‘ಮಿಥುನರಾಶಿ’, ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ದೀಪಾ ಕಟ್ಟೆ (Deepa Katte) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳ್ತಂಗಡಿಯ ಉಜಿರೆಯಲ್ಲಿ ಸರಳವಾಗಿ ನಟಿ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:ನಂದಮೂರಿ ಬಾಲಯ್ಯ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ
‘ಮಿಥುನರಾಶಿ’ (Mithunarashi) ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ದೀಪಾ ಕಟ್ಟೆ ಅವರು ಸದ್ಯ `ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ (Sudharani) ಅವರ ಮಗಳ ಪಾತ್ರದಲ್ಲಿ ದೀಪಾ ನಟಿಸುತ್ತಿದ್ದಾರೆ. ಕೊಂಚ ನೆಗೆಟಿವ್ ಶೇಡ್ ಇರುವ ಪಾತ್ರ ಇದಾಗಿದೆ.

ಮೇ 22ರಂದು ಸಾಫ್ಟ್ವೇರ್ ಇಂಜಿನಿಯರ್ ರಕ್ಷಿತ್ ಜೊತೆ ಬೆಳ್ತಂಗಡಿ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಗೃಹದಲ್ಲಿ ಅದ್ದೂರಿಯಾಗಿ ದೀಪಾ ಕಟ್ಟೆ ಅವರು ಮದುವೆಯಾಗಿದ್ದಾರೆ.
ನೆಚ್ಚಿನ ನಟಿ ಹಸೆಮಣೆ ಏರಿರೋ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ದೀಪಾ ಕಟ್ಟೆ ವೈವಾಹಿಕ ಬದುಕಿಗೆ ಶುಭಾವಾಗಲಿ ಎಂದು ಹಾರೈಸುತ್ತಿದ್ದಾರೆ.