Tag: ಶೋಯೆಬ್ ಮಲಿಕ್

  • ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಸದ್ಯ ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾನಿಯಾ ದಂಪತಿಯ ಡಿವೋರ್ಸ್ ವದಂತಿಯ ಬೆನ್ನಲ್ಲೇ ಪತ್ನಿ ಸಾನಿಯಾಗೆ ಸ್ವೀಟ್ ಆಗಿ ಶೋಯೆಬ್ ಮಲಿಕ್(Shoaib Malik) ವಿಶ್ ಮಾಡಿದ್ದಾರೆ. ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಕ್ರೀಡಾ ಲೋಕದಲ್ಲಿ ಸದ್ಯ ಒಂದೇ ಸುದ್ದಿ, ಅದು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಡಿವೋರ್ಸ್(Divorce) ವಿಚಾರ. ಸದ್ಯದಲ್ಲೇ ಈ ಜೋಡಿ ಬೇರೆಯಾಗಲಿದ್ದಾರೆ. ಶೋಯೆಬ್ ಅವರು ಪಾಕಿಸ್ತಾನಿ ಮಾಡೆಲ್ ಜೊತೆ ಆಯೇಶಾ ಒಮರ್ ಜೊತೆ ಸಂಪರ್ಕ ಹೊಂದಿದ್ದಾರೆ. ಆಯೇಶಾ ಎಂಟ್ರಿಯಿಂದ ಸಾನಿಯಾ ದಾಂಪತ್ಯದಲ್ಲಿ ಬಿರುಕಾಗಿದೆ ಎನ್ನಲಾಗಿತ್ತು. ಇದೀಗ ಈ ಎಲ್ಲಾ ವದಂತಿಗೂ ತೆರೆ ಬಿದ್ದಿದೆ. ಪತ್ನಿ ಸಾನಿಯಾಗೆ, ಶೋಯೆಬ್ ಸ್ವೀಟ್ ವಿಶ್ ಮಾಡಿದ್ದಾರೆ.

    ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ, ಸದಾ ನಿಮಗೆ ಆರೋಗ್ಯ ಮತ್ತು ಖುಷಿಯ ಜೀವನವಿರಲಿ ಎಂದು ಆಶಿಸುತ್ತೇನೆ ಎಂದು ವಿಶ್ ಮಾಡಿದ್ದಾರೆ. ಕ್ರಿಕೆಟಿಗ ಶೋಯೆಬ್ ಪೋಸ್ಟ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಈ ಮೂಲಕ ಡಿವೋರ್ಸ್ ಗಾಸಿಪ್‌ಗೂ ಬ್ರೇಕ್ ಬಿದ್ದಂತಾಗಿದೆ. ಇದನ್ನೂ ಓದಿ:ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ಇನ್ನೂ ಪಾಕಿಸ್ತಾನಿ ಚಾನೆಲ್‌ವೊಂದರಲ್ಲಿ `ದಿ ಮಿರ್ಜಾ ಮಲಿಕ್ ಶೋ’ ಎಂಬ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಶೋ ಬಳಿಕ ಸಾನಿಯಾಗೆ ಶೋಯೆಬ್ ವಿಶ್ ನೋಡಿ, ನೆಟ್ಟಿಗರು ಸೈಲೆಂಟ್ ಆಗಿದ್ದಾರೆ. ಒಂದು ವೇಳೆ ಡಿವೋರ್ಸ್ ಆಗೋದಾದರೆ, ಅಧಿಕೃತವಾಗಿ ಈ ಜೋಡಿ ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಮುಂಬೈ: ಯಶಸ್ವಿ ಕ್ರೀಡಾ ಜೋಡಿಗಳಲ್ಲಿ ಒಂದಾಗಿದ್ದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಅವರಿಬ್ಬರು ವಿಚ್ಛೇದನ ಪಡೆಯುವುದು ಖಚಿತ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

    ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ವೈಮನಸ್ಸನ್ನು ಮರೆತು ಪ್ರೀತಿಸಿ ಈ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆ ಬಳಿಕ 2018ರಲ್ಲಿ ಒಂದು ಮುದ್ದಾದ ಗಂಡು ಮಗವನ್ನು ಪಡೆದಿದ್ದರು. ಆದರೆ ಇದೀಗ ಈ ಜೋಡಿ ಮಧ್ಯೆ ಬಿರುಕು ಕಂಡುಬಂದಿದ್ದು ಬೇರೆ ಬೇರೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದ ಮಲಿಕ್ ಆಪ್ತ ಸೇಹ್ನಿತರೊಬ್ಬರು, ಸಾನಿಯಾ ಮಿರ್ಜಾ ಮತ್ತು ಮಲಿಕ್ ಈಗಾಗಲೇ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಕಾನೂನು ರೀತಿಯಲ್ಲಿ ವಿಚ್ಛೇದನ ಪಡೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ನನಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಬ್ಬರೂ ಬೇರೆಯಾಗುತ್ತಿರುವುದು ಖಚಿತ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಸಾನಿಯಾ ಹಾಗೂ ಮಲಿಕ್ 2010ರ ಎಪ್ರಿಲ್ 12 ರಂದು ಹೈದರಾಬಾದ್‍ನಲ್ಲಿ ಮುಸ್ಲಿಂ ಪದ್ಧತಿಯಂತೆ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ಆ ಬಳಿಕ ಮಲಿಕ್ ಭಾರತದ ಅಳಿಯ ಎಂದೇ ಕರೆಸಿಕೊಳ್ಳುತ್ತಿದ್ದರು. ಮೂಗುತಿ ಸುಂದರಿಯನ್ನು ವರಿಸಿ ಸಂತೋಷವಾಗಿಯೇ ಇದ್ದ ಮಲಿಕ್ ಇದೀಗ ಬೇರೆಯಾಗಲು ಕಾರಣ ಪಾಕಿಸ್ತಾನದ ನಟಿ ಎಂಬ ಗುಮಾನಿ ಎದ್ದಿದೆ. ಇದನ್ನೂ ಓದಿ: ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    ಆಪ್ತಳಾದ ಆಯೇಷಾ:
    ಇದೀಗ ಮಲಿಕ್ ಜೊತೆ ಪಾಕಿಸ್ತಾನದ ನಟಿ ಆಯೇಷಾ ಒಮರ್ (Ayesha Omar) ಹೆಸರು ಕೇಳಿ ಬರುತ್ತಿದೆ. ಆಯೇಷಾ ಒಮರ್, ಪಾಕಿಸ್ತಾನಿ ನಟಿ, ಮಾಡೆಲ್ ಮತ್ತು ಯೂಟ್ಯೂಬರ್. ಪಾಕಿಸ್ತಾನಿ ಚಲನಚಿತ್ರಗಳಾದ ‘ಕರಾಚಿ ಸೆ ಲಾಹೋರ್’ (2015), ‘ಯಾಲ್ಘರ್’ (2017) ಮತ್ತು ‘ಕಾಫ್ ಕಂಗನಾ’ (2019)ದಲ್ಲಿ ನಟಿಸಿದಾಕೆ. ಪಾಕಿಸ್ತಾನ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಆಯೇಷಾ ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2015ರಲ್ಲಿ ಯಶಸ್ವಿ ರೊಮ್ಯಾಂಟಿಕ್-ಕಾಮಿಡಿ ಚಿತ್ರ ‘ಕರಾಚಿ ಸೆ ಲಾಹೋರ್’ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಆಯೇಷಾ ಖ್ಯಾತರಾಗಿದ್ದರು. ಇದಾದ ಬಳಿಕ ಆಯೇಶಾ ಒಮರ್, ಶೋಯೆಬ್ ಮಲಿಕ್ ಅವರೊಂದಿಗೆ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಬಳಿಕ ಇವರಿಬ್ಬರ ನಡುವೆ ಆಪ್ತತೆ ಬೆಳೆದು ಇದೀಗ ಮಲಿಕ್ ಸಾನಿಯಾ ಜೊತೆಗಿನ ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ನವದೆಹಲಿ: ಭಾರತದ ಮಾಜಿ ಟೆನ್ನಿಸ್ (Tennis) ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಎರಡೂ ದೇಶಗಳಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ಜೋಡಿ ಎಂದರೆ ತಪ್ಪಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿ ದೂರವಾಗುತ್ತಿರುವ ಬಗ್ಗೆ ಭಾರೀ ಅನುಮಾನ ಹುಟ್ಟಿಕೊಂಡಿದೆ. ಸಾನಿಯಾ ಮಿರ್ಜಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ ಒಂದು ಅವರಿಬ್ಬರ ವಿಚ್ಛೇದನದ (Divorce) ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಹೌದು, ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. 12 ವರ್ಷಗಳ ದಾಂಪತ್ಯ ಜೀವನದ ಬಳಿಕ ಇದೀಗ ಅವರಿಬ್ಬರ ನಡುವೆ ಬಿರುಕು ಬಿದ್ದಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾನಿಯಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಗಟಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ‘ಒಡೆದ ಹೃದಯಗಳು ಎತ್ತ ಸಾಗುತ್ತಿವೆ? ಅಲ್ಲನನ್ನು ಹುಡುಕಲು’ ಎಂದು ಬರೆದಿದ್ದಾರೆ.

