Tag: ಶ್ರೀಯಾ

  • ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಹುಭಾಷಾ ನಟಿ ಶ್ರೀಯಾ ಶರಣ್ (Shriya Saran) ಸದ್ಯ `ದೃಶ್ಯಂ 2′ (Drishyam 2) ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. `ದೃಶ್ಯಂ 2′ ಸಿನಿಮಾ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರುಜೀವ ಬಂದಂತಾಗಿದೆ. ಈಗ ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನ ಸೀಕ್ರೆಟ್ ಆಗಿ ಇಟ್ಟಿದ್ಯಾಕೆ ಎಂದು ರಿವೀಲ್ ಮಾಡಿದ್ದಾರೆ.

    ಸೌತ್ ಸಿನಿಮಾರಂಗದಲ್ಲಿ ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿದ್ದ ಚೆಲುವೆ ಶ್ರೀಯಾ ಶರಣ್, 2018ರಲ್ಲಿ ಆಂಡ್ರಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2021ರಲ್ಲಿ ಮುದ್ದು ಮಗಳ ಆಗಮನವಾಗಿತ್ತು. ಆದರೆ ಮಗಳು ಹುಟ್ಟುವವೆರೆಗೂ ತಾವು ಪ್ರೆಗ್ನೆಂಟ್ ಆಗಿರುವ ವಿಷ್ಯವನ್ನು ಎಲ್ಲೂ ಕೂಡ ನಟಿ ರಿವೀಲ್ ಮಾಡಿರಲಿಲ್ಲ. ಈಗ ಈ ಬಗ್ಗೆ ನಟಿ ಮಾತನಾಡಿದ್ದಾರೆ.

    ನನ್ನ ಮಗಳು ರಾಧ (Radha) ಹೊಟ್ಟೆಯಲ್ಲಿ ಇರುವಾಗ ಒತ್ತಡ ಇಲ್ಲದೇ ದಿನ ದೂಡಬೇಕು ಎಂದುಕೊಂಡಿದ್ದೆ. ಆ ಸಮಯದಲ್ಲಿ ಎಲ್ಲರೂ ದಪ್ಪ ಆಗುತ್ತಾರೆ. ನಾನು ದಪ್ಪ ಆಗುವ ಕಾರಣಕ್ಕೆ ಮತ್ತು ಬಾಡಿ ಶೇಪ್ ಬಗ್ಗೆ ಟ್ರೋಲ್ ಮಾಡಿದರೆ ಎಂಬ ಕಾರಣಕ್ಕೆ ಹೀಗೆ ಮಾಡಿದೆ. ತಾಯ್ತನವನ್ನು ಸುಂದರವಾಗಿ ಅನಿಭವಿಸಬೇಕು ಎಂದುಕೊಂಡಿದ್ದೆ, ಹಾಗಾಗಿ ಪ್ರೆಗ್ನೆನ್ಸಿ ವಿಚಾರವನ್ನೂ ಸೀಕ್ರೆಟ್ ಅಗಿ ಇಟ್ಟಿದ್ದೆ ಎಂದು ಶ್ರೀಯಾ ಮಾತನಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಮೂಲಕ ಪತಿಯ ಪ್ರಜಾಕೀಯಕ್ಕೆ ಸಾಥ್ ನೀಡಿದ ಪ್ರಿಯಾಂಕ ಉಪೇಂದ್ರ

    ಇನ್ನೂ `ಕಬ್ಜ’ ಚಿತ್ರದಲ್ಲಿ ಉಪ್ಪಿ ಜೊತೆ ಶ್ರೀಯಾ ಶರಣ್ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ(Upendra) ಸದ್ಯ ʻಕಬ್ಜʼ (Kabza) ಚಿತ್ರದ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ  ವಿವ್ಸ್ ಗಿಟ್ಟಿಸಿಕೊಳ್ತಿದೆ. ಉಪ್ಪಿ ನಯಾ ಅವತಾರ ನೋಡಿ, ಫ್ಯಾನ್ಸ್ ಉಘೇ ಉಘೇ ಅಂತಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿರುವ ‘ಕಬ್ಜ’ ಟೀಸರ್ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ 1 ಕೋಟಿ 30 ಲಕ್ಷ ವೀವ್ಸ್ ಪಡೆದುಕೊಂಡು ಸದ್ದು ಮಾಡ್ತಿದೆ. ಟೀಸರ್‌ನ ಬಹುತೇಕ ಫ್ರೇಮ್‌ಗಳಲ್ಲಿ `ಕೆಜಿಎಫ್’ (Kgf) ಸಿನಿಮಾ ಛಾಯೆ ಕಾಣಿಸುತ್ತಿದ್ದರೂ ಕೂಡ ಸಿನಿರಸಿಕರು ಪದೇ ಪದೇ ಟೀಸರ್ ನೋಡಿ ಖುಷಿ ಪಡ್ತಿದ್ದಾರೆ. ಇದನ್ನೂ ಓದಿಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಆರ್‌. ಚಂದ್ರು (R. Chandru) ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಸಿನಿಮಾ ‘ಕಬ್ಜ’. ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಬಹುಭಾಷಾ ಶ್ರಿಯಾ ಶರಣ್  ಕಾಣಿಸಿಕೊಂಡಿದ್ದರು, ಕಿಚ್ಚ ಸುದೀಪ್ (Kiccha Sudeep) ಪ್ರಮುಖ ಪಾತ್ರದಲ್ಲಿ‌ ಅಬ್ಬರಿಸಿದ್ದಾರೆ. ಉಪ್ಪಿ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೇ ಅದ್ಧೂರಿ ಕಾರ‍್ಯಕ್ರಮದಲ್ಲಿ ‘ಕಬ್ಜ’ ಟೀಸರ್ ಬಿಡುಗಡೆಯಾಗಿತ್ತು. ತೆಲುಗು ನಟ ರಾಣಾ ದಗ್ಗುಬಾಟಿ(Rana Daggubati) ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು.

    ಇನ್ನು ಟೀಸರ್ ನೋಡಿರುವ ಅಭಿಮಾನಿಗಳು ಕೆಜಿಎಫ್ ಸಿನಿಮಾಗೆ ಹೋಲಿಸಿ, ʻಕಬ್ಜʼ ಚಿತ್ರಕ್ಕೆ ಜೈ ಅಂದಿದ್ದಾರೆ. ಒಟ್ಟು 7 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಅಬ್ಬರಿಸುತ್ತಿದೆ. ಆರ್. ಚಂದ್ರು, ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯ ʻಕಬ್ಜʼ ಟೀಸರ್ ಯೂಟ್ಯೂಬ್ ಕೋಟಿಗಟ್ಟಲೇ‌‌ ವಿವ್ಸ್‌ ಗಿಟ್ಟಿಸಿಕೊಂಡು ಟ್ರೆಂಡ್ ಸೃಷ್ಟಿಸಿದೆ.

    Live Tv
    [brid partner=56869869 player=32851 video=960834 autoplay=true]