Tag: ಶ್ರೀನಾಥ್

  • ‘ವಿಕಾಸ ಪರ್ವ’ ಚಿತ್ರಕ್ಕೆ ಪ್ರಣಯರಾಜ ಸಾಥ್

    ‘ವಿಕಾಸ ಪರ್ವ’ ಚಿತ್ರಕ್ಕೆ ಪ್ರಣಯರಾಜ ಸಾಥ್

    ಸಾಮಾಜಿಕ ಕಳಕಳಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿದೆ “ವಿಕಾಸ ಪರ್ವ”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. ಕನ್ನಡದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ “ವಿಕಾಸ ಪರ್ವ” (Vikas Parva) ಚಿತ್ರದ ಟ್ರೇಲರ್ (Trailer) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಹಾಡು ಬರೆದಿರುವ ವಿ.ನಾಗೇಂದ್ರಪ್ರಸಾದ್ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ವೇಲು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು “ವಿಕಾಸ ಪರ್ವ” ದ ಕುರಿತು ಮಾತನಾಡಿದರು.

    ವಿಕಾಸ ಪರ್ವ  ಉತ್ತಮ ಸಂದೇಶವಿರುವ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರ ಇದಾಗಲಿದೆ. ಈಗಾಗಲೇ ಸೆನ್ಸಾರ್ ಕೂಡ ಮುಗಿದು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ತಿಳಿಸಿದರು.

    ಚಿತ್ರತಂಡದ ಸಹಕಾರದಿಂದ “ವಿಕಾಸ ಪರ್ವ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ  ಎಂದರು ನಿರ್ದೇಶಕ ಅನ್ಬು ಅರಸ್. ವಿಶೃತ್ ನಾಯಕ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ ಎಂದು ಮಾತನಾಡಿದ ನಟ ರೋಹಿತ್ ನಾಗೇಶ್, ಈ ಚಿತ್ರದ ಕುರಿತು ಒಂದು ಮಾತು ಹೇಳಬಹುದು. ಚಿತ್ರ ನೋಡುವವರಿಗೆ ಬೇಸರವಾಗಲ್ಲ. ನೋಡಿದ ಮೇಲೆ ಯಾರು ನಮಗೆ ಬಯ್ಯುವುದಿಲ್ಲ. ಅಂತಹ ಉತ್ತಮ ಸಿನಿಮಾವಿದು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶ್ರೀನಾಥ್ ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು.

    ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ನವೀನ್ ಸುವರ್ಣ ಹಾಗೂ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ ಪಿ ಓ ಮಾಹಿತಿ ನೀಡಿದರು. ನಟಿ ಸ್ವಾತಿ, ನಟರಾದ ಅಶ್ವಿನ್ ಹಾಸನ್, ಕುರಿಬಾಂಡ್ ತಮ್ಮ ಪಾತ್ರದ ಕುರಿತು ಮಾತನಾಡಿದರು. ಕನ್ನಡವೇ ಸತ್ಯ ರಂಗಣ್ಣ, ವೀರಕಪುತ್ರ ಶ್ರೀನಿವಾಸ್ ಮುಂತಾದ ಗಣ್ಯರು ಸಮಾರಂಭದಲ್ಲಿದ್ದರು.

  • ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡುವುದು ಹೇಗೆ- ನಟ ಶ್ರೀನಾಥ್

    ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡುವುದು ಹೇಗೆ- ನಟ ಶ್ರೀನಾಥ್

    ಕಾವೇರಿ ನೀರು ಹಂಚಿಕೆ (Cauvery Protest) ವಿಚಾರವಾಗಿ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕನ್ನಡದ ಪರ ಹೋರಾಟಗಾರರು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಸ್ಯಾಂಡಲ್‌ವುಡ್ ನಟ-ನಟಿಯರು ಸಾಥ್‌ ನೀಡಿದ್ದಾರೆ. ಈ ವೇಳೆ, ಡಾ.ರಾಜ್ ಕಾವೇರಿ ಹೋರಾಟಕ್ಕೆ ಈ ಹಿಂದೆ ಸಾಥ್ ನೀಡಿದ್ದರ ಬಗ್ಗೆ ಹಿರಿಯ ನಟ ಶ್ರೀನಾಥ್ (Actor Srinath) ಸ್ಮರಿಸಿದ್ದಾರೆ.ಇದನ್ನೂ ಓದಿ:‘ಕೆಂಡ’ದಂತಹ ಸಿನಿಮಾ ಮಾಡಿದ ಸಹದೇವ್-ರೂಪಾ ರಾವ್

