ಮಂಗಳೂರು: ನನ್ನ ಮೇಲೆ ಮಾಡಿರುವ ಈ ಆರೋಪಗಳೆಲ್ಲವೂ ಸುಳ್ಳು. ನಕಲಿ ದಾಖಲೆ ಸೃಷ್ಟಿಸಲು ಸಾಧ್ಯವಿಲ್ಲ. ಎಲ್ಲಾ ಕಂಬಳದಲ್ಲೂ ಲೈವ್ ಇರುತ್ತದೆ. ಪಾರದರ್ಶಕತೆ ಇರುತ್ತೆ ಟೈಮಿಂಗ್‍ನ್ನು ತೋರಿಸುವ ಪರದೆಯೂ ಸಹ ಇರುತ್ತದೆ. ಹೀಗಾಗಿ ಮೋಸ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ತನ್ನ ವಿರುದ್ಧ ಕ್ರಿಮಿನಲ್ ದೂರು ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ದೂರು ನೀಡಿದ ಲೋಕೇಶ್ ಶೆಟ್ಟಿ ಫಿಲ್ಮ್ ಮಾಡುತ್ತೇನೆ ಅಂದಾಗ ನಾನು ಒಪ್ಪಿರಲಿಲ್ಲ. ಇದನ್ನು ಸಹಿಸಲು ಆಗದೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಲೋಕೇಶ್ ಶೆಟ್ಟಿ ವಿರುದ್ಧ ದೂರು ನೀಡುತ್ತೇನೆ. ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ವಿರುದ್ಧ ಪ್ರಕರಣ ದಾಖಲು
ಶ್ರೀನಿವಾಸಗೌಡ ವಿರುದ್ಧದ ಆರೋಪ ಏನು..?
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಲಕ್ಷಾಂತರ ಹಣ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಿ ಲೋಕೇಶ್ ಶೆಟ್ಟಿ ಎಂಬವರು ಕಂಬಳ ಓಟಗಾರ ಶ್ರೀನಿವಾಸ ಗೌಡ, ಗುಣಪಾಲ ಕಡಂಬ ಮತ್ತು ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ದೂರು ನೀಡಿದ್ದಾರೆ. ಇದನ್ನೂ ಓದಿ: 8.96 ಸೆಕೆಂಡ್‍ನಲ್ಲಿ 100 ಮೀ. ಕ್ರಮಿಸಿ ಕಂಬಳದಲ್ಲಿ ತಮ್ಮದೇ ದಾಖಲೆ ಸರಗಟ್ಟಿದ ಶ್ರೀನಿವಾಸ್ ಗೌಡ
2020ರ ಫೆ.1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದ ಶ್ರೀನಿವಾಸ ಗೌಡ ಅವರು 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಅನ್ನು 9.58 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆ ಉಡೀಸ್ ಮಾಡಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲಾಗಿದೆ.
ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಉಚ್ಚಾಟನೆಗೊಳಿಸಿ ಜೆಡಿಎಸ್ ಆದೇಶ ಹೊರಡಿಸಿದೆ. ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್
ರಾಜ್ಯಸಭಾ ಚುನಾವಣೆಯಲ್ಲಿ ತಾವು ಪಕ್ಷದ ಅಧಿಕೃತ ಅಭ್ಯರ್ಥಿಯಾದ ಡಿ.ಕುಪೇಂದ್ರರೆಡ್ಡಿ ಅವರಿಗೆ ಮತ ನೀಡದೇ, ಅವರ ವಿರುದ್ಧವಾಗಿ ನಿಮ್ಮ ಪ್ರಥಮ ಪ್ರಾಶಸ್ತ್ಯ ಮತವನ್ನು ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್ ಮತ್ತು ದ್ವಿತೀಯ ಮತವನ್ನು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ನೀಡಿರುವ ಬಗ್ಗೆ ಹೆಚ್.ಡಿ.ರೇವಣ್ಣ ಅವರು ನೀಡಿರುವ ವರದಿಯಲ್ಲಿ ವಿವರಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶ್ರೀನಿವಾಸ್ ಅವರು ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದರು. ಇದಕ್ಕೂ ಮೊದಲು ಜೆಡಿಎಸ್‌ನ ಶ್ರೀನಿವಾಸ್ ಗೌಡ ಅವರು ಅಡ್ಡ ಮತದಾನ ಮಾಡಿದ್ದರು.
ಮತದಾನಕ್ಕೂ ಮೊದಲು ನಾನು ಯಾರಿಗೆ ಮತ ಹಾಕುತ್ತೇನೆ ಎನ್ನುವುದನ್ನು ಈಗ ತಿಳಿಸುವುದಿಲ್ಲ ಎಂದಿದ್ದ ಶ್ರೀನಿವಾಸ ಗೌಡ ಮತ ಹಾಕಿದ ಬಳಿಕ ನೇರವಾಗಿ ಕಾಂಗ್ರೆಸ್ ಶಾಸಕರಿದ್ದ ಕಚೇರಿಗೆ ತೆರಳಿದರು.
ಕೋಲಾರ : ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿದೆ ಹಾಗಾಗಿ ಸ್ವತಃ ತಾವೇ ರಾಜ್ಯದಲ್ಲಿ ಸಂಚಾರ ಮಾಡುವುದಾಗಿ ಹೇಳಿದ್ದಾರೆ ಮತ್ತು ಮೇಕೆದಾಟು ಯೋಜನೆ ಕಾಂಗ್ರೆಸ್ ಅವರದ್ದೇ ಜೆಡಿಎಸ್‍ನವರು ಏನೇನೋ ಹೇಳುತ್ತಾರೆ ಎಂದು ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡ ಅವರು ಹೇಳಿದ್ದಾರೆ.
ಕೋಲಾರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್‍ಸಿ ಚುನಾವಣೆಯಲ್ಲಿ ಹಾಸನದಲ್ಲಿ ಒಂದೇ ಒಂದು ಸ್ಥಾನ ಗೆದ್ದಿರುವ ಜೆಡಿಎಸ್‍ನವರು ಮುಂದೆ ರಾಜ್ಯದಲ್ಲಿ 132 ಸ್ಥಾನ ಗೆಲ್ಲುತ್ತಾರೆ. ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿರುವುದರಿಂದ, ದೇವೇಗೌಡರೆ ರಾಜ್ಯದಲ್ಲಿ ಸಂಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಸಮ್ಮಿಶ್ರ ಸರ್ಕಾರ ಇದ್ದಾಗ ಕುಣಿಲಾರದೆ ನೆಲ ಡೊಂಕು ಎನ್ನುವಂತೆ ಆಡಳಿತ ಮಾಡಿದ್ದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಮನ್ನಣೆ ಹಾಕುತ್ತಾರೆ ಎಂದು ಜೆಡಿಎಸ್ ವಿರುದ್ಧ ಮಾತಿನ ಸಮರ ಸಾರಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು
ಇದೇ ವೇಳೆ ಮೇಕೆದಾಟು ವಿಚಾರ ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಅವರು ಒಳ್ಳೆಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಮೇಕೆದಾಟು ಯೋಜನೆ ಕಾಂಗ್ರೆಸ್‍ನಿಂದಲೇ ಆಗಿರುವುದು. ಜೆಡಿಎಸ್‍ನವರು ಏನೇನೊ ಹೇಳಿಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಆದ್ಯತೆ ಕೊಡುವ ಅಗತ್ಯವಿಲ್ಲ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿ ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮ ತಗೆದುಕೊಳ್ಳುತ್ತೆ: ಭಗವಂತ್ ಖೂಬಾ
ಕೋಲಾರ: ಕಾಂಗ್ರೆಸ್ ಏನ್ ನಮ್ಮಪ್ಪಂದಾ, ಅವರು ಸೆಕ್ಯೂಲರ್ ಆಗಿ ಕೆಲಸ ಮಾಡಬೇಕು ಎಂದುಕೊಂಡಿದ್ದಾರೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ, ಅದನ್ನ ಸೇರಬೇಕು ಎಂದು ತೀರ್ಮಾನ ಮಾಡಿದ್ರೆ ಸೇರ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದ ಅಮ್ಮಾನಿ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆ ಇಂದು ಕಾಂಗ್ರೆಸ್ ಮುಖಂಡರೊಂದಿಗೆ ಬಾಗಿನ ಅರ್ಪಿಸುವ ಮುನ್ನ ಕೋಲಾರ ಶಾಸಕ ಶ್ರೀನಿವಾಸಗೌಡ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀನಿವಾಸಗೌಡ ಅವರು ಗ್ರಾಮ ಪಂಚಾಯ್ತಿಯಿಂದ ಬಂದವರು, ಜನರ ಮಧ್ಯೆ ಆಯ್ಕೆಯಾಗಿ ಬಂದವರು. ಅವರೇನು ಆಕಾಶದಿಂದ ಉದುರಿ ಬಂದವರಲ್ಲ, ಗಾಳಿಯಲ್ಲಿ ತೇಲಿ ಬಂದವರಲ್ಲ ಎಂದು ತಿಳಿಸಿದರು.
ಶ್ರೀನಿವಾಸಗೌಡರಿಗೆ ಅವರದ್ದೇ ಆದ ಶಕ್ತಿ ಸಾಮರ್ಥ್ಯ ಇದೆ. ಅವರದ್ದೇ ಆದ ವರ್ಚಸ್ಸು ಇದೆ. ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇಷ್ಟು ಹಳೆ ಮನುಷ್ಯ, ಅನುಭವ ಇರುವವರು ಕಾಂಗ್ರೆಸ್ಸಿಗೆ ಬಂದ್ರೆ ಶಕ್ತಿ ಬರಲಿದೆ. ಸಂವಿಧಾನದಲ್ಲಿ ಅವಕಾಶವಿದೆ ಎಂದರು. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್
ಕೋಲಾರ: ನಾನು ಕೊಚ್ಚೆ ನೀರನ್ನೇ ಕುಡಿದಿದ್ದೇನೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.
ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 2 ನೇ ಬಾರಿಗೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ಕುಮಾರಸ್ವಾಮಿಗೆ ನೇರ ಟಾಂಗ್ ನೀಡಿದರು. ಕೊಚ್ಚೆ ನೀರನ್ನ ನಾನು ಕುಡಿದಿದ್ದೇನೆ, ನಾನು ಸತ್ತಿದ್ದರೆ ಅದು ಕೊಚ್ಚೆ ನೀರು. ನಾವು ರೈತರು ನಮಗೆ ನೀರು ಮುಖ್ಯ ಯಾವ ನೀರು ಅನ್ನೋದಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ
ಆಗಸ್ಟ್ 18 ರಂದು ಕೋಲಾರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ವೇಳೆ ಶಾಸಕ ರಮೇಶ್ ಕುಮಾರ್ ವಿರುದ್ಧ ಹೆಚ್‍ಡಿಕೆ ಹರಿಹಾಯ್ದಿದಿದ್ದರು. ಕೆ.ಸಿ.ವ್ಯಾಲಿ ಕೊಚ್ಚೆ ನೀರು ಕೊಟ್ಟು ಮಹಾನ್ ಕಾರ್ಯ ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ರು. ಇದಕ್ಕೆ ಇಂದು ರಮೇಶ್ ಕುಮಾರ್ ಎದುರಿಗೆ ತಮ್ಮ ನಾಯಕನಿಗೆ ಟಾಂಗ್ ನೀಡಿದ ಕೋಲಾರ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಎಂದಿನಂತೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರನ್ನು ಕೊಂಡಾಡಿದ್ರು. ಇನ್ನೂ ಬಳಿಕ ಮಾತನಾಡಿದ ರಮೇಶ್ ಕುಮಾರ್ ಗಾಳಿಯಲ್ಲಿ ಬಂದು ಮಾತನಾಡಿ ಹೋಗುವವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರೆಲ್ಲಾ ಹಾಗೆ ಇರಲಿ ದೊಡ್ಡವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು.
ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. 8.78 ಸೆಕೆಂಡ್ ನಲ್ಲಿ 100 ಮೀಟರ್ ಓಡಿ ವಿಶ್ವದಾಖಲೆ ಬರೆದಿದ್ದಾರೆ. ಬಂಟ್ವಾಳದ ಕಕ್ಕೆಪದವುನಲ್ಲಿ ನಡೆದ ಕಂಬಳ ಕೂಟ ಈ ದಾಖಲೆಗೆ ಸಾಕ್ಷಿಯಾಯ್ತು.
ಸತ್ಯ-ಧರ್ಮ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಗೌಡ ದಾಖಲೆ ಬರೆದಿದ್ದಾರೆ, ಕೆಲ ದಿನಗಳ ಹಿಂದೆ ವೇಣೂರಿನಲ್ಲಿ ನಡೆದಿದ್ದ 8.89 ಸೆಕೆಂಡ್ ಗಳಲ್ಲಿ 100 ಮೀಟರ್ ಗುರಿಯನ್ನ ತಲುಪಿದ್ದರು. ಇದೀಗ ತಮ್ಮ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.
ಕಳೆದ ವರ್ಷ 15 ಕಂಬಳಗಳಲ್ಲಿ 45 ಪದಕಗಳನ್ನ ಶ್ರೀನಿವಾಸ್ ಗೌಡರು ತಮ್ಮದಾಗಿಸಿಕೊಳ್ಳುವ ಮೂಲಕ ಚಾಂಪಿಯನ್ ಆಗಿದ್ದರು. ಮೂರು ಕಂಬಳಗಳ ನಾಲ್ಕು ವಿಭಾಗಗಳಲ್ಲಿ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು.
– ಶ್ರೀನಿವಾಸ ಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ
– ವರ್ಷಕ್ಕೆ 2 ಯಜಮಾನರ ಜೊತೆ ಒಪ್ಪಂದ
ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕಂಬಳ ಕೋಣದ ಓಟಗಾರರು ಒಬ್ಬರಿಗಿಂತ ಒಬ್ಬರು ದಾಖಲೆಗಳನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ಗಿಂತ ಚೆನ್ನಾಗಿ ಓಡಿದರೆ, ಉಡುಪಿ ಬಜಗೋಳಿಯ ನಿಶಾಂತ್ ಶೆಟ್ಟಿ ಗೌಡರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಕಟ್ಟುಮಸ್ತಾದ ದೇಹ. ಆದರೆ ಒಂದು ದಿನವೂ ಜಿಮ್ಮಿಗೆ ಹೋದವರಲ್ಲ. ಗದ್ದೆ, ಹಟ್ಟಿ, ತೆಂಗಿನ ತೋಟದಲ್ಲಿ ಕೆಲಸ, ಅಮ್ಮ ರುಚಿರುಚಿಯಾದ ತಿಂಡಿ ಮಾಡಿದರೂ ನಿಶಾಂತ್ ಅವರು ತಿನ್ನುವುದು ಕುಚ್ಚಿಲು ಅಕ್ಕಿ ಗಂಜಿ. ಅದಕ್ಕೆ ಉಪ್ಪಿನಕಾಯಿ ಮತ್ತು ಚಟ್ನಿ. ಗಂಜಿ ಊಟ ಮಾಡಿದರೆ ಮತ್ತೆ ಅಡಿಕೆ ತೋಟದಲ್ಲಿ ಕೆಲಸ ಮಾಡಲು ಹೊರಡುತ್ತಾರೆ. ಇದನ್ನೂ ಓದಿ: ಶ್ರೀನಿವಾಸ ಗೌಡ್ರನ್ನು ಮೀರಿಸಿದ ಮತ್ತೋರ್ವ ಕಂಬಳ ಓಟಗಾರ- ಉಡುಪಿಯಲ್ಲಿ ನಿಶಾಂತ್ ಶೆಟ್ಟಿ ಸಾಧನೆ
