Tag: ಶ್ರೀಕ್ಷೇತ್ರ ಗೊರವನ ಹಳ್ಳಿ

  • ಶ್ರೀಕ್ಷೇತ್ರ ಗೊರವನಹಳ್ಳಿಯಲ್ಲಿ ಹಳಸಿದ ಅನ್ನ, ಸಾಂಬಾರ್ ಕಲಸಿ ಪ್ರಸಾದವೆಂದು ನೀಡಿದ್ರು- ಭಕ್ತರು ಕಿಡಿ

    ಶ್ರೀಕ್ಷೇತ್ರ ಗೊರವನಹಳ್ಳಿಯಲ್ಲಿ ಹಳಸಿದ ಅನ್ನ, ಸಾಂಬಾರ್ ಕಲಸಿ ಪ್ರಸಾದವೆಂದು ನೀಡಿದ್ರು- ಭಕ್ತರು ಕಿಡಿ

    ತುಮಕೂರು: ಜಿಲ್ಲೆಯ ಶ್ರೀಕ್ಷೇತ್ರ ಗೊರವನಹಳ್ಳಿ ದೇವಸ್ಥಾನದಲ್ಲಿ ಅಷ್ಟೊಂದು ಬಡತನ ಇದೆಯಾ. ಶ್ರೀ ಲಕ್ಷ್ಮೀ ಆಸ್ಥಾನದಲ್ಲಿ ಪ್ರಸಾದಕ್ಕೂ ಬರ ಉಂಟಗಿದ್ಯಾ ಅನ್ನೋ ಅನುಮಾನ ಇದೀಗ ಕಾಡುತ್ತಿದೆ.

    ಹೌದು, ಕಾರ್ತಿಕ ಮಾಸದ ದೀಪೋತ್ಸವಕ್ಕೆ ಬಂದ ಭಕ್ತಾಧಿಗಳಿಗೆ ಕೊಡಲು ದೇವಸ್ಥಾನದಲ್ಲಿ ಪ್ರಸಾದವೇ ಇರಲಿಲ್ಲ. ಹಳಸಿದ ಅನ್ನ- ಸಾಂಬಾರ್ ಕೈಯಿಂದ ಕಲಸಿ ಪ್ರಸಾದದ ರೂಪದಲ್ಲಿ ವಿತರಣೆ ಮಾಡಲಾಗಿದೆ. ಸಾವಿರಾರು ಜನ ಭಕ್ತರು ಹಳಸಿದ ಈ ಅನ್ನ ಸಾಂಬಾರ್ ನಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಹಿಡಿಶಾಪ ಹಾಕಿದ್ದಾರೆ.

    ಸಿಹಿ ಪದಾರ್ಥ ಪ್ರಸಾದದ ರೂಪದಲ್ಲಿ ವಿತರಿಸುವುದು ವಾಡಿಕೆ. ಆದರೆ ಆಡಳಿತ ಮಂಡಳಿ ಪ್ರಸಾದವನ್ನೂ ತಯಾರಿಸದೇ ನಿರ್ಲಕ್ಷ್ಯ ತೋರಿ ಅನ್ನಸಾಂಬಾರ್ ಸೇವೆ ಮಾಡಿ ಭಕ್ತಾಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಭಕ್ತಾಧಿಗಳ ಕಾಣಿಕೆ ರೂಪದಲ್ಲಿ ಗೊರವನಹಳ್ಳಿ ದೇವಸ್ಥಾನಕ್ಕೆ ಕೋಟಿ ಕೋಟಿ ಹಣ ಹರಿದು ಬರುತ್ತದೆ. ಆದ್ರೂ ಕನಿಷ್ಠ ಪ್ರಸಾದ ಕೊಡಲು ಆಡಳಿತ ಮಂಡಳಿಗೆ ಸಾಧ್ಯವಾಗೋದಿಲ್ಲವಾ ಎಂದು ಭಕ್ತಾಧಿಗಳು ಪ್ರಶ್ನಿಸಿದ್ದಾರೆ.