Tag: ಶ್ರೀನಿವಾಸ್

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತವರು ಹಿಮಾಚಲ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿಲ್ಲ, ಇದು ಜನ ಸಾಮಾನ್ಯರು ನೀಡಿದ ಬೆಲೆ ಏರಿಕೆಯ ಉಡುಗೊರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಹೇಳಿದ್ದಾರೆ.

    ಉಪ ಚುನಾವಣೆ ಫಲಿತಾಂಶದ ಬಳಿಕ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೀಪಾವಳಿಗೆ ದೇಶಾದ್ಯಂತ ಜನರು ಸೋಲಿನ ಉಡುಗೊರೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಿದರು.

    ಹಿಮಾಚಲ ಪ್ರದೇಶದಲ್ಲಿ ಮೂರು ವಿಧಾನಸಭೆ, ಒಂದು ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ ಇಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. ಕಾಂಗ್ರೆಸ್ ಹಿಮಾಚಲ ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ತಮ ಸಾಧನೆ ಮಾಡಿದೆ. ರಾಜಸ್ಥಾನದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು.

    ಕೋಮುವಾದ ದೇಶದ ಜನರಲ್ಲಿ ಒಡಕು ಉಂಟು ಮಾಡಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿಯ ಕೋಮುವಾದದ ಸ್ಟಾಟರ್ಜಿ ವರ್ಕೌಟ್ ಆಗಿಲ್ಲ. ಹೀಗಾಗಿ ಹಾನಗಲ್ ನಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದೆ 2023 ರ ಚುನಾವಣೆಯಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದ್ದು ಸರ್ಕಾರ ರಚನೆ ಮಾಡಲಿದೆ ಎಂದರು. ಇದನ್ನೂ ಓದಿ: ಸಿಂದಗಿಯಲ್ಲಿ ಲಿಂಗಾಯತರು ಮತ ಹಾಕಿಲ್ಲ, ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿ ಗೆದ್ದಿವೆ: ಹೆಚ್‍ಡಿಡಿ ಆರೋಪ

    ಸಿಂದಗಿಯಲ್ಲಿ ಬಿಜೆಪಿ ಹಣ ಖರ್ಚು ಮಾಡಿ ಗೆದ್ದಿದೆ, ಕ್ಷೇತ್ರದಲ್ಲಿ ಹಣ ಹಂಚಿರುವುದು ಬಹಿರಂಗ ಸತ್ಯ ಮುಂದಿನ ದಿನಗಳಲ್ಲಿ ಇದು ನಡೆಯಲ್ಲ. ಒಂದೇ ತಿಂಗಳಲ್ಲಿ 36 ಬಾರಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ. ಜನರು ಪರ್ಯಾಯ ಬಯಸಿದ್ದು ಮುಂದೆ ಕಾಂಗ್ರೆಸ್ ಗೆ ಉತ್ತಮ ದಿನಗಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕುಮಾರಸ್ವಾಮಿ ಅವರದ್ದು ಮಾಟ ಮಂತ್ರ ಮಾಡೋ ಕುಟುಂಬ: ಎಸ್.ಆರ್ ಶ್ರೀನಿವಾಸ್

    ಕುಮಾರಸ್ವಾಮಿ ಅವರದ್ದು ಮಾಟ ಮಂತ್ರ ಮಾಡೋ ಕುಟುಂಬ: ಎಸ್.ಆರ್ ಶ್ರೀನಿವಾಸ್

    ತುಮಕೂರು: ಹೊಟ್ಟೆಗೆ ಏನ್ ತಿಂತಿಯಾ, ಮಾಟ ಮಂತ್ರ ಮಾಡೋ ಕುಟುಂಬ ನಿನ್ನದು. ನಾಚಿಕೆ ಆಗಲ್ವಾ ನಿನಗೆ ಎಂದು ಏಕ ವಚನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ.

    ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮದು ನಾಲಿಗೆನಾ. ಬಾಯಿ ಬಿಟ್ಟರೆ ಅಸತ್ಯ. ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತಿಯಾ. ಎಂಥಾ ಆಸಾಮಿಗಳು ಇವರು. 20 ವರ್ಷ ಪಕ್ಷ ಕಟ್ಟಿದ್ದ ನನ್ನ ಆಚೆಗೆ ಹಾಕ್ತಿಯಾ. ಗಣಿ ದುಡ್ಡು ಬಂತು ಅಂತೇಳಿ. ನಿನಗೆ ಮಾನಮರ್ಯಾದೆ ಇಲ್ಲ. ಮೊಸಳೆ ಕಣ್ಣೀರಿನ ಮೂಲಕ ಜನರನ್ನು ತಲುಪಲು ಇನ್ನೂ ಆಗಲ್ಲ ಎಂದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

    ನನಗೆ ಯಾರೂ ದಿಕ್ಕಿಲ್ಲ. ಕಾಂಗ್ರೆಸ್‍ನವರೇ ಈಗ ನನಗೆ ದಿಕ್ಕು. ಸಿದ್ದರಾಮಣ್ಣ ಜೊತೆಗೆ ಕರೆದುಕೊಂಡು ಹೋದರೆ ಅವರ ಜೊತೆ ಹೋಗುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ: ಈಶ್ವರಪ್ಪ

    ಜೆಡಿಎಸ್‍ನಿಂದ ಹೊರಬಿದ್ದಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಎಂಎಲ್‍ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್ ಸೇರುವುದು ಫಿಕ್ಸ್ ಆಗಿದೆ. ಖಾಸಗಿ ಆಸ್ಪತ್ರೆ ಉದ್ಘಾಟನೆಗೆಂದು ಗುಬ್ಬಿಗೆ ಬಂದಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸಮಾವೇಶ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಜೊತೆ ಎಸ್‍ಆರ್ ಶ್ರೀನಿವಾಸ್ ಮತ್ತು ಬೆಮೆಲ್ ಕಾಂತರಾಜು ಕಾಣಿಸಿಕೊಂಡರು. ಎಸ್‍ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ರೆ ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಎಂದು ಸಿದ್ರಾಮಯ್ಯ ಘೋಷಿಸಿದರು. ನೀವಿಬ್ರು ಪಕ್ಷಕ್ಕೆ ಬಂದ್ರೆ ಗೌರವಯುತವಾಗಿ ನಡೆಸಿಕೊಳ್ತೀವಿ ಎಂದು ಆಫರ್ ನೀಡಿದರು.

  • ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗೋಲ್ಲ – ಉಲ್ಟಾ ಹೊಡೆದ ಶ್ರೀನಿವಾಸ್

    ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗೋಲ್ಲ – ಉಲ್ಟಾ ಹೊಡೆದ ಶ್ರೀನಿವಾಸ್

    ತುಮಕೂರು: ಜೆಡಿಎಸ್ ಪಕ್ಷಕ್ಕೆ ಬಹುಮತ ಬರುವುದಿಲ್ಲ. ನಮ್ಮ ನಾಯಕರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಇದೀಗ ತಾವು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿಯೂ ಬಾಯಿ ತಪ್ಪಿ ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಹೇಳಿಲ್ಲ. ಆದರೂ ಯಾಕೆ ಈ ವಿಚಾರ ಚರ್ಚೆ ಆಗುತ್ತಿದೆ ಎಂದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಇತ್ತೀಚೆಗೆ ಜೆಡಿಎಸ್ ಪಕ್ಷದ ವಿರುದ್ಧವೇ ನಿರಂತರವಾಗಿ ಹೇಳಿಕೆ ಕೊಡುತ್ತಿದ್ದ ಶ್ರೀನಿವಾಸ್, ಕಾಂಗ್ರೆಸ್ ನಾಯಕರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಈ ಅವಧಿಯಲ್ಲಿ ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೋದರೂ ಹೋಗಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಆದರೀಗ ತಾವು ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: KRS ಬಿರುಕು ಬಿಟ್ಟಿಲ್ಲ, ಸುಮಲತಾ, ಕುಮಾರಸ್ವಾಮಿಯವರದ್ದು ಬೇರೆನೋ ಅಜೆಂಡಾ ಇದೆ: ಆರ್.ಅಶೋಕ್

     

  • ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ

    ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ

    ಚಿತ್ರದುರ್ಗ: ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.

    ಆಗ್ನೇಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಆದೇಶ ಹೊರಡಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಡಿ.ಟಿ. ಶ್ರೀನಿವಾಸ್ ಅವರು ಬಿಜೆಪಿ ಹಿಂದುಳಿದ ಮೋರ್ಚಾ ಉಪಾದ್ಯಕ್ಷರಾಗಿದ್ದರು. ಎಂಎಲ್‍ಸಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶ್ರೀನಿವಾಸ್ ಕಣದಲ್ಲಿದ್ದರು.

  • ಹೊಸ ಬಾಳಿಗೆ ಎಂಟ್ರಿ ಕೊಟ್ಟ ಸುಮನಾ ಕಿತ್ತೂರು

    ಹೊಸ ಬಾಳಿಗೆ ಎಂಟ್ರಿ ಕೊಟ್ಟ ಸುಮನಾ ಕಿತ್ತೂರು

    ಬೆಂಗಳೂರು: ಕನ್ನಡದ ಎದೆಗಾರಿಕೆಯ ನಿರ್ದೇಶಕಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿದ್ದ ಸುಮನಾ ಕಿತ್ತೂರ್ ಕೊರೊನಾ ಕಾಲದಲ್ಲಿ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.

    ಸುಮನಾ ಕಿತ್ತೂರು ಕೆಲ ಸಮಯದಿಂದ ಪಾಂಡಿಚೇರಿಯಲ್ಲಿ ನೆಲೆಸಿದ್ದು ಅಲ್ಲಿಯೇ ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. ಈಗ ಸುಮನಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆಯಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸುಮನಾ ಅವರು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸರಳವಾಗಿ ನಮ್ಮ ವಿವಾಹ ನಡೆದಿದೆ. ಏಪ್ರಿಲ್ ನಲ್ಲಿ ಲಾಕ್‍ಡೌನ್ ತೆರವಾದ ಬಳಿಕ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯ ಪದ್ದತಿಯ ಪ್ರಕಾರ ವಿವಾಹವಾಗಬೇಕೆಂದು ಬಯಸಿದ್ದೆವು. ಆದರೆ ಈ ಆಸೆ ಈ ಸಮಯದಲ್ಲಿ ಕಷ್ಟ ಸಾಧ್ಯವಾಗಿದ್ದರಿಂದ ಪಾಂಡಿಚೇರಿಯಲ್ಲಿ ಸರಳವಾಗಿ ನಮ್ಮ ವಿವಾಹ ನಡೆಯಿತು ಎಂದು ತಿಳಿಸಿದ್ದಾರೆ.

    ಸುಮನಾ ಅವರ ಗೆಳೆಯ ಶ್ರೀನಿವಾಸ್ ಅವರ ಕುಟುಂಬ ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿ ನೆಲೆಸುವ ನಿರ್ಧಾರವನ್ನು ದಂಪತಿ ಮಾಡಿದ್ದಾರೆ.

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ ಜನಿಸಿದ ಇವರು ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ.

  • ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಬೆಂಗಳೂರು: ಕರಾವಳಿಯ ಕಂಬಳ ವೀರ ಶ್ರೀನಿವಾಸ್ ಗೌಡಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಕ್ರೀಡಾ ಸಚಿವರು, ಉಪರಾಷ್ಟ್ರಪತಿ ಸೇರಿದಂತೆ ಆನೇಕರು ಪ್ರಶಂಸೆಯ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಕಂಬಳ ವೀರನ ಶರವೇಗದ ಓಟ ತಿಳಿದು ಕೇಂದ್ರ ಸಚಿವರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

    ಓಟಗಾರ ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದ ಮೂಡು ಬಿದಿರೆಯ ಕಂಬಳ ವೀರನಿಗೆ ಒಲಂಪಿಕ್‍ನಲ್ಲಿ ಭಾಗವಹಿಸಲು ಪೂರ್ವ ತಯಾರಿಯಾಗಿ ಕೋಚಿಂಗ್ ನೀಡುವ ಮಾತುಗಳು ಕೇಳಿ ಬರುತ್ತಿವೆ.

    ಇದರ ಮಧ್ಯದಲ್ಲಿ ವಿಶ್ವ ದಾಖಲೆ ಮಾಡಿರುವ ಕಂಬಳ ವೀರನಿಗೆ ರಾಜ್ಯ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ. ಈ ಹಿನ್ನೆಲೆ ಇಲಾಖೆಯ ಹಿರಿಯ ಅಧಿಕಾರಿಗಳು ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೂಡುಬಿದರೆಯ ಮಿಯಾರಿನ ಯುವಕ ಶ್ರೀನಿವಾಸ್ ಗೌಡ ಅವರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ ಎಂಬುದನ್ನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಕಂಬಳದ ಓಟದಲ್ಲಿ 145.5 ಮೀ ದೂರವನ್ನು 13.63 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಶ್ರೀನಿವಾಸ ಗೌಡ ಮಾಡಿರುವ ಸಾಧನೆ ದೇಶದ ಗಮನ ಸೆಳೆದಿದೆ. ಅಲ್ಲದೆ ಕಂಬಳ ಗದ್ದೆಯಲ್ಲಿ ಕೋಣಗಳೊಂದಿಗೆ 100 ಮೀ ದೂರವನ್ನು 9.55 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಸಾಧನೆ ಮಾಡಿದ್ದಾರೆ. ಕ್ರೀಡಾ ಪೋತ್ಸಾಹ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆಯು ಯಾವ ರೀತಿ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

  • ಫೆಬ್ರವರಿ 7ಕ್ಕೆ ‘ಬಿಲ್‍ಗೇಟ್ಸ್’ ಎಂಟ್ರಿ!

    ಫೆಬ್ರವರಿ 7ಕ್ಕೆ ‘ಬಿಲ್‍ಗೇಟ್ಸ್’ ಎಂಟ್ರಿ!

    ‘ಬಿಲ್ ಗೇಟ್ಸ್’ ಈ ಹೆಸರು ಕೇಳಿದಾಕ್ಷಣ ಅಮೇರಿಕಾದ ಸಿರಿವಂತ, ಉದ್ಯಮಿ ನೆನಪಿಗೆ ಬರ್ತಿದ್ರು. ಆದರೆ ಈಗ ಇದೇ ಹೆಸರಿನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡ್ತಿರೋ ಬಿಲ್‍ಗೇಟ್ಸ್ ಸಿನ್ಮಾ ನೆನಪಾಗತ್ತೆ. ಚಂದನವನದಲ್ಲಿ ಇಷ್ಟು ದಿನ ತಮ್ಮ ಕಚಗುಳಿಯ ಕಾಮಿಡಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗೂ ಶಿಶಿರ್ ಶಾಸ್ತ್ರಿ ಈ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಈಗಾಗಲೇ ರಿಲೀಸ್ ಆದ ಟೀಸರ್ ಎಲ್ಲೆಡೆ ಸದ್ದು ಮಾಡೋ ಮೂಲಕ ಸಿನೆಮಾದ ಯಮಲೋಕದ ಅರಮನೆಯ ಅನಾವರಣದ ಅದ್ದೂರಿ ಸೆಟ್ ನಿಂದ ಎಲ್ಲರ ಚಿತ್ತ ತನ್ನತ್ತ ಹರಿಯುವಂತೆ ಮಾಡಿತ್ತು.

    ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರೋ ಬಿಲ್‍ಗೇಟ್ಸ್ ಸಿನಿಮಾ ಪೋಸ್ಟರ್ ನಿಂದಾಗಿಯೇ ದೊಡ್ಡ ಹೈಪ್ ಸೃಷ್ಟಿಸಿತ್ತು. ಕಾಮಿಡಿ ಕಥಾ ಹಂದರ ಹೊಂದಿರೋ ಸಿನಿಮಾ ಇದಾಗಿದ್ದು, ಈಗಾಗಲೇ ‘ಬಿಲ್‍ಗೇಟ್ಸ್’ ಸೆನ್ಸಾರ್ ಪರೀಕ್ಷೆ ಮುಗಿಸಿ, ಫೆಬ್ರವರಿ 7ಕ್ಕೆ ಪ್ರೇಕ್ಷಕರೆದುರು ಬರಲಿದೆ.

    ಚಿತ್ರದಲ್ಲಿ ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜನಾರ್ಧನ್, ವಿ.ಮನೋಹರ್ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಒಟ್ಟಾರೆ ಸಿನೆಮಾ ನೋಡಲು ಕೂತ ಸಿನಿಪ್ರೇಕ್ಷಕನಿಗೆ ಎಲ್ಲೂ ಬೋರಾಗದಂತೆ ನೋಡಿಕೋಳ್ಳೋ ಎಲಿಮೆಂಟ್ಸ್ ಜೊತೆ ಬರ್ತಿರೋ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಏನಂತಾರೆ ಅನ್ನೋದನ್ನ ರಿಲೀಸ್ ಬಳಿಕವೇ ನೋಡ್ಬೇಕಿದೆ.

  • ‘ಬಿಲ್‍ಗೇಟ್ಸ್’ನಲ್ಲಿದೆ ಯಮಲೋಕದ ಅರಮನೆಯ ವೈಭವ

    ‘ಬಿಲ್‍ಗೇಟ್ಸ್’ನಲ್ಲಿದೆ ಯಮಲೋಕದ ಅರಮನೆಯ ವೈಭವ

    ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‍ವುಡ್ ನಲ್ಲಿ ಭಾರೀ ಕುತೂಹಲ ಹಾಗು ನಿರೀಕ್ಷೆ ಮೂಡಿಸುವ ಟೈಟಲ್‍ನ ಚಿತ್ರಗಳು ಬರ್ತಿವೆ. ಇಂತಹ ಚಿತ್ರಗಳಲ್ಲಿ ‘ಬಿಲ್‍ಗೇಟ್ಸ್’ ಸಹ ಒಂದು. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಸ್ನೇಹಿತರೆಲ್ಲರು ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಡ್ಯ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಕಾಮಿಡಿ ಸ್ಟಾರ್ ಚಿಕ್ಕಣ್ಣ ಹಾಗೂ ಶಿಶಿರ್ ಶಾಸ್ತ್ರಿ ಕಾಂಬಿನೇಷನ್‍ನ ನಾಯಕತ್ವದ ಈ ಚಿತ್ರಕ್ಕೆ ಹೆಸರಿಗೆ ತಕ್ಕಂತೆ ದೊಡ್ಡ-ಡೊಡ್ಡ ಅದ್ದೂರಿ ಸೆಟ್ ನಿರ್ಮಿಸಿ, ಕಲ್ಪನೆಯಂತೆ ಯಮಲೋಕದ ಅರಮನೆಯ ಅದ್ದೂರಿತನವನ್ನು ತೋರಿಸಲಾಗ್ತಿದೆ ಅಂತೆ. ಇನ್ನು ಈ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಕೆಜಿಎಫ್ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಸ್ಯಾಂಡಲ್‍ವುಡ್‍ನ ಪ್ರಖ್ಯಾತ ಕಲಾ ನಿರ್ದೇಶಕ ಶಿವಕುಮಾರ್ ಅವರು ಹೊತ್ತು ಇದರ ಜಲಕ್ ಟೀಸರ್ ನಲ್ಲೇ ಗೊತ್ತಾಗುತ್ತೆ.

    ‘ಬಿಲ್‍ಗೇಟ್ಸ್’ನಲ್ಲಿ ಕುರಿ ಪ್ರತಾಪ್, ರಾಜಶೇಖರ್, ರಶ್ಮಿತಾ, ವಿ ಮನೊಹರ್, ಅಕ್ಷರ ರೆಡ್ಡಿ, ಬ್ಯಾಂಕ್ ಜನಾರ್ದನ್, ಗಿರಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರವು ಅದ್ಭುತವಾಗಿ ಮೂಡಿ ಬಂದಿದ್ದು, ಫೆಬ್ರವರಿ 7ಕ್ಕೆ ಬಿಡುಗಡೆಯಾಗಲು ರೆಡಿಯಾಗಿದೆ. ಅಂತೂ ಇಂತೂ ಕಾಮಿಡಿ ಕೌಟುಂಬಿಕ ಸಿನಿಮಾವಾದ ‘ಬಿಲ್‍ಗೇಟ್ಸ್’ ಅನ್ನು ಎಲ್ಲಾ ವರ್ಗದವರು ಕುಳಿತು ನೋಡುವಂತಿದ್ದು, ಈ ಮನೋರಂಜನೆಯ ಊಟಕ್ಕೆ ನೀವು ಫೆಬ್ರವರಿ 7ರ ತನಕ ಕಾಯಲೇಬೇಕು.

  • ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್‍ಗೇಟ್ಸ್ ಫೆ.7ಕ್ಕೆ ರಿಲೀಸ್

    ಚಿಕ್ಕಣ್ಣ ಕಾಮಿಡಿ ಹೂರಣ ತುಂಬಿರೋ ಬಿಲ್‍ಗೇಟ್ಸ್ ಫೆ.7ಕ್ಕೆ ರಿಲೀಸ್

    ಕಾಮಿಡಿ ಕಿಂಗ್ ಚಿಕ್ಕಣ್ಣ ಒಂದು ಸಿನಿಮಾದಲ್ಲಿದ್ದಾರೆ ಅಂದ್ರೆ ಅಲ್ಲಿ ನಗುವಿಗೇನು ಬರವಿಲ್ಲ. ಸ್ಕೀನ್ ಮೇಲೆ ಬಂದಾಗಲೆಲ್ಲ ತಮ್ಮ ಡಿಫರೆಂಟ್ ಮ್ಯಾನರಿಸಂ ಹಾಗೂ ಪಂಚ್ ಡೈಲಾಗ್‍ಗಳಿಂದ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಇನ್ನು ಇಡೀ ಸಿನಿಮಾ ಪೂರ್ತಿ ಅವ್ರೆ ನಾಯಕ ನಟನಾಗಿ ಇರ್ತಾರೆ ಅಂದ್ರೆ ಕೇಳೋದೇ ಬೇಡ ಅಲ್ಲಿ ನಗೆಯ ಸುಗ್ಗಿಯೇ ಹುಟ್ಟಿಕೊಳ್ಳುತ್ತೆ. ಹೌದು. ಚಿಕ್ಕಣ್ಣ ಸ್ಯಾಂಡಲ್‍ವುಡ್ ಒನ್ ಆಫ್ ದಿ ಮೋಸ್ಟ್ ಬ್ಯುಸಿಯೆಸ್ಟ್ ಕಾಮಿಡಿ ಆಕ್ಟರ್. ಸ್ಟಾರ್ ನಟರಷ್ಟೇ ಬ್ಯುಸಿಯಾಗಿರೋ ಚಿಕ್ಕಣ್ಣ ಬಿಲ್ ಗೇಟ್ಸ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

    ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ ಕಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿ ಸ್ಟಾರ್ ರವಿಚಂದ್ರನ್ ಮೆಚ್ಚಿಕೊಂಡಿದ್ದು ಯಮನ ಅವತಾರ ತಾಳೀರೋ ಚಿಕ್ಕಣ್ಣನನ್ನು ನೋಡೋದೆ ಒಂದು ಗಮ್ಮತ್ತು. ಚಿತ್ರದ ಸ್ಯಾಂಪಲ್‍ಗಳು ಟಾಕ್ ಕ್ರಿಯೇಟ್ ಮಾಡಿದ್ದು ಕಿರುತೆರೆಯ ಶಿಶಿರ್ ಶಾಸ್ತ್ರಿ ಕೂಡ ಚಿಕ್ಕಣ್ಣ ಜೊತೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಬಿಲ್ ಗೇಟ್ಸ್ ಕಾಮಿಡಿ ಎಂಟರ್ ಟೈನ್ಮೆಂಟ್ ಚಿತ್ರವಾಗಿದ್ದು, ಗಂಭೀರವಾದ ವಿಷಯವೊಂದನ್ನು ಕಾಮಿಕ್ ಆಗಿ ಪ್ರೇಕ್ಷಕರ ಮನಮುಟ್ಟಿಸುವ ಕೆಲಸವನ್ನು ನಿರ್ದೇಶಕ ಶ್ರೀನಿವಾಸ್.ಸಿ ಮಾಡಿದ್ದಾರೆ. ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಿರ್ದೇಶಕ ಶ್ರೀನಿವಾಸ್ ಅವ್ರ ಸ್ನೇಹಿತರು ಬಂಡವಾಳ ಹೂಡಿದ್ದಾರೆ. ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ತೆರೆ ಮೇಲೆ ಯಾವ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ ಕಾದು ನೋಡಬೇಕು.

  • ತುಮಕೂರಿನ ಕೀರ್ತಿ ಹೆಚ್ಚಿಸಿದ ಪ್ರೊ.ಶ್ರೀನಿವಾಸ್

    ತುಮಕೂರಿನ ಕೀರ್ತಿ ಹೆಚ್ಚಿಸಿದ ಪ್ರೊ.ಶ್ರೀನಿವಾಸ್

    ತುಮಕೂರು: ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಾಲ್ವರ ತಂಡ ಎರಡು ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಮತ್ತು ವ್ಯಕ್ತಿಗತವಾಗಿ ಕಂಚಿನ ಪದಕ ಪಡೆದು ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

    ಕೇರಳದ ಕೋಝಿಕೋಡ್‍ನಲ್ಲಿ ಜನವರಿ 10 ರಿಂದ 12ರವರೆಗೆ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಡೆದಿದೆ. ಇದರಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯಿಂದ ಬಿ.ಶ್ರೀನಿವಾಸ್ (ತುಮಕೂರು), ಜೋಷಿ, ಪದ್ಮನಾಭ, ರಾಜಮೋನಿ (ದಕ್ಷಿಣ ಕನ್ನಡ) ಅವರು 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

    ವಿಶೇಷವಾಗಿ 400 ಮೀಟರ್ ಅಡೆತಡೆ ಓಟ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತುಮಕೂರಿನ ಬಿ.ಶ್ರೀನಿವಾಸ್ ಅವರು ಕಂಚಿನ ಪದಕವನ್ನು ಪಡೆದು ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶ್ರೀನಿವಾಸ್ ಅವರು ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯವರಾಗಿದ್ದು, ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಇವರೆಲ್ಲರೂ ಮಾರ್ಚ್ ತಿಂಗಳಲ್ಲಿ ಥೈಲ್ಯಾಂಡ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.