ಕಾರ್ಕಳದ ಬಜಗೋಳಿಯ ಜೋಗಿಬೆಟ್ಟು ಎಂಬಲ್ಲಿ ನಿಶಾಂತ್ ಶೆಟ್ಟಿ ಅವರ ಮನೆಯಿದೆ. ಮನೆಯ ಸುತ್ತಲೂ ತೋಟ ಇದೆ. ತೋಟದಲ್ಲಿ ಕೆಲಸ ಮಾಡುತ್ತಾ ಹಟ್ಟಿಯಲ್ಲಿ ದನಗಳ ಜೊತೆ ಇರುವ ನಿಶಾಂತ್ ಶೆಟ್ಟಿ ಅವರು ರಾತ್ರಿ ಬೆಳಗಾಗುವುದರ ಒಳಗೆ ಕಂಬಳ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗಿನ್ನೂ ಇಪ್ಪತ್ತೆಂಟು ವಯಸ್ಸಿನ ನಿಶಾಂತ್ ಶೆಟ್ಟಿ ಕಂಬಳ ಕೋಣಗಳನ್ನು ಓಡಿಸಲು ಆರಂಭಿಸಿ ಕೇವಲ ಆರು ವರ್ಷ ಆಗಿದೆ. ಆರು ವರ್ಷದಲ್ಲೇ ನಿಶಾಂತ್ ಶೆಟ್ಟಿ ಐವತ್ತಕ್ಕಿಂತಲೂ ಹೆಚ್ಚು ಮೆಡಲ್‍ಗಳನ್ನು ಬಾಚಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್
ದಕ್ಷಿಣ ಕನ್ನಡ ಜಿಲ್ಲೆಯ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಸದ್ಯ ಕಂಬಳ ಕ್ಷೇತ್ರದ ಸವ್ಯಸಾಚಿ. ಉಸೇನ್ ಬೋಲ್ಟ್ ಗಿಂತಲೂ ಒಂದು ಕೈ ಹೆಚ್ಚು ಮೀರಿ ಶ್ರೀನಿವಾಸ್ ಗೌಡ ದಾಖಲೆಗಳನ್ನು ಮಾಡಿದ್ದಾರೆ. ಶ್ರೀನಿವಾಸಗೌಡ ಕಿನ್ನಿಗೋಳಿಯ ಐಕಳದಲ್ಲಿ ಮಾಡಿದ ದಾಖಲೆಯನ್ನು ಉಡುಪಿಯ ನಿಶಾಂತ್ ಶೆಟ್ಟಿ ಒಂದು ವಾರದಲ್ಲಿ ಅಳಿಸಿ ಹಾಕಿದ್ದಾರೆ. ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಅತಿ ಹೆಚ್ಚು ವೇಗದಲ್ಲಿ ಓಡಿ ದಾಖಲೆಯನ್ನು ನಿರ್ಮಿಸಿದ್ದಾರೆ.
ನಿಶಾಂತ್ ಶೆಟ್ಟಿ ಕೃಷಿ ಮೂಲದಿಂದ ಬಂದವರು. ಎರಡು ಸಾವಿರ ಹದಿನಾರರ ಕಂಬಳ ಅಕಾಡೆಮಿ ನಡೆಸಿದ ತರಬೇತಿಯಲ್ಲಿ ಹತ್ತು ದಿವಸಗಳ ಓಟದ ತರಬೇತಿಯನ್ನು ಪಡೆದಿದ್ದಾರೆ. ಕೋಣಕ್ಕೆ ಆಹಾರ ಕೊಡುವುದು ಕೋಣಕ್ಕೆ ಹಗ್ಗ ಕಟ್ಟುವುದು, ನೇಗಿಲು ಬಿಗಿಯುವುದು, ಓಡಿಸುವುದು ಎಣ್ಣೆ ಹಚ್ಚುವುದು ಕೋಣಗಳ ಸಂಪೂರ್ಣ ಆರೈಕೆ ನಿಶಾಂತ್ ಶೆಟ್ಟಿ ಅವರಿಗೆ ಗೊತ್ತಿದೆ.
ಪ್ರಕೃತಿ ಕಂಬಳದ ಗದ್ದೆಯಲ್ಲಿ ಚಾಕಚಕ್ಯತೆ ಕೇವಲ ಓಡಿಸುವುದು ಮಾತ್ರ ಅಲ್ಲ. ಕೋಣಗಳನ್ನು ಓಡುವಂತೆ ಮಾಡುವ ಚಾಕಚಕ್ಯತೆಯೂ ಬೇಕು. ಈ ಎರಡೂ ನಿಶಾಂತ್ ಶೆಟ್ಟಿ ಅವರಲ್ಲಿದೆ. ಶ್ರೀನಿವಾಸ ಗೌಡ ಅವರು ಅದು ಮನೆತನದ ಎಂಟರಿಂದ ಹತ್ತು ಕೋಣಗಳನ್ನು ಓಡಿಸಿದರೆ ನಿಶಾಂತ್ ಕೇವಲ ಎರಡು ಜೊತೆ ಕೋಣಗಳನ್ನು ಓಡಿಸುತ್ತಾರೆ.
ಪ್ರತಿ ವರ್ಷ ಎರಡು ಯಜಮಾನರ ಕೋಣಗಳನ್ನು ಓಡಿಸುವ ನಿಶಾಂತ್ ಮುಂದಿನ ವರ್ಷ ಮತ್ತೆ ಬೇರೆ ಕೋಣಗಳತ್ತ ಮುಖ ಮಾಡುತ್ತಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೂರ ಐವತ್ತು ಜೊತೆ ಕೋಣಗಳು ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತವೆ. ಹದಿನೈದಕ್ಕಿಂತಲೂ ಹೆಚ್ಚು ಕೋಣದ ಯಜಮಾನರು ನಿಶಾಂತ್ ಶೆಟ್ಟಿ ಅವರಿಗೆ ಬೇಡಿಕೆಯನ್ನು ಇಡುತ್ತಾರೆ. ಆದರೆ ನಿಶಾಂತ್ ಶೆಟ್ಟಿ ಇಬ್ಬರ ನಾಲ್ಕು ಜೊತೆ ಕೋಣವನ್ನು ಮಾತ್ರ ಓಡಿಸುತ್ತಾರೆ.
