Tag: ಶ್ರೀಕೃಷ್ಣ ದೇವರಾಯ ವಿವಿ

  • ಬಳ್ಳಾರಿ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ನೀಡಿ ಲಕ್ಷಾಂತರ ವಂಚನೆ

    ಬಳ್ಳಾರಿ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ನೀಡಿ ಲಕ್ಷಾಂತರ ವಂಚನೆ

    – ವಿವಿ ಸಿಬ್ಬಂದಿಯಿಂದಲೇ ದೋಖಾ; ತನಿಖಾ ತಂಡ ರಚನೆ

    ಬಳ್ಳಾರಿ: ನಕಲಿ ಘಟಿಕೋತ್ಸವ (Convocation) ಪ್ರಮಾಣ ಪತ್ರ ನೀಡಿ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಬಳ್ಳಾರಿಯ (Ballari) ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (Sri Krishnadevaraya University) ನಡೆದಿರುವುದು ಬೆಳಕಿಗೆ ಬಂದಿದೆ.

    ವಿವಿಯಿಂದ ವಿದ್ಯಾರ್ಥಿಗಳ ವ್ಯಾಸಂಗ ಮುಗಿದ ಬಳಿಕ ಘಟಿಕೋತ್ಸವ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಘಟಿಕೋತ್ಸವ ಪ್ರಮಾಣ ಪತ್ರ ನೀಡುವಲ್ಲಿ ವಿಎಸ್‌ಕೆ ವಿವಿಗೆ ಬರಬೇಕಿದ್ದ ಲಕ್ಷ ಲಕ್ಷ ರೂ. ಆದಾಯಕ್ಕೆ ವಿವಿ ಸಿಬ್ಬಂದಿಯಿಂದಲೇ ಕನ್ನ ಹಾಕಲಾಗಿದೆ. ಇದನ್ನೂ ಓದಿ: ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು

    ಪ್ರಮುಖವಾಗಿ ವಿಎಸ್‌ಕೆ ವಿವಿಯ ಕುಲಪತಿ, ಕುಲಸಚಿವರ ಸಹಿಯನ್ನೇ ನಕಲು ಮಾಡಿ, ಘಟಿಕೋತ್ಸವ ಪ್ರಮಾಣ ಪತ್ರಗಳನ್ನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಒಂದೊಂದು ಪ್ರಮಾಣ ಪತ್ರಕ್ಕೆ 10 ರಿಂದ 15 ಸಾವಿರ ರೂ. ಹಣ ಪಡೆದು ನೂರು ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರ ವಿತರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

    ನಿಯಮದ ಪ್ರಕಾರ ಪದವಿ, ಸ್ನಾತಕ ಪದವಿ ಬಳಿಕ ಘಟಿಕೋತ್ಸವ ಪ್ರಮಾಣ ಪತ್ರ ಪಡೆಯಲು ಶುಲ್ಕ ಪಾವತಿಸಬೇಕು. ಘಟಿಕೋತ್ಸವ ಶುಲ್ಕವು ವಿವಿಗೆ ಸೇರಬೇಕು. ಆದರೆ ವಿವಿಯ ಕೆಲ ಸಿಬ್ಬಂದಿ ತಮ್ಮ ಜೇಬಿಗೆ ಹಾಕಿಕೊಂಡು ವಂಚನೆ ಮಾಡಿದ್ದಾರೆ. ಇದನ್ನೂ ಓದಿ: ಜಾಗರಣೆ ಮಾಡಿದ್ದಕ್ಕೆ ಶಿವರಾತ್ರಿ ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ಕೊಡಿ: ಸರ್ಕಾರಕ್ಕೆ ಮನವಿ

    ಕುಲಪತಿ, ಕುಲಸಚಿವರ ಸಹಿ ನಕಲು ಮಾಡಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ನಕಲಿ ಪ್ರಮಾಣ ಪತ್ರ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಶುಲ್ಕ ಪಾವತಿಸಿದ ರಸೀದಿ ಕೇಳಿದಾಗ ರಸೀದಿ ಇರಲ್ಲ ಎಂದು ಸಬೂಬು ಹೇಳಿದ್ದಾರೆ. ಈ ವಿಚಾರ ವಿವಿ ಗಮನಕ್ಕೆ ಬರುತ್ತಿದ್ದಂತೆ ಸದ್ದಿಲ್ಲದೇ ತನಿಖಾ ಸಮಿತಿ ರಚನೆ ಮಾಡಲಾಗಿದೆ.

    ಕೊಪ್ಪಳ ಜಿಲ್ಲೆಯ ಕನಕಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ಇಲ್ಲಿವರೆಗೂ ಯಾರನ್ನೂ ಅಮಾನತು ಮಾಡದೇ ತನಿಖೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಕೇರಳ| ಲವ್ವರ್, ಕುಟುಂಬದ ಐವರನ್ನು ಹತ್ಯೆ ಮಾಡಿದ ವ್ಯಕ್ತಿ – ತಾಯಿ ಸ್ಥಿತಿ ಗಂಭೀರ

  • ಶ್ರೀಕೃಷ್ಣ ದೇವರಾಯ ವಿವಿಗೆ ನಕಲಿ ಅಂಕಪಟ್ಟಿ ನೀಡಿ ಅಕ್ರಮ ಪ್ರವೇಶ

    ಶ್ರೀಕೃಷ್ಣ ದೇವರಾಯ ವಿವಿಗೆ ನಕಲಿ ಅಂಕಪಟ್ಟಿ ನೀಡಿ ಅಕ್ರಮ ಪ್ರವೇಶ

    ಬಳ್ಳಾರಿ: ಜಿಲ್ಲೆಯ ಶ್ರೀಕೃಷ್ಣ ದೇವರಾಯ ವಿವಿ ನಕಲಿ ಅಂಕಪಟ್ಟಿ ವಿವಾದ ಮತ್ತೆ ಸದ್ದು ಮಾಡುತ್ತಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ನೈಜತೆ ಪ್ರಮಾಣ ಪತ್ರ ಸಲ್ಲಿಸಲು ನೀಡಿದ ಗಡುವು ಸೆಪ್ಟೆಂಬರ್ 10ಕ್ಕೆ ಅಂತ್ಯಗೊಂಡಿದೆ. ಹೀಗಾಗಿ ನೈಜತೆ ಪ್ರಮಾಣ ಪತ್ರ ಸಲ್ಲಿಸದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿ ಸಿಗದೇ  ಮತ್ತೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ.

    ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಗೆ ಸೇರಿದ ಕಾಲೇಜುಗಳಲ್ಲಿ ನಕಲಿ ಅಂಕಪಟ್ಟಿ ನೀಡಿ ಅಕ್ರಮ ಪ್ರವೇಶ ಪಡೆದಿದ್ದ 820 ವಿದ್ಯಾರ್ಥಿಗಳು ಮನೆಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ಬರೆಯಲು ವಿವಿ ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ.

    ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವುದರ ಜೊತೆಗೆ ನೈಜತೆ ಪ್ರಮಾಣ ಪತ್ರ ಪಡೆಯುವುದು ವಿವಿಗೆ ಬಿಟ್ಟದ್ದು ಅಂತ ಕೋರ್ಟ್ ಈ ಹಿಂದೆ ಹೇಳಿತ್ತು. ಎಲ್ಲಾ ವಿದ್ಯಾರ್ಥಿಗಳು ನೈಜತೆ ಪ್ರಮಾಣ ಪತ್ರ ಸಲ್ಲಿಸುವಂತೆ ವಿವಿ ಆದೇಶ ಹೊರಡಿಸಿದ ನಂತರ ಕೇವಲ 8-10 ವಿದ್ಯಾರ್ಥಿಗಳು ಮಾತ್ರ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

    ನಕಲಿ ಅಂಕ ಪಡೆದು ಮೂರ್ನಾಲ್ಕು ಸೆಮಿಸ್ಟರ್ ಮುಗಿಸಿರುವ ವಿದ್ಯಾರ್ಥಿಗಳು ನೈಜತೆ ಪ್ರಮಾಣ ಪತ್ರ ಕೇಳುತ್ತಿರುವುದು ಸರಿಯಲ್ಲವೆಂದು ವಾದಿಸುತ್ತಿದ್ದಾರೆ.