Tag: ಶ್ರೀನಿ

  • ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ಶಿವಣ್ಣನ ‘A for ಆನಂದ್’ ಸಿನಿಮಾ

    ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ಶಿವಣ್ಣನ ‘A for ಆನಂದ್’ ಸಿನಿಮಾ

    ಟ ಶಿವಣ್ಣ (Shivarajkumar) ‘A for ಆನಂದ್’ ಚಿತ್ರದ ಮುಹೂರ್ತ ಇಂದು (ಮೇ.2) ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಜರುಗಿದೆ. ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌ (Geetha Shivarajkumar) ಕ್ಲ್ಯಾಪ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್

    ‘A for ಆನಂದ್’ ಮಕ್ಕಳ ಸಿನಿಮಾವಾಗಿರುವುದರಿಂದ ವಿಶೇಷವಾಗಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಿವಣ್ಣ, ಘೋಸ್ಟ್‌ ಚಿತ್ರದ ಬಳಿಕ ಶ್ರೀನಿ ಜೊತೆ ಇದು 2ನೇ ಸಿನಿಮಾ. ಮಕ್ಕಳನ್ನು ಯಾವ ರೀತಿ ಓದಿಸಬೇಕು, ಅವರನ್ನು ದಾರಿಗೆ ಹೇಗೆ ತರಬೇಕು ಅನ್ನೋದೇ ‘A for ಆನಂದ್’ ಕಥೆ ತಿರುಳು. ಸ್ಕ್ರೀನ್‌ ಪ್ಲೇಯನ್ನು ಶ್ರೀನಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಅಕ್ಟೋಬರ್‌ ತಿಂಗಳಾತ್ಯಂಕ್ಕೆ ಶೂಟಿಂಗ್‌ ಶುರುವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

    ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ತುಂಬಾ ದಿನದಿಂದ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಮಕ್ಕಳಿಗೆ ಶಿಕ್ಷಣ ಮುಖ್ಯ. ಆದರೆ ಇಂದು ಅವರಿಗೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಒತ್ತಡ ಇಲ್ಲದೇ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳುತ್ತೇವೆ. ಈ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನಿರ್ದೇಶನ ಮಾಡುತ್ತಾರೆ. ʻA for ಆನಂದ್‌’ ಚಿತ್ರದ ಟೈಟಲ್‌ ತುಂಬಾ ಇಷ್ಟವಾಯ್ತು. ಈ ಚಿತ್ರದಿಂದ ಪೋಷಕರು ಮಕ್ಕಳನ್ನು ಹೇಗೆ ಓದಿಸಬೇಕು ಅಂತ ತಿಳಿದುಕೊಳ್ಳುತ್ತಾರೆ. ಜೊತೆಗೆ ಈ ಸಿನಿಮಾದಿಂದ ಜನ ಥಿಯೇಟರ್‌ಗೆ ಬರುವ ರೀತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.

    ನಿರ್ದೇಶಕ ಶ್ರೀನಿ ಮಾತನಾಡಿ, ‘ಘೋಸ್ಟ್‌’ ಆ್ಯಕ್ಷನ್ ಥ್ರಿಲ್ಲರ್‌ ಸಿನಿಮಾ, ಇದು ಕಂಪ್ಲೀಟ್‌ ಡಿಫರೆಂಟ್‌ ಜಾನರ್‌ ಚಿತ್ರ ‘A for ಆನಂದ್’. ಫ್ಯಾಮಿಲಿ ಮನರಂಜನೆ ಜೊತೆಗೆ ಮಕ್ಕಳಿಗೂ ಕನೆಕ್ಟ್‌ ಆಗುವ ಸಿನಿಮಾ. ಇದು ಚಾಲೆಂಜಿಂಗ್ ಕೆಲಸ. ಅಕ್ಟೋಬರ್‌ ಸಮಯದಲ್ಲಿ ಶಿವಮೊಗ್ಗದ ಸಾಗರದ ಆ ಕಡೆ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

    ಈ ಹಿಂದೆ ಶಿವಣ್ಣಗಾಗಿ ‘ಘೋಸ್ಟ್’ ಹೆಸರಿನ ಭರ್ಜರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿ, ಈಗ ಶಿವಣ್ಣನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಎ ಫಾರ್ ಆನಂದ್’ ಸಿನಿಮಾದಲ್ಲಿ ಶಿವಣ್ಣ ಒಬ್ಬ ಶಿಕ್ಷಕನ ಪಾತ್ರ ನಿರ್ವಹಿಸಲಿದ್ದಾರೆ.

    ಈ ಸಿನಿಮಾವನ್ನು ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ವೇದ, ಭೈರತಿ ರಣಗಲ್ ಅನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿತ್ತು, ಗೀತಾ ಪಿಕ್ಚರ್ಸ್‌ಗೆ ಇದು 3ನೇ ಸಿನಿಮಾ. ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನ್‌ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ಈ ಸಿನಿಮಾಕ್ಕೂ ಕೆಲಸ ಮಾಡಲಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್‌ ಸಂಗೀತ ಒದಗಿಸಲಿದ್ದಾರೆ.

