ಲವ್ಲಿ ಸ್ಟಾರ್ ಪ್ರೇಮ್ (Prem) ಮತ್ತು ಶರಣ್ಯ ಶೆಟ್ಟಿ (Sharanya Shetty) ಉಡುಪಿ ಶ್ರೀಕೃಷ್ಣ ದೇಗುಲಕ್ಕೆ (Sri Krishna Temple) ಭೇಟಿ ನೀಡಿದ್ದಾರೆ. ಚಿತ್ರತಂಡದ ಜೊತೆ ಪ್ರೇಮ್ ಹಾಗೂ ಶರಣ್ಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್ ಭಾಗಿ
ಪ್ರೇಮ್ ನಟನೆಯ ಹೊಸ ಸಿನಿಮಾಗೆ ಶರಣ್ಯ ಶೆಟ್ಟಿ ನಾಯಕಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಗುವ ಮುನ್ನ ಚಿತ್ರತಂಡದೊಂದಿಗೆ ಉಡುಪಿಯ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಂದಹಾಗೆ, ಲವ್ಲಿ ಸ್ಟಾರ್ ಪ್ರೇಮ್ ಹೊಸ ಸಿನಿಮಾಗೆ ತೇಜಸ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ಯ ಅವರಿಗೂ ಉತ್ತಮ ಪಾತ್ರ ಸಿಕ್ಕಿದೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಈಗಾಗಲೇ ನೆರವೇರಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.
ಲಕ್ನೋ: ಮೊನ್ನೆಯಷ್ಟೇ ಅಸ್ಸಾಂನ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣರುಕ್ಮಿಣಿ ಪ್ರೇಮಗಾಥೆಗೆ ಲವ್ ಜಿಹಾದ್ ಟಚ್ ನೀಡಿದ್ದರು. ಇದೀಗ ಮಥುರಾದಲ್ಲಿ ಮುಸ್ಲಿಂ ಮಹಿಳೆಯೊಬ್ಬರು (Mathura Muslim Women) ಶ್ರೀಕೃಷ್ಣನ ಭಕ್ತಿಯಲ್ಲಿ ತೇಲುತ್ತಿದ್ದಾರೆ.
ಮೊರಾದಾಬಾದ್‌ನ ಶಬ್ನಂ ತಂದೆ ಲೋಹದ ವಿಗ್ರಹಗಳನ್ನ ಕಡೆಯುತ್ತಾರೆ. ಹೀಗಾಗಿ ಚಿಕ್ಕವಯಸ್ಸಿನಲ್ಲೇ ಹಿಂದೂ ದೇವತೆಗಳ ಮೇಲೆ ಶಬ್ನಂಗೆ ಆರಾಧನೆಯ ಭಾವ ಮೂಡಿತ್ತು. ಇದೇ ಈಕೆಯನ್ನು ಮಥುರಾದ ಬೃಂದಾವನಕ್ಕೆ ಪಯಣಿಸುವಂತೆ ಮಾಡಿದೆ. 2005ರಲ್ಲಿ ಈಕೆಗೆ ಗಂಡ ತಲಾಖ್ ನೀಡಿದ್ದ. ನಂತರ ದೆಹಲಿಯಲ್ಲಿ ಕೆಲ ಕಾಲ ಲೇಡಿ ಬೌನ್ಸರ್ ಆಗಿ ಶಬ್ನಂ ಕೆಲಸ ಮಾಡಿದ್ದರು. ಆದ್ರೆ ಕೃಷ್ಣನ ಕಡೆ ಸೆಳೆತ ಹೆಚ್ಚಾಗಿ 4 ತಿಂಗಳಿಂದ ಕುಟುಂಬ ಬಂಧಗಳನ್ನು ತೊರೆದ ಶಬ್ನಂ ಮಥುರಾದಲ್ಲಿ ಕೃಷ್ಣ (Lord Krishna) ಭಕ್ತಿಯಲ್ಲಿ ಲೀನರಾಗಿದ್ದಾರೆ.
ಫಾತಿಮಾ ಆಗಿ ಬದಲಾದ ಅಂಜುಗೆ ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಭೂಮಿ ಮತ್ತು ನಗದು ಪುರಸ್ಕಾರ ನೀಡಿದ್ದನ್ನು ಪ್ರಸ್ತಾಪಿಸಿದ ನರೋತ್ತಮ್ ಮಿಶ್ರಾ ಅಂತಾರಾಷ್ಟ್ರೀಯ ಸಂಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಇಡಿಯಿಂದ ಲಾಲು ಪ್ರಸಾದ್ ಯಾದವ್ ಕುಟುಂಬದ ಆಸ್ತಿ ಜಪ್ತಿ
ಪುಣೆ: ಶ್ರೀಕೃಷ್ಣ ಮತ್ತು ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು ಎಂದು ವಿದೇಶಾಂಗ ಸಚಿವ ಜೈಶಂಕರ್ (S Jaishankar) ಬಣ್ಣಿಸಿದ್ದಾರೆ.
ತಮ್ಮ The India Way: Strategies for an Uncertain World ಪುಸ್ತಕದ ಮರಾಠಿ ಅನುವಾದ ʼಭಾರತ್ ಮಾರ್ಗ್ʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಮಹಾಭಾರತ ಮತ್ತು ರಾಮಾಯಣದ ಕಥೆಗಳಲ್ಲಿ ಬರುವ ಸಂದರ್ಭಗಳನ್ನು ವಿವರಿಸಿ ರಾಜತಾಂತ್ರಿಕತೆಯ ಮಹತ್ವವವನ್ನು ವಿವರಿಸಿದರು.
ಶ್ರೀಕೃಷ್ಣ ಮತ್ತು ಹನುಮಂತ (Hanuman) ಜಗತ್ತಿನ ಅತಿದೊಡ್ಡ ರಾಜತಾಂತ್ರಿಕರು. ಹನುಮಂತ ರಾಜತಾಂತ್ರಿಕತೆಯನ್ನು ಮೀರಿ ಹೋಗಿದ್ದನು. ಸೀತೆಯ ಜೊತೆ ಮಾತನಾಡಿದ್ದು ಅಲ್ಲದೇ ಲಂಕೆಗೆ ಬೆಂಕಿ ಹಾಕಿದ್ದ ಎಂದು ಹೇಳಿದರು.