    12 ವರ್ಷಗಳ ಹಿಂದೆ ಜೋಡಿಗಳು ತಮ್ಮ ನಿಶ್ಚಿತಾರ್ಥದ ಬಗ್ಗೆ ಘೋಷಣೆ ಮಾಡಿದಾಗ ಭಾರೀ ಚರ್ಚೆಗೆ ಕಾರಣರಾಗಿದ್ದರು. ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಟೆನ್ನಿಸ್ ತಾರೆ ಪಾಕಿಸ್ತಾನಿಯನ್ನು ಯಾಕೆ ಮದುವೆಯಾಗಬೇಕೆಂಬ ಟೀಕೆಗಳೂ ಹರಿದಿತ್ತು. ಆದರೆ ಇದೀಗ ಇವರಿಬ್ಬರ ವಿಚ್ಛೇದನದ ಬಗ್ಗೆ ವರದಿಯಾಗಿದ್ದು, ಮತ್ತೆ ಟೀಕೆಗೊಳಗಾಗುತ್ತಿದ್ದಾರೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ

    ಸಾನಿಯಾ ಹಾಗೂ ಶೋಯೆಬ್ ಬೇರ್ಪಡುತ್ತಿರುವ ಬಗ್ಗೆ ಪಾಕಿಸ್ತಾನದಲ್ಲೂ ವದಂತಿಗಳು ಹಬ್ಬಿವೆ. ಆದರೆ ಈ ಬಗ್ಗೆ ದಂಪತಿ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿಲ್ಲ. ಒಂದು ವೇಳೆ ದಂಪತಿ ನಿಜವಾಗಿಯೂ ಬೇರ್ಪಟ್ಟರೆ ಮತ್ತೆ ಟೀಕೆಗೆ ಗುರಿಯಾಗುವ ಸಾಧ್ಯತೆಯಿದೆ.

    ಸಾನಿಯಾ ಭಾರತದ ಮಾಜಿ ಟೆನಿಸ್ ಆಟಗಾರ್ತಿಯಾಗಿದ್ದು, ಗಮನಾರ್ಹ ಪುರಸ್ಕಾರಗಳನ್ನು ಗೆದ್ದಿದ್ದಲ್ಲದೇ ದೇಶಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲೊಬ್ಬರಾಗಿರುವ ಇವರು ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    Live Tv
    [brid partner=56869869 player=32851 video=960834 autoplay=true]

  • ಸಾನಿಯಾ ಎಲ್ಲಿಯವ್ರು ಎಂಬುದಕ್ಕಿಂತ, ಪ್ರೀತಿಸಿದವ್ರನ್ನು ಮದ್ವೆಯಾಗೋದು ಮುಖ್ಯ: ಮಲಿಕ್

    ಸಾನಿಯಾ ಎಲ್ಲಿಯವ್ರು ಎಂಬುದಕ್ಕಿಂತ, ಪ್ರೀತಿಸಿದವ್ರನ್ನು ಮದ್ವೆಯಾಗೋದು ಮುಖ್ಯ: ಮಲಿಕ್

    – ಬೇರೆ ಬೇರೆ ದೇಶಗಳಾದ್ರೂ ಮದ್ವೆಗೆ ಅಡ್ಡಿಯಾಗಿಲ್ಲ

    ಇಸ್ಲಾಮಾಬಾದ್: ಅವರು ಎಲ್ಲಿಯವರು ಎಂಬುದಕ್ಕಿಂತ, ಪ್ರೀತಿಸಿದವರನ್ನು ಮದುವೆಯಾಗುವುದು ಮುಖ್ಯ ಎಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರು ಹೇಳಿದ್ದಾರೆ.

    ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರು 2008 ಏಪ್ರಿಲ್ 12ರಂದು ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಈಗ ಅವರ ಮದುವೆ ಕುರಿತು ಮಾತನಾಡಿರುವ ಮಲಿಕ್, ನಮ್ಮದು ಬೇರೆ ಬೇರೆ ದೇಶಗಳಾದರೂ ಅದು ನಮ್ಮ ಪ್ರೀತಿಗೆ ಮತ್ತು ಮದುವೆಗೆ ಅಡ್ಡಿ ಆಗಲಿಲ್ಲ ಎಂದಿದ್ದಾರೆ.

    ತಮ್ಮ ಮದುವೆ ವಿಚಾರವಾಗಿ ಪಾಕ್ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶೋಯೆಬ್, ನಾವು ಮದುವೆಯಾಗುವಾಗ ನಮ್ಮ ಬಾಳ ಸಂಗಾತಿ ಎಲ್ಲಿಯವಳು. ಎರಡು ದೇಶಗಳ ಮಧ್ಯೆ ಏನು ನಡೆಯುತ್ತಿದೆ ದೇಶಗಳ ಸಂಬಂಧ, ರಾಜಕೀಯ ಮುಖ್ಯವಾಗುವುದಿಲ್ಲ. ಬದಲಿಗೆ ನೀವು ಯಾವ ದೇಶ ಎಂಬುದಕ್ಕಿಂತ ಇಷ್ಟಪಟ್ಟವರನ್ನು ಮದುವೆಯಾಗುವುದು ಮುಖ್ಯವಾಗುತ್ತದೆ ಎಂದು ಮಲಿಕ್ ತಿಳಿಸಿದ್ದಾರೆ.

    ನನಗೆ ಭಾರತದಲ್ಲಿ ಹಲವಾರು ಸ್ನೇಹಿತರು ಇದ್ದಾರೆ. ನಾನು ಯಾವತ್ತೂ ಎಡರು ದೇಶಗಳ ಸಂಬಂಧದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನು ಕ್ರಿಕೆಟ್ ಆಟಗಾರ, ರಾಜಕೀಯ ವ್ಯಕ್ತಿ ಅಲ್ಲ. ನಾನು ಹಲವಾರು ಬಾರಿ ಭಾರತದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೇವೆ ಹಾಗೂ ಅದರಲ್ಲಿ ಜಯ ಸಾಧಿಸಿದ್ದೇವೆ. ನನ್ನ ಪತ್ನಿ ಭಾರತದ ಪರವಾಗಿ ಆಡುತ್ತಾರೆ. ಇದರಲ್ಲಿ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮಲಿಕ್ ಮಾತನಾಡಿದ್ದಾರೆ.

    ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನವನ್ನು ಭಿನ್ನ ಕ್ರೀಡೆಯಲ್ಲಿ ಪ್ರತಿನಿಧಿಸುತ್ತಿದ್ದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2008 ಏಪ್ರಿಲ್ 12ರಂದು ಹೈದರಾಬಾದಿನ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ವಿವಾಹದ ನಂತರವೂ ಸಾನಿಯಾ ಮಿರ್ಜಾ ಭಾರತದ ಪರ ಆಡಿದರೆ, ಮಲಿಕ್ ಪಾಕಿಸ್ತಾನದ ಪರವಾಗಿ ಆಡಿದ್ದಾರೆ. ಈ ಜೋಡಿಗೆ ಹತ್ತು ವರ್ಷದ ನಂತರ 2018ರಲ್ಲಿ ಗಂಡು ಮಗು ಜನಿಸಿದೆ.

    ಸುಮಾರು 5 ತಿಂಗಳ ನಂತರ ಮಲಿಕ್, ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲಿದ್ದಾರೆ. ಲಾಕ್‍ಡೌನ್ ಘೋಷಣೆಯಾಗುವ ವೇಳೆ ಮಲಿಕ್ ಪಾಕಿಸ್ತಾನದಲ್ಲಿ ಇದ್ದರೆ, ಸಾನಿಯಾ ಭಾರತದಲ್ಲಿ ಇದ್ದರು. ಈಗ ಸದ್ಯ ಇಂಗ್ಲೆಂಡ್ ಟೂರ್ ಗೆ ಸಿದ್ಧವಾಗಿರುವ ಶೋಯೆಬ್ ನಾಲ್ಕು ವಾರ ರಜೆ ಪಡೆದು ಹೆಂಡತಿ ಮತ್ತು ಮಗನನ್ನು ನೋಡಲು ಬರುತ್ತಿದ್ದಾರೆ. ಕೊರೊನಾದಿಂದ ಅಂತಾರಾಷ್ಟ್ರೀಯ ವಿಮಾನಯಾನ ಬಂದ್ ಆದ ಕಾರಣ ಅವರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

  • ನಾಳೆ ಟಾಸ್ ಮಾಡಲು ಬರುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ ರೋಹಿತ್