  • ‘ಬೀರ್‌ಬಲ್ 2’ ಸಿನಿಮಾ ಅನೌನ್ಸ್ ಮಾಡಿದ ‘ಘೋಸ್ಟ್’ ನಿರ್ದೇಶಕ ಶ್ರೀನಿ

    ‘ಬೀರ್‌ಬಲ್ 2’ ಸಿನಿಮಾ ಅನೌನ್ಸ್ ಮಾಡಿದ ‘ಘೋಸ್ಟ್’ ನಿರ್ದೇಶಕ ಶ್ರೀನಿ

    ಶಿವಣ್ಣ ನಟನೆಯ ‘ಘೋಸ್ಟ್’ (Ghost) ಸಿನಿಮಾದ ಡೈರೆಕ್ಟರ್ ಎಂ.ಜಿ ಶ್ರೀನಿವಾಸ್ ಇದೀಗ ‘ಬೀರ್‌ಬಲ್ 2’ (Birbal 2) ಚಿತ್ರ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಹೊಸ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊರ್ವಶಿ ರೌಟೇಲಾಗೆ ಏಟು- ಆಸ್ಪತ್ರೆಗೆ ದಾಖಲು

    ‘ಘೋಸ್ಟ್’ ಚಿತ್ರದ ನಂತರ ಎಂ.ಜಿ ಶ್ರೀನಿವಾಸ್ ನಿರ್ದೇಶನದ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಈ ಹಿಂದೆ ತೆರೆಕಂಡ ‘ಬೀರ್‌ಬಲ್’ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಇದರ ಸೀಕ್ವೆಲ್ ಮಾಡಲು ರೆಡಿಯಾಗಿದ್ದಾರೆ.

    ‘ಬೀರ್‌ಬಲ್ 2’ ಸಿನಿಮಾದ ಪೋಸ್ಟರ್ ಅನಾವರಣ ಮಾಡಿದ್ದು, ‘ಅವ್ರನ್ ಬಿಟ್ ಇವ್ರನ್ ಬಿಟ್ ಅವ್ರ ಯಾರು’ ಎಂದು ಚಿತ್ರಕ್ಕೆ ಅಡಿಬರಹ ನೀಡಿದ್ದಾರೆ. ಈ ಸಿನಿಮಾದ ತಯಾರಿ ಕೂಡ ಜೋರಾಗಿದೆ. ಸ್ಕ್ರಿಪ್ಟ್ ಹಂತ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಶೂಟಿಂಗ್‌ಗೆ ಹೋಗೋ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್‌ನಿಂದ ಶೂಟಿಂಗ್‌ಗೆ ಚಾಲನೆ ಸಿಗಲಿದೆ. ಇದನ್ನೂ ಓದಿ:ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

    ಇನ್ನೂ 2019ರಲ್ಲಿ ‘ಬೀರ್‌ಬಲ್’ ಸಿನಿಮಾದಲ್ಲಿ ಶ್ರೀನಿ, ರುಕ್ಮಿಣಿ ವಸಂತ್ ಜೋಡಿಯಾಗಿ ನಟಿಸಿದ್ದರು. ‘ಬೀರ್‌ಬಲ್ 2’ ಅದರ ಮುಂದುವರೆದ ಭಾಗವಾಗಿರುವ ಕಾರಣ ಈ ಚಿತ್ರದಲ್ಲಿ ರುಕ್ಮಿಣಿ ನಟಿಸುತ್ತಾರಾ ಕಾಯಬೇಕಿದೆ.


    ಅಂದಹಾಗೆ, ಈ ಸಿನಿಮಾದ ನಂತರ ಶಿವಣ್ಣ ನಟನೆಯ ‘ಘೋಸ್ಟ್’ ಸೀಕ್ವೆಲ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಶಿವಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಒಪ್ಪಿಕೊಂಡಿರುವ ಸಿನಿಮಾ ಮುಕ್ತಾಯವಾದ್ಮೇಲೆ ‘ಘೋಸ್ಟ್ 2’ಗೆ ಸಾಥ್ ನೀಡಲಿದ್ದಾರೆ,

  • ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್ ಅನಾವರಣ

    ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್ ಅನಾವರಣ

    ನ್ನಡ ಕಿರುತೆರೆ ಲೋಕದಲ್ಲಿ ಜೀ ಕನ್ನಡ ಈಗಾಗ್ಲೇ ಹಲವು ವಿಭಿನ್ನ ಪ್ರಯತ್ನಗಳನ್ನಾ ಮಾಡುತ್ತಾ ಬಂದಿದೆ. ಕನ್ನಡದ ಹೆಸರಾಂತ ಮನರಂಜನಾ ಚಾನೆಲ್ ಎಂಬ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದು, ಜೊತೆಗೆ ಜೀ5 ಒಟಿಟಿ ಮೂಲಕ ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ಪ್ರಪಂಚದೆದುರು ತೆರೆದಿಡ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ-ವಿಶೇಷ ಯೋಜನೆಗಳನ್ನು ಈ ಒಟಿಟಿ ಹಾಕಿಕೊಂಡಿದೆ. ಸದ್ಯ ಜೀ5 ಒಟಿಟಿಯಲ್ಲಿ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾ ಧಮಾಕ ಎಬ್ಬಿಸ್ತಿದೆ.

    ಸಾಹಸ ಥ್ರಿಲ್ಲರ್‌ ಸಿನಿಮಾ ಘೋಸ್ಟ್‌ (Ghost) ಇದೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಶಿವಣ್ಣನ (Shivaraj Kumar) ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇರುವವರು ಜೀ5 ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಈಗಾಗಲೇ ನೋಡಿರುವವರು ಇನ್ನೊಮ್ಮೆ ಒಟಿಟಿಯಲ್ಲೂ ನೋಡಬಹುದು.