ಜೈಶಂಕರ್ ಅವರು ಕೌರವರು ಮತ್ತು ಪಾಂಡವರ ನಡುವೆ ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರವನ್ನು ‘ಬಹುಧ್ರುವ ಭಾರತ’ ಎಂದು ಬಣ್ಣಿಸಿದರು. ಕಾರ್ಯತಂತ್ರದ ವಂಚನೆ ವಿಷಯದ ಬಗ್ಗೆ ಪ್ರಸ್ತಾಪಿಸಿದ ಜೈಶಂಕರ್ ಅವರು ಕೃತಕವಾಗಿ ಸೂರ್ಯಾಸ್ತಮಾನ ಸೃಷ್ಟಿಸಿದ ಕೃಷ್ಣನ (Krishna) ಉದಾಹರಣೆಯನ್ನು ನೀಡಿದರು.
ಅರ್ಜುನನ ಮಗ ಅಭಿಮನ್ಯುವನ್ನು ಕೌರವನ ಕಡೆಯ ಅನೇಕ ಯೋಧರು ಮೋಸ ಮಾಡಿ ಹತ್ಯೆ ಮಾಡಿದರು. ತನ್ನ ಮಗನನ್ನು ಹತ್ಯೆ ಮಾಡಿದ ಜಯದ್ರಥನನ್ನು ಮರುದಿನ ಸಂಜೆಯ ಒಳಗಡೆ ಹತ್ಯೆ ಮಾಡುತ್ತೇನೆ ಎಂದು ಅರ್ಜುನ ಶಪಥ ಮಾಡುತ್ತಾನೆ. ಈ ಶಪಥ ಈಡೇರದೇ ಇದ್ದರೆ ನಾನು ಉರಿಯುವ ಬೆಂಕಿಗೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಈ ವಿಷಯ ತಿಳಿದ ಕೌರವರು ಜಯದ್ರಥನನ್ನು ದಿನಪೂರ್ತಿ ಮರೆ ಮಾಡುತ್ತಾರೆ. ಸೂರ್ಯ ಮುಳುಗಿದ ವಿಚಾರ ತಿಳಿದು ಜಯದ್ರಥ ಕಾಣಿಸಿಕೊಂಡಾಗ ಕೃಷ್ಣ ಅರ್ಜುನನಿಗೆ ಬಾಣ ಹೊಡೆಯುವಂತೆ ಹೇಳುತ್ತಾನೆ. ಅರ್ಜುನ ಬಾಣ ಹೊಡೆದು ಜಯದ್ರಥನನ್ನು ಕೊಲ್ಲುತ್ತಾನೆ. ಕೌರವರಿಗಿಂತ ಉತ್ತಮರು ಈ ಕಾರಣಕ್ಕೆ ಕೃಷ್ಣ ಪಾಂಡವರನ್ನು ಬೆಂಬಲಿಸಿದ ಎಂದು ವಿವರಿಸಿದರು.
Lord Hanuman and Lord Krishna were the best diplomats in the World says EAM Dr. S. Jaishankar.
ಜೈಶಂಕರ್ ಅವರು ಯುಧಿಷ್ಠಿರನು ಅಶ್ವತ್ಥಾಮನ ಸಾವಿನ ಬಗ್ಗೆ ಸುಳ್ಳು ಹೇಳಿದ ಉದಾಹರಣೆಗಳನ್ನು ನೀಡುವ ಮೂಲಕ “ತಂತ್ರಗಾರಿಕೆಯ ಹೊಂದಾಣಿಕೆʼ ವಿಚಾರದ ಬಗ್ಗೆ ವಿವರಿಸಿದರು.
ದ್ರೋಣಾಚಾರ್ಯರು ಕೌರವರ ಸೇನಾಧಿಪತಿಗಳಾಗಿದ್ದರು. 5 ದಿನಗಳ ಕಾಲ ಉಗ್ರವಾಗಿ ಹೋರಾಡಿದರೂ ಪಾಂಡವರಿಗೆ ಅವರನ್ನು ತಡೆಯಲು ಸಾಧ್ಯವಾಗಿರಲಿಲ್ಲ. ದ್ರೋಣಾಚಾರ್ಯರು ಯುಧಿಷ್ಠರನನ್ನು ಮಾತ್ರ ನಂಬುತ್ತಾರೆಯೇ ಹೊರತು ಬೇರೆ ಯಾರನ್ನೂ ನಂಬುವುದಿಲ್ಲ ಎಂಬುದನ್ನು ತಿಳಿದ ಪಾಂಡವರು ದ್ರೋಣಾಚಾರ್ಯರನ್ನು ಮೋಸಗೊಳಿಸಲು ಗೇಮ್ ಪ್ಲಾನ್ ಮಾಡಿದರು.
“If they call the Indian government as Hindu Nationalist, then governments in Europe/US must be called as Christian Nationalists”
ಈ ಸಂದರ್ಭದಲ್ಲಿ, ದ್ರೋಣನ ಏಕೈಕ ದೌರ್ಬಲ್ಯವೆಂದರೆ ಅವನ ಮಗ ಅಶ್ವತ್ಥಾಮ ಎಂದು ಕೃಷ್ಣನಿಗೆ ತಿಳಿದಿತ್ತು. ಹಾಗಾಗಿ ಅಶ್ವತ್ಥಾಮ ಸತ್ತಿದ್ದಾನೆ ಎಂಬ ಸುದ್ದಿಯನ್ನು ಹರಡುವಂತೆ ಯುಧಿಷ್ಠಿರನನ್ನು ಕೇಳುತ್ತಾನೆ. ಯುಧಿಷ್ಠರ ಅಶ್ವತ್ಥಾಮ ಸತ್ತಿದ್ದಾನೆ ಎಂದು ಹೇಳಿದಾಗ ದ್ರೋಣಾಚಾರ್ಯರು ಶಸ್ತ್ರತ್ಯಾಗ ಮಾಡಿದರು ಎಂದು ಕಥೆಯನ್ನು ವಿವರಿಸಿದರು.
