Tag: ಶ್ರೀನಿವಾಸನ್

  • RSS ಮುಖಂಡ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿಯ ಬಂಧಿಸಿದ NIA

    RSS ಮುಖಂಡ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿಯ ಬಂಧಿಸಿದ NIA

    ನವದೆಹಲಿ: 2022ರಲ್ಲಿ ಕೇರಳದಲ್ಲಿ ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಅವರ ಭೀಕರ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯನಾಗಿರುವ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಬಂಧಿಸಿದೆ.

    ಆರೋಪಿಯನ್ನು ಶಫೀಖ್‌ ಎಂದು ಗುರುತಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ನಿವಾಸಿಯಾಗಿರುವ ಈತ 2022ರ ಏಪ್ರಿಲ್‌ 16ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್‌ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ. ಇದೀಗ ಎನ್‌ಐಎ ಅಧಿಕಾರಿಗಳ ತಂಡ ಕೊಲ್ಲಂ ಜಿಲ್ಲೆಗೆ ಪತ್ತೆಹಚ್ಚಿದೆ. ಇದನ್ನೂ ಓದಿ: ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    ಒಟ್ಟು 71 ಮಂದಿ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ NIA ಈಗಾಗಲೇ 2023 ರ ಮಾರ್ಚ್‌ 17 ಮತ್ತು 2023ರ ನವೆಂಬರ್‌ 6 ರಂದು ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಅಬ್ದುಲ್ ನಾಸರ್ ಎಂದು ಗುರುತಿಸಲಾಗಿದ್ದು, ಈತ ಜನವರಿ 2 ರಂದು ಸಾವನ್ನಪ್ಪಿದ್ದಾನೆ. ಸಹೀರ್ ಕೆವಿ ಮತ್ತು ಜಾಫರ್ ಭೀಮಂತವಿಡ ಎಂಬಿಬ್ಬರು ಪರಾರಿಯಾಗಿದ್ದು, ಬಳಿಕ ಇಬ್ಬರನ್ನು ಬಂಧಿಸಲಾಯಿತು.

  • ಪಾಲಕ್ಕಾಡ್‍ನಲ್ಲಿ RSS ಮುಖಂಡನ ಹತ್ಯೆ

    ಪಾಲಕ್ಕಾಡ್‍ನಲ್ಲಿ RSS ಮುಖಂಡನ ಹತ್ಯೆ

    ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖಂಡ ಶ್ರೀನಿವಾಸನ್ ಅವರನ್ನು ಶನಿವಾರ ಪಾಲಕ್ಕಾಡ್ ಪಟ್ಟಣದ ಮೇಲಮುರಿಯಲ್ಲಿ ಹತ್ಯೆ ಮಾಡಲಾಗಿದೆ.

    ಪಾಲಕ್ಕಾಡ್ ಸಮೀಪದ ಎಲಪ್ಪುಲ್ಲಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಕಾರ್ಯಕರ್ತನನ್ನು ಹತ್ಯೆ ಮಾಡಿದ 24 ಗಂಟೆಗಳ ನಂತರ, ಶನಿವಾರ ಪಾಲಕ್ಕಾಡ್ ಪಟ್ಟಣದ ಮೇಲಮುರಿಯಲ್ಲಿ RSS ಮುಖಂಡನನ್ನು ಹತ್ಯೆ ಮಾಡಲಾಗಿದೆ. ಇದನ್ನೂ ಓದಿ:  ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ

    ನಡೆಸಿದ್ದೇನು?
    ಮೇಲಮುರಿಯಲ್ಲಿ ಶ್ರೀನಿವಾಸ್ ಅವರು ತಮ್ಮ ಅಂಗಡಿಯಲ್ಲಿದ್ದಾಗ ಐದು ಜನರ ಗುಂಪೊಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ದಾಳಿ ನಡೆಸಿದೆ. ಆರೋಪಿಗಳು ಮೂರು ಬೈಕ್‍ಗಳಲ್ಲಿ ಬಂದು ಶ್ರೀನಿವಾಸನ್‍ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಶ್ರೀನಿವಾಸನ್ ಅವರ ಅಂಗಡಿ, ಆಟೋಗಳ ಮೇಲೆ ದಾಳಿ ನಡೆದಿದೆ.

    ಕೂಡಲೇ ಅವರನ್ನು ಪಾಲಕ್ಕಾಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದಾಳಿಯಲ್ಲಿ ಶ್ರೀನಿವಾಸನ್ ತಲೆ ಮತ್ತು ಕೈಕಾಲುಗಳಿಗೆ ಭೀಕರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಒಂದೇ ಗಂಟೆಯಲ್ಲಿ ಮೃತಪಟ್ಟಿದ್ದಾರೆ.

    CRIME 2

    ಎಸ್‍ಡಿಪಿಐ ಕಾರ್ಯಕರ್ತ ಎ.ಸುಬೈರ್ ಅಂತ್ಯಕ್ರಿಯೆಗೂ ಮುನ್ನವೇ RSS ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅಧಿಕಾರಿಗಳು ಹಾಗೂ ಜನತೆ ಬೆಚ್ಚಿಬಿದ್ದಿದ್ದಾರೆ. ಸುಬೈರ್ ಹತ್ಯೆಗೆ ಪ್ರತೀಕಾರವಾಗಿ ಶ್ರೀನಿವಾಸನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

    ಸುಬೈರ್ ಹತ್ಯೆಯಾಗಿದ್ದು ಹೇಗೆ?
    ಮಧ್ಯಾಹ್ನ 1:30ಕ್ಕೆ ಎಲಪ್ಪುಲ್ಲಿ ಎಂಬಲ್ಲಿ ಸುಬೈರ್ ತನ್ನ ತಂದೆಯೊಂದಿಗೆ ಶುಕ್ರವಾರ ಜುಮಾ ಪ್ರಾರ್ಥನೆ ಮುಗಿಸಿ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಎರಡು ಕಾರುಗಳಿಂದ ಬಂದ ದುಷ್ಕರ್ಮಿಗಳು ಸುಬೈರ್ ಅವರ ಬೈಕ್‍ಗೆ ಡಿಕ್ಕಿ ಹೊಡೆದು ಕೊಂದಿದ್ದಾರೆ. ಬೈಕ್‍ನಿಂದ ಕೆಳಗೆ ಬಿದ್ದ ತಂದೆ ಅಬೂಬಕರ್ ಗಾಯಗೊಂಡಿದ್ದಾರೆ. ಆದರೆ ಈ ಹತ್ಯೆಯ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ ಎಂದು ಎಸ್‍ಡಿಪಿಐ ಆರೋಪಿಸಿದೆ. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

    They looked at me while hacking him, I was unable to move: Subair's father, palakkad subair murder, palakkad sdpi leader murder, kerala latest news, rss vs sdpi kerala

    ಶ್ರೀನಿವಾಸನ್ ಹತ್ಯೆಯ ಹಿಂದೆ ಎಸ್‍ಡಿಪಿಐ ಕೈವಾಡವಿದೆ ಎಂದು ಬಿಜೆಪಿ ನಾಯಕರು ಶನಿವಾರ ಹೇಳಿದ್ದಾರೆ. ಪಾಲಕ್ಕಾಡ್‍ನಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪುತ್ರನಂತೆ ನೋಡಿಕೊಳ್ಳುವೆ, ಆದ್ರೆ ರೈನಾ ರೀ ಎಂಟ್ರಿ ನನ್ನ ಕೈಯಲ್ಲಿಲ್ಲ: ಶ್ರೀನಿವಾಸನ್

    ಪುತ್ರನಂತೆ ನೋಡಿಕೊಳ್ಳುವೆ, ಆದ್ರೆ ರೈನಾ ರೀ ಎಂಟ್ರಿ ನನ್ನ ಕೈಯಲ್ಲಿಲ್ಲ: ಶ್ರೀನಿವಾಸನ್

    ಮುಂಬೈ: ಐಪಿಎಲ್ 2020ರ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗೆ ಬಂದಿಲ್ಲ ಎಂದು ಹೇಳುವ ಮೂಲಕ ಟೂರ್ನಿಗೆ ರೀ ಎಂಟ್ರಿ ನೀಡುವ ಸುಳಿವು ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ ಅವರ ಕುರಿತು ಫ್ರಾಂಚೈಸಿ ಮಾಲೀಕ ಶ್ರೀನಿವಾಸನ್ ಪ್ರತಿಕ್ರಿಯೆ ನೀಡಿದ್ದು, ರೈನಾ ರೀ ಎಂಟ್ರಿ ವಿಚಾರ ನನ್ನೊಬ್ಬನ ಕೈಯಲ್ಲಿಲ್ಲ ಎಂದಿದ್ದಾರೆ.

    ಕಳೆದ ಶುಕ್ರವಾರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದ ಸುರೇಶ್ ರೈನಾ ಭಾರತಕ್ಕೆ ಹಿಂದಿರುಗಿದ್ದರು. ಯುಎಇನಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಪಂಜಾಬ್‍ನಲ್ಲಿ ರೈನಾ ಕುಟುಂಬ ಮೇಲೆ ದಾಳಿಯಾಗಿದ್ದು ಅವರು ಭಾರತಕ್ಕೆ ವಾಪಸ್ ಆಗಲು ಕಾರಣ ಎಂದು ತಿಳಿಸಿದ್ದರು. ಅಲ್ಲದೇ ಶ್ರೀನಿವಾಸನ್ ನನ್ನ ತಂದೆಯಂತೆ. ನಾನು ತಪ್ಪು ಮಾಡಿದ ಸಂದರ್ಭದಲ್ಲಿ ಬೈಯಬಹುದು ಎಂದಿದ್ದರು. ಇದನ್ನೂ ಓದಿ: ಧೋನಿ ನನ್ನ ದೊಡ್ಡಣ್ಣನಂತೆ – ಕೊನೆಗೂ ಮೌನ ಮುರಿದ ರೈನಾ

    ರೈನಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸನ್, ಸುರೇಶ್ ರೈನಾ ಹೇಳಿದ್ದು ನಿಜ. ಆತನನ್ನು ನನ್ನ ಸ್ವತಃ ಮಗನಂತೇ ನೋಡಿಕೊಳ್ಳುತ್ತೇನೆ. ತಂಡದ ಗೆಲುವಿಗಾಗಿ ಎಷ್ಟೋ ಶ್ರಮಿಸಿದ್ದಾರೆ. ಆದರೆ ಆಟಗಾರರ ವೈಯಕ್ತಿಕ ಜೀವನದಲ್ಲಿ ಎಂದು ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದ್ದಾರೆ.

    2020ರ ಐಪಿಎಲ್ ಟೂರ್ನಿಗೆ ರೈನಾ ರೀ ಎಂಟ್ರಿ ನನ್ನೊಬ್ಬನ ಕೈಯಲ್ಲಿಲ್ಲ. ನಾನು ತಂಡವನಷ್ಟೇ ಖರೀದಿ ಮಾಡಿದ್ದೇನೆ. ನಾನು ಚೆನ್ನೈ ತಂಡಕ್ಕೆ ನಾಯಕನಲ್ಲ. ಯಾವ ಆಟಗಾರರನ್ನು ತಂಡದಲ್ಲಿ ಆಡಲು ಅವಕಾಶ ನೀಡಬೇಕು ಎಂಬ ನಿರ್ಣಯ ತೆಗೆದುಕೊಳ್ಳುವುದು ಕ್ಯಾಪ್ಟನ್ ನಿರ್ಧಾರ. ಅವರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 20 ಸಾವಿರ ಕೋವಿಡ್ ಟೆಸ್ಟ್‌ಗೆ 10 ಕೋಟಿ ರೂ. ಖರ್ಚು ಮಾಡಲಿದೆ ಬಿಸಿಸಿಐ

  • ತಂದೆ ಮಗನನ್ನು ಬೈಯಬಹುದು – ಶ್ರೀನಿವಾಸನ್ ಹೇಳಿಕೆಗೆ ರೈನಾ ಪ್ರತಿಕ್ರಿಯೆ

    ತಂದೆ ಮಗನನ್ನು ಬೈಯಬಹುದು – ಶ್ರೀನಿವಾಸನ್ ಹೇಳಿಕೆಗೆ ರೈನಾ ಪ್ರತಿಕ್ರಿಯೆ

    ಚೆನ್ನೈ: ಒಬ್ಬ ತಂದೆ ಮಗನನ್ನು ಬೈಯಬಹುದು ಎಂದು ಹೇಳುವ ಮೂಲಕ ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಶ್ರೀನಿವಾಸನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಐಪಿಎಲ್‍ಗಾಗಿ ಸಿದ್ಧತೆ ನಡೆಸಿದ್ದ ರೈನಾ, ಯುಎಇಗೆ ತೆರಳಿದ್ದರು. ಆದರೆ ಇದಕ್ಕಿದ್ದಂತೆ ಅಗಸ್ಟ್ 29ರಂದು ರೈನಾ ಭಾರತಕ್ಕೆ ವಾಪಸ್ ಬಂದಿದ್ದರು. ವೈಯಕ್ತಿಕ ಕಾರಣದಿಂದ ಐಪಿಎಲ್‍ನಿಂದ ಹೊರ ಹೋಗಿದ್ದಾರೆ ಎಂದು ಸಿಎಸ್‍ಕೆ ತಂಡ ಹೇಳಿತ್ತು. ಇದಾದ ಬಳಿಕ ಶ್ರೀನಿವಾಸನ್ ಅವರು, ಕೆಲ ವಿವಾದತ್ಮಾಕ ಹೇಳಿಕೆಗಳನ್ನು ಕೊಟ್ಟಿದ್ದರು.

    ಈಗ ಇದರ ಬಗ್ಗೆ ಖಾಸಗಿ ಕ್ರೀಡಾ ವಾಹಿನಿಯಲ್ಲಿ ಮಾತನಾಡಿರುವ ರೈನಾ, ಅವರು ನಮ್ಮ ತಂದೆಯಿದ್ದಂತೆ. ನಮಗೆ ಬಹಳ ಹತ್ತಿರದವರು. ಅವರು ನನ್ನನ್ನು ಕಿರಿಮಗನಂತೆ ನೋಡಿಕೊಳ್ಳುತ್ತಾರೆ. ಕೆಲ ಸಂದರ್ಭದಲ್ಲಿ ಬೇಸರವಾಗಿ ಮಾತನಾಡಿದ್ದಾರೆ. ಒಬ್ಬ ತಂದೆ ಮಗನನ್ನು ಬೈಯಬಹುದು ಅಲ್ಲವೆ. ನಾನು ಯುಎಇಯಿಂದ ಬರುವಾಗ ಅವರಿಗೆ ಏನೂ ಹೇಳಿ ಬಂದಿರಲಿಲ್ಲ. ಅದಕ್ಕಾಗಿ ಕೆಲ ಮಾತುಗಳನ್ನು ಆಡಿದ್ದಾರೆ. ನಂತರ ಅವರಿಗೆ ಮೆಸೇಜ್ ಮಾಡಿ ತಿಳಿಸಿದೆ. ಆಗ ಓಕೆ ಎಂದರು ಎಂದು ತಿಳಿಸಿದ್ದಾರೆ.

    ರೈನಾ ಅವರು ಐಪಿಎಲ್‍ನಿಂದ ಹೊರಬರುತ್ತಿದ್ದಂತೆ ಮಾತನಾಡಿದ್ದ ಶ್ರೀನಿವಾಸನ್, ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಸೇರುತ್ತದೆ. ನಾನು ಯಾರನ್ನು ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಆದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿದ್ದರೆ ಹಿಂತಿರುಗಿ ಎಂದು ಹೇಳಿದ್ದರು. ಇದಾದ ನಂತರ ರೈನಾ ಅವರು ಹೊರಕ್ಕೆ ಬರಲು ರೂಮ್ ವಿಚಾರದಲ್ಲಿ ಜಗಳವಾಗಿದ್ದೆ ಕಾರಣ ಎಂದು ಹೇಳಲಾಗಿತ್ತು. ಇದನ್ನು ಓದಿ: ಧೋನಿ ನನ್ನ ದೊಡ್ಡಣ್ಣನಂತೆ – ಕೊನೆಗೂ ಮೌನ ಮುರಿದ ರೈನಾ

    ಇದಾದ ನಂತರ ಮತ್ತೆ ಯೂಟರ್ನ್ ಹೊಡೆದಿದ್ದ ಶ್ರೀನಿವಾಸನ್, ಸಿಎಸ್‍ಕೆ ತಂಡಕ್ಕೆ ರೈನಾ ಅವರ ಕೊಡುಗೆ ಅದ್ಭುತವಾಗಿದೆ. ಸುರೇಶ್ ರೈನಾ ಅವರು ಇದೀಗ ಏನು ಮಾಡುತ್ತಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಂಡು ಅವರಿಗೆ ಅವಕಾಶ ನೀಡುವುದು ಮುಖ್ಯ. ನಮ್ಮ ತಂಡದ ಆಟಗಾರರು ಒಂದೇ ಕುಟುಂಬದಂತೆ. ಕಳೆದ ಒಂದು ದಶಕದಿಂದ ಕುಟುಂಬವಾಗಿದ್ದೇವೆ ಎಂದು ಹೇಳಿದ್ದರು.

    ಐಪಿಎಲ್‍ನಿಂದ ಹೊರ ಬಂದಿದ್ದಕ್ಕೆ ಕಾರಣ ತಿಳಿಸಿರುವ ರೈನಾ, ಮಹಿಭಾಯ್ ನನ್ನ ದೊಡ್ಡಣ್ಣನಂತೆ. ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ, ಇವೆಲ್ಲ ಕಟ್ಟುಕಥೆ ಎಂದಿದ್ದಾರೆ. ಜೊತೆಗೆ ನಾನು ಐಪಿಎಲ್‍ನಿಂದ ಹೊರಬರಲು ಕೊರೊನಾ ವೈರಸ್ ಕಾರಣ, ಸದ್ಯ ದುಬೈನಲ್ಲಿ ಪರಿಸ್ಥಿತಿ ಸರಿಯಿಲ್ಲ. ನನಗೆ ಕುಟುಂಬವಿದೆ. ಎರಡು ಮಕ್ಕಳು, ವಯಸ್ಸಾದ ಪೋಷಕರು ಇದ್ದಾರೆ. ಇದೆಲ್ಲದರ ನಡುವೆ ನಾನು ಅಲ್ಲಿ ಉಳಿಯಲು ಆಗಲಿಲ್ಲ ಎಂದು ರೈನಾ ಹೇಳಿದ್ದಾರೆ.

  • ಚೆನ್ನೈ ಯಾವಾಗಲೂ ರೈನಾರೊಂದಿಗೆ ನಿಲ್ಲುತ್ತದೆ- ಶ್ರೀನಿವಾಸನ್ ಯೂಟರ್ನ್

    ಚೆನ್ನೈ ಯಾವಾಗಲೂ ರೈನಾರೊಂದಿಗೆ ನಿಲ್ಲುತ್ತದೆ- ಶ್ರೀನಿವಾಸನ್ ಯೂಟರ್ನ್

    ಮುಂಬೈ: ನನ್ನ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾವಾಗಲೂ ಸುರೇಶ್ ರೈನಾ ಪರ ನಿಲ್ಲುತ್ತದೆ ಎಂದು ಹೇಳಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿರುವ ಚೆನ್ನೈ ತಂಡದ ಮಾಲೀಕ ಶ್ರೀನಿವಾಸನ್, ಸಿಎಸ್‍ಕೆ ತಂಡಕ್ಕೆ ರೈನಾ ಅವರ ಕೊಡುಗೆ ಅದ್ಭುತವಾಗಿದೆ. ಸುರೇಶ್ ರೈನಾ ಅವರು ಇದೀಗ ಏನು ಮಾಡುತ್ತಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಂಡು ಅವರಿಗೆ ಅವಕಾಶ ನೀಡುವುದು ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ರೈನಾ ಬೆನ್ನಲ್ಲೇ ಚೆನ್ನೈಗೆ ಮತ್ತೊಂದು ಹಿನ್ನಡೆ- ಮತ್ತೊಬ್ಬ ಸ್ಟಾರ್ ಆಟಗಾರ ಟೂರ್ನಿಯಿಂದ ದೂರ?

    ನಮ್ಮ ತಂಡ ಆಟಗಾರರು ಒಂದೇ ಕುಟುಂಬದಂತೆ. ಕಳೆದ ಒಂದು ದಶಕದಿಂದ ಕುಟುಂಬವಾಗಿದ್ದೇವೆ. ನಾನು ಕ್ರಿಕೆಟಿಗರನ್ನು ಪ್ರೈಮಾ ಡೊನ್ನಾಗಳಂತೆ ಹೋಲಿಕೆ ಮಾಡಿದೆ. ಆದರೆ ಅದು ನಕಾರಾತ್ಮಕವಲ್ಲ. ಪ್ರೈಮಾ ಡೊನ್ನಾ ಪ್ರಮುಖ ಗಾಯಕರು, ಅದೇ ರೀತಿ ಕ್ರಿಕೆಟಿಗರು ಯಾವಾಗಲೂ ವ್ಯಾಯಾಮದಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ಹೇಳಿದ್ದಾಗಿ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ಅದರೇ ಇದನ್ನು ತಪ್ಪಾಗಿ ಉಲ್ಲೇಖಿಸಿದ್ದು ದುರದೃಷ್ಟಕರ ಎಂದಿದ್ದಾರೆ.

    ಐಪಿಎಲ್ ಟೂರ್ನಿ ಭಾರತದ ಹೆಮ್ಮೆ. ವಿಶ್ವದ ಅತಿದೊಡ್ಡ ಬ್ರಾಂಡ್ ಆಗಿ ರಫ್ತು ಎಂದು ಹೇಳಬಹುದು. ಐಪಿಎಲ್ ವಿಶ್ವದ ಅತಿದೊಡ್ಡ ಕ್ರೀಡಾ ಟೂರ್ನಿ ಎಂದು ಹೇಳಲು ನಾವು ತುಂಬಾ ಹೆಮ್ಮೆ ಪಡುತ್ತೇವೆ. ಏಕೆಂದರೆ ಕೇವಲ 13 ವರ್ಷಗಳಲ್ಲಿ ಅಷ್ಟು ದೊಡ್ಡ ಸಾಧನೆಯನ್ನು ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೋಟೆಲ್ ರೂಮ್ ವಿಚಾರದಲ್ಲಿ ರೈನಾ ಕಿರಿಕ್- ಐಪಿಎಲ್ ತೊರೆಯಲು ಇದೇನಾ ಕಾರಣ?

  • ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಮುಂಬೈ: ಬಿಸಿಸಿಐ ಮುಂಬರುವ ವರ್ಷದಲ್ಲಿ ಏಕದಿನ ಸೂಪರ್ ಸೀರಿಸ್ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ 4 ದೇಶಗಳ ನಡುವೆ ಸೂಪರ್ ಸೀರಿಸ್ ಕ್ರಿಕೆಟ್ ಟೂರ್ನಿಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಮೂಲಕ ಕ್ರಿಕೆಟ್ ಜಗತ್ತಿನ ‘ಬಿಗ್ ತ್ರೀ’ ಮಂಡಳಿಗಳು ಐಸಿಸಿ ವಿರುದ್ಧವೇ ತೊಡೆ ತಟ್ಟಲು ಮುಂದಾಗುತ್ತಿದೆ.

    ಐಸಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಾರ್ಷಿಕ ಒಂದು ಸರಣಿಯನ್ನು ವಿಶ್ವಕಪ್ ಮಾದರಿಯಲ್ಲಿ ನಡೆಸಲು ಸಿದ್ಧತೆ ನಡೆಸಿತ್ತು. ಆ ಮೂಲಕ ವಾರ್ಷಿಕವಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಐಸಿಸಿ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ ಈ ಪ್ರಸ್ತಾಪಕ್ಕೆ ವಿರೋಧವಾಗಿ 4 ದೇಶಗಳ ನಡುವೆ ಸೂಪರ್ ಸೀರಿಸ್ ನಡೆಸಲು ಮುಂದಾಗುತ್ತಿದೆ.

    ಯಾಕೆ ಈ ಪ್ರಸ್ತಾಪ?
    ಆದಾಯ ಹಂಚಿಕೆ ವಿಚಾರದಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಕಿತ್ತಾಟಗಳು ನಡೆಯುತ್ತಿದ್ದು ಬಿಸಿಸಿಐ ಸೇರಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಐಸಿಸಿಗೆ ಹೆಚ್ಚು ಆದಾಯ ತಂದುಕೊಡುವ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಐಸಿಸಿಯ ಆದಾಯದಲ್ಲಿ ತಮಗೆ ಹೆಚ್ಚಿನ ಪಾಲನ್ನು ನೀಡುವಂತೆ ಈ ಹಿಂದೆಯೇ ಈ ಮಂಡಳಿಗಳು ಪ್ರಸ್ತಾಪ ಮಾಡಿದ್ದವು. ಬಿಗ್ ತ್ರೀ ಕ್ರಿಕೆಟ್ ರಾಷ್ಟ್ರಗಳ ಈ ಬೇಡಿಕೆಯನ್ನು ನಿರಾಕರಿಸಿದ್ದ ಐಸಿಸಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಇತರೇ ರಾಷ್ಟ್ರಗಳಿಗೂ ಕೂಡ ಆರ್ಥಿಕವಾಗಿ ಬೆಂಬಲ ನೀಡಬೇಕಾದ ಕಾರಣ ಹೆಚ್ಚಿನ ಪಾಲನ್ನು ನೀಡಲಾಗುವುದಿಲ್ಲ ಎಂದಿತ್ತು.

    ಐಸಿಸಿ ತನ್ನ ಹೆಚ್ಚಿನ ಆದಾಯವನ್ನು ಕ್ರಿಕೆಟ್ ಸರಣಿಯ ಟೆಲಿವಿಷನ್ ಪ್ರಸಾರ ಹಕ್ಕುಗಳ ಮಾರಾಟದ ಮೂಲಕ ಪಡೆಯುತ್ತದೆ. ಉದಾಹರಣೆ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಪ್ರಸಾರ ಹಕ್ಕುಗಳ ಮಾರಾಟದಿಂದ ಅತಿ ಹೆಚ್ಚು ಆದಾಯವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಐಸಿಸಿ ಪ್ರತಿವರ್ಷ ವಿಶ್ವಕಪ್ ಮಾದರಿಯ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ನಡೆಸಿತ್ತು.

    ಐಸಿಸಿಯ ಈ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಸಿಸಿಐ ಸದ್ಯ ಸೂಪರ್ ಸೀರಿಸ್ ಆಯೋಜನೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಈ ಟೂರ್ನಿಯಲ್ಲಿ ಆಡಲು ಇಂಗ್ಲೆಂಡ್ ಈಗಾಗಲೇ ಸಮ್ಮತಿ ಸೂಚಿಸಿದೆ. ಇತ್ತ ಆಸೀಸ್ ಕೂಡ ಒಲವು ತೋರಿದ್ದು, ಆ ಮೂಲಕ ‘ಬಿಗ್ ತ್ರೀ’ ಎಂದೇ ಖ್ಯಾತಿ ಪಡೆದಿರುವ ಈ ಮೂರು ಸಂಸ್ಥೆಗಳು ಐಸಿಸಿ ವಿರುದ್ಧವೇ ಒತ್ತಡವನ್ನು ಹಾಕುತ್ತಿವೆ.

    ಐಸಿಸಿಯ ಈಗಿನ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಸಂಸ್ಥೆ ದ್ವಿಪಕ್ಷೀಯ ಟೂರ್ನಿಗಳನ್ನು ಆಯೋಜಿಸಲು ಮಾತ್ರ ಅನುಮತಿಯನ್ನು ಹೊಂದಿವೆ. ಈಗ ನಿಯಮಗಳ ಬದಲಾವಣೆಗೂ ಐಸಿಸಿ ಮೇಲೆ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ಐಸಿಸಿಯ ವಾರ್ಷಿಕ ಕ್ರಿಕೆಟ್ ಟೂರ್ನಿಯ ಪ್ಲಾನ್‍ಗೆ ಅಪಸ್ವರವೂ ಕೇಳಿ ಬಂದಿದ್ದು, ಐಸಿಸಿ ಇಂತಹ ಟೂರ್ನಿ ನಡೆಸುವುದರಿಂದ ಆಟಗಾರರ ಮೇಲಿನ ಒತ್ತಡ ಹೆಚ್ಚಾಗಲಿದೆ. ಅಲ್ಲದೇ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲು ಕೂಡ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವಾಗಿದೆ. ಬಿಸಿಸಿಐ ಅಂದುಕೊಂಡಂತೆ ನಡೆದರೆ 2021 ರಲ್ಲಿ ಸೂಪರ್ ಸೀರಿಸ್ ನಡೆಯಲಿದ್ದು, ಭಾರತದಲ್ಲೇ ಮೊದಲ ಟೂರ್ನಿ ನಡೆಯಲಿದೆ.

    ಬಿಸಿಸಿಐ, ಐಸಿಸಿ ತಿಕ್ಕಾಟ ಯಾಕೆ?
    ಬಿಸಿಸಿಐ ಹಾಗೂ ಐಸಿಸಿ ನಡುವಿನ ತಿಕ್ಕಾಟ ಹಿಂದಿನಿಂದಲೇ ಜೋರಾಗಿದ್ದು, ಈ ಹಿಂದೆ ಆದಾಯದ ಹೆಚ್ಚುವರಿ ಪಾಲನ್ನು ನೀಡದಿದ್ದರೆ ಐಸಿಸಿ ಮಂಡಳಿಯಿಂದಲೇ ಹೊರ ಬರುವ ಎಚ್ಚರಿಕೆಯನ್ನು ನೀಡಿತ್ತು. ಈ ಸೂಪರ್ ಸೀರಿಸ್ ಹಿಂದಿನ ಪ್ರಮುಖ ವ್ಯಕ್ತಿ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಆಗಿದ್ದು, ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯಾಗಲು ಬೆಂಬಲವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಂಗೂಲಿ, ಶ್ರೀನಿವಾಸನ್ ಅವರ ಪ್ರಸ್ತಾಪವನ್ನು ಚಾಲ್ತಿಗೆ ತರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿದೆ.

    ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಆರಂಭದಲ್ಲೇ ಐಸಿಸಿ ಆದಾಯ ಹಂಚಿಕೆ ವಿರುದ್ಧ ಅಪಸ್ವರ ಎತ್ತಿದ್ದರು. ಅಲ್ಲದೇ ಬಿಸಿಸಿಐಗೆ ಹೆಚ್ಚಿನ ಆದಾಯವನ್ನು ತರುವುದು ತಮ್ಮ ಪ್ರಮುಖ ಗುರಿ ಎಂದಿದ್ದರು. ಈ ಹಿಂದೆ ಅಧಿಕಾರದಲ್ಲಿದ್ದ ಶ್ರೀನಿವಾಸನ್ ಅವರು ಕೂಡ ಮಂಡಳಿಗೆ ಹೆಚ್ಚಿನ ಆರ್ಥಿಕತೆಯನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಿದ್ದರು. ಬಿಸಿಸಿಐ ವಿಶ್ವ ಕ್ರಿಕೆಟ್‍ಗೆ ಸೇರುವ ಆದಾಯ ಶೇ.75 ರಿಂದ 80ರಷ್ಟನ್ನು ನೀಡುತ್ತಿದೆ.

    ವಿಶೇಷ ಎಂದರೆ ಹಲವು ಕ್ರಿಕೆಟ್ ಸಂಸ್ಥೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸತತ 3 ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಷ್ಟವನ್ನು ಎದುರಿಸುತ್ತಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಕಳೆದ ವರ್ಷ ಆರ್ಥಿಕ ಸಮಸ್ಯೆಗೆ ಸಿಲುಕಿ ಆಟಗಾರರ ವೇತನವನ್ನು ಪಾವತಿ ಮಾಡಲು ಸಮಸ್ಯೆ ಎದುರಿಸಿತ್ತು. ಐರ್ಲೆಂಡ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದ ಆಯೋಜನೆಯ ಅವಕಾಶವನ್ನು ಕೈ ಚೆಲ್ಲಿತ್ತು. ಉಳಿದಂತೆ ಪಾಕ್ ಕ್ರಿಕೆಟ್ ಮಂಡಳಿ ಕೂಡ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು, ಅದರ ಭವಿಷ್ಯವೇ ಡೋಲಾಯಮಾನವಾಗಿದೆ.

    ಬಿಸಿಸಿಐ ನಿರ್ಧಾರವೇಕೆ?
    ಈಗಾಗಲೇ ಬಿಸಿಸಿಐ ಅಧ್ಯಕ್ಷರು ಮಂಡಳಿಗೆ ಆರ್ಥಿಕತೆಯನ್ನು ಹೆಚ್ಚಿಸುವತ್ತ ಗಮನ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸೀರೀಸ್ ಆಯೋಜಿಸಿದರೆ ಟೂರ್ನಿಯ ಪ್ರಸಾರ ಹಕ್ಕುಗಳು ಸಹಜವಾಗಿಯೇ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿ ಆದಾಯ ಹೆಚ್ಚಳವಾಗಲಿದೆ. ಅಲ್ಲದೇ ಸೂಪರ್ ಸೀರೀಸ್ ಟೂರ್ನಿ ನಡೆಯುವುದರಿಂದ ಐಸಿಸಿಯ ಮಿನಿ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಬಹುದಾಗಿದೆ.