Tag: ಶ್ರೀದೇವಿ ಕಪೂರ್‌

  • ‌’ಮೈ ಜಾನ್’ ಎಂದು ಪತ್ನಿ ಶ್ರೀದೇವಿ ಹುಟ್ಟುಹಬ್ಬಕ್ಕೆ ಬೋನಿ ಕಪೂರ್ ವಿಶ್

    ‌’ಮೈ ಜಾನ್’ ಎಂದು ಪತ್ನಿ ಶ್ರೀದೇವಿ ಹುಟ್ಟುಹಬ್ಬಕ್ಕೆ ಬೋನಿ ಕಪೂರ್ ವಿಶ್

    ಬಾಲಿವುಡ್‌ನ ಲೆಜೆಂಡರಿ ನಟಿ ಶ್ರೀದೇವಿಗೆ (Actress Sridevi) ಇಂದು (ಆ.13) 61ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಅಗಲಿದ ಪತ್ನಿಗೆ ವಿಶೇಷವಾಗಿ ಬೋನಿ ಕಪೂರ್ (Boney Kapoor) ಶುಭಕೋರಿದ್ದಾರೆ. ಇದನ್ನೂ ಓದಿ:100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ: ಯಶ್ ಕುರಿತು ರಾಧಿಕಾ ಲವ್ಲಿ ಪೋಸ್ಟ್

    ಶ್ರೀದೇವಿ ನಿಧನರಾಗಿ 6 ವರ್ಷಗಳು ಕಳೆದಿವೆ. ಇಂದಿಗೂ ಶ್ರೀದೇವಿಯನ್ನು ಅವರ ಕುಟುಂಬ ಸ್ಮರಿಸುತ್ತಿದೆ. ಇದೀಗ ಪತ್ನಿ ಶ್ರೀದೇವಿಗೆ ‘ಹುಟ್ಟುಹಬ್ಬದ ಶುಭಾಶಯಗಳು ಮೈ ಜಾನ್’ ಎಂದು ಭಾವುಕವಾಗಿ ಬೋನಿ ಕಪೂರ್ ಪೋಸ್ಟ್‌ ಮಾಡಿದ್ದಾರೆ. ನೆಚ್ಚಿನ ನಟಿಯನ್ನು ಅಭಿಮಾನಿಗಳು ಕೂಡ ಸ್ಮರಿಸಿದ್ದಾರೆ.ಇದನ್ನೂ ಓದಿ:ಆಲಿಯಾ ಭಟ್ ನಟನೆಯ ‘ಹೈವೇ’ ಚಿತ್ರಕ್ಕೆ ಹಾಡಿದ್ದ ಪಾಕಿಸ್ತಾನಿ ಗಾಯಕಿ ನಿಧನ

     

    View this post on Instagram

     

    A post shared by Boney.kapoor (@boney.kapoor)

    ಅಂದಹಾಗೆ, ಬಹುಭಾಷಾ ನಟಿಯಾಗಿ ಮಿಂಚಿ ಮರೆಯಾದ ಶ್ರೀದೇವಿ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ 11ನೇ ವಯಸ್ಸಿಗೆ ‘ಭಕ್ತ ಕುಂಬಾರ’ ಸಿನಿಮಾದಲ್ಲಿ ನಟಿಸಿದರು. ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ  ಗುರುತಿಸಿಕೊಂಡರು.

    ಬಳಿಕ 1975ರಲ್ಲಿ ‘ಹೆಣ್ಣು ಸಂಸಾರದ ಕಣ್ಣು’ ಸಿನಿಮಾದಲ್ಲಿ ಶ್ರೀದೇವಿ ನಟಿಸಿದರು. ‘ಪ್ರಿಯಾ’ ಎಂಬ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಂಬರೀಶ್ ಜೊತೆ ಶ್ರೀದೇವಿ ತೆರೆಹಂಚಿಕೊಂಡಿದ್ದರು. ಇಂದಿಗೂ ಅವರು ಮಾಡಿದ ಪ್ರತಿಯೊಂದು ಪಾತ್ರವನ್ನು ಅಭಿಮಾನಿಗಳು ಸ್ಮರಿಸುತ್ತಾರೆ.

  • ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

    ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

    ಹುಭಾಷಾ ನಟಿಯಾಗಿ ಶ್ರೀದೇವಿ ಕಪೂರ್ (Sridevi Kapoor)  ಜನಪ್ರಿಯತೆ ಗಳಿಸಿದ್ದರು. ಅಮ್ಮನ ಹಾದಿಯಲ್ಲೇ ಪುತ್ರಿ ಜಾನ್ವಿ ಕಪೂರ್ (Janhavi Kapoor) ಕೂಡ ಹೆಜ್ಜೆ ಇಡ್ತಿದ್ದಾರೆ. ದಕ್ಷಿಣದ ಸಿನಿಮಾಗಳತ್ತ ಜಾನ್ವಿ ಕಪೂರ್ ಹೆಚ್ಚು ಗಮನ ನೀಡ್ತಿದ್ದಾರೆ.

    ಮಿಲಿ, ಗುಡ್ ಲಕ್ ಜರ‍್ರಿ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ (Bollywood) ಮೋಡಿ ಮಾಡಿರುವ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇದೀಗ ತೆಲುಗಿನತ್ತ ಮುಖ ಮಾಡಿದ್ದಾರೆ. ಶ್ರೀದೇವಿ ಅವರು ಹೇಗೆ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನ ಏರಿದ್ರೋ ಅದೇ ರೀತಿ ಸೌತ್ ಸಿನಿಮಾ ಸ್ಕ್ರಿಪ್ಟ್‌ಗಳಿಗೆ ಜಾನ್ವಿ ಹೆಚ್ಚಿನ ಪ್ರಾಮುಖ್ಯತೆ ನೀಡ್ತಿದ್ದಾರೆ. ಇದನ್ನೂ ಓದಿ:ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವಣ್ಣನ ಪುತ್ರಿ ನಿವೇದಿತಾ

    ಇದೀಗ ಜ್ಯೂನಿಯರ್ ಎನ್‌ಟಿಆರ್ (Jr.ntr) ಜೊತೆಗಿನ ಸಿನಿಮಾ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಂಪರ್ ಆಫರ್‌ನ್ನ ನಟಿ ತಮ್ಮದಾಗಿಸಿಕೊಂಡಿದ್ದಾರೆ. ಜಾನ್ವಿ ಇದೀಗ ಮತ್ತೊಬ್ಬ ತೆಲುಗಿನ ನಟನ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಜಾನ್ವಿ ಕಮಾಲ್‌ ಮಾಡಲಿದ್ದಾರೆ.

    ಹೊಸ ಸಿನಿಮಾಗೆ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಗೆ (Akhil Akkineni)  ನಾಯಕಿಯಾಗಿ ಜಾನ್ವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಯುವ ನಿರ್ದೇಶಕ ಅನಿಲ್ ಕುಮಾರ್ (Anil Kumar) ನಿರ್ದೇಶನದಲ್ಲಿ ಅಖಿಲ್- ಜಾನ್ವಿ ಆಕ್ಟ್ ಮಾಡಲಿದ್ದಾರೆ. ಅನಿಲ್ ಈ ಹಿಂದೆ ಪ್ರಭಾಸ್ ನಟನೆಯ ‘ಸಾಹೋ’ (Saho) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

    ಮೊದಲ ಬಾರಿಗೆ ಜಾನ್ವಿ- ಅಖಿಲ್‌ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಫ್ರೆಶ್‌ ಫೇರ್‌ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  • ಬಾಲಿವುಡ್‌ನಲ್ಲಿ ಫ್ಲಾಪ್: ಸೌತ್‌ನತ್ತ ಮುಖ ಮಾಡಿದ ಜಾನ್ವಿ ಕಪೂರ್

    ಬಾಲಿವುಡ್‌ನಲ್ಲಿ ಫ್ಲಾಪ್: ಸೌತ್‌ನತ್ತ ಮುಖ ಮಾಡಿದ ಜಾನ್ವಿ ಕಪೂರ್

    ಬಾಲಿವುಡ್‌ನ (Bollywood)  ಸ್ಟಾರ್ ನಟಿ ಶ್ರೀದೇವಿ (Sridevi kpoor) ಅವರ ಪುತ್ರಿ ಜಾನ್ವಿ ಕಪೂರ್ ಸೌತ್ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗಿ ನಟಿಸಲು ಜಾನ್ವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

    `ದಢಕ್’ (Dhadak) ಸಿನಿಮಾದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಜಾನ್ವಿ ಕಪೂರ್ (Janhavi Kapoor) ಹಲವು ಬಗೆಯ ಪಾತ್ರಗಳ ಮೂಲಕ ಕಾಣಿಸಿಕೊಂಡರು. ನಟಿ ಶ್ರೀದೇವಿ ಕೂಡ ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿದ್ದರು. ಈಗ ಅಮ್ಮನ ಹಾದಿಯನ್ನೇ ಜಾನ್ವಿ ಕೂಡ ಫಾಲೋವ್ ಮಾಡ್ತಿದ್ದಾರೆ. ಸೌತ್ ರಂಗದತ್ತ ನಟಿ ಮುಖ ಮಾಡ್ತಿದ್ದಾರೆ. ಇದನ್ನೂ ಓದಿ: ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    `ಎನ್‌ಟಿಆರ್ 30′ (Ntr 30) ಚಿತ್ರಕ್ಕೆ ಜಾನ್ವಿ ಕಪೂರ್ (Janhavi Kapoor) ನಾಯಕಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಾಕಷ್ಟು ಸಂದರ್ಶನಗಳಲ್ಲಿ ಜಾನ್ವಿ ತೆಲುಗಿನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ಜ್ಯೂನಿಯರ್ ಎನ್‌ಟಿಆರ್ ನಟನೆ ಅಂದ್ರೆ ಇಷ್ಟ ಎಂದು ಕೂಡ ಹೇಳಿದ್ದರು. ಈ ಎಲ್ಲಾ ವಿಚಾರಗಳು ಇದೀಗ ಸದ್ದು ಮಾಡುತ್ತಿದೆ. ಕೊರಟಾಲ ಶಿವ (Kortala Shiva)  ನಿರ್ದೇಶನದ ಸಿನಿಮಾದಲ್ಲಿ ತಾರಕ್‌ಗೆ ಜಾನ್ವಿ ನಾಯಕಿ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದೆ.

    ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಕೂಡ ಸೌತ್ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಾಲಿವುಡ್‌ನಲ್ಲಿ ಅಷ್ಟೇನು ಸಕ್ಸಸ್ ಕಾಣದ ನಟಿ ತೆಲುಗು ರಂಗದಲ್ಲಿ ನಾಯಕಿಯಾಗಿ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜಾಹ್ನವಿ ಕಪೂರ್‌

    ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜಾಹ್ನವಿ ಕಪೂರ್‌

    ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್‌ಗೆ ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಿರುವಾಗ ಶ್ರೀದೇವಿ ಪುತ್ರಿ ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಭಿನ್ನ ಅವತಾರದ ಮೂಲಕ ಗಮನ ಸೆಳೆಯಲು ರೆಡಿಯಾಗಿದ್ದಾರೆ.

    ನಟಿ ಜಾಹ್ನವಿ 2018ರಲ್ಲಿ `ಧಡಕ್’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ರು. ಚಿತ್ರರಂಗದಲ್ಲಿ ಬಿಗ್ ಬ್ರೇಕ್ ಕೊಡದೇ ಇದ್ರೂ ಅವಕಾಶಗಳಿಗೇನು ಕಮ್ಮಿಯಾಗಿಲ್ಲ. ಶ್ರೀದೇವಿ ಕಪೂರ್ ಅವರ ಪುತ್ರಿ ಎಂಬ ಕಾರಣಕ್ಕೆ ಈ ನಟಿಯ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಕೊಂಡಿದ್ದರು. ಸದ್ಯ ಜಾಹ್ನವಿ ಕಪೂರ್ ತೆಲುಗು ಚಿತ್ರರಂಗದತ್ತ ಬರಲು ಮನಸ್ಸು ಮಾಡಿದ್ದಾರಂತೆ.

    ಈ ಹಿಂದೆ `ಆರ್‌ಆರ್‌ಆರ್’ ಚಿತ್ರದಲ್ಲಿ ಆಲಿಯಾ ಭಟ್ ಮಾಡಿದ್ದ ಪಾತ್ರಕ್ಕೆ ಜಾಹ್ನವಿಯನ್ನು ಮೊದಲು ಕೇಳಲಾಗಿತ್ತಂತೆ, ಶ್ರೀದೇವಿ ಪುತ್ರಿ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು. ಆ ನಂತರ `ಆರ್‌ಆರ್‌ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಹಿಸ್ಟರಿ ಕ್ರಿಯೇಟ್ ಮಾಡತ್ತು. ಹಾಗಾಗಿ ಟಾಲಿವುಡ್‌ನತ್ತ ಬರಲು ಜಾಹ್ನವಿ ಕಪೂರ್ ನಿರ್ಧರಿಸಿದ್ದಾರೆ. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ

    ಇತ್ತೀಚೆಗೆ ಜಾಹ್ನವಿ ನಟನೆಯ ಸಿನಿಮಾ ಪ್ರಚಾರದಲ್ಲಿ ತಂದೆ ಬೋನಿ ಕಪೂರ್ ಕೂಡ ಒಳ್ಳೆಯ ಕಥೆ, ಪಾತ್ರ ಬಂದರೆ ಜಾಹ್ನವಿ ಸೌತ್ ಸಿನಿಮಾಗಳಲ್ಲಿ ನಟಿಸಲು ಸಿದ್ಧ ಅಂದಿದ್ದಾರೆ. ಒಟ್ನಲ್ಲಿ ಸಿನಿರಂಗದಲ್ಲಿ ಯಶಸ್ಸಿಗಾಗಿ ಕಾಯ್ತಿರೋ ಶ್ರೀದೇವಿ ಪುತ್ರಿಗೆ ಟಾಲಿವುಡ್‌ನಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

    Live Tv