ನವದೆಹಲಿ: ಭಗವಾನ್ ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ, ಶ್ರೀರಾಮ ಕೇವಲ ಧಾರ್ಮಿಕ ಸಂಕೇತವಲ್ಲ, ಧರ್ಮ ಮತ್ತು ನ್ಯಾಯದ ಮಾರ್ಗದರ್ಶಕ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ.
ಇದೇ ವೇಳೆ `ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿದ ಅವರು, ಶ್ರೀರಾಮನ ಹಾಗೇ ಭಾರತವು ಧರ್ಮವನ್ನು ರಕ್ಷಿಸಿತು ಮತ್ತು ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು. ಈ ಕಾರ್ಯಾಚರಣೆ ಭಾರತದ ಶಕ್ತಿ, ನೈತಿಕತೆ ಮತ್ತು ಸಂಕಲ್ಪವನ್ನು ಸೂಚಿಸುತ್ತದೆ. ದೇಶವಾಸಿಗಳು ಸದಾಚಾರ, ಸತ್ಯ ಮತ್ತು ನ್ಯಾಯದ ಮಾರ್ಗವನ್ನು ಅನುಸರಿಸಬೇಕೆಂದು ಅವರು ಕರೆ ನೀಡಿದ್ದಾರೆ.
ನವರಾತ್ರಿಯ ಮೊದಲ ದಿನದಂದು ಕಡಿಮೆ ಜಿಎಸ್‌ಟಿ ದರಗಳನ್ನು ಜಾರಿಗೆ ತರಲಾಗಿದ್ದು, ಜಿಎಸ್‌ಟಿ ಉಳಿತಾಯ ಉತ್ಸವದಲ್ಲಿ ದೇಶವಾಸಿಗಳ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ. ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ನಮ್ಮ ಭಾರತವು ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ. ಅಭಿವೃದ್ಧಿಹೊಂದಿದ ಮತ್ತು ಸ್ವಾವಲಂಬಿ ಭಾರತದತ್ತ ಈ ಪ್ರಯಾಣದಲ್ಲಿ ನಾಗರಿಕರಾಗಿ ನಮ್ಮ ಮುಖ್ಯ ಜವಾಬ್ದಾರಿ ದೇಶದಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಏಷ್ಯಾ ಕಪ್ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್ ನಖ್ವಿಗೆ ಬಿಸಿಸಿಐ ವಾರ್ನಿಂಗ್
ಚೆನ್ನೈ: ತಮಿಳು ಗೀತರಚನೆಕಾರ ಮತ್ತು ಕವಿ ವೈರಮುತ್ತು (Tamil Nadu poet Vairamuthu) ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಶ್ರೀರಾಮನ (Lord Rama) ಕುರಿತು ಮಾಡಿದ ಭಾಷಣವು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆ ಹಿಂದೂಗಳ ಭಾವನೆಗೆ ನೋವುಂಟು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಸೀತೆಯಿಂದ ಬೇರ್ಪಟ್ಟ ನಂತರ, ತಾನು ಏನು ಮಾಡುತ್ತಿದ್ದೇನೆಂದು ತಿಳಿಯದ ಮಟ್ಟಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 84 ರ ಅಡಿಯಲ್ಲಿ, ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಯು ಮಾಡಿದ ಕೃತ್ಯವು ಅಪರಾಧವಾಗುವುದಿಲ್ಲ ವೈರಮುತ್ತು ತಿಳಿಸಿದ್ದಾರೆ.
ಪವಿತ್ರ ಹಿಂದೂ ದೇವತೆಗಳನ್ನು ಅಪಮಾನಿಸುವ ಕೆಲಸವನ್ನು ವೈರಮುತ್ತು ಅವರು ಮಾಡುತ್ತಿದ್ದಾರೆ. ಈಗ ರಾಮನನ್ನು ಮಾನಸಿಕವಾಗಿ ಅಸ್ಥಿರ ಎಂದು ನಾಲಿಗೆ ಹರಿಬಿಟ್ಟಿದ್ದಾರೆಂದು ಬಿಜೆಪಿ ನಾಯಕ ಸಿ.ಆರ್.ಕೇಶವನ್ ಟೀಕಾಪ್ರಹಾರ ನಡೆಸಿದ್ದಾರೆ.
– ಶ್ರೀರಾಮನ ಶ್ಲೋಕ ಪಠಿಸಿ ಆರತಿ ಬೆಳಗಿದ ಮುಸ್ಲಿಂ ಮಹಿಳೆಯರು
ಲಕ್ನೋ: ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ. ಹಾಗಾಗಿಯೇ ಪ್ರತಿ ವರ್ಷ ರಾಮನವಮಿ ಆಚರಣೆ ಮಾಡಲಾಗುತ್ತದೆ. ಇಂತಹ ಹಬ್ಬಗಳ ಆಚರಣೆಗಳಿಗೆ ಯಾವುದೇ ಧರ್ಮ, ಜಾತಿಯ ಭೇದವಿಲ್ಲ. ಅದರಲ್ಲೂ ಭಾರತದಲ್ಲಿ ವಿವಿಧ ಧರ್ಮದ ಜನ ಕೂಡ ಹಬ್ಬ ಆಚರಣೆ ಮಾಡುವ ಮೂಲಕ ಏಕತೆ, ಪ್ರೀತಿ ಸಂದೇಶ ಸಾರುತ್ತಿದ್ದಾರೆ. ಇದಕ್ಕೆ ವಾರಣಾಸಿಯಲ್ಲಿ (Varanasi) ನಡೆದ ಪ್ರಸಂಗ ಸಾಕ್ಷಿಯಾಗಿದೆ.
