಕೀಯ ನಾಟಕ. ರಾಮನ ನೆಲೆ ಇರುವುದು ದೇವಾಲಯದ ಒಳಗಡೆ, ಹೊರಗೆ ಅಲ್ಲ ಎಂದು ಹೇಳಿ ಪ್ರತಿಮೆ ನಿರ್ಮಾಣ ಯೋಜನೆಯನ್ನು ವಿರೋಧಿಸಿದ್ದಾರೆ.

    ಸಿಎಂ ಯೋಗಿ ಆದಿತ್ಯನಾಥ್ ಅವರು ನವೆಂಬರ್ 6 ರಂದು ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದಂದು ಅಥವಾ ಮರುದಿನ ದೀಪಾವಳಿಯ ಶುಭದಿನದಂದು ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv