Tag: ಶೌರ್ಯ ಪ್ರಶಸ್ತಿ

  • ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

    ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

    ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಸಮಯದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಗಡಿ ಭದ್ರತಾ ಪಡೆಯ (BSF) 16 ಸಿಬ್ಬಂದಿಗೆ ಕೇಂದ್ರ ಸರ್ಕಾರ ಶೌರ್ಯ ಪದಕ (Gallantry Medals) ಘೋಷಿಸಿದೆ.

    ಆಪರೇಷನ್ ಸಿಂಧೂರದ ವೇಳೆ ಅಚಲ ಪರಾಕ್ರಮ, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ 16 ಬಿಎಸ್‌ಎಫ್ ಯೋಧರಿಗೆ ಸ್ವಾತಂತ್ರ್ಯೋತ್ಸವದಂದು (Independence Day) ಶೌರ್ಯ ಪದಕ ನೀಡಲಾಗುವುದು. ಈ ಪದಕಗಳು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಬಿಎಸ್‌ಎಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದನ್ನೂ ಓದಿ: ದಾವಣಗೆರೆ | ಅಪ್ರಾಪ್ತನಿಂದ ಬೈಕ್ ರೈಡ್ – ಮಾಲೀಕನಿಗೆ 25,000 ದಂಡ

    ಪದಕ ವಿಜೇತರಲ್ಲಿ ಡೆಪ್ಯೂಟಿ ಕಮಾಂಡರ್, ಇಬ್ಬರು ಸಹಾಯಕ ಕಮಾಂಡರ್ ಮತ್ತು ಒಬ್ಬ ಇನ್ಸ್ಪೆಕ್ಟರ್ ಸೇರಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಪಡೆಗಳ 1,090 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಸರ್ಕಾರ ಪ್ರಕಟಿಸಿದೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 233 ಸಿಬ್ಬಂದಿಗೆ ಶೌರ್ಯ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 758 ಜನರಿಗೆ ಪ್ರತಿಭಾನ್ವಿತ ಸೇವಾ ಪದಕ ಘೋಷಿಸಲಾಗಿದೆ. ಇದರಲ್ಲಿ ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವಾ ಸಿಬ್ಬಂದಿಗೆ ಪದಕಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

  • ಶೌರ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ

    ಶೌರ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ

    ಬೆಳಗಾವಿ: ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ವೀರಯೋಧ ಗೌರವ ಲೆಫ್ಟಿನೆಂಟ್ ಬಸಪ್ಪ ರಾಚಪ್ಪ ಮುಗಳಿಹಾಳ ಅವರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡರು.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಸಪ್ಪ ರಾಚಪ್ಪ ಮುಗಳಿಹಾಳ 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಬೆಳಗಾವಿಗೆ ಮರಳಿದರು. ಉತ್ತರಾಖಂಡದ ಡೆಹ್ರಾಡೂನ್‍ನಿಂದ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಸಪ್ಪ ಮುಗಳಿಹಾಳ ರೈಲ್ವೆ ನಿಲ್ದಾಣದಲ್ಲಿ ನೆರೆದ ಜನರನ್ನು ನೋಡಿ ಅರೆಕ್ಷಣ ಭಾವುಕರಾದರು. ಡೆಹ್ರಾಡೂನ್‍ನಿಂದ ತಾಯ್ನಾಡಿಗೆ ವಾಪಸಾದ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.

    ಇದೇ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಚನ್ನಮ್ಮ ವೃತ್ತದಿಂದ ಅಶೋಕ ವೃತ್ತದ ಮಾರ್ಗವಾಗಿ ಬೆಳಗಾವಿ ಹೊರವಲಯ ಕಣಬರಗಿ ಬಳಿ ಸಂಕಲ್ಪ ಗಾರ್ಡನ್‍ನಲ್ಲಿ ಅದ್ಧೂರಿ ಸನ್ಮಾನ ಸಮಾರಂಭದ ವೇದಿಕೆಗೆ ಆಗಮಿಸಿದರು. ಇದನ್ನೂ ಓದಿ:  ಚೊಚ್ಚಲ ಬಜೆಟ್‌ ಮಂಡನೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