    ಸಿನಿಮಾ ಜೀ5ನಲ್ಲಿ ರಿಲೀಸ್ ಆಗಿರುವುದಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡಿದೆ. ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್ಅನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಘೋಸ್ಟ್ ಸಿನಿಮಾದ  10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.

    ಘೋಸ್ಟ್ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಶ್ರೀನಿ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್‌ ಅವರ ಹೊಸ ಲುಕ್‌ ದರ್ಶನ ಮಾಡಿದ್ದಾರೆ.  ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತವಿದೆ. ಶಿವಣ್ಣನ ಜೊತೆ ಮಲಯಾಳಂ ನಟ ಜಯರಾಮ್‌, ಹಿಂದಿ ನಟ ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ (Srini) ಹಾಗೂ ಇನ್ನಿತರರು ನಟಿಸಿದ್ದಾರೆ.

  • ‘ನಿನ್ನ ಮುಂದೆ ಎಲ್ಲಾ ಬಚ್ಚಾ ಕಣಣ್ಣ’ ಎಂದ್ರು ಶಿವಣ್ಣನ ಫ್ಯಾನ್ಸ್

    ‘ನಿನ್ನ ಮುಂದೆ ಎಲ್ಲಾ ಬಚ್ಚಾ ಕಣಣ್ಣ’ ಎಂದ್ರು ಶಿವಣ್ಣನ ಫ್ಯಾನ್ಸ್

    ಟಾಲಿವುಡ್ ನಟಸಿಂಹ ಹಾಗೂ ಸ್ಯಾಂಡಲ್‍ವುಡ್ ನರಸಿಂಹ ಮುಖಾಮುಖಿ ಆಗಿದ್ದರಿಂದ, ದಳಪತಿ ವಿಜಯ್ ಜೊತೆ ಮಾಸ್ ಮಹರಾಜನೂ ತೊಡೆತಟ್ಟಿದ್ದರಿಂದ ಬೆಳ್ಳಿತೆರೆ ಅಖಾಡ ಧಗಧಗಿಸಿತ್ತು. ದಸರಾ ದಂಗಲ್ ನಲ್ಲಿ ಈ ಭಾರಿ ಗೆಲ್ಲೋದ್ಯಾರು? ವಿಜಯದ ಕಿರೀಟ ಮುಡಿಗೇರಿಸಿಕೊಂಡು ಮುತ್ತಿನ ತೇರಲ್ಲಿ ಮೆರವಣಿಗೆ ಹೊರಡೋರು ಯಾರು? ವಿಜಯಲಕ್ಷ್ಮಿನಾ ಒಲಿಸಿಕೊಂಡು ಕೇಕೆ ಹೊಡೆಯೋರು ಯಾರು? ಹೀಗೊಂದಿಷ್ಟು ಕುತೂಹಲದ ಪ್ರಶ್ನೆಗಳು ಈ ನಾಲ್ವರು ಸ್ಟಾರ್ಸ್ ಅಭಿಮಾನಿಗಳನ್ನ ಹಾಗೂ ದಕ್ಷಿಣ ಭಾರತೀಯ ಸಿನಿಮಾಮಂದಿಯನ್ನು ಕಾತುರದಿಂದ ಕಾಯುವಂತೆ ಮಾಡಿತ್ತು. ಕೊನೆಗೂ ದಸರಾ ದಂಗಲ್ ಗೆ ತೆರೆಬಿದ್ದಿದೆ.

    ಬೆಳ್ಳಿತೆರೆ ಅಖಾಡದಲ್ಲಿ `ಘೋಸ್ಟ್’ (Ghost) ಘರ್ಜನೆ ಜೋರಾಗಿದ್ದು, ಭರ್ಜರಿ ಪೈಪೋಟಿ ನಡುವೆಯೂ ಬಿಗ್‍ಡ್ಯಾಡಿ ಗೆದ್ದು ಗಹಗಹಿಸಿದ್ದಾರೆ. ಕನ್ನಡಿಗರಿಂದ ಮಾತ್ರವಲ್ಲ ಪರಭಾಷಿಗರಿಂದಲೂ ಬಹುಪರಾಕ್ ಹಾಕಿಸಿಕೊಂಡು ಬೆಳ್ಳಿಭೂಮಿ ಅಂಗಳದಲ್ಲಿ ಮೆರವಣಿಗೆ ಹೊರಟಿದ್ದಾರೆ. `ಜೈಲರ್’ ನಂತರ `ಘೋಸ್ಟ್’ ಚಿತ್ರದ ಮೂಲಕ ಕಣಕ್ಕಿಳಿದ ಕರುನಾಡ ಚಕ್ರವರ್ತಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ದೊಡ್ಮನೆ ದೊರೆಯ ಅಭಿಮಾನಿಗಳು ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳು `ಘೋಸ್ಟ್’ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ.

    ದಳವಾಯಿ ಮುದ್ದಣ್ಣ ಅಲಿಯಾಸ್ ಬಿಗ್ ಡ್ಯಾಡಿ, ಆನಂದ್ ಹೆಸರಿನ ದ್ವಿಪಾತ್ರದಲ್ಲಿ ಮಿಂಚಿದ ಮುತ್ತಣ್ಣನಿಗೆ ಉಘೇ ಉಘೇ ಎಂದಿದ್ದಾರೆ. ಕಳೆದ 37 ವರ್ಷಗಳಿಂದ ಬೆಳ್ಳಿತೆರೆ ಮೇಲೆ ಶಿವಣ್ಣನ್ನ (Shivaraj Kumar) ನೋಡಿಕೊಂಡು ಬಂದಿರುವ ಅಭಿಮಾನಿಗಳು `ಘೋಸ್ಟ್’ ಸಿನಿಮಾದಲ್ಲಿ `ಆನಂದ್’ ಅವತಾರವನ್ನು ನೋಡಿ ಅಚ್ಚರಿಪಟ್ಟಿದ್ದಾರೆ. 60ರಲ್ಲೂ ಒಂದಿಂಚು ಆಚೀಚೆಯಾಗದ ಲುಕ್ಕು, ಮ್ಯಾನರಿಸಂ, ಸ್ವ್ಯಾಗ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಲುಕ್ಕು, ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ನೋಡಿ ಕಳೆದೋಗಿದ್ದಾರೆ. ರಗಡ್ ಗೆಟಪ್‍ನಲ್ಲಿ ಬಿಗ್‍ಡ್ಯಾಡಿಯಾಗಿ ಖದರ್ ತೋರಿಸಿರುವ ಸೆಂಚುರಿಸ್ಟಾರ್ ನ ನೋಡಿ ಫ್ಯಾನ್ಸ್ ಹೇಳ್ತಿರೋದು ಒಂದೇ ಡೈಲಾಗ್ `ನಿನ್ನ ಮುಂದೆ ಎಲ್ಲಾ ಬಚ್ಚ ಕಣಣ್ಣಾ’

    ಶಿವಣ್ಣ ಹೇಳಿ ಕೇಳಿ ಮಾಸ್‍ಲೀಡರ್ ಅವ್ರನ್ನ ಇನ್ನಷ್ಟು ಮಾಸ್ ಆಗಿ ತೋರಿಸುವಲ್ಲಿ ನಿರ್ದೇಶಕ ಶ್ರೀನಿ ಗೆದ್ದಿದ್ದಾರೆ. `ಜೈಲರ್’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ನಟನೆಯನ್ನ ನಿರ್ದೇಶಕ ನೆಲ್ಸನ್ ಬಳಸಿಕೊಂಡ ರೀತಿ ನೋಡಿದ್ಮೇಲೆ ಕನ್ನಡ ಪ್ರೇಕ್ಷಕರಲ್ಲಿ ಒಂದು ಕೊರಗು ಶುರುವಾಗಿತ್ತು. ಕರುನಾಡ ಚಕ್ರವರ್ತಿ ನಟನೆಯಲ್ಲಿ ಉಗ್ರ ನರಸಿಂಹ. ಅವ್ರನ್ಯಾಕೆ ನಮ್ಮ ಇಂಡಸ್ಟ್ರಿಯ ನಿರ್ದೇಶಕರು ಸರಿಯಾಗಿ ಬಳಸಿಕೊಳ್ತಿಲ್ಲ ಎನ್ನುವ ಕೊಶ್ಚನ್ ರೈಸ್ ಆಗಿತ್ತು. ಅದಕ್ಕೀಗ `ಘೋಸ್ಟ್’ ಡೈರೆಕ್ಟರ್ ಶ್ರೀನಿ ಬಿಗ್ ಬ್ರೇಕ್ ಹಾಕಿದ್ದಾರೆ.

    ಗನ್ನಷ್ಟೇ ಚೆನ್ನಾಗಿ ಕಣ್ಣಪ್ಪನ ಕಣ್ಣನ್ನು ಬಳಸಿಕೊಂಡು ಮೂರ್ಮೂರು ಶೇಡ್‍ನಲ್ಲಿ ಅದ್ಭುತವಾಗಿ ತೆರೆಮೇಲೆ ತೋರಿಸಿದ್ದಾರೆ. ಶ್ರೀನಿ ವಿಷನ್, ನಾನ್ ಲೀನಿಯರ್ ಸ್ಕ್ರೀನ್ ಪ್ಲೇ, ಸಿನಿಮ್ಯಾಟಿಕ್ ಯೂನಿವರ್ಸ್ ಕಾನ್ಸೆಪ್ಟ್, ಡಿ ಏಜಿಂಗ್ ಟೆಕ್ನಾಲಜಿ ಎಲ್ಲವೂ ವರ್ಕ್ ಆಗಿದ್ದು `ಘೋಸ್ಟ್’ ಕ್ಲಿಕ್ ಆಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಮ್ಯೂಸಿಕ್ ಮ್ಯಾಜಿಕ್ ಮಾಡೋದ್ರ ಜೊತೆಗೆ ಅವರ ಕರಿಯರ್ ನಲ್ಲೇ `ಘೋಸ್ಟ್’ ಮೈಲುಗಲ್ಲು ಎನ್ನುವಷ್ಟು ಮಹತ್ವ ಪಡೆದಿದೆ. ಮಾಸ್ತಿ ಹಾಗೂ ಪ್ರಸನ್ನ ಕೊಟ್ಟಿರೋ ಸಿಂಪಲ್ ಡೈಲಾಗ್ಸ್ `ಘೋಸ್ಟ್’ಗೆ ಬೂಸ್ಟರ್ ಡೋಸ್ ಕೊಟ್ಟಂತಿವೆ. ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ, ದೀಪು ಎಸ್ ಕುಮಾರ್ ಸಂಕಲನ ಪ್ಲಸ್ ಆಗಿದೆ. ಅದ್ದೂರಿತನಕ್ಕೆ ಯಾವುದೇ ಕೊರತೆಯಿಲ್ಲದಂತೆ ಸಂದೇಶ್ ಪ್ರೊಡಕ್ಷನ್ಸ್ ಘೋಸ್ಟ್ ನಿರ್ಮಿಸಿದೆ.

