Tag: ಶ್ರದ್ಧಾಂಜಲಿ

  • ಚಿತ್ರರಂಗದಿಂದ ಅಂಬಿಗೆ ಶ್ರದ್ಧಾಂಜಲಿ-ಎದುರಿಗಿದ್ರೂ ಮಾತಾಡಲಿಲ್ಲ ಬಾವ-ಬಾಮೈದ

    ಚಿತ್ರರಂಗದಿಂದ ಅಂಬಿಗೆ ಶ್ರದ್ಧಾಂಜಲಿ-ಎದುರಿಗಿದ್ರೂ ಮಾತಾಡಲಿಲ್ಲ ಬಾವ-ಬಾಮೈದ

    ಬೆಂಗಳೂರು: ಸ್ಯಾಂಡಲ್‍ವುಡ್ ದಿಗ್ಗಜ ರೆಬೆಲ್‍ಸ್ಟಾರ್ ಅಂಬರೀಶ್‍ರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.

    ಶ್ರದ್ಧಾಂಜಲಿ ಸಭೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನಟ, ಸೊರಬ ಶಾಸಕ ಕುಮಾರ್ ಬಂಗಾರಪ್ಪ ಭಾಗಿ ಆಗಿದ್ದಾರೆ. ಆದ್ರೆ ಸಂಬಂಧದಲ್ಲಿ ಬಾವ-ಬಾಮೈದಾ ಆಗಿರುವ ಶಿವಣ್ಣ, ಕುಮಾರ್ ಬಂಗಾರಪ್ಪ ಎದುರು ಬದುರು ಆದರೂ ಮಾತಾಡದೇ ಮುನ್ನಡೆದಿದ್ದಾರೆ. ಪಕ್ಕದಲ್ಲೇ ಇದ್ದ ಜೈಜಗದೀಶ್‍ಗೆ ಹ್ಯಾಂಡ್ ಶೇಕ್ ಮಾಡಿದ ಶಿವಣ್ಣ ಬಾಮೈದನನ್ನು ನೋಡಿಯೂ ನೋಡದೆಯೇ ಮುಂದೆ ಹೋಗಿದ್ದಾರೆ. ಸಿನಿಮಾ ರಂಗದ ಸಭೆಯಲ್ಲೂ ಉಭಯ ನಾಯಕರು ಮುನಿಸು ಮುಂದುವರಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ, ಶಿವಣ್ಣ, ಅಪ್ಪು, ಯಶ್, ದರ್ಶನ್, ಸುದೀಪ್, ಜೈಜಗದೀಶ್, ದೊಡ್ಡಣ್ಣ ಸೇರಿದಂತೆ ಇಡೀ ಚಿತ್ರರಂಗವೇ ಪಾಲ್ಗೊಂಡಿದೆ. ಜೊತೆಗೆ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿ. ಸೋಮಣ್ಣ ಸೇರಿದಂತೆ ಹಲವು ಶಾಸಕರು ಭಾಗಿ ಆಗಿದ್ದಾರೆ. ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರು ಅಂಬಿ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅಗಲಿದ ರೆಬೆಲ್‍ಸ್ಟಾರ್‍ಗೆ ನುಡಿ ನಮನ ಸಲ್ಲಿಸಿದ್ದಾರೆ.

    ನವೆಂಬರ್ 24ರ ಶನಿವಾರ ರಾತ್ರಿ ನಟ ಅಂಬರೀಶ್ ಅವರು ಹೃದಯಾಘಾತದಿಂದ ನಗರದ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತಿಮ ಸಂಸ್ಕಾರವು ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತ್ತು. ಪತ್ನಿ, ಮಗ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ ಅಂಬಿಗೆ ಇಡೀ ದೇಶವೇ ಕಂಬನಿ ಮಿಡಿದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೆರವಣಿಗೆ ಬರುತ್ತಿದ್ದಂತೆ ಮುಚ್ಚಿದ ಶಿರೂರು ಮಠದ ಬಾಗಿಲು- ಮಠದ ಜಗಲಿಯಲ್ಲೇ ಪುಷ್ಪನಮನ ಸಲ್ಲಿಕೆ

