Tag: ಶ್ರೀರಂಗ ಪಟ್ಟಣ

  • ಅಲ್ಲಾ ಹು ಅಕ್ಬರ್ ಎನ್ನಬೇಕಾಗಿರುವುದು ಮನೆ, ಮಸೀದಿಯಲ್ಲಿ.. ಸಮಾಜದಲ್ಲಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

    ಅಲ್ಲಾ ಹು ಅಕ್ಬರ್ ಎನ್ನಬೇಕಾಗಿರುವುದು ಮನೆ, ಮಸೀದಿಯಲ್ಲಿ.. ಸಮಾಜದಲ್ಲಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

    ಮಂಡ್ಯ: ಅಲ್ಲಾ ಹು ಅಕ್ಬರ್ ಎನ್ನಬೇಕಾಗಿರುವುದು ನಿಮ್ಮ ಮನೆ ಮತ್ತು ಮಸೀದಿಯಲ್ಲಿಯೇ ಹೊರತು ಸಮಾಜದಲ್ಲಿ ಅಲ್ಲ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದ್ದಾರೆ.

    ಶ್ರೀರಂಗಪಟ್ಟಣದಲ್ಲಿ (Srirangapatna) ಹನುಮಂತನ ಶೋಭಾಯಾತ್ರೆಯಲ್ಲಿ (Hanuman Shobha Yatra) ಮಾತನಾಡಿದ ಅವರು, ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಇಲ್ಲೇ ಕೂಗಿದ್ದು. ಇಂತಹ ಹೆಣ್ಣುಮಕ್ಕಳಿಗೆ ಹಣ ಕೊಟ್ಟು, ಶಹಬ್ಬಾಸ್‍ಗಿರಿ ಕೊಟ್ಟು ಅಲ್ಕೈದಾ ಭಯೋತ್ಪಾದಕ ಸಂಸ್ಥೆ ಬೆಳೆಸುತ್ತಿದೆ. ಈಕೆ ಅವರ ಸಂಪರ್ಕದಲ್ಲಿದ್ದು, ಮಂಡ್ಯದ ಜನ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಉತ್ಸಾಹಭರಿತ ವಾಸ್ತುಶಿಲ್ಪ ನಗರಿ: ಪ್ರಧಾನಿ ಮೋದಿ ಬಣ್ಣನೆ

    ಮೊನ್ನೆ ನಮ್ಮ ಸಿಎಂ ಹತ್ತು ಸಾವಿರ ಕೋಟಿ ರೂ.ಗಳನ್ನು ಮುಸಲ್ಮಾನರಿಗೆ ಕೊಡುತ್ತೇವೆ ಎಂದಿದ್ದರು. ಇದು ಯಾರಪ್ಪನ ದುಡ್ಡು ಎಂದು ಕೊಡ್ತೀರಿ? ಕಂದಾಯ ಕಟ್ತಿರೋದು ಹಿಂದೂಗಳು. ಅಲ್ಲದೇ ಹಿಜಬ್‍ನ್ನು ಮತ್ತೆ ಜಾರಿ ಮಾಡ್ತಿವಿ ಎಂದು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಈ ಮೂಲಕ ಶಾಲಾ ಮಕ್ಕಳಲ್ಲಿ ಪ್ರತ್ಯೇಕತೆ ತರುತ್ತಿದ್ದಾರೆ. ಸಮವಸ್ತ್ರದ ಉದ್ದೇಶವನ್ನು ಕೊಂದು ಹಾಕುತ್ತಿದ್ದಾರೆ. ಹಿಜಬ್ ತರೋಕೆ ಸಿದ್ದರಾಮಯ್ಯಗೆ  (Siddaramaiah) ತಾಕತ್ ಇದೆಯಾ ಎಂದು ಸವಾಲು ಹಾಕಿದ್ದಾರೆ.

    ಭಾರತ ಅತ್ಯಂತ ಸಂಪತ್ತಿರುವ ದೇಶ, ಅದಕ್ಕಾಗಿ ನೂರಾರು ರಾಜರು ನಮ್ಮ ಮೇಲೆ ಆಕ್ರಮಣ ಮಾಡಿದ್ದರು. ಕಾಲಕ್ರಮೇಣ ನಮ್ಮಲ್ಲೇ ಒಂದಷ್ಟು ಗೊಂದಲ ಉಂಟಾಯ್ತು. ಅದರ ಪರಿಣಾಮ ಕೆಲ ವರ್ಷಗಳು ನಾವು ಗುಲಾಮಗಿರಿ ಅನುಭವಿಸಬೇಕಾಗಿ ಬಂತು. ನಮಗೆ ಪಾಠದಲ್ಲಿ ಹೇಳ್ತಾರೆ ಮುಸಲ್ಮಾನ ರಾಜರು ಸಂಪತ್ತಿಗೋಸ್ಕರ ದಾಳಿ ಮಾಡಿದ್ರು ಎಂದು. ಆದರೆ ಅವರು ಮತಾಂತರ ಮಾಡಿದ್ದನ್ನ ಯಾರೂ ಹೇಳುತ್ತಿಲ್ಲ ಎಂದಿದ್ದಾರೆ.

    ಯಾವಾಗ ಮುಸಲ್ಮಾನ ಹಾಗೂ ಕ್ರೈಸ್ತ ರಾಜರು ಇಲ್ಲಿಗೆ ಕಾಲಿಟ್ಟರೋ ಆಗ ಮತಾಂತರ ಮಾಡಲು ಮುಂದಾದರು. ಆಗಲೇ ಮುಸ್ಲಿಂ ಲೀಗ್ ಪ್ರಾರಂಭ ಆಯ್ತು. ಅದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ಕೊಡುತ್ತಿದೆ. ಕಾಂಗ್ರೆಸ್ ನಾಯಕರು ಹಿಂದೂಗಳ ಕೈಬಿಟ್ಟಿದ್ದಕ್ಕೆ ದೇಶ ವಿಭಜನೆ ಆಯ್ತು, ಪಾಕಿಸ್ತಾನ ನಿರ್ಮಾಣ ಆಯ್ತು. ಅಖಂಡ ಭಾರತ ತ್ರಿಖಂಡ ಆಯ್ತು. ನೆಹರೂ ಈ ಭೂಮಿಯನ್ನ ಮಾತೃಭೂಮಿ ಎಂದು ತಿಳಿಯದೇ, ದೇಶ ವಿಭಜನೆ ಮಾಡಿ ತಲೆನೋವು ಕಮ್ಮಿ ಮಾಡಿಕೊಳ್ತೀವಿ ಎಂದಿದ್ದರು. ಈಗ ಪಾಕಿಸ್ತಾನವೇ ತಲೆನೋವಾಗಿ ಪರಿಣಮಿಸಿದೆ. ನೆಹರೂ ಅವರೇ ನಮಗೆ ಅನ್ಯಾಯ ಮಾಡಿದ್ದು ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದ್ದಾರೆ.

    ಹಿಜಬ್ ಧರಿಸಲು ಅನುಮತಿ ಕೊಟ್ಟರೆ ನಾವು ಕೇಸರಿ ಶಾಲು, ಟೋಪಿ ಧರಿಸುತ್ತೇವೆ. ನಾವು ಶಾಲೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗ್ತೀವಿ. ನೀವು ತಾಕತ್ತಿದ್ದರೆ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಎಂದು ಸವಾಲು ಹಾಕಿದ್ದಾರೆ.

    ದಿ ಕೇರಳ ಸ್ಟೋರಿ ಹಾಗೂ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ, ಮುಸಲ್ಮಾನರು ಯಾವ ರೀತಿ ಮೋಸ ಮಾಡ್ತಾರೆ ಎಂದು ತಿಳಿಯುತ್ತದೆ. ಮುಸಲ್ಮಾನ ಹುಡುಗರು ಮಾತ್ರವಲ್ಲ, ಹುಡುಗಿಯರೂ ಮತಾಂತರ ಮಾಡ್ತಿದ್ದಾರೆ. ಅವರೂ ಲವ್ ಜಿಹಾದ್ ಮಾಡುವ ಕೆಲಸ ಮಾಡ್ತಿದ್ದಾರೆ. ಯಾವ ರೀತಿ ಮತಾಂತರ ಮಾಡ್ತಾರೆ, ಹಿಂದೂ ಹುಡುಗಿಯರನ್ನು ಹೇಗೆ ಟಾರ್ಗೆಟ್ ಮಾಡ್ತಾರೆ ಎಂಬುವುದನ್ನು ಕೆಲವು ಸಿನಿಮಾಗಳಲ್ಲಿ ತೋರಿಸಿದ್ದಾರೆ ಎಂದಿದ್ದಾರೆ.

    ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗ್ತಿದ್ದ. ನಿಮಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವ ಕೊಟ್ಟಿದ್ದು ಇದೇ ಹಿಂದೂ ಧರ್ಮ ಎಂದು ಅವರು ಹೇಳಿದ್ದಾರೆ.

    ಅಂಬೇಡ್ಕರ್ ಮಾತು ಕೇಳಿದ್ದರೆ ನಾವು ಜಗತ್ತಿನ ಅತ್ಯಂತ ಶ್ರೇಷ್ಠವಾಗಿ ಬದುಕುತ್ತಿದ್ದೆವು. ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ರೆ ನಾವು ನೆಮ್ಮದಿಯಾಗಿ ಇರಬಹುದಿತ್ತು. ಆದರೆ ಕಾಂಗ್ರೆಸ್‍ನವರು ಅಂಬೇಡ್ಕರ್ ಅವರ ಮಾತು ಕೇಳ್ತಿರಲಿಲ್ಲ. ಹಿಂದೂಗಳಿಗೆ ಭಾರತ ಬಿಟ್ರೆ ಬೇರೆ ಜಾಗ ಇಲ್ಲ, ಹಿಂದೂಗಳಿಗೆ ಇರುವ ಏಕೈಕ ದೇಶ ಭಾರತ ಎಂದು ಅವರು ಹೇಳಿದ್ದಾರೆ.

    ಜೀವನದ ಯಾವುದೇ ಯುಗದಲ್ಲಿ ರಾಮ ಶ್ರೇಷ್ಠ, ಅಂತಹ ರಾಮನ ಅತ್ಯಾಪ್ತ ಭಂಟ, ಅಂತಹ ಹನುಮಂತನ ಹೃದಯದಲ್ಲಿ ರಾಮ ನೆಲೆಸಿದ್ದಾನೆ. ಇಂದು ಹನುಮಂತನ ಶೋಭಾಯಾತ್ರೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಕೆಲವೇ ದಿನಗಳಲ್ಲಿ ರಾಮಮಂದಿರ ಉದ್ಘಾಟನೆ ಆಗಲಿದೆ. ಜಗತ್ತಿನ ಎಲ್ಲಾ ಜನರಿಗೆ ಜೀವ, ಬದುಕು ಜ್ಞಾನ ಕೊಟ್ಟ ದೇಶ ಭಾರತವಾಗಿದೆ. ಜಗತ್ತಿನ ಕೇಂದ್ರ ಭಾರತ, ಭಾರತದ ಕೇಂದ್ರ ಅಯೋಧ್ಯೆ, ಅಯೋಧ್ಯೆಯ ಕೇಂದ್ರ ರಾಮ. ಜ.22 ಹಿಂದೂ ಸಮಾಜಕ್ಕೆ ಮತ್ತೊಂದು ದೀಪಾವಳಿ ಇದ್ದಂತೆ. ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ. ಹಿಂದೂ ಸಮಾಜ ಎದ್ದರೆ ನಮಗೆ ಅನ್ಯಾಯ ಮಾಡಲು ಯಾವ ಸಮಾಜಕ್ಕೆ ತಾಕತ್ತಿದೆ? ನಮಗೆ ಎದ್ದೇಳಲು ಸಮಯ ಬೇಕಷ್ಟೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಉಚಿತ ಭರವಸೆ ಈಡೇರಿಸಲು RBI ಬಳಿ 2,000 ಕೋಟಿ ರೂ. ಸಾಲ ಕೇಳಿದ ಮಧ್ಯಪ್ರದೇಶ

  • ಅಪ್ಪು ಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಯುವಕ ಆತ್ಮಹತ್ಯೆಗೆ ಶರಣು

    ಅಪ್ಪು ಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಯುವಕ ಆತ್ಮಹತ್ಯೆಗೆ ಶರಣು

    ಮಂಡ್ಯ: ಅಭಿಮಾನಿಗಳ ಆರಾಧ್ಯ ದೈವವಾಗಿರುವ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಅಗಲಿ ಒಂದು ವರ್ಷ ಕಳೆದಿದೆ. ಈ ನಡುವೆ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ (SrirangaPattana) ನಡೆದಿದೆ.

    ಕೇವಲ ಬೆಂಗಳೂರಷ್ಟೇ ಅಲ್ಲದೇ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪುನೀತ್‍ರನ್ನು ಅಭಿಮಾನಿಗಳು ನಿನ್ನೆ ಸ್ಮರಿಸಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಅಪ್ಪು ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    ಹೊಸ ಆನಂದೂರು ಗ್ರಾಮದ ಕಿರಣ್(22) ಮೃತ ಯುವಕ. ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿ, ಅನ್ನಸಂತರ್ಪಣೆ ಕೂಡ ನಡೆಸಿದ್ದ. ಆದರೆ ಕಾರ್ಯಕ್ರಮದ ಬಳಿಕ ಮನೆಗೆ ರಾತ್ರಿ 10 ಗಂಟೆಯಲ್ಲಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಹುಭಾಷಾ ಹಿರಿಯ ನಟಿ ವಿನಯ ಪ್ರಸಾದ್ ಮನೆ ದೋಚಿದ ಖದೀಮರು

    ಶನಿವಾರ ನಗರದ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ನಡೆಯಿತು. ಅಪ್ಪು ಅಗಲಿ ಒಂದು ವರ್ಷಗಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆಯೇ ಉಳಿದಿದ್ದಾರೆ. ಅವರ ನೆನಪುಗಳು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇಂದಿಗೂ ಪುನೀತ್ ಇಲ್ಲ ಎಂಬ ಸತ್ಯವನ್ನು ಎಷ್ಟೋ ಮಂದಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಮಧ್ಯೆ ಪುನೀತ್ ಸಮಾಧಿಗೆ ರಾಜ್ಯದ ನಾನಾ ಕಡೆಯಿಂದ ಆಗಮಿಸಿ ಜನ ಶನಿವಾರ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅಪ್ಪು ಹೆಸರಲ್ಲಿ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಮುದ್ದು ಕಂದಮ್ಮನ ಬಿಟ್ಟು ಅವಿವಾಹಿತ ಮಹಿಳೆಯೊಂದಿಗೆ ತಾಯಿ ಎಸ್ಕೇಪ್!

    ಮನೆಯಲ್ಲಿ ಮುದ್ದು ಕಂದಮ್ಮನ ಬಿಟ್ಟು ಅವಿವಾಹಿತ ಮಹಿಳೆಯೊಂದಿಗೆ ತಾಯಿ ಎಸ್ಕೇಪ್!

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರದಲ್ಲಿ ಗೃಹಿಣಿಯೊಬ್ಬರು ಅವಿವಾಹಿತ ಮಹಿಳೆಯೊಂದಿಗೆ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಪ್ರಿಯದರ್ಶಿನಿ(22) ಮತ್ತು ಮಾಹಾದೇವಿ(21) ಕಾಣೆಯಾದ ಮಹಿಳೆಯರು. ಪ್ರಿಯದರ್ಶಿನಿ ಅವರಿಗೆ ಮದುವೆಯಾಗಿದ್ದು, ಒಂದು ಮಗುವನ್ನು ಸಹ ಹೊಂದಿದ್ದಾರೆ. ಆಗಸ್ಟ್ 22ರಿಂದ ಇಬ್ಬರೂ ಮಹಿಳೆಯರೂ ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದಾರೆ.

    ಮಾಹಾದೇವಿ ಅವರು ಕೆಲವು ದಿನಗಳಿಂದ ಪ್ರಿಯದರ್ಶಿನಿ ಮನೆಗೆ ಬಂದು ಹೋಗುತ್ತಿದ್ದರು. ಅಗಸ್ಟ್ 22ರಂದು ಮಾಹಾದೇವಿ ಬಟ್ಟೆ ತರುವುದಾಗಿ ಹೇಳಿ ಪ್ರಿಯದರ್ಶಿನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಅಂದು ಬಟ್ಟೆ ತರಲು ಹೋದವರು ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಅನುಮಾನಗೊಂಡ ಪ್ರಿಯದರ್ಶಿನಿ ತಾಯಿ ಮಹಾದೇವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನನ್ನ ಪತ್ನಿಗೆ ಮಾಟ-ಮಂತ್ರ ಮಾಡಿಸಿ ಮಹಾದೇವಿ ಕರೆದುಕೊಂಡು ಹೋಗಿದ್ದಾಳೆ ಎಂದು ಪ್ರಿಯದರ್ಶಿನಿ ಪತಿ ನವೀನ್‍ಕುಮಾರ್ ಆರೋಪಿಸುತ್ತಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾಗಿರುವ ಮಹಾದೇವಿ ಮತ್ತು ಪ್ರಿಯದರ್ಶಿನಿಯ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.