ಶ್ರೀರಾಮನವಮಿಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು (Muslim Women) ಶ್ರೀರಾಮನ ಆರತಿ ನೆರವೇರಿಸುವ ಮೂಲಕ ಕೋಮು ಸೌಹಾರ್ಧತೆ, ಏಕತೆ, ಪ್ರೀತಿಯ ಸಂದೇಶ ಸಾರಿದ್ದಾರೆ. ಉರ್ದುವಿನಲ್ಲಿ ಬರೆದ ಶ್ಲೋಕಗಳನ್ನು ಪಠಣ ಮಾಡುತ್ತಾ ಬುರ್ಖಾ ಧರಿಸಿಯೇ ಶ್ರೀರಾಮನ ಆರತಿ ನೆರವೇರಿಸಿದ್ದಾರೆ. ಜೊತೆಗೆ ಜೈಶ್ರೀರಾಮ್ ಘೋಷಣೆಗಳನ್ನೂ ಕೂಗಿದ್ದಾರೆ. ಇದನ್ನೂ ಓದಿ: ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!
ಮುಸ್ಲಿಂ ಮಹಿಳಾ ಫೌಂಡೇಶನ್ ಮತ್ತು ವಿಶಾಲ ಭಾರತ ಸಂಸ್ಥಾನದ ಜಂಟಿ ಆಶ್ರಯದಲ್ಲಿ, ಲಮ್ಹಿಯ ಸುಭಾಷ್ ಭವನದಲ್ಲಿ ಶ್ರೀರಾಮ ಮಹಾ ಆರತಿ ಆಯೋಜಿಸಲಾಗಿತ್ತು. ಈ ವೇಳೆ ಮುಸ್ಲಿಂ ಮಹಿಳೆಯರು ಸಹ ರಂಗೋಲಿಯ ಮೇಲೆ ಜೈಶ್ರೀರಾಮ್ ಎಂದು ಬರೆದು ರಾಮಶ್ಲೋಕವನ್ನು ಪಠಿಸಿದ್ದಾರೆ. ಹಿಂದೂ ಮಹಿಳೆಯರೊಂದಿಗೆ ಸೇರಿ ರಾಮನವಮಿ ಆಚರಿಸುವ ಮೂಲಕ ಹಿಂದೂ-ಮುಸ್ಲಿಂ ಭಾಯಿ ಭಾಯಿ ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ
ಈ ವೇಳೆ ವಿಶಾಲ ಭಾರತ ಸಂಸ್ಥಾನದ ಡಾ.ನಜ್ಮಾ ಪರ್ವೀನ್ ಮಾತನಾಡಿ, ರಾಮನವಮಿ ನಮ್ಮ ದೇಶದ ಸಂಸ್ಕೃತಿಯ ಭಾಗವಾಗಿದೆ. ಪ್ರೀತಿಯ ಸಂದೇಶ ನೀಡಲು, ಸಂಸ್ಕೃತಿ ಅನುಸರಿಸಲು ಏಕೆ ಹಿಂಜರಿಕೆ ಬೇಕು. ಈ ದೇಶ ನಮ್ಮದು, ನಮ್ಮ ಪೂರ್ವಜರು ಇಲ್ಲಿಂದಲೇ ಬಂದವರು, ರಾಮ್ ಜಿ ಕೂಡ ನಮ್ಮವರೇ. ಅವರ ಆರತಿ ಮಾಡುವುದರಲ್ಲಿ ನಮಗೆ ಹೆಮ್ಮೆ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್
ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ.
ನೀವು ಭಾರತದ ಯಾವುದೇ ಮೂಲೆಗೆ ಹೋದರೂ ರಾಮ ಎನ್ನುವ ಹೆಸರನ್ನು ಕೇಳಬಹುದು. ಯಾಕೆಂದರೆ ಆ ಹೆಸಡರಿನ ದೇವನಿಗೆ ಅಷ್ಟೊಂದು ಮಹತ್ವವಿದೆ ಮತ್ತು ಭಕ್ತರಿದ್ದಾರೆ. ಭಗವಾನ್ ರಾಮನು ವಿಷ್ಣುವಿನ 7ನೇ ಅವತಾರ ಎಂಬುದು ಪುರಾಣಗಳ ಉಲ್ಲೇಖ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಂದ ಪೂಜಿಸಲ್ಪಡುವ ದೇವ. ರಾಮನು ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿವಂತ ರಾಕ್ಷಸನಾದ ರಾವಣನನ್ನು ಸೋಲಿಸಿದನು ಮತ್ತು ಅವನ ದುಷ್ಟತನದಿಂದ ನಮ್ಮನ್ನು ರಕ್ಷಿಸಿದನು. ಆದ್ದರಿಂದಲೇ ರಾಮನು ಭಾರತದ ದಿವ್ಯ ಭೂಮಿಯ ಪ್ರತಿಯೊಬ್ಬರ ಹೃದಯದಲ್ಲೂ, ಪ್ರತಿಯೊಂದು ಮೂಲೆಯಲ್ಲೂ ನೆಲೆಸಿದ್ದಾನೆ. ಆದ್ದರಿಂದಲೇ ಭಾರತದ ಪ್ರತಿಯೊಂದು ಸ್ಥಳದಲ್ಲೂ ಒಂದಿಲ್ಲೊಂದು ರೂಪದಲ್ಲಿ ಶ್ರೀರಾಮನ ದೇವಾಲಯಗಳನ್ನು ಕಾಣುತ್ತೇವೆ. ಆಧ್ಯಾತ್ಮಿಕ ಅನುಭವ ಪಡೆಯಲು ಭಯಸುವವರು ಶ್ರೀರಾಮನವಮಿಯಂದು ರಾಮನ ದೇವಾಲಯಗಳಿಗೆ ಭೇಟಿ ನೀಡಿ ಸಂತೃಪ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಮನೆಯಲ್ಲೇ ಶ್ರೀರಾಮನ ಭಜನೆ, ಭಕ್ತಿ ಗೀತೆಗಳನ್ನು ಹಾಡಿ ತಮ್ಮ ಭಕ್ತಿಯನ್ನ ಸೂಚಿಸುತ್ತಾರೆ. ಹಾಗಾದ್ರೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಆಧ್ಯಾತ್ಮಿಕ ಶಕ್ತಿಗೆ ಹೆಸರು ವಾಸಿಯಾಗಿರುವ ದೇವಾಲಯಗಳ ಬಗ್ಗೆ ತಿಳಿಯೋಣ..
ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ
ಅಯೋಧ್ಯೆಯಲ್ಲಿರುವ ರಾಮಮಂದಿರವು ಯಾವಾಗಲೂ ಹಿಂದೂಗಳಿಗೆ ಅತ್ಯಂತ ಶ್ರೇಷ್ಠವಾದ ಸ್ಥಳವಾಗಿದೆ. ಏಕೆಂದರೆ ಇದು ರಾಮನ ಜನ್ಮಸ್ಥಳವಾದ ʻರಾಮ ಜನ್ಮ ಭೂಮಿ’ ಎಂದು ಹೇಳಲಾಗುತ್ತದೆ. ಫೈಜಾಬಾದ್ ಜಿಲ್ಲೆಯ ಸರಯು ನದಿಯ ದಡದಲ್ಲಿರುವ ಈ ರಾಮಮಂದಿರವು ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ತಮ್ಮ ಆದರ್ಶ ರಾಜ ಶ್ರೀರಾಮ ಜನಿಸಿದ ಸ್ಥಳವನ್ನು ನೋಡಲು ಈ ದೈವಿಕ ಭೂಮಿಗೆ ಬರುತ್ತಾರೆ. ಅದರಲ್ಲೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಇಲ್ಲಿಗೆ ಭೇಟಿ ನೀಡುವ ಶ್ರೀರಾಮಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ
ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ
ತ್ರಿಪ್ರಯಾರ್ ಶ್ರೀರಾಮ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ಈ ರಾಮ ಮಂದಿರವು ಇಲ್ಲಿ ಸ್ಥಾಪಿಸಲಾದ ವಿಗ್ರಹದ ಹಿಂದೆ ಬಹಳ ಆಕರ್ಷಕವಾದ ಕಥೆಯನ್ನು ಹೊಂದಿದೆ. ತ್ರಿಪ್ರಯಾರ್‌ನಲ್ಲಿ ಇರಿಸಲಾಗಿರುವ ವಿಗ್ರಹವನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ಶ್ರೀಕೃಷ್ಣನು ಪೂಜಿಸಲು ಬಳಸುತ್ತಿದ್ದನೆಂದು ನಂಬಲಾಗಿದೆ. ಈ ವಿಗ್ರಹವು ಒಮ್ಮೆ ಸಮುದ್ರದ ಪಾಲಾಗಿತ್ತು. ಆದರೆ, ಕೇರಳದ ಮೀನುಗಾಗರರಿಗೆ ಸಿಕ್ಕಿ ಮತ್ತೆ ಇದನ್ನು ಮರು ಸ್ಥಾಪನೆ ಮಾಡಲಾಗಿದೆ. ಈ ಆಕರ್ಷಕವಾದ ದೇವಾಲಯದಲ್ಲಿ ನೀವು ಆಸಕ್ತಿದಾಯಕ ಶಿಲ್ಪಗಳು ಮತ್ತು ಮರದ ಕೆತ್ತನೆಗಳನ್ನು ಕಾಣಬಹುದು, ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಪ್ರಯಾರ್‌ಗೆ ಭೇಟಿ ನೀಡುವುದರಿಂದ ನಿಮ್ಮ ಸುತ್ತಮುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರಾಗುತ್ತದೆ ಎನ್ನುವ ನಂಬಿಕೆ ಈಗಲೂ ಜನರಿಗೆ ಇದೆ.
ನಾಸಿಕ್‌ನ ಕಲಾರಾಮ ಮಂದಿರ
ನಾಸಿಕ್‌ನ ಕಲಾರಾಮ ಮಂದಿರ
ನಾಸಿಕ್‌ನ ಕಲಾರಾಮ ಮಂದಿರವು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿ ನೆಲೆಗೊಂಡಿರುವ ಭಾರತದ ಒಂದು ಅದ್ಭುತವಾದ ರಾಮಮಂದಿರವಾಗಿದೆ. ಕಲಾರಾಮ ಎಂದರೆ ‘ಕಪ್ಪು ರಾಮ’ ಎಂದರ್ಥ ಮತ್ತು ರಾಮನ 2 ಅಡಿ ಎತ್ತರದ ಕಪ್ಪು ಪ್ರತಿಮೆಯಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಸೀತಾದೇವಿ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದಾಗ, ಹತ್ತನೇ ವರ್ಷದ ನಂತರ, ಅವನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಪಂಚವಟಿಯಲ್ಲಿ ಗೋದಾವರಿ ನದಿಯ ಪಕ್ಕದಲ್ಲಿ ವಾಸಿಸಲು ಬಂದಿದ್ದನು ಎಂದು ನಂಬಲಾಗಿದೆ. ಒಮ್ಮೆ ಕನಸಿನಲ್ಲಿ ಸರ್ದಾರ್ ರಂಗರೂ ಓಧೇಕರ್ ಗೋದಾವರಿ ನದಿಯಲ್ಲಿ ಕಪ್ಪು ಕಲ್ಲಿನ ದೃಶ್ಯವನ್ನು ನೋಡುತ್ತಾರೆ. ಮರುದಿನ ನದಿಯಿಂದ ಆ ಕಪ್ಪು ಕಲ್ಲನ್ನು ತೆಗೆದು ಕಲಾರಾಮ ರಾಮ ಮಂದಿರಲ್ಲಿ ನಿರ್ಮಿಸಿದರು.
ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ
ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ
ಸೀತಾ ರಾಮಚಂದ್ರಸ್ವಾಮಿ ದೇವಾಲಯವು ಭಾರತದ ಅತ್ಯಂತ ಪ್ರಸಿದ್ಧವಾದ ರಾಮಮಂದಿರಗಳಲ್ಲಿ ಒಂದಾಗಿದೆ. ಲಂಕೆಯಿಂದ ಸೀತೆಯನ್ನು ಮರಳಿ ಕರೆತರಲು ರಾಮನು ಗೋದಾವರಿ ನದಿಯನ್ನು ದಾಟಿದ ಮಹತ್ವಪೂರ್ಣ ಇತಿಹಾಸವನ್ನು ಹೊಂದಿದೆ. ದೇವಾಲಯದ ಒಳಗೆ ಪ್ರತಿಷ್ಠಾಪಿಸಲಾದ ವಿಗ್ರಹವು ತ್ರಿಭಂಗನ ಭಂಗಿಯಲ್ಲಿದೆ. ಭಗವಾನ್ ರಾಮನು ತನ್ನ ಕೈಯಲ್ಲಿ ಧನಸ್ಸು ಮತ್ತು ಬಾಣವನ್ನು ಹಿಡಿದಿದ್ದಾನೆ ಮತ್ತು ಸೀತಾ ದೇವಿಯು ಕೈಯಲ್ಲಿ ಕಮಲವನ್ನು ಹಿಡಿದು ಅವನ ಪಕ್ಕದಲ್ಲಿ ನಿಂತಿದ್ದಾಳೆ.
ರಾಮರಾಜ ದೇವಾಲಯ, ಮಧ್ಯಪ್ರದೇಶ
ರಾಮರಾಜ ದೇವಾಲಯ, ಮಧ್ಯಪ್ರದೇಶ
ರಾಮರಾಜ ದೇವಾಲಯವು ಭಾರತದಲ್ಲಿ ರಾಮನನ್ನು ದೇವರಂತೆ ಅಲ್ಲ, ರಾಜನಾಗಿ ಪೂಜಿಸುವ ಏಕೈಕ ದೇವಾಲಯವಾಗಿದೆ. ಈ ರಾಮಮಂದಿರವನ್ನು ಭವ್ಯವಾದ ಕೋಟೆಯಾಗಿ ನಿರ್ಮಿಸಲಾಗಿದ್ದು, ಜೊತೆಗೆ ಪೊಲೀಸರು ದೇವಾಲಯದ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ರಾಜ ರಾಮನಿಗೆ ಆಯುಧ ನಮಸ್ಕಾರವನ್ನು ನೀಡಲಾಗುತ್ತದೆ. ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ.
ಧರ್ಮಸ್ಥಳ ರಾಮ ಮಂದಿರ
ಧರ್ಮಸ್ಥಳ ರಾಮ ಮಂದಿರ
ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ಶ್ರೀಮಂತ ವಿನ್ಯಾಸ ಕಲಾತ್ಮಕ ಸೌಂದರ್ಯದಿಂದ ಸಮೃದ್ಧವಾಗಿರುವ ಈ ದೇವಾಲಯದಲ್ಲಿ ತಮಿಳುನಾಡಿನ ‘ವಾಸ್ತು’, ರಾಜಸ್ಥಾನದ ಶ್ರೀಮಂತ ಗ್ರಾನೈಟ್ ಕಲ್ಲುಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ರಾಜಸ್ಥಾನದ ಶಿಲ್ಪಿಗಳು ಕೆತ್ತಿದ ಸುಂದರ ವಿನ್ಯಾಸಗಳಿವೆ.
ಬೆಂಗಳೂರು: ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು. ನಾನು ಮುಡಾದಿಂದ (MUDA) ದಾಖಲೆ ತೆಗೆದುಕೊಂಡಿದ್ದೇನೆ ಎಂದು ಶ್ರೀರಾಮನ ಮೇಲೆ ಬಂದು ಪ್ರಮಾಣ ಮಾಡಲಿ ಎಂದು ಮೈಸೂರಿನ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಬೈರತ್ತಿ ಸುರೇಶ್ (Byrathi Suresh) ಸವಾಲ್ ಹಾಕಿದ್ದಾರೆ.
ಕರ್ನಾಟಕದ (Karnataka) ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣೆ, ಜಾತಿ ಜನಗಣತಿ, ಮೀಸಲಾತಿ ವಿಚಾರ ಸೇರಿ ಹಲವು ವಿಷಯಗಳ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಕಾವೇರಿ ನಿವಾಸದಲ್ಲಿ ಸಭೆ ನಡೆಸಲಾಗುತ್ತಿದೆ. ಸಭೆಗೆ ಸಚಿವರಾದ ಡಿ.ಕೆ.ಶಿವಕುಮಾರ್ (DK Shivakumar), ಬೈರತಿ ಸುರೇಶ್, ಪ್ರೀಯಾಂಕ್ ಖರ್ಗೆ, ಜಮೀರ್ ಅಹಮದ್, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಎಂ.ಸಿ ಸುಧಾಕರ್, ದಿನೇಶ್ ಗುಂಡೂರಾವ್, ಎಸ್.ಎಸ್ ಮಲ್ಲಿಕಾರ್ಜುನ್, ಚಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ ಸೇರಿ ಹಲವರು ಪಾಲ್ಗೊಂಡಿದ್ದಾರೆ.
ಮುಡಾಕ್ಕೆ ಸಂಬಂಧಪಟ್ಟ ಒಂದೇ ಒಂದು ದಾಖಲೆಯನ್ನೂ ನಾನು ತಗೆದುಕೊಂಡು ಹೋಗಿಲ್ಲ. ನಾನು ಈ ವಿಚಾರವಾಗಿ ಮೈಸೂರು ಶಾಸಕ ಶ್ರೀವತ್ಸ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಣೆ ಮಾಡಲು ಸವಾಲು ಹಾಕುತ್ತೇನೆ. ಚಾಮುಂಡಿ ಬೆಟ್ಟ, ಧರ್ಮಸ್ಥಳಕ್ಕೆ ಬಂದು ಅಣೆ ಮಾಡಲಿ ನಾನೂ ಮಾಡುತ್ತೇನೆ. ಶಾಸಕ ಶ್ರೀವತ್ಸ, ಶೋಭಾ ಕರಂದ್ಲಾಜೆ ಅವರು ಮೊದಲು ಸುಳ್ಳು ಹೇಳುವುನ್ನು ಬಿಡಲಿ ಎಂದು ಕಿಡಿ ಕಾರಿದರು.
ಮೈಸೂರಿನ ಬಿಜೆಪಿ ಶಾಸಕರು ಬಾಯಿಬಿಟ್ಟರೆ ಸುಳ್ಳು ಹೇಳ್ತಾರೆ. ಶ್ರೀವತ್ಸ ಅವರು ಪೂಜೆ ಮುಗಿಸಿಕೊಂಡು, ಹಣೆಗೆ ನಾಮ ಹಾಕಿಕೊಂಡು ಬಂದು ಸುಳ್ಳು ಹೇಳ್ತಾರೆ. ನಾನು ಶ್ರೀರಾಮನ ಭಕ್ತ, ಶ್ರೀರಾಮ ನಮ್ಮ ಮನೆ ದೇವರು, ಬಂದು ಅಣೆ ಮಾಡಲಿ ನಾನು ಮುಡಾ ದಾಖಲೆ ತಂದಿದ್ದೇನೆ ಅಂತ ಬಂದು ಆಣೆ ಮಾಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ವಾರಣಾಸಿಯಲ್ಲಿ 6,700 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ
ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಹಾಗಾಗಿ ಎಲ್ಲಾ ಸಚಿವರ ಜೊತೆ ಸಿಎಂ ಸಭೆ ಇದೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲಬೇಕು ಆ ಕಾರಣಕ್ಕೆ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಭೆ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಲೋರೇಟ್, ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ CRPF ಶಾಲೆ ಬಳಿ ಸ್ಫೋಟ – NIA ತೀವ್ರ ಶೋಧ
– ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರಿಂದ ಶಕ್ತಿ ಪ್ರದರ್ಶನ
ಬೀದರ್: ಇಲ್ಲಿನ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈ ಶ್ರೀರಾಮ್ (Jai SriRam) ಹಾಡು ಹಾಕಿದ್ದಕ್ಕೆ 2 ವಿದ್ಯಾರ್ಥಿ ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಹಿಂದೂ ವಿದ್ಯಾರ್ಥಿಗಳ (Hindu Students) ಮೇಲೆ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಂದ ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದ ಬಳಿ ಸೇರಿದ್ದ 300ಕ್ಕೂ ಅಧಿಕ ಹಿಂದೂ ಸಂಘಟನೆ ಕಾರ್ಯಕರ್ತರು ಅಂಬೇಡ್ಕರ್ ವೃತದಿಂದ ಡಿಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ (Protest) ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರ‍್ಯಾಲಿಯಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?
ಈ ವೇಳೆ ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದ ಬಳಿಯೇ ತಡೆದ ಪೊಲೀಸರು ಇಲ್ಲೇ ಮನವಿ ಸಲ್ಲಿಸುವಂತೆ ತಾಕೀತು ಮಾಡಿದರು. ಬಳಿಕ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು, ಡಿಸಿ ಕಚೇರಿ ಮುಖ್ಯದ್ವಾರದ ಬಳಿಯೇ ಪ್ರತಿಭಟನೆ ನಡೆಸಲು ಮುಂದಾದರು. ಹಿಂದೂ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ರದ್ದುಗೊಳಿಸದೇ ಇದ್ದರೆ ಜಿಲ್ಲೆಯಲ್ಲಿ ನಾವು ಶ್ರೀರಾಮನ ಅಭಿಯಾನ ಪ್ರಾರಂಭ ಮಾಡುತ್ತೇವೆ ಎಂದು ಪಟ್ಟು ಹಿಡಿದರು. ಬಳಿಕ ಡಿಸಿ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಕಾಲೇಜಿನಲ್ಲಿ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಮಾರಾಮಾರಿ- 17ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ FIR
ಏನಿದು ಪ್ರಕರಣ?
ಬೀದರ್ ನಗರದ ಕಾಲೇಜು ಒಂದರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಮಾರಾಮಾರಿ ನಡೆದು, ಹಿಂದೂ-ಮುಸ್ಲಿಂ ಸೇರಿದಂತೆ 17 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಮಂಡ್ಯ: ಇಲ್ಲಿನ ಕೆರಗೋಡು (Keragodu) ಹನುಮಧ್ವಜ (Hanuma Flag) ತೆರವು ಪ್ರಕರಣ ಅಯೋಧ್ಯೆಯ ಅಂಗಳದಲ್ಲಿ ಸದ್ದು ಮಾಡಿದೆ. ಹಿಂದೂ ಕಾರ್ಯಕರ್ತರು ಅಯೋಧ್ಯೆಯ ಬಾಲರಾಮನ ದರ್ಶನ ಪಡೆದು, ಮತ್ತೆ ಹನುಮಧ್ವಜ ಹಾರಿಸುತ್ತೇವೆ ಎಂದು ದೇವಾಲಯದ ಆವರಣದಲ್ಲಿ ಘೋಷಣೆ ಕೂಗಿದ್ದಾರೆ.
ಹನುಮಧ್ವಜ ವಿವಾದದ ಬಳಿಕ ಕೆರಗೋಡು ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಅಯೋಧ್ಯೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಶ್ರೀರಾಮನ ದರ್ಶನ ಪಡೆದ ಗ್ರಾಮಸ್ಥರು ಶ್ರೀರಾಮನ ಸನ್ನಿಧಿಯಲ್ಲಿ ನಿಂತು ಹನುಮಧ್ವಜ ಹಾರಿಸುವ ಘೋಷಣೆ ಕೂಗಿದ್ದಾರೆ. ಈ ಮೂಲಕ ಕೆರಗೋಡಿನಲ್ಲಿ ಮತ್ತೆ ಹನುಮಧ್ವಜ ಹಾರಿಸಲು ಗ್ರಾಮಸ್ಥರು ಪಣ ತೊಟ್ಟಿದ್ದಾರೆ. ಇದನ್ನೂ ಓದಿ: ರಾಮನಗರ ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ – ಐಜೂರು ಠಾಣೆಯ ಪಿಎಸ್ಐ ಅಮಾನತು
ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು 108 ಅಡಿ ಎತ್ತರದಲ್ಲಿ ಹನುಮಧ್ವಜ ಹಾರಿಸಿದ್ದಕ್ಕೆ ಆ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರು. ಹನುಮಧ್ವಜ ಇಳಿಸಿದ್ದಕ್ಕೆ ಗ್ರಾಮದಲ್ಲಿ ಪ್ರತಿಭಟನೆ ಸಹ ನಡೆದಿತ್ತು. ಹನುಮಧ್ವಜ ಹಾರಿಸಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದೇ ವಿಚಾರವಾಗಿ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಕಾಂಗ್ರೆಸ್ (Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಹಿಂದೂ ಸಂಘಟನೆಗಳು ಮಂಡ್ಯ (Mandya) ಬಂದ್ ಸಹ ಮಾಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಇದೀಗ ಮತ್ತೆ ಕೆರಗೋಡು ಗ್ರಾಮಸ್ಥರು ರಾಮನ ಸನ್ನಿಧಿಯಲ್ಲಿ ನಿಂತು ಕೆರಗೋಡಲ್ಲಿ ಹನುಮ ಧ್ವಜ ಹಾರಿಸುವ ಪಣ ತೊಟ್ಟಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಖ್ಯಾತ ವಕೀಲ ಫಾಲಿ ನಾರಿಮನ್ ನಿಧನ
ಬೆಂಗಳೂರು: ಶ್ರೀರಾಮ ಬಿಜೆಪಿಯವರ (BJP) ಅಪ್ಪನ ಮನೆ ಆಸ್ತಿನಾ ಎಂದು ಹೇಳುವ ಮೂಲಕ ಕಮಲ ನಾಯಕರ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಶಿವನ ಮಗ ಕುಮಾರನೂ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನ ಹಿಂದೂ ವಿರೋಧಿಗಳು ಅಂತಾ ಬಿಂಬಿಸಲು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ?. ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ. ರಘುಪತಿ ರಾಘವ ರಾಜಾರಾಮ್ ಪತೀತ ಪಾವನ ಸೀತಾರಾಮ್ ಅಂತಾ ಗಾಂಧೀಜಿ ಹೇಳಿಲ್ವಾ ಎಂದು ಪ್ರಶ್ನಿಸಿದ ಡಿಕೆಶಿ, ರಾಮನನ್ನೂ ಪೂಜಿಸ್ತೀವಿ, ಸೀತೆಯನ್ನೂ ಪೂಜಿಸ್ತೀವಿ ಎಂದರು. ಇದನ್ನೂ ಓದಿ: Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ
ರಾಹುಲ್ ಗಾಂಧಿ ಯಾತ್ರೆಗೆ ತಡೆ ಮಾಡ್ತಾ ಇದ್ದಾರೆ. ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಾರ್ಯಕರ್ತರು ಬಹಳ ಆಸಕ್ತಿಯಿಂದ ಅಭಿಮಾನದಿಂದ ಬಂದಿದ್ದಾರೆ. ರಾಹುಲ್ ಗಾಂಧಿ ನೇರವಾಗಿ ಮುನ್ನಡೆಯಬೇಕು. ಇವತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೀತಾ ಇದೆ. ಒಗ್ಗಟಿನಿಂದ ಮಾರ್ಗದರ್ಶನ ಆಗ್ತಾ ಇದೆ. ಯಾತ್ರೆಗೆ ಏನು ಷ್ಯಡ್ಯಂತ್ರ ನಡೀತಾ ಇದೆ ಅದು ಖಂಡನೀಯ. ನಾವು ಯಾವುದಕ್ಕೂ ಹೆದರುವುದಿಲ್ಲ. ಅವರ ಜೈಲು, ಬೇಲು, ಕೇಸು ಯಾವುದಕ್ಕೂ ಹೆದರಲ್ಲ. ಈ ದೇಶದ ಅಭಿವೃದ್ಧಿಗೆ ಐಕ್ಯತೆಗೆ ನಾವು ಒಮ್ಮತ ಮೂಡಿಸುತ್ತಿದ್ದೇವೆ ಎಂದಿದ್ದಾರೆ.
36 ಅಡಿ ಎತ್ತರದ ಏಕಶಿಲಾ ಅಭಯರಾಮನ ಮೂರ್ತಿಯನ್ನು ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಶ್ರೀರಾಮನ ಮೂಲಾರ್ಚಕರಾದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಭವ್ಯ ರಾಮಮೂರ್ತಿ ಅನಾವರಣಗೊಂಡಿದೆ. ಮಂತ್ರಾಲಯದಲ್ಲಿ ರಾಯರಿಗೂ ಮೊದಲು ನಿತ್ಯ ಶ್ರೀರಾಮನಿಗೆ ಪೂಜೆ ನಡೆಯುತ್ತದೆ. ಈ ಹಿನ್ನೆಲೆ ಮಂತ್ರಾಲಯ ಮಠ ಅಭಯ ಶ್ರೀರಾಮನ ಮೂರ್ತಿ ಸ್ಥಾಪನೆಗೆ ಮುಂದಾಗಿದೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ
ದೇಶದ ಮೂಲೆ ಮೂಲೆಯಿಂದ ಬಂದ ಸಹಸ್ರಾರು ಭಕ್ತರು ಇಂದು ರಾಯರ ಮಠದಲ್ಲಿ ರಾಮನ ದರ್ಶನ ಪಡೆಯುತ್ತಿದ್ದಾರೆ. ಮಂತ್ರಾಲಯ ರಾಯರ ಮಠ ಹಾಗೂ ಅಭಯರಾಮ (Abhayarama) ಸೇವಾ ಸಮಿತಿಯಿಂದ ಏಕಶಿಲಾ ರಾಮನ ಮೂರ್ತಿ ತಲೆಎತ್ತಿದ್ದು ಮುಂದಿನ ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಗ್ರೇ ಗ್ರಾನೈಟ್ ಏಕಶಿಲೆಯಲ್ಲಿ ಕೆತ್ತನೆಯಾದ 36 ಅಡಿ ಎತ್ತರದ ಅಭಯರಾಮನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಇದನ್ನೂ ಓದಿ: ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಲಿಂ ಮಹಿಳೆ
ಅಯೋಧ್ಯ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮಂತ್ರಾಲಯದ ರಾಜಬೀದಿಗಳಲ್ಲಿ ಶ್ರೀರಾಮನ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು. ಬೃಹತ್ ಶೋಭಾ ಯಾತ್ರೆ ವೇಳೆ ಮಂತ್ರಾಲಯದ ರಾಯರ ಮಠ ಸಂಪೂರ್ಣವಾಗಿ ಕೇಸರಿ ಮಯವಾಗಿತ್ತು. ಕೇಸರಿ ಧ್ವಜಗಳನ್ನ ಹಿಡಿದು ಬೀದಿಗಳಲ್ಲಿ ರಾಯರ ಭಕ್ತರು ಹೆಜ್ಜೆಹಾಕಿದರು. ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶೋಭಾ ಯಾತ್ರೆ ನಡೆಯಿತು. ರಾಯರ ಮಠದಲ್ಲಿ ಶೋಭಾಯಾತ್ರೆ ಚಾಲನೆ ವೇಳೆ ಮುಸ್ಲಿಂ ಭಕ್ತರು ಸಹ ಭಾಗವಹಿಸಿದ್ದಾರೆ. ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು. ಇದನ್ನೂ ಓದಿ: ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು
-ಶ್ರೀರಾಮನ ಹೋಮ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಚಿವ
ತುಮಕೂರು: ಭಗವಾನ್ ಶ್ರೀರಾಮನನ್ನು (Lord Ram) ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ಅವರ ಕುಟುಂಬ ಇಂದು ರಾಮಜಪದಲ್ಲಿ ತೊಡಗಿಕೊಳ್ಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಭಗವಾನ್ ಶ್ರೀರಾಮನನ್ನು ಅವಮಾನಿಸಿಯೂ ಸಚಿವ ರಾಜಣ್ಣ ಮತ್ತವರ ಕುಟುಂಬ ಅಪ್ಪಟ ರಾಮಭಕ್ತರೆನಿಸಿಕೊಂಡಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೆಎನ್ ರಾಜಣ್ಣ ಕುಟುಂಬ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ. ಮಧುಗಿರಿ (Madhugiri) ತಾಲೂಕಿನ ಕಿತ್ತಾಗಳಿಯ ಶ್ರೀರಾಮ ದೇವಸ್ಥಾನದಲ್ಲಿ ಹೋಮ ಮಾಡಲಾಗಿದೆ. ನವಗ್ರಹ, ಗಣಪತಿ ಹಾಗೂ ಶ್ರೀರಾಮ ಹೋಮ ಕೈಗೊಂಡಿದ್ದು, ಕೆಎನ್ ರಾಜಣ್ಣ, ಅವರ ಪತ್ನಿ ಶಾಂತಲ ಹಾಗೂ ಕುಟುಂಬದ ಸದಸ್ಯರು ಹೋಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು: ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಮಾತು
ಪತ್ನಿ ಶಾಂತಲಾರ ಮನೆ ದೇವರು ಶ್ರೀರಾಮ ಹಾಗಾಗಿ ಇಂದು ವಿಶೇಷ ಪೂಜೆ ಮಾಡಿದ್ದಿವಿ ಎಂದು ಕೆ ಎನ್ ರಾಜಣ್ಣ ಪಬ್ಲಿಕ್ ಟಿ.ವಿ.ಗೆ ಹೇಳಿದ್ದಾರೆ. ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೆಲವರು ಹೇಳಬಹುದು. ಆದರೆ ನಾನು ಶ್ರೀರಾಮನಲ್ಲಿ ದೈವತ್ವವನ್ನೂ, ಪೂಜಾರ್ಹ ವ್ಯಕ್ತಿ ಎಂದು ನಂಬಿದ್ದೇನೆ. ಹಾಗಾಗಿ ಪೂಜೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ
ನೂರಾರು ಕೋಟಿ ವೆಚ್ಚ ಮಾಡಿ ದೇವಸ್ಥಾನ ಕಟ್ಟೋ ಬದಲು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬ ವಾದಕ್ಕೆ ಪ್ರತಿಕ್ರಿಯಿಯಿಸಿದ ಅವರು, ದೇವಸ್ಥಾನವನ್ನು ಕಟ್ಟೋದು ತಪ್ಪಲ್ಲ. ದೇವಸ್ಥಾನದ ಅವಶ್ಯಕತೆ ಇದೆ. ಅಲ್ಲದೇ ನನ್ನ ಹೇಳಿಕೆಯ ಡ್ಯಾಮೆಜ್ ಕಂಟ್ರೋಲ್ ಗೆ ಇಂದು ರಾಮನ ಪೂಜೆ ಮಾಡಿಲ್ಲ. ನಾನೂ ಅಪ್ಪಟ ರಾಮಭಕ್ತ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ತವೆ: ಆಚಾರ್ಯ ಸತ್ಯೇಂದ್ರ ದಾಸ್
ಈ ಹಿಂದೆ ಸಚಿವ ಕೆಎನ್ ರಾಜಣ್ಣ ಪ್ರಭು ಶ್ರೀರಾಮಚಂದ್ರನನ್ನು ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೀಗ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆ ತುಮಕೂರಿನ ರಾಮ ದೇವಸ್ಥಾನದಲ್ಲಿ ಹೋಮ ಹವನದಲ್ಲಿ (Homa Havan) ಭಾಗಿಯಾಗುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಸಚಿವ ಕೆಎನ್ ರಾಜಣ್ಣ ಹೋಮಕ್ಕೆ ಹವಿಸ್ಸು ಹಾಕಿ ನಮಸ್ಕರಿದ್ದು, ಕುಟುಂಬ ಸಮೇತ ಹೋಮ ಕುಂಡಕ್ಕೆ ಹವಿಸ್ಸು ಸಲ್ಲಿಕೆ ಮಾಡಿದ್ದಾರೆ. ಬಳಿಕ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