    ಈ ಕಾವೇರಿ ಹೋರಾಟ ರೈತರ ಜೀವನಾಡಿಗಾಗಿ ಮಾಡುತ್ತಿರುವ ಹೋರಾಟವಾಗಿದ್ದು, ನಮ್ಮೆಲ್ಲರಿಗೂ ಜೀವನಾಡಿಯಾಗಿದೆ. ಯಾಕೆ ಇಂದಿಗೂ ನಮ್ಮ ಕಾವೇರಿ ಸಮಸ್ಯೆ ಬಗೆಹರಿಯುತ್ತಿಲ್ಲ. ಇದು ದೊಡ್ಡವರು ತೀರ್ಮಾನ ಮಾಡಬೇಕು. ಕಾವೇರಿ ನಮ್ಮ ಹಕ್ಕು, ನಮ್ಮ ಜೀವನಾಡಿಯಿಂದ ನಮ್ಮನ್ನ ಬದುಕಿಸುವ ಜೊತೆ ರೈತರನ್ನು ಬದುಕಿಸಿ ಎಂದು ಶ್ರೀನಾಥ್ ಕೇಳಿಕೊಂಡಿದ್ದಾರೆ.

    ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ಎಂದು ಶ್ರೀನಾಥ್ ಪ್ರಶ್ನಿಸಿದ್ದಾರೆ. ರೈತರು ಇಲ್ಲದೇ ಹೋದರೆ ನಾವಿಲ್ಲ. ಆ ರೈತರು ಉಳಿಸೋದಕ್ಕಾಗಿ ಹೋರಾಟ ಮಾಡಬೇಕು. ಇವತ್ತು ಕಾವೇರಿ ನದಿ ಉತ್ತರ ಕರ್ನಾಟಕದಲ್ಲಿ ಇಲ್ಲದೇ ಹೋದರೂ, ತುಂಬು ಮನಸ್ಸಿನಿಂದ ಈ ಹೋರಾಟಕ್ಕೆ ಅವರೆಲ್ಲರೂ ಸಾಥ್ ನೀಡಿದ್ದಾರೆ.

    ಯಾವಾಗೂ ನಮಗೆ ತೊಂದರೆಯಾಗುತ್ತದೆ. ಆದರೆ ನಾವು ಯಾರಿಗೂ ತೊಂದರೆ ಕೊಡಲ್ಲ. ಈ ಸಮಯದಲ್ಲಿ ಡಾ.ರಾಜ್‌ಕುಮಾರ್ ಅವರನ್ನ ನೆನಪು ಸ್ಮರಿಸುತ್ತೇನೆ. ಅಂದು ಕಾವೇರಿ ಸಮಸ್ಯೆಯಿದ್ದಾಗ ಮುನ್ನುಗ್ಗಿ ಡಾ.ರಾಜ್ ಸಾಥ್ ನೀಡಿದ್ದರು. ಕನ್ನಡಿಗರಿಗೆ ನಮ್ಮ ಹಕ್ಕಿನ ಬಗ್ಗೆ ಅವರು ಪಾಠ ಮಾಡಿದ್ದರು ಎಂದು ಶ್ರೀನಾಥ್ ಸ್ಮರಿಸಿದ್ದಾರೆ.

