Tag: ಶ್ರೀದೇವಿ ಭೈರಪ್ಪ

  • ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

    ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮದಿನದ ಹಿನ್ನೆಲೆ ರಾಘಣ್ಣ (Raghavendra Rajkumar) ಸೊಸೆ ಶ್ರೀದೇವಿ ಭೈರಪ್ಪರವರು (Sridevi Byrappa) ಅಪ್ಪು ಕುರಿತು ಎಮೋಷನಲ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ ಎನ್ನುತ್ತಾ ಪುನೀತ್ ಬಗ್ಗೆ ಶ್ರೀದೇವಿ ಬರೆದುಕೊಂಡಿದ್ದಾರೆ.

    ಶ್ರೀದೇವಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಅಪ್ಪು ಕೇವಲ ಹೆಸರಲ್ಲ. ನನ್ನಂತಹ ಅನೇಕ ಕನ್ನಡಿಗರಿಗೆ ಅದು ಒಂದು ಭಾವನೆ. ವರ್ಷಗಳ ಕಾಲ ಅವರ ಮತ್ತು ಅವರ ಶಕ್ತಿಯಿಂದ ಸುತ್ತುವರೆದಿರುವುದು ನನಗೆ ಸೌಭಾಗ್ಯವಾಗಿತ್ತು. ಅಪ್ಪು ಅಗಲಿಕೆಯ ಹಿಂದಿನ ದಿನ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ. ಅರ್ಥವಿಲ್ಲದ ಸಿನಿಮಾಗಳು, ಪದೇ ಪದೇ ಅದೇ ಡೈಲಾಗ್ ಹಾಗೂ ಸಮಾಜವನ್ನು ನೆಗೆಟಿವ್ ಆಗಿ ಶೇಪ್ ಮಾಡುವ ಕಥೆಗಳನ್ನು ನೋಡಿ ಬೇಸರವಾಗಿದೆ ಎನ್ನುತ್ತಿದ್ದರು ಎಂದು ಅಗಲಿಕೆಯ ಹಿಂದಿನ ದಿನ ಮಾತನಾಡಿದ ಮಾತನ್ನು ಅವರು ಸ್ಮರಿಸಿದ್ದಾರೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ – ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ

    ಚಿತ್ರದ ನಿರ್ಮಾಪಕರು ಹಣ ಗಳಿಸಲು ಹೇಗೆಲ್ಲ ಸಿನಿಮಾ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು. ನಿರ್ದೇಶಕರು ಮತ್ತು ನಿರ್ಮಾಪಕರು ಕೇವಲ ಹಣ ಮಾಡಲು ಹಾಗೂ ಅಹಂಗೋಸ್ಕರ ಸಿನಿಮಾ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ್ದರು. ನಮ್ಮ ಸಮಾಜದ ಮನಸ್ಥಿತಿಯನ್ನು ಪ್ರಶ್ನಿಸಿದ್ದರು. ಅವರು ಲೀಡರ್‌ಶಿಪ್‌ನ ತುಂಬಾ ಹತ್ತಿರದಿಂದ ನೋಡುವ ಭಾಗ್ಯ ನನಗೆ ಸಿಕ್ಕಿತ್ತು. ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಜೊತೆಗೆ ಹೊಸಬರಿಗೆ ಅವಕಾಶಗಳನ್ನು ನೀಡಿದರು. ಅಪ್ಪು ಅವರು ಸಿನಿಮಾರಂಗದ ಇತಿಹಾಸದಲ್ಲಿ ಅದೆಷ್ಟೋ ದಾಖಲೆಗಳನ್ನು ಮುರಿದಿದ್ದಾರೆ. ಆದರೆ ಸ್ವತಃ ಅವರೇ ನಿರ್ಮಾಣ ಮಾಡಲು ನಿರ್ಧರಿಸಿದಾಗ ‘ಗಂಧದ ಗುಡಿ’ಯನ್ನು (Gandada Gudi) ಆರಿಸಿಕೊಂಡರು. ಇದು ಅವರ ಭೂಮಿ ಮತ್ತು ಅವರ ಜನರ ಕಥೆಯನ್ನು ಹೇಳುವ ಸಾಕ್ಷ್ಯ ಚಿತ್ರವಾಗಿತ್ತು ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Sridevi Byrappa (@sridevibyrappa)


    ಶಿಕ್ಷಣಕ್ಕೆ ಬೆಂಬಲವಾಗಿ ಈ ಜಾಹೀರಾತನ್ನು ಉಚಿತವಾಗಿ ಚಿತ್ರೀಕರಿಸಲು ಅವರು ಎಡ್‌ಟೆಕ್ ಕಾರ್ಪೊರೇಷನ್‌ನಿಂದ ಮಿಲಿಯನ್ ಡಾಲರ್ ಆಫರ್ ಅನ್ನು ತಿರಸ್ಕರಿಸಿದರು. ಏಕೆಂದರೆ ನಾವು ಏನು ಕೆಲಸ ಮಾಡುತ್ತಿದ್ದೇವೆ ಎಂಬುದರಲ್ಲಿ ಅವರಿಗೆ ನಂಬಿಕೆ ಇತ್ತು. ಅವರು ಸರಿಯಾಗಿರುವ ಪರ ಅವರು ನಿಂತರು. ಮತ್ತೆ ಅವರ ಸುತ್ತಲೂ ಮಹಿಳೆಯರು ಸುರಕ್ಷಿತವಾಗಿರುತ್ತಿದ್ದರು, ಮತ್ತು ಅವರು ನನ್ನನ್ನೂ ಒಳಗೊಂಡಂತೆ ಅನೇಕರಿಗೆ ಹೇಗೆ ಬದುಕಬೇಕೆಂದು ಕಲಿಸಿದರು ಎಂದು ಅಪ್ಪುರನ್ನು ಸ್ಮರಿಸಿದ್ದಾರೆ. ಪುನೀತ್‌ ಕೆಲ ತುಣುಕುಗಳನ್ನು ಶೇರ್‌ ಮಾಡಿ ವಿಶೇಷವಾಗಿ ಅಪ್ಪು ಬರ್ತ್‌ಡೇಗೆ ಶ್ರೀದೇವಿ ವಿಶ್‌ ಮಾಡಿದ್ದಾರೆ.

    ಇನ್‌ಫಿನಿಟಿ ವರ್ಲ್ಡ್ ಸ್ಟುಡಿಯೋ ಹಲವು ಬಗೆಯ ಕಥೆಯನ್ನು ಪ್ರಸ್ತುತಪಡಿಸುತ್ತಿದೆ. ನಿಮ್ಮ 50ನೇ ಹುಟ್ಟುಹಬ್ಬದಂದು ನಿಮ್ಮನ್ನು ನಂಬಿದ ನನ್ನಂತ ಅದೆಷ್ಟೋ ಅಭಿಮಾನಿಗಳಿಗೆ ಸ್ಫೂರ್ತಿಯ ದಿನ ಆಗಿರಲಿದೆ. ಈ ಸ್ಟುಡಿಯೋ ಮೂಲಕ ನಮ್ಮ ಹೊಸ ಪ್ರಾಜೆಕ್ಟ್‌ ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೇವೆ ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಶ್ರೀದೇವಿ ಭೈರಪ್ಪ ಅವರು ವಿದೇಶದಲ್ಲಿ ವಿದ್ಯಾಬ್ಯಾಸದ ಜೊತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಫಾರಿನ್‌ನಲ್ಲಿ ಅವರು ತಂಗಿದ್ದಾರೆ.

  • 1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ

    1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ

    ದೊಡ್ಮನೆ ರಾಘಣ್ಣ ಸೊಸೆ, ಯುವ ರಾಜ್‌ಕುಮಾರ್ (Yuva Rajkumar) ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯನ್ನು ಧರಿಸಿ ದೀಪಾವಳಿ ಹಬ್ಬದ ದಿನ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. 1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಟಗರು’ ಚಿತ್ರದ ಹಾಡಿಗೆ ಯಶ್ ಭರ್ಜರಿ ಡ್ಯಾನ್ಸ್

     

    View this post on Instagram

     

    A post shared by Sridevi Byrappa (@sridevibyrappa)

    ಕಳೆದ ಒಂದು ವರ್ಷದಿಂದ ನಾನು ತುಂಬಾ ಕಷ್ಟಪಟ್ಟಿದ್ದೇನೆ. ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ತುಂಬಾ ಹೋರಾಡಿದೆ. ಎಷ್ಟೋ ಸಲ ನನ್ನ ಹೃದಯ ಮತ್ತು ನನ್ನ ತಲೆ ಎರಡು ಬಿಟ್ಟು ನನ್ನನ್ನು ಬಿಟ್ಟು ಕೊಡದಂತೆ ಸೂಚಿಸಿದವು. ಇಂತಹ ಸಮಯದಲ್ಲಿ ನನ್ನ ಜೊತೆಗೆ ಕುಟುಂಬ, ಫ್ರೆಂಡ್ಸ್, ಮೆಂಟರ್ಸ್, ಹಿತೈಷಿಗಳು ನಿಂತರು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಇದು ನಿಮಗೆ ಅಲ್ಲ, ನೀವು ಸುಂದರವಾಗಿದ್ದೀರಿ, ನಿಮ್ಮ ಹೃದಯವು ಉತ್ತಮವಾಗಿ ಅರ್ಹವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ಬೆಂಬಲ ಹೊಂದಲು ಕೃತಜ್ಞಳಾಗಿದ್ದೇನೆ ಎಂದಿದ್ದಾರೆ. ಈ ವೇಳೆ, ಲಂಡನ್ ಸಂಸ್ಥೆಯೊಂದರಲ್ಲಿ ಕೆಲವು ವಿಚಾರಗಳ ಕುರಿತು ಸಂಶೋಧನಾ ಅಧ್ಯಯನಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಅದ್ಭುತ ಸಂಸ್ಥಾಪಕರಿಂದ ಕೆಲಸ ಕಲಿಯುತ್ತಿದ್ದೇನೆ. ಅಲ್ಲದೇ ಅರೆಕಾಲಿಕ ಶಾಲಾ ಶಿಕ್ಷಕಿಯಾಗಿದ್ದೇನೆ ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಅಂದಹಾಗೆ, ಶ್ರೀದೇವಿ ಅವರು ಲಂಡನ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

  • ಅಪ್ಪು ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದು ಭಾವುಕ ಪೋಸ್ಟ್‌ ಹಂಚಿಕೊಂಡ ಶ್ರೀದೇವಿ ಭೈರಪ್ಪ

    ಅಪ್ಪು ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದು ಭಾವುಕ ಪೋಸ್ಟ್‌ ಹಂಚಿಕೊಂಡ ಶ್ರೀದೇವಿ ಭೈರಪ್ಪ

    ಪುನೀತ್ ರಾಜ್‌ಕುಮಾರ್ (Puneeth Rajkumar) ಅಂದರೆ ಎಲ್ಲರಿಗೂ ಒಂದು ವಿಶೇಷ ಪ್ರೀತಿ ಇದೆ. ಇನ್ನೂ ದೊಡ್ಮನೆಯ ರಾಘಣ್ಣ ಸೊಸೆ ಶ್ರೀದೇವಿ ಭೈರಪ್ಪ ಅವರು ಪುನೀತ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಪ್ಪು ಪುಣ್ಯಸ್ಮರಣೆಯಂದು (ಅ.29) ಅವರನ್ನು ಶ್ರೀದೇವಿ (Sridevi Byrappa) ಸ್ಮರಿಸಿದ್ದಾರೆ. ಅಪ್ಪು ಈ ಹಿಂದೆ ಹಾಡಿರುವ ವಿಶೇಷ ವಿಡಿಯೋ ಶೇರ್ ಮಾಡಿ, ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವರ್ಷ ಮೂರು, ಮರೆಯದ ನೆನಪು ನೂರು: ಅಪ್ಪು ನೆನೆದ ರಾಘಣ್ಣ

    ಕುಟುಂಬದ ಕಾರ್ಯಕ್ರಮದಲ್ಲಿ ಕವಿರತ್ನ ಕಾಳಿದಾಸ ಚಿತ್ರದ ‘ಸದಾ ಕಣ್ಣಲ್ಲಿ’ ಹಾಡನ್ನು ಅಪ್ಪು ಹಾಡಿದ್ದರು. ಅದನ್ನು ಸ್ವತಃ ಶ್ರೀದೇವಿ ಅವರು ಚಿತ್ರೀಕರಿಸಿದ್ದರು. ಆ ವಿಡಿಯೋವನ್ನು ಹಂಚಿಕೊಂಡು, ಚಿಕ್ಕಂದಿನಿಂದಲೂ ಅಪ್ಪು ಸಿನಿಮಾ ನೋಡುತ್ತಾ ಬೆಳೆದಿದ್ದೇನೆ. ಆದರೆ ಕಳೆದ 3 ವರ್ಷಗಳಿಂದ ನಾನು ಯಾವುದೇ ಚಿತ್ರವನ್ನು ನಾನು ನೋಡಿಲ್ಲ. ನಿಮ್ಮ ಸಿನಿಮಾಗಳಿಲ್ಲದೆ ಸಿನಿಮಾ ನೋಡುವ ಅನುಭವ ನಿಜಕ್ಕೂ ನನ್ನನ್ನು ಘಾಸಿ ಮಾಡುತ್ತಿದೆ. ಮಿಸ್ ಯೂ.. ನಿಮ್ಮ ಅಭಿಮಾನಿ ಎಂದು ಬರೆದು ಶ್ರೀದೇವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Sridevi Byrappa (@sridevibyrappa)

    ಸದ್ಯ ಉನ್ನತ ಶಿಕ್ಷಣಕ್ಕಾಗಿ ಶ್ರೀದೇವಿ ಭೈರಪ್ಪ ಅವರು ಅಮೆರಿಕಾದಲ್ಲಿದ್ದಾರೆ. ಅಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾರೆ.

  • ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೂ ನನ್ನ ದಾರಿಗೆ ಏನೇ ಎದುರಾದರೂ ಹೆದರಲ್ಲ: ಯುವ ಪತ್ನಿ ಶ್ರೀದೇವಿ

    ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೂ ನನ್ನ ದಾರಿಗೆ ಏನೇ ಎದುರಾದರೂ ಹೆದರಲ್ಲ: ಯುವ ಪತ್ನಿ ಶ್ರೀದೇವಿ

    ಬೆಂಗಳೂರು: ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ನಾನು ಹೆದರುವುದಿಲ್ಲ ಎಂದು ಸ್ಯಾಂಡಲ್‌ವುಡ್‌ (Sandalwood) ನಟ ಯುವ (Yuva Rajkumar) ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಹೇಳಿದ್ದಾರೆ.

    ಈ ಸಂಬಂಧ ಇನ್‌ಸ್ಟಾದಲ್ಲಿ ಸ್ಟೋರಿ ಹಾಕಿರುವ ಅವರು, ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಗೆ ಹಿಂತಿರುಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯುವರಾಜ್‌ಕುಮಾರ್ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್‌ಗೆ ಮುಂದಾದ ಜೋಡಿ

    ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ನನ್ನ ಹೃದಾಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ.

    ಸ್ಟೋರಿಯಲ್ಲಿ ಏನಿದೆ?
    ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ. ಆದರೂ ಸಹ, ನಿಮ್ಮ ತಾಳ್ಮೆಗೆ, ಸತ್ಯದ ಪರ ಧೃತಿಗೆಡದೆ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಧೈರ್ಯಕ್ಕೆ, ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ವಿಚಾರದಲ್ಲಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗುವ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇನೆ.

    ಕಳೆದ ಏಳು ತಿಂಗಳುಗಳು ತೀವ್ರ ಒತ್ತಡ ಮತ್ತು ಆಘಾತದಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದ ಬಂಧುಗಳು, ಅನ್ಯಾಯದ ವಿರುದ್ಧ ದನಿಯೆತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನೊಂದಿಗೆ ದುಃಖಿಸಿ ಸಾಂತ್ವಾನ ಹೇಳಿದ ನನ್ನ ವಿದ್ಯಾರ್ಥಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನಿಮ್ಮ ಪ್ರೀತಿ, ದಯೆಯ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

    ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ನಾನು ಪುನರುಚ್ಚರಿಸುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ.

    ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಗೆ ಹಿಂತಿರುಗುತ್ತಿದ್ದೇನೆ. ಈ ಸಮಯವು, ನನಗೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಆಘಾತಗಳಿಂದ ಗುಣಮುಖಳಾಗಲು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ. ದೇವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ.

  • ಸತ್ಯ, ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ: ಶ್ರೀದೇವಿ ಭೈರಪ್ಪ

    ಸತ್ಯ, ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ: ಶ್ರೀದೇವಿ ಭೈರಪ್ಪ

    ಬೆಂಗಳೂರು: ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ಶ್ರೀದೇವಿ ಭೈರಪ್ಪ (Sridevi Byrappa) ಹೇಳಿದ್ದಾರೆ.

    ಡಿವೋರ್ಸ್‌ಗಾಗಿ ಯುವರಾಜ್‌ಕುಮಾರ್ (Yuva Rajkumar) ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ. ಇದನ್ನೂ ಓದಿ: Modi 3.0 Cabinet: 72 ಸಚಿವರಲ್ಲಿ 61 ಮಂದಿ ಬಿಜೆಪಿಗರು – ಮಿತ್ರಪಕ್ಷಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

    ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದರೆ ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ, ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ ಎಂದು ಬರೆದಿದ್ದಾರೆ.