Tag: ಶ್ರೀಕಾಂತ್‌ ಪೂಜಾರಿ

  • 9 ದಿನಗಳ ಬಳಿಕ ಶ್ರೀಕಾಂತ್‌ ಪೂಜಾರಿ ಜೈಲಿನಿಂದ ಬಿಡುಗಡೆ – ‘ಭಾರತ್‌ ಮಾತಾ ಕೀ ಜೈ’ ಎಂದ ಕಾರ್ಯಕರ್ತರು

    9 ದಿನಗಳ ಬಳಿಕ ಶ್ರೀಕಾಂತ್‌ ಪೂಜಾರಿ ಜೈಲಿನಿಂದ ಬಿಡುಗಡೆ – ‘ಭಾರತ್‌ ಮಾತಾ ಕೀ ಜೈ’ ಎಂದ ಕಾರ್ಯಕರ್ತರು

    ಹುಬ್ಬಳ್ಳಿ: 9 ದಿನಗಳ ಬಳಿಕ ಕರಸೇವಕ ಶ್ರೀಕಾಂತ್‌ ಪೂಜಾರಿ (Srikanth Poojari) ಜೈಲಿನಿಂದ ಶನಿವಾರ ಬಿಡುಗಡೆಯಾದರು. ಹೊರಗಡೆ ಕಾದು ನಿಂತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೂಜಾರಿಯನ್ನು ಸನ್ಮಾನಿಸಿ ಶ್ರೀರಾಮನ ಭಾವಚಿತ್ರ ನೀಡಿ ಸಂಭ್ರಮಿಸಿದರು.

    ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀಕಾಂತ್‌ ಪೂಜಾರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಹುಬ್ಬಳ್ಳಿಯ ಸಬ್‌ ಜೈಲಿನಲ್ಲಿದ್ದ ಪೂಜಾರಿಯನ್ನು ಇಂದು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಹು-ಧಾ ಪೊಲೀಸ್ ಕಮಿಷನರ್

    ಶ್ರೀಕಾಂತ್‌ ಪೂಜಾರಿ ಸ್ವಾಗತಿಸಲು ಹಿಂದೂ ಕಾರ್ಯಕರ್ತರು ನೆರದಿದ್ದರು. ಪೂಜಾರಿ ಜೈಲಿನಿಂದ ಹೊರಬರುತ್ತಿದ್ದಂತೆ ಹೂಮಾಲೆ ಹಾಕಿ ಸ್ವಾಗತ ಕೋರಿದರು. ಅಲ್ಲದೇ ಶ್ರೀರಾಮನ ಭಕ್ತ ಶ್ರೀಕಾಂತ್‌ಗೆ ಶ್ರೀರಾಮಚಂದ್ರ ಹಾಗೂ ಸೀತಾಮಾತೆ ಭಾವಚಿತ್ರ ಕೊಡುಗೆಯಾಗಿ ನೀಡಿದರು. ಈ ವೇಳೆ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಇದ್ದರು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸದಸ್ಯರು, ಶಾಸಕರು, ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

    ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ 31 ವರ್ಷದ ಬಳಿಕ ಶ್ರೀಕಾಂತ್‌ ಪೂಜಾರಿ ಬಂಧನವಾಗಿತ್ತು. ಕರಸೇವಕನ ಬಂಧನ ಖಂಡಿಸಿ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಶ್ರೀಕಾಂತ್‌ ಪೂಜಾರಿ ಬಂಧನ ವಿವಾದ ಸ್ವರೂಪ ಪಡೆದುಕೊಂಡಿತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಟ್ವಿಸ್ಟ್- ಕರಸೇವಕನ ಮೇಲಿನ ಕ್ರಿಮಿನಲ್ ಕೇಸ್‍ಗಳೆಷ್ಟು?

    ಪ್ರಕರಣ ಕೋರ್ಟ್‌ ಮೆಟ್ಟಿಲೇರಿತು. ಬಳಿಕ ಶ್ರೀಕಾಂತ್‌ಗೆ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಇಂದು ಕರಸೇವಕನ ಬಿಡುಗಡೆಯಾಗಿದೆ.

    ಡಿಸೆಂಬರ್29 ರಂದು ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಾಂತ್‌ ಪೂಜಾರಿ ಬಂಧನವನ್ನು ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

    ಏನಿದು ಪ್ರಕರಣ?
    ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದರು.

    ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತ್ತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿದ್ದು ನಮ್ಮ ಸರ್ಕಾರ: ದಿನೇಶ್ ಗುಂಡೂರಾವ್

  • ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ: ಪರಮೇಶ್ವರ್

    ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ: ಪರಮೇಶ್ವರ್

    ರಾಮನಗರ: ಕರಸೇವಕ ಶ್ರೀಕಾಂತ್ (Shrikanth Poojary) ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G. Parameshwar) ಹೇಳಿದ್ದಾರೆ.

    16 ಕೇಸ್ ಗಳಲ್ಲಿ 15 ಕೇಸ್ ಖುಲಾಸೆ ವಿಚಾರ ಸಂಬಂಧ ಮಾಗಡಿಯಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು. ಆದರೆ ಈಗಲೂ 16 ಕೇಸ್ ಇದೆ ಅಂತ ಹೇಳಿಲ್ಲ. 16 ಕೇಸ್ ನಲ್ಲಿ ಕೆಲವು ಖುಲಾಸೆ ಆಗಿರಬಹುದು ಎಂದರು.

    ಶ್ರೀಕಾಂತ್ ಪೂಜಾರಿ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಸತ್ಯ, ಅದರ ಬಗ್ಗೆ ದಾಖಲಾತಿ ಇದೆ. ಇಂತಹ ವ್ಯಕ್ತಿಗೆ ನೀವು ಇಷ್ಟೋಂದು ಹೋರಾಟ ಮಾಡುತ್ತಿದ್ದೀರಿ. ಅನನೊಬ್ಬನೇನಾ ಹಿಂದೂ. ಹಳೆಯ 26 ಕೇಸ್ ಗಳನ್ನ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಬೇರೆ ಹಿಂದೂಗಳು ಕೂಡಾ ಇದ್ದಾರೆ. ಅವರ ಬಗ್ಗೆ ಯಾಕೆ ಹೋರಾಟ ಮಾಡ್ತಿಲ್ಲ. ಇವನೊಬ್ಬ ಶ್ರೀಕಾಂತ್ ಪೂಜಾರಿ ಅನ್ನುವ ವ್ಯಕ್ತಿ ಬಗ್ಗೆ ಇಷ್ಟೊಂದು ಹೋರಾಟ ಯಾಕೆ.? ಇದು ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹೋರಾಟ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಟ್ವಿಸ್ಟ್- ಕರಸೇವಕನ ಮೇಲಿನ ಕ್ರಿಮಿನಲ್ ಕೇಸ್‍ಗಳೆಷ್ಟು?

    ನಾವು ಕೂಡಾ ರಾಮಭಕ್ತರು ನಮ್ಮನ್ನೂ ಬಂಧನ ಮಾಡಿ ಎಂದು ಬಿಜೆಪಿ ನಾಯಕರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರ ಮೇಲೆ ಕೇಸ್ ಇದ್ರೆ ಕ್ರಮ ತೆಗೆದುಕೊಳ್ತಾರೆ. ಅವರನನ್ನೇನು ಬಿಟ್ಟು ಬಿಡೋದಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಅಶೋಕ್ ಗೂ ಒಂದೇ ಕಾನೂನು, ಪರಮೇಶ್ವರ್ ಗೂ ಒಂದೇ ಕಾನೂನು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಿಯೇ ಆಗುತ್ತೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.

  • ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

    ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

    ಹುಬ್ಬಳ್ಳಿ: 31 ವರ್ಷದ ಬಳಿಕ ರಾಮಜನ್ಮಭೂಮಿ (Ram Janambhoomi) ಹೋರಾಟದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀಕಾಂತ್‌ ಪೂಜಾರಿಗೆ (Srikanth Poojari) ಕೋರ್ಟ್‌ (Court) ಜಾಮೀನು ಮಂಜೂರು ಮಾಡಿದೆ.

    ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ.

    ಶ್ರೀಕಾಂತ್‌ ಪೂಜಾರಿ ಪರ ವಕೀಲರು ಪ್ರತಿಕ್ರಿಯಿಸಿ, ನಮಗೆ ಜಾಮೀನು ಸಿಗಬಹುದು ಎಂಬ ವಿಶ್ವಾಸವಿತ್ತು. ಇಂದು ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಯಾವ್ಯಾವ ಷರತ್ತು ವಿಧಿಸಿದ್ದಾರೆ ಎಂಬುದಕ್ಕೆ ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ನಾಳೆ ಶ್ರೀಕಾಂತ್‌ ಪೂಜಾರಿ ಅವರ ಬಿಡುಗಡೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವರೇ ಪ್ಲ್ಯಾನ್ ಮಾಡಿ ವಿಕ್ರಂ ಸಿಂಹರನ್ನ ಬಂಧಿಸಿದ್ದಾರೆ – ಪ್ರತಾಪ್‌ ಸಿಂಹ ಪರ ಹೆಚ್‌ಡಿಕೆ ಬ್ಯಾಟಿಂಗ್‌

    ಡಿಸೆಂಬರ್29 ರಂದು ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಾಂತ್‌ ಪೂಜಾರಿ ಬಂಧನವನ್ನು ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು.

     

    ಏನಿದು ಪ್ರಕರಣ?
    ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದರು.

    ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತ್ತು.

     

  • ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಟ್ವಿಸ್ಟ್- ಕರಸೇವಕನ ಮೇಲಿನ ಕ್ರಿಮಿನಲ್ ಕೇಸ್‍ಗಳೆಷ್ಟು?

    ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಟ್ವಿಸ್ಟ್- ಕರಸೇವಕನ ಮೇಲಿನ ಕ್ರಿಮಿನಲ್ ಕೇಸ್‍ಗಳೆಷ್ಟು?

    ಬೆಂಗಳೂರು: ಹುಬ್ಬಳ್ಳಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸರ್ಕಾರ ಬಿಡುಗಡೆ ಮಾಡಿದ ಅಪರಾಧ ಪಟ್ಟಿ ನೋಡಿದರೆ ಪೊಲೀಸರ ನಡೆಯ ಮೇಲೆಯೇ ಸಂಶಯ ಮೂಡತೊಡಗಿದೆ.

    ಪೊಲೀಸರ ಕಾರ್ಯವೈಖರಿ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಶ್ರೀಕಾಂತ್ ಪೂಜಾರಿ ಮೇಲೆ 16 ಕ್ರಿಮಿನಲ್ ಕೇಸ್‍ಗಳಿವೆ ಅಂತ ರಾಜ್ಯ ಸರ್ಕಾರ ಹೇಳಿತ್ತು. ಈ ಸಂಬಂಧ ಕೇಸ್ ಫೈಲ್‍ಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತ್ತು. ಆದರೆ ಪಬ್ಲಿಕ್ ಟಿವಿಗೆ ಸಿಕ್ಕಿರುವ ದಾಖಲೆಗಳ ಪ್ರಕಾರ, ಶ್ರೀಕಾಂತ್ ಪೂಜಾರಿ ಮೇಲೆ ಒಂದು ಸಕ್ರಿಯ ಪ್ರಕರಣ ಮಾತ್ರ ಇದೆ. ಉಳಿದ 15 ಪ್ರಕರಣಗಳಲ್ಲಿ ಶ್ರೀಕಾಂತ್ ಪೂಜಾರಿ ಖುಲಾಸೆಗೊಂಡಿರುವ ವಿವರ ಲಭ್ಯವಾಗಿದೆ.

    ದೊಂಬಿ ಕೇಸ್‍ಗೆ ಸಂಬಂಧಿಸಿ 31 ವರ್ಷಗಳ ಬಳಿಕ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ರು. ಇದು ದೀರ್ಘ ಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಪ್ರಕರಣ ಅಂತ ಪೊಲೀಸರು ಸಮರ್ಥನೆ ನೀಡಿದ್ದರು. ಅಲ್ಲದೇ ಆರೋಪಿಯು ತಲೆಮರೆಸಿಕೊಂಡಿದ್ದ ಅಂತಲೂ ಹೇಳಿದ್ದರು. ಆದರೆ 2004, 2009 ಹಾಗೂ 2018ರಲ್ಲಿ ಶ್ರೀಕಾಂತ್ ಪೂಜಾರಿಯನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲ್ಲ, ಕಡ್ಡಾಯ ರಜೆ ಮೇಲೆ ಹೋಗಿಲ್ಲ: ಪರಮೇಶ್ವರ್

    ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಸಿಆರ್‍ಪಿಸಿ ಕಲಂ 107ರ ಅನ್ವಯ ಮುಚ್ಚಳಿಕೆ ಬರೆಸಿಕೊಂಡು ಕಳಿಸಲಾಗಿದೆ. ಹಾಗಾದರೆ ಆ ಸಮಯದಲ್ಲಿ ಠಾಣೆಗೆ ಹಾಜರಾದರೂ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಿಲ್ಲವೇಕೆ..? ಪೊಲೀಸರ ಈ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಯಾರು ಯಾರಿಗೆ ಯಾಮಾರಿಸಿದರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಪೊಲೀಸರು ಸರ್ಕಾರವನ್ನು ಯಾಮಾರಿಸಿದರಾ..? ಅಥವಾ ಸರ್ಕಾರ ರಾಜ್ಯದ ಜನರನ್ನು ಯಾಮಾರಿಸಿತಾ ಅನ್ನೋ ಪ್ರಶ್ನೆ ಮೂಡುತ್ತದೆ.

  • ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಹು-ಧಾ ಪೊಲೀಸ್ ಕಮಿಷನರ್

    ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಹು-ಧಾ ಪೊಲೀಸ್ ಕಮಿಷನರ್

    ಹುಬ್ಬಳ್ಳಿ: ಶ್ರೀಕಾಂತ್ ಪೂಜಾರಿ (Shrikanth Poojari) ಬಂಧನಕ್ಕೆ ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಬೆನ್ನಲ್ಲೇ ಶ್ರೀಕಾಂತ್ ಪೂಜಾರಿ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಮಾತನಾಡಿದ್ದಾರೆ.

    ಬಿಜೆಪಿ ಪ್ರತಿಭಟನೆ ಹಿನ್ನೆಲೆ ಶಹರ ಠಾಣೆಗೆ ಆಗಮಿಸಿದ್ದ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು, ಶ್ರೀಕಾಂತ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್‌ಗಳಿವೆ. ಒಟ್ಟು 16 ಪ್ರಕರಣಗಳಿವೆ. ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ

    ಹುಬ್ಬಳ್ಳಿ ಶಹರ ಠಾಣೆ ಮುಂದೆ ಪ್ರತಿಭಟನೆಗೆ ಬಿಜೆಪಿಗೆ ಸದ್ಯ ಯಾವುದೇ ಅನುಮತಿ ಇಲ್ಲ. ನಾವು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದೇವೆ. ಮೆರವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ, ಬಿಜೆಪಿಯಿಂದ ಶಹರ ಠಾಣೆ ಎದುರು ಪ್ರತಿಭಟನೆ ಹಿನ್ನೆಲೆ ಠಾಣೆಗೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಭದ್ರತೆಯ ಸಿದ್ಧತೆ ವೀಕ್ಷಣೆ ಮಾಡಿದರು. ಹಿರಿಯ ಅಧಿಕಾರಿಗಳ ಜೊತೆಗೆ ಭದ್ರತೆ ಬಗ್ಗೆ ಚರ್ಚೆ ನಡೆಸಿದರು. ಮೊಬೈಲ್ ಕಮಾಂಡರ್ ಸೆಂಟರ್‌ನಲ್ಲಿ ಪ್ರತಿಭಟನಾಕಾರರ ಚಲನವಲನ ವೀಕ್ಷಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಕೇಸ್‌ – ಬುಧವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

    ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ ಠಾಣೆ ಮುಂಭಾಗ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ. ಇಂದು (ಬುಧವಾರ) ಬೆಳಗ್ಗೆ 11:30 ರ ಸುಮಾರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಕಡೆಗೆ ಧಾವಿಸುತ್ತಿದ್ದಾರೆ.

    ಏನಿದು ಶ್ರೀಕಾಂತ್‌ ಪೂಜಾರಿ ಕೇಸ್?
    ರಾಜ್ಯದಲ್ಲಿ ಬರೋಬ್ಬರಿ 31 ವರ್ಷಗಳ ಬಳಿಕ ರಾಮಜನ್ಮಭೂಮಿ (Ram Janambhoomi) ಹೋರಾಟದ ಪ್ರಕರಣಕ್ಕೆ ಮರುಜೀವ ಸಿಕ್ಕಿರುವುದು ನಾನಾ ರೀತಿಯ ಚರ್ಚೆಗೆ ಆಸ್ಪದವಾಗಿದೆ.

    ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದಾರೆ. ಇದನ್ನೂ ಓದಿ: ಮಸೀದಿಯವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ, ದೇವಿ ದರ್ಶನಕ್ಕೆ ಸಮಯವಿಲ್ಲ: ಸಿದ್ದು ವಿರುದ್ಧ ಬಿಜೆಪಿ ಕಿಡಿ

    ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರವೇ ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ, ಪ್ರಕರಣದ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.