    ಈ ಹೋರಾಟದಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಪೂಜಾ ಗಾಂಧಿ, ಲೂಸ್ ಮಾದ, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್

    ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅಲ್ಲದೇ ಯಾರೇ ಬಂದರೂ ಕೋಲಾರದಲ್ಲಿ (Kolar) ನಾನು ಗೆಲುವು ಸಾಧಿಸುತ್ತೇನೆ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿ ಶ್ರೀನಾಥ್ (C.M.R.Srinath) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ ಎಂಬ ವಿಷಯ ಬೆಳಗ್ಗೆ ಗೊತ್ತಾಯಿತು. ಅವರು ಸ್ಪರ್ಧೆ ಮಾಡಲಿ ಬಿಡಲಿ ನನಗೇನು ತೊಂದರೆ ಇಲ್ಲ. ಎರಡು ತಿಂಗಳ ಹಿಂದೆ ಕುಮಾರಸ್ವಾಮಿ (H.D.Kumaraswamy) ಟಿಕೆಟ್ ಘೋಷಣೆ ಮಾಡಿದ್ದಾರೆ. 4 ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಜನರ ಅಭಿಪ್ರಾಯ ಕಲೆ ಹಾಕಿ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: BJP ಚುನಾವಣೆ ಗೆಲ್ಲೋಕೆ ರೌಡಿ ಶೀಟರ್‌ಗಳನ್ನ ಸೇರಿಸಿಕೊಳ್ತಿದೆ – ಹೆಚ್‌ಡಿಕೆ ವಾಗ್ದಾಳಿ

    ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಪಕ್ಷಕ್ಕೆ ನೂರಾರು ಜನ ಸೇರ್ಪಡೆ ಆಗುತ್ತಿದ್ದಾರೆ. ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರು ನನ್ನ ಜೊತೆ ಇದ್ದಾರೆ. ಯಾವುದೇ ಮತಗಳು ಚದುರಿ ಹೋಗುವುದಿಲ್ಲ. ಯಾರೇ ಅಭ್ಯರ್ಥಿಯಾದರೂ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಾರ್ಟಿಯ ಅರ್ಥ ಕಮಿಷನ್, ಕರಪ್ಷನ್ – ಜೆ.ಪಿ.ನಡ್ಡಾ

    ಸಿದ್ದರಾಮಯ್ಯ ಬಂದರು ಎಂದು ನನಗೆ ಭಯ ಇರಲಿಲ್ಲ. ಅವರ ಮೇಲೆ ಗೌರವ ಇದೆ. ಅವರ ವಿರುದ್ಧ ಸ್ಪರ್ಧೆ ಮಾಡುವುದಕ್ಕೆ ಹೆಮ್ಮೆ ಇದೆ. ನನಗೆ ಇದೊಂದು ಸವಾಲು. ನಮ್ಮ ಜನರು ನನ್ನ ಜೊತೆ ಇದ್ದಾರೆ. ನಾನು ಗೆದ್ದೇ ಗೆಲ್ಲುತ್ತೇನೆ. ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹೆಚ್‌.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದ ವೈದ್ಯರು – ಹೆಚ್‌ಡಿಡಿ 100 ಕಿ.ಮೀ ರೋಡ್‌ ಶೋ ರದ್ದು

  • ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶ್ರೀನಾಥ್ ಅಂಡ್ ಟೀಮ್

    ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶ್ರೀನಾಥ್ ಅಂಡ್ ಟೀಮ್

    ನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ (Leelavati) ಅವರ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಹಿರಿಯ ನಟ ಶ್ರೀನಾಥ್ (Srinath), ನಟಿ ಪದ್ಮಾ ವಾಸಂತಿ (Padma Vasanthi), ನಟ ಸುಂದರಾಜ್, ಪ್ರಮೀಳಾ ಜೋಷಾಯಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.

    ಎರಡು ತಿಂಗಳು ಹಿಂದೆಯಷ್ಟೇ ನಟಿಯರಾದ ಶ್ರುತಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇದೀಗ ಶ್ರೀನಾಥ್ ಮತ್ತು ತಂಡ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಕೆಲ ಸಮಯ ಕಳೆದಿದೆ. ಹಳೆಯ ದಿನಗಳನ್ನು ಅವರೊಂದಿಗೆ ಮೆಲುಕು ಹಾಕಿದೆ. ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ಸಿನಿಮಾ ರಂಗದಿಂದ ದೂರವಾದ ನಂತರ ಲೀಲಾವತಿ ಅವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಊರಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ಅಲ್ಲದೇ, ರೈತರಿಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಲೀಲಾವತಿ ಅವರ ಜೊತೆ ಪುತ್ರ ವಿನೋದ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.