ಮಾಂಸಾಹಾರ ಸೇವನೆಯಿಲ್ಲ:
ಕಾರ್ಕಳ ತಾಲೂಕು ಬಜಗೋಳಿಯ ಜೋಗಿ ಬೆಟ್ಟುವಿನ ನಿಶಾಂತ್ ಶೆಟ್ಟಿ ಅವರು ಜಾತಿಯಲ್ಲಿ ಬಂಟರು. ಶೇಕಡಾ ನೂರು ಬಂಟರು ನಾನ್ವೆಜ್ ಪ್ರಿಯರು ಎಂದರೆ ತಪ್ಪಲ್ಲ. ಆದರೆ ನಿಶಾಂತ್ ಶೆಟ್ಟಿ ಕಂಬಳಕ್ಕೋಸ್ಕರ ನಾನ್ವೆಜ್ ತ್ಯಾಗ ಮಾಡಿದ್ದಾರೆ. ತರಕಾರಿಯಲ್ಲಿರುವ ಶಕ್ತಿ ನಾನ್ವೆಜ್‍ನಲ್ಲಿ ಇಲ್ಲ ಎನ್ನುವುದು ಅವರ ಅನುಭವವಾಗಿದೆ.
ಬೆಳಗಿನ ಗಂಜಿ ಊಟ ಮಧ್ಯಾಹ್ನದ ಊಟ ರಾತ್ರಿಯ ಊಟ ಎಲ್ಲವನ್ನೂ ತರಕಾರಿಯ ಜೊತೆಯೇ ಮಾಡುತ್ತಾರೆ. ಮೀನು ಮತ್ತು ಕೋಳಿಯಲ್ಲಿ ಕೊಬ್ಬು ಮತ್ತು ಜಿಡ್ಡು ಇರೋದರಿಂದ ಚಾಕಚಕ್ಯತೆಯಿಂದ ಓಡಾಡಲು ಸಾಧ್ಯವಿಲ್ಲ ಮತ್ತು ಚುರುಕುತನ ಹೊಂದಲು ಸಾಧ್ಯವಿಲ್ಲ ಎನ್ನುವುದು ನಿಶಾಂತ್ ಶೆಟ್ಟಿ ಅವರ ಲೆಕ್ಕಾಚಾರವಾಗಿದೆ.
ದೊಡ್ಡ ಅಭಿಮಾನಿ:
ನಿಶಾಂತ್ ಶೆಟ್ಟಿ ಅವರ ತಂದೆ ಕೂಡ ಕಂಬಳದ ದೊಡ್ಡ ಅಭಿಮಾನಿಯಾಗಿದ್ದಾರೆ. ಹಾಗಂತ ಅವರು ಕ್ರೀಡೆಯ ಕಂಬಳದಲ್ಲಿ ಓಟವನ್ನು ಮಾಡಿಲ್ಲ. ಗದ್ದೆಗಳಲ್ಲಿ ತಮ್ಮ ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ನಿಶಾಂತ್ ಶೆಟ್ಟಿ ಕಂಬಳ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಕಂಡು ಅವರ ತಂದೆ ಹಿಗ್ಗಿ ಹೋಗಿದ್ದಾರೆ. ಮಗನ ಓಟ ಮತ್ತು ಆತನಿಗೆ ಕಂಬಳ ಕ್ಷೇತ್ರದಲ್ಲಿ ಸಿಕ್ಕಿರುವ ಹೆಸರು ಕಂಡು ಬಹಳ ಖುಷಿಪಟ್ಟಿದ್ದಾರೆ.
ನಿಶಾಂತ್ ಶೆಟ್ಟಿ ಅವರ ತಾಯಿ ತಾರಾ ಮನೆಯನ್ನು ನೋಡುವ ಜೊತೆ ಮಗನ ಕಂಬಳ ಕ್ಷೇತ್ರಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ. ಹೊತ್ತು ಹೊತ್ತಿಗೆ ಯಾವುದೇ ಆರೋಗ್ಯಕ್ಕೆ ಸಮಸ್ಯೆ ಆಗುವಂತಹ ಆಹಾರವನ್ನು ಅವರು ಕೊಡುವುದಿಲ್ಲ.
ಕಂಬಳ ಸೀಸನ್‍ನಲ್ಲಿ ಕಂಬಳ ಬಿಟ್ಟರೆ ನಿಶಾಂತ್ ಶೆಟ್ಟಿ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಕಂಬಳ ಕ್ಷೇತ್ರದಲ್ಲಿ ಹೆಸರು ಗಳಿಸಿದರೂ ನಿಶಾಂತ್ ಶೆಟ್ಟಿ ಅವರ ಜೀವನೋಪಾಯಕ್ಕೆ ಅರಸಿದ್ದು ಕೃಷಿ. ಅಡಕೆ ತೋಟ, ಭತ್ತದ ಬೇಸಾಯ ಇವರ ಪ್ರಮುಖ ಬೆಳೆಗಳು. ಹಸು ಸಾಕಣೆ ಮತ್ತು ಎಮ್ಮೆ ಸಾಕಣೆಯನ್ನು ಕೂಡ ಅವರು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.
– ವಿಧಾನಸೌಧದಲ್ಲಿ ಸಿಎಂ ಸನ್ಮಾನ – ಅರ್ಧ ಗಂಟೆ ತಡವಾಗಿ ಬಂತು 3 ಲಕ್ಷದ ಚೆಕ್
ಬೆಂಗಳೂರು: ಕಂಬಳ ವೀರ ಶ್ರೀನಿವಾಸ್‍ಗೌಡರನ್ನು ಕೆಲ ಸಚಿವರು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡ್ರಾ ಎನ್ನುವ ಪ್ರಶ್ನೆ ಎದ್ದಿದೆ. ಇವತ್ತು ಮಂಗಳೂರಿನ ಶ್ರೀನಿವಾಸ್‍ಗೌಡರನ್ನು ವಿಧಾನಸೌಧಕ್ಕೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಸನ್ಮಾನ ಮಾಡಿದರು.
ಸನ್ಮಾನದ ಬಳಿಕ ಚೆಕ್ ವಿತರಿಸುವಂತೆ ಸೂಚಿಸಿ ಸಿಎಂ ಅಲ್ಲಿಂದ ನಿರ್ಗಮಿಸಿದರು. ಆದರೆ ಚೆಕ್ ಬರುವುದು ತಡವಾದ ಕಾರಣ ಶ್ರೀನಿವಾಸ್ ಗೌಡರಿಗೆ ಖಾಲಿ ಕವರ್ ನೀಡಿ ಸಚಿವರಾದ ಸಿಟಿ ರವಿ ಮತ್ತು ಶಿವರಾಮ್ ಹೆಬ್ಬಾರ್ ಪೋಸ್ ನೀಡಿದರು.
ಇದು ಖಾಲಿ ಕವರ್ ಅಂತಾ ಕೈ ಸನ್ನೆಯಲ್ಲೇ ಸಿಟಿ ರವಿ ತಿಳಿಸುವ ಪ್ರಯತ್ನ ಮಾಡಿದರು. ಅರ್ಧಗಂಟೆ ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರೀನಿವಾಸ್ ಗೌಡರಿಗೆ 3 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು. ಇದನ್ನೂ ಓದಿ: ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್
ಈಗ ಹೋಗಲ್ಲ: ಕಂಬಳ ಸ್ಪರ್ಧೆಗಳು ಇರುವ ಕಾರಣ ಸದ್ಯಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ತೆರಳದೇ ಇರಲು ಶ್ರೀನಿವಾಸ್‍ಗೌಡ ತೀರ್ಮಾನಿಸಿದ್ದಾರೆ. ನಂಗೆ ಕಂಬಳದ ಗದ್ದೆಯೇ ಇಷ್ಟ ಎಂದಿದ್ದಾರೆ.
ಈ ಮೊದಲೇ ನಾನು ಕಂಬಳದಲ್ಲಿ ಭಾಗವಹಿಸುತ್ತೇನೆ ಎಂದು ಕೋಣದ ಯಜಮಾನರಿಗೆ ಮಾತು ನೀಡಿದ್ದೇನೆ. ಈ ಋತುವಿನ ಎರಡು ಕಂಬಳ ಬಾಕಿಯಿದೆ. ಈ ಸಂಬಂಧ ಈಗಾಗಲೇ ನಾನು ಒಪ್ಪಂದ ಮಾಡಿಕೊಂಡಿದ್ದೇನೆ. ಕಂಬಳದ ಋತು ಮುಗಿದ ಬಳಿಕ ಸಾಯ್ ಮೌಲ್ಯಮಾಪನಕ್ಕೆ ಹಾಜರಾಗುತ್ತೇನೆ ಎಂದಿದ್ದಾರೆ.
ವೇಣೂರು- ಪೆಂರ್ಬುಡ ‘ಸೂರ್ಯ-ಚಂದ್ರ’ ಜೋಡುಕರೆ ಕಂಬಳದಲ್ಲೂ ಶ್ರೀನಿವಾಸ ಗೌಡ ಅವರ ಮೂರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಗೌಡರು ಗೆದ್ದ ಪದಕಗಳ ಸಂಖ್ಯೆ 157ಕ್ಕೆ ಏರಿಕೆಯಾಗಿದೆ.
ಶ್ರೀನಿವಾಸರ ಪ್ರತಿಭೆಯನ್ನು ಗುರುತಿಸಿ, ಒಲಿಂಪಿಕ್ಸ್ ಗೆ ಅವರ ಕೌಶಲವನ್ನು ಅಣಿಗೊಳಿಸಲು ತರಬೇತಿ ನೀಡುವುದಾಗಿ ತಿಳಿಸಿರುವ ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರೆಣ್ ರಿಜಿಜು ಅವರಿಗೆ ನನ್ನ ಅಭಿನಂದನೆಗಳು. #Kambala@KirenRijiju#Olympics#Karnataka
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ ಅವರು ಕನ್ನಡದಲ್ಲಿ ಟ್ವೀಟ್ ಮಾಡಿ,”ಶ್ರೀನಿವಾಸರ ಪ್ರತಿಭೆಯನ್ನು ಗುರುತಿಸಿ, ಒಲಿಂಪಿಕ್ಸ್ ಗೆ ಅವರ ಕೌಶಲವನ್ನು ಅಣಿಗೊಳಿಸಲು ತರಬೇತಿ ನೀಡುವುದಾಗಿ ತಿಳಿಸಿರುವ ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರೆಣ್ ರಿಜಿಜು ಅವರಿಗೆ ನನ್ನ ಅಭಿನಂದನೆಗಳು. ಕಂಬಳ ಸ್ಪರ್ಧೆಯ ವೇಳೆ ಅಪರೂಪದ ಸಾಧನೆ ಮಾಡಿ, ಉಸೇನ್ ಬೋಲ್ಟ್ ನೊಂದಿಗೆ ಹೋಲಿಸಲ್ಪಡುತ್ತಿರುವ ಕರ್ನಾಟಕದ ಶ್ರೀನಿವಾಸ ಗೌಡ ಕೀರ್ತಿ ಪಡೆದಿದ್ದಾರೆ. ದೇಶದಲ್ಲಿ ಸಾಕಷ್ಟು ಸುಪ್ತ ಪ್ರತಿಭೆಗಳಿದ್ದು, ಅವರ ಪೂರ್ಣ ಸಾಮರ್ಥ್ಯದ ಸಾಕಾರಕ್ಕಾಗಿ ಅದನ್ನು ತಿಳಿಯುವ, ಮನ್ನಣೆ ನೀಡುವ, ಗೌರವಿಸುವ ಮತ್ತು ಪೋಷಿಸುವ ಅಗತ್ಯವಿದೆ” ಎಂದು ಬರೆದು ಶ್ಲಾಘಿಸಿದ್ದರು.
