ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯಗಳು ಘೋಷಣೆ, ಜನಪ್ರಿಯವಾಗುತ್ತಿದ್ದಂತೆಯೇ ಈಗ ಜನರು ಗ್ಯಾರಂಟಿ ಹಾಗೂ ಭಾಗ್ಯಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ತಮ್ಮ ಸಿನಿಮಾ ಟೀಸರ್ ಮೂಲಕ ಐದು ಗ್ಯಾರಂಟಿಗಳನ್ನು (Guarantee) ನೀಡಲಿದೆ ‘ಈ ಪಟ್ಟಣಕ್ಕೆ ಏನಾಗಿದೆ ?’ (Ee Pattanakke Yenagide) ಚಿತ್ರತಂಡ.
ನೀವು ಯಾವುದೇ ಚಿತ್ರಮಂದಿರಕ್ಕೆ ಹೋದರೂ, ಚಿತ್ರ ಪ್ರಾರಂಭಕ್ಕೆ ಮೊದಲು ಬರುವ ಜಾಹೀರಾತಿನಲ್ಲಿ ಕೇಳುವ ಪದವೇ ಈ ಪಟ್ಟಣಕ್ಕೆ ಏನಾಗಿದೆ?. ಈಗ ಇದೇ ಪದ ಚಿತ್ರದ ಶೀರ್ಷಿಕೆಯಾಗಿದೆ. ಶೀರ್ಷಿಕೆಯ ಮೂಲಕವೇ ಸಾಕಷ್ಟು ಕತೂಹಲ ಮೂಡಿಸಿರುವ ಈ ಚಿತ್ರ ರವಿತೇಜೊ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿದೆ. ಬಿಡುಗಡೆಗೂ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಟೀಸರ್ ಮೂಲಕ ಚಿತ್ರದ ಕುರಿತು ಐದು ಗ್ಯಾರಂಟಿಗಳನ್ನು ಪ್ರೇಕ್ಷಕರಿಗೆ ನೀಡುವುದಾಗಿ ನಿರ್ದೇಶಕ ರವಿ ಸುಬ್ಬರಾವ್ ತಿಳಿಸಿದ್ದಾರೆ.
ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ನಾಯಕ ತನ್ನ ವಿಲಾಸ ಜೀವನಕ್ಕಾಗಿ ಹೇಗೆ ಅನೇಕರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಉನ್ನತ ಸ್ಥಾನಕ್ಕೆ ಏರುತ್ತಾನೆ ಎನ್ನುವದರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಕೂಡ ಕುತೂಹಲ ಭರಿತವಾಗಿ ತೋರಿಸಲಾಗಿದೆ. ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?
ಪ್ಯಾನ್ ಇಂಡಿಯಾ ಚಿತ್ರವಾಗುವ ಎಲ್ಲ ಸಾಧ್ಯತೆಗಳನ್ನೊಳಗೊಂಡ ಯೂನಿವರ್ಸಲ್ ಅಂಶಗಳಿರುವ ಈ ಚಿತ್ರಕ್ಕೆ ರವಿ ಸುಬ್ಬ ರಾವ್ (Ravi Subbarao) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವುದಲ್ಲದೆ, ನಾಯಕನಾಗೂ ಅಭಿನಯಿಸಿದ್ದಾರೆ. ರಾಧಿಕಾರಾಮ್ ಈ ಚಿತ್ರದ ನಾಯಕಿ. ರಿತೇಶ್ ಜೋಶಿ, ಶ್ರೀನಿಧಿ (Srinidhi), ಸತೀಶ್ ಶೆಟ್ಟಿ , ಸೋನಾ , ದಿಶಾ , ಸಂಧ್ಯಾ ವೇಣು , ಶ್ರೀ ಕ್ರೇಜಿಮೈಂಡ್, ಬಲರಾಮ್, ಸುಕನ್ಯಾ, ಗೋಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರಿತೇಶ್ ಜೋಶಿ ಮತ್ತು ರವಿ ಸುಬ್ಬ ರಾವ್ ನಿರ್ಮಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನೀಡಿದ್ದಾರೆ. ನೆಲ್ಸನ್ ಮೆಂಡಿಸ್ ಸಂಕಲನ ಹಾಗೂ ವಿನೋದ್ ಮತ್ತು ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಪಟ್ಟಣಕ್ಕೆ ಏನಾಗಿದೆ? ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲನೇ ಭಾಗ ತೆರೆಗೆ ಬರಲು ಸಿದ್ದವಾಗಿದೆ. ಎರಡನೇ ಭಾಗದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.
ಶ್ರೀನಿಧಿ (Srinidhi) ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಬ್ಲಿಂಕ್’. ಈಗಾಗಲೇ ಟೀಸರ್ ಮೂಲಕ ಬ್ಲಿಂಕ್ (Blink) ಸಿನಿಮಾ ಗಮನ ಸೆಳೆದಿದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಚೈತ್ರಾ ಜೆ ಆಚಾರ್ (Chaitra Achar)ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರಾಗಿ ನಟಿಸಿದ್ದಾರೆ. ಇಂದು ನಾಯಕಿ ಚೈತ್ರಾ ಜೆ ಆಚಾರ್ ಹುಟ್ಟುಹಬ್ಬ ಆ ಪ್ರಯುಕ್ತ ‘ಬ್ಲಿಂಕ್’ ಚಿತ್ರತಂಡ ಚಿತ್ರದಲ್ಲಿನ ಚೈತ್ರಾ ಜೆ ಆಚಾರ್ ಪಾತ್ರದ ಸಣ್ಣ ಝಲಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭ ಹಾರೈಸಿದೆ.
‘ಮಹಿರಾ’, ‘ಆ ದೃಶ್ಯ’, ತಲೆದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ‘ಬ್ಲಿಂಕ್’ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 90ರ ದಶಕದ ಸೆಮಿ ಮಾಡ್ರೆನ್ ಹಳ್ಳಿ ಹುಡುಗಿಯಾಗಿ ದೇವಕಿ ಅರಸ್ ಪಾತ್ರ ನಿಭಾಯಿಸಿದ್ದಾರೆ. ದೇವಕಿ ಅರಸ್ ಚಿತ್ರದಲ್ಲಿ ತುಂಬಾ ಮಾತನಾಡುವ, ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ ಎಂದು ಚಿತ್ರದ ನಿರ್ದೇಶಕ ಶ್ರೀನಿಧಿ ತಿಳಿಸಿದ್ದಾರೆ. ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ಜನನಿ ಪಿಚ್ಚರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು
ಗಾಯಕಿ ಹಾಗೂ ನಟಿಯಾಗಿರುವ ಚೈತ್ರಾ ಜೆ ಆಚಾರ್ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಸ್ಟ್ರಾಬೆರಿ’ ಸೇರಿದಂತೆ ಹಲವು ಸಿನಿಮಾ ಅವಕಾಶಗಳು ಇವರ ಕೈಯಲ್ಲಿವೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಸೋಜುಗಾದ ಸೂಜಿಮಲ್ಲಿಗೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.
‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ಹೊಸ ಪ್ರತಿಭೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.
ತಮಿಳಿನ ಖ್ಯಾತ ನಟ ಸಿಂಬು ಮದುವೆ ವಿಚಾರವಾಗಿ ಆಗಾಗ್ಗೆ ಸ್ಪೋಟಕ ಸುದ್ದಿಗಳು ಬರುತ್ತಲೇ ಇರುತ್ತವೆ. ಸಿಂಬು ಮದುವೆಯಾಗಲು ಸಾವಿರಾರು ಹುಡುಗಿಯರು ಸಾಲಲ್ಲಿ ನಿಂತಿದ್ದಾರೆ. ನಿಮ್ಮ ಬಾಳಸಂಗಾತಿ ಹೇಗಿರಬೇಕು ಎಂದು ತಮಿಳು ಹುಡುಗಿಯರನ್ನು ಕೇಳಿ ನೋಡಿ, ಅವರು ಹೇಳುವ ಒಂದೇ ಒಂದು ಹೆಸರು ‘ಸಿಂಬು’. ಇದನ್ನೂ ಓದಿ : 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್
ಇಂತಹ ಸಿಂಬುವನ್ನು ವರಿಸುವುದಕ್ಕಾಗಿ ಸಾಮಾನ್ಯ ಹುಡುಗಿಯರು ಮಾತ್ರವಲ್ಲ, ಸಿಲೆಬ್ರಿಟಿಗಳು ಮತ್ತು ಕಿರುತೆರೆಯ ಜನಪ್ರಿಯ ನಟಿಯರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿಯೇ ಸಿಂಬು ಮದುವೆ ವಿಚಾರವಾಗಿ ಆಗಾಗ್ಗೆ ತಮಿಳು ಸಿನಿಮಾ ರಂಗದಲ್ಲಿ ಬ್ರೇಕಿಂಗ್ ಸುದ್ದಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಂಥದ್ದೊಂದು ತಾಜಾ ಸುದ್ದಿ ನಿನ್ನೆ ರಾತ್ರಿ ಸಿಕ್ಕಿದೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?
ತಮಿಳಿನ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಪ್ರಸಿದ್ಧ ಧಾರಾವಾಹಿ ‘ಯಾರಡಿ ನೀ ಮೋಹಿನಿ’ ಖ್ಯಾತಿಯ ಶ್ರೀನಿಧಿ ನಿನ್ನೆ ರಾತ್ರಿ ಸಿಂಬು ಮನೆಯ ಮುಂದೆ ಧರಣಿ ಕೂತಿದ್ದಾರೆ. ಅದಕ್ಕೆ ಕಾರಣ ತಾವು ಸಿಂಬು ಅವರನ್ನು ನೋಡಲೇಬೇಕು ಎನ್ನುವುದು ಅವರ ಹಠವಾಗಿತ್ತು. ಸಿಂಬು ಕುಟುಂಬದ ಸದಸ್ಯರು ಎಷ್ಟೇ ಸಮಾಧಾನ ಮಾಡಿದರೂ, ಶ್ರೀನಿಧಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಮನೆಯ ಮುಂದೆ ಹೈಡ್ರಾಮಾನೇ ನಡೆದು ಹೋಯಿತು. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್
ಶ್ರೀನಿಧಿ ಅವರು ಸಿಂಬು ಮನೆ ಮುಂದೆ ಬರುವುದಕ್ಕೆ ಕಾರಣವೂ ಇದೆ. ಈಕೆ ಸಿಂಬು ಅಪ್ಪಟ ಅಭಿಮಾನಿ. ಈ ಹಿಂದೆ ತಾವು ಮದುವೆ ಆಗುವುದಾದರೆ, ಸಿಂಬು ಅವರನ್ನೇ ಆಗುವುದಕ್ಕೆ ಹೇಳಿಕೆ ನೀಡಿದ್ದರು. ವಿಡಿಯೋ ಕೂಡ ಮಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು. ಇದೀಗ ಅದೇ ಹುಡುಗಿಯೇ ಸಿಂಬು ಮನೆ ಮುಂದೆ ಕೂತಿದ್ದಾರೆ. ಕೊನೆಗೆ ಅವರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಲಾಗಿದೆ.
ಬೆಂಗಳೂರು: ಒಂದು ಸಿನಿಮಾ ಹಿಟ್ ಆಗಬೇಕೆಂದ್ರೆ ಅದಕ್ಕೆ ತೆರೆಯ ಮೇಲೆ ಮತ್ತು ಹಿಂದಿನ ಕೈಗಳ ಪರಿಶ್ರಮ ಇರುತ್ತದೆ. ಅಂತೆಯೇ ಒಂದು ಸಿನಿಮಾ ಜನಮನದಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿರಲು ಅದು ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತೆ. ಕನ್ನಡದ ಎವರ್ ಗ್ರೀನ್ ಸಿನಿಮಾಗಳಾದ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳನ್ನು ಜನ ಇಂದಿಗೂ ನೋಡುತ್ತ ಕುಳಿತವರು ಅತ್ತಿತ್ತ ಕದಡಲ್ಲ. ಕಾರಣ ಕಥೆಯ ಹಿಡಿತ, ಕಲಾವಿದರ ನಟನೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲ ಅಂಶಗಳು ಅಲ್ಲಿ ಮುಖ್ಯವಾಗಿರುತ್ತವೆ.
ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಎವರ್ ಗ್ರೀನ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರ ಬಿಡುಗಡೆ ಮುನ್ನವೇ ಕೆಜಿಎಫ್ ಎಂಬ ಮಿಂಚಿನ ಬೆಳಕು ಕನ್ನಡದ ಗಡಿದಾಟಿ ಎಲ್ಲಡೆ ಪಸರಿಸುತ್ತಿದೆ. ಕೋಲಾರದ ಚಿನ್ನದ ಗಣಿಯಲ್ಲಿ ಆರಂಭವಾಗುವ ಕಥೆ ಅಲ್ಲಿಯೇ ಅಂತ್ಯವಾಗಲಿದೆ. ಈ ಆದಿ ಮತ್ತು ಅಂತ್ಯಗಳ ನಡುವಿನ ಕಥೆಯೇ ಕೆಜಿಎಫ್. ಕೆಜಿಎಫ್ ಸಿನಿಮಾ ಸೆಟ್ಟೇರಿದಾಗ ಯಶ್ ನಟನೆ ಉಳಿದ ಚಿತ್ರಗಳಂತೆ ಇದು ಇರಬಹುದು ಎಂದು ಹಲವರು ಲೆಕ್ಕಾಚಾರ ಹಾಕಿದ್ದುಂಟು. ಈ ಹಿಂದೆ ಯಶ್ ಹೆಚ್ಚಾಗಿ ಲವರ್ ಬಾಯ್ ಪಾತ್ರ ಮತ್ತು ಮಂಡ್ಯದ ಪಡ್ಡೆ ಹುಡುಗನ ಗೆಟಪ್ ನಲ್ಲಿ ಅಭಿಮಾನಿಗಳನ್ನು ಅಕರ್ಷಿಸಿದ್ದುಂಟು. ಮೊಗ್ಗಿನ ಮನಸ್ಸಿನಿಂದ ಅರಂಭವಾದ ಯಶ್ ಪಯಣ ಕೆಜಿಎಫ್ ನಿಲ್ದಾಣದಲ್ಲಿದೆ.
ಮೊಗ್ಗಿನ ಮನಸ್ಸಿನ ಚೆಲುವನಾಗಿ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಯಶ್, ಇಂದು ರಣ ರಣ ಲುಕ್ ನಲ್ಲಿ ಜನರ ಮುಂದಿದ್ದಾರೆ. ಅಂದಿಗೂ-ಇಂದಿಗೂ ಹಲವು ಏಳು ಬೀಳುಗಳನ್ನು ಕಂಡಿರುವ ಯಶ್ ಹೊಸ ದಾಖಲೆಯ ಬರೆಯುವ ಹುಮ್ಮಸ್ಸಿನಲ್ಲಿರೋದಂತು ಸತ್ಯ. ಚಿತ್ರತಂಡ ಆರಂಭದಿಂದಲೂ ಇದೊಂದು ಭಿನ್ನ ಸಿನಿಮಾ ಅಂತಾನೇ ಹೇಳುತ್ತಾ ಬರುತ್ತಿತ್ತು. ಅಂದು ಚಿತ್ರತಂಡ ಹೇಳಿದ ಮಾತು ಸತ್ಯ ಎಂಬುವುದು ಹಲವರಿಗೆ ಇಂದು ಮನವರಿಕೆ ಆಗಿದ್ದಂತು ನಿಜ. ಈ ಹಿಂದೆ ಬೇರೆ ಭಾಷೆಯ ಸಿನಿಮಾಗಳು ಟ್ರೇಲರ್ ರಿಲೀಸ್ ಮಾಡುವಾಗ ಕನ್ನಡದ ಪತ್ರಕರ್ತರು ಆಯಾ ಸ್ಥಳಕ್ಕೆ ಅಂದ್ರೆ ಚೆನ್ನೈ, ಹೈದರಾಬಾದ್, ಮುಂಬೈ ಹೋಗುತ್ತಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬೇರೆ ಭಾಷೆಯ ಪತ್ರಕರ್ತರು ಬಂದಿರೋದು ಈ ಚಿತ್ರದ ಮತ್ತೊಂದು ವಿಶೇಷ.
ಮೊದಲ ಗೆಲುವು:
ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಮೊದಲ ಟೀಸರ್ ಬಿಡುಗಡೆ ಆಗಿತ್ತು. ಒಂದೇ ದಿನ ಅಭಿಮಾನಿಗಳ ಹರ್ಷ ಇಮ್ಮಡಿಗೊಂಡ ದಿನ. ಒಂದು ವರ್ಷದಿಂದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಯಶ್ ಕೆಜಿಎಫ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತೆ ಹೊರತು ಒಂದೇ ಒಂದು ವಿಡಿಯೋ ಹೊರ ಬಂದಿರಲಿಲ್ಲ. 2018 ಜನವರಿ 8ರಂದು ಯಶ್ ಅವರಿಗೆ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಕೆಜಿಎಫ್ ಟೀಸರ್ ಬಿಡುಗಡೆ ಆಗಿತ್ತು. ಈ ಟೀಸರ್ ನಲ್ಲಿಯೂ ಚಿತ್ರತಂಡ ತನ್ನ ವಿಶೇಷತೆಯನ್ನು ತೋರಿಸಿತ್ತು. ಸಿನಿಮಾದ ದೃಶ್ಯಗಳ ಜೊತೆಗೆ ಮೇಕಿಂಗ್ ನ ಕೆಲ ತುಣುಕುಗಳನ್ನು ಸೇರಿಸಿ ಟೀಸರ್ ರೂಪದಲ್ಲಿ ಹೊರತರಲಾಗಿತ್ತು. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ಮೂಡಿ ಬಂದಿತ್ತು.
ಕನ್ನಡದ ನಟನ ಸಿನಿಮಾದ ಟೀಸರ್ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. ಕೆಜಿಎಫ್ ಟೀಸರ್ ಬಿಡುಗಡೆಯಾದಾಗ ತಮಿಳುನಾಡಿನಲ್ಲಿ ತನ್ನ ಮೊದಲ ಹೆಜ್ಜೆಯ ಗುರುತು ಮೂಡಿಸಿತ್ತು. ಆ ಟೀಸರ್ ಕಾಲಿವುಡ್ ಅಣ್ತಾಮ್ಮದಿಂರನ್ನು ಆಕರ್ಷಿಸಿತ್ತು. ತಮಿಳುನಾಡಿನ ಅಭಿಮಾನಿಗಳು ಯಶ್ ಕಟೌಟ್ ಹಾಕಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅದುವೇ ಕೆಜಿಎಫ್ ಚಿತ್ರದ ಮೊದಲ ಗೆಲುವು.
ಟೀಸರ್ ಬಿಡುಗಡೆ ಬಳಿಕ ಸುಮಾರು 6ರಿಂದ 7 ತಿಂಗಳು ಕೆಜಿಎಫ್ ಸದ್ದಿಲ್ಲದೇ ಯಶಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಈ ಮಧ್ಯೆ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ ಎಂಬ ವಿಷಯ ಹೊರ ಬಂತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಚಿತ್ರ ನವೆಂಬರ್ ತಿಂಗಳಲ್ಲಿ ಹೊರ ತರಲು ಸಿದ್ಧತೆ ನಡೆಸಲಾಗುತ್ತಿದೆ ಅಂತಾ ಹೇಳುವ ಮೂಲಕ ರಾಕಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅದ್ರೆ ಪೋಸ್ಟ್ ಪ್ರೊಡೆಕ್ಷನ್ ಕೆಲಸ ತಡವಾದ್ದರಿಂದ ಚಿತ್ರತಂಡ ಅಧಿಕೃತವಾಗಿ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ ಎಂದು ಪ್ರಕಟಿಸಿತು.
ರಾಕಿಂಗ್ ಸಾಥ್:
ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದಾಗ ಕೆಜಿಎಫ್ ಗೆ ಸಾಥ್ ನೀಡಿದ್ದು, ತಮಿಳು ನಟ ವಿಶಾಲ್, ಬಾಲಿವುಡ್ ನಟ ಫರ್ಹಾನ್ ಅಖ್ತರ್, ಹೊಂಬಾಳೆ ಫಿಲ್ಮ್ಸ್, ಲಹರಿ ಮ್ಯೂಸಿಕ್ ಸಂಸ್ಥೆ ಮತ್ತು ಎಕ್ಸೆಲ್ ಮೂವೀಸ್ ಸೇರಿದಂತೆ ಎಲ್ಲ ಭಾಷೆಯ ನಿರ್ಮಾಪಕರು ಕೆಜಿಎಫ್ ಖರೀದಿಗೆ ಮುಂದಾದರು. ಹೀಗೆ ಎಲ್ಲ ಭಾಷೆಯಲ್ಲಿ ಬಲಾಡ್ಯ ಸಂಸ್ಥೆಗಳೇ ಕೆಜಿಎಫ್ ಬೆನ್ನಿಗೆ ನಿಂತಿವೆ.
ನವೆಂಬರ್ 11ರಂದು ಬಿಡುಗಡೆಯಾದ ಟ್ರೇಲರ್ ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಸಾರಿ ಹೇಳಿತ್ತು. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಂಡಿತ್ತು. ಇನ್ನು ಟ್ರೇಲರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿತ್ತು.
1951ರಂದು ಕೋಲಾರದಲ್ಲಿ ಆರಂಭವಾಗುವ ಚಿತ್ರಕಥೆ, ಮುಂಬೈನತ್ತ ಸಾಗಿ ಬರುತ್ತದೆ. ಮುಂಬೈ ಭೂಗತ ಲೋಕದ ಬಾದ್ ಶಾ ಆಗುವ ರಾಕಿ ಕೆಜಿಎಫ್‍ಗೆ ಹೇಗೆ ಬರುತ್ತಾನೆ. ಮುಂಬೈನಲ್ಲಿ ಡಾನ್ ನಾಗಿ ಬೆಳೆಯುವ ರಾಕಿ ಕೋಲಾರದ ಕೆಜಿಎಫ್ ಗೆ ಹೇಗೆ ಬರುತ್ತಾನೆ. ಆತನ ಮೂಲ ಕಥೆ ಏನೆಂಬುದನ್ನು ನೀವು ಸಿನಿಮಾದಲ್ಲಿ ಕಾಣಬಹುದು. ಆದ್ರೆ ಟ್ರೇಲರ್ ನಲ್ಲಿ ಎಲ್ಲವನ್ನು ತಿಳಿಸಿರುವ ನಿರ್ದೇಶಕ ಕಥೆಯ ಮೂಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.
ಪಂಚ ಭಾಷೆಗಳಲ್ಲಿ ತಯಾರಾಗಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.
ನಿರ್ದೇಶಕ ಪ್ರಶಾಂತ್ ನೀಲ್ ಮನದಾಳದ ಮಾತು:
ತಾಯಿ ಮತ್ತು ಒಂದು ಮಗುವಿನ ಬಾಂಧವ್ಯವನ್ನ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಟ್ರೇಲರ್ ಮತ್ತು ಟೀಸರ್ ನೋಡಿದವರು 70ರ ದಶಕದ ಅಂತಾನೇ ತಿಳಿದಿರ್ತಾರೆ. ಆದ್ರೆ ತಾಯಿ ಮತ್ತು ಮಗನ ಸೆಂಟೆಮೆಂಟ್ ನಮ್ಮ ಚಿತ್ರದ ಮೂಲ ಕಥೆ. 1970ರ ದಶಕವನ್ನ ಚಿತ್ರಕ್ಕಾಗಿ ಪುನರ್ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಅಂದಿನ ಉಡುಪು, ಮಾತಿನ ಶೈಲಿ, ಜೀವನ ಕ್ರಮ, ಸ್ಥಳ ಆಯ್ಕೆಯ ಬಗ್ಗೆ ರಿಸರ್ಚ್ ಮಾಡಲು ನಮ್ಮ ತಂಡ ಎರಡು ವರ್ಷ ಕೆಲಸ ಮಾಡಿದೆ. ಚಿತ್ರದ ಪ್ರತಿಯೊಂದು ಅಂಶವನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲಾಯಿತು. ಫೋಟೋ ಶೂಟ್, ಸ್ಕೆಚ್ ಮಾಡಿ ಎಲ್ಲವನ್ನು 1970ರ ಕಾಲದಂತೆ ನಿರ್ಮಿಸಿಲು ಮಾಡಲು ಚಿತ್ರತಂಡ ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಚಿತ್ರದ ಅನುಭವವನ್ನು ಪ್ರಶಾಂತ್ ನೀಲ್ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದರು.
ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿರುವಾಗಲೇ ಚಿತ್ರತಂಡ ಐದು ಭಾಷೆಗಳಲ್ಲಿಯೂ ‘ಸಲಾಂ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿತು. ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ಸಲಾಮ್ ರಾಕಿ ಭಾಯ್ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆದ ಮರುದಿನವೇ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಆಯ್ತು. ಮತ್ತೊಂದು ಟ್ರೇಲರ್ ರಿವೀಲ್ ಬಿಡುಗಡೆಯಾದ ಕಥೆಯ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.
ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಸಾಮಥ್ರ್ಯವುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿತ್ತು.
ಹೀಗೆ ಚಿತ್ರ ದಿನದಿಂದ ದಿನಕ್ಕೆ ಹೊಸ ಹೊಸ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟಿಸುತ್ತಿದ್ದು, ಭಾನುವಾರ ಸೆಂಟಿಮೆಂಟ್ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಯಶ್ ‘ರಾಕಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿಧಿ ರಾಕಿಂಗ್ ಸ್ಟಾರ್ ಗೆ ಜೊತೆಯಾಗಿದ್ದಾರೆ. ರವಿಶಂಕರ್ ಸೋದರ ಅಯ್ಯಪ್ಪ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಅನಂತ್ ನಾಗ್ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ವಿಶೇಷ ಪಾತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್ ಗೋಲ್ಡ್ ಚೆಲುವೆ ಮೌನಿ ರಾಯ್ ನಟಿಸಿದ್ದಾರೆ.
– ಬಹುನಿರೀಕ್ಷಿತ ಕೆಜಿಎಫ್ ಟ್ರೇಲರ್ ಬಿಡುಗಡೆ
– ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಭಾರತದಲ್ಲೇ ಟ್ರೆಂಡ್
ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕಳೆದ ಎರಡೂವರೆ ವರ್ಷಗಳಿಂದ ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು. ಕನ್ನಡದ ವಿಭಿನ್ನ ಸಿನಿಮಾ ಎಂದು ಕೆಜಿಎಫ್ ಗುರುತಿಸಿಕೊಳ್ಳುತ್ತಿದೆ. ಸಿನಿಮಾ ಬಿಡುಗಡೆ ಮುನ್ನವೇ ಇಡೀ ದೇಶವೇ ಕನ್ನಡ ಸಿನಿಮಾಗಳತ್ತ ನೋಡುವಂತೆ ಮಾಡಿದೆ ಕೆಜಿಎಫ್.
ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಟ್ರೇಲರ್ ಸಾರಿ ಸಾರಿ ಹೇಳುತ್ತಿದೆ. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಾಣುತ್ತಿದೆ. ಇನ್ನು ಟೀಸರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ಟ್ರೇಲರ್ ನಲ್ಲಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ.