    ಈ ಸಂದರ್ಭದಲ್ಲಿ ಮಾತನಾಡಿದ ಯೋಧ ಬಸಪ್ಪ ಮುಗಳಿಹಾಳ, 28 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಈ ದೇಹ ಮಾತ್ರ ನಿವೃತ್ತಿ ಆಗಿದೆ. ಆದರೆ ನನ್ನ ರಕ್ತದ ಕಣಕಣದಲ್ಲೂ ದೇಶಭಕ್ತಿ ಇದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಉಗ್ರನ ಗನ್ ವಶಕ್ಕೆ ಪಡೆದು ಆತನನ್ನು ಸದೆಬಡಿದಿದ್ದೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನನಗೆ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್, ರಕ್ಷಣಾ ಸಚಿವ ಜಾರ್ಜ್ ಫನಾರ್ಂಡಿಸ್ ಶೌರ್ಯ ಚಕ್ರ ನೀಡಿ ಗೌರವಿಸಿದ್ದರು. ಇಷ್ಟೊಂದು ಜನ ನನ್ನ ಸ್ವಾಗತಿಸಿರುವುದನ್ನು ನೋಡಿ ತುಂಬಾ ಸಂತಸವಾಗುತ್ತಿದೆ. ಯುವಕರು ಸೇನೆ ಸೇರಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ:  ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ

  • ರಸ್ತೆಯನ್ನೇ ನುಂಗುತ್ತಿರುವ ಅವೈಜ್ಞಾನಿಕವಾಗಿ ನಿರ್ಮಿಸಿದ ಕೆರೆ

    ರಸ್ತೆಯನ್ನೇ ನುಂಗುತ್ತಿರುವ ಅವೈಜ್ಞಾನಿಕವಾಗಿ ನಿರ್ಮಿಸಿದ ಕೆರೆ

    ಮಡಿಕೇರಿ: ವ್ಯಕ್ತಿಯೊಬ್ಬರು ಅವೈಜ್ಞಾನಿಕವಾಗಿ ಕೆರೆ ನಿರ್ಮಿಸಿದ ಪರಿಣಾಮ ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದ ವಿದ್ಯಾರ್ಥಿನಿಯ ಮನೆ ಸೇರಿದಂತೆ 80 ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೆರೆಯೊಂದು ಗುಳುಂ ಮಾಡಲು ಹೊರಟಿದೆ.

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದ ರೋಹಿತ್ ಎಂಬವರು ಎರಡು ಎಕರೆ ಜಾಗದಲ್ಲಿ ಅವೈಜ್ಞಾನಿಕವಾಗಿ ಮತ್ತು ಅಕ್ರಮವಾಗಿ ನಿರ್ಮಿಸಿದ ಕೆರೆ ಈಗ ಮನೆ ಮತ್ತು ರಸ್ತೆಯನ್ನು ನುಂಗುತ್ತಿದೆ. ಇದಕ್ಕೂ ಮೊದಲು ಚೌಡ್ಲು ಗ್ರಾಮ ಪಂಚಾಯಿತಿ ಅನುದಾನ ಬಳಸಿ 2017ರಲ್ಲಿ ಪಂಚಾಯಿತಿ ಸದಸ್ಯರೊಬ್ಬರು ಕೆರೆ ನಿರ್ಮಿಸಿದ್ದರು. ಆದರೆ ಭೂಮಿಯ ಆಳದಿಂದ ತಳಪಾಯ ಹಾಕುವ ಬದಲು ಭೂಮಿ ಮೇಲಿನಿಂದಲೇ ಅಡಿಪಾಯ ಹಾಕಿ ಕಳಪೆ ಕಾಮಗಾರಿಯಿಂದ ಕೆರೆ ನಿರ್ಮಿಸಲಾಗಿತ್ತು.

    ಹೀಗಾಗಿ ಸಂಗ್ರಹವಾಗಿದ್ದ ನೀರೆಲ್ಲಾ ಸಂಪೂರ್ಣ ಸೋರಿಕೆಯಾಗಿ ಮುದ್ದು ಎಂಬವರ ಮನೆಗೆ ತೀವ್ರ ಸಮಸ್ಯೆ ಎದುರಾಗಿತ್ತು. ಇದಾದ ಬಳಿಕ ತಮ್ಮ ಕಾಫಿ ಎಸ್ಟೇಟ್‍ಗೆ ಬೇಕಾಗಿದ್ದ, ಬರೋಬ್ಬರಿ 2 ಎಕರೆ ವಿಸ್ತೀರ್ಣದಲ್ಲಿ ಪಂಚಾಯಿತಿ ಒಪ್ಪಿಗೆ ಇಲ್ಲದೆ ಬೃಹತ್ ಕೆರೆ ನಿರ್ಮಿಸಿದ್ದಾರೆ. ಇದರಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದು ಶೌರ್ಯ ಪ್ರಶಸ್ತಿ ಪಡೆದಿದ್ದ ಬಾಲಕಿ ಶಾಂತಿ ಅವರ ಮನೆ ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಮನೆಯ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿದ್ದು ಯಾವ ಸಂದರ್ಭದಲ್ಲಿ ಮನೆ ಕುಸಿದು ಬೀಳುತ್ತದೆಯೋ ಎನ್ನುವ ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ ಅಂತ ಶಾಂತಿ ಅವರ ತಂದೆ ಮುದ್ದು ಆತಂಕ ವ್ಯಕ್ತಪಡಿಸಿದ್ದಾರೆ. ಕೂಲಿ ಮಾಡಿ ಬದುಕುತ್ತಿರುವ ನಮಗೆ ನಮ್ಮ ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸೋಣ ಎಂದರೆ ಕೇವಲ ಮನೆ ಬಗ್ಗೆ ಚಿಂತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

    ಇನ್ನೂ ಈ ಕುರಿತು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗಿದೆ. ಆದರೆ ಯಾರು ಈ ಭಾಗದ ಜನರಿಗೆ ನ್ಯಾಯ ಕೊಡಿಸುತ್ತಿಲ್ಲ. ಇದರಿಂದ ಏನು ಮಾಡಬೇಕೆಂಬ ದಿಕ್ಕೇ ತೋಚದಂತೆ ಆಗಿದೆ ಅಂತ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಅಲ್ಲದೇ ಮುದ್ದು ಅವರ ಮನೆ ಸೇರಿದಂತೆ ಐದು ಮನೆಗಳಿಗೆ ಕೆರೆಯಿಂದ ಆಪತ್ತು ಎದುರಾಗಿದೆ. ಇನ್ನೂ ಕಿಬ್ಬೆಟ್ಟ ಗ್ರಾಮದೊಳಕ್ಕೆ ಸಂಪರ್ಕ ಕಲ್ಪಿಸಲು ಇರುವ ರಸ್ತೆಗೆ ಹೊಂದಿಕೊಂಡಂತೆ ಕೆರೆ ಇರುವುದರಿಂದ ನೀರು ಹೆಚ್ಚಿದಂತೆಲ್ಲಾ ರಸ್ತೆ ಕೆರೆಗೆ ಕುಸಿದು ಬೀಳುತ್ತಿದೆ. ಮಳೆಗಾಲ ಆರಂಭವಾಯಿತು ಅಂದರೆ, ಬಹುತೇಕ ರಸ್ತೆ ಕೆರೆಯ ಪಾಲಾಗಲಿದೆ. ಕೆರೆಯಲ್ಲಿ ಅಪಾರ ಪ್ರಮಾಣದ ನೀರಿದ್ದು ಗ್ರಾಮದ ಈ ರಸ್ತೆಯಲ್ಲಿ ಓಡಾಡುವಾಗ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಓಡಾಡ ಬೇಕಾಗಿದೆ. ಇದನ್ನೂ ಓದಿ: ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

    ಒಟ್ಟಿನಲ್ಲಿ ಒಂದು ವೇಳೆ ರಸ್ತೆ ಕುಸಿದು ಹೋದಲ್ಲಿ ಗ್ರಾಮಕ್ಕೆ ಸಂಪರ್ಕವೇ ಕಡಿತವಾಗಲಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಆಗಬಹುದಾಗಿರುವ ಅನಾಹುತವನ್ನು ತಪ್ಪಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

  • ತಾಯಿಯ ಬಳಿ 100 ರೂ. ಪಡೆದು ಕಾಲೇಜಿಗೆ ಹೋದ ಯುವಕ ಕಾಣೆ

    ತಾಯಿಯ ಬಳಿ 100 ರೂ. ಪಡೆದು ಕಾಲೇಜಿಗೆ ಹೋದ ಯುವಕ ಕಾಣೆ

    ಮಂಡ್ಯ: ಕಾಲೇಜಿಗೆ ಹೋಗುತ್ತೇನೆ ಎಂದು ಹೋದ ಮಗ ಇದೀಗ ಕಾಣೆಯಾಗಿದ್ದು, ತಂದೆ-ತಾಯಿಯಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಮಂಡ್ಯ ತಾಲೂಕಿನ ಹುಲಿವಾಹನ ಗ್ರಾಮದಲ್ಲಿ ನಡೆದಿದೆ.

    ಹುಲಿವಾಹನ ಗ್ರಾಮದ ವಿಜಯ್‍ಕುಮಾರ್ ಮತ್ತು ಶೋಭಾ ದಂಪತಿಯ ಮಗ ಚೇತನ್‍ಕುಮಾರ್ (17) ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದಾನೆ. ಮಂಡ್ಯದ ಅನಿಕೇತನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚೇತನ್‍ಕುಮಾರ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ.

    ಚೇತನ್‍ಕುಮಾರ್ ಕಳೆದ ಶುಕ್ರವಾರ ಬೆಳಗ್ಗೆ 9.30ಕ್ಕೆ ಕಾಲೇಜಿಗೆ ಹೋಗುವಾಗ ನನಗೆ ಪರೀಕ್ಷೆ ಹತ್ತಿರ ಬರುತ್ತಿದೆ. ನಾನು ಹಾಸ್ಟೆಲ್‍ನಲ್ಲಿ ಇರುತ್ತೇನೆ ಎಂದು ತಾಯಿ ಶೋಭಾ ಬಳಿ 100 ರೂ. ತೆಗೆದುಕೊಂಡು ಹೋಗಿದ್ದ. ಅದೇ ದಿನ ಬೆಳಗ್ಗೆ 11.30ಕ್ಕೆ ಚೇತನ್ ತಂದೆ ವಿಜಯ್‍ಕುಮಾರ್ ಅವರಿಗೆ ಅನಿಕೇತ ಕಾಲೇಜು ಆಡಳಿತ ಮಾಡಿ ಫೋನ್ ಮಾಡಿ, ನಿಮ್ಮ ಮಗ ಕಾಲೇಜಿಗೆ ಬಂದಿಲ್ಲ ಎಂದು ತಿಳಿಸಿದ್ದರು. ನಂತರ ವಿಜಯ್‍ಕುಮಾರ್ ಮಗನನ್ನು ಹಾಸ್ಟೆಲ್, ಮಂಡ್ಯ ನಗರ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ.

    ವಿಜಯ್‍ಕುಮಾರ್ ದಂಪತಿ ಪುತ್ರ ಚೇತನ್‍ಕುಮಾರ್‌ನ ಸ್ನೇಹಿತರು ಹಾಗೂ ಸಂಬಂಧಿಕರನ್ನು ಸಹ ವಿಚಾರಿಸಿದ್ದಾರೆ. ಆದರೆ ಎಲ್ಲೂ ಸಹ ಮಗನ ಸುಳಿವು ಸಿಕ್ಕಿಲ್ಲ. ಸದ್ಯ ಈ ಬಗ್ಗೆ ಕೆರಗೊಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚೇತನ್‍ಕುಮಾರ್ ಸುಳಿವು ದೊರೆತವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಸಹ ಕೇಳಿಕೊಂಡಿದ್ದಾರೆ.

  • ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ

    ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ

    ನವದೆಹಲಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿ 2019ರ ಪಟ್ಟಿ ಪ್ರಕಟವಾಗಿದ್ದು, ರಾಜ್ಯದ ಇಬ್ಬರು ಮಕ್ಕಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ರಾಯಚೂರಿನ ವೆಂಕಟೇಶ್, ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು. ಇಂದು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಅಂಬುಲೆನ್ಸ್‌ಗೆ ದಾರಿ ತೋರಿಸಿದ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ

    ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ್, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ ದೇಹದೊಂದಿಗೆ ಐದು ಮಂದಿ ಹೊತ್ತಿದ್ದ ಅಂಬುಲೆನ್ಸ್  ಜಾಗಟ್ಕಲ್ ನಿಂದ ಯಾದಗಿರಿ ಕಡೆಗೆ ಹೊರಟಿತ್ತು. ಗುಂಗಾಲ್ ರಸ್ತೆಯಲ್ಲಿ ರೋಡ್ ಸಂಪೂರ್ಣ ಪ್ರವಾಹ ನೀರಿನಿಂದ ಆವೃತಗೊಂಡು ರಸ್ತೆ ಕಾಣದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈ ವೇಳೆ ಅಂಬುಲೆನ್ಸ್‌ ನೆರವಿಗೆ ಬಂದಿದ್ದ ಬಾಲಕ ವೆಂಕಟೇಶ್, ಅಂಬುಲೆನ್ಸ್ ಡ್ರೈವರ್ ತನನ್ನು ಹಿಂಬಾಲಿಸುವಂತೆ ಸೂಚಿಸಿ ರಸ್ತೆ ದಾಟಿಸಲು ನೆರವು ನೀಡಿದ್ದ.

    ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣು ಗ್ರಾಮದ ಆರತಿ ಸೇಠ್, ಕೋಪೊದ್ರಿಕ್ತ ಹಸುವಿನ ದಾಳಿಯಿಂದ ತನ್ನ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದಳು. ಉದ್ರಿಕ್ತ ಹಸು ಬಾಲಕನ ಮೇಲೆ ದಾಳಿ ಮಾಡಲು ಬರುತ್ತಿತ್ತು. ಕೊಂಬಿನಿಂದ ಇನ್ನೇನು ತಿವಿಯುವುದರಲ್ಲಿ ಕ್ಷಣ ಮಾತ್ರದಲ್ಲಿ ತಮ್ಮನ ರಕ್ಷಣೆಗೆ ದಾವಿಸಿ, ಹಸು ಮತ್ತು ತಮ್ಮನ ನಡುವೆ ನಿಂತು ತಮ್ಮನ ಪ್ರಾಣ ರಕ್ಷಿಸಿದ್ದಳು. ಮಕ್ಕಳ ಈ ಧೈರ್ಯ ಪ್ರಶಂಸಿಸಿ ಈ ಪ್ರಶಸ್ತಿ ನೀಡಲಾಗಿದೆ.