ನೆರೆಹೊರೆಯವರನ್ನು ಆಯ್ಕೆ ಮಾಡಲು ಭಾರತದ ಭೌಗೋಳಿಕ ಮಿತಿಗಳ ಬಗ್ಗೆ ಮಾತನಾಡಿದ ಅವರು, ಪಾಂಡವರಿಗೆ ಯಾರು ಸಂಬಂಧಿಗಳು ಸಹಾಯ ಮಾಡಲು ಬರಲಿಲ್ಲ ಎಂದು ಹೇಳಿ ಪಾಕಿಸ್ತಾನದ ಉದಾಹರಣೆ ನೀಡಿದರು.
"Being the foreign secretary was the limit of my ambition, never even dreamt of becoming a minister" says EAM Jaishankar. Thanking PM Modi, points, "not sure any PM, other than Narendra Modi would have made me minister" pic.twitter.com/AMleXrWMTn
ಭಯೋತ್ಪಾದನೆಯಿಂದಾಗಿ ಪಾಕಿಸ್ತಾನ ಜಾಗತಿಕ ಸಮುದಾಯದಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ. ಪಾಕಿಸ್ತಾನವು ಈಗ ಕೆಲವೇ ಮಿತ್ರರಾಷ್ಟ್ರಗಳನ್ನು ಹೊಂದಿದೆ. ಅದರಲ್ಲೂ ಟರ್ಕಿ ಪಾಕಿಸ್ತಾನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಚೀನಾ ಎಂದಿಗೂ ಅನುದಾನವನ್ನು ನೀಡುವುದಿಲ್ಲ ಆದರೆ ಸಾಲವನ್ನು ಮಾತ್ರ ನೀಡುತ್ತದೆ ಎಂದರು.
ವಿದೇಶಾಂಗ ಸಚಿವರನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಅವರು, ವಿದೇಶಾಂಗ ಕಾರ್ಯದರ್ಶಿಯಾಗುವುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಮಂತ್ರಿಯಾಗುವ ಕನಸು ಕೂಡ ಕಂಡಿರಲಿಲ್ಲ. ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಪ್ರಧಾನಿಗಳು ನನ್ನನ್ನು ಮಂತ್ರಿ ಮಾಡಬಹುದು ಎಂಬುದನ್ನು ನಾನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
– ಬೈಬಲ್ ಹಾಗೂ ಕುರಾನ್ ಗ್ರಂಥಗಳೇ ಶ್ರೇಷ್ಠ – ಗೀತೆಯಲ್ಲಿ ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಬರೆದಿದ್ಯಾ?
ತುಮಕೂರು: ಶಿವಮೊಗ್ಗದ ಬಳಿಕ ಕಲ್ಪತರು ನಾಡು ತುಮಕೂರಿಗೂ ನಕಲಿ ಭಗವದ್ಗೀತೆ(Bhagavad Gita) ಪುಸ್ತಕದ ಜಾಲ ಕಾಲಿಟ್ಟಿದೆ. ಈ ಮೂಲಕ ಮತಾಂತರ ಜಾಲವೊಂದು ಸದ್ದಿಲ್ಲದೇ ಕೆಲಸ ಮಾಡುತ್ತಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು. ಇಲ್ಲಸಲ್ಲದ ಆಸೆಗಳನ್ನು ಹೇಳಿ ಮತಾಂತರ(Religious Conversion) ಮಾಡುವುದು ಹಳೆಯ ಸುದ್ದಿ. ಆದರೆ ಈಗ ನಕಲಿ ಭಗವದ್ಗೀತೆಯನ್ನು ಮುದ್ರಿಸಿ ಅದನ್ನುಹಿಡಿದು ಮತಾಂತರ ಮಾಡಲು ಹೊರಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಹೊರರಾಜ್ಯದಿಂದ ಬಂದು ಜನಸಂದಣಿ ಇರುವ ಪ್ರದೇಶ, ಹಿಂದೂ ದೇವಾಲಯಗಳ ಬಳಿ ಹಾಗೂ ಹಳ್ಳಿ ಹಳ್ಳಿಗಳಿಗೆ ತೆರಳಿ ಭಗವದ್ಗೀತೆ ಹೋಲುವ ಪುಸ್ತಕವನ್ನ ಮಾರಾಟ ಮಾಡಲಾಗುತ್ತಿದೆ. ʼಗೀತೆ ನಿನ್ನ ಜ್ಞಾನ ಅಮೃತʼ ಎಂಬ ಹೆಸರಿನಲ್ಲಿರುವ ಪುಸ್ತಕವನ್ನು ಮುದ್ರಿಸಿ 100 ರೂ. ಬೆಲೆಯಿರುವ ಪುಸ್ತಕವನ್ನು ಜನಸಾಮಾನ್ಯರಿಗೆ 10 ರಿಂದ 30 ರೂ.ಗೆ ಹಾಗೂ ಕೆಲವು ಕಡೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಭಜರಂಗ ದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ತಿಳಿಸಿದ್ದಾರೆ.
ನಕಲಿ ಪುಸ್ತಕದ ಮುಖಪುಟದ ಮೇಲೆ ಶ್ರೀಕೃಷ್ಣನ ಚಿತ್ರವನ್ನೂ ಮುದ್ರಿಸಲಾಗಿದೆ. ಕಡಿಮೆ ದರಕ್ಕೆ ಧರ್ಮ ಗ್ರಂಥದ ಪುಸ್ತಕ ಸಿಕ್ಕಿದೆ ಎಂದು ಖರೀದಿಸಿ ಮನೆಗೆ ತೆಗೆದುಕೊಂಡು ಹೋದವರಿಗೆ ಶಾಕ್ ಆಗಿದೆ.
ಪುಸ್ತಕದಲ್ಲಿ ಏನಿದೆ?
ಹಿಂದೂ ಧರ್ಮ(Hindu Religion) ಸರಿಯಿಲ್ಲ, ಹಿಂದೂ ದೇವರುಗಳು, ಆಚರಣೆಗಳು ಸರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ ಬೈಬಲ್(Bible) ಹಾಗೂ ಕುರಾನ್(Quran) ಗ್ರಂಥಗಳೇ ಶ್ರೇಷ್ಠ ಅಂತಲೂ ಹೇಳಲಾಗಿದೆ.
ಗೀತಾ ಜ್ಞಾನದಲ್ಲಿ ತಾನು ಏನು ಹೇಳಿದ್ದೇನೆ ಎಂಬುದರ ಬಗ್ಗೆ ಶ್ರೀಕೃಷ್ಣನಿಗೆ ಗೊತ್ತೇ ಇರಲಿಲ್ಲ. ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನು ಹೇಳಿಲ್ಲ. ಬದಲಾಗಿ ಅವನ ಶರೀರದಲ್ಲಿ ಪ್ರೇತಗಳಂತೆ ಪ್ರವೇಶಿಸಿದ ಕಾಲಾನು ಹೇಳಿದ್ದಾನೆ ಎಂದು ಅವಹೇಳನ ಮಾಡಲಾಗಿದೆ.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೂ ಸಾವಿದೆ. ಗೀತೆಯಲ್ಲಿ ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಎಲ್ಲಾದರೂ ಬರೆದಿದೆಯೇ? ವೇದಗಳಲ್ಲಿಯೂ ಸಹಾ ದುರ್ಗೆಯನ್ನು, ಶ್ರೀ ದೇವಿಯನ್ನು ಪೂಜೆ ಮಾಡಿ ಎಂದು ಬರೆದಿಲ್ಲ. ಹಾಗಾದರೆ ಮಹರ್ಷಿಗಳು ವೇದಗಳನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ? ಇದನ್ನೂ ಓದಿ: ಮುಸ್ಲಿಮರಿಗೂ ಮೀಸಲಾತಿ ಹೆಚ್ಚಿಸಿ – ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ
ಸತ್ಯಯುಗದ ಮಹರ್ಷಿಗಳು ಪೂರ್ಣ ವಿದ್ವಾಂಸರೇ? ‘ಓಂ ‘ ಎಂಬ ನಾಮಜಪವೂ ಎಲ್ಲದಕ್ಕಿಂತ ಉತ್ತಮ ಜಪ ಹಾಗೂ ಬ್ರಹ್ಮ ಪೂಜೆಯು ಸರ್ವಶ್ರೇಷ್ಠ ಎನ್ನುವುದು ಅವರ ಸ್ವಂತ ನಿರ್ಧಾರವಾಗಿತ್ತು. ಹಾಗಾಗಿ ಪ್ರಿಯ ಓದುಗರೇ! ಯಾರು ಬ್ರಹ್ಮನ ಪೂಜೆಯನ್ನು ಇಷ್ಟ ದೈವವೆಂದು ತಿಳಿದು ಮಾಡುತ್ತಾರೋ ಅವರು ಅಜ್ಞಾನಿಗಳು, ಬ್ರಹ್ಮ ಸಾಧನೆಯಿಂದ ಉತ್ತಮವಲ್ಲದ ಮೋಕ್ಷವು ಅವರಿಗೆ ಪ್ರಾಪ್ತವಾಗುತ್ತದೆ ಎಂದು ಭಗವದ್ಗೀತೆಯ ಸಾರವನ್ನೇ ತಿರುಚಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂಪರ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ತುಮಕೂರಿನ ಕೋರಾ ಪೊಲೀಸ್ ಠಾಣೆ ಮತ್ತು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಹಿಂದೂಪರ ಕಾರ್ಯಕರ್ತರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ಈ ಪುಸ್ತಕಗಳನ್ನ ಬ್ಯಾನ್ ಮಾಡಬೇಕು, ಈ ಪುಸ್ತಕಗಳನ್ನ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಬಿಟ್ಟಿರುವ ವೆಬ್ ಸೈಟ್ ಅನ್ನು ನಿಷೇಧ ಮಾಡಬೇಕು. ಇದರ ಹಿಂದೆ ಕೆಲಸ ಮಾಡುತ್ತಿರುವವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ನಾಡಿನಾದ್ಯಂತ ಶ್ರೀಕೃಷ್ಣನ ಜನ್ಮಾಷ್ಟಮಿ ಹಿನ್ನೆಲೆ ಬೆಳಗಾವಿ ಸದಾಶಿವ ನಗರದಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಮಾಡದೇ ತಮ್ಮ ಮುದ್ದಿನ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಸದಾಶಿವ ನಗರದ ದಸ್ತಗೀರ್ ಮೊಕಾಶಿ ಎಂಬುವವರು ತಮ್ಮ ಮುದ್ದಿನ ಮೊಮ್ಮಗ ಅದ್ನಾನ್ ಆಸೀಪ್ ಮೊಕಾಶಿಗೆ ಕೃಷ್ಣನ ವೇಷಭೂಷಣ ಹಾಕಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಶ್ರೀಕೃಷ್ಣನಂತೆ ಪೋಷಾಕು ಹಾಕಿ ಮಗುವಿನ ಕೈಗೆ ಕೊಳಲು ನೀಡಿ ಕೃಷ್ಣನ ಜನ್ಮಾಷ್ಟಮಿ ಆಚರಣೆ ಮಾಡಿದ್ದಾರೆ. ಶ್ರೀಕೃಷ್ಣನ ವೇಷಧರಿಸಿದ ಅದ್ವಾನ್ ಆಸೀಪ್ ಮೊಕಾಶಿ ನಗರದ ಲವ್ ಡೇಲ್ ಶಾಲೆಯಲ್ಲಿ ನಡೆದ ಕೃಷ್ಣನ ಪೋಷಾಕು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಮುಸ್ಲಿಂ ಕುಟುಂಬದ ಸಾಮರಸ್ಯದ ಮನಸ್ಥಿತಿಗೆ ನಾಡಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ
ಹಲವು ಜಾತಿ-ಧರ್ಮಗಳ ವೈವಿಧ್ಯಮಯ ರಾಷ್ಟ್ರ ಭಾರತ. ಐಕ್ಯತೆಯಲ್ಲಿ ವಿಶೇಷತೆ ಕಾಣುವ ದೇಶದಲ್ಲಿ ಬೆಳಗಾವಿಯ ಮುಸ್ಲಿಂ ಕುಟುಂಬ ಭಾವೈಕ್ಯ ಸಂದೇಶ ಸಾರಿದೆ. ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವೆ ಒಡಕು ಕಾಣುತ್ತಿದೆ. ಸಾಮರಸ್ಯವನ್ನು ಹದಗೆಡಿಸುತ್ತಿರುವ ಕೆಲಸಗಳೂ ನಡೆಯುತ್ತಿವೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿರುವ ಬೆಳಗಾವಿಯ ಈ ಮುಸ್ಲಿಂ ಕುಟುಂಬ ರಾಮ್ ರಹೀಮ್ ಎಲ್ಲರೂ ಒಂದೇ ಎಂಬ ಸಂದೇಶ ನೀಡಿದೆ. ಇದನ್ನೂ ಓದಿ: ಮಹಾತ್ಮಾ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ: ಸಿದ್ದರಾಮಯ್ಯ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ದಸ್ತಗೀರ್ ಸಾಬ್ ಮೊಕಾಶಿ ಅವರು, ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಇರುವ ರಾಷ್ಟ್ರವಾಗಿದೆ. ಗೋಕುಲಾಷ್ಟಮಿ ನಿಮಿತ್ತ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ತೊಡಿಸಿದ್ದೇವೆ. ರಾಮನವಮಿ ಸೇರಿದಂತೆ ಎಲ್ಲಾ ಹಬ್ಬಗಳಲ್ಲಿ ನಾವು ಭಾಗಿಯಾಗುತ್ತೇವೆ. ಹಿಂದೂ, ಮುಸ್ಲಿಂ ಎಂಬ ಭೇದಭಾವ ಏನೂ ಇಲ್ಲ. ರಾಮ್ ರಹೀಮ್ ಎಲ್ಲರೂ ಒಂದೇ ಎಂದು ದಸ್ತಗೀರ್ ಸಾಬ್ ಮೊಕಾಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಉತ್ತರಪ್ರದೇಶ: ದೇಶದಲ್ಲಿ ಧರ್ಮ ದಂಗಲ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಿಜಬ್, ಹಲಾಲ್ ವಿರೋಧಿ ಅಭಿಯಾನದಿಂದ ಶುರುವಾದ ಸಂಘರ್ಷ ಈಗ ಧಾರ್ಮಿಕ ಕಟ್ಟಡಗಳ ವ್ಯಾಪ್ತಿಗೆ ಬಂದು ನಿಂತಿದೆ. ಭಾರತದ ಐತಿಹಾಸಿಕ ದೇವಾಲಯಗಳನ್ನು ನಾಶಗೊಳಿಸಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಅನೇಕ ಕಡೆಗಳಲ್ಲಿ ಹಿಂದೂಪರ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿವೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.
ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳ ಎಂದು ನಂಬಲಾದ ಸ್ಥಳದಲ್ಲಿ ಇರುವ ಶಾಹಿ ಈದ್ಗಾ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳ ಗುಂಪು ಮಥುರಾದ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಾಹಿತಿ ಲೀಕ್ – ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಧಿಕಾರಿ ವಜಾ
ಕತ್ರಾ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ ದೇವರ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಮುಸ್ಲಿಮರು ಪ್ರತಿಪಾದಿಸಿದ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ವಿವಿಧ ಹಿಂದೂ ಗುಂಪುಗಳು ಮಥುರಾ ನ್ಯಾಯಾಲಯಗಳಲ್ಲಿ ಈ ಹಿಂದೆ ಹತ್ತು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು.
ಹಿಂದೂ ಸಮುದಾಯದ ಬಹುಪಾಲು ಜನರು ಮಸೀದಿ ಇರುವ ಸ್ಥಳದಲ್ಲಿ ಶ್ರೀಕೃಷ್ಣ ಜನಿಸಿದ್ದರೆಂದು ನಂಬುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಶೈಲೇಂದ್ರ ಸಿಂಗ್, ಒಂದು ಕಾಲದಲ್ಲಿ ದೇವಾಲಯವಿದ್ದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ: ಸುಪ್ರೀಂ ಕೋರ್ಟ್
ಹಿಂದೂ ದೇವಾಲಯದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ. ಇದರ ಸಂರಚನೆ ದೇವಾಲಯವನ್ನೇ ಹೋಲುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಉಡುಪಿಯಲ್ಲಿ ಎರಡು ವರ್ಷಕ್ಕೊಮ್ಮೆ ಪರ್ಯಾಯೋತ್ಸವ ಅಂದರೆ ಉಡುಪಿ ಜನರಲ್ಲಿ ಹಬ್ಬದ ಸಡಗರ. ಎರಡು ವರ್ಷಗಳಿಗೆ ಒಮ್ಮೆ ಬರುವ ಈ ದ್ವಿವಾರ್ಷಿಕ ಉತ್ಸವದ ಸಂದರ್ಭ ಉಡುಪಿಯ ನಗರ ಸಿಂಗಾರಗೊಳ್ಳುತ್ತದೆ.ಜನವರಿ ತಿಂಗಳ ಚಳಿಗಾಲದ ರಾತ್ರಿಯಲ್ಲಿ ಬೀದಿಯ ತುಂಬೆಲ್ಲಾ ಜಗಮಗ ಬೆಳಕು ರಾರಾಜಿಸುತ್ತಾ ಕಣ್ಮನ ಸೆಳೆಯುತ್ತದೆ. ಈಗ ಪುನಃ ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಅಷ್ಟಕ್ಕೂ ಉಡುಪಿ ಪರ್ಯಾಯ ಎಂದರೆ ಏನು? ಪರ್ಯಾಯೋತ್ಸವ ಎಂದರೆ ಯಾವ ಉತ್ಸವ? ಈ ಉತ್ಸವವನ್ನು ಜನರು ಏಕೆ ಇಷ್ಟು ಸಂಭ್ರಮಿಸುತ್ತಾರೆ? ಉತ್ಸವದ ಇತಿಹಾಸ ಏನು? ಈ ಬಗ್ಗೆ ವಿವರಗಳು ಇಲ್ಲಿದೆ.