    ನಾಲ್ಕುನೂರಕ್ಕೆ ಹೆಚ್ಚು ಚಿತ್ರಗಳನ್ನು ಮಾಡಿರುವ ಲೀಲಾವತಿ ಸದ್ಯ ಬೆಂಗಳೂರು ಸಮೀಪದ ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೇ ಅವರ ತೋಟ ಕೂಡ ಇದೆ. ಮೊನ್ನೆಯಷ್ಟೇ ತಮ್ಮ ಚೆನ್ನೈನಲ್ಲಿದ್ದ ಜಮೀನು ಮಾರಿ ಬಂದ ಹಣದಲ್ಲಿ ‘ಡಾ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರ’ವನ್ನು ಸ್ಥಾಪನೆ ಮಾಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪ್ರಣಯ ರಾಜ’ನಾದ ನಟ ಭುವನ್ ಪೊನ್ನಣ್ಣ..!

    ‘ಪ್ರಣಯ ರಾಜ’ನಾದ ನಟ ಭುವನ್ ಪೊನ್ನಣ್ಣ..!

    ಪ್ರಣಯ ರಾಜ ಎಂದಾಕ್ಷಣ ನೆನಪಾಗೋದು ಎಂದೂ ಮರೆಯದ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್. ಈಗ ಇದೇ ‘ಪ್ರಣಯ ರಾಜ’ ಟೈಟಲ್ ತಮ್ಮ ಸಿನಿಮಾಗಿಟ್ಟು ತೆರೆ ಮೇಲೆ ಮಿಂಚಲು ಹೊರಟಿದ್ದಾರೆ ನಟ, ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ. ರಾಂಧವ ಸಿನಿಮಾ ನಂತರ ಭುವನ್ ‘ಪ್ರಣಯ ರಾಜ’ನಾಗಿ ತೆರೆ ಮೇಲೆ ಬರಲು ಸಿದ್ದರಾಗಿದ್ದು, ‘ಪ್ರಣಯರಾಜ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.

    ಭುವನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ಭುವನ್, ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರೋ ಚಿತ್ರತಂಡ, ಹೊಸ ವರ್ಷದಿಂದ ಚಿತ್ರದ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಸುಮಾರು 21 ನಟಿಮಣಿಯರು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿರೋದು ‘ಪ್ರಣಯ ರಾಜ’ ಚಿತ್ರದ ವಿಶೇಷ ಸಂಗತಿ.

    ಬೇರೆ ಬೇರೆ ಚಿತ್ರರಂಗದ ಸುಮಾರು 21 ನಾಯಕಿಯರು ಈ ಚಿತ್ರದಲ್ಲಿ ಕಾಣಸಿಗಲಿದ್ದಾರೆ ಎಂದು ಚಿತ್ರತಂಡ ತಿಳಿಸಿದ್ದು, ಸದ್ಯದಲ್ಲೇ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದೆ. ಚಿತ್ರದಲ್ಲಿ ಭುವನ್ ಗೆ ಜೋಡಿಯಾಗಿ ಮೂವರು ನಾಯಕಿಯರು ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ‘ಪ್ರಣಯ ರಾಜ’ ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರವಾಗಿದ್ದು, ಟಿ.ಸುದರ್ಶನ್ ಚಕ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜ ಶಿವ ಶಂಕರ್ ಛಾಯಾಗ್ರಹಣ, ವಿಕಾಸ್ ರಾಜ್ ವಸಿಷ್ಠ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    ಕೆಜಿಎಫ್ ಖ್ಯಾತಿಯ ಸಾಹಸ ನಿರ್ದೇಶಕ ವಿಕ್ರಂ ಮೋರ್ ನಿರ್ದೇಶನದಲ್ಲಿ ಚಿತ್ರದ ಆಕ್ಷನ್ ಸೀನ್ ಗಳು ಮೂಡಿ ಬರಲಿದ್ದು, ಸದ್ಯದಲ್ಲೇ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರ ತಂಡ ನೀಡಲಿದೆ.

  • ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ವಿಚಾರದಲ್ಲಿ ನನಗಿಂತ ದೊಡ್ಡವರಾಗಿದ್ದರು: ಜೀವದ ಗೆಳೆಯನಿಗೆ ಶ್ರೀನಾಥ್ ಕಂಬನಿ

    ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ವಿಚಾರದಲ್ಲಿ ನನಗಿಂತ ದೊಡ್ಡವರಾಗಿದ್ದರು: ಜೀವದ ಗೆಳೆಯನಿಗೆ ಶ್ರೀನಾಥ್ ಕಂಬನಿ

    ಬೆಂಗಳೂರು: ಅನಂತ್ ಜೀಗೆ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ? ಎಂದು ಹೇಳುತ್ತಾ ಹಿರಿಯ ನಟ ಶ್ರೀನಾಥ್ ಅವರು ಕೇಂದ್ರ ಸಚಿವ ಅನಂತ್‍ಕುಮಾರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಅನಂತ್ ಜೀಗೆ ನಮಸ್ಕಾರ ಮಾಡಲು ನಾನು ಬರಬೇಕಿತ್ತಾ? ಎಂಬುದು ನನಗೆ ಕಾಡುತ್ತಿದೆ. ಅವರು ನನಗಿಂತ ಚಿಕ್ಕ ವಯಸ್ಸಿನವರು. 96ನೇ ಇಸವಿನಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನನಗೆ ಅವರ ಪರಿಚಯವಾಯಿತು. ನಮ್ಮಿಬ್ಬರ ಪರಿಚಯ ಸ್ನೇಹವಾಯಿತು. ಸ್ನೇಹಿತನಾಗಿ ಅವರು ನನಗೆ ಜೀವದ ಗೆಳೆಯಾಗಿದ್ದರು. ನನಗೆ ಮಾರ್ಗದರ್ಶಕರಾಗಿದ್ದರು. ಬಿಜೆಪಿ ಬರಲು ಹಾಗೂ ಅಲ್ಲಿ ನಾನು ಸಕ್ರಿಯರಾಗಿರಲು ಅವರು ನನಗೆ ಪ್ರೋತ್ಸಾಹ ನೀಡುತ್ತಿದ್ದರು.

    ಅನಂತ್ ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರು ಅವರು ನನಗೆ ಎಲ್ಲ ವಿಷಯದಲ್ಲಿ ಅವರು ನನಗಿಂತ ದೊಡ್ಡವರಾಗಿದ್ದರು. ಯಾವ ವಿಷಯದಲ್ಲಿ ಹೇಗೆ ಯೋಚನೆ ಮಾಡಬೇಕೆಂದು ಹೇಳುತ್ತಿದ್ದರು. ಅನೇಕ ವಿಷಯಗಳಲ್ಲಿ ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಮಾರ್ಗದರ್ಶಕ ಅವರು ನನ್ನ ಕೊನೆಯುಸಿರು ಇರುವರೆಗೂ ನನ್ನ ಜೊತೆ ಅವರು ಇರುತ್ತಾರೆ ಎಂದು ನಾನು ಅಂದುಕೊಂಡಿದೆ. ಆದರೆ ಈಗ ಅವರು ನಮ್ಮನೆಲ್ಲಾ ಅಗಲಿ ಹೋಗಿರೋದು ನನಗೆ ನೋವಾಗುತ್ತಿದೆ.

    ಸ್ಬೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಯಾವತ್ತು ನಾವು ಪಯಣಿಗನಾಗಿರಬೇಕೆಂಬುದು ಅವರನ್ನು ನೋಡಿದ್ದಾಗ ಗೊತ್ತಾಗುತ್ತದೆ. ಅನಂತ್ ಅವರು ನಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ನಾಯಕರಾಗಿದ್ದರು ಹಾಗೂ ವಿಶ್ವದಲ್ಲಿ ಹೆಸರು ಮಾಡಿದ್ದರು. ಆದರೆ ಅವರು ಸ್ನೇಹ ಜೀವಿ ಆಗಿದ್ದರು. ಸ್ನೇಹಕ್ಕೆ ಅವರು ಕೊಡುತ್ತಿದ್ದ ಬೆಲೆ ಅನೇಕರಿಗೆ ಮಾರ್ಗದರ್ಶನವಾಗಬಹುದು. ಜೀವನದಲ್ಲಿ ಏನೇ ಸಾಧಿಸಿದ್ದರು ಆದರೆ ಸ್ನೇಹ ಇದ್ದರೇ ಆ ಸಾಧನೆ ಮೆಟ್ಟಿಲು ಆಗುತ್ತಿದೆ. ಆ ಮೆಟ್ಟಿಲಲ್ಲಿ ಸ್ನೇಹದಿಂದ ತುಂಬಿದ ವಾತಾವರಣ ನಿರ್ಮಿಸಲು ಅನಕೂಲವಾಗುತ್ತೆ ಎಂಬುದನ್ನು ತೋರಿಸಿದ್ದಾರೆ. ಅವರು ನನಗೆ ಜೀವದ ಗೆಳೆಯರಾಗಿದ್ದರು ಎಂದು ಹೇಳಿ ಶ್ರೀನಾಥ್ ಕಂಬನಿ ಮಿಡಿದಿದ್ದಾರೆ.

    ಅನಂತ್ ಅವರ ರಾಜಕೀಯದಲ್ಲಿ ಅವರ ನಡೆ, ನುಡಿ ನೋಡಿ ನಾನು ಅವರನ್ನು ಫಾಲೋ ಮಾಡಿದೆ. ಪಕ್ಷಾತೀತವಾಗಿ ಅನಂತ್ ಅವರು ಸ್ನೇಹವನ್ನು ಸಂಪಾದಿಸಿದ್ದರು. ರಾಜಕೀಯ, ಪಕ್ಷ ಎಂದರೆ ಟೀಕೆ, ಟಿಪ್ಪಣಿ ಇರುತ್ತದೆ. ಆದರೆ ಟೀಕೆ, ಟಿಪ್ಪಣಿ ಎಲ್ಲ ಮೀರಿ ಅನಂತ್ ಅವರನ್ನು ನಮ್ಮ ಸ್ನೇಹಿತ ಎಂದು ಹೇಳಿಕೊಳ್ಳುವುದ್ದಕ್ಕೆ ಬೇರೆ ಪಕ್ಷದ ರಾಜಕಾರಣಿಗಳಿಗೆ ಸಂತೋಷಪಡುತ್ತಾರೆ ಎಂದು ಹೇಳಿದರು.

    https://www.youtube.com/watch?v=eafw1Ed-Wpc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ- ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಎಂಎಲ್‍ಸಿ ಶ್ರೀನಾಥ್

    ಸಿಎಂ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ- ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಎಂಎಲ್‍ಸಿ ಶ್ರೀನಾಥ್

    ಕೊಪ್ಪಳ: ಸಿದ್ದರಾಮಯ್ಯನವರ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ. ಸಿದ್ದರಾಮಯ್ಯ ಹಿಟ್ಲರ್ ಇದ್ದ ಹಾಗೆ ಅಂತ ಕೊಪ್ಪಳದ ಗಂಗಾವತಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀನಾಥ್ ವಾಗ್ದಾಳಿ ನಡೆಸಿದ್ರು.

    ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪತ್ರ ರವಾನಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಇಂದಿರಾಗಾಂಧಿ ಕಾಲದಿಂದ ನಮ್ಮ ಮನೆಯಲ್ಲಿ ಕಾಂಗ್ರೆಸ್ ಕೆಲಸ ಆರಂಭವಾಗುತ್ತಿತ್ತು. ಆದ್ರೆ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರ ಮೇಲೆ ದರ್ಪ ತೋರಿಸುತ್ತಿದ್ದಾರೆ ಅಂದ್ರು.

    ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಕ್ಷ ಹೈಜಾಕ್ ಆಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಆಡಳಿತ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾಲ್ಕು ವರ್ಷದಿಂದ ಮೂಲ ಕಾಂಗ್ರೆಸ್‍ಗೆ ಅನ್ಯಾಯವಾಗಿದೆ. ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಅನ್ಸಾರಿ ಮುಂದೆ ನಮ್ಮ ಜೊತೆ ಇರ್ತಾರೆ ಎಂದು ಘೋಷಣೆ ಮಾಡಿದ್ರು.

    ಸಿದ್ದರಾಮಯ್ಯ ನಿಲುವಿನಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಜಿಪಂ ಸದಸ್ಯರು, ನಗರಸಭೆ ಸದಸ್ಯರು, ತಾಪಂ ಸದಸ್ಯ ರೊಂದಿಗೆ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಕ್ಕೆ ಗುಡ್ ಬೈ ಹೇಳಿದ್ರು.

     

  • ಕಿರುತೆರೆಗೆ ಬರ್ತಿದೆ ಮಾನಸ ಸರೋವರ – 38 ವರ್ಷದ ಬಳಿಕ ಮತ್ತೆ ಒಂದಾದ ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ

    ಕಿರುತೆರೆಗೆ ಬರ್ತಿದೆ ಮಾನಸ ಸರೋವರ – 38 ವರ್ಷದ ಬಳಿಕ ಮತ್ತೆ ಒಂದಾದ ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ

    ಬೆಂಗಳೂರು: ಚಂದನವನದ 80ರ ದಶಕದ ಚೆಂದದ, ಮುದ್ದಾದ ಜೋಡಿ ಮತ್ತೆ ಒಂದಾಗಲಿದೆ. ಅಂದು ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಜೋಡಿ ಈಗ ಕಿರುತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ.

    35 ವರ್ಷದ ಹಿಂದೆ ಚಂದನವನದ ಬೆಳ್ಳಿತೆರೆಯ ಭಾವ ಶಿಲ್ಪಿ, ಎಸ್.ಆರ್.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಮಾನಸ ಸರೋವರ ಮಗದೊಮ್ಮೆ ಬರಲಿದೆ. ಆದ್ರೆ ಸ್ಮಾಲ್ ಚೈಂಜ್ ಏನು ಅಂದ್ರೆ ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್‍ಗೆ ಮಾನಸ ಸರೋವರ ಹರಿಯಲಿದೆ.

    ಸ್ಯಾಂಡಲ್‍ವುಡ್ ಮಾಸ್ ಲೀಡರ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಫಸ್ಟ್ ಟೈಮ್ ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮದೆಯಾದ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿ ಧಾರಾವಾಹಿ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.

    ಈ ಧಾರಾವಾಹಿಯ ಹೆಸರು `ಮಾನಸ ಸರೋವರ’. ಇಂದು ಬೆಂಗಳೂರಿನ ಕಂಠಿರವ ಸ್ಟೂಡಿಯೋದಲ್ಲಿ ಈ ಧಾರಾಹಿಯ ಮುಹೂರ್ತ ನೆರವೇರಿತು. ದೊಡ್ಮನೆಯ ಮಕ್ಕಳಾದ ಶಿವರಾಜ್‍ಕಮಾರ್, ಪುನೀತ್ ರಾಜ್‍ಕುಮಾರ್ ಹಾಗೂ ವಿನಯ್ ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತಕ್ಕೆ ಸಾಕ್ಷಿಯಾದರು. ಸಿರಿಯಲ್ ಕಥೆ ಮಾನಸ ಸರೋವರದ ಮುಂದುವರೆದ ಭಾಗವಾಗಿದೆ. ಪ್ರಣಯ ರಾಜ ಶ್ರೀನಾಥ್, ಪದ್ಮವಸಂತಿ ಹಾಗೂ ರಾಮಕೃಷ್ಣ ನಟರು ಈ ಧಾರಾವಾಹಿಯಲ್ಲಿ ಮತ್ತೊಮ್ಮೆ ಜೊತೆಯಾಗಿ ಬಣ್ಣಹಚ್ಚುತ್ತಿದ್ದಾರೆ. ಶಿವಣ್ಣರ ದ್ವಿತಿಯ ಪುತ್ರಿ ನಿವೇದಿತಾ ಮಾನಸ ಸರೋವರಕ್ಕೆ ನಿರ್ಮಾಪಕಿಯಾಗಿದ್ದಾರೆ.