ಶ್ರೀನಿವಾಸ ಗೌಡ ಕಡು ಬಡತನದ ಕುಟುಂಬದಿಂದ ಬಂದಿದ್ದಾರೆ. ಮೂಡುಬಿದ್ರೆಯ ಮಿಜಾರಿನ ಅಶ್ವತ್ಥಪುರದ ನಿವಾಸಿಯಾಗಿರುವ ಶ್ರೀನಿವಾಸ ಗೌಡ, ಪರಿಶಿಷ್ಟ ವರ್ಗಕ್ಕೆ ಸೇರಿದ ಕುಡುಂಬಿ ಜನಾಂಗದ ವ್ಯಕ್ತಿ. ಆದರೆ,ಕಂಬಳದಲ್ಲಿ ಮಾಡಿದ ಸಾಧನೆ ಮಾತ್ರ ಶ್ರೀನಿವಾಸ ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಿದೆ. ಅತಿ ವೇಗದ ಓಟದ ದಾಖಲೆಯ ಉಸೇನ್ ಬೋಲ್ಟ್ ಮೀರಿಸುವ ಸಾಧನೆ ಮಾಡಿದ್ದಾಗಿ ಹೋಲಿಸಲಾಗುತ್ತಿದೆ.ಇಂಥ ಖ್ಯಾತಿ ಬಂದಿದ್ದರೂ, ಶ್ರೀನಿವಾಸ ಮಾತ್ರ ಎಂದಿನಂತೇ ಕಂಬಳದಲ್ಲಿತೊಡಗಿಸಿಕೊಂಡಿದ್ದಾರೆ. ಕಂಬಳ ಬಿಟ್ಟರೆ ಕಟ್ಟಡ ಕೆಲಸದ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.
ಶ್ರೀನಿವಾಸ ಗೌಡರ ಸಾಧನೆ ವಿಶ್ವದ ಗಮನ ಸೆಳೆದಿದ್ದರೂ, ಪದಕದ ಬೇಟೆ ನಿಂತಿಲ್ಲ. ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಮೂರು ವಿಭಾಗದಲ್ಲಿ ಮತ್ತೆ ಮೂರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಬಾರಿಯ ಕಂಬಳದ ಋತುವಿನಲ್ಲಿ ಸತತವಾಗಿ ಚಿನ್ನದ ಪದಕ ಗೆಲ್ಲುತ್ತಾ ಬಂದು ದಾಖಲೆ ಮಾಡಿದ್ದಾರೆ. ಈ ಬಾರಿ ಇನ್ನೆರಡು ಕಂಬಳ ಮಾತ್ರ ಉಳಿದಿದ್ದು, ನಾಲ್ಕು ಕೋಣಗಳ ಜೊತೆ ಓಡುವ ಶ್ರೀನಿವಾಸ ಗೌಡ ಚಿನ್ನಕ್ಕೆ ಲಗ್ಗೆಯಿಟ್ಟು ಹೊಸ ದಾಖಲೆ ನಿರ್ಮಿಸುವ ಇರಾದೆಯಲ್ಲಿದ್ದಾರೆ.
– ಸಿಎಂ ಯಡಿಯೂರಪ್ಪರಿಂದ ಸನ್ಮಾನ
– ಟ್ರ್ಯಾಕ್‍ನಲ್ಲಿ ಓಡಲ್ಲ, ಕಂಬಳದಲ್ಲೇ ಸಾಧನೆ
ಮಂಗಳೂರು: ಕರಾವಳಿಯಲ್ಲಿ ಈಗ ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಸರಿಗಟ್ಟಿದ ಕಂಬಳ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರದ್ದೇ ಹವಾ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಮೂರು ಚಿನ್ನವನ್ನು ಉಡಾಯಿಸಿದ ಶ್ರೀನಿವಾಸ್ ಭಾನುವಾರ ಕಮಾಲ್ ಮಾಡಿದರು.
ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕಂಬಳದಲ್ಲಿ ಶ್ರೀನಿವಾಸನ ಓಟ ನೋಡಲೆಂದೇ ಕಂಬಳ ಅಭಿಮಾನಿಗಳು ಆಗಮಿಸಿದರು. ಅದಕ್ಕೆ ಕಾರಣ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ವೇಗವನ್ನ ಹಿಂದಿಕ್ಕಿ ಪ್ರಸಿದ್ಧಿಯಾದ ಬಳಿಕ ಆಡುತ್ತಿರುವ ಮೊದಲನೇ ಕಂಬಳ. ಓಟದ ಬ್ರೇಕ್ ಸಿಕ್ಕಾಗ ಸಿನಿಮಾ ನಟರ ಜೊತೆ ಸೆಲ್ಪಿ ತೆಗೆಸಿಕೊಳ್ಳುವಂತೆ ಜನ ಮುಗಿಬಿದ್ದಿದ್ರು. ಶ್ರೀನಿವಾಸ ನಾಚುತ್ತಲೇ ಸೆಲ್ಫಿಗೆ ಪೋಸ್ ನೀಡುತ್ತಿದ್ರು. ಈ ಮಧ್ಯೆ ಕರಾವಳಿ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಕೋಣಗಳನ್ನು ಮಿಂಚಿನ ವೇಗದಲ್ಲಿ ಓಡಾಡಿಸುತ್ತಿದ್ರೆ ಶಿಳ್ಳೆ, ಚಪ್ಪಾಳೆಗಳ ಅಬ್ಬರವೇ ತುಂಬಿ ಹೋಗುತ್ತಿತ್ತು. ಹೀಗಿರೋವಾಗಲೇ ಆಟದ ಕಣಕ್ಕೆ ಎಂಟ್ರಿ ಕೊಟ್ಟ ಶ್ರೀನಿವಾಸ್ ಭರ್ಜರಿಯಾಗಿ ಓಡಿ ಎಲ್ಲರನ್ನು ರಂಜಿಸಿದ್ರು. ಇದನ್ನೂ ಓದಿ: ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ
ಶ್ರೀನಿವಾಸ್ ಗೌಡ ಅವರ ಈ ರೀತಿಯ ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳೂ ಅವರ ಸಾಧನೆಯನ್ನು ಗುರುತಿಸಿದೆ. ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ನಡೆಸಲಿದ್ದಾರೆ. ಶ್ರೀನಿವಾಸ್ ಅವರು ಕಟ್ಟಡ ಕಾರ್ಮಿಕರಾಗಿರೋದ್ರಿಂದ ಕಾರ್ಮಿಕ ಮತ್ತು ಕ್ರೀಡಾ ಇಲಾಖೆಗಳು ಜಂಟಿಯಾಗಿ ಸನ್ಮಾನ ಏರ್ಪಡಿಸಿಕೊಂಡಿದ್ದು ಎರಡು ಇಲಾಖೆಯ ಸಚಿವರುಗಳು ಭಾಗವಹಿಸಿಲಿದ್ದಾರೆ.
ದೆಹಲಿಗೆ ಹೋಗಿ ಕೇಂದ್ರ ಕ್ರೀಡಾ ಸಚಿವರ ಅನ್ನು ಭೇಟಿಯಾಗುವ ಬಗ್ಗೆ ಕೂಡ ಇಂದು ಚರ್ಚೆಯಾಗಲಿದೆ. ಆದರೆ ತನಗೆ ಟ್ರ್ಯಾಕ್ ನಲ್ಲಿ ಓಡಲು ಸಾಧ್ಯವಿಲ್ಲ, ನಾನೇನಿದ್ದರೂ ಕಂಬಳ ಗದ್ದೆಯಲ್ಲೇ ಕೋಣಗಳ ಜೊತೆ ಓಡುವವನು. ಹೀಗಾಗಿ ಮುಂದೆಯೂ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ವಿನಯದಿಂದಲೇ ಶ್ರೀನಿವಾಸ ಗೌಡ ಹೇಳುತ್ತಾರೆ. ಇದನ್ನೂ ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ
ಶ್ರೀನಿವಾಸ ಗೌಡ ಕಂಬಳದ ಚಿನ್ನದ ಮಗ:
28 ವರ್ಷ ವಯಸ್ಸಿನ ಶ್ರೀನಿವಾಸ್ ಗೌಡ ಅವರು ತನ್ನ 18ನೇ ವಯಸ್ಸಿನಲ್ಲಿ ಕಂಬಳದ ಓಟಗಾರನಾಗಬೇಕೆಂದು ಬಂದಿದ್ದು, ಅಂದಿನಿಂದ ನಿಷ್ಠೆಯಿಂದ ಕಂಬಳವನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಅವರು ಓಡಿಸುವ ಕೋಣಗಳ ಮಾಲಕರಿಗೂ ಶ್ರೀನಿವಾಸ ಎಂದರೆ ಅಚ್ಚುಮೆಚ್ಚು. ಆತ ಕಂಬಳದ ಚಿನ್ನದ ಮಗನಾಗಿರೋದ್ರಿಂದ ಕಂಬಳದಲ್ಲೇ ಮುಂದುವರಿದರೆ ಒಳ್ಳೆಯದು. ಜೊತೆಗೆ ಇನ್ನೂ ಎತ್ತರಕ್ಕೆ ಏರಿ ದೇಶಕ್ಕೆ ಹೆಸರು ತರೋದಾದ್ರೂ ಹೆಮ್ಮೆಯ ವಿಚಾರ ಎಂದು ಶ್ರೀನಿವಾಸ ಓಡಿಸುವ ಕಂಬಳ ಕೋಣದ ಮಾಲಕ ಹರ್ಷವರ್ಧನ್ ಪಡಿವಾಳ್ ಹಾಗೂ ಇರುವೈಲು ಪಣಿಲ ಬಾಡು ಪೂಜಾರಿ ಹೇಳಿದ್ದಾರೆ.
ಮನೆ ಬಾಗಿಲಿಗೆ ಬಂದ ಅಧಿಕಾರಿಗಳು:
ಶ್ರೀನಿವಾಸ್ ಗೌಡ ಒಬ್ಬ ಕಟ್ಟಡ ನಿರ್ಮಾಣ ಕಾರ್ಮಿಕ. ಹೀಗಾಗಿ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಗಾಗಿ ಅವರ ಮನೆಗೆ ನಿನ್ನೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪಡೆದುಕೊಂಡರು. ಇಲಾಖೆಯಿಂದ ಸಿಗಬೇಕಾದ ಸವಲತ್ತಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸದ್ಯ ದೇಶವೇ ಈಗ ಶ್ರೀನಿವಾಸ ಗೌಡರ ಕಡೆ ನೋಡುತ್ತಿದ್ದು ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಓಡುತ್ತಾರಾ ಇಲ್ವಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಒಟ್ಟಿನಲ್ಲಿ ಶ್ರೀನಿವಾಸ ಗೌಡರ ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.