Tag: ಶ್ರದ್ಧಾ ಕಪೂರ್

  • ‘ಸ್ತ್ರೀ 2’ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ ಒಲಿದ ಅದೃಷ್ಟ- ನಟಿಗೆ ಬಿಗ್ ಚಾನ್ಸ್

    ‘ಸ್ತ್ರೀ 2’ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ ಒಲಿದ ಅದೃಷ್ಟ- ನಟಿಗೆ ಬಿಗ್ ಚಾನ್ಸ್

    ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್‌ಗೆ (Shraddha Kapoor) ‘ಸ್ತ್ರೀ 2’ (Stree 2) ಸಕ್ಸಸ್ ಬಳಿಕ ಬಂಪರ್ ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ. ಹೀಗಿರುವಾಗ ಈಗ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ಚಿತ್ರಕ್ಕೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು

    ಸಕ್ಸಸ್ ಸಿಕ್ತು ಎಂದು ಹಿಗ್ಗದೇ ಸಿನಿಮಾ ಆಯ್ಕೆಯಲ್ಲಿ ಶ್ರದ್ಧಾ ಕಪೂರ್ ಚ್ಯೂಸಿಯಾಗಿದ್ದಾರೆ. ಉತ್ತಮ ಕಥೆ ಹುಡುಕಾಟದಲ್ಲಿದ್ದ ಅವರು ‘ತುಂಬದ್’ ಡೈರೆಕ್ಟರ್ ರಾಹಿ ಅನಿಲ್ ಬರ್ವೆ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಈ ಚಿತ್ರದ ಪ್ರಿ ಪ್ರೊಡಕ್ಷನ್‌ಗೆ ಸುಮಾರು 3ರಿಂದ 4 ತಿಂಗಳು ಬೇಕಿದೆ. 2025ರ ದ್ವಿತೀಯಾರ್ಧದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಈ ಚಿತ್ರವನ್ನು ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

    ಈ ಚಿತ್ರ ಬಿಟ್ಟು ಏಕ್ತಾ ಕಪೂರ್ ಜೊತೆ ಶ್ರದ್ಧಾ ಮತ್ತೊಂದು ಸಿನಿಮಾ ಕೂಡ ಮಾಡಲಿದ್ದಾರೆ. ಚೆಂದದ ಲವ್ ಸ್ಟೋರಿ ಹೇಳಲು ಶ್ರದ್ಧಾ ರೆಡಿಯಾಗಿದ್ದಾರೆ. ಈ ಸಿನಿಮಾಗೆ ‘ಆಶಿಕಿ 2’ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶನ ಮಾಡಲಿದ್ದಾರೆ. ಇದರೊಂದಿಗೆ ಕರಣ್ ಜೋಹರ್ ನಿರ್ಮಾಣದ ಸಿನಿಮಾ, ‘ಸ್ತ್ರೀ  ಪಾರ್ಟ್ 3’ ಕೂಡ ನಟಿಯ ಕೈಯಲ್ಲಿದೆ. ಒಟ್ನಲ್ಲಿ ಶ್ರದ್ಧಾಗೆ ಭರ್ಜರಿ ಅವಕಾಶಗಳು ಸಿಕ್ತಿವೆ. ನಟಿಯ ಚಿತ್ರದ ಲಿಸ್ಟ್ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?

    ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?

    ‘ಸ್ತ್ರೀ 2′ (Stree 2) ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಶ್ರದ್ಧಾ ಕಪೂರ್‌ಗೆ (Shraddha Kapoor) ಬೇಡಿಕೆ ಹೆಚ್ಚಾಗಿದೆ. ಹಾಗಂತ ಬಂದ ಸಿನಿಮಾ ಆಫರ್ಸ್‌ಗಳನ್ನು ಅವರು ಒಪ್ಪಿಕೊಳ್ತಿಲ್ಲ. ಹೀಗಿರುವಾಗ ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

