ಬೆಂಗಳೂರು: ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಹೇಗೆಲ್ಲಾ ಮಾಡ್ತಾರೆ ಅಂತಾ ನೋಡಿರುತ್ತೀರಿ. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಖತರ್ನಾಕ್ ಶ್ರೀಗಂಧ (Sandalwood) ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸಿ ಲಾಕ್ ಆಗಿದ್ದಾರೆ.
ಈರುಳ್ಳಿ ಮೂಟೆಗಳನ್ನ ಸಾಗಿಸುತ್ತಿದ್ದ ವ್ಯಾನ್ ಪರಿಶೀಲನೆ ನಡೆಸಿದ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೆ ಖತರ್ನಾಕ್ ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದರು. ಪುಷ್ಪಾ ಸಿನಿಮಾ ಸ್ಟೈಲ್ ರೀತಿಯಲ್ಲೇ ಶ್ರೀಗಂಧದ ಮರದ ತುಂಡುಗಳನ್ನ ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ ತುಂಬಿ ಸಾಗಿಸಲಾಗುತ್ತಿತ್ತು. ಆಂಧ್ರಪ್ರದೇಶದ (Andhra Pradesh) ಕರ್ನೂಲ್‌ನಿಂದ (Kurnool) ಬೆಂಗಳೂರಿಗೆ ಶ್ರೀಗಂಧವನ್ನ ತಂದು ಇನ್ನೇನು ಡೆಸ್ಟಿನೇಷನ್‌ಗೆ ರೀಚ್ ಆಗಬೇಕು ಅನ್ನುವಷ್ಟರಲ್ಲಿ ನಾಕಾಬಂದಿ ಹಾಕಿ ತಪಾಸಣೆ ಮಾಡುತ್ತಿದ್ದ ಸಿದ್ದಾಪುರ ಪೊಲೀಸರಿಗೆ ಶ್ರೀಗಂಧದ ಮರಗಳ ಸಮೇತ ನಾಲ್ವರು ಲಾಕ್ ಆಗಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್
ಸಿರಾಜ್ ಎಂಬಾತ ತನ್ನ ಗ್ಯಾಂಗ್‌ನೊಂದಿಗೆ ಆಂಧ್ರದ ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಕಡಿದು ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿಂದ ಚೀನಾಗೆ ಸಪ್ಲೈ ಮಾಡುತ್ತಿದ್ದ. ಸಿದ್ಧಾಪುರ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ ಈರುಳ್ಳಿ ಮೂಟೆಗಳಲ್ಲಿ 18 ಶ್ರೀಗಂಧದ ಮರದ ತುಂಡುಗಳ ಬ್ಯಾಗ್ ಜಪ್ತಿಯಾಗಿದೆ. ಆಂಧ್ರದ ಸಿರಾಜ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಶ್ರೀಗಂಧ ಕಡಿದು, ಅಕ್ರಮವಾಗಿ ಖರಿದಿ ಮಾಡಿ ಬೆಂಗಳೂರಿನ ಡೀಲರ್‌ಗೆ ತಲುಪಿಸಿ ಬಳಿಕ ಚೀನಾಗೆ ತಲುಪಿಸುತ್ತಿದ್ದರು. ಈ ಸಂಬಂಧ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಸ್ಮಗ್ಲರ್ಸ್ಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI
ಕಾರವಾರ: ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ಶಿಂಗನಳ್ಳಿ ಗ್ರಾಮದಲ್ಲಿನ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡುತ್ತಿದ್ದ ಮೂವರು ಮರಗಳ್ಳರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ.ಜಿ.ಆರ್.ಜಾನ್ಮನೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್.ಸಿ.ಎನ್. ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಜೂಜಾಟ ಪ್ರಕರಣ – ಐವರು ಪೊಲೀಸರು ಅಮಾನತು
ಕರ್ನಾಟಕ ಅರಣ್ಯ ಕಾಯ್ದೆ 1963ರ 00 24(3), 84, 85, 87 ಆರ್/ಡಬ್ಲ್ಯೂ 86 ಮತ್ತು 1969 ಡಿ ನಿಯಮ 144, 145ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಳ್ಳಾರಿ: ಆಕಸ್ಮಿಕ ಬೆಂಕಿ (Fire) ತಗುಲಿ 200ಕ್ಕೂ ಹೆಚ್ಚು ಶ್ರೀಗಂಧದ ಮರಗಳು (Sandalwood Trees) ಸುಟ್ಟು ಕರಕಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲಿ ನಡೆದಿದೆ.
ಚನ್ನಬಸಪ್ಪ ಅವರು 2018 ರಿಂದಲೇ ಸಸಿಗಳನ್ನ ಹಾಕಿ ಪೋಷಣೆ ಮಾಡುತ್ತಿದ್ದರು. ಇದೀಗ ಬೆಂಕಿ ತಗುಲಿ 200ಕ್ಕೂ ಅಧಿಕ ಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಾಹಿತಿ ತಿಳಿದ ಕೂಡಲೇ ಚನ್ನಬಸಪ್ಪ ಕುಟುಂಬದೊಂದಿಗೆ ಜಮೀನಿಗೆ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಇನ್ನಷ್ಟು ಪ್ರಮಾಣದ ಹಾನಿ ತಪ್ಪಿದೆ. ಸದ್ಯ 200ಕ್ಕೂ ಹೆಚ್ಚು ಮರಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಆಗಿದೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀದರ್: ಜಿಲ್ಲೆಯ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.
ಗೂಡ್ಸ್ ವಾಹನದಲ್ಲಿ ಶ್ರೀಗಂಧವನ್ನು ಅಕ್ರಮವಾಗಿ ನೆರೆಯ ತೆಲಂಗಾಣದಿಂದ ಮಹಾರಾಷ್ಟ್ರದ ಮುಂಬೈ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದು, ಬರೋಬ್ಬರಿ 16 ಲಕ್ಷ ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಯಾದಗಿರಿ: ಅರಣ್ಯ ಇಲಾಖೆ ಅಧಿಕಾರಿಗಳು (Forest Department) ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕಾಡನ್ನು ಕಾಯೋದು ಬಿಡಿ, ತಮ್ಮ ಕಚೇರಿಯನ್ನೇ ಕಾಯದ ಪರಿಸ್ಥಿತಿ ಯಾದಗಿರಿಯಲ್ಲಿ ಕಂಡುಬಂದಿದೆ.
ಹೌದು. ಯಾದಗಿರಿಯ (Yadagiri) ಅರಣ್ಯ ಇಲಾಖೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಅರಣ್ಯ ಪ್ರದೇಶದಲ್ಲಿ ಖದೀಮರು ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಜಪ್ತಿ ಮಾಡಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಅದೇ ಕಚೇರಿಯಿಂದಲೇ ಶ್ರೀಗಂಧ ಕಟ್ಟಿಗೆ ಕಳ್ಳತನವಾಗಿರೋದು ಇದೀಗ ಭಾರೀ ಅನುಮಾನ ಉಂಟು ಮಾಡಿದೆ.
ಕಳೆದ ನಾಲ್ಕು ದಿನದ ಹಿಂದೆ ಯಾದಗಿರಿ ಜಿಲ್ಲಾ ಕೆಂದ್ರದ ಅರಣ್ಯ ಇಲಾಖೆಯ ಕಚೇರಿಯಲ್ಲಿ 8 ಲಕ್ಷದ 58 ಸಾವಿರ ರೂ. ಮೌಲ್ಯದ 85 ಕೆ.ಜಿ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಉಪ ವಲಯ ಅರಣ್ಯಾಧಿಕಾರಿ ಕಾಜೋಲ್ ಪಾಟೀಲ್ ಅವರ ಕಚೇರಿ ಪಕ್ಕದಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿರುವ ಶೌಚಾಲಯದಲ್ಲಿ ಈ ಶ್ರೀಗಂಧ ಕಟ್ಟಿಗೆಗಳನ್ನು ಭದ್ರವಾಗಿ ಶೇಖರಿಸಿದ್ದನ್ನು ಕಳ್ಳರು ಯಾರಿಗೆ ಗೊತ್ತಾಗದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಒಂದು ಸರ್ಕಾರಿ ಕಚೇರಿಯಲ್ಲಿ ಇಟ್ಟ ಶ್ರೀಗಂಧದ ಕಟ್ಟಿಗೆಗಳನ್ನು ಕದಿಯುವುದು ಅಷ್ಟು ಸುಲಭದ ಮಾತಲ್ಲ. ಇದರ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲು ಆಗಿರುವ ಶಂಕೆಯೂ ಸಹ ವ್ಯಕ್ತಪಡಿಸಲಾಗಿದೆ. ಜೊತೆಗೆ ಜಿಲ್ಲಾ ಕೆಂದ್ರದಲ್ಲಿರುವ ಈ ಅರಣ್ಯ ಕಚೇರಿಗೆ ಯಾವುದೇ ಸಿಸಿಟಿವಿ ಕ್ಯಾಮರಾ ಇಲ್ಲ. ರಾತ್ರಿ ಹೊತ್ತು ಕಚೇರಿ ಕಾಯಲು ಯಾವುದೇ ವಾಚ್ ಮನ್ ನೇಮಿಸಿಲ್ಲ. ಇದರಿಂದ ಕಳ್ಳರು ಬಹಳ ಸಲೀಸಾಗಿ, ಯಾವುದೇ ಭಯ-ಭೀತಿಯಿಲ್ಲದೇ ಯಾವುದೋ ವಾಹನದಲ್ಲಿ ಕಚೇರಿಯೊಳಗೆ ಬಂದು ಕಳ್ಳತನ ಮಾಡಿದ್ದಾರೆ ಎಂಬ ಸಂಶಯವಾಗ್ತಿದೆ.
ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಕಳ್ಳತನ ಆಗಿಯೇ ಇಲ್ಲ ಎಂದು ಅರಣ್ಯ ಅಧಿಕಾರಿಗಳು ಮುಚ್ವಿ ಹಾಕಲು ಪ್ಲಾನ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಯಬಾರದು, ಹೇಗಾದ್ರು ಮಾಡಿ ಇದರಿಂದ ಪಾರಾಗಲು ಗುರಮಠಕಲ್ ಕಡೆಯ ಅರಣ್ಯ ಪ್ರದೇಶದಲ್ಲಿ ಎರಡು ಶ್ರೀಗಂಧ ಗೀಡಗಳನ್ನು ಕಡಿದು ಅದರ ಕಟ್ಟಿಗೆಗಳನ್ನು ತಂದು ಕಳ್ಳತನವಾಗಿರುವ ಜಾಗದಲ್ಲಿ ಸೇಫ್ ಆಗಿ ಇಟ್ಟಿದ್ದಾರೆ. ಇನ್ನು ಈ ಶ್ರೀಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿರುವುದು 2-3 ದಿನಗಳ ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಫನ್ವಾರ್ ಇಂದು ಯಾದಗಿರಿ ಅರಣ್ಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಈ ವೇಳೆ ಮೆಲ್ನೊಟಕ್ಕೆ ಉಪ ವಲಯ ಅರಣ್ಯಾಧಿಕಾರಿ ಚಂದ್ರ ಶಾ ನೀರಕಟ್ಟಿ ಹಾಗೂ ಗಸ್ತು ವನಪಾಲಕ ರಿಜ್ವಾನ್ ಇಬ್ಬರನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು. ಜೊತೆಗೆ ಇದರ ಬಗ್ಗೆ ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಹತ್ತಿಕುಣಿ ಅರಣ್ಯ ಪ್ರದೇಶವೂ ಅತೀ ಹೆಚ್ಚು ಅರಣ್ಯವನ್ನು ಹೊಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಇದೇ ಸೆ. 13 ರಂದು ಹತ್ತಿಕುಣಿ ಬಳಿಯ ಬಗ್ಗಲಮಡು-ಹಂದರಕಿ ಅರಣ್ಯ ಪ್ರದೇಶದಲ್ಲಿ ಹಲವು ವರ್ಷಗಳಿಂದ ಶ್ರೀಗಂಧ ಮರಗಳನದ್ನು ಕಡಿದು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಸಚಿನ್ ಎಂಬಾತ ಶ್ರೀಗಂಧದ ಗೀಡಗಳನ್ನು ಕಟ್ ಮಾಡಿ ಅದರ ಕಟ್ಟಿಗೆಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದನು. ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿ 8.5. ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆಗಳನ್ನು ಜಪ್ತಿ ಹಾಗೂ ಆರೋಪಿ ಸಚಿನ್ ನನ್ನು ವಶಕ್ಕೆ ಪಡೆದು, ಜೈಲಿಗಟ್ಟಿದ್ದರು. ಆಗ ಸಚಿನ್ ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಹಿರಿಯ ಅಧಿಕಾರಿಗಳ ಸಮ್ಮಖದಲ್ಲಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಇನ್ನೊಂದು ಇದೇ ರೀತಿಯ ಶ್ರೀಗಂಧ ಕಟ್ಟಿಗೆ ಕಳ್ಳತನ ಪ್ರಕರಣವೂ ಇದಾದ 15 ದಿನದ ಬಳಿಕ ಯಾದಗಿರಿ ತಾಲೂಕಿನ ಬಾಚವಾರ ಬಳಿ ದಾಳಿ ಮಾಡಿದರು. ಆಗ ಕಲಬುರಗಿ ಮೂಲದ ದೇವಪ್ಪ ಕದಿದ್ದ ಶ್ರೀಗಂಧ ಕಟ್ಟಿಗೆ ವಶಕ್ಕೆ ಪಡೆದುಕೊಂಡು ಜೈಲಿಗಟ್ಟಿದ್ರು. ನಂತರ ಶ್ರೀಗಂಧ ಕಟ್ಟಿಗೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಚೇರಿಯಲ್ಲಿ ಶೇಖರಿಸಲಾಗಿತ್ತು.
ಇವೆರಡೂ ಪ್ರಕರಣ ಸೇರಿದಂತೆ ಹಲವು ವೇಳೆ ದಾಳಿ ಮಾಡಿ ಕಚೇರಿಯಲ್ಲಿ ಇಟ್ಟಿದ್ದ ಅರಣ್ಯ ಇಲಾಖೆಯ ಆಸ್ತಿಯನ್ನು ಕಳ್ಳತನ ಆಗಿರುವುದು ದೊಡ್ಡ ವಿಫಲ. ಇದೆಲ್ಲವೂ ಹಿರಿಯ ಅಧಿಕಾರಿಗಳಿಂದ ಹಿಡಿದು ಸಣ್ಣ ಅಧಿಕಾರಿಗಳಿಗೂ ತಮ್ಮ ಇಲಾಖೆಯ ಶ್ರಿಗಂಧ ಸೇರಿದಂತೆ ಹಲವು ವಸ್ತುಗಳು ಜಪ್ತಿಯ ಇಂಚಿಂಚೂ ಮಾಹಿತಿ ಗೊತ್ತಿರುತ್ತದೆ. ಆದ್ರೆ ಇವರೆಲ್ಲರ ಕಣ್ತಪ್ಪಿಸಿ ಈ ಕಳ್ಳತನ ನಡೆದಿರುವುದು ನಂಬಲು ಅಸಾಧ್ಯದ ಮಾತು. ಕೇವಲ ಇಬ್ಬರನ್ನು ಅಮಾನತು ಮಾಡಿ ಕೈ ತೊಳೆದುಕೊಳ್ಳುವ ಬದಲು ಸೂಕ್ತ ತನಿಖೆ ಮಾಡಿ ಸಾರ್ವಜನಿಕರ ಆಸ್ತಿ ಪತ್ತೆ ಹಚ್ಚಿ ಖದೀಮರ ಎಡೆಮುರಿ ಕಟ್ಟಬೇಕಾಗಿದೆ.
ತಮ್ಮ ಮನೆಯನ್ನು ಕಾಯಲಾಗದೇ ಇರುವವರು. ನಾಡಿನ ಅರಣ್ಯವನ್ನು ಕಾಯಲು ಹೇಗೆ ಸಾಧ್ಯ. ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ ಪ್ರಕರಣ ಅರಣ್ಯ ಇಲಾಖೆಯ ಮೇಲೆ ಸಾಕಷ್ಟು ಸಂಶಯ ಮೂಡಿಸಿದೆ. ಇಂತಹ ದುಷ್ಕೃತ್ಯದಲ್ಲಿ ಯಾವುದೇ ಅಧಿಕಾರಿಗಳು ಹಾಗೂ ಬೇರೆಯವರಿದ್ರು ಅವ್ರನ್ನು ಪತ್ತೆ ಹಚ್ಚಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಾಗಿದೆ.
ಯಾದಗಿರಿ: ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ 150 ಕೆ.ಜಿ ಶ್ರೀಗಂಧದ (Sandalwood) ತುಂಡುಗಳನ್ನು ಅರಣ್ಯಾಧಿಕಾರಿಗಳು (Forest Department) ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಬಗ್ಗಲಮಡು-ಹಂದಿರಕಿ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಶ್ರೀಗಂಧ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮಹಾರಾಷ್ಟ್ರದ ಸತಾರ ಜಿಲ್ಲೆಯ ಆರೋಪಿ ಸಚಿನ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಮತ್ತೋರ್ವ ಆರೋಪಿ ಪಾಂಡುರಂಗ ಎಂಬಾತ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?