ಮಧ್ವಾಚಾರ್ಯರು ಉಡುಪಿಯಲ್ಲಿ ಕೃಷ್ಣಮಠವನ್ನು ಸ್ಥಾಪನೆ ಮಾಡಿದರು. ಶ್ರೀಕೃಷ್ಣನಿಗೆ ಪೂಜೆ ಮಾಡಲು ಎಂಟು ಮಂದಿ ಯತಿಗಳನ್ನು ನೇಮಿಸಿದ್ದರು. ಆರಂಭದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪೂಜಾ ಅಧಿಕಾರ ಎಂಟು ಮಠಗಳ ನಡುವೆ ಹಸ್ತಾಂತರವಾಗುತ್ತಿತ್ತು ನಂತರ ಎರಡು ವರ್ಷಕ್ಕೆ ವಿಸ್ತರಣೆ ಆಯ್ತು.
ಅದಮಾರು ಮಠ ಎರಡು ವರ್ಷ ಪರ್ಯಾಯ ಅಧಿಕಾರ ಪೂರೈಸಿದ್ದು, ಇನ್ನು 14 ವರ್ಷದ ನಂತರ ಶ್ರೀಗಳು ಮತ್ತೆ ಕೃಷ್ಣನ ಪೂಜಾಧಿಕಾರ ವಹಿಸಿಕೊಳ್ಳಲಿದ್ದಾರೆ. ನಡುರಾತ್ರಿ ಆರಂಭವಾಗುವ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬೆಳಗಿನ ಜಾವ ಸಾಂಪ್ರದಾಯಿಕ ಪ್ರಕ್ರಿಯೆಗಳು ಮುಗಿದುಬಿಡುತ್ತದೆ. ಫೋಟೋಗಳ ಮೂಲಕ ಪರ್ಯಾಯ ಮಹೋತ್ಸವದ ಎಲ್ಲ ಪ್ರಕ್ರಿಯೆಗಳನ್ನು ಇಲ್ಲಿ ವಿವರಿಸಲಾಗುವುದು. ಇದನ್ನೂ ಓದಿ: ಎರಡು ವರ್ಷ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ – ಕೃಷ್ಣಾಪುರ ಸ್ವಾಮೀಜಿ ಘೋಷಣೆ
ಹೇಗೆ ನಡೆಯಿತು?
ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ರಾತ್ರಿ 1:30 ಕ್ಕೆ ಪವಿತ್ರ ಸ್ನಾನ ಮಾಡಿದರು. ಈ ಸಂದರ್ಭ ಹತ್ತಾರು ಭಕ್ತರು ಸ್ವಾಮೀಜಿಗಳ ಜೊತೆ ತೀರ್ಥಸ್ನಾನದಲ್ಲಿ ಜೊತೆಯಾದರು. ಉಡುಪಿ ನಗರಕ್ಕೆ ಆಗಮಿಸಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಮಂಗಳಾರತಿ ಮಾಡುವ ಮೂಲಕ ದೀಪ ಬೆಳಗಿಸಿ ಪರ್ಯಾಯ ಮೆರವಣಿಗೆ ಆರಂಭವಾಯಿತು. ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಸೀಮಿತ ಟ್ಯಾಬ್ಲೋ ಕಲಾತಂಡಗಳ ಜೊತೆಗೆ ಪಲ್ಲಕ್ಕಿ ಟ್ಯಾಬ್ಲೋದಲ್ಲಿ ಕೂತು ಸ್ವಾಮೀಜಿಗಳು ಮಠದತ್ತ ಸಾಗಿದರು.
ರಥಬೀದಿಗೆ ಬಿಳಿ ಹಾಸು ಹಾಸಲಾಗಿತ್ತು. ಅದರ ಮೇಲೆ ಎಲ್ಲ ಸ್ವಾಮೀಜಿಗಳು ನಡೆದುಕೊಂಡು ಬಂದು ಕನಕನ ಕಿಂಡಿಯಲ್ಲಿ 4:30ಕ್ಕೆ ಶ್ರೀ ಕೃಷ್ಣದೇವರ ದರ್ಶನ ಮಾಡಿ ನವಗ್ರಹ ದಾನ ನೀಡಿ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದರು. ಅನಂತೇಶ್ವರದಲ್ಲಿ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿದರು. ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ 5:25 ಕ್ಕೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಎಲ್ಲ ಶ್ರೀಗಳನ್ನು ಸ್ವಾಗತಿಸಿದರು.
ಶ್ರೀಕೃಷ್ಣ ದೇವರ ದರ್ಶನ ಪಡೆದು ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು. ಮಧ್ವಾಚಾರ್ಯರ ಸನ್ನಿಧಿಯ ಎದುರು ಅದಮಾರು ಮಠಾಧೀಶರು ಕೃಷ್ಣಾಪುರ ಮಠಾಧೀಶರಿಗೆ 5:45 ಕ್ಕೆ ಅಕ್ಷಯ ಪಾತ್ರೆ, ಸಟ್ಟುಗ ಹಸ್ತಾಂತರ ಮಾಡಿದರು. ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಚತುರ್ಥ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿದರು. ಪರ್ಯಾಯ ಶ್ರೀಗಳಿಂದ ಬಡಗುಮಾಳಿಗೆಯ ಅರಳು ಗದ್ದುಗೆ ವಿಧಿ ನಡೆಯಿತು. ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಸರಳ ಪರ್ಯಾಯ: ಕೃಷ್ಣಾಪುರ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಅರಳಿನ ಗದ್ದಿಗೆ ಮೇಲೆ ಪರಸ್ಪರ ಸ್ವಾಮಿಗಳು ಗಂದಾದ್ಯುಪಚಾರ, ಅಷ್ಟ ಮಠಾಧೀಶರಿಂದ ಪಟ್ಟಕಣಿಕೆ ಹಾಗೂ ಮಾಲಿಕೆ ಮಂಗಳಾರತಿ ನಡೆಯಿತು. ಈ ಸಂದರ್ಭ ಎಲ್ಲ ಸ್ವಾಮೀಜಿಗಳು ಉಭಯ ಕುಶಲೋಪರಿಯಲ್ಲಿ ತೊಡಗಿದರು. 6:45 ಕ್ಕೆ ಸರಿಯಾಗಿ ಪರ್ಯಾಯ ದರ್ಬಾರ್ ನಡೆಯಿತು. ಸಾರ್ವಜನಿಕರು ಮಠದ ಭಕ್ತರು ದರ್ಬಾರ್ ಸಭೆಯಲ್ಲಿ ಭಾಗಿಯಾದರು. ನಾಲ್ಕನೇ ಸುತ್ತಿನ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಸ್ವಾಮೀಜಿ ದರ್ಬಾರ್ ಸಭೆ ಮುಗಿಸಿ ನೂತನ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಬೆಂಗಳೂರು: “ಹ್ಯಾಕಿಂಗ್ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಭಗವದ್ಗೀತೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ. ಬಳಿಕ ನಾನು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ” ಇದು ಡ್ರಗ್ಸ್ ಪ್ರಕರಣದಲ್ಲಿ ಬಂಧನಗೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಪೊಲೀಸ್ ವಿಚಾರಣೆಯ ವೇಳೆ ತಿಳಿಸಿದ ತನ್ನ ಏಕಾಗ್ರತೆಯ ರಹಸ್ಯ.
ನ.17 ರಂದು ಬೆಂಗಳೂರಿನ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ 25 ವರ್ಷದ ಶ್ರೀಕೃಷ್ಣ ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಜಾಸ್ತಿ ಮಾತನಾಡಿದ್ದಾನೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಭಗವದ್ಗೀತೆ ಬೇಕೇಬೇಕು:
ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇರುವ ಶ್ರೀಕೃಷ್ಣ ಠಾಣೆಯಲ್ಲೂ ಪ್ರತಿ ದಿನ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಾನೆ. ರಾತ್ರಿ ಭಗವದ್ಗೀತೆ ಪುಸ್ತಕ ಓದುವುದರ ಜೊತೆಗೆ ಇಂದು ಸಿಸಿಬಿ ಪೊಲೀಸರ ಕಚೇರಿಗೆ ವಿಚಾರಣೆಗೆ ಹಾಜರಾಗಲು ಕರೆ ತಂದಾಗಲೂ ಕೈಯಲ್ಲಿ ಭಗವದ್ಗೀತೆ ಪುಸ್ತಕವನ್ನು ಹಿಡಿದುಕೊಂಡೇ ಬಂದಿದ್ದ.
ಭಗವದ್ಗೀತೆ ಪುಸ್ತಕವನ್ನು ಯಾಕೆ ಓದುತ್ತಿದ್ದಿ ಎಂದು ಪ್ರಶ್ನಿದ್ದಕ್ಕೆ, ಹ್ಯಾಕಿಂಗ್ ಮಾಡಲು ಮನಸ್ಸಿಗೆ ಏಕಾಗ್ರತೆ ಬೇಕು. ಭಗದ್ಗೀತೆ ಓದಿದ ಬಳಿಕ ಏಕಾಗ್ರತೆ ಸಿಕ್ಕಿ ನಾನು ವೆಬ್‌ಸೈಟ್ ಹ್ಯಾಕ್ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಗವದ್ಗೀತೆ ಅಲ್ಲದೇ ಸ್ವಾಮಿ ವಿವೇಕಾನಂದ, ಓಶೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀಕೃಷ್ಣ ಓದಿದ್ದಾನೆ.
ಹ್ಯಾಕಿಂಗ್ ನಿಲ್ಲಿಸಲ್ಲ:
ಸದ್ಯ ಉದ್ಯೋಗ ಇಲ್ಲ ಮುಂದೇನು ಎಂದು ಅಧಿಕಾರಿಗಳು ಪ್ರಶ್ನಿದ್ದಕ್ಕೆ, ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಹ್ಯಾಕಿಂಗ್ ಮಾಡುವುದನ್ನು ನಿಲ್ಲಿಸಲ್ಲ. ನಾನು ಯಾವುದೇ ಉದ್ಯೋಗ ಮಾಡುವುದಿಲ್ಲ. ಸ್ಥಳೀಯ ವೆಬ್ ಸೈಟ್‌ಗಳನ್ನು ಇನ್ನು ಮುಂದೆ ಹ್ಯಾಕ್ ಮಾಡುವುದಿಲ್ಲ. ಬದಲಾಗಿ ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಹ್ಯಾಕಿಂಗ್ ಹೇಗೆ?
ಹ್ಯಾಕರ್ ಶ್ರೀಕಿ ವೆಬ್‌ಸೈಟ್ ಹ್ಯಾಕ್ ಮಾಡಲು Hak5 WIFI pineapple ಡಿವೈಸ್ ಬಳಸುತ್ತಿದ್ದ. ಈ ಸಾಧನದ ಮೂಲಕ ವೆಬ್‌ಸೈಟ್ ಕೋಡ್‌ನಲ್ಲಿ ಬಗ್ ಪತ್ತೆ ಮಾಡಿ ಸರ್ವರ್ ಹ್ಯಾಕ್ ಮಾಡುತ್ತಿದ್ದ. ನಂತರ ವೆಬ್‌ಸೈಟ್ ಅನ್ನು ತನಗೆ ಹೇಗೇ ಬೇಕೋ ಹಾಗೆ ಕೆಲಸ ಮಾಡುವಂತೆ ಬದಲಾವಣೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಪೋಕರ್ ವೆಬ್‌ಸೈಟ್ ಅನ್ನು ಶ್ರೀಕಿ ಹ್ಯಾಕ್ ಮಾಡಿದ್ದ.
ಉಡುಪಿ: ಉಡುಪಿ ರಥಬೀದಿ ಏಳು ತಿಂಗಳ ಕೊರೊನಾ ಬಂಧನದಿಂದ ಮುಕ್ತವಾಗಿದೆ. ಶ್ರೀಕೃಷ್ಣನಿಗೂ ಭಕ್ತರಿಗೂ ಇದ್ದ ಅಂತರ ಕಳಚಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಮಧ್ಯಾಹ್ನ ಸಂಜೆ ದರ್ಶನ ಆರಂಭವಾಗಿದ್ದು, ಜನ ಆರಾಧ್ಯ ಮೂರ್ತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕೊರೊನಾ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈ ಸಾಂಕ್ರಾಮಿಕ ರೋಗ ದೇವರಿಂದ ಭಕ್ತರನ್ನು ದೂರ ಮಾಡಿತ್ತು. ಉಡುಪಿ ಕೃಷ್ಣನನ್ನು ಕಾಣದೆ ಏಳು ತಿಂಗಳು ಭಕ್ತರು ಆಧ್ಯಾತ್ಮಿಕವಾಗಿ ಬಡವಾಗಿದ್ದರು. ಇದೀಗ ಮಠ ಮತ್ತೆ ತೆರೆದುಕೊಂಡಿದೆ. ಭಕ್ತರು ಪುಳಕಗೊಂಡು ಮಠದತ್ತ ಧಾವಿಸಿ ಬರುತ್ತಿದ್ದಾರೆ.
ಶ್ರೀ ಕೃಷ್ಣನ ದರ್ಶನಕ್ಕೆ ಟೈಂ ಫಿಕ್ಸ್ ಮಾಡಲಾಗಿದೆ. ಬೆಳಗ್ಗೆ 8.30 ಕ್ಕೆ ಕೃಷ್ಣನ ದರ್ಶನ ಆರಂಭ ಆಗುತ್ತದೆ. 10ರವರೆಗೆ ದೇವರ ದರ್ಶನ ಮಾಡಬಹುದು. ಮಹಾಪೂಜೆ ಸಂದರ್ಭ ಅವಕಾಶ ಇಲ್ಲ. ಮಧ್ಯಾಹ್ನ ಮತ್ತೆ ಮಠ ತೆರೆದುಕೊಳ್ಳುತ್ತದೆ ಎಂದು ಪರ್ಯಾಯ ಅದಮಾರು ಮಠ ಈಶಪ್ರೀಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇಗುಲ ಭೇಟಿ ನೀಡುವ ಭಕ್ತರಿಗೆ ಉಡುಪಿ ಕೃಷ್ಣಮಠ ಎರಡು ಹೊತ್ತಿನಲ್ಲಿ ತೆರೆದುಕೊಳ್ಳುವುದು ಬಹಳ ಉಪಯೋಗವಾಗಲಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರಿಗೆ ಮುಂಜಾನೆ, ಮಧ್ಯಾಹ್ನ ಸಂಜೆ ದರ್ಶನ ನೀಡುವ ಅವಕಾಶವಾಗಿದೆ. ಕೊರೊನಾ ಸಂಪೂರ್ಣ ಹತೋಟಿಗೆ ಬಂದ ಮೇಲೆ ಲಸಿಕೆ ಅನ್ವೇಷಣೆ ಆದ ನಂತರ ಹಿಂದಿನಂತೆ ದಿನಪೂರ್ತಿ ಮಠ ತೆರೆಯುವ ಸಾಧ್ಯತೆಯಿದೆ.
ಉಡುಪಿ: ಇಂದು ರಾತ್ರಿ 12.16ಕ್ಕೆ ಭಗವಾನ್ ಶ್ರೀಕೃಷ್ಣನ ಜನ್ಮವಾಗುತ್ತದೆ. ಹುಟ್ಟುವ ಮುದ್ದು ಕೃಷ್ಣನಿಗೆ ನಾಲ್ವರು ಸ್ವಾಮೀಜಿಗಳು ತುಪ್ಪದ ಉಂಡೆ ತಯಾರಿಸುವ ಸಂಪ್ರದಾಯ ಉಡುಪಿಯಲ್ಲಿದೆ.
ಕೊರೊನಾ ಸಾಂಕ್ರಾಮಿಕ ಕಾರಣಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಆಚರಣೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಅವಕಾಶ ಇಲ್ಲ. ಆದರೆ 800 ವರ್ಷದಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಆಚರಣೆಗೆ ಉಡುಪಿಯಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ.
ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾ ಪೂಜೆಯನ್ನು ನೆರವೇರಿಸಿ ಲಕ್ಷ ತುಳಸಿ ಅರ್ಚನೆ ಅನ್ನ ದೇವರಿಗೆ ಸಲ್ಲಿಸಲಾಯಿತು. ಕೃಷ್ಣ ಮಠದ ರಥಬೀದಿಯಲ್ಲಿ ನಾಳೆ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.
ರಾತ್ರಿ ಮಠದ ಗರ್ಭಗುಡಿಯ ಒಳಗೆ ಅಘ್ರ್ಯ ಪ್ರಧಾನ ನಡೆಯುತ್ತದೆ. ರಾತ್ರಿ 12 ಗಂಟೆ 16 ನಿಮಿಷಕ್ಕೆ ಶ್ರೀ ಕೃಷ್ಣನ ಜನ್ಮ ಕಾಲದಲ್ಲಿ ಗರ್ಭಗುಡಿಯ ಒಳಗೆ ಉಂಡೆ ಚಕ್ಕುಲಿ ಮತ್ತಿತರ ಭಕ್ಷ್ಯಗಳನ್ನು ಇಟ್ಟು ಪೂಜಿಸಲಾಗುತ್ತದೆ. ಕೃಷ್ಣನ ಭಕ್ತರಿಗೆ ಲಕ್ಷ ಉಂಡೆ ಲಕ್ಷ ಚಕ್ಕುಲಿ ಈಗಾಗಲೇ ಸಿದ್ಧವಾಗಿದೆ. ದೇವರಿಗೆ ಇಡುವ ಉಂಡೆ ಚಕ್ಕುಲಿಯನ್ನು ಸ್ವಾಮೀಜಿಗಳೇ ತಯಾರಿಸುತ್ತಾರೆ. ಇದು ಉಡುಪಿ ಕೃಷ್ಣ ಮಠದ ಸಂಪ್ರದಾಯ.
ಭೋಜನ ಶಾಲೆಯಲ್ಲಿ ಅದಮಾರು ಈಶಪ್ರಿಯ ತೀರ್ಥರು, ಪಲಿಮಾರು ವಿದ್ಯಾಧೀಶ ಸ್ವಾಮೀಜಿ, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ, ಸ್ವಾಮೀಜಿ ಪಲಿಮಾರು ಕಿರಿಯ ಶ್ರೀಗಳಾದ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಲಡ್ಡು ತಯಾರಿಸಿದರು. ವಿಶೇಷ ಲಡ್ಡು ಕೃಷ್ಣನಿಗೆ ಅರ್ಪಿಸಿದ ಮೇಲೆ ಭಕ್ತರಿಗೆ ಹಂಚಲಾಗುತ್ತದೆ.