    ಶ್ರದ್ಧಾ ಕಪೂರ್ ಅವರು ‘ಸ್ತ್ರೀ 2’ ಸಿನಿಮಾ ಮೂಲಕ ಸಕ್ಸಸ್ ಕಂಡ ಮೇಲೆ ನಾಯಕಿಯಾಗಿ ಮತ್ತು ಸ್ಪೆಷಲ್ ಹಾಡುಗಳಿಗೆ ಹೆಜ್ಜೆ ಹಾಕಲು ಬುಲಾವ್ ಬರುತ್ತಿದೆ. ಈ ಹಿಂದೆ ‘ಪುಷ್ಪ 2’ಗೆ ನಟಿಯನ್ನು ಕೇಳಲಾಗಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಆಗದೇ ಇದ್ದಿದ್ದಕ್ಕೆ ಅವರನ್ನು ಕೈಬಿಡಲಾಯಿತು ಎಂಬ ಸುದ್ದಿ ಹರಿದಾಡಿತ್ತು. ಇದೀಗ ‘ವಾರ್ 2’ (War 2) ಚಿತ್ರದಲ್ಲಿ ಶ್ರದ್ಧಾ ಹೆಸರು ಸದ್ದು ಮಾಡುತ್ತಿದೆ.

    ಜ್ಯೂ.ಎನ್‌ಟಿಆರ್, ಹೃತಿಕ್ ರೋಷನ್ (Hrithik Roshan) ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಶ್ರದ್ಧಾರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ನಟಿ ಗ್ರೀನ್ ಸಿಗ್ನಲ್ ಕೊಟ್ರಾ? ಚಿತ್ರತಂಡದ ಭಾಗವಾಗ್ತಿದ್ದಾರಾ? ಎಂಬುದು ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

  • ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಶ್ರದ್ಧಾ ಕಪೂರ್ ಡ್ಯಾನ್ಸ್?

    ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಶ್ರದ್ಧಾ ಕಪೂರ್ ಡ್ಯಾನ್ಸ್?

    ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ (Pushpa 2) ಡಿ.6ರಂದು ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಸಿಕ್ಕಿದೆ. ಶ್ರದ್ಧಾ ಕಪೂರ್ (Shraddha Kapoor) ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ‘ಪುಷ್ಪ 1’ರಲ್ಲಿ ಸಮಂತಾ ಡ್ಯಾನ್ಸ್ ಮಾಡಿದ್ದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದ ಗೆಲುವಿಗೆ ಕಥೆಯ ಜೊತೆ ಸಮಂತಾ ಡ್ಯಾನ್ಸ್ ಪ್ಲಸ್ ಆಗಿತ್ತು. ಹಾಗಾಗಿಯೇ ಪುಷ್ಪ 2ರಲ್ಲೂ ಇದನ್ನೇ ಫಾರ್ಮುಲಾ ಬಳಸುತ್ತಿದ್ದಾರೆ. ಈ ಹಿಂದೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಜಾನ್ವಿ ಕಪೂರ್, ತೃಪ್ತಿ ದಿಮ್ರಿ, ಶ್ರೀಲೀಲಾ ಹೀಗೆ ಅನೇಕರ ಹೆಸರು ಸದ್ದು ಮಾಡಿತ್ತು. ಆದರೆ ಕೂಡ ಫೈನಲ್ ಆಗಿರಲಿಲ್ಲ. ಇದನ್ನೂ ಓದಿ:‘ಮನಸಾರೆ ನಿನ್ನ’ ಎನ್ನುತ್ತಾ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ನಿವೇದಿತಾ ಗೌಡ

    ಇದೀಗ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶ್ರದ್ಧಾಗೆ (Shraddha Kapoor) ಚಿತ್ರತಂಡ ಮಣೆ ಹಾಕಿದೆ. ಚಿತ್ರದಲ್ಲಿ ನಟಿಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕೇಳಲಾಗಿದೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದು ಅದೆಷ್ಟರ ಮಟ್ಟಿಗೆ ನಿಜ? ಕಾದುನೋಡಬೇಕಿದೆ. ಸದ್ಯ ‘ಪುಷ್ಪ 2’ ಚಿತ್ರದ ಜೊತೆ ಶ್ರದ್ಧಾ ಹೆಸರು ತಳುಕು ಹಾಕಿಕೊಂಡು ವಿಚಾರ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಮ್ಯಾರೇಜ್‌ ಪ್ಲ್ಯಾನಿಂಗ್‌ ಬಗ್ಗೆ ಬಾಯ್ಬಿಟ್ಟ ಶ್ರದ್ಧಾ ಕಪೂರ್

    ಮ್ಯಾರೇಜ್‌ ಪ್ಲ್ಯಾನಿಂಗ್‌ ಬಗ್ಗೆ ಬಾಯ್ಬಿಟ್ಟ ಶ್ರದ್ಧಾ ಕಪೂರ್

    ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ನಟನೆಯ ‘ಸ್ತ್ರೀ 2’ (Stree 2) ಸಿನಿಮಾ ಸಕ್ಸಸ್ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಮಾತ್ರವಲ್ಲ ಪರಭಾಷೆಗಳಿಂದಲೂ ಅವರಿಗೆ ಬುಲಾವ್ ಬರುತ್ತಿದೆ. ಇದೀಗ ಸಂದರ್ಶನವೊಂದರಲ್ಲಿ ಲವ್ ಲೈಫ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸಂಗಾತಿ ಕುರಿತು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ತೆಲುಗು ನಟ ನಾರಾ ರೋಹಿತ್ ಜೊತೆ ಸಿರೀಶ ಲೆಲ್ಲಾ ನಿಶ್ಚಿತಾರ್ಥ

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ಶ್ರದ್ಧಾ, ರಿಲೇಷನ್‌ಶಿಪ್ ಬಗ್ಗೆ ಕೇಳಿದಾಗ ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ಉತ್ತರಿಸಿದ್ದಾರೆ. ನಟಿ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಆದರೆ ನನ್ನ ಸಂಗಾತಿಯೊಂದಿಗೆ ಸಮಯ ಕಳೆಯುವುದು, ಸಿನಿಮಾ ನೋಡುವುದು, ಡಿನ್ನರ್ ಹೋಗುವುದು ಅಥವಾ ಟ್ರಾವೆಲ್ ಮಾಡುವುದು ನನಗೆ ತುಂಬಾ ಇಷ್ಟ ಎಂದು ಶ್ರದ್ಧಾ ಹೇಳಿದ್ದಾರೆ. ಅವಶ್ಯವಾಗಿ ನನಗೆ ಮದುವೆ ಮೇಲೆ ತುಂಬಾ ನಂಬಿಕೆ ಇದೆ. ಆದರೆ ಸರಿಯಾದ ವ್ಯಕ್ತಿ ಸಿಗುವುದು ಮುಖ್ಯ ಎಂದಿದ್ದಾರೆ.

    ಇನ್ನು ಕಳೆದ ವರ್ಷ ಶ್ರದ್ಧಾ ಕಪೂರ್ ಅವರ ಹೆಸರು ಬರಹಗಾರ ರಾಹುಲ್ ಮೋದಿ ಅವರೊಂದಿಗೆ ಸದ್ದು ಮಾಡಿತ್ತು. ಅದರಂತೆ ಇಬ್ಬರೂ ಕೂಡ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಇದರ ನಂತರ, ಶ್ರದ್ಧಾ ಕಪೂರ್ ತನ್ನ ಇನ್ಸ್ಟಾಗ್ರಾಂ ಖಾತೆಯಿಂದ ರಾಹುಲ್ ಅವರನ್ನು ಅನ್ ಫಾಲೋ ಮಾಡಿದಾಗ ಅವರ ಬ್ರೇಕಪ್ ಸುದ್ದಿ ಬೆಳಕಿಗೆ ಬಂದಿತ್ತು. ಆದರೆ ಇದರ ಬಗ್ಗೆಯೂ ಈ ಜೋಡಿ ಕ್ಲ್ಯಾರಿಟಿ ನೀಡಿರಲಿಲ್ಲ.

  • ಬಂಗಾರದ ಬೆಳೆ ತೆಗೆದ ‘ಸ್ತ್ರೀ 2’- 11 ದಿನದಲ್ಲಿ ವಿಶ್ವದಾದ್ಯಂತ 560 ಕೋಟಿ ಗಳಿಕೆ ಮಾಡಿದ ಶ್ರದ್ಧಾ ಕಪೂರ್ ಚಿತ್ರ

    ಬಂಗಾರದ ಬೆಳೆ ತೆಗೆದ ‘ಸ್ತ್ರೀ 2’- 11 ದಿನದಲ್ಲಿ ವಿಶ್ವದಾದ್ಯಂತ 560 ಕೋಟಿ ಗಳಿಕೆ ಮಾಡಿದ ಶ್ರದ್ಧಾ ಕಪೂರ್ ಚಿತ್ರ

    ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ (Stree 2) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ರಿಲೀಸ್ ಆದ 11 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 560 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ‘ಸ್ತ್ರೀ 2’ ಸಿನಿಮಾ ದಾಖಲೆ ಬರೆದಿದೆ. ಇದನ್ನೂ ಓದಿ:ರಜನಿಯಿಂದಾಗಿ ಹೊಸಬರಿಗೆ ಅವಕಾಶ ಸಿಗ್ತಿಲ್ಲ: ದೊರೈ ಸಿಡಿಸಿದ ಬಾಂಬ್

    ಚಿತ್ರಮಂದಿರಲ್ಲಿ ದೆವ್ವದ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ (Shraddha Kapoor) ನಟನೆಯ ಈ ಚಿತ್ರದಿಂದ ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ ಆಗಿದೆ. ‘ಸ್ತ್ರೀ 2’ ಚಿತ್ರವು 11 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 560 ಕೋಟಿ ರೂ. ಮತ್ತು ಭಾರತದಲ್ಲಿ 402 ಕೋಟಿ ರೂ. ಕಲೆಕ್ಷನ್ ಮಾಡಿರುವ ಬಗ್ಗೆ ಖುದ್ದು ‘ಸ್ತ್ರೀ 2’ ಸಿನಿಮಾದ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಂಸ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

     

    View this post on Instagram

     

    A post shared by Maddock Films (@maddockfilms)

    ಈ ಸಿನಿಮಾದ ಗೆಲುವಿನಿಂದ ಶ್ರದ್ಧಾಗೂ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ಮತ್ತು ರಾಜ್‌ಕುಮಾರ್ ರಾವ್ (Rajkumar Rao) ನಟನೆಯ ಜೊತೆ ತಮನ್ನಾ ಐಟಂ ಡ್ಯಾನ್ಸ್‌ಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಅಭಿಮಾನಿಗಳು ಮುಗಿಬಿದ್ದು ಥಿಯೇಟರ್‌ನಲ್ಲಿ ಸಿನಿಮಾ ನೋಡ್ತಿದ್ದಾರೆ.

    ‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ, ‘ಸ್ತ್ರೀ 2’ ಸಿನಿಮಾ ಆ.15ರಂದು ಬಿಡುಗಡೆಯಾಯಿತು.

  • ‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ

    ‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ

    ‘ಸ್ತ್ರೀ 2′ (Stree 2) ಸಿನಿಮಾದ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ (Shraddha Kapoor) ಡಿಮ್ಯಾಂಡ್ ಹೆಚ್ಚಾಗಿದೆ. ಹಿಂದಿ ಮಾತ್ರವಲ್ಲ ಸೌತ್‌ನಿಂದಲೂ ‘ಆಶಿಕಿ 2’  ನಟಿಗೆ ಬುಲಾವ್ ಬರುತ್ತಿದೆ. ಹೃತಿಕ್ ರೋಷನ್ (Hrithik Roshan) ಮುಂದಿನ ಸಿನಿಮಾಗೆ ಶ್ರದ್ಧಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ:ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ ಆದ ಡಾಲಿ

    ಸಕ್ಸಸ್‌ಫುಲ್ ಸರಣಿ ‘ಕ್ರಿಶ್ 4’ಗೆ (Krrish 4) ಸಿನಿಮಾ ಬರುವ ಬಗ್ಗೆ ಈಗಾಗಲೇ ಅನೌನ್ಸ್ ಆಗಿದೆ. ಹೃತಿಕ್ ರೋಷನ್ ಜೊತೆ ‘ಸ್ತ್ರೀ 2’ ಚಿತ್ರದ ನಾಯಕಿ ಶ್ರದ್ಧಾ ನಟಿಸಿದರೆ ಸೂಕ್ತ ಎಂದು ಚಿತ್ರತಂಡ ನಟಿಯನ್ನು ಸಂಪರ್ಕಿಸಿದೆ. ಶ್ರದ್ಧಾ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎಂಬುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ. ಈ ಕುರಿತು ಚಿತ್ರತಂಡದಿಂದಲೇ ಅಫಿಷಿಯಲ್ ಅನೌನ್ಸ್‌ಮೆಂಟ್‌ ಆಗುವವರೆಗೂ ಕಾಯಬೇಕಿದೆ.