    ಮೆರವಣಿಗೆ ಬರುತ್ತಿದ್ದಂತೆ ಮುಚ್ಚಿದ ಶಿರೂರು ಮಠದ ಬಾಗಿಲು- ಮಠದ ಜಗಲಿಯಲ್ಲೇ ಪುಷ್ಪನಮನ ಸಲ್ಲಿಕೆ

    ಉಡುಪಿ: ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಸ್ವಾಮೀಜಿಯವರ ಆಪ್ತ ಅಭಿಮಾನಿಗಳು ಉಡುಪಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದರು. ರಾಜ್ಯದಲ್ಲಿ ಬಾಲ ಸನ್ಯಾಸ ಸ್ವೀಕಾರ ನಡೆದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ಸಭೆಯಲ್ಲಿ ಕೇಳಿ ಬಂತು. ಈ ನಡುವೆ ಶಿರೂರು ಮಠದಲ್ಲಿ ಸ್ವಾಮೀಜಿಗಳ ಪುಷ್ಪನಮನಕ್ಕೆ ಅವಕಾಶವೇ ಸಿಗಲಿಲ್ಲ.

    ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಂಶಯಾಸ್ಪದವಾಗಿ ಸಾವನ್ನಪ್ಪಿ ತಿಂಗಳು ಕಳೆದಿದೆ. ಶ್ರೀಗಳ ಸಾವಿಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮರಣೋತ್ತರ ಪರೀಕ್ಷೆಯ ಫೈನಲ್ ಎಫ್ ಎಸ್ ಎಲ್ ರಿಪೋರ್ಟ್ ಇನ್ನೂ ಬಂದಿಲ್ಲ. ಈ ನಡುವೆ ಶಿರೂರು ಶ್ರೀ ಅಭಿಮಾನಿ ಸಮಿತಿ ಸ್ವಾಮೀಜಿಗಳ ಅತೀ ಆಪ್ತರನ್ನು ಸೇರಿಸಿ ಶ್ರದ್ಧಾಂಜಲಿ ಸಭೆ ನಡೆಸಿತು.

    ಶಿರೂರು ಸ್ವಾಮೀಜಿ ಭಾವಚಿತ್ರವನ್ನು ಅಷ್ಟಮಠಗಳಿರುವ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯ್ತು. ಶಿರೂರು ಮಠದ ಒಳಗೆ ಸ್ವಾಮೀಜಿಯವ ಭಾವಚಿತ್ರ ಕೊಂಡೊಯ್ದು ಪುಷ್ಪ ನಮನ ಸಲ್ಲಿಸಲು ಅಭಿಮಾನಿಗಳು ಇಚ್ಛಿಸಿದ್ದರು. ಆದ್ರೆ ದ್ವಂದ್ವ ಸೋದೆ ಮಠ ಮತ್ತು ಶಿರೂರು ಮಠದ ಮೇಲ್ವಿಚಾರಣಾ ಸಮಿತಿ ಮಠದೊಳಗೆ ಭಕ್ತರು ಪ್ರವೇಶಿಸಿ ಪುಷ್ಪನಮನ ಸಲ್ಲಿಸಲು ಅವಕಾಶ ನೀಡಲಿಲ್ಲ. ಕೃಷ್ಣಮಠದ ಪಾರ್ಕಿಂಗ್ ಏರಿಯಾದ ಮಥುರಾ ಛತ್ರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಯಾವುದೇ ಮಠಗಳಲ್ಲಿ ಬಾಲ ಸನ್ಯಾಸ ಸ್ವೀಕಾರ ಮಾಡಬಾರದೆಂಬ ಒತ್ತಾಯ ಕೇಳಿ ಬಂತು. ಬಾಲ ಸನ್ಯಾಸ ಸ್ವೀಕಾರ ಮಾಡಿದ್ರೆ ಬಾಲಕಾರ್ಮಿಕ ಪದ್ಧತಿ ಕಾನೂನಿನ ಅನ್ವಯ ಕೇಸು ದಾಖಲಿಸಿ, ಕಾನೂನು ಹೋರಾಟ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಯ್ತು.

    ಕೇಮಾರು ಸಾಂದೀಪನಿ ಮಠಾಧೀಶ ಈಶ ವಿಠಲದಾಸ ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡಿ, ಶಿರೂರು ಸ್ವಾಮೀಜಿ ಮೂರು ಪರ್ಯಾಯ ಮಾಡಿದವರು. 48 ವರ್ಷ ಕೃಷ್ಣನ ಪೂಜೆಯನ್ನು ಮಾಡಿದ್ದವರು. ಶಿರೂರು ಮಠದ ಬಾಗಿಲು ಭಕ್ತ ಜನರಿಗೆ ಸದಾ ತೆರೆದಿತ್ತು. ಇಂದು ಸ್ವಾಮೀಜಿಯ ಭಾವಚಿತ್ರ ಪ್ರವೇಶಕ್ಕೆ ಮಠದ ಬಾಗಿಲು ಮುಚ್ಚಿದೆ. ಮಠದ ಒಳಗೆ ಪುಷ್ಪನಮನಕ್ಕೆ ನಮಗೆ ಅವಕಾಶ ಸಿಗಲಿಲ್ಲ. ಇದು ಸಾಧು ಪರಂಪರೆಗೆ ಮಾಡಿದ ಅವಮಾನ. ಉದಾರತೆಯಿಂದ ಶಿರೂರು ಮಠದ ಬಾಗಿಲು ತೆಗೆಯಬೇಕಿತ್ತು ಅಂತ ನೊಂದು ಹೇಳಿದರು.

    ಶಿರೂರು ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿ ತಿಂಗಳು ಕಳೆದ್ರೂ ಇನ್ನೂ ಪೊಲೀಸರ ಕೈಸೇರಿಲ್ಲ. ದೇಶದ ಗಮನ ಸೆಳೆದ ಪ್ರಕರಣ ಆದರೂ ವರದಿ ಇನ್ನೂ ಬಂದಿಲ್ಲ. ಮಣಿಪಾಲ ಕೆಎಂಸಿ ವೈದ್ಯರು ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಎಫ್‍ಎಸ್‍ಎಲ್ ವರದಿ ತಡವಾದಷ್ಟು ವಿಷ ವಿಷತ್ವವನ್ನು ಕಳೆದುಕೊಳ್ಳುತ್ತದೆ. ಪ್ರಕರಣದ ದಿಕ್ಕೇ ಬದಲಾಗುವ ಸಾಧ್ಯತೆಯಿದೆ ಎಂದು ಕ್ರಿಮಿನಲ್ ವಕೀಲ, ಶಿರೂರು ಶ್ರೀ ಆಪ್ತ ರವಿಕಿರಣ್ ಮುರ್ಡೇಶ್ವರ ಸಂಶಯ ವ್ಯಕ್ತಪಡಿಸಿದರು.

    ಈ ನಡುವೆ ಶಿರೂರು ಸ್ವಾಮೀಜಿ ವೃಂದಾವನಸ್ಥರಾದ ನಂತರ ಮಾಡಬೇಕಾದ ಸಂಸ್ಕಾರ, ಆರಾಧನೆ ಪ್ರಕ್ರಿಯೆಗಳು ನಡೆದಿಲ್ಲ. ಈ ಬಗ್ಗೆ ಕೂಡಾ ಮಠದ ಭಕ್ತರು ಅಸಾಮಾಧಾನ ವ್ಯಕ್ತಗೊಳಿಸಿದ್ದಾರೆ. ಆರಾಧನೆ ಮಾಡಲು ಪೊಲೀಸರು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಲ್ಲೆಯಾದ್ಯಂತ ಅಜಾತಶತ್ರುವಿಗೆ ಶ್ರದ್ಧಾಂಜಲಿ

    ಜಿಲ್ಲೆಯಾದ್ಯಂತ ಅಜಾತಶತ್ರುವಿಗೆ ಶ್ರದ್ಧಾಂಜಲಿ

    ಬೆಂಗಳೂರು: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಜಿಲ್ಲೆಯಾದ್ಯಂತ ಜನರು ಸಂತಾಪ ಸೂಚಿಸಿದ್ದು, ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

    ಬೊಂಬೆನಗರಿ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಗಲಿದ ಮಾಜಿ ಪ್ರಧಾನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಥಾಂಜಲಿ ಅರ್ಪಿಸಿದ್ದಾರೆ. ನಗರದ ಚರ್ಚ್ ರಸ್ತೆಯಲ್ಲಿನ ಕಾವೇರಿ ವೃತ್ತದಲ್ಲಿ ನಡೆದ ಶ್ರದ್ಧಾಂಜಲಿಯಲ್ಲಿ ಸಾರ್ವಜನಿಕರು ಭಾಗವಹಿಸಿ ಅಗಲಿದ ಚೇತನಕ್ಕೆ ಸಂತಾಪ ಸೂಚಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ನಲ್ಲಿ ವಾಜಪೇಯಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲಾ ರೈತ ಪರ ಸಂಘಟನೆಗಳಿಂದ ಆನೇಕಲ್ ತಾಲೂಕು ಕಚೇರಿಯ ಮುಂಭಾಗ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇತ್ತ ವಿಜಯಪುರದಲ್ಲಿ ಕೂಡ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ನಗರದ ಗಾಂಧಿಚೌಕ್ ನಲ್ಲಿ ಅಟಲ್ ಜಿ ಫೋಟೋ ಇಟ್ಟು ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಕಲಬುರಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿ ಎದುರು ಭಾರತೀಯ ಜನತಾ ಪಕ್ಷದ ಅರ್ಧ ಧ್ವಜ ಹಾರಿಸಿ ಶೋಕಾಚರಣೆ ಮಾಡಿ, ವಾಜಪೇಯಿ ಭಾವಚಿತ್ರಕ್ಕೆ ಜಿಲ್ಲಾ ಬಿಜೆಪಿ ನಾಯಕರಿಂದ ಪುಷ್ಪನಮನ ಸಲ್ಲಿಸಿದ್ದಾರೆ. ಬಳಿಕ `ಅಮರ್ ರಹೇ ಅಮರ್ ರಹೇ ಅಟಲ್ ಜೀ ಅಮರ್ ರಹೇ’ ಎಂದು ಘೋಷಣೆ ಹಾಕಲಾಗಿದೆ. ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.

    ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರವಿರುವ ಫ್ಲೆಕ್ಸ್ ಗೆ ಹಾರಹಾಕಿ, ಮೇಣದಬತ್ತಿ ಹಚ್ಚಿ, `ಜಬ್ ತಕ್ ಸೂರಜ್ ಚಾಂದ್ ರಹೇಂಗೆ, ಅಟಲ್ ಜೀ ಅಮರ್ ರಹೇಂಗೆ’. ‘ಅಮರ್ ರಹೇ… ಅಮರ್ ರಹೇ… ಅಟಲ್ ಜೀ ಅಮರ್ ರಹೇ’ ಎಂದು ಘೋಷಣೆ ಹಾಕಲಾಗಿದೆ.

    ಚಿನ್ನದ ನಾಡು ಕೋಲಾರ ನಗರದ ಕಾಲೇಜು ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 2003 ರಲ್ಲಿ ಚಿನ್ನದ ನಾಡಿಗೂ ತಮ್ಮ ಪಾದಸ್ಪರ್ಶ ಮಾಡಿದ್ದ ವಾಜಪೇಯಿ ಅವರ ಬೃಹತ್ ಕಟೌಟ್ ಗೆ ಪೂಜೆ ಸಲ್ಲಿಸಿ ಸಂತಾಪ ಸೂಚಿಸಲಾಗಿದೆ. ಹತ್ತಾರು ಜನ ಕಾರ್ಯಕರ್ತರು ಕ್ಯಾಂಡಲ್ ಹಿಡಿದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀವೆಂದೂ ನೋಡಿರದ ಶ್ರದ್ಧಾಂಜಲಿ ಕಾರ್ಯಕ್ರಮ-ವಿಡಿಯೋ

    ನೀವೆಂದೂ ನೋಡಿರದ ಶ್ರದ್ಧಾಂಜಲಿ ಕಾರ್ಯಕ್ರಮ-ವಿಡಿಯೋ

    ನವದೆಹಲಿ: ವೃದ್ಧ ದಂಪತಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿಯನ್ನು ಕರೆಸಿ ಡ್ಯಾನ್ಸ್ ಮಾಡಿಸಿದ ವಿಡಿಯೋವೊಂದು ವೈರಲ್ ಆಗಿದೆ.

    ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ನೋಡಿದಾಗ ಯುವತಿ ಬಾಲಿವುಡ್ ‘ವಾಂಟೆಡ್’ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಯುವತಿಯ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಾರೆ.

    ವೇದಿಕೆ ಮೇಲೆ ಯುವತಿ ಡ್ಯಾನ್ಸ್ ಮಾಡುತ್ತಿದ್ದು, ಆಕೆ ಹಿಂದೆಯೇ ವೃದ್ಧ ದಂಪತಿಯ ಶ್ರದ್ಧಾಂಜಲಿ ಪೋಸ್ಟರ್ ಹಾಕಲಾಗಿತ್ತು. ಆ ಬ್ಯಾನರ್ ನೋಡಿದ ಮೇಲೆ ಇದೊಂದು ಶ್ರದ್ಧಾಂಜಲಿ ಕಾರ್ಯಕ್ರಮವಾಗಿದ್ದು, ಯುವತಿ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು.

    ವಿಡಿಯೋದಲ್ಲಿ ಕೆಲವು ಮಂದಿ ಯುವತಿಯ ಡ್ಯಾನ್ಸ್ ನೋಡುತ್ತಾ ತಿರುಗಾಡುತ್ತಿದ್ದರೆ, ಇನ್ನೂ ಕೆಲವು ಮಂದಿ ಸ್ಟೇಜ್ ಮುಂದೆಯೇ ಚೇರ್ ಹಾಕಿ ಅಲ್ಲಿ ಕುಳಿತುಕೊಂಡು ಡ್ಯಾನ್ಸ್ ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಬ್ಯಾನರ್ ನಲ್ಲಿರುವ ದಿವಂಗತ ವೃದ್ಧ ದಂಪತಿಯ ಮುಖವೂ ಕಾಣಿಸುತ್ತದೆ.

    ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಜನರು ಪರ ಹಾಗೂ ವಿರುದ್ಧ ಬಗ್ಗೆ ಮಾತನಾಡುತ್ತಿದ್ದಾರೆ.

    ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದಕ್ಕೆ ಜನರು ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸುತ್ತಾರೆ. ಆದರೆ ಈ ಕಾರ್ಯಕ್ರಮದ ಆಯೋಜಕರು ವೇದಿಕೆಯಲ್ಲಿ ಯುವತಿಗೆ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿಸಿ ಒಂದು ಹೊಸ ಪರಂಪರೆಯನ್ನು ಶುರು ಮಾಡಿದ್ದಾರೆ. ಈ ವಿಡಿಯೋದಲ್ಲಿ ಯಾರು ಶ್ರದ್ಧಾಂಜಲಿ ಅಥವಾ ಪ್ರಾರ್ಥನೆ ಮಾಡುವುದು ಕಂಡು ಬಂದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ಬ್ಯಾನರ್ ಮುಂದೆ ಯುವತಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಮಾತ್ರ ಕಂಡು ಬಂದಿದೆ.