    ಸಿನಿಮಾ ಸುತ್ತ ಸೃಷ್ಟಿಸಿದ್ದ ಹೈಪ್ ಗೆ, ದೊಡ್ಮನೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ `ಘೋಸ್ಟ್’ ಮೂಡಿಬಂದಿದೆ. ಖುದ್ದು ಶಿವಣ್ಣ ಅವರೇ ಹೇಳಿಕೊಂಡಿರುವಂತೆ `ಘೋಸ್ಟ್’ ಅವರ ಕರಿಯರ್ ನಲ್ಲಿ ವಿಭಿನ್ನ ಕಥಾಹಂದರವುಳ್ಳ ಸಿನಿಮಾ. ಈ ಹಿಂದೆ ಅಂಡರ್ ವಲ್ಡ್ ಸಿನಿಮಾದ ಭಾಗವಾಗಿದ್ರೂ ಕೂಡ `ಘೋಸ್ಟ್’ ನ ಗ್ಯಾಂಗ್‍ಸ್ಟರ್ ಪಾತ್ರ ಅವರಿಗೆ ತೃಪ್ತಿ ಕೊಟ್ಟಿದೆ. ಒಂದೇ ತರಹದ ಕ್ಯಾರೆಕ್ಟರ್‍ಗೆ ಅಂಟಿಕೊಳ್ಳದೇ ಹೊಸದೇನನ್ನೋ ಪ್ರಯೋಗ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸುವ ಶಿವಣ್ಣ, ಅಮ್ಮ ಇದ್ದಿದ್ದರೆ `ಘೋಸ್ಟ್’ ಸಿನಿಮಾದ ಆನಂದ್‍ನ ನೋಡಿ ಅದೆಷ್ಟು ಖುಷಿಪಡ್ತಿದ್ದರೋ ಏನೋ ಅಂತ ಭಾವುಕರಾದರು.

     

    ಅಮ್ಮ ಕಟ್ಟಿ ಬೆಳೆಸಿದ ಶಕ್ತಿಧಾಮದಲ್ಲೇ ಈ ಸಿನಿಮಾ ಡಿಸ್ ಕಷನ್ ನಡೆದಿತ್ತು. ಹೀಗಾಗಿ, `ಘೋಸ್ಟ್’ ಗೆ ಅಮ್ಮನ ಆಶೀರ್ವಾದ ಖಂಡಿತ ಇರುತ್ತೆ ಸಿನಿಮಾ ಸಕ್ಸಸ್ ಆಗುತ್ತೆ ಎಂದಿದ್ದರು. ಇದೀಗ, ಮೊದಲೇ ದಿನವೇ ಗ್ರ್ಯಾಂಡ್ ಓಪನ್ನಿಂಗ್ ಪಡೆದುಕೊಂಡಿದೆ. ಅನುಪಮ್ ಖೇರ್, ಜಯರಾಮ್, ಅರ್ಚನಾ ಜೋಯಿಸ್ ಸೇರಿದಂತೆ ದೊಡ್ಡ ತಾರಾಬಳಗದ `ಘೋಸ್ಟ್’ ದೊಡ್ಡಮಟ್ಟದಲ್ಲೇ ಸದ್ದು ಮಾಡುತ್ತಿದೆ. ಬಾಲಯ್ಯ, ದಳಪತಿ ವಿಜಯ್, ರವಿತೇಜಾ ಸಿನಿಮಾಗಳ ಜೊತೆ ದಸರಾ ದಂಗಲ್‍ನಲ್ಲಿ ಸೆಣಸಾಡಿ ಸಕ್ಸಸ್ ಆಗುವಲ್ಲಿ `ಘೋಸ್ಟ್’ ಯಶಸ್ವಿಯಾಗಿದೆ. ಈಗಾಗಲೇ `ಘೋಸ್ಟ್ ಪಾರ್ಟ್-2′ ಯಾವಾಗ ಸರ್ ಎನ್ನುವ ಪ್ರಶ್ನೆ ರೈಸ್ ಆಗಿದೆ. ಕರ್ನಾಟಕದಲ್ಲಿ ಫಸ್ಟ್ ಡೇ ಕಲೆಕ್ಷನ್ ಎರಡು ಕೋಟಿ ಮೀರಿದ್ದು ವೀಕೆಂಡ್ ಹಾಗೂ ದಸರಾ ಹಾಲಿಡೇಸ್‍ನಲ್ಲಿ ಭರ್ಜರಿ ಕಮಾಯ್ ಮಾಡುವ ಎಲ್ಲಾ ಲಕ್ಷಣಗಳು ಕಾಣ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಘೋಸ್ಟ್’ ಸಿನಿಮಾದ ಎರಡನೇ ಓಜಿಎಂ ರಿಲೀಸ್: ಭರ್ಜರಿ ರೆಸ್ಪಾನ್ಸ್

