Tag: ಶ್ರದ್ಧಾವಾಕರ್

  • 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದ ದೆಹಲಿ ಪೊಲೀಸರು

    100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದ ದೆಹಲಿ ಪೊಲೀಸರು

    ನವದೆಹಲಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣಕ್ಕೆ (Shraddha Walkar Murder Case) ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ದೆಹಲಿ ಪೊಲೀಸರು (Delhi Police) 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡನ್ನು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    3000 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡಿನೊಂದಿಗೆ ವಿಧಿವಿಜ್ಞಾನ (Forensic) ಹಾಗೂ ತಾಂತ್ರಿಕ 100 ಸಾಕ್ಷ್ಯಗಳನ್ನು ಒಳಗೊಂಡ ಅಂತಿಮ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಅದನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಏನಿದು ಘಟನೆ?
    ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿ ಶ್ರದ್ಧಾವಾಕರ್ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ್ದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ (2022ರ ನವೆಂಬರ್ 12ರಂದು) ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನ (Aftab Amin Poonawala) ಪೊಲೀಸರು ಬಂಧಿಸಿದ್ದರು.

    ಈ ತನಿಖೆಯಲ್ಲಿ ಛತ್ತರ್‌ಪುರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೂಳೆಗಳು ಶ್ರದ್ಧಾವಾಕರ್ ದೇಹದ್ದೇ ಎಂದು ಡಿಎನ್‌ಎ ವರದಿಗಳು ದೃಢಪಡಿಸಿದೆ. ಅಫ್ತಾಬ್‌ಗೆ ಮಂಪರು ಪರೀಕ್ಷೆ ಸಹ ನಡೆಸಲಾಗಿತ್ತು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಆದ್ರೆ ಪ್ರಾಸಿಕ್ಯೂಷನ್ ದೃಷ್ಟಿಕೋನದಿಂದ ತಪ್ಪೊಪ್ಪಿಗೆಯೊಂದೆ ಅಪರಾಧ ನಿರ್ಣಯಕ್ಕೆ ಸಾಕಾಗಲ್ಲ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಶ್ರದ್ಧಾ ಹತ್ಯೆ ಕೇಸ್ – ಕಾಡಿನಲ್ಲಿ ದೊರೆತ ಮೂಳೆಗಳು ತಂದೆಯ ಡಿಎನ್‌ಎಗೆ ಮ್ಯಾಚ್

    2022ರಲ್ಲಿ ಘಟನೆ ನಡೆದ ಬಳಿಕ ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸರು ಕೊಲೆಗೆ ಬಳಸಿದ್ದ ಗರಗಸ, ಚಾಕುಗಳು ಮತ್ತು ಇತರ ಸಾಧನಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶ್ರದ್ಧಾ ವಾಕರ್ ಹತ್ಯೆ ಕೇಸ್- ಪೀಸ್ ಪೀಸ್ ಪ್ರೇಮಿಗೆ ಜೈಲು ಅವಧಿ ವಿಸ್ತರಣೆ

    ಶ್ರದ್ಧಾ ವಾಕರ್ ಹತ್ಯೆ ಕೇಸ್- ಪೀಸ್ ಪೀಸ್ ಪ್ರೇಮಿಗೆ ಜೈಲು ಅವಧಿ ವಿಸ್ತರಣೆ

    ನವದೆಹಲಿ: ಮುಂಬೈ ಮೂಲದ ಯುವತಿ ಶ್ರದ್ಧಾವಾಕರ್ ಹತ್ಯೆ ಪ್ರಕರಣದ (Shraddha Walker Murder Case) ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ (Aftab Amin Poonawala) ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಸಾಕೇತ್ ಜಿಲ್ಲಾ ನ್ಯಾಯಲಯದ (Court) ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.

    ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ (Court) ಮುಂದಿನ 14 ದಿನಗಳಿಗೆ ನ್ಯಾಯಂಗ ಬಂಧನವನ್ನು ವಿಸ್ತರಣೆ ಮಾಡಿತು. ಅಫ್ತಾಬ್ ಬುದ್ಧಿವಂತ ಯುವಕನಾಗಿದ್ದು ತನಿಖೆಯಲ್ಲಿ ಪೊಲೀಸರು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ. ಆಗಾಗ್ಗೆ ಹೇಳಿಕೆ ಬದಲಿಸುತ್ತಾನೆ ಮತ್ತು ಹೊಸ ಮಾಹಿತಿಯನ್ನು ನೀಡುತ್ತಿದ್ದಾನೆ ಇವುಗಳ ಆಧಾರದ ಮೇಲೆ ತನಿಖೆ ನಡೆಸಬೇಕಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಹತ್ಯೆ ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಜೈಲಿನಲ್ಲಿ ಇಬ್ಬರು ಕೈದಿಗಳ ಜೊತೆಗೆ ಅಫ್ತಾಬ್ ಇದ್ದು ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಮಂಪರು ಪರೀಕ್ಷೆ ಮತ್ತು ಫಾಲಿಗ್ರಾಫ್ ಪರೀಕ್ಷೆ ಅಂತ್ಯವಾಗಿದ್ದು, ಅದನ್ನು ಆಧರಿಸಿ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ. ತನಿಖೆಯ ದೃಷ್ಟಿಯಿಂದ ಅಫ್ತಾಬ್ ಅವಶ್ಯಕತೆ ಇದೆ ಎಂದು ದೆಹಲಿ ಪೊಲೀಸರ ಪರ ವಕೀಲರು ವಾದ ಮಂಡಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್ – ನಾನು ಸಿಎಂ ಆಗ್ಬೋದು ಅಂದ ಪ್ರತಿಭಾ ಸಿಂಗ್

    ಅಫ್ತಾಬ್ ಅಮಿನ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾವಾಕರ್ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಪೀಸ್ ಪೀಸ್ ಮಾಡಿ ದೆಹಲಿಯ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ಪೋಷಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರಿಗೆ ಅಫ್ತಾಬ್ ಭೀಕರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    ನವದೆಹಲಿ: ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ (Aaftab Poonawala) ಶುಕ್ರವಾರ ಎರಡನೇ ದಿನದ ಪಾಲಿಗ್ರಾಫ್ ಪರೀಕ್ಷೆಗೆ (Polygraph Test) ಒಳಪಡಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪರೀಕ್ಷೆಯಲ್ಲಿ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೇ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

    ಪಾಲಿಗ್ರಾಫ್ ಪರೀಕ್ಷೆಗೆ ಸಾಕೇತ್ ಜಿಲ್ಲಾ ನ್ಯಾಯಲಯ ಅನುಮತಿ ನೀಡಿದ ಬಳಿಕ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ತೀವ್ರವಾಗುತ್ತಿದ್ದಂತೆ ಕೆಮ್ಮು ಆರಂಭಿಸಿದ ಅಫ್ತಾಬ್ ನಾಡಿ ಮಿಡಿತ, ಹೃದಯ ಬಡಿತ, ಮಾನಸಿಕ ಒತ್ತಡ ಸರಿಯಾಗಿ ದಾಖಲಾಗದ ಹಾಗೇ ಮಾಡಿದ ಎನ್ನಲಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಸೃಷ್ಟಿ – ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರವಸೆ

    ಅಫ್ತಾಬ್ ಉದ್ದೇಶ ಪೂರ್ವಕವಾಗಿ ಅನಾರೋಗ್ಯಕ್ಕೆ ಈಡಾದಂತೆ ಕಂಡು ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಿ ಶುಕ್ರವಾರ ಪರೀಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮುಂದಿನ ಪರೀಕ್ಷೆಯಲ್ಲಿ ಅಫ್ತಾಬ್ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದಲ್ಲಿ ನಾರ್ಕೊ ವಿಶ್ಲೇಷಣೆ ಪರೀಕ್ಷೆಗೆ ಒಳಗಾಗಬಹುದು ಎಂದು ಮೂಲಗಳು ಹೇಳಿವೆ.

    ಪಾಲಿಗ್ರಾಫ್ ಪರೀಕ್ಷೆ ಎಂದರೇನು?
    ಸುಳ್ಳು ಪತ್ತೆಕಾರಕ ಪರೀಕ್ಷೆಯನ್ನು ಪಾಲಿಗ್ರಾಫ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇದು ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಾನೆಯೇ ಎಂದು ಪ್ರತಿಪಾದಿಸಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗೆ ಪಾಲಿಗ್ರಾಫ್‌ ಪರೀಕ್ಷೆ ಎಂದು ಹೇಳಲಾಗುತ್ತದೆ.

    ಶುಕ್ರವಾರ ನಡೆದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆ. ಮುಖ್ಯವಾಗಿ, ಶ್ರದ್ಧಾಳನ್ನು ಕೊಂದಿದ್ದೇಕೆ ಮತ್ತು ಕೊಲ್ಲಲು ಯಾವ ಆಯುಧವನ್ನು ಬಳಸಿದ್ದೀರಿ? ಶ್ರದ್ಧಾ ದೇಹವನ್ನು ಹೇಗೆ ಕತ್ತರಿಸಿದ್ದೀರಿ? ಕತ್ತರಿಸುವಾಗ ತಪ್ಪಿತಸ್ಥ ಭಾವನೆ ಬರಲಿಲ್ಲವೇ? ಕತ್ತರಿಸಿದ ದೇಹದ ಭಾಗಗಳನ್ನು ಎಲ್ಲಿ ಎಸೆದಿದ್ದೀರಿ? ಶ್ರದ್ಧಾ ವಾಕರ್ ಹತ್ಯೆ ನಂತರ ನೀವು ಏನು ಮಾಡಿದ್ದೀರಿ? ಕೊಲೆಯ ಆಯುಧ ಎಲ್ಲಿದೆ? ಕೊಲ್ಲುವ ಏಕೈಕ ಉದ್ದೇಶದಿಂದ ಶ್ರದ್ಧಾಳನ್ನು ದೆಹಲಿಗೆ ಕರೆತಂದಿದ್ದೀರಾ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]