1951ರಂದು ಕೋಲಾರದಲ್ಲಿ ಆರಂಭವಾಗುವ ಚಿತ್ರಕಥೆ, ಮುಂಬೈನತ್ತ ಸಾಗಿ ಬರುತ್ತೇವೆ. ಮುಂಬೈ ಭೂಗತ ಲೋಕದ ಬಾದ್ ಶಾ ಆಗುವ ರಾಕಿ ಕೆಜಿಎಫ್‍ಗೆ ಹೇಗೆ ಬರುತ್ತಾನೆ. ಮುಂಬೈನಲ್ಲಿ ಡಾನ್ ನಾಗಿ ಬೆಳೆಯುವ ರಾಕಿ ಕೋಲಾರದ ಕೆಜಿಎಫ್ ಗೆ ಹೇಗೆ ಬರುತ್ತಾನೆ. ಆತನ ಮೂಲ ಕಥೆ ಏನೆಂಬುದನ್ನು ನೀವು ಸಿನಿಮಾದಲ್ಲಿ ಕಾಣಬಹುದು. ಆದ್ರೆ ಟ್ರೇಲರ್ ನಲ್ಲಿ ಎಲ್ಲವನ್ನು ತಿಳಿಸಿರುವ ನಿರ್ದೇಶಕ ಕಥೆಯ ಮೂಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.
ಹಲವು ವಿಶೇಷತೆಗಳಿಂದ ಕೂಡಿರುವ ಸಿನಿಮಾ ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿ ಕಾರ್ಮಿಕ ವರ್ಗದ ಜೀವನಾಧರಿತ ಕಥೆಯನ್ನು ಒಳಗೊಂಡಿದೆ. ಬೇರೆ ಭಾಷೆಯ ಸಿನಿಮಾಗಳ ಟ್ರೇಲರ್ ರಿಲೀಸ್ ದಿನ ಬೇರೆ ರಾಜ್ಯಗಳಿಗೆ ತೆರಳಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಬೇಕಿತ್ತು. ಇದೇ ಮೊದಲ ಬಾರಿಗೆ ಬೇರೆ ಭಾಷೆಯವರು ಕನ್ನಡದ ಕೆಜಿಎಫ್ ಸಿನಿಮಾ ಟ್ರೇಲರ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಜನವರಿ 8, 2018ರಂದು ಚಿತ್ರ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಟೀಸರ್ ಬಿಡುಗಡೆ ಮಾಡುವ ಮೂಲಕ ರಾಕಿಂಗ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದರು. ಅಖಂಡ ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿರೋ ಕೆಜಿಎಫ್ ಚಿತ್ರ ಬಿಡುಗಡೆಯ ಹಂತ ತಲುಪಿಕೊಂಡಿದೆ. ಎರಡು ವರ್ಷದ ಸುದೀರ್ಘಾವಧಿಯ ತುಂಬಾ ಈ ಚಿತ್ರ ಹುಟ್ಟಿಸಿರೋ ನಿರೀಕ್ಷೆ ಸಣ್ಣದೇನಲ್ಲ. ಯಶ್ ಅಭಿನಯದ ಈ ಚಿತ್ರವೀಗ ಬಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ಟ್ರೆಂಡ್ ಸೆಟ್ ಮಾಡಿದೆ.
ಪಂಚ ಭಾಷೆಗಳಲ್ಲಿ ತಯಾರಾಗಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.
ಕೆಜಿಎಫ್ ಕಥೆ ಯೂನಿವರ್ಸಲ್ ಕಾನ್ಸೆಪ್ಟ್ ಆಗಿದ್ದು, ತಾಯಿ-ಮಗನ ಸೆಂಟಿಮೆಂಟ್ ಇಲ್ಲಿದೆ. ಸಿನಿಮಾದಲ್ಲಿ ಬಹುತೇಕ ಕಲಾವಿದರೆಲ್ಲರೂ ಹೊಸಬರೇ ಆಗಿದ್ದು, ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಇಲ್ಲಿ ನಾನು ಮಾತ್ರ ಹೈಲೆಟ್ ಆಗಿಲ್ಲ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ ಎಂಬುವುದು ಯಶ್‍ಗೆ ಚಿತ್ರದ ಬಗೆಗಿರುವ ಅಭಿಪ್ರಾಯ.
ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ.