Tag: ಶ್ರೀನಿವಾಸ್ ರೆಡ್ಡಿ

  • ಭಾರತಕ್ಕೂ ಮೊದಲ ಕೋವಿಡ್ ಗುಳಿಗೆ ಭಾಗ್ಯ

    ಭಾರತಕ್ಕೂ ಮೊದಲ ಕೋವಿಡ್ ಗುಳಿಗೆ ಭಾಗ್ಯ

    – 8ಕೋಟಿ ಗುಳಿಗೆ ಉತ್ಪಾದಿಸುವ ಗುರಿ
    – ಅಮೆರಿಕಾ ಕಂಪನಿ ಉತ್ಪಾದಿಸುವ ಮೊಲ್ನುಪಿರಾವಿರ್

    ನವದೆಹಲಿ: ಕೊರೊನಾ ಚಿಕಿತ್ಸೆಗೆ ಅಭಿವೃದ್ಧಿ ಪಡಿಸಲಾದ ವಿಶ್ವದ ಮೊದಲ ಗುಳಿಗೆ ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ.

    ಅಮೆರಿಕ ಮೂಲದ ಮೆರ್ಕ್ ಆ್ಯಂಡ್ ಕೋ ಅಭಿವೃದ್ಧಿಪಡಿಸಿದ ಮೋಲ್ನುಪಿರಾವಿರ್ ಗುಳಿಗೆ ಭಾರತದಲ್ಲೂ ಉತ್ಪಾದನೆಗೆ ಅನುಮತಿ ಕೋರಿ ಹೈದರಾಬಾದ್ ಮೂಲದ ಆಪ್ಪಿ ಮಸ್ ಫಾರ್ಮ್, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.

    ಈ ಗುಳಿಗೆಯ ತುರ್ತು ಬಳಕೆಗೆ ಅನುಮೋದನೆ ದೊರೆತರೆ ಕಂಪನಿ ತಿಂಗಳಲ್ಲಿ 8 ಕೋಟಿ ಗುಳಿಗೆಯನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆ ಅಂದಾಜು 30 ರೂಪಾಯಿ ದರ ಇರಲಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ:  ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    CORONA

    ಒಬ್ಬ ಕೋವಿಡ್ ರೋಗಿ ಚಿಕಿತ್ಸೆಗಾಗಿ ಇಂಥ ಗುಳಿಗೆಗಳನ್ನು ಬುಂಗ ಬೇಕಾಗುತ್ತದೆ. ಅದಕ್ಕೆ ಒಟ್ಟು ಅಂದಾಜು ರೂ.1196 ವೆಚ್ಚ ತಗುಲಬಹುದು ಎಂದಿದ್ದಾರೆ. ಇದನ್ನೂ ಓದಿ:  ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

    ಸೌಮ್ಯ ಪ್ರಮಾಣದ ಸೋಂಕು ಇರುವ ರೋಗಿಗಳ ಮೇಲೆ ಗುಳಿಗೆ ಪ್ರಯೋಗಿಸಲು ಆಪ್ಟಿಮಸ್ ಫಾರ್ಮ್ ಕಳೆದ ಮೇನಲ್ಲಿ ಭಾರತೀಯ ಜೌಷಧ ಮಹಾ ನಿಯಂತ್ರಕ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ, ಮೊಲ್ನುಪಿರಾವಿರ್ ಅಂತಿಮ ಹಂತದ ಪರೀಕ್ಷೆ ಮುಕ್ತಾಯವಾಗಿದ್ದು ಗುಳಿಗೆ ಸೇವಿಸಿದ 5ನೇ ದಿನದಲ್ಲಿ ಶೇ.78ರಷ್ಟು ರೋಗಿಗಳ ವರದಿ ಕೋವಿಡ್ ನೆಗೆಟಿವ್ ಬಂದಿದೆ.

  • ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಭಾರತಕ್ಕೆ ಅಪ್ಪಳಿಸಲಿದೆ ಭಾರೀ ಚಂಡಮಾರುತ

    ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಭಾರತಕ್ಕೆ ಅಪ್ಪಳಿಸಲಿದೆ ಭಾರೀ ಚಂಡಮಾರುತ

    – ಕರ್ನಾಟಕದಲ್ಲಿ ಹಲವೆಡೆ ಭಾರೀ ಮಳೆ ಸಾಧ್ಯತೆ
    – ಮುಂಬೈಗೆ ಅಪ್ಪಳಿಸಲಿದೆ ನಿಸರ್ಗ

    ಬೆಂಗಳೂರು: ಇವತ್ತು ರಾತ್ರಿ ಅಥವಾ ನಾಳೆ ಬೆಳಗ್ಗೆ ಭಾರೀ ಚಂಡಮಾರುತ ಏಳುವ ಎಲ್ಲಾ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀನಿವಾಸ್ ರೆಡ್ಡಿ, ನಮಗೆ ಬಂದಿರುವ ಮುನ್ಸೂಚನೆ ಪ್ರಕಾರ ಇಂದು ‘ನಿಸರ್ಗ’ ಸೈಕ್ಲೋನ್ ಏಳುವ ಸಾಧ್ಯತೆ ಇದೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್ ಆಗಬಹುದು. ಗಾಳಿಯ ವೇಗ ಪ್ರತಿ ಗಂಟೆಗೆ 60-70 ಕಿ.ಮೀ ಇರುತ್ತದೆ. ತದನಂತರ ಇವತ್ತು ರಾತ್ರಿ ಅಥವಾ ನಾಳೆ ಬೆಳಗ್ಗೆ ಪ್ರಬಲ ಚಂಡಮಾರುವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಇವೆ. ಆದರೆ ಇದರ ಪಥ ನೋಡಿದಾಗ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಮುಂಬೈಗೆ ಹೋಗಿ ಅಪ್ಪಳಿಸುವ ಸಾಧ್ಯತೆ ಇದೆ. ಅಲ್ಲಿಂದ ಮುಂದುವರಿದು ಮಧ್ಯ ಪ್ರದೇಶ, ಉತ್ತರ ಪ್ರದೇಶದ ಕೆಲವು ಕಡೆ ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ಕಳೆದ ಒಂದು ವಾರದಿಂದ ಉತ್ತರ ಭಾಗದ ಒಳನಾಡಿನಲ್ಲಿ ಮಳೆಯಾಗಿರಲಿಲ್ಲ. ಆದರೆ ವಾಯುಭಾರದ ಕುಸಿತನ ನಂತರ ಬೆಳಗಾವಿ, ಧಾರವಾಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಂಗಳೂರು, ಹಾಸನ, ಕೊಡಗು, ಹಾವೇರಿ ಅನೇಕ ಕಡೆ ಮಳೆಯಾಗುತ್ತಿದೆ. ಇಂದು ಹಾಗೂ ನಾಳೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಬಹುದು. ಇದರ ಪರಿಣಾಮ ಸ್ವಲ್ಪ ಪ್ರವಾಹ ಕೂಡ ಆಗಬಹುದು. ನಂತರ ಮಳೆ ಕಡಿಮೆಯಾಗಿತ್ತದೆ. ಆದರೆ ಮಳೆಯಿಂದ ನಮಗೆ ದೊಡ್ಡ ಪರಿಣಾಮದ ನಷ್ಟ ಉಂಟಾಗುವ ಸಾಧ್ಯತೆ ಕಡಿಮೆ ಇದೆ. ಯಾಕೆಂದರೆ ಅದು ಮುಂದಕ್ಕೆ ಚಲಿಸುವುದರಿಂದ ಇಷ್ಟು ದಿನದ ಮಳೆಗಿಂತ ನಾಳೆ ಮಳೆ ಕಡಿಮೆಯಾಗಲಿದೆ ಎಂದು ಸೂಚನೆ ನೀಡಿದರು.

    ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಣ ಕನ್ನಡ ಮತ್ತು ಉಡುಪಿಯಲ್ಲಿ ಸಮುದ್ರದ ಅಲೆಗಳ ಉಬ್ಬರ ಜಾಸ್ತಿಯಾಗುತ್ತವೆ. ಸುಮಾರು 2.6 ರಿಂದ 3.7 ಮೀಟರ್ ಎತ್ತರದವರೆಗೂ ಅಬ್ಬರ ಹೆಚ್ಚಾಗುವ ಸಾಧ್ಯತೆ. ನಾಳೆ ಇದೇ ರೀತಿ ಮುಂದುವರಿಯಲಿದೆ. ಇನ್ನೂ ಎರಡು-ಮೂರು ದಿನಗಳಲ್ಲಿ ಮಳೆ ಕಡಿಮೆಯಾಗುತ್ತವೆ. ಈಗಾಗಲೇ ಮುಂಗಾರು ಮಳೆ ಸೋಮವಾರ ಕೇರಳದಲ್ಲಿ ಬಂದಿದೆ. ಈ ಮುಂಗಾರು ಮಳೆ ತರಲು ಈ ಸೈಕ್ಲೋನ್ ಸಹಾಯ ಮಾಡಿತ್ತು. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುತ್ತಿದೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು.

  • ರಾಜ್ಯದಲ್ಲಿ ಈ ವರ್ಷವೂ ಕೈ ಕೊಟ್ಟ ಮುಂಗಾರು ಮಳೆ- ಎಷ್ಟು ಬೀಳಬೇಕಿತ್ತು? ಎಷ್ಟು ಬಿದ್ದಿದೆ?

    ರಾಜ್ಯದಲ್ಲಿ ಈ ವರ್ಷವೂ ಕೈ ಕೊಟ್ಟ ಮುಂಗಾರು ಮಳೆ- ಎಷ್ಟು ಬೀಳಬೇಕಿತ್ತು? ಎಷ್ಟು ಬಿದ್ದಿದೆ?

    ಬೆಂಗಳೂರು: ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದ್ದರೂ ಒಟ್ಟಾರೆಯಾಗಿ ಕರ್ನಾಟಕದಲ್ಲಿ ಶೇ.4 ರಷ್ಟು ಮಳೆ ಕೊರತೆಯಾಗಿದೆ.

    ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿ, ರಾಜ್ಯದಲ್ಲಿ ವಾಡಿಕೆಯಂತೆ 839 ಮಿಲಿ ಮೀಟರ್ ಮಳೆಯಾಗಬೇಕಿತ್ತು. ರಾಜ್ಯದಲ್ಲಿ ಇದುವರೆಗೆ 804 ಮಿಲಿ ಮೀಟರ್ ಮಳೆಯಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಒಟ್ಟಾರೆ ಶೇ.4 ರಷ್ಟು ಮಳೆ ಕೊರತೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಶೇ.37 ರಷ್ಟು ಮಳೆಯ ಕೊರತೆ ಉಂಟಾಗಿದೆ. ಮಲೆನಾಡು ಭಾಗದಲ್ಲಿ ಶೇ. 24 ರಷ್ಟು ಅಧಿಕ ಮಳೆಯಾಗಿದೆ. ಆದರೆ 13 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದ್ದು, ರಾಯಚೂರಿನಲ್ಲಿ ಅತಿ ಕಡಿಮೆ ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಮತ್ತೆ ಮಳೆ: ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟವಾಗುವ ಶುರುವಾಗಲಿದ್ದು, ಅಕ್ಟೋಬರ್ 6 ರಿಂದ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಅಧಿಕ ಮಳೆಯಾಗಲಿದೆ. ಮಲೆನಾಡು ಹಾಗೂ ಕರಾವಳಿ ಸೇರಿದಂತೆ ಬೆಂಗಳೂರು ಭಾಗದಲ್ಲೂ ಮಳೆಯಾಗಲಿದೆ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದ ರೈತರಿಗೆ ಸಿಹಿ ಸುದ್ದಿ – ರಾಜ್ಯಕ್ಕೆ ಮುಂಗಾರು ಪ್ರವೇಶ ಶೀಘ್ರ

    ರಾಜ್ಯದ ರೈತರಿಗೆ ಸಿಹಿ ಸುದ್ದಿ – ರಾಜ್ಯಕ್ಕೆ ಮುಂಗಾರು ಪ್ರವೇಶ ಶೀಘ್ರ

    ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಬೆಂಗಳೂರಿನ ಹಲವೆಡೆ ಭರ್ಜರಿ ಮಳೆಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ರಸ್ತೆ ಸಂಪೂರ್ಣ ನದಿಯಂತಾಗಿತ್ತು. ಕೋಲಾರ, ದೇವನಹಳ್ಳಿ, ಆನೇಕಲ್, ನೆಲಮಂಗಲ, ತುಮಕೂರುಗಳಲ್ಲಿ ಗಂಟೆಗಟ್ಟಲೆ ಬಿರುಗಾಳಿ ಮಳೆಯಾಗಿದೆ. ಎಂದಿನಂತೆ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.

    ಮುಂಗಾರು ಪ್ರವೇಶದ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರದ ಶ್ರೀನಿವಾಸ್ ರೆಡ್ಡಿ ಅವರು, ಕೇರಳ ಕರಾವಳಿ ಭಾಗಕ್ಕೆ ಮೇ 29 ಕ್ಕೆ ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ರಾಜ್ಯಕ್ಕೆ ಈ ಭಾರಿ ಮುಂಗಾರು ಸ್ವಲ್ಪ ಬೇಗನೇ ಪ್ರವೇಶ ನೀಡಲಿದೆ. ಮೇ 30 ಅಥವಾ ಜೂನ್ 1ರ ವೇಳೆಗೆ ಮುಂಗಾರು ಅಗಮನವಾಗುವ ಅವಕಾಶವಿದ್ದು, ಮೇ 30 ಕ್ಕೆ ರಾಜ್ಯದ ಕರವಾಳಿ ಹಾಗೂ ದಕ್ಷಿಣ ಒಳನಾಡಗೆ ವ್ಯಾಪಿಸುವ ಸಾಧ್ಯತೆ ಎಂದು ತಿಳಿಸಿದ್ದಾರೆ.

    ಅರಬ್ಬೀ ಸುಮುದ್ರದಿಂದ ನೈರುತ್ಯ ಮುಂಗಾರು ಭಾಗದಲ್ಲಿ ಮಳೆಯ ಮಾರುತಗಳ ವೇಗ ಹೆಚ್ಚಾಗಿರುವುದರಿಂದ ರಾಜ್ಯಕ್ಕೆ ಮುಂಗಾರು ನಿಗಧಿತ ಸಮಯಕ್ಕಿಂತ ಬೇಗ ಬರುವ ಸಾಧ್ಯತೆ ಇದೆ. ಅಲ್ಲದೇ ಈ ಭಾರಿ ರಾಜ್ಯಕ್ಕೆ ವಾಡಿಕೆಯಂತೆ ಮಳೆ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಇನ್ನು ಸಂಜೆ ಸುರಿದ ನಗರದ ಹೊರವಲಯದ ನೆಲಮಂಗಲದ ಸುರಿದ ಆಲಿಕಲ್ಲು ಬಿರುಗಾಳಿ ಸಹಿತ ಭಾರಿ ಮಳೆಗೆ, ಬೃಹತ್ ಗಾತ್ರದ ಮರಗಳು ಧರೆಗುರುಳಿದೆ. ನೆಲಮಂಗಲದ ಹಲವೆಡೆ ಸಂಜೆ 4 ಗಂಟೆಯಿಂದಲೂ, ಗುಡುಗು ಸಿಡಿಲು ಬಿರುಗಾಳಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಹನುಮಂತಪುರದ ಪ್ರಿನ್ಸ್ ಹೋಟೆಲ್ ಬಳಿ ಬೃಹಧಾಕಾರದ ನೀಲಗಿರಿ ಮರವೊಂದು ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಮೇಲೆ ಬಿದ್ದಿದೆ. ಈ ವೇಳೆ ವಾಹನದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

    ಹೆದ್ದಾರಿಗೆ ಮರ ಬಿದ್ದಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು, ಸ್ಥಳಕ್ಕೆ ಡಾಬಸ್‍ಪೇಟೆ ಪೊಲೀಸರ ಎರಡು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇತ್ತ ತಾಲೂಕಿನ ದಕ್ಷಿಣಕಾಶಿ ಶಿವಗಂಗೆಯಲ್ಲೂ ಸಹ ಭಾರಿ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ಪುರಾತನವಾದ ಬೃಹತ್ ಮರವೊಂದು ಉರುಳಿಬಿದ್ದಿದೆ. ರಸ್ತೆ ಬದಿಯ ಅಂಗಡಿ ಮಳಿಗೆ ಸೇರಿದಂತೆ ಹೋಟೆಲ್ ಹಾಗೂ ಮನೆಗಳ ಮೇಲೆ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಘಟನೆಯಿಂದ ಜನರು ಪಾರಾಗಿದ್ದಾರೆ. ಸ್ಥಳೀಯ ಜನರು ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ. ಮನೆ ಹಾಗೂ ಮಳಿಗೆಗಳನ್ನ ಕಳೆದುಕೊಂಡ ಕುಟುಂಬಗಳು ಆತಂಕಕ್ಕೆ ಒಳಗಾಗಿದ್ದಾರೆ.