Tag: ಶ್ರೀನಿವಾಸಪುರ

  • ತಾಯಿಯ ಸಮಾಧಿ ಪಕ್ಕದಲ್ಲೇ ಯುವಕ ನೇಣಿಗೆ ಶರಣು

    ತಾಯಿಯ ಸಮಾಧಿ ಪಕ್ಕದಲ್ಲೇ ಯುವಕ ನೇಣಿಗೆ ಶರಣು

    ಕೋಲಾರ: ಮರಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಿವಾಸಪುರದ (Srinivaspur) ತಾಡಿಗೋಳ್ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಗ್ರಾಮದ ಪ್ರವೀಣ್ (22) ಎಂದು ಗುರುತಿಸಲಾಗಿದೆ. ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸಂಬಂಧಿಕರ ಮದುವೆಗೆಂದು ಕೆಲವು ದಿನಗಳ ಹಿಂದೆ ಊರಿಗೆ ಮರಳಿದ್ದ. ಇಂದು ತನ್ನ ತಾಯಿಯ ಸಮಾಧಿಯ ಬಳಿಯೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್‌ ಗೇಲಿಗೆ ಬಿಜೆಪಿ ತಿರುಗೇಟು

    ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋ ಉಡುಗೊರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್, ಜೆಡಿಎಸ್ ಮುಖಂಡರ ಮಧ್ಯೆ ಗಲಾಟೆ – ಕೈ ಮುಖಂಡನಿಗೆ ಚಾಕು

    ಕಾಂಗ್ರೆಸ್, ಜೆಡಿಎಸ್ ಮುಖಂಡರ ಮಧ್ಯೆ ಗಲಾಟೆ – ಕೈ ಮುಖಂಡನಿಗೆ ಚಾಕು

    ಕೋಲಾರ: ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಮುಖಂಡರ ನಡುವೆ ಗಲಾಟೆ ನಡೆದಿದ್ದು, ಜೆಡಿಎಸ್ ಮುಖಂಡ ಕಾಂಗ್ರೆಸ್ ಮುಖಂಡನಿಗೆ ಚಾಕು ಹಾಕಿದ ಘಟನೆ ಕೋಲಾರದ (Kolar) ಶ್ರೀನಿವಾಸಪುರದಲ್ಲಿ (Shrinivasapura) ನಡೆದಿದೆ.

    ಪಟ್ಟಣದ ಚಿಂತಾಮಣಿ ಸರ್ಕಲ್‌ನಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡ, ಶಾಸಕ ರಮೇಶ್ ಕುಮಾರ್ ಬೆಂಬಲಿಗ ತಜಮುಲ್ ಹಲ್ಲೆಗೊಳಗಾದ ವ್ಯಕ್ತಿ. ಹಳೇ ದ್ವೇಷ ಹಿನ್ನೆಲೆ ಈ ಕೃತ್ಯ ನಡೆಸಿದ್ದು, ಜೆಡಿಎಸ್ ಮುಖಂಡ, ಮಾಜಿ ಶಾಸಕ ವೆಂಕಟಾಶಿವಾರೆಡ್ಡಿ ಬೆಂಬಲಿಗ ಸಾಧಿಕ್ ತಮ್ಮ ಆರಿಫ್ ಸೇರಿದಂತೆ ಮತ್ತಿಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕೀಯ? – ಶಾಸಕರು, ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ ತಂತ್ರ

    ಹಿಂದಿನಿಂದ ಬಂದು ಬೆನ್ನಿಗೆ ಚೂರಿ ಹಾಕಿದ್ದು, ಹಲ್ಲೆಗೊಳಗಾದ ಮುಖಂಡನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯ ಬಳಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಕೊಟ್ರೆ ಒಳ್ಳೆಯದಾಗುತ್ತೆ: ಸತೀಶ್ ಜಾರಕಿಹೊಳಿ

    ಮೇ 10ರಂದು ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪಟ್ಟಣದ ಚಿಂತಾಮಣಿ ಸರ್ಕಲ್‌ನ ಬೂತ್ ನಂಬರ್ 148ರಲ್ಲಿ ವಾಹನ ನಿಲ್ಲಿಸುವ ವಿಚಾರವಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು. ಈ ಹಿನ್ನೆಲೆ ಚಾಕು ಹಾಕಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಕಪ್ ಈಗ್ಲೂ ಅವರದ್ದೇ, ಮುಂದಕ್ಕೆ ನಮ್ಮದು: ಡಿ.ಕೆ ಸುರೇಶ್ ವ್ಯಂಗ್ಯ

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಮುಖಂಡನ ಆರೋಗ್ಯ ವಿಚಾರಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರಿಗೆ ಬಹುಮತ ಬರಲ್ಲ, ಅದ್ಕೆ ಬೇರೆ ಪಕ್ಷದ ಜೊತೆ ಮಾತಾಡುವ ಪ್ರಯತ್ನ ಮಾಡ್ತಿದ್ದಾರೆ – ಸಿಎಂ

  • ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ

    ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ

    ಕೋಲಾರ: ಶ್ರೀನಿವಾಸಪುರ (Srinivaspur) ವಿಧಾನಸಭಾ ಕ್ಷೇತ್ರ ಜೆಡಿಎಸ್ (JDS) ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆ ಕೆ.ಎಚ್.ಮುನಿಯಪ್ಪ ಬಣದ ಹಿರಿಯ ಕಾಂಗ್ರೆಸ್ (Congress) ಮುಖಂಡ ಶೇಷಾಪುರ ಗೋಪಾಲ್ ಕಾಣಿಸಿಕೊಂಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ವಿರೋಧಿಯಾಗಿರುವ ಶೇಷಾಪುರ ಗೋಪಾಲ್ ಕಾಂಗ್ರೆಸ್ ಟಿಕೆಟ್‍ನ್ನು ರಮೇಶ್ ಕುಮಾರ್‌ಗೆ (Ramesh Kumar) ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈಗ ಶೇಷಾಪುರ ಗೋಪಾಲ್, ಜೆಡಿಎಸ್ ಅಭ್ಯರ್ಥಿ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಕ್ಷಾಂತರದ ಸೂಚನೆಯ ಅನುಮಾನ ಮೂಡಿಸಿವೆ.

    ಫೋಟೋ ವೈರಲ್ ಆಗುತ್ತಿದ್ದಂತೆ ಶೇಷಾಪುರ ಗೋಪಾಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಖಾಸಗಿ ಕಾರ್ಯಕ್ರಮದಲ್ಲಿ ವೆಂಕಟಶಿವಾರೆಡ್ಡಿಯವರನ್ನು ಭೇಟಿಯಾಗಿದ್ದೇನೆ. ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಪೂರ್ವ ನಿಯೋಜಿತವಾದ ಭೇಟಿಯಲ್ಲ. ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ನಾನು ಯಾವುದೇ ಆಮಿಷಗಳಿಗೆ ಒಳಗಾಗುವವನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

     

    ಕೆ.ಹೆಚ್.ಮುನಿಯಪ್ಪ ನನ್ನ ಆಪ್ತ ಎನ್ನುವ ವಿಚಾರ ದೂರವಾದದ್ದು ನಾನು ರಮೇಶ್ ಕುಮಾರ್ ಆಪ್ತ, ಆದರೆ ರಮೇಶ್ ಅವರಿಂದ ದೂರವಾಗಲು ಕಾರಣ ಅವರನ್ನೇ ಕೇಳಬೇಕು. ಅವರು ಕಾಂಗ್ರೆಸ್ ಎಂಬ ವೇದಿಕೆಯನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡು, ಪಕ್ಷದ ಸಿದ್ಧಾಂತಗಳನ್ನು ಹಾಗೂ ಸಂಸ್ಕೃತಿಯನ್ನು ನಿಜವಾದ ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ ಎಂದು ಟೀಕಿಸಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋಲಿಗೆ ರಮೇಶ್ ಕುಮಾರ್ ಪಾತ್ರ ಏನಿದೆ ಎಂಬುದು ಜಗತ್ ಜಾಹಿರಾಗಿದೆ. ಅವರ ನಿಜವಾದ ಮುಖವಾಡ ಕಾಂಗ್ರೆಸ್ ನಾ ಟೋಪಿ ಆರ್‍ಎಸ್‍ಎಸ್‍ನ (RSS) ಚೆಡ್ಡಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ

  • ಜಿದ್ದಾಜಿದ್ದಿ ಹೋರಾಟ, ರಕ್ತಸಿಕ್ತ ರಾಜಕಾರಣಕ್ಕೆ ಫೇಮಸ್‌ ಶ್ರೀನಿವಾಸಪುರ

    ಜಿದ್ದಾಜಿದ್ದಿ ಹೋರಾಟ, ರಕ್ತಸಿಕ್ತ ರಾಜಕಾರಣಕ್ಕೆ ಫೇಮಸ್‌ ಶ್ರೀನಿವಾಸಪುರ

    ಕೋಲಾರ: ಕಳೆದ ಹತ್ತು ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸಲ ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ನಡುವೆ ಜಿದ್ದಾಜಿದ್ದಿ ಹೋರಾಟ ಮತ್ತು  ರಕ್ತಸಿಕ್ತ ರಾಜಕಾರಣಕ್ಕೆ ಶ್ರೀನಿವಾಸಪುರ (Srinivaspura) ಕ್ಷೇತ್ರ ಫೇಮಸ್‌. ಚುನಾವಣೆಯ ಸಮಯದಲ್ಲಿ ರಾಜಕೀಯ ಕೊಲೆಗಳು ಗಲಭೆಗಳು ಹಲವು ಬಾರಿ ನಡೆದಿದ್ದು ಪ್ರತಿ ಚುನಾವಣೆ ರೋಚಕವಾಗಿರುತ್ತದೆ.

    ಕಾಂಗ್ರೆಸ್‌ನಿಂದ ರಮೇಶ್‌ ಕುಮಾರ್ (Ramesh kumar) ಆರನೇ ಬಾರಿ ಗೆದ್ದ ಕ್ಷೇತ್ರವಿದು.  2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಮೇಶ್‌ ಕುಮಾರ್ 93,571 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ, ಜೆಡಿಎಸ್‌ನ ವೆಂಕಟಶಿವಾರೆಡ್ಡಿ (Vekntashiva Reddy) 83,019 ಮತಗಳನ್ನು ಪಡೆದುಕೊಂಡು ಸೋಲನ್ನು ಅನುಭವಿಸಿದ್ದರು. ಬಿಜೆಪಿಯ ಡಾ.ವೇಣುಗೋಪಾಲ್ 4,208 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದರು.

    ಪ್ರಸ್ತುತ ಶಾಸಕ ರಮೇಶ್‌ಕುಮಾರ್ ಕಾಂಗ್ರೆಸ್‌ನಿಂದ, ಜೆಕೆ.ವೆಂಕಟಶಿವಾರೆಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದರೆ ಬಿಜೆಪಿಯಿಂದ ಡಾ.ವೇಣುಗೋಪಾಲ್ ಮತ್ತು ಆಮ್‌ಆದ್ಮಿ ಪಕ್ಷದಿಂದ ಡಾ.ವೆಂಕಟಾಚಲ ಕಣಕ್ಕಿಳಿಯುವ ಸಾಧ್ಯತೆಯಿದೆ. ಕರ್ನಾಟಕ ಮತ್ತು ಆಂಧ್ರ ಗಡಿಗಳನ್ನು ಶ್ರೀನಿವಾಸಪುರ ಹೊಂದಿರುವ ಕಾರಣ ʼರಾಯಲಸೀಮʼ ಕ್ಷೇತ್ರವೆಂದು ಕರೆಯುತ್ತಾರೆ. ರಾಯರಸೀಮ ಶ್ರೀಕೃಷ್ಣ ದೇವರಾಯನ ಆಳ್ವಿಕೆಗೆ ಒಳಪಟ್ಟಿದ್ದ ಕ್ಷೇತ್ರ. ಹಾಗಾಗಿ ರಾಯರಸೀಮ ಈಗ ಜನರ ಬಾಯಲ್ಲಿ ರಾಯಲಸೀಮವಾಗಿ ಬದಲಾಗಿದೆ. ಇದನ್ನೂ ಓದಿ: ಇಂದು ಬಿಡುಗಡೆ ಆಗಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತಡೆ – ಡಿಕೆಶಿ ಹೇಳಿದ್ದೇನು?

    ಈ ಪ್ರದೇಶದಲ್ಲಿ ತೆಲುಗು ಮತ್ತು ಕನ್ನಡ ಭಾಷೆಗಳ ಮಧ್ಯೆ ತಾರತಮ್ಯ ಇಲ್ಲ. ಪ್ರತಿಯೊಬ್ಬರೂ ಎರಡೂ ಭಾಷೆಗಳನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಸ್ವಲ್ಪ ತೆಲುಗು ಪ್ರಭಾವ ಹೆಚ್ಚಾಗಿಯೇ ಇದೆ. ಗಡಿ ತಾಲೂಕು ಆದರೂ ಕೂಡ ಭಾಷೆಗಳ ನಡುವೆ ಘರ್ಷಣೆ ಇಲ್ಲ.

    ಕಳೆದ ಹತ್ತು ಚುನಾವಣೆಗಳಲ್ಲಿ ಇಲ್ಲಿಯ ಮತದಾರರು ಒಮ್ಮೆ ಜೆಡಿಎಸ್ ಮತ್ತೊಮ್ಮೆ ಕಾಂಗ್ರೆಸ್‌ಗೆ ಗೆಲುವು ನೀಡುತ್ತಾ ಬಂದಿದ್ದಾರೆ. ಒಮ್ಮೆ ರಮೇಶ್‌ಕುಮಾರ್ ಗೆದ್ದರೆ ನಂತರ ವೆಂಕಟಶಿವಾರೆಡ್ಡಿ ಗೆಲವು ಆಗುತ್ತಿತ್ತು. ಆದರೆ ಕಳೆದ 2013 ಮತ್ತು 2018ರ ಚುನಾವಣೆಗಳಲ್ಲಿ ರಮೇಶ್ ಕುಮಾರ್ ಗೆದ್ದಿದ್ದು ಈ ಬಾರಿ ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ.

    ಮಾವು ಫೇಮಸ್‌: ನಮ್ಮ ದೇಶದಲ್ಲಿಯೇ ಅತೀ ಹೆಚ್ಚು ಮಾವನ್ನು ಶ್ರೀನಿವಾಸಪುರದಲ್ಲಿ ಬೆಳೆಯಲಾಗುತ್ತದೆ. ಇಲ್ಲಿಯ ಒಣ ಭೂಮಿಯಲ್ಲಿ ಬೆಳೆದ ಮಾವು ತುಂಬಾ ರುಚಿಕರವಾದ ಹಲವು ಮಾವುಗಳನ್ನು ಇಲ್ಲಿ ಬೆಳೆಯುತ್ತಾರೆ. ಕ್ಷೇತ್ರದ ತುಂಬಾ ಮಾವು ತೋಟಗಳನ್ನು ಕಾಣಬಹುದು. ಇದರ ಜೊತೆ ತರಕಾರಿ ಬೆಳೆಗಳನ್ನು ರೈತರು ಬೆಳೆಯುತ್ತಾರೆ.

  • 4 ವರ್ಷದ ಬಳಿಕ ಪಾಲಾರ್‌ ಜಲಾಶಯ ಭರ್ತಿ- ಬರದ ನಾಡು ಕೋಲಾರದಲ್ಲಿ ಭಾರೀ ಮಳೆ

    4 ವರ್ಷದ ಬಳಿಕ ಪಾಲಾರ್‌ ಜಲಾಶಯ ಭರ್ತಿ- ಬರದ ನಾಡು ಕೋಲಾರದಲ್ಲಿ ಭಾರೀ ಮಳೆ

    ಕೋಲಾರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಜೋರು ಮಳೆಯಿಂದಾಗಿ ರಸ್ತೆಗಳು ಸೇರಿದಂತೆ ರೈತರು ಬೆಳೆದ ನೂರಾರು ಎಕರೆ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶದಲ್ಲಿರುವ ಗ್ರಾಮಗಳನ್ನ ಆವರಿಸಿರುವ ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

    ಉತ್ತಮ ಮಳೆಯಾದ ಹಿನ್ನೆಲೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಹರಿದಿವೆ. ಅದರಲ್ಲೂ ಜಿಲ್ಲೆಯ ದೊಡ್ಡ ಕೆರೆಗಳಾದ ಅಗ್ರಹಾರ, ಮುದುವಾಡಿ, ಪಾಲಾರ್ ಕೆರೆಗಳು ತುಂಬಿ ಹರಿಯುತ್ತಿವೆ.

    ಪಾಲಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಬೇತಮಂಗಲದ ಪಾಲಾರ್ ಜಲಾಶಯ ಕೆರೆ ಕೂಡ ತುಂಬಿ ಕೋಡಿ ಹರಿದಿದೆ. ಮತ್ತೊಂದೆಡೆ ಜಲಾಶಯಕ್ಕೆ ಅಡ್ಡಲಾಗಿ ಅಡ್ಡಲಾಗಿ ಕಟ್ಟಿರುವ ಸೇತುವೆಯ ಬಾಗಿಲುಗಳು ಹಾಗೂ ಕೆರೆ ಕಟ್ಟೆಯ ಭಾಗ ಬಿರುಕು ಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಕೆರೆ ಕಟ್ಟೆಯಲ್ಲಿ ಬಿರುಕಾಗಿ ಸಾಕಷ್ಟು ನೀರು ಪೋಲಾಗುತ್ತಿದೆ.ಇದರ ಜೊತೆಗೆ ಸರಿಯಾದ ನಿರ್ವಹಣೆ ಇಲ್ಲದೆ ಕ್ರಸ್ಟ್ ಗೇಟ್‌ಗಳ ಮೂಲಕವೂ ನೀರು ಸಾಕಷ್ಟು ಸೋರಿಕೆಯಾಗುತ್ತಿದೆ.

    ಕಳೆದ ರಾತ್ರಿ ಕೂಡ ಶ್ರೀನಿವಾಸಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಚಲ್ದಿಗಾನಹಳ್ಳಿ ಗ್ರಾಮದ ಲಕ್ಷೀ ದೇವಮ್ಮ, ಶ್ರೀನಿವಾಸ್, ವೆಂಕಟಸ್ವಾಮಿ ಎಂಬುವವರ ಮನೆಗಳಿಗೆ ನೀರು ನುಗ್ಗಿತ್ತು. ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು ಸ್ಥಳಕ್ಕೆ ಆಗಮಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದುರ್ಗಾದೇವಿ ಮೆರವಣಿಗೆ ವೇಳೆ ಹರಿದ ಕಾರು 1 ಸಾವು 20 ಜನರಿಗೆ ಗಾಯ

    2 ದಿನದ ಹಿಂದೆ ಮುಳಬಾಗಲು, ಕೆಜಿಎಫ್ ತಾಲ್ಲೂಕು ಸೇರಿದಂತೆ ವಿವಿಧೆಡೆ ಬಹುತೇಕ ಕೆರೆಗಳು ಕೋಡಿ ಹೋಗಿದ್ದು, ಕೆಜಿಎಫ್ ತಾಲೂಕಿನ ದಾಸೇನಹಳ್ಳಿ ಮತ್ತು ತಲ್ಲಪಳ್ಲಿ ಗ್ರಾಮದ ಬಳಿ ರೈತರ ತೋಟಗಳಿಗೆ ನೀರು ನುಗ್ಗಿದೆ. ಪರಿಣಾಮ ನೂರಾರು ಎಕರೆ ತೋಟಗಾರಿಕಾ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜೊತೆಗೆ ರಾಜಕಾಲುವೆಗಳು ಹಾಗೂ ಸಣ್ಣಪುಟ್ಟ ಕಾಲುವೆಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದು, ರೈತರು ಬೆಳೆದ ಟೊಮ್ಯಾಟೊ, ಹೂವು, ತೊಗರಿ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿದೆ.

    ಮುಳಬಾಗಲು ತಾಲೂಕಿನ ಮಡಿವಾಳ, ತಾಯಲೂರು, ಕನ್ನಸಂದ್ರ, ಮದ್ದೇರಿ, ಮೇಲಗಾಣಿ ಕೆರೆಗಳು ಕೋಡಿಹರಿದಿದ್ದು, ಹಲವಾರು ವರ್ಷಗಳ ನಂತರ ಕೆರೆಗಳು ಕೋಡಿ ಹರಿಯುತ್ತಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಗ್ರಾಮಸ್ಥ ಸುರೇಶ್, ಮುಳಬಾಗಿಲು ತಾಲೂಕಿನಲ್ಲಿರುವ ಸುಮಾರು 25ಕ್ಕೂ ಹೆಚ್ಚಿನ ಕೆರೆಗಳು ಕೋಡಿ ಹರಿಯುತ್ತಿದ್ದು, ಸರಿಯಾದ ಕಾಲುವೆ, ಅಣೆಕಟ್ಟು ಇಲ್ಲದ ಪರಿಣಾಮ, ಕೆರೆಗಳ ನೀರು ಗ್ರಾಮದತ್ತ ಬರುತ್ತಿವೆ. ಮಳೆಯಿಂದಾಗಿ ಈ ಭಾಗದಲ್ಲಿ ನೂರಾರು ಎಕರೆ ರೈತರ ಜಮೀನು ಜಲಾವೃತವಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಬೆಳೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ ಕೆಜಿಎಫ್ ತಾಲೂಕಿನ ಸುವರ್ಣಹಳ್ಳಿ ಗ್ರಾಮದ ಮನೆಗಳು ಹಾಗೂ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ಬೆಳೆಗಳು ಹಾನಿಯಾಗಿದೆ.

    ಒಟ್ಟಿನಲ್ಲಿ ನೀರು ನೀರು ಎನ್ನುತ್ತಿದ್ದ ಬರದ ನಾಡು, ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನೀರೆ ತುಂಬಿ ತುಳಕುತ್ತಿದೆ. ಕಳೆದ 20 ವರ್ಷಗಳಿಂದ ಇಲ್ಲದ ಮಳೆ ಈ ಬಾರಿ ಕೋಲಾರ ಜಿಲ್ಲೆಗೆ ವರದಾನವಾದರೂ ನೂರಾರು ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ.

  • ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

    ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

    ಕೋಲಾರ: ಲಾಕ್‍ಡೌನ್‍ನಿಂದಾಗಿ ಎಣ್ಣೆ ಸಿಗದೆ ಕಂಗೆಟ್ಟಿರುವ ಮದ್ಯಪ್ರಿಯರು ಬಾರ್ ಅಂಡ್ ರೆಸ್ಟೋರೆಂಟ್‍ನ ಶೆಟರ್ ಮುರಿದು ಸುಮಾರು 4 ಲಕ್ಷ ರೂ. ಮೌಲ್ಯದ ಮದ್ಯ ದೋಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.

    ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿಯ ವೀರಭದ್ರೇಗೌಡ ಎಂಬವರಿಗೆ ಸೇರಿದ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಶನಿವಾರ ರಾತ್ರಿ ಕನ್ನ ಹಾಕಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ ಶೆಟರ್ ಮುರಿದು ಒಳ ನುಗ್ಗಿರುವ ಕಳ್ಳರು ಬಾರ್‍ನಲ್ಲಿದ್ದ ಹಣವನ್ನ ಬಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ದೋಚಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಸಿಗದೆ ಕಂಗೆಟ್ಟ ಮದ್ಯಪ್ರಿಯರು ಕನ್ನ ಹಾಕಿದ್ದಾರಾ ಅಥವಾ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇಂತಹ ಹೀನ ಕೃತ್ಯವೆಸಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದ್ಯ ಸಿಗದೆ ಇರುವುದಕ್ಕೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ ಮದ್ಯದ ಅಂಗಡಿಗೆ ಕನ್ನ ಹಾಕಿದ ಪ್ರಕರಣಗಳು ವರದಿಯಾಗಿವೆ.

  • ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಕೋಲಾರ: ರಾಯಲಸೀಮ ಶ್ರೀನಿವಾಸಪುರದಲ್ಲಿ ಮತ್ತೆ ಸಂಪ್ರದಾಯ ಬದ್ಧ ವೈರಿಗಳ ಕಾಳಗ ಶುರುವಾಗಿದೆ. ಜೆಡಿಎಸ್‍ನ ಮಾಜಿ ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಿಧಾನಸೌಧದಲ್ಲಿ ಒಂದು ತಿಂಗಳ ಹಿಂದಯೆ ಸುದ್ದಿಗೋಷ್ಠಿ ನಡೆಸಿದ್ದ ಜೆ.ಕೆ.ವೆಂಕಟಶಿವಾರೆಡ್ಡಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಕೀಲರಾದ ಶಂಕರಪ್ಪ ಹಾಗೂ ಸುಂದರ್ ಅವರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟ್ ಗೆ  ಆಗಮಿಸಿದ ರಮೇಶ್ ಕುಮಾರ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ವಿಶೇಷವೆಂದರೆ ಜೆಡಿಎಸ್‍ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಲಾಗಿದ್ದಾರೆ.

  • ಜೋಡೆತ್ತು ಕಳುವಿನಿಂದ ಶುರುವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ

    ಜೋಡೆತ್ತು ಕಳುವಿನಿಂದ ಶುರುವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ

    – ಗ್ರಾಮದಲ್ಲಿ ಆತಂಕದ ವಾತಾವರಣ

    ಕೋಲಾರ: ಜೋಡೆತ್ತು ಕಳುವಿನಿಂದ ಎರಡು ಕುಟುಂಬದ ನಡುವೆ ಆರಂಭವಾಗಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ನಡೆದಿದೆ.

    ಯದರೂರು ಗ್ರಾಮದ ವೆಂಕಟೇಶಪ್ಪ ಆತ್ಮಹತ್ಯೆ ಶರಣಾದ ವ್ಯಕ್ತಿ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ವೆಂಕಟೇಶಪ್ಪ ಅವರ ಜೋಡೆತ್ತುಗಳು ಒಂದೂವರೆ ವರ್ಷದ ಹಿಂದೆ ಕಳ್ಳತನವಾಗಿದ್ದವು. ಹೀಗಾಗಿ ಅವರು ಸಾಕಷ್ಟು ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಈ ಸಂಬಂಧ ವೆಂಕಟೇಶಪ್ಪ ಶ್ರೀನಿವಾಸಪುರ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದರೆ ಅದೇ ಗ್ರಾಮದ ಕೆಂಚಪ್ಪ ಹಾಗೂ ಆಂಜಪ್ಪ ಅವರ ಮನೆಯಲ್ಲಿ ಹನ್ನೆರಡು ದಿನಗಳ ಹಿಂದೆಯಷ್ಟೇ ಎತ್ತುಗಳು ಪ್ರತ್ಯಕ್ಷವಾಗಿದ್ದವು. ಹೀಗಾಗಿ ವೆಂಕಟೇಶಪ್ಪ ಅವರು ಕೆಂಚಪ್ಪನ ಮನೆಗೆ ಹೋಗಿ, ಇವು ನಮ್ಮ ಎತ್ತುಗಳು ಎಂದು ಕೇಳಿದ್ದರು.

    ವೆಂಕಟೇಶಪ್ಪ ಮಗೆ ಬಂದು ಎತ್ತು ನಮ್ಮವು ಎಂದಿದ್ದಕ್ಕೆ ಕೋಪಗೊಂಡ ಕೆಂಚಪ್ಪ ಹಾಗೂ ಮನೆಯವರು ಮನಬಂದಂತೆ ಥಳಿಸಿ ಕಳಿಸಿದ್ದರು. ಈ ಸಂಬಂಧ ವೆಂಕಟೇಶಪ್ಪ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೃತ ವೆಂಕಟೇಶಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಕೆಂಚಪ್ಪ ಕುಟುಂಬದವರು, ನಾವು ಹಣಕೊಟ್ಟು ಜೋಡೆತ್ತುಗಳನ್ನು ಖರೀದಿ ಮಾಡಿದ್ದೇವೆ. ವೆಂಕಟೇಶಪ್ಪ ಅವರ ಕಳೆದು ಹೋದ ಜೋಡೆತ್ತುಗಳು ಇವಲ್ಲ. ಇದನ್ನು ಸಾಕಷ್ಟು ಬಾರಿ ಅವರಿಗೆ ಹೇಳಿದರೂ ಕೇಳದೆ ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಪೊಲೀಸರು ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧರಿದ್ದೇವೆ. ಹೀಗಾಗಿ ಎರಡೂ ಕುಟುಂಬಗಳಿಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಎರಡೂ ಕುಟುಂಬಗಳ ನಡುವೆ ಜೋಡೆತ್ತು ವಿವಾದದಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

  • ಒಂದೇ ರಾತ್ರಿಯಲ್ಲಿ ಶಟರ್ ಮುರಿದು 5 ಅಂಗಡಿಯಲ್ಲಿ ಸರಣಿ ಕಳ್ಳತನ

    ಒಂದೇ ರಾತ್ರಿಯಲ್ಲಿ ಶಟರ್ ಮುರಿದು 5 ಅಂಗಡಿಯಲ್ಲಿ ಸರಣಿ ಕಳ್ಳತನ

    ಕೋಲಾರ: ಒಂದೇ ರಾತ್ರಿಯಲ್ಲಿ ಐದು ಅಂಗಡಿಗಳ ಶಟರ್ ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ತಮ್ಮ ಕೈಚಳಕ ತೋರಿಸಿರುವ ಕಳ್ಳರು ರಾಯಲ್ಪಾಡು ಗ್ರಾಮದ ಜನರಲ್ ಸ್ಟೋರ್, ಜ್ಯುವೆಲ್ಲರಿ ಶಾಪ್, ಪೆಟ್ರೋಲ್ ಅಂಗಡಿ ಮತ್ತು ಚಿಲ್ಲರೆ ಅಂಗಡಿಗಳು ಸೇರಿದಂತೆ ಒಟ್ಟು ಐದು ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

    ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕರು ಹೇಳಿದ್ದು, ರಾತ್ರಿ ಪಾಳಯದಲ್ಲಿ ಪೊಲೀಸರು ಗಸ್ತು ಮಾಡದೆ ನಿರ್ಲಕ್ಷ್ಯ ತೋರಿದ ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಫೇಸ್‍ಬುಕ್ ಲೈವ್ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

    ಫೇಸ್‍ಬುಕ್ ಲೈವ್ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

    ಕೋಲಾರ: ಫೇಸ್ ಬುಕ್ ಲೈವ್ ಮಾಡಿ ವಿಷ ಸೇವಿಸುವ ಮೂಲಕ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಈದ್ಗಾ ಮಸೀದಿ ಬಳಿ ನಡೆದಿದೆ.

    ಸುಲೇಮಾನ್ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ನಿವಾಸಿಯಾಗಿದ್ದಾರೆ.

    ಇಂದು ಮಧ್ಯಾಹ್ನದ ವೇಳೆಗೆ ಶ್ರೀನಿವಾಸಪುರ ನಗರದ ಈದ್ಗಾ ಮಸೀದಿ ಬಳಿ ಕಾರಿನಲ್ಲಿ ಕುಳಿತು ವಿಷ ಸೇವಿಸಿದ ಸುಲೇಮಾನ್ ಅದನ್ನು ಫೇಸ್‍ಬುಕ್‍ನಲ್ಲಿ ಲೈವ್ ಮಾಡಿದ್ದ. ಈ ಸಂದರ್ಭದಲ್ಲಿ ಮೈದಾನದಲ್ಲಿದ್ದ ಸಾರ್ವಜನಿಕರು ಅನುಮಾನ ಮೇರೆಗೆ ಪರಿಶೀಲನೆ ನಡೆಸಿದ ಸಮಯದಲ್ಲಿ ವಿಷ ಸೇವನೆ ಮಾಡಿರುವುದು ತಿಳಿದು ಬಂದಿದೆ.

    ಸುಲೇಮಾನ್ ವಿಷ ಸೇವನೆ ಮಾಡಿರುವುದು ಖಚಿತವಾಗುತ್ತಿದಂತೆ ಎಚ್ಚೆತ್ತ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಂದಹಾಗೇ ಆತ್ಮಹತ್ಯೆಗೆ ಯತ್ನಿಸಿದಾತ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಆದರೆ ಈತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ತಿಳಿದು ಬಂದಿಲ್ಲ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.