Tag: ಶ್ರೀನಿವಾಸ್ ಪೂಜಾರಿ

  • ಉಡುಪಿಗೆ ಆಗಮಿಸಿದ ಯೋಧ ಅನೂಪ್ ಪಾರ್ಥಿವ ಶರೀರ – ಅಂತಿಮ ನಮನ ಸಲ್ಲಿಸಿದ ಚೌಟ, ಕೋಟ

    ಉಡುಪಿಗೆ ಆಗಮಿಸಿದ ಯೋಧ ಅನೂಪ್ ಪಾರ್ಥಿವ ಶರೀರ – ಅಂತಿಮ ನಮನ ಸಲ್ಲಿಸಿದ ಚೌಟ, ಕೋಟ

    ಉಡುಪಿ: ಜಮ್ಮು ಕಾಶ್ಮೀರದ (Jammu Kashmir) ಪೂಂಚ್‌ನಲ್ಲಿ (Poonch) ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಐವರ ಪೈಕಿ ಕರ್ನಾಟಕದ ಕುಂದಾಪುರ (Kundapura) ತಾಲೂಕಿನ ಬೀಜಾಡಿಯವರಾದ ಯೋಧ ಅನೂಪ್ (Hawaldar Anoop Poojari) ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದೆ.

    ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ (Captain Brijesh Chowta) ಹಾಗೂ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojari) ಸೇನಾಧಿಕಾರಿಗಳಿಂದ ಅನೂಪ್ ಪಾರ್ಥಿವ ಶರೀರ ಪಡೆದು ಅಂತಿಮ ನಮನ ಸಲ್ಲಿಸಿದರು. ಕೆಲವೇ ಕ್ಷಣಗಳಲ್ಲಿ ಉಡುಪಿ ನಗರದಿಂದ ಕುಂದಾಪುರಕ್ಕೆ ಮೃತದೇಹ ರವಾನೆಯಾಗಲಿದೆ. ಬೀಜಾಡಿ ಪಡು ಸರ್ಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ನಡೆದಿದೆ. ಬೀಜಾಡಿ ಕಡಲ ಕಿನಾರೆಯಲ್ಲಿ ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರು| ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವು

    ಕಳೆದ 13 ವರ್ಷಗಳಿಂದ ಸೈನ್ಯದಲ್ಲಿರುವ ಅನೂಪ್ 33ನೇ ವಯಸ್ಸಿಗೆ ಹವಾಲ್ದಾರ್ ಆಗಿ ಭಡ್ತಿ ಹೊಂದಿದ ವೀರ ಯೋಧ. ಅನೂಪ್ ಸಾವಿನಿಂದ ಇಡೀ ಕುಟುಂಬ ದಿಗ್ಬ್ರಾಂತಗೊಂಡಿದೆ. ಬಡತನದ ನಡುವೆ ಭಾರತಾಂಬೆಯ ಸೇವೆ ಮಾಡಬೇಕೆಂದು ಹಠದಿಂದ ಸೈನ್ಯ ಸೇರಿದ್ದ ಅನೂಪ್ 14 ವರ್ಷ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಅನೂಪ್‌ಗೆ ವಿವಾಹವಾಗಿತ್ತು. ಎರಡು ವರ್ಷದ ಪುಟ್ಟ ಮಗುವಿದ್ದು, ಇಬ್ಬರು ಸಹೋದರಿಯರು, ಅಪಾರ ಬಂಧು ಮಿತ್ರರು, ಗ್ರಾಮಸ್ಥರು, ಗೆಳೆಯರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮೂರು ವರ್ಷ ಮತ್ತೆ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗುವ ಆಲೋಚನೆಯನ್ನು ಅನೂಪ್ ಹೊಂದಿದ್ದರು. ಈ ನಡುವೆ ಕಾಶ್ಮೀರದ ಪೂಂಚ್‌ನಲ್ಲಿ ದುರ್ಘಟನೆಯಾಗಿದೆ. 20 ದಿನದ ರಜೆಗೆ ಬಂದಿದ್ದ ಅನೂಪ್, ಶನಿವಾರವಷ್ಟೇ ಕಾಶ್ಮೀರಕ್ಕೆ ವಾಪಸ್ ಆಗಿದ್ದರು. ಘಟನೆಯಿಂದ ಕುಟುಂಬ ಕಣ್ಣೀರಾಗಿದೆ. ಮಗನನ್ನು ಕಳೆದುಕೊಂಡ ತಾಯಿ, ಸೋದರಿಯ ನೋವಿಗೆ ಕಣ್ಣೀರ ಮಾತೇ ಸಾಕ್ಷಿಯಾಗಿದೆ. ಇದನ್ನೂ ಓದಿ: ಕಾರವಾರ| 10 ಸಾವಿರ ಪಿಗ್ಮಿ ಹಣಕ್ಕಾಗಿ ವೃದ್ದೆ ಕತ್ತು ಹಿಸುಕಿ ಹತ್ಯೆ

    ಯೋಧ ಅನೂಪ್ ಪಾರ್ಥಿವ ಶರೀರ ಸ್ವಗ್ರಾಮ ತಲುಪಲಿದ್ದು, ಕುಂದಾಪುರದ ಬೀಜಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಅಂತಿಮ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. 5,000ಕ್ಕೂ ಹೆಚ್ಚು ಮಂದಿ ಭಾಗಿ ಆಗುವ ನಿರೀಕ್ಷೆ ಇದ್ದು, ಅಂತಿಮ ಯಾತ್ರೆ ಬಳಿಕ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ನನಗೇನಾದ್ರೂ ಆದ್ರೆ ಸಿಎಂ ಹೊಣೆ: ಸ್ನೇಹಮಯಿ ಕೃಷ್ಣ

    ಸ್ವಗ್ರಾಮದ ಬೀಜಾಡಿ ಪಡು ಸರಕಾರಿ ಶಾಲೆಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು.. ಸಕಲ ಸೇನೆ ಮತ್ತು ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ನಾನು ಧರ್ಮಸ್ಥಳಕ್ಕೂ ಹೋಗ್ತೀನಿ, ಸವದತ್ತಿ ಯಲ್ಲಮ್ಮನ ಬಳಿಯೂ ಹೋಗ್ತೀನಿ: ಸಿ.ಟಿ ರವಿ

  • ಸ್ಪಷ್ಟವಾಗಿ ಹೇಳ್ತೇನೆ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ: ಶ್ರೀನಿವಾಸ್ ಪೂಜಾರಿ

    ಸ್ಪಷ್ಟವಾಗಿ ಹೇಳ್ತೇನೆ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ: ಶ್ರೀನಿವಾಸ್ ಪೂಜಾರಿ

    ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲೆ ಪಠ್ಯದಲ್ಲಿ ನಾರಾಯಣಗುರು ಪಠ್ಯ ಕೈಬಿಟ್ಟಿದ್ದಾರೆ ಎಂಬುದು ಸುಳ್ಳು. ಸ್ಪಷ್ಟವಾಗಿ ಹೇಳ್ತೇನೆ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಾಲೆ ಪಠ್ಯದಲ್ಲಿ ನಾರಾಯಣಗುರು ಪಠ್ಯ ಕೈಬಿಟ್ಟಿದ್ದಾರೆ ಎಂಬ ಆರೋಪದ ಬಗ್ಗೆ ಸಿಎಂ ಹಾಗೂ ಶಿಕ್ಷಣ ಸಚಿವರ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡಬಾರದು. ಯಾವುದೇ ಪಠ್ಯವನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ವಶಕ್ಕೆ

    Priyankkharge

    ಪ್ರಿಯಾಂಕ್ ಖರ್ಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ಆರೋಪವನ್ನು ತಳ್ಳಿ ಹಾಕಿದ ಸಚಿವರು, ಎಸ್‍ಸಿ, ಎಸ್‍ಟಿಗಳಿಗೆ ನೀಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮವಾಗಿಲ್ಲ. ಎರಡು ಗುಂಪುಗಳ ನಡುವೆ ಟೆಂಡರ್ ಸಿಕ್ಕಿರೋದೆ ಸಂಘರ್ಷಕ್ಕೆ ಕಾರಣವಾಗಿದೆ. ಕೋರ್ಟ್‍ನಲ್ಲಿ ದಾವೆ ಹೂಡಿದ್ರೂ, ಅವರ ವಿರುದ್ಧ ಅಭಿಪ್ರಾಯ ವ್ಯಕ್ತವಾಗಿದೆ. ಮೂರು ಸಾವಿರ ಕೊಳವೆ ಬಾವಿ ಕೊರೆದಿದ್ದಾರೆ. ಅನೇಕ ಕೊಳವೆಬಾವಿ ಆಗಿಲ್ಲ. ಖರ್ಗೆ ಅವರು ಸದನದಲ್ಲಿ ಕೇಳಿದಾಗ ಉತ್ತರ ನೀಡದ್ದೇನೆ. ಟೆಂಡರ್‌ನಲ್ಲಿ ಯಾವುದೇ ಗೋಲ್ಮಾಲ್ ಆಗಿಲ್ಲ. ಈಗಾಗಲೇ ತನಿಖಾಧಿಕಾರಿಯನ್ನು ನೇಮಕ ಮಾಡಿದ್ದೇವೆ. ವರದಿ ಬಂದ ಬಳಿಕ ನನ್ನನ್ನೂ ಸೇರಿದಂತೆ ಎಲ್ಲರನ್ನೂ ತನಿಖೆಗೆ ಒಳಪಡಿಸುತ್ತೇನೆ. ಸುಖಾ ಸುಮ್ಮನೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ್ರ ಆರ್ಯ ಮನೆಯಲ್ಲಿ ಸಂತಸ

  • ಮಕ್ಕಳ ಕೈಯಲ್ಲಿ ಕೇಸರಿ ಶಾಲು ಕೊಡ್ತೀರ, ಕಾಶ್ಮೀರ್ ಫೈಲ್ ಚಿತ್ರ ನೋಡಿ ಅಂತೀರ, ದಲಿತರ ಹಣವನ್ನು ಯಾಕೆ ನುಂಗ್ತಿದ್ದೀರ?: ಪ್ರಿಯಾಂಕ್ ಖರ್ಗೆ

    ಮಕ್ಕಳ ಕೈಯಲ್ಲಿ ಕೇಸರಿ ಶಾಲು ಕೊಡ್ತೀರ, ಕಾಶ್ಮೀರ್ ಫೈಲ್ ಚಿತ್ರ ನೋಡಿ ಅಂತೀರ, ದಲಿತರ ಹಣವನ್ನು ಯಾಕೆ ನುಂಗ್ತಿದ್ದೀರ?: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಮಕ್ಕಳಿಗೆ ಕಿತಾಬ್ ಕೊಡಿ ಎಂದರೆ ಬಿಜೆಪಿ ಸರ್ಕಾರ ಹಿಜಬ್ ವಿವಾದ ಮಾಡುತ್ತಿದೆ. ಮಕ್ಕಳ ಕೈಯಲ್ಲಿ ಕೇಸರಿ ಶಾಲು ಕೊಡ್ತೀರ, ಕಾಶ್ಮೀರ್ ಫೈಲ್ ಚಿತ್ರ ನೋಡಿ ಅಂತೀರ, ದಲಿತರ ಹಣವನ್ನು ಯಾಕೆ ನುಂಗುತ್ತಿದ್ದೀರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಖಾವೂಂಗಾ, ನಾ ಖಾನೇದೂಂಗ ಎಂದು ಹೇಳಿದ್ದರು. ಆದರೆ, ಈಗಿನ ಬಿಜೆಪಿ ಸರ್ಕಾರ ಮೈಭೀ ಖಾವೂಂಗಾ, ಸಬ್ ಕೋ ಖಿಲಾವೂಂಗಾ ಎನ್ನುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಲು ಒಗ್ಗಟ್ಟಾಗಿ ಹೋಗುವ ಮಂತ್ರಿಗಳು ಮತ್ತು ಸರ್ಕಾರ ಒಗ್ಗಟ್ಟಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಶ್ಮೀರ್ ಫೈಲ್ಸ್ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ರು. ಬಿಜೆಪಿಯ ಟೂಲ್ ಕಿಟ್ ಕಾಶ್ಮೀರ್ ಫೈಲ್ಸ್. ರಾಜ್ಯ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿತು. ಸ್ಪೀಕರ್ ಸಿನಿಮಾ ನೋಡಿ ಅಂದ್ರು. ಆದರೆ ನಾನು ಕೇಳೋದು ಇಷ್ಟೇ ಕಾಶ್ಮೀರ್ ಫೈಲ್ಸ್‌ಗೆ ಇವರು ಇಷ್ಟೊಂದು ಆಸಕ್ತಿ ನೀಡ್ತಾರೆ. ಆದರೆ ರಾಜ್ಯದ ಬಗ್ಗೆ ಇವರಿಗೆ ಆಸಕ್ತಿಯಿಲ್ಲ. ಕರ್ನಾಟಕ ಫೈಲ್ಸ್ ನೋಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ಯೋಜನೆ ಇವೆ. ಅದರಲ್ಲಿ ಗಂಗಾಕಲ್ಯಾಣ ಯೋಜನೆ ಒಂದು. 14,777 ಬೋರ್‌ವೆಲ್‌ ಕೊರೆಯಲಾಗಿದೆ ಅದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಡ್ರಿಲ್ಲಿಂಗ್, ಪಂಪ್ ಅಳವಡಿಕೆ, ಪವರ್ ಮೂರು ಹಂತದಲ್ಲಿ ಯೋಜನೆ ಆಗಬೇಕು ಮೊದಲು ಮೂರು ಟೆಂಡರ್ ಕರೆಯಲಾಗ್ತಿತ್ತು. ನಾನು ಸಚಿವನಾಗಿದ್ದಾಗ ಜಿಲ್ಲಾವಾರು ಪ್ಯಾಕೇಜ್ ನೀಡುತ್ತಿದ್ದೆವು. ಒಬ್ಬ ಕಂಟ್ರಾಕ್ಟರ್‌ ಎರಡಕ್ಕಿಂತ ಹೆಚ್ಚು ಕೊಡುತ್ತಿರಲಿಲ್ಲ. ಆಗ ಜಿಲ್ಲಾಧಿಕಾರಿಗಳು ಇದರ ಬಗ್ಗೆ ನೋಡಿಕೊಳ್ಳುತ್ತಿದ್ದರು. ಆದರೆ ಇದೀಗ ಎಲ್ಲ ಬದಲಾಗಿದೆ. ಬಿಜೆಪಿ ಸರ್ಕಾರ ಕೆಬಿಜೆಎನ್ಎಲ್‌ನವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಕೇವಲ 10/15 ಜನರಿಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಗುತ್ತಿಗೆದಾರನಿಗೆ ಸಂಪೂರ್ಣ ಅನುಭವವಿರಬೇಕು. ಕನಿಷ್ಠ 70 ಬೋರ್‌ವೆಲ್‌ ಕೊರೆಯಿಸಿರಬೇಕು. ಆದರೆ ಅಂತಹ ಅನುಭವವಿಲ್ಲದವರಿಗೆ ಟೆಂಡರ್ ಕೊಟ್ಟಿದ್ದಾರೆ. ಬೋರ್‌ವೆಲ್‌ ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:  ಶಿಕ್ಷಣ ಕೇಸರಿಕರಣಗೊಳಿಸೋದ್ರಲ್ಲಿ ತಪ್ಪೇನಿದೆ: ವೆಂಕಯ್ಯ ನಾಯ್ಡು ಪ್ರಶ್ನೆ

    ಟೆಂಡರ್ ಅಕ್ರಮದ ಬಗ್ಗೆ ನನಗಂತೂ ಆಚ್ಚರಿಯಿಲ್ಲ. ನಮ್ಮ ದೇಶದ ಪ್ರಧಾನಿ ಡಿಗ್ರಿಯೇ ಫೇಕ್ ಸಿಗುತ್ತಿದೆ. ಹಾಗಿರಬೇಕಾದರೆ ಟೆಂಡರ್ ಫೇಕ್ ಮಾಡೋದು ಕಷ್ಟವಲ್ಲ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಒಳ್ಳೆಯವರು. ಆದರೆ ಅಧಿಕಾರಿಗಳು ಅವರನ್ನ ದಾರಿತಪ್ಪಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಲಕ್ಷ್ಮಿ ವೆಂಕಟೇಶ್ವರ್ ಎಂಬವರಿಗೆ ಟೆಂಡರ್ ಕೊಟ್ಟಿದ್ದಾರೆ. ಮೊದಲು ಅವರಿಗೆ ಟೆಂಡರ್ ಕೊಟ್ಟಿಲ್ಲ. ಎರಡನೇ ತಿಂಗಳಿಗೆ ಎಲಿಜಬಲ್ ಸರ್ಟಿಫೀಕೆಟ್ ಕೊಡ್ತಾರೆ. ಇದು ಹೇಗೆ ಸಾಧ್ಯ ಅನ್ನೋದು ನಮ್ಮ ಪ್ರಶ್ನೆ. ವಾಲ್ಮೀಕಿ ನಿಗಮದಲ್ಲಿ ಟೆಂಟರ್ ಕ್ಯಾನ್ಸಲ್ ಆಗುತ್ತೆ. ಆದಿ ಜಾಂಬವ ನಿಗಮದಲ್ಲಿ ಕ್ವಾಲಿಫೈ ಆಗುತ್ತೆ. ಒಂದು ಕಡೆ ಇಲ್ಲದ್ದು ಇನ್ನೊಂದು ಕಡೆ ಹೇಗೆ ಕ್ವಾಲಿಫೈ ಆಯ್ತು ಗಂಗಾಕಲ್ಯಾಣ ಯೋಜನೆಯಲ್ಲಿ ದೊಡ್ಡ ಮಟ್ಟದ ಅಕ್ರಮದ ನಡೆದಿದೆ ಎಂದು ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ನಾ ಖಾವೂಂಗ ನಾ ಖಾನೇದೂಂಗ ಎಲ್ಲಿದ್ದಾರೆ? ಪ್ರಧಾನಿ ಮೋದಿ ವಿರುದ್ಧ ಸಿದ್ಧು ಟೀಕೆ

    ಬಡವರ ಯೋಜನೆ ಹಣ ಹೊಡೆಯುವವರ ವಿರುದ್ಧ ಕ್ರಮಕೈಗೊಳ್ಳಿ. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ದಲಿತರ ಹಣ ಲೂಟಿ ಹೊಡೆದು ಸರ್ಕಾರ ನಡೆಸ್ಬೇಕಾ?. ಯಾಕೆಂದರೆ ಇದು ಎಸ್‍ಸಿ, ಎಸ್‍ಟಿ ವಿಚಾರ. ಮೊದಲು ನಿಮ್ಮ ಸಚಿವರನ್ನು ಕೈಬಿಡಿ ಇಲ್ಲವೇ ಸಿಎಂ ನೀವೇ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿಗಮಗಳಲ್ಲಿನ ಅಕ್ರಮಕ್ಕೆ ಬ್ರೇಕ್ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಆಗಿದ್ರೆ ಕಾಶ್ಮೀರದಲ್ಲಿ ಸಿದ್ದರಾಮಯ್ಯ ಉಳಿದುಕೊಳ್ಳುತ್ತಿದ್ದರು: ಸಿ.ಟಿ.ರವಿ

    ಬಿಜೆಪಿಯವರು ಪರಿಶಿಷ್ಟ ಜಾತಿ ಪಂಗಡದ ಜನರ ದುಡ್ಡನ್ನು ಸ್ವಾರ್ಥಕ್ಕೆ ಬಳಸಿಕೊಂಡು ಚುನಾವಣಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಗಂಗಾಕಲ್ಯಾಣ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಮಾಜಕಲ್ಯಾಣ ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

  • ಮಂಡ್ಯದಲ್ಲಿ ನಿಖಿಲ್ ನೋಟು, ಸುಮಲತಾ ವೋಟಿನ ಮಧ್ಯೆ ಸ್ಪರ್ಧೆ- ಶ್ರೀನಿವಾಸ್ ಪೂಜಾರಿ

    ಮಂಡ್ಯದಲ್ಲಿ ನಿಖಿಲ್ ನೋಟು, ಸುಮಲತಾ ವೋಟಿನ ಮಧ್ಯೆ ಸ್ಪರ್ಧೆ- ಶ್ರೀನಿವಾಸ್ ಪೂಜಾರಿ

    ಮಡಿಕೇರಿ: ಮಂಡ್ಯದಲ್ಲಿ ಮೂವರು ಸುಮಲತಾ ಅವರನ್ನು ನಿಲ್ಲಿಸಲಾಗಿದೆ. ಆದರೆ ಬಿಜೆಪಿಯಿಂದ ಸುಮಲತಾ ಅಂಬರೀಶ್ ಗೆ ಸಂಪೂರ್ಣ ಬೆಂಬಲ ನೀಡುತ್ತಿದೇವೆ. ಈ ಬಾರಿ ಮಂಡ್ಯದಲ್ಲಿ ನಿಖಿಲ್ ನೋಟು ಮತ್ತು ಸುಮಲತಾ ವೋಟಿನ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಜನಸಾಮಾನ್ಯರ ಸಲಹೆ ಸೂಚನೆ ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ದೇಶದ ಭದ್ರತೆಗೆ ಪ್ರಥಮ ಸ್ಥಾನ, ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ, ಸೇನೆಗೆ ಬೇಕಾದ ವಿಶೇಷ ಉಪಕರಣಗಳ ಪೂರೈಕೆ ನುಸುಳುಕೋರರನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    2030ರ ವೇಳೆಗೆ ಭಾರತದಲ್ಲಿ ಸಂಪೂರ್ಣ ಬಡತನ ನಿರ್ಮೂಲನೆ ಮಾಡುವುದು ಬಿಜೆಪಿ ಪಕ್ಷದ ಗುರಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಅಂದ್ರು.

    2022 ರ ಒಳಗೆ ರೈಲ್ವೆ ಟ್ರ್ಯಾಕ್ ಸಂಪೂರ್ಣ ಅಳವಡಿಕೆ ಭಾರತೀಯ ಜನತಾ ಪಕ್ಷದಿಂದ ಸ್ಪಷ್ಟ ನಿಲುವು. ಉಗ್ರವಾದಕ್ಕೆ ಯುಪಿಎ ಸರ್ಕಾರದಿಂದ ಬೆಂಬಲ ನೀಡುತ್ತಿದೆ. ಆದರೆ ಉಗ್ರವಾದದ ವಿರುದ್ಧ ಎನ್ ಡಿಎ ನಿಲುವು ತೆಗೆದುಕೊಳ್ಳಲಿದೆ. ಮಂಗಳವಾರ ಪ್ರಧಾನಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ 22 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ನರೇಂದ್ರ ಮೋದಿಯನ್ನು ಸೋಲಿಸಲು ಕರ್ನಾಟಕದಲ್ಲಿ ಹೊಂದಾಣಿಕೆಯಾಗಿದೆ. ಜನ ನಗುವಂತ ವಾತವರಣ ನಿರ್ಮಾಣ ಮಾಡಿದ್ದಾರೆ. ಗೆದ್ದೆ ಗೆಲ್ಲುತ್ತೇವೆ ಎನ್ನುವ ಮೈತ್ರಿ ಸರ್ಕಾರಕ್ಕೆ ಸೋಲು ಖಚಿತವಾಗಿದೆ.

  • ವಿಧಾನಸೌಧದೊಳಗೆ ಸದಾ ನಿದ್ದೆ ಮಾಡ್ತಿದ್ರೆ ಯಾರ್ ಬಂದ್ ಹೋದ್ರೂ ಗೊತ್ತಾಗಲ್ಲ- ಶ್ರೀನಿವಾಸ ಪೂಜಾರಿ

    ವಿಧಾನಸೌಧದೊಳಗೆ ಸದಾ ನಿದ್ದೆ ಮಾಡ್ತಿದ್ರೆ ಯಾರ್ ಬಂದ್ ಹೋದ್ರೂ ಗೊತ್ತಾಗಲ್ಲ- ಶ್ರೀನಿವಾಸ ಪೂಜಾರಿ

    ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾಗರಿಕ. ನಾಗರೀಕತೆ ಇದ್ದವರ ರೀತಿಯಲ್ಲಿ ಅವರು ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ ಸಂದರ್ಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಯಾವಾನೋ ನೋಡೇ ಇಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ನನಗೆ ಗೊತ್ತೇ ಇಲ್ಲ ಎಂದಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದು, ಹಾಲಾಡಿ ಶ್ರೀನಿವಾಸ ಶೆಟ್ಟಿ 5 ಬಾರಿ ಶಾಸಕರಾಗಿದ್ದಾರೆ. ಹಾಲಾಡಿಯವರ ಮುಖವನ್ನೇ ನೋಡಿಲ್ಲಾಂತ ಸಿದ್ದರಾಮಯ್ಯ ಹೇಳ್ತಾರೆ. ವಿಧಾನಸೌಧಗೊಳಗೆ ನೀವು ಸದಾ ನಿದ್ದೆ ಮಾಡುತ್ತಿದ್ರಾ? ಯಾರು ಬಂದ್ರೂ ಯಾರು ಹೋದ್ರೂ ನಿಮಗೆ ಗೊತ್ತಾಗಲ್ಲ. ಎಚ್ಚರ ಇದ್ದವರಿಗೆ ಎಲ್ಲವೂ ಗೊತ್ತಾಗುತ್ತದೆ ಅಂತ ಛಾಟಿ ಬೀಸಿದ್ರು.

    ಸಿದ್ದರಾಮಯ್ಯ ಖಾಯಂ ನಿದ್ರೆಯಲ್ಲೇ ಇದ್ದವರು. ನೀವು ನಿದ್ದೆಯಿಂದ ಎದ್ದಾಗ ಕಾಲ ಮಿಂಚಿ ಹೋಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಏಕವಚನ ಬಳಸಿದ್ದೀರಿ. ಸಿದ್ದರಾಮಯ್ಯ ಪದಬಳಕೆ ಅವರ ಅನಾಗರೀಕತೆ ತೋರಿಸುತ್ತದೆ. ಅವರಿಗೆ ನಾಗರೀಕತೆ ಇಲ್ಲ ಎಂದು ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಯಾವನೋ ಶ್ರೀನಿವಾಸ ಶೆಟ್ಟಿ ಅಂದ ಸಿದ್ದರಾಮಯ್ಯಗೆ ಹಾಲಾಡಿ ತಿರುಗೇಟು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv