Tag: ಶ್ರಾವ್ಯ ಗಣಪತಿ

  • ಬ್ಯಾಚುಲರ್ ಹುಡುಗಿಯರ ನಾಯಕಿಯಂತೆ ಈ ರೂಪಾ

    ಬ್ಯಾಚುಲರ್ ಹುಡುಗಿಯರ ನಾಯಕಿಯಂತೆ ಈ ರೂಪಾ

    ಬೋಲ್ಡ್ ಪಾತ್ರಗಳ ಮೂಲಕವೇ ಈವರೆಗೂ ಗುರುತಿಸಿಕೊಂಡ ನಟಿ ರೂಪಾ ನಟರಾಜ್. ‘ಗಾಲಿ’, ‘ಮಿಸ್ ಮಲ್ಲಿಗೆ’ ಸಿನಿಮಾ ನೋಡಿದ ಪಡ್ಡೆಗಳಂತೂ ರೂಪಾ ಹೊಡೆದ ಡೈಲಾಗ್ ಗೆ ಫಿದಾ ಆಗಿದ್ದರು. ತಮಗೆ ಪದೇ ಪದೇ ಬೋಲ್ಡ್ ಪಾತ್ರಗಳೇ ಬರುತ್ತಿವೆ ಎಂದು ಬೇಸರಗೊಂಡು ಕೆಲ ಕಾಲ ಸಿನಿಮಾ ರಂಗದಿಂದಲೇ ದೂರ ಉಳಿದಿದ್ದರು. ಆ ಪಾತ್ರಗಳನ್ನು ಜನರಿಂದ ಮರೆಸಲು ಸಾಕಷ್ಟು ಕಷ್ಟ ಪಟ್ಟರು. ಇದೀಗ ಲೀಸ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರಿಗೆ ಎದುರಾಗಿದ್ದಾರೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಈ ಸಿನಿಮಾದಲ್ಲಿ ಹಸಿಹಸಿ ಭಾವನೆಗಳ ಕಥೆಯೇ ಪ್ರಧಾನವಾಗಿದ್ದರೂ, ಪ್ರೇಕ್ಷಕರು ತಮ್ಮ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಅವರದ್ದು. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಐವರು ಬ್ಯಾಚುಲರ್ ಹುಡುಗಿಯರ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ಈವರೆಗೂ ಬ್ಯಾಚುಲರ್ ಹುಡುಗರ ಕಥೆಯನ್ನು ಕೇಳಿದ್ದೇವೆ. ಈ ಸಿನಿಮಾದ ಮೂಲಕ ಬ್ಯಾಚುಲರ್ ಹುಡುಗಿಯರ ಜೀವನವನ್ನು ನೋಡಬಹುದಂತೆ. ಇದನ್ನೂ ಓದಿ : ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

    ಈ ಸಿನಿಮಾದಲ್ಲಿ ಹುಡುಗಿಯರೇ ಪ್ರಧಾನ. ಹಾಗಾಗಿ ನಾಯಕನ ಪಾತ್ರವಿಲ್ಲ. ತಮ್ಮಿಷ್ಟದಂತೆ ಬದುಕುವ ಐವರು ಹುಡುಗಿಯರ ಹಿಂದೆ ಒಂದೊಂದು ಕಥೆಯಿದೆಯಂತೆ. ಅದೊಂದು ರೀತಿಯಲ್ಲಿ ವ್ಯಸನದ ಕಥೆ ಎನ್ನುತ್ತದೆ ಚಿತ್ರತಂಡ. ಒಂದೇ ಮನೆಯಲ್ಲಿ ಇರುವ ಈ ಹುಡುಗಿಯರು ಆ ವ್ಯಸನದಿಂದ ಹೇಗೆ ಮುಕ್ತರಾಗುತ್ತಾರೆ ಎನ್ನುವುದು ಸಿನಿಮಾದ ಜೀವಾಳ. ಇದನ್ನೂ ಓದಿ : ಬಾಲಿವುಡ್ ನಟಿ ಹುಮಾ ಖುರೇಶಿಗೆ ಬೆಂಗಳೂರಿನ ಕೋರಮಂಗಲದ ನಂಟು

    ಮುತ್ತು ಈ ಸಿನಿಮಾದ ನಿರ್ದೇಶಕ. ಶ್ರಾವ್ಯ ಗಣಪತಿ, ಮೇಘನಾ ರಾವ್, ತೇಜಸ್ವಿನಿ, ಪಾರ್ವತಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.