    ‘ಘೋಸ್ಟ್’ ಸಿನಿಮಾದ ಎರಡನೇ ಓಜಿಎಂ ರಿಲೀಸ್: ಭರ್ಜರಿ ರೆಸ್ಪಾನ್ಸ್

    ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಘೋಸ್ಟ್ ಸಿನಿಮಾದ ಎರಡನೇ ಓಜಿಎಂ (OGM) (ಓರಿಜಿನಲ್ ಗ್ಯಾಂಗ್ ಸ್ಟಾರ್ ಮ್ಯೂಸಿಕ್) ರಿಲೀಸ್ ಆಗಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರ ಹೇಗಿರಬಹುದು ಎನ್ನುವ ಕುತೂಹಲವನ್ನು ಇದು ಹೆಚ್ಚಿಸಿದೆ. ನಿಶಾನ್ ರೈ ಸಾಹಿತ್ಯ ಬರೆದು, ಹಾಡಿರುವ ಈ ಓಜಿಎಂ ಶಿವಣ್ಣನ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಶ್ರೀನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shivaraj Kumar) ನಟನೆಯ ಘೋಸ್ಟ್ ಸಿನಿಮಾ, ಶಿವಣ್ಣನ ಅಭಿಮಾನಿಗಳಿಗೆ ದಸರಾ ಉಡುಗೊರೆಯಾಗಿ ಬರುತ್ತಿದೆ. ನಾಳೆಯೇ ವಿಶ್ವದಾದ್ಯಂತ ಘೋಸ್ಟ್ ಸಿನಿಮಾವನ್ನು ರಿಲೀಸ್ ಆಗುತ್ತಿದೆ. ಇಂದು ರಾತ್ರಿಯಿಂದಲೇ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ.

    ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಂದೇಶ್ ನಾಗರಾಜ್ ಸಿನಿಮಾವನ್ನು ಅರ್ಪಿಸಿದ್ದಾರೆ. ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನ ಚಿತ್ರಕ್ಕಿದೆ.

    ಈಗಾಗಲೇ ಘೋಸ್ಟ್ ಫಸ್ಟ್ ಲುಕ್, BIG DADDY ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ. ಅಲ್ಲದೇ ನಿರ್ದೇಶಕ ಶ್ರೀನಿ ಅವರ ಬಗೆ ಬಗೆಯ ಪ್ರಯತ್ನಗಳನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಕೊಂಡಾಡಿದ್ದಾರೆ. ಹೀಗಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ.

     

    ನಾಯಕನಾಗಿ ಶಿವರಾಜಕುಮಾರ್ ನಟಿಸಿದ್ದರೆ, ಅನುಪಮ್ ಖೇರ್ (Anupam Kher), ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಘೋಸ್ಟ್ ಸಿನಿಮಾ ರಿಲೀಸ್ ಡೇಟ್ ಘೋಷಣೆ: ದಸರಾಗೆ ತೆರೆಯ ಮೇಲೆ ಶಿವಣ್ಣ

    ಘೋಸ್ಟ್ ಸಿನಿಮಾ ರಿಲೀಸ್ ಡೇಟ್ ಘೋಷಣೆ: ದಸರಾಗೆ ತೆರೆಯ ಮೇಲೆ ಶಿವಣ್ಣ

    ಶ್ರೀನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shivaraj Kumar) ನಟನೆಯ ಘೋಸ್ಟ್ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ದಸರಾ ಉಡುಗೊರೆಯಾಗಿ ಈ ಸಿನಿಮಾವನ್ನು ನೀಡುತ್ತಿದ್ದು, ಅಕ್ಟೋಬರ್ 19ರಂದು ವಿಶ್ವದಾದ್ಯಂತ ಘೋಸ್ಟ್ ಸಿನಿಮಾವನ್ನು ರಿಲೀಸ್ (Release) ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

    ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಂದೇಶ್ ನಾಗರಾಜ್ ಸಿನಿಮಾವನ್ನು ಅರ್ಪಿಸಿದ್ದಾರೆ. ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನ ಚಿತ್ರಕ್ಕಿದೆ. ಮೊನ್ನೆಯಷ್ಟೇ ‘ಘೋಸ್ಟ್’ (Ghost) ಚಿತ್ರದ ಚಿತ್ರೀಕರಣ (Shooting) ಮುಕ್ತಾಯವಾಗಿದೆ. ಇದನ್ನೂ ಓದಿ:2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದು (Complete), ಕುಂಬಳಕಾಯಿ ಒಡೆಯಲಾಗಿದೆ‌. ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ದೇಶಕ ಶ್ರೀನಿ ಬೀರ್ ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಶ್ರೀನಿ (Srini) ಬೀರ್ ಬಲ್ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಈ ಚಿತ್ರದಲ್ಲಿ ಬೀರ್ ಬಲ್ ಪಾತ್ರದಲ್ಲಿ ಅಭಿನಯಿಸಿರುವುದು, ಬೀರ್ ಬಲ್  ಭಾಗ 2 ಬರಬಹುದಾ ಎಂಬ ಪ್ರಶ್ನೆ ಮೂಡಿದೆ.

    ಈಗಾಗಲೇ ಘೋಸ್ಟ್ ಫಸ್ಟ್ ಲುಕ್, BIG DADDY ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ. ಅಲ್ಲದೇ ನಿರ್ದೇಶಕ ಶ್ರೀನಿ ಅವರ ಬಗೆ ಬಗೆಯ ಪ್ರಯತ್ನಗಳನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಕೊಂಡಾಡಿದ್ದಾರೆ. ಹೀಗಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ.

     

    ನಾಯಕನಾಗಿ ಶಿವರಾಜಕುಮಾರ್ ನಟಿಸಿದ್ದರೆ, ಅನುಪಮ್ ಖೇರ್ (Anupam Kher), ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar) ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಘೋಸ್ಟ್’ (Ghost) ಚಿತ್ರದ ಚಿತ್ರೀಕರಣ (Shooting) ಮುಕ್ತಾಯವಾಗಿದೆ.

    ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದು (Complete), ಕುಂಬಳಕಾಯಿ ಒಡೆಯಲಾಗಿದೆ‌. ಚಿತ್ರದ ಇನ್ನೊಂದು ವಿಶೇಷವೆಂದರೆ ನಿರ್ದೇಶಕ ಶ್ರೀನಿ ಬೀರ್ ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಶ್ರೀನಿ (Srini) ಬೀರ್ ಬಲ್ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಈ ಚಿತ್ರದಲ್ಲಿ ಬೀರ್ ಬಲ್ ಪಾತ್ರದಲ್ಲಿ ಅಭಿನಯಿಸಿರುವುದು, ಬೀರ್ ಬಲ್  ಭಾಗ 2 ಬರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

    ಈಗಾಗಲೇ ಘೋಸ್ಟ್ ಫಸ್ಟ್ ಲುಕ್, BIG DADDY ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಿದೆ. ಅಲ್ಲದೇ ನಿರ್ದೇಶಕ ಶ್ರೀನಿ ಅವರ ಬಗೆ ಬಗೆಯ ಪ್ರಯತ್ನಗಳನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಕೊಂಡಾಡಿದ್ದಾರೆ. ಹೀಗಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ.

    ನಾಯಕನಾಗಿ ಶಿವರಾಜಕುಮಾರ್ ನಟಿಸಿದ್ದರೆ, ಅನುಪಮ್ ಖೇರ್ (Anupam Kher), ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮತ್ತಷ್ಟು ಮಾಹಿತಿಗಳನ್ನು ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ಶಿವಣ್ಣ ಹುಟ್ಟುಹಬ್ಬ: ಥಿಯೇಟರ್ ಮುಂದೆ ಎದ್ದು ನಿಂತ 40 ಅಡಿ ಕಟೌಟ್

    ನಾಳೆ ಶಿವಣ್ಣ ಹುಟ್ಟುಹಬ್ಬ: ಥಿಯೇಟರ್ ಮುಂದೆ ಎದ್ದು ನಿಂತ 40 ಅಡಿ ಕಟೌಟ್

    ಪುನೀತ್ ರಾಜ್‌ಕುಮಾರ್ ನಿಧನ ನಂತರ ಮತ್ತು ಕೊರೋನಾ ಕಾರಣದಿಂದಾಗಿ ಶಿವರಾಜ್ ಕುಮಾರ್ ದೊಡ್ಡಮಟ್ಟದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್ ಸಿನಿಮಾ ಕುರಿತಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲಿ ಕಾರ್ಯಕ್ರಮ ನಡೆಯಲಿವೆ.

    ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಸಿದ್ದವಾಗಿದ್ದಾರೆ. ಸಂತೋಷ ಚಿತ್ರಮಂದಿರದ ಮುಂದೆ ಎರಡು ಬಹೃತ್ ಕಟೌಟ್ (Cutout)  ಗಳನ್ನು ಹಾಕಲಾಗಿದೆ. 40 ಅಡಿ ಕಟೌಟ್ ನಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳನ್ನು ಸೆಳೆಯಲಿದ್ದಾರೆ. ಈಗಾಗಲೇ ಘೋಸ್ಟ್ ಸಿನಿಮಾದ ಬಿಗ್ ಡ್ಯಾಡಿ ಪೋಸ್ಟರ್ ರಿಲೀಸ್ ಆಗಿದ್ದು, ಶಿವರಾಜ್ ಕುಮಾರ್ ಸಿನಿಮಾ ಹಾಡುಗಳನ್ನು ಸಂತೋಷ್ ಚಿತ್ರಮಂದಿರದಲ್ಲಿ ಹಾಕಲಾಗುತ್ತದೆ ಎಂದು ತಿಳಿದು ಬಂದಿದೆ.

    ಅಲ್ಲದೇ ಅದೇ ಚಿತ್ರಮಂದಿರದಲ್ಲೇ ಘೋಸ್ಟ್ ಸಿನಿಮಾ ಟೀಸರ್ (Teaser) ಕೂಡ ರಿಲೀಸ್ ಆಗಿ ಪ್ರದರ್ಶನ ಆಗಲಿದೆ.  ಈಗಾಗಲೇ ಶಿವರಾಜ್‌ಕುಮಾರ್ ‘ಘೋಸ್ಟ್’ (Ghost) ಸಿನಿಮಾದ ಬಿಗ್ ಡ್ಯಾಡಿ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಘೋಸ್ಟ್ ಸಿನಿಮಾ ನಿರ್ದೇಶಕ ಶ್ರೀನಿ (ಜುಲೈ 9) ಅವರ ಹುಟ್ಟುಹಬ್ಬದಂದು ಶಿವಣ್ಣ ಫ್ಯಾನ್ಸ್ ಹ್ಯಾಪಿ ನ್ಯೂಸ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ಘೋಸ್ಟ್ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಡ್ತಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

    ಇದೇ ಜುಲೈ 12ರಂದು ಎನರ್ಜಿಟಿಕ್ ಹೀರೋ ಶಿವಣ್ಣ ಅವರ ಜನ್ಮದಿನ. ಪ್ರತಿ ವರ್ಷದಂತೆ ಈ ಬಾರಿ ಕೂಡ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಲಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11.45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

     

    ಈ ಪೋಸ್ಟರ್‌ನಲ್ಲಿ ಶಿವಣ್ಣ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ನಿರ್ದೇಶಕ ಎಂ.ಜಿ. ಶ್ರೀನಿವಾಸ್ (Director Shrinivas) ಅವರ ಬರ್ತ್‌ಡೇಯಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವರಾಜಕುಮಾರ್ ಹುಟ್ಟುಹಬ್ಬಕ್ಕೆ ’BIG DADDY’ ವಿಡಿಯೋ

    ಶಿವರಾಜಕುಮಾರ್ ಹುಟ್ಟುಹಬ್ಬಕ್ಕೆ ’BIG DADDY’ ವಿಡಿಯೋ

    ರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಜುಲೈ 12ಕ್ಕೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಘೋಸ್ಟ್’ ಚಿತ್ರದ BIG DADDY ವಿಡಿಯೋ  ಬಿಡುಗಡೆಯಾಗಲಿದೆ.  BIG DADDY ವಿಡಿಯೋವನ್ನು (Video) ಅದ್ದೂರಿಯಾಗಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

    ಘೋಸ್ಟ್  (Ghost) ಸಿನಿಮಾ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಈಗಾಗಲೇ ಚಿತ್ರ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಬಿಗ್ ಡ್ಯಾಡಿ ಕುರಿತಾಗಿ ಚಿತ್ರತಂಡ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದು, ಈ ವಿಡಿಯೋ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ,  ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ (Srini) ನಿರ್ದೇಶನದ ಘೋಸ್ಟ್ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

    ಶಿವರಾಜಕುಮಾರ್ (Shivaraj Kumar), ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ (Srini) ನಿರ್ದೇಶನದಲ್ಲಿ  ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivraj Kumar) ನಾಯಕರಾಗಿ ಅಭಿನಯಿಸುತ್ತಿರುವ ‘ಘೋಸ್ಟ್‌’ (Ghost) ಚಿತ್ರದ ಚಿತ್ರೀಕರಣ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಸಿನಿಮಾಗಾಗಿ  ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕ ಶ್ರೀನಿ.

    ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನೂತನ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಇಂದು ಭೇಟಿ ನೀಡಿದ್ದಾರೆ. ಚಿತ್ರತಂಡದವರ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದ ಸಚಿವರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಮಧು ಬಂಗಾರಪ್ಪ ಅವರ ಗೆಲುವಿನಲ್ಲಿ ಶಿವರಾಜ್ ಕುಮಾರ್ ಪಾತ್ರ ದೊಡ್ಡದು. ಇವರಿಗಾಗಿ ಶಿವಣ್ಣ ಪ್ರಚಾರಕ್ಕೂ ಹೋಗಿದ್ದರು. ಹಾಗಾಗಿ ಸಿನಿಮಾದ ಶೂಟಿಂಗ್ ಅನ್ನು ಮುಂದೂಡಲಾಗಿತ್ತು. ಇದೀಗ ಶಿವಣ್ಣ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಹತ್ತು ಹಲವು ವಿಶೇಷಗಳನ್ನು ಈ ಸಿನಿಮಾ ಹೊಂದಿದೆ.  ಶಿವಣ್ಣ- ಡೈರೆಕ್ಟರ್ ಶ್ರೀನಿ ಕಾಂಬಿನೇಷನ್ ಈ  ಸಿನಿಮಾದಲ್ಲಿ ಬಾಲಿವುಡ್ (Bollywood) ಖ್ಯಾತ ನಟ ಅನುಪಮ್ ಖೇರ್ (Anupam Kher) ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಶಿವರಾಜ್‌ಕುಮಾರ್‌ಗೆ ಜೊತೆಯಾಗುವ ಮೂಲಕ ಕನ್ನಡಕ್ಕೆ ಅನುಪಮ್ ಖೇರ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    `ಘೋಸ್ಟ್’ ಸಿನಿಮಾಗೆ ಚಾಲನೆ ಸಿಕ್ಕ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಲೇ ಇದೆ. ಈ ಚಿತ್ರದ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಬಂದಿಳಿದ ನಟ ಅನುಪಮ್ ಖೇರ್, ತಮ್ಮ ಪಾತ್ರದ ಕುರಿತು ಡೈರೆಕ್ಟರ್ ಶ್ರೀನಿ ಜೊತೆಗೆ ಚರ್ಚೆ ಮಾಡಿದ್ದಾರೆ. ಶ್ರೀನಿ ಕೂಡ ಅನುಪಮ್ ಖೇರ್ ಅವರಿಗೆ ಸಿನಿಮಾದ ಶೂಟಿಂಗ್ ಮತ್ತು ಇತರೆ ವಿಷಯಗಳನ್ನ ವಿವರಿಸಿದ್ದಾರೆ.

     

    ಇನ್ನೂ `ವೇದ’ ಸೂಪರ್ ಸಕ್ಸಸ್ ನಂತರ ಶಿವಣ್ಣ `ಘೋಸ್ಟ್’, ಭೈರತಿ ರಣಗಲ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ (Shivanna) ಜೊತೆ ಅನುಪಮ್ ಖೇರ್ ಕಾಂಬಿನೇಷನ್ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ.