Tag: ಶ್ರೀರಾಂಪುರ

  • ನಟ ವಿಜಯ್ ಬರ್ತ್ ಡೇ, ತಮಿಳುಮಯವಾದ ಶ್ರೀರಾಂಪುರ – ಕನ್ನಡಿಗರ ಆಕ್ರೋಶ

    ನಟ ವಿಜಯ್ ಬರ್ತ್ ಡೇ, ತಮಿಳುಮಯವಾದ ಶ್ರೀರಾಂಪುರ – ಕನ್ನಡಿಗರ ಆಕ್ರೋಶ

    ಬೆಂಗಳೂರು: ತಮಿಳು ನಟ ವಿಜಯ್ ಹುಟ್ಟು ಹಬ್ಬದ ಪ್ರಯುಕ್ತ ಶ್ರೀರಾಂಪುರ ತಮಿಳು ಮಯವಾಗಿದ್ದು ಇದಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮಿಳು ನಟ ವಿಜಯ್ ಅವರ ಬರ್ತ್ ಡೇ ಪ್ರಯುಕ್ತ ಅಖಿಲ ಕರ್ನಾಟಕ ಡಾ. ವಿಜಯ್ ಅಭಿಮಾನಿಗಳ ಸಂಘದಿಂದ ಶ್ರೀರಾಂಪುರದಲ್ಲಿ ವಿಜೃಂಭಣೆಯಿಂದ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಎಂಎಲ್‍ಎ ಹಾಗೂ ವಿಜಯ್ ಆಪ್ತ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.

    ಶ್ರೀರಾಂಪುರದ ಸನ್‍ರೈಸ್ ಸರ್ಕಲ್‍ನಲ್ಲಿ ಬೃಹತ್ ವೇದಿಕೆ ಹಾಕಿ, ಬೆಳಗ್ಗೆಯಿಂದ ವೇದಿಕೆಯಲ್ಲಿ ವಿಜಯ್ ನಟನೆಯ ತಮಿಳು ಹಾಡುಗಳಿಗೆ ನೃತ್ಯ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಆಗಮಿಸಿದ ಕೂಡಲೇ ಕನ್ನಡ ಭಕ್ತಿಗೀತೆಗಳನ್ನು ಹಾಕಿ ನೃತ್ಯ ಮಾಡಲಾಗಿದೆ ಎನ್ನಲಾಗಿದೆ.

    ಶ್ರೀರಾಂಪುರ ತಮಿಳುವಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಪರ ಸಂಘಟನೆಗಳು ಕರ್ನಾಟಕದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಾಂತಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನೂ ವೇದಿಕೆಯ ಫ್ಲೆಕ್ಸ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಫೋಟೋಗಳು ಕಂಡು ಬಂದಿವೆ.

  • ಕುಡಿದ ಮತ್ತಿನಲ್ಲಿ ರಸ್ತೆ ಬದಿಯಲ್ಲಿದ್ದ ವಾಹನಗಳ ಗಾಜುಗಳನ್ನು ಲಾಂಗು-ಮಚ್ಚುಗಳಿಂದ ಪುಡಿಗೈದ್ರು!

    ಕುಡಿದ ಮತ್ತಿನಲ್ಲಿ ರಸ್ತೆ ಬದಿಯಲ್ಲಿದ್ದ ವಾಹನಗಳ ಗಾಜುಗಳನ್ನು ಲಾಂಗು-ಮಚ್ಚುಗಳಿಂದ ಪುಡಿಗೈದ್ರು!

    ಬೆಂಗಳೂರು: ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳ ತಂಡವೊಂದು ಲಾಂಗು ಮಚ್ಚುಗಳಿಂದ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಶ್ರೀರಾಂಪುರ ಮತ್ತು ಕಮಲನಗರದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಬೈಕ್‍ಗಳಲ್ಲಿ ಬಂದ ಎಂಟು ಜನರ ಗುಂಪು ರಸ್ತೆ ಬದಿ ನಿಂತಿದ್ದ ಕಾರು ಮತ್ತು ಆಟೋಗಳ ಗಾಜು ಒಡೆದು ಪರಾರಿಯಾಗಿದ್ದಾರೆ.

    ಈ ಸಂಬಂಧ ಬಸವೇಶ್ವರನಗರ ಮತ್ತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

    ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಾರಿನಲ್ಲೇ ಸಿಇಒ ಪತಿಗೆ ಪತ್ನಿಯಿಂದ ಗುಂಡಿನ ದಾಳಿ

    ಇದನ್ನೂ ಓದಿ: ನಾನ್ಯಾಕೆ ಪತಿ ಮೇಲೆ ಗುಂಡು ಹಾರಿಸಿದೆ: ಮತ್ತಿನಲ್ಲಿ ಶೂಟೌಟ್ ಮಾಡಿದವಳ ಮಾತುಗಳು

  • ರೌಡಿ ನಾಗನ ಪತ್ತೆಗೆ ಭಿಕ್ಷುಕರ ವೇಷ ತೊಟ್ಟ ಪೊಲೀಸರು!

    ರೌಡಿ ನಾಗನ ಪತ್ತೆಗೆ ಭಿಕ್ಷುಕರ ವೇಷ ತೊಟ್ಟ ಪೊಲೀಸರು!

    ಬೆಂಗಳೂರು: ಶ್ರೀರಾಂಪುರದ ಮಾಜಿ ಕಾರ್ಪೋರೇಟರ್, ರೌಡಿಶೀಟರ್ ನಾಗನಿಗಾಗಿ ಯಾವ ರೀತಿ ಹುಡುಕಾಟ ನಡೆಸಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಪೊಲೀಸರು ಭಿಕ್ಷುಕರ ವೇಷ ತೊಟ್ಟು ನಾಗನ ಪತ್ತೆಗೆ ಬಲೆ ಬಿಸಿದ್ದಾರೆ.

    ರೌಡಿ ನಾಗನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸ್ರು ಕೋಟಿ ಕೋಟಿ ಹಣ ಜಪ್ತಿ ಮಾಡಿದ್ರು. ಪೊಲೀಸರು ನಾಗನನ್ನು ಪತ್ತೆ ಮಾಡುವ ಮುನ್ನವೇ ಸಿಡಿ ಬಾಂಬ್ ಸಿಡಿಸಿಬಿಟ್ಟಿದ್ದ. ಇದ್ರಿಂದ ಎಚ್ಚೆತ್ತ ಪೊಲೀಸರು ಈಗ ನಾಗನ ಹುಡುಕಾಟಕ್ಕಾಗಿ ಭಿಕ್ಷುಕರ ವೇಷ ಧರಿಸಿದ್ದಾರೆ.

    ಆದ್ರೆ ಪೊಲೀಸರು ಯಾವ ವೇಷ ಧರಿಸಿದ್ರೂ ರೌಡಿ ನಾಗ ಮಾತ್ರ ಬಲೆಗೆ ಬೀಳಲೇ ಇಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ನಾಗನ ಸಂಬಂಧಿಕರ ಮನೆಯಲ್ಲೇ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಕಾನೂನು ಸಮರ ಸಾರಿರೋ ನಾಗ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಗುರುವಾರ ನಾಗನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 4ಕ್ಕೆ ವಿಚಾರಣೆಯನ್ನು ಮುಂದೂಡಿದೆ.

  • ಅಯ್ಯಪ್ಪ ಮಾಲಾಧಾರಿಯಾದ ನಟ ದರ್ಶನ್ ಇಂದು ಶಬರಿಮಲೆಗೆ ಪ್ರಯಾಣ

    ಅಯ್ಯಪ್ಪ ಮಾಲಾಧಾರಿಯಾದ ನಟ ದರ್ಶನ್ ಇಂದು ಶಬರಿಮಲೆಗೆ ಪ್ರಯಾಣ

    ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಗೆ ತೆರಳಿದ್ದಾರೆ.

    ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇರುಮುಡಿ ಕಟ್ಟುವ ಕಾರ್ಯ ನಡೆಯುತ್ತಿದ್ದು ಅಲ್ಲಿಂದಲೇ ಶಬರಿಮಲೆಗೆ ಹೊರಡಲಿದ್ದಾರೆ. ಈಗಾಗಲೇ ಇರುಮುಡಿ ಪೂಜೆ ಶುರುವಾಗಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಶಬರಿಮಲೆಗೆ ತೆರಳಲಿರುವ ತಂಡ ಅಯ್ಯಪ್ಪ ದರ್ಶನ ಮುಗಿಸಿ 8ನೇ ತಾರೀಖಿನಂದು ವಾಪಸ್ಸಾಗಲಿದ್ದಾರೆ.

    ದರ್ಶನ್ ಜೊತೆ ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸೇರಿ ಒಟ್ಟು 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಲಿದ್ದಾರೆ.