    ಇತ್ತೀಚೆಗಷ್ಟೇ ಶ್ರದ್ಧಾ ಸಂದರ್ಶನವೊಂದರಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಎಂಬುದಕ್ಕಿಂತ ನನಗೆ ಕಥೆ ಮತ್ತು ನನ್ನ ಪಾತ್ರದ ಪ್ರಾಮುಖ್ಯತೆ ಮುಖ್ಯ ಎಂದು ಹೇಳಿಕೆ ನೀಡಿದ್ದರು. ನಟಿಸುವ ಪಾತ್ರದಲ್ಲಿ ನಟನೆಗೆ ಸ್ಕೋಪ್ ಇದೆ ಅಂದರೆ ಆ ಸಿನಿಮಾದಲ್ಲಿ ನಟಿಸಲು ಸಿದ್ಧ ಎಂದಿದ್ದರು. ಈಗ ಹೃತಿಕ್ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿರೋದಕ್ಕೆ ನಟಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ಮೊದಲ ಬಾರಿಗೆ ಜೋಡಿಯಾಗುತ್ತಿರುವ ಹೃತಿಕ್‌ ಮತ್ತು ಶ್ರದ್ಧಾ ಸಿನಿಮಾ ನೋಡಲು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

    ಇನ್ನೂ ರಾಜ್‌ಕುಮಾರ್ ರಾವ್ ಜೊತೆಗಿನ ‘ಸ್ತ್ರೀ 2’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 300 ಕೋಟಿ ರೂ. ಗಳಿಕೆ ಮಾಡುವತ್ತ ಸಿನಿಮಾ ಮುನ್ನುಗ್ಗುತ್ತಿದೆ. ಈ ಚಿತ್ರದ ನಟಿಯ ಅದೃಷ್ಟ ಬದಲಾಗಿದೆ.

  • ಶಾರುಖ್, ಸಲ್ಮಾನ್, ಆಮೀರ್ ಖಾನ್ ಜೊತೆ ನಟಿಸದಿರಲು ಕಾರಣ ಬಿಚ್ಚಿಟ್ಟ ಶ್ರದ್ಧಾ ಕಪೂರ್

    ಶಾರುಖ್, ಸಲ್ಮಾನ್, ಆಮೀರ್ ಖಾನ್ ಜೊತೆ ನಟಿಸದಿರಲು ಕಾರಣ ಬಿಚ್ಚಿಟ್ಟ ಶ್ರದ್ಧಾ ಕಪೂರ್

    ‘ಆಶಿಕಿ 2′ ಬೆಡಗಿ ಶ್ರದ್ಧಾ ಕಪೂರ್ (Shraddha Kapoor) ಸದ್ಯ ‘ಸ್ತ್ರೀ 2’ (Stree 2)  ಸಿನಿಮಾದ ಯಶಸ್ಸಿನ ನಂತರ ಬೇಡಿಕೆಯ ನಟಿಯಾಗಿದ್ದಾರೆ. ಸಕ್ಸಸ್ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್, ಸಲ್ಮಾನ್, ಆಮೀರ್ ಖಾನ್ ಜೊತೆ ಯಾಕೆ ನಟಿಸಿಲ್ಲ ಎಂದು ನಟಿ ಮಾತನಾಡಿದ್ದಾರೆ. ಸ್ಟಾರ್‌ ಹೀರೋ ಎಂಬುದಕ್ಕಿಂತ ನನ್ನ ಪಾತ್ರದ ಪಾಮುಖ್ಯತೆ ಮುಖ್ಯ ಎಂದು ಶ್ರದ್ಧಾ ಮಾತನಾಡಿದ್ದಾರೆ. ಇದನ್ನೂ ಓದಿ:1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

    ಸೂಪರ್ ಸ್ಟಾರ್‌ಗಳ ಸಿನಿಮಾ ಎಂಬುದಕ್ಕಿಂತ ತಮಗೆ ಸಿಕ್ಕ ಪಾತ್ರಕ್ಕೆ ಅದೆಷ್ಟು ಪ್ರಾಮುಖ್ಯತೆ ಇದೆ ಎಂಬುದು ನನಗೆ ಮುಖ್ಯವಾಗುತ್ತದೆ ಎಂದಿದ್ದಾರೆ ಶ್ರದ್ಧಾ. ಈ ಹಿಂದೆ ಅವಕಾಶಗಳು ಬಂದಾಗ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಎಂದು ತಿಳಿದು ರಿಜೆಕ್ಟ್ ಮಾಡಿರೋದಾಗಿ ತಿಳಿಸಿದ್ದಾರೆ. ಶಾರುಖ್, ಸಲ್ಮಾನ್ (Salman Khan) ಮತ್ತು ಆಮೀರ್ ಖಾನ್ (Aamir Khan) ಜೊತೆ ನಟಿಸುವ ಆಫರ್ ಸಿಕ್ಕರೂ ಕೂಡ ಆಕ್ಟ್ ಮಾಡದಿರಲು ಇದೇ ಕಾರಣ ಎಂದು ಶ್ರದ್ಧಾ ಕಪೂರ್ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ.

    ಅವಕಾಶಗಳು ಸಿಕ್ಕಾಗ, ಮಾಡಿದರೆ ಈ ರೀತಿಯ ಪಾತ್ರ ಮಾಡಬೇಕು ಎಂದೆನಿಸಬೇಕು. ನಮ್ಮೊಳಗಿನ ಕಲಾವಿದೆಗೆ ಚಾಲೆಂಜಿಂಗ್ ಎಂದು ಎನಿಸಲಿಲ್ಲ ಎಂದರೆ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಯಾವಾಗಲೂ ಉತ್ತಮ ಕಥೆ ಮತ್ತು ಅದ್ಭುತ ತಂಡದ ಭಾಗವಾಗಲು ಇಷ್ಟಪಡುತ್ತೇನೆ. ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಲು ಎದುರು ನೋಡ್ತಿದ್ದೇನೆ. ಕಥೆ ಆಯ್ಕೆಯಲ್ಲೂ ಕಾಳಜಿ ವಹಿಸುತ್ತೇನೆ ಎಂದು ಶ್ರದ್ಧಾ ಮಾತನಾಡಿದ್ದಾರೆ.

    ಅಂದಹಾಗೆ, ಆ.15ರಂದು ಬಿಡುಗಡೆಯಾದ ‘ಸ್ತ್ರೀ’ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಸಿನಿಮಾಗಳೇ ಸದ್ದು ಮಾಡುತ್ತಿರುವಾಗ ಈ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರು ಜೀವ ಸಿಕ್ಕಂತೆ ಆಗಿದೆ.

  • ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡಿದ ‘ಸ್ತ್ರೀ 2’ ಟೀಮ್

    ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡಿದ ‘ಸ್ತ್ರೀ 2’ ಟೀಮ್

    ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳೇ ಸದ್ದು ಮಾಡ್ತಿರುವಾಗ ‘ಸ್ತ್ರೀ 2’ (Stree 2) ಸಿನಿಮಾದ ಯಶಸ್ಸು ಬಾಲಿವುಡ್‌ಗೆ ಮರು ಜೀವ ಕೊಟ್ಟಂತೆ ಆಗಿದೆ. 300 ಕೋಟಿ ಕಲೆಕ್ಷನ್ ಮಾಡುತ್ತ ಚಿತ್ರ ದಾಪುಗಾಲಿಡುತ್ತಿದೆ. ಇದೇ ಖುಷಿಯಲ್ಲಿ ಸಿನಿಮಾ ಯಶಸ್ಸು ಅನ್ನು ‘ಸ್ತ್ರೀ 2’ ತಂಡ ಆಚರಿಸಿದೆ. ಇದನ್ನೂ ಓದಿ:‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗೆ ಸಾಥ್‌ ನೀಡಿದ ಮಹೇಶ್ ಬಾಬು

    ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ‘ಸ್ತ್ರೀ 2’ ಟೀಮ್ ಗ್ರ್ಯಾಂಡ್‌ ಆಗಿ ಪಾರ್ಟಿ ಮಾಡಿ ಖುಷಿಪಟ್ಟಿದೆ. ರೆಡ್‌ ಥೀಮ್‌ನಲ್ಲಿ ಆಯೋಜಿಸಿದ್ದ ಈ ಪಾರ್ಟಿಯಲ್ಲಿ ಕೃತಿ ಸನೋನ್, ವಿಕ್ಕಿ ಕೌಶಲ್, ತಮನ್ನಾ ಬಾಟಿಯಾ ಕೂಡ ಭಾಗಿಯಾಗಿದ್ದಾರೆ. ಅದಷ್ಟೇ ಅಲ್ಲ, ಚಿತ್ರದ ನಾಯಕಿ ಶ್ರದ್ಧಾ ಕಪೂರ್ (Shraddha Kapoor) ಜೊತೆ ಕೃತಿ ಮತ್ತು ತಮನ್ನಾ ಬಿಂದಾಸ್ ಆಗಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by Shilpa Rao (@shilparao)

    ‌ಅಂದಹಾಗೆ, ‘ಸ್ತ್ರೀ 2’ ಸಿನಿಮಾದ ಕಥೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಬಿಡುಗಡೆಯಾದ ಈ ದಿನಗಳಲ್ಲಿ ಒಟ್ಟು 269 ಕೋಟಿ ರೂ. ಗಳಿಕೆ ಮಾಡಿದೆ. 300 ಕೋಟಿ ರೂ. ಕಲೆಕ್ಷನ್‌ನತ್ತ ಮುನ್ನಗ್ಗುತ್ತಿದೆ. ಈ ಮೂಲಕ ಶ್ರದ್ಧಾಗೂ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ಮತ್ತು ರಾಜ್‌ಕುಮಾರ್ ರಾವ್ ನಟನೆಯ ಜೊತೆ ತಮನ್ನಾ ಐಟಂ ಡ್ಯಾನ್ಸ್ಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.

    ‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ, ‘ಸ್ತ್ರೀ 2’ ಸಿನಿಮಾ ಆ.15ರಂದು ಬಿಡುಗಡೆಯಾಯಿತು.

  • ಇನ್ಸ್ಟಾಗ್ರಾಂನಲ್ಲಿ ನರೇಂದ್ರ ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್

    ಇನ್ಸ್ಟಾಗ್ರಾಂನಲ್ಲಿ ನರೇಂದ್ರ ಮೋದಿಯನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್

    ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಶ್ರದ್ಧಾ ಕಪೂರ್ (Shraddha Kapoor)  ಇನ್ಸ್ಟಾಗ್ರಾಂನಲ್ಲಿ ಹಿಂದಿಕ್ಕಿದ್ದಾರೆ. ಇದನ್ನೂ ಓದಿ:‘ರುದ್ರ ಗರುಡ ಪುರಾಣ’ದಲ್ಲಿ ಮಿಸ್ ಆದ ವಿಮಾನದ ಕಥೆ ಹೇಳಲಿದ್ದಾರೆ ರಿಷಿ

    ‘ಸ್ತ್ರೀ 2’ ಸಿನಿಮಾದ ಯಶಸ್ಸಿನ ಬಳಿಕ ಶ್ರದ್ಧಾಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಜಾಸ್ತಿಯಾಗಿದೆ. ಅದರಲ್ಲೂ ನರೇಂದ್ರ ಮೋದಿ ಅವರನ್ನು ಕೂಡ ನಟಿ ಹಿಂದಿಕ್ಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಶ್ರದ್ಧಾಗೆ 91.5 ಮಿಲಿಯನ್ (9.15 ಕೋಟಿ) ಜನರು ಫಾಲೋ ಮಾಡ್ತಿದ್ರೆ, ಪ್ರಧಾನಿ ಮೋದಿ ಅವರಿಗೆ 91.3 (9.13 ಕೋಟಿ) ಜನರು ಹಿಂಬಾಲಕರಿದ್ದಾರೆ.

    ನರೇಂದ್ರ ಮೋದಿ ಅವರನ್ನು ಮೀರಿಸಿ ಶ್ರದ್ಧಾ 3ನೇ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು 270 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದ್ದಾರೆ.

    ಇನ್ನೂ ದಕ್ಷಿಣದ ಸಿನಿಮಾಗಳೇ ಹಿಟ್ ಆಗ್ತಿರುವ ಈ ಸಮಯದಲ್ಲಿ ‘ಸ್ತ್ರೀ 2’ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರು ಜೀವ ಸಿಕ್ಕಂತೆ ಆಗಿದೆ. ಇದರಿಂದ ಶ್ರದ್ಧಾ ಕೆರಿಯರ್‌ಗೂ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಕಳೆದ ಕೆಲ ವರ್ಷಗಳಿಂದ ಶ್ರದ್ಧಾ ನಟಿಸಿದ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ‘ಸ್ತ್ರೀ 2’ 2ನಿಂದ ಸಕ್ಸಸ್‌ಫುಲ್ ನಟಿಯಾಗಿದ್ದಾರೆ.

    ‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ , ‘ಸ್ತ್ರೀ 2’ ಸಿನಿಮಾ ಆ.15ರಂದು ಬಿಡುಗಡೆಯಾಯಿತು.

  • ‘ಸ್ತ್ರೀ 2’ ಚಿತ್ರದಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಶ್ರದ್ಧಾ ಕಪೂರ್

    ‘ಸ್ತ್ರೀ 2’ ಚಿತ್ರದಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಶ್ರದ್ಧಾ ಕಪೂರ್

    ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್‌ಗೆ (Shraddha Kapoor) ಮತ್ತೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ‘ಸ್ತ್ರೀ 2’ ಸಿನಿಮಾ ಮೂಲಕ ಮತ್ತೆ ‘ಆಶಿಕಿ 2’ ಬೆಡಗಿ ಶ್ರದ್ಧಾ ಅವರು ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಕೋಟಿಗಟ್ಟಲೇ ಕಮಾಯಿ ಮಾಡುತ್ತಿದೆ. ಇದನ್ನೂ ಓದಿ:ಜೀವಂತ ಇದ್ದಾಗಲೇ ಶ್ರೇಯಸ್ ತಲ್ಪಾಡೆ ಸಾವಿನ ಸುದ್ದಿ ವೈರಲ್- ಮೌನ ಮುರಿದ ನಟ

    ದಕ್ಷಿಣದ ಸಿನಿಮಾಗಳೇ ಹಿಟ್ ಆಗ್ತಿರುವ ಈ ಸಮಯದಲ್ಲಿ ‘ಸ್ತ್ರೀ 2‌’ (Stree 2) ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರು ಜೀವ ಸಿಕ್ಕಂತೆ ಆಗಿದೆ. ಇದರಿಂದ ಶ್ರದ್ಧಾ ಕೆರಿಯರ್‌ಗೂ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಕಳೆದ ಕೆಲ ವರ್ಷಗಳಿಂದ ಶ್ರದ್ಧಾ ನಟಿಸಿದ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಸ್ತ್ರೀ 2ನಿಂದ ಸಕ್ಸಸ್‌ಫುಲ್‌ ನಟಿಯಾಗಿದ್ದಾರೆ.

    ‘ಸ್ತ್ರೀ 2’ ಸಿನಿಮಾದ ಕಥೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಬಿಡುಗಡೆಯಾದ ಈ 5 ದಿನಗಳಲ್ಲಿ ಒಟ್ಟು 242 ಕೋಟಿ ರೂ. ಗಳಿಕೆ ಮಾಡಿದೆ. 300 ಕೋಟಿ ರೂ. ಕಲೆಕ್ಷನ್ ಕಡೆ ದಾಪುಗಾಲಿಡುತ್ತಿದೆ. ಈ ಮೂಲಕ ಶ್ರದ್ಧಾಗೂ ಬೇಡಿಕೆ ಹೆಚ್ಚಾಗಿದೆ. ಶ್ರದ್ಧಾ ಮತ್ತು ರಾಜ್‌ಕುಮಾರ್ ರಾವ್ (Rajkuamr Rao) ನಟನೆಯ ಜೊತೆ ತಮನ್ನಾ ಐಟಂ ಡ್ಯಾನ್ಸ್‌ಗೆ ಫ್ಯಾನ್ಸ್‌ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.

    ‘ಸ್ತ್ರೀ 2’ ಸಿನಿಮಾದ ಸಕ್ಸಸ್‌ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ನಲ್ಲಿದ್ದಾರೆ. ನಟಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಿಂದ ಆಫರ್ ಅರಸಿ ಬರುತ್ತಿವೆ. ಅಂದಹಾಗೆ , ಸ್ತ್ರೀ 2 ಸಿನಿಮಾ ಆ.15ರಂದು ಬಿಡುಗಡೆಯಾಯಿತು.