ಈ ಬಗ್ಗೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಪ್ರತಿಕ್ರಿಯಿಸಿ, ಬಂಧಿತನಿಂದ 1.5 ಕ್ವಿಂಟಾಲ್ ಶ್ರೀಗಂಧ, ಒಂದು ಕಾರು, ಒಂದು ಬೈಕ್ ಹಾಗೂ ಎರಡು ಕೊಡಲಿ ಜಪ್ತಿ ಮಾಡಲಾಗಿದೆ ಎಂದಿದ್ದಾರೆ. ಈ ಸಂಬಂಧ ಅರಣ್ಯ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಣಕ್ಕಾಗಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‍ನಿಂದ ಕೂಯ್ದು ಕೊಲೆಗೈದ ಪತಿ
ಬಂಧಿತ ಆರೋಪಿಯನ್ನು ಬಾಬುಜಾನ್ (58) ಎಂದು ಗುರುತಿಸಲಾಗಿದೆ. ಆರೋಪಿಯಿಂದ 15 ಕೆಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶ್ರೀಗಂಧದ ಸಂಬಂಧಿ ಪ್ರಕರಣಗಳಿವೆ. ಆದರೂ ಆರೋಪಿ ತನ್ನ ಕಸುಬನ್ನು ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್ ಚಾಲನೆ ವೇಳೆ ಕಾಡಾನೆ ಹಠಾತ್ ದಾಳಿ – ಚಾಲಕ ಸಾವು
ಆರೋಪಿ ಶ್ರೀಗಂಧದ ಮರದ ತುಂಡುಗಳನ್ನು ಸಂಗ್ರಹಿಸಿ ಬೇರೆ ಬೇರೆ ವಸ್ತುಗಳ ರೂಪದಲ್ಲಿ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ
ಬೆಂಗಳೂರು: ಇನ್ನು ಮುಂದೆ ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ(Sandalwood) ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ(Open Market) ಮಾರಾಟ ಮಾಡಬಹುದು.
ರೈತರು(Farmers) ತಮ್ಮ ಹೊಲ ಗದ್ದೆಗಳಲ್ಲಿ ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ಜೊತೆಗೆ ಮಾರಾಟಕ್ಕೆ ಸರಳ ವ್ಯವಸ್ಥೆ ಕಲ್ಪಿಸಲು ಈ ಹಿಂದೆ ರಾಜ್ಯ ಅರಣ್ಯ ಇಲಾಖೆ ಪ್ರಸ್ತಾಪಿಸಿದ ‘ಶ್ರೀಗಂಧ ನೀತಿ’ಯನ್ನು ಜಾರಿಮಾಡಲು ಕ್ಯಾಬಿನೆಟ್(Cabinet) ಅನುಮೋದನೆ ನೀಡಿದೆ. ಇದನ್ನೂ ಓದಿ: BMTC ಬಸ್ ಗುದ್ದಿ ಗಾಯಗೊಂಡಿದ್ದ ಯೋಧ ಸಾವು
2001ರಿಂದ ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಅನುಮತಿ ನೀಡಲಾಗಿದ್ದರೂ ಅವುಗಳ ಪೋಷಣೆ, ಸಂರಕ್ಷಣೆ, ಕಟಾವು ಮಾಡುವುದು ಮತ್ತು ಸೂಕ್ತ ಮಾರುಕಟ್ಟೆ ಸೌಲಭ್ಯಗಳನ್ನು ಅರಣ್ಯ ಇಲಾಖೆ ಕಲ್ಪಿಸಿರಲಿಲ್ಲ. ಸರ್ಕಾರದ ಈ ನಿರ್ಧಾರ ಶ್ರೀಗಂಧ ಬೆಳೆಯುವ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಮಸ್ಯೆ ಅರಿತ ಸರ್ಕಾರ ಮಾರಾಟಕ್ಕೂ ಅವಕಾಶ ನೀಡಿದೆ.
ಕ್ಯಾಬಿನೆಟ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಧಾಕರ್, ನಮಗೆ ಶ್ರೀಗಂಧದ ಕೊರತೆಯಿದೆ. ನಮ್ಮ ಸರ್ಕಾರಿ ಸಂಸ್ಥೆಗೂ ಮತ್ತು ಖಾಸಗಿ ಸಂಸ್ಥೆಗೂ ಶ್ರೀಗಂಧ ಅಗತ್ಯವಿದೆ. ಈ ಹಿಂದೆ ಮಾರಾಟಕ್ಕೆ ಕೆಲವು ನಿರ್ಬಂಧವಿತ್ತು. ಈಗ ಆ ನಿರ್ಬಂಧಗಳನ್ನು ತೆಗೆದು ಹೊಸ ಶ್ರೀಗಂಧ ನೀತಿ 2022 ಜಾರಿ ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
10 ವರ್ಷ ಬೆಳೆದ ಶ್ರೀಗಂಧಕ್ಕೆ ಸೂಕ್ತ ಬೆಲೆ ಲಭ್ಯವಾಗದೇ ರೈತರಿಗೆ ಸಮಸ್ಯೆಯಾಗಿತ್ತು. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಶ್ರೀಗಂಧ ನೀತಿ ಜಾರಿ ತರಲು ಅರಣ್ಯ ಇಲಾಖೆ ಕರಡು ನೀತಿ ಸಿದ್ಧಪಡಿಸಿ ಅನುಮತಿ ಪಡೆಯಲು ಸರ್ಕಾರಕ್ಕೆ ಸಲ್ಲಿಸಿತ್ತು.
Live Tv
[brid partner=56869869 player=32851 video=960834 autoplay=true]
ಚಿನ್ನದಗಣಿ ಆವರಣದಲ್ಲಿ ಪದೇ ಪದೇ ಗಂಧದ ಮರಗಳ ಕಳ್ಳತನ ನಡೆಯುತ್ತಲೇ ಇದೆ. ಇಲ್ಲಿನ ಸಿಬ್ಬಂದಿ ಕ್ವಾಟ್ರಸ್‍ಗಳಲ್ಲಿ ಈಗಾಗಲೇ ನೂರಾರು ಮರಗಳು ಮಾಯವಾಗಿವೆ. ಅರಣ್ಯ ಇಲಾಖೆ ಹಾಗೂ ಕಂಪನಿ ಭದ್ರತಾ ಸಿಬ್ಬಂದಿ ವೈಫಲ್ಯವೇ ಮರಗಳ ಕಳ್ಳತನಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಹೊರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಅಭಿಮಾನಿಯೊಬ್ಬರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶ್ರೀಗಂಧದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಮೆ ಮಾಡಿಸಿ, ಅಪ್ಪು ಅವರ ಪತ್ನಿಗೆ ನೆನಪಿನ ಕಾಣಿಕೆಯಾಗಿ ನೀಡಲು ಮುಂದಾಗಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸ್ವರೂಪ್, ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಈ ಹಿನ್ನೆಲೆ ಶ್ರೀಗಂಧದಿಂದ ಅಪ್ಪುವಿನ ಪ್ರತಿಮೆಯನ್ನು ಮಾಡಿಸಿ, ಜೂನ್ ತಿಂಗಳಿನಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಪ್ರತಿಮೆಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಾರೆ.
ಈ ಪ್ರತಿಮೆ ಸುಮಾರು ಒಂದುವರೆ ಲಕ್ಷ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. ಅಪ್ಪು ಪತ್ನಿ ಅಶ್ವಿನಿ ಅವರಿಗೆ ಈ ಪ್ರತಿಮೆ ನೀಡುವ ಮುನ್ನ ಇಂದು ತಾವು ನಂಬಿರುವ ಮಡಿಕೇರಿಯ ರಾಜರಾಜೇಶ್ವರಿ ದೇವಾಲಯದಲ್ಲಿ ಪ್ರತಿಮೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ.
ಪೂಜೆಗೆ ಸಂತೋಷ್ ಆರ್ಯ, ಪ್ರದೀಪ್, ಪುರುಷೋತ್ತಮ್ ಯೋಗೇಶ್ ಸಂಗಡಿಗರು ಸಾಥ್ ನೀಡಿದ್ದರು. ಅಲ್ಲದೇ ಮೂರು ತಿಂಗಳಿನಿಂದ ಪ್ರತಿಮೆ ಮಾಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಈ ಮೊದಲು ಎರಡು ಪ್ರತಿಮೆಗಳನ್ನು ಮಾಡಿಸಿ ಅವು ಅಪ್ಪು ಮುಖಭಾವ ಹೋಲಿಕೆಯಾಗದ ಕಾರಣ ಅವುಗಳನ್ನು ಕೈ ಬಿಟ್ಟು ನಾಲ್ಕನೇ ಬಾರಿಗೆ ಅಪ್ಪು ಪತ್ರಿಮೆ ಸಕ್ಸಸ್ ಆಗಿದೆ.