Tag: ಶ್ರೀಕಾಂತ್ ಒಡೆಲಾ

  • ನಾನಿ ನಟನೆಯ 33ನೇ ಸಿನಿಮಾ ಅನೌನ್ಸ್ : ಒಂದಾಯ್ತು ‘ದಸರಾ’ ಜೋಡಿ

    ನಾನಿ ನಟನೆಯ 33ನೇ ಸಿನಿಮಾ ಅನೌನ್ಸ್ : ಒಂದಾಯ್ತು ‘ದಸರಾ’ ಜೋಡಿ

    ಸರಾ ಮೂಲಕ ಧಮಾಕ ಎಬ್ಬಿಸಿದ್ದ ನ್ಯಾಚುರಲ್ ಸ್ಟಾರ್ ನಾನಿ (Nani) ಮತ್ತೊಮ್ಮೆ ಅದೇ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ (New film)  ಘೋಷಣೆಯಾಗಿದೆ.  ದಸರಾಗೆ ಆಕ್ಷನ್ ಕಟ್ ಹೇಳಿ ಮೊದಲ ಚಿತ್ರದಲ್ಲೇ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಎರಡನೇ ಬಾರಿಗೆ ಒಂದಾಗಿದ್ದಾರೆ. ಈ ಕ್ರೇಜಿ ಕಾಂಬೋದ ಹೊಸ ಪ್ರಾಜೆಕ್ಟ್ ಫಸ್ಟ್ ಲುಕ್ ರಿವೀಲ್ ಆಗಿದೆ.

    ಬಾಯಲ್ಲಿ ಸಿಗರೇಟ್, ಸಖತ್ ರಗಡ್ ಲುಕ್ ನಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಪೋಸ್ಟರ್ ನಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ಕೂಡ ತೋರಿಸಲಾಗಿದೆ. ಕ್ರಾಂತಿಯು ಪ್ರಾರಂಭವಾಗುವ ಮೊದಲು ಹಿಂಸಾಚಾರವು ಅದರ ಸರಿಯಾದ ರೂಪವನ್ನು ಪಡೆಯುತ್ತದೆ. ಮತ್ತೊಂದು ಪವರ್ ಪ್ಯಾಕ್ಡ್ ಆಕ್ಷನ್ ನೊಂದಿಗೆ ನಾನಿ ಪರಿಚಯ ಎಂದು ಶ್ರೀಕಾಂತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ.

    ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ (SLV ಸಿನಿಮಾಸ್) ನಡಿ ಸುಧಾಕರ್ ಚೆರುಕುರಿ ನಾನಿ 33ನೇ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.  ನಾನಿ ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2025ಕ್ಕೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ‘ದಸರಾ’ ಸಿನಿಮಾ ತೆರೆಕಂಡು ಒಂದು ವರ್ಷವಾಗಿದೆ. ಈ ಖುಷಿಯಲ್ಲಿ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಸದ್ಯ ನಾನಿ 33 ಎಂದು ಟೈಟಲ್ ಇಡಲಾಗಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಮಾಸ್ ಆಕ್ಷನ್ ಎಂಟರ್ ಟೈನರ್ ದಸರಾ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿತ್ತು.

  • ನೂರು ಕೋಟಿ ಕ್ಲಬ್ ಸೇರಿದ ‘ದಸರಾ’: ತಂಡಕ್ಕೆ ಕಾರು, ಚಿನ್ನ ಗಿಫ್ಟ್

    ನೂರು ಕೋಟಿ ಕ್ಲಬ್ ಸೇರಿದ ‘ದಸರಾ’: ತಂಡಕ್ಕೆ ಕಾರು, ಚಿನ್ನ ಗಿಫ್ಟ್

    ನ್ಯಾಚುರಲ್ ಸ್ಟಾರ್ ನಾನಿ (Nani) ದಸರಾ (Dasara) ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಕೇವಲ ಆರು ದಿನದಲ್ಲಿಯೇ ಶತ ಕೋಟಿ ಬಾಚಿಕೊಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ವಿಶ್ವಾದ್ಯಂತ ತೆರೆಕಂಡ ದಸರಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನೂರು ಕೋಟಿ ಕ್ಲಬ್ ಸೇರಿದ ನಾನಿ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ನಾನಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ದಸರಾಗೆ ಯುವ ಪ್ರತಿಭೆ ಶ್ರೀಕಾಂತ್ ಒಡೆಲಾ (Srikanth Odela) ಆಕ್ಷನ್ ಕಟ್ ಹೇಳಿದ್ದರು. ಕಲ್ಲಿದ್ದಲು ಗಣಿಯ ಸುತ್ತ ನಡೆಯುವ ಗ್ರಾಮೀಣ ಸೊಗಡಿನ ಕತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ (Keerthi Suresh) ನಾಯಕಿಯಾಗಿ ನಟಿಸಿದ್ದರು. ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ‘ಕಿರಿಕ್ ಪಾರ್ಟಿ’ ರಶ್ಮಿಕಾ ಮಂದಣ್ಣಗೆ ಶುಭಕೋರಿದ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ

    ಎಸ್ ಎಲ್ ವಿ ಕ್ರಿಯೇಷನ್ ನಡಿ ಸುಧಾಕರ್ ಚೆರುಕೂರಿ ಅದ್ಧೂರಿಯಾಗಿ ದಸರಾ ಸಿನಿಮಾ ನಿರ್ಮಿಸಿದ್ದರು. ಚಿತ್ರ ಅಭೂತಪೂರ್ವ ಯಶಸ್ಸು ಕಂಡಿರುವ ಖುಷಿಯಲ್ಲಿರುವ ನಿರ್ಮಾಪಕರು‌ ಹೈದ್ರಾಬಾದ್ ಕರಿಮಾನಗರದಲ್ಲಿ ಸಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ದುಬಾರಿ ಮೊತ್ತದ ಬಿಎಂಡಬ್ಲ್ಯೂ ಕಾರು ಗಿಫ್ಟ್ ನೀಡಿದ್ದು, ದಸರಾಗೆ ಕೆಲಸ ಮಾಡಿದ ಇಡೀ ತಂಡಕ್ಕೆ ತಲಾ 10 ಗ್ರಾಂ ಚಿನ್ನದ ನಾಣ್ಯವನ್ನು ನೀಡಿದ್ದಾರೆ.

  • ಮೊದಲ ದಿನವೇ 38 ಕೋಟಿ ಬಾಚಿದ ‘ದಸರಾ’ ಸಿನಿಮಾ

    ಮೊದಲ ದಿನವೇ 38 ಕೋಟಿ ಬಾಚಿದ ‘ದಸರಾ’ ಸಿನಿಮಾ

    ನಾನಿ (Nani) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ದಸರಾ ಬಾಕ್ಸಾಫೀಸ್ (Box Office) ಲೂಟಿ ಮಾಡಿದೆ. ಮೊದಲ ದಿನವೆ ದಾಖಲೆ ಮೊತ್ತದ ಗಳಿಕೆ ಕಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ತೆರೆಗೆ ಬಂದ ದಸರಾ ವಿಶ್ವಾದ್ಯಂತ ಬರೋಬ್ಬರಿ 38 ಕೋಟಿಗೂ ಅಧಿಕ ಹಣ ದೋಚಿದೆ. ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಾನಿ ಮೊದಲ ಬಾರಿ ಔಟ್ ಅಂಡ್ ಔಟ್ ಮಾಸ್ ಲುಕ್ ನಲ್ಲಿ, ರಗಡ್ ಆಗಿ ಕಾಣಿಸಿಕೊಂಡಿದ್ದರು. ನಾನಿ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ನಾನೀಸ್ ದಸರಾ ಸಿನಿಮಾ ವಿದೇಶದಲ್ಲಿಯೂ ಜಾದು ಮಾಡಿದ್ದು, ಅಮೆರಿಕದಲ್ಲಿ ಭರ್ಜರಿ ಓಪನಿಂಗ್ ಕಂಡಿದೆ. ನಾನಿ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಮೈಲೇಜ್ ಸಿಕ್ಕಂತಾಗಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದೆ. ವೀಕೆಂಡ್ ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಮೊದಲ ವಾರಾಂತ್ಯಕ್ಕೆ ಏನಿಲ್ಲವೆಂದರೂ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ದಸರಾ ಸಿನಿಮಾ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತೆ  ಕೀರ್ತಿ ಸುರೇಶ್ ನಾನಿಗೆ ಜೋಡಿಯಾಗಿ ನಟಿಸಿದ್ದಾರೆ. ಕನ್ನಡದ ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಸೂರಿ ಎಂಬ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಸುಧಾಕರ್ ಚೆರಕೂರಿ ನಿರ್ಮಿಸಿರುವ ದಸರಾಗೆ ಸಂತೋಷ್ ನಾರಾಯಣನ್  ಸಂಗೀತ ನೀಡಿದ್ದು, ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ.

  • ‘ದಸರಾ’ ಟೀಸರ್ ಬಿಡುಗಡೆ ಮಾಡಿದ ನಿರ್ದೇಶಕ ಎಸ್. ಎಸ್ ರಾಜಮೌಳಿ

    ‘ದಸರಾ’ ಟೀಸರ್ ಬಿಡುಗಡೆ ಮಾಡಿದ ನಿರ್ದೇಶಕ ಎಸ್. ಎಸ್ ರಾಜಮೌಳಿ

    ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಮಾಸ್ ಟೀಸರ್ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಸ್. ಎಸ್ ರಾಜಮೌಳಿ ತೆಲುಗು ಟೀಸರ್ ಬಿಡುಗಡೆ ಮಾಡಿದ್ದು, ಶಾಹಿದ್ ಕಪೂರ್, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್, ಧನುಷ್,  ಹಿಂದಿ, ಕನ್ನಡ, ಮಲಯಾಳಂ, ತಮಿಳು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಹೆಚ್ಚು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಟೀಸರ್ ತುಣುಕು ಸಾಕ್ಷಿಯಾಗಿದೆ.

    ಚಿತ್ರಕ್ಕಾಗಿ ನ್ಯಾಚುರಲ್ ಸ್ಟಾರ್ ನಾನಿ ಮೇಕೋವರ್, ರಗಡ್ ಲುಕ್ ಟೀಸರ್ ನಲ್ಲಿ ಗಮನ ಸೆಳೆಯುತ್ತಿದೆ. ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಟೀಸರ್ ಝಲಕ್ ನಲ್ಲಿ ಅನಾವರಣ ಮಾಡಲಾಗಿದ್ದು ಪ್ರೇಕ್ಷಕರಲ್ಲಿ ಟೀಸರ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟ ನ್ಯಾಚುರಲ್ ಸ್ಟಾರ್ ನಾನಿ ಕಳೆದ ವರ್ಷ ತೆಲುಗಿನಲ್ಲಿ ಆರ್ ಆರ್  ಆರ್ ಕನ್ನಡದಲ್ಲಿ ಕೆಜಿಎಫ್ 2 , ಕಾಂತಾರ ಸಿನಿಮಾಗಳ ಸೂಪರ್ ಹಿಟ್ ಆಗಿವೆ ಈ ವರ್ಷ ದಸರಾ ಆ ಸಿನಿಮಾಗಳ ಲಿಸ್ಟ್ ಗೆ ಸೇರಲಿದೆ ಎಂದು  ಗರ್ವದಿಂದ ಹೇಳುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ರು.

    ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೆಗಾ ಪ್ರಾಜೆಕ್ಟ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ ಟೀಸರ್ ಮೂಲಕ ಮಾರ್ಚ್ 30ರಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಆಮಂತ್ರಣ ನೀಡಿದೆ. ಇದನ್ನೂ ಓದಿ: `ಸಾಕ್ಷಾತ್ಕಾರ’ ನಟಿ ಜಮುನಾ ಬಯೋಪಿಕ್‌ನಲ್ಲಿ ತಮನ್ನಾ ಭಾಟಿಯಾ

    ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k