Tag: ಶ್ರದ್ಧಾಂಜಲಿ

  • ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ

    ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ

    ಬೆಂಗಳೂರು: ಇಲ್ಲಿನ ಪ್ರೆಸ್‌ ಕ್ಲಬ್‌ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ (K.Sathyanarayana) ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಸಹದ್ಯೋಗಿಗಳು, ಹಿರಿಯ ಪತ್ರಕರ್ತರು, ಕುಟುಂಬದ ಸದಸ್ಯರು ಸತ್ಯನಾರಾಯಣ ಅವರನ್ನು ಸ್ಮರಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌ ಕ್ಲಬ್‌ (Press Club Bengaluru), ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy), ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಹಾಗೂ ಕೆ.ಸತ್ಯನಾರಾಯಣ ಅವರ ಅಭಿಮಾನಿಗಳ ಬಳಗ ಸಹಯೋಗದಲ್ಲಿ ಕೆ.ಸತ್ಯನಾರಾಯಣ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ

    ಈ ವೇಳೆ ಮಾತನಾಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸತ್ಯನಾರಾಯಣ ಅವರನ್ನು ಇಳಿವಯಸ್ಸಿನಲ್ಲಿ ಶಿಷ್ಯ ವರ್ಗ ಪ್ರೀತಿಯಿಂದ ನೋಡಿಕೊಂಡಿದೆ ಎಂದು ನೆನಪಿಸಿಕೊಂಡರು.

    ನಮ್ಮನ್ನು ಅಗಲಿದ 40 ಹಿರಿಯ ಪತ್ರಕರ್ತರ ಬಗ್ಗೆ ಪುಸ್ತಕಗಳನ್ನು ಹೊರತರುತ್ತಿದ್ದೇವೆ. ಮುಂದಿನ ತಿಂಗಳು ಪುಸ್ತಕ ಬಿಡುಗಡೆ ಮಾಡಲಾಗುವುದು. ಸತ್ಯನಾರಾಯಣ ಅವರ ಜೀವನ ಚರಿತ್ರೆ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

    ಸತ್ಯನಾರಾಯಣ ಅವರ ಪುತ್ರಿ ಅಪೂರ್ವ ತಮ್ಮ ತಂದೆಯ ವ್ಯಕ್ತಿತ್ವ ಕುರಿತು ಮಾತನಾಡಿದರು. ಈಗಿನ ಮಕ್ಕಳು, ನಮ್ಮಪ್ಪ ನನಗೆ ಸೈಕಲ್‌ ತುಳಿಯುವುದನ್ನು ಹೇಳಿಕೊಟ್ರು. ಬೈಕ್‌ ಓಡಿಸೋದನ್ನು ಕಲಿಸಿಕೊಟ್ರು ಅಂತಾ ಹೇಳ್ತಾರೆ. ಆದರೆ ನಮ್ಮ ತಂದೆ ಬಜೆಟ್‌ ಕುರಿತು ಪ್ರಬಂಧ ಬರೆಯುವಾಗ, “ನೀನು ಬರಿ ಬಜೆಟ್‌ ನೋಡಿದರೆ ಸಾಲದು. ಆರ್ಥಿಕ ಸಮೀಕ್ಷೆಯನ್ನೂ ನೋಡಿಕೊಳ್ಳಬೇಕೆಂದು” ಸಲಹೆ ನೀಡಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ

    ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಸತ್ಯ ಅವರು ಅಧಿಕಾರ ಕೇಂದ್ರಗಳಿಂದ ದೂರ ಇದ್ದವರು. ಅಧಿಕಾರ ಕೇಂದ್ರಗಳನ್ನು ಅತ್ಯಂತ ಅಸಡ್ಡೆಯಿಂದ ನೋಡಿದವರು. ಈಗ ಅಂತಹವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಅಧಿಕಾರ ಕೇಂದ್ರಗಳ ಕಣ್ಣು ಕೋರೈಸುವ ಪ್ರಭೆಯ ಮುಂದೆ ಪತ್ರಕರ್ತರಾದ ನಾವು ಕುರುಡಾಗಿದ್ದೇವೆ ಎಂದು ಹೇಳಿದರು.

    ನನ್ನ ಕೆಲಸ ಮುಗಿತಪ್ಪ ಅಂತಾ ಹೆಗಲಿಗೆ ಚೀಲ ಹಾಕಿಕೊಂಡು ಸತ್ಯನಾರಾಯಣ ಅವರು ಹೊರಟು ಹೋಗಿದ್ದಾರೆ. ಪತ್ರಿಕೆಗಳಲ್ಲಿ ಕೆಲಸ ಮಾಡುವುದೆಂದರೆ ಬೇರೆ ಉದ್ಯೋಗಗಳಂತೆ ಅಲ್ಲ ಎಂಬ ಪಾಠವನ್ನು ಅವರು ನಮಗೆ ಹೇಳಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸತ್ಯನಾರಾಯಣರಂಥ ಹಿರಿಯರು ಸುದ್ದಿಮನೆಯಲ್ಲಿ ಹಾಕಿದ ಆದರ್ಶವನ್ನು ಕಾಪಿಟ್ಟುಕೊಂಡು ಹೋದರೆ ನಮಗೆ ಗೌರವ. ಸತ್ಯನಾರಾಯಣ ಅವರು ಆದರ್ಶದ ಬದುಕನ್ನು ಜೀವಿಸಿದ್ದಾರೆ ಎಂದು ಮಾತನಾಡಿದರು.

    ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್ ಮಾತನಾಡಿ, ಸತ್ಯನಾರಾಯಣ ಅವರು ಬರೆದ ವರದಿಗಳು, ಲೇಖನ ವಿರುದ್ಧವಾಗಿ ಯಾವ ಮಾತುಗಳು ಸಹ ಬರುತ್ತಿರಲಿಲ್ಲ. ಏಕೆಂದರೆ ಅವರು ಎಂದೂ ಅಸತ್ಯ ಬರೆದಿರಲಿಲ್ಲ. ಸತ್ಯವನ್ನು ಬರೆಯುತ್ತಾ ಪತ್ರಕರ್ತರಾಗಿದ್ದರು ಎಂದು ಬಣ್ಣಿಸಿದರು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ʼಪಬ್ಲಿಕ್‌ ಟಿವಿʼ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌, ಕನ್ನಡಪ್ರಭ ಪತ್ರಿಕೆ ಸಂಪಾದಕರಾದ ರವಿ ಹೆಗಡೆ, ಹಿರಿಯ ಪತ್ರಕರ್ತ ಇಮ್ರಾನ್‌ ಕುರೇಶಿ,‌ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ, ಹಿರಿಯ ಪತ್ರಕರ್ತರಾದ ನಾಗಮಣಿ, ಟಿ.ರಾಮಯ್ಯ, ಹಿರಿಯ ಸಾಹಿತಿ ವಿಜಯಮ್ಮ ಅವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.

    23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

    ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.

    ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್‍ಗೆ ಥಾಯ್ಲೆಂಡ್‍ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.

    ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

  • ಆರು ವರ್ಷ ಪ್ರೀತಿ ತೋರಿದ್ದ ಬ್ಲ್ಯಾಕಿ ನೆನಪಿಗೆ ಶ್ರದ್ಧಾಂಜಲಿ ಕಟೌಟ್

    ಆರು ವರ್ಷ ಪ್ರೀತಿ ತೋರಿದ್ದ ಬ್ಲ್ಯಾಕಿ ನೆನಪಿಗೆ ಶ್ರದ್ಧಾಂಜಲಿ ಕಟೌಟ್

    ಉಡುಪಿ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಸಾಕಿದವರಿಗೆ, ಪ್ರೀತಿ ತೋರಿದವರ ಜೊತೆ ಶ್ವಾನ ಕೊನೆಯ ಕ್ಷಣದವರೆಗೂ ನಿಯತ್ತಿನಿಂದ ಇರುತ್ತದೆ. ಐದಾರು ವರ್ಷಗಳ ಕಾಲ ಜೊತೆಗಿದ್ದ ಬ್ಲ್ಯಾಕಿ ಮೃತಪಟ್ಟಾಗ ಸಾಸ್ತಾನ ಪಾಂಡೇಶ್ವರದ ಮಂದಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

    ಬೀದಿ ನಾಯಿಯೊಂದು ಗ್ರಾಮ ಸಿಂಹವಾಗಿ ಮೆರೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಸ್ತಾನ ಪಾಂಡೇಶ್ವರದ ಜನಕ್ಕೆ ಬ್ಲ್ಯಾಕಿ ಎಂದರೆ ಅಚ್ಚುಮೆಚ್ಚು. ಊರಿನ ಕಾವಲುಗಾರನಾಗಿ, ಗೆಳೆಯರ ಬಳಗದ ಸದಸ್ಯರಂತೆ ಬ್ಲ್ಯಾಕಿ ಓಡಾಡಿಕೊಂಡಿತ್ತು. ವಾರದ ಹಿಂದೆ ಅನಾರೋಗ್ಯದಿಂದ ಶ್ವಾನ ಮೃತಪಟ್ಟಿದೆ. ನಾಯಿಯ ಮೇಲಿನ ಪ್ರೀತಿಗೆ ಗೆಳೆಯರ ಬಳಗ ಶ್ರದ್ಧಾಂಜಲಿ ಅರ್ಪಿಸಿ, ದೊಡ್ಡ ಕಟೌಟ್‍ನ್ನು ಊರಿನಲ್ಲಿ ಹಾಕಲಾಗಿದೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ತಂಡದ ಯುವಕ ನಿತೇಶ್ ಮಾತನಾಡಿ, ಮಲ್ಪೆಯಿಂದ ಸಾಸ್ತಾನಕ್ಕೆ ನಾಯಿ ಮರಿಯನ್ನು ತಂದಿದ್ದರು. ಬ್ಲ್ಯಾಕೀ ಎಲ್ಲರ ಜೊತೆ ಓಡಾಡಿಕೊಂಡು ಗೆಳೆಯನಂತೆಯೇ ಆಗಿಬಿಟ್ಟಿತ್ತು. ಬ್ಲ್ಯಾಕಿ ಸಾವನ್ನಪ್ಪಿದ್ದು ಬಹಳ ಬೇಸರವಾಗಿದೆ ಎಂದರು. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಪಾಂಡೇಶ್ವರಕ್ಕೆ ಹೋಗುವ ಹೆದ್ದಾರಿ ಪಕ್ಕದಲ್ಲೇ ಕಟೌಟ್ ಹಾಕಿ ಶ್ರದ್ಧಾಂಜಲಿ ಅರ್ಪಣೆ ಮಾಡಲಾಗಿದೆ. ನಾಯಿಗಳಿಗೆ ಸ್ವಲ್ಪ ಪ್ರೀತಿ ತೋರಿದರೂ ಅವುಗಳು ಎಂದೂ ಮರೆಯುವುದಿಲ್ಲ. ನಾವು ಊರವರು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ದಿನೇಶ್ ಬಾಂಧವ್ಯ ಹೇಳಿದರು.

  • ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಮಂಡ್ಯ: ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅಗಲಿ 3 ತಿಂಗಳುಗಳು ಕಳೆದಿವೆ. ಮಂಡ್ಯ ಜಿಲ್ಲೆಯ ರೈತನೊಬ್ಬ ಪುನೀತ್‌ಗೆ ಅಂದು ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಇದೀಗ ಚಿಗುರು ಬಂದಿದೆ.

    ಮಂಡ್ಯದ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಪುನೀತ್ ಅವರ ಅಗಲಿಕೆಯ ಬಳಿಕ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ತಮ್ಮ ಭತ್ತದ ಗದ್ದೆಯಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಎಂದು ಭತ್ತದಲ್ಲೇ ಬರೆದು ನಾಟಿ ಮಾಡಿದ್ದರು. ಇದೀಗ ನಾಟಿ ಮಾಡಿರುವ ಭತ್ತ ಚಿಗುರಿದೆ. ಇದನ್ನೂ ಓದಿ: RD Parade 2022: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ

    ರೈತ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಜನರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ರೈತ ತಮ್ಮ ಗದ್ದೆಯಲ್ಲಿ ಬಿಡಿಸಿರುವ ಶ್ರದ್ಧಾಂಜಲಿ ಚಿತ್ತಾರದ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್: ಪ್ರಮೋದ್ ಮುತಾಲಿಕ್

  • ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲು ಸೈಕಲ್‍ನಲ್ಲಿ ಬೆಂಗಳೂರಿಗೆ ಜಾಥಾ ಹೊರಟ ಅಭಿಮಾನಿ

    ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲು ಸೈಕಲ್‍ನಲ್ಲಿ ಬೆಂಗಳೂರಿಗೆ ಜಾಥಾ ಹೊರಟ ಅಭಿಮಾನಿ

    ಚಿತ್ರದುರ್ಗ: ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಾಗಲಕೋಟೆ ಮೂಲದ ಅಪ್ಪು ಅಭಿಮಾನಿ ರಾಘವೇಂದ್ರ ಗಾಣಿಗೇರ, ಸೈಕಲ್‍ನಲ್ಲಿ ಬೆಂಗಳೂರಿಗೆ ಜಾಥಾ ಹೊರಟಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದಿಂದ ಸೈಕಲ್ ಜಾಥಾವನ್ನು ಆರಂಭಿಸಿರುವ ರಾಘವೇಂದ್ರ ಅವರು ಇಂದು ಕೋಟೆನಾಡು ಚಿತ್ರದುರ್ಗ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರಿಗೆ ಪ್ರಿಯವಾಗಿದ್ದ ಸೈಕ್ಲಿಂಗ್ ಮೂಲಕ ನಮನ ಸಲ್ಲಿಸಲು ಈ ಸೈಕಲ್ ಜಾಥಾ ನಡೆಸಲಾಗುತ್ತಿದೆ. ಒಂದು ದಿನಕ್ಕೆ 100 ಕಿಲೋಮೀಟರ್ ಸೈಕಲ್ ಸವಾರಿ ಮಾಡಲಿರೋ ಈ ಅಭಿಮಾನಿ, ಸೋಮವಾರ ಬೆಂಗಳೂರು ತಲುಪಲಿದ್ದು, ಭಾವಪೂರ್ಣ ನಮನ ಸಲ್ಲಿಸಲು ಶ್ರಮವಹಿಸಿ ಸೈಕಲ್‍ನಲ್ಲಿ ಧಾವಿಸುತಿದ್ದಾರೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಭಾಗಲಕೋಟೆಯಿಂದ ಸೈಕಲ್ ಜಾಥಾದಲ್ಲಿ ಆಗಮಿಸಿರೋ ರಾಘವೇಂದ್ರನಿಗೆ ಚಿತ್ರದುರ್ಗದ ಅಪ್ಪು ಅಭಿಮಾನಿಗಳಿಂದ ಒನಕೆ ಓಬವ್ವ ವೃತ್ತದಲ್ಲಿ ಸ್ವಾಗತ ಕೋರಲಾಯಿತು. ಅಪ್ಪು ಅಭಿಮಾನಿಯ ಸೈಕಲ್ ಜಾಥಾ ಎಲ್ಲರ ಗಮನ ಸೆಳೆಯಿತು. ಅಭಿಮಾನಿ ರಾಘವೇಂದ್ರಗೆ ಹೂವಿರ ಹಾರ ಹಾಕಿ ಸ್ವಾಗತ ಕೋರಿ, ಬೆಂಗಳೂರಿಗೆ ಕ್ಷೇಮವಾಗಿ ತಲುಪಿ, ಅಪ್ಪು ಅವರಿಗೆ ನಮನ ಸಲ್ಲಿಸುವಂತೆ ಕೋಟೆನಾಡಿನ ಅಪ್ಪು ಫ್ಯಾನ್ಸ್ ಬೀಳ್ಕೊಡುಗೆ ನೀಡಿದರು. ಈ ವೇಳೆ ಚಿತ್ರದುರ್ಗದ ಪರಶುರಾಮ್, ಚಂದ್ರು,ಮುಕೇಶ್ ಇದ್ದರು.

  • ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    ಬೆಂಗಳೂರು: ನಮ್ಮನ್ನಗಲಿರುವ ರಾಜಕುಮಾರ ಸ್ಯಾಂಡಲ್‍ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಇಂದು ರಾಜ್ಯದ 650 ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ನಟ ಸೌರ್ವಭಾಮನಿಗೆ ದೀಪಾಂಜಲಿ, ಭಾಷ್ಪಾಂಜಲಿ, ಪುಷ್ಪಾಂಜಲಿ, ಗೀತಾಂಜಲಿ ಸಲ್ಲಿಸಲಾಯಿತು. ಥಿಯೇಟರ್ ಅಂಗಳದಲ್ಲಿ ದೀಪ ಹಚ್ಚುವ ಮೂಲಕ ನಾಗೇಂದ್ರ ಪ್ರಸಾದ್ ಅವರು ರಚಿಸಿ, ಸಂಗೀತ ನೀಡಿರುವ ಅಪ್ಪುವಿಗೆ ನಮನಾಂಜಲಿ ಹೆಸರಿನ ವಿಶೇಷ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ನಾಗೇಂದ್ರ ಪ್ರಸಾದ್ ಅವರು ರಚಿಸಿ, ಸಂಗೀತ ನೀಡಿರುವ ಈ ವಿಶೇಷ ಹಾಡಿಗೆ ವಿಷ್ಣು ಸುರೇಶ್ ಧ್ವನಿಯಾಗಿದ್ದಾರೆ. ಅಪ್ಪು ನಮನಾಂಜಲಿ ಹಾಡುವ ಮೂಲಕ ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಗೀತಾಂಜಲಿ ಅಪ್ಪು ನಮನಾಂಜಲಿ ಗೀತೆ ಹಾಡಲಾಯಿತು.  ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ನಾಳೆ ಪುನೀತ್ ರಾಜ್‍ಕುಮಾರ್ ನಿಧನರಾಗಿ 11ನೇ ದಿನವಾಗಿದ್ದು, ನಾಳೆ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಕ್ಕೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಬೆಳಗ್ಗೆ 9.45ಕ್ಕೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ನಾಳೆ ಪುನೀತ್ ರಾಜ್‍ಕುಮಾರ್ ಅವರ ಪುಣ್ಯತಿಥಿ. ರಾಘವೇಂದ್ರ ರಾಜ್‍ಕುಮಾರ್ ಅವರ ಹಿರಿ ಮಗ ವಿನಯ್ ರಾಜ್‍ಕುಮಾರ್ ಚಿಕ್ಕಪ್ಪಣ ಪುಣ್ಯ ಕಾರ್ಯ ನೆರವೇರಿಸಲಿದ್ದಾರೆ.

  • ಕನ್ನಡ ಪರ ಸಂಘಟನೆಯಿಂದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

    ಕನ್ನಡ ಪರ ಸಂಘಟನೆಯಿಂದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

    ಬೆಂಗಳೂರು: ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥರು ಅಪಾರ ಭಕ್ತರನ್ನ, ಶಿಷ್ಯ ವೃಂದವನ್ನ ಅಗಲಿ ಬೃಂದಾವನದಲ್ಲಿ ಕೃಷ್ಣೈಕ್ಯರಾಗಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀಗಳು ದೇಹತ್ಯಾಗ ಮಾಡಿ ಶ್ರೀಕೃಷ್ಣನ ಪಾದ ಸೇರಿದ್ದಾರೆ.

    ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡಪರ ಸಂಘಟನೆಗಳು ಇಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಶ್ರೀಗಳ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ, ದೀಪ ಬೆಳಗಿ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

    ಇಂದು ಬೆಳಗ್ಗೆ ಕರುನಾಡ ಸಂಘಟನೆಗಳ ಒಕ್ಕೂಟದ ಸದಸ್ಯರು ಹಾಗೂ ಶ್ರೀಗಳ ಭಕ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೃಷ್ಣೈಕ್ಯರಾದ ಶ್ರೀ ವಿಶ್ವೇಶತೀರ್ಥರ ಆತ್ಮಕ್ಕೆ ಶ್ರೀಕೃಷ್ಣ ಪರಮಾತ್ಮ ಶಾಂತಿ ನೀಡಲಿ ಎಂದು ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.

  • ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಡುವ ಮೂಲಕ ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದ ಸೇವಿಸಿ ಸಾವನ್ನಪ್ಪಿದವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪಕ್ಕದಲ್ಲಿ ಅರಳಿ ಹಾಗೂ ಬೇವಿನ ಗಿಡ ನೆಟ್ಟು ವಿಷ ದುರಂತದಲ್ಲಿ ಮಡಿದವರಿಗಾಗಿ ಹಾಲು ತುಪ್ಪ ಎರೆದು ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

    ಡಿಸೆಂಬರ್ 14, 2018 ರಲ್ಲಿ ಸುಳ್ವಾಡಿ ಮಾರಮ್ಮನ ವಿಷ ದುರಂತದಲ್ಲಿ 17 ಜನ ವಿಷ ಪ್ರಾಶನ ಮಾಡಿ ಸಾವನ್ನಪ್ಪಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸಾವನ್ನಪ್ಪಿದ ಎಲ್ಲರಿಗೂ ಮೃತರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

  • ಹೆಚ್ ವಿಶ್ವನಾಥ್ ರಾಜೀನಾಮೆ- ಶ್ರದ್ಧಾಂಜಲಿ ಕೋರಿ ಜೆಡಿಎಸ್‍ನಿಂದ ಆಕ್ರೋಶ

    ಹೆಚ್ ವಿಶ್ವನಾಥ್ ರಾಜೀನಾಮೆ- ಶ್ರದ್ಧಾಂಜಲಿ ಕೋರಿ ಜೆಡಿಎಸ್‍ನಿಂದ ಆಕ್ರೋಶ

    ಚಾಮರಾಜನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಇದೀಗ ಹೆಚ್ ವಿಶ್ವನಾಥ್ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ.

    ಹೌದು, ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೆ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅಲ್ಲದೆ ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಬರಹ ಬರೆದಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ರಾಜೀನಾಮೆ ನೀಡಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.

    ಇನ್ನೊಂದೆಡೆ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬೆಂಕಿ ಬಿದ್ದಿದ್ದರೆ, ಜೆಡಿಎಸ್ ಕಾರ್ಯಕರ್ತರಿಗೆ ಮರುಚುನಾವಣೆ ಬಗ್ಗೆ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಮತ್ತು ಜಿಡಿ ಹರೀಶ್ ಗೌಡರ ಹೆಸರು ಪ್ರಸ್ತಾಪವಾಗುತ್ತಿದೆ. ಹುಣಸೂರಿಗೆ ಜಿಡಿ ಹರೀಶ್ ಗೌಡ ಮತ್ತು ಕೆಆರ್ ಪೇಟೆಗೆ ನಿಖಿಲ್ ಹೆಸರನ್ನು ಕಾರ್ಯಕರ್ತರು ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ ಶಾಸಕರ ರಾಜೀನಾಮೆ ಬೆನ್ನಲ್ಲೇ ವಾಟ್ಸಪ್ ನಲ್ಲಿ ನಿಖಿಲ್ ಮತ್ತು ಜಿಡಿ ಹರೀಶ್ ಗೌಡ ಪರ ಕಾರ್ಯಕರ್ತರ ಬ್ಯಾಟಿಂಗ್ ಮಾಡುತ್ತಿದ್ದಾರೆ.

    ಕೇಂದ್ರ ಬಜೆಟ್ ಮರುದಿನವೇ ಜೆಡಿಎಸ್‍ನ ಮೂವರು ಹಾಗೂ ಕಾಂಗ್ರೆಸ್ ನ 10 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಯ ಪತ್ರದೊಂದಿಗೆ ಸ್ಪೀಕರ್ ಗೆ ಕಚೇರಿಗೆ ತೆರಳಿದಾಗ ಅಲ್ಲಿ ಸ್ಪೀಕರ್ ಇರಲಿಲ್ಲ. ಹೀಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಬಳಿಕ ಅತೃಪ್ತ ಶಾಸಕರೆಲ್ಲರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕೂಡ ಉಪಸ್ಥಿತರಿದ್ದರು.

    ಮುನಿರತ್ನ, ರಾಮಲಿಂಗಾರೆಡ್ಡಿ ಹಾಗೂ ಆನಂದ್ ಸಿಂಗ್ ಹೊರತು ಪಡಿಸಿ ಉಳಿದೆಲ್ಲ ಅತೃಪ್ತ ಶಾಸಕರು ಮುಂಬೈ ಹೊಟೇಲಿನಲ್ಲಿ ತಂಗಿದ್ದಾರೆ. ಇವರ ಜೊತೆಯಲ್ಲಿ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ, ಬಿಎಸ್‍ವೈ ಪಿಎ ಸಂತೋಷ್ ಇದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಇತ್ತ ಅಮೆರಿಕಗೆ ತೆರಳಿರುವ ಸಿಎಂ ಅವರು ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

  • ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

    ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

    ರಾಯಚೂರು: ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತುಮಕೂರಿನ ಕಲಾವಿದರೊಬ್ಬರು ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಪಂಚ ಕುಂಚ ಕಲಾವಿದ ತುಮಕೂರಿನ ಪರಮೇಶ್ ಗುಬ್ಬಿ ಮೃತ ವಿದ್ಯಾರ್ಥಿನಿಯ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿದ್ಯಾರ್ಥಿನಿ ಅಸಹಜ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ದೇಶದೆಲ್ಲೆಡೆ ಕೂಗೂ ಜೋರಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿದ್ದಾರಾ ಎನ್ನುವುದು ಬೆಳಕಿಗೆ ಬರಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಲಾವಿದ ಪರಮೇಶ್ ಆಗ್ರಹಿಸಿದ್ದಾರೆ. ಪರಮೇಶ್ ಅವರು ಚಿತ್ರ ಬಿಡಿಸಿದ ವಿಡಿಯೋ ಹಾಗೂ ಅವರು ಸ್ವತಃ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಡಿಯೋದಲ್ಲಿ ಪರಮೇಶ್ ಗುಬ್ಬಿ, “ಸರ್ಕಾರ ಈ ಕ್ರೂರಿಗಳಿಗೆ ಶಿಕ್ಷೆ ಕೊಡಬೇಕು. ಅಲ್ಲದೇ ಆ ಆರೋಪಿ ಜೊತೆ ಇದ್ದ ಉಳಿದ ಸಹಚರರನ್ನು ಹಿಡಿದು ಶಿಕ್ಷೆ ಕೊಡಿಸಿ ವಿದ್ಯಾರ್ಥಿನಿಗೆ ತಕ್ಕ ನ್ಯಾಯ ಒದಗಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಇದೇ ರೀತಿ ಹೆಣ್ಣು ಮಕ್ಕಳ ಮೇಲೆ ತುಂಬಾ ತೊಂದರೆ ಆಗುತ್ತಿದೆ. ಈ ರೀತಿ ಮಾಡಿದವರನ್ನು ಸರ್ಕಾರ ದೊಡ್ಡ ಶಿಕ್ಷೆ ಕೊಟ್ಟರೆ ಈ ರೀತಿ ಯಾರು ಮಾಡುವುದಿಲ್ಲ ಎಂಬುದು ನನ್ನ ಅನಿಸಿಕೆ” ಎಂದು ಹೇಳಿದ್ದಾರೆ.

    ಸದ್ಯ ರಾಜ್ಯಾದ್ಯಂತ ವಿದ್ಯಾರ್ಥಿಗಳು ಹಾಗೂ ವಿವಿಧೆಡೆಯಿಂದ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ರಾಯಚೂರು ಡಿವೈಎಸ್‍ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಮೃತ ವಿದ್ಯಾರ್ಥಿನಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್‍ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ಮಧು ತಾಯಿ ಇದು ಕೊಲೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತ ವಿದ್ಯಾರ್ಥಿನಿಯ ಗೆಳೆಯ ಸುದರ್ಶನ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

    https://www.youtube.com/watch?v=1ol72NiFAPg