    ನಾಳೆ ಟಾಸ್ ಮಾಡಲು ಬರುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ ರೋಹಿತ್

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ನವೆಂಬರ್ 7ರಂದು ಟಾಸ್ ಮಾಡಲು ರಾಜ್‌ಕೋಟ್ ಅಂಗಳಕ್ಕೆ ಇಳಿಯುತ್ತಿದ್ದಂತೆ ಭಾರತದ ಪರ ದಾಖಲೆ ಬರೆಯಲಿದ್ದಾರೆ. ನಾಳೆ ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ವೃತ್ತಿ ಜೀವನದ 100ನೇ ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ರೋಹಿತ್ ಶರ್ಮಾ ಆಡಲಿದ್ದಾರೆ. ಈ ಮೂಲಕ 100 ಟಿ20 ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

    ಸದ್ಯ ರೋಹಿತ್ ಶರ್ಮಾ ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯ ಆಡಿದ ಪಟ್ಟಿಯಲ್ಲಿ ಜಂಟಿ ಸ್ಥಾನವನ್ನು ಪಡೆದಿದ್ದು, ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ಮೊದಲ ಸ್ಥಾನದಲ್ಲಿದ್ದಾರೆ.

    ಶೋಯೆಬ್ ಮಲಿಕ್ ಇಲ್ಲಿವರೆಗೂ 111 ಪಂದ್ಯಗಳನ್ನು ಆಡಿದ್ದು, ಮಲಿಕ್ ನಂತರದ ಸ್ಥಾನದಲ್ಲಿ 99 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ಶಾಹಿದ್ ಆಫ್ರಿದಿ ಇದ್ದಾರೆ. ನಾಳೆಯ ಪಂದ್ಯ ಆಡುವ ಮೂಲಕ ಆಫ್ರಿದಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಏರಲಿದ್ದಾರೆ. 98 ಅಂತರಾಷ್ಟ್ರೀಯ ಟಿ20 ಪಂದ್ಯವಾಡಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

    ಯಾರು ಎಷ್ಟು ಪಂದ್ಯವಾಡಿದ್ದಾರೆ?
    ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯವಾಡಿದ ಭಾರತೀಯ ಕ್ರಿಕೆಟರಲ್ಲಿ ರೋಹಿತ್ ಶರ್ಮಾ ಮೊದಲಿಗರಾಗಿದ್ದಾರೆ. ಉಳಿದಂತೆ ಧೋನಿ (98), ಸುರೇಶ್ ರೈನಾ (78), ವಿರಾಟ್ ಕೊಹ್ಲಿ (72), ಯುವರಾಜ್ ಸಿಂಗ್ (57), ಶಿಖರ್ ಧವನ್ (56) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

    ಹಿಟ್ ರೆಕಾರ್ಡ್:
    99 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 2,452 ರನ್‌ಗಳನ್ನು ಗಳಿಸಿ, ಅತ್ಯಧಿಕ ರನ್ ಹೊಂದಿರುವ ಮೊದಲ ಆಟಗಾರರಾಗಿದ್ದಾರೆ. 72 ಪಂದ್ಯಗಳಲ್ಲಿ 2450 ರನ್ ಪೇರಿಸಿರುವ ನಾಯಕ ವಿರಾಟ್ ಕೊಹ್ಲಿ ಹಿಟ್ ಮ್ಯಾನ್ ಬೆನ್ನ ಹಿಂದೆಯೇ ಇದ್ದಾರೆ. ದೆಹಲಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದರು. 106 ಸಿಕ್ಸರ್ ಮೂಲಕ ಅತಿ ಹೆಚ್ಚು ಸಿಕ್ಸ್ ಹೊಡೆದ ಆಟಗಾರರಾಗಿದ್ದಾರೆ. ನಾಲ್ಕು ಶತಕದ ಮೂಲಕ ಅಧಿಕ ಸೆಂಚುರಿ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ.

  • ಪಾಕ್ ಕ್ರಿಕೆಟಿಗ ಹಸನ್ ಅಲಿ ದಂಪತಿಗೆ ಸಾನಿಯಾ ಮಿರ್ಜಾ ಡಿನ್ನರ್

    ಪಾಕ್ ಕ್ರಿಕೆಟಿಗ ಹಸನ್ ಅಲಿ ದಂಪತಿಗೆ ಸಾನಿಯಾ ಮಿರ್ಜಾ ಡಿನ್ನರ್

    ದುಬೈ: ಕೆಲ ದಿನಗಳ ಹಿಂದೆ ಭಾರತ ಮೂಲದ ಯುವತಿಯನ್ನು ಮದುವೆಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಹಸನ್ ಅಲಿ ದಂಪತಿಗೆ ಸಾನಿಯಾ ಮಿರ್ಜಾ ದಂಪತಿ ಡಿನ್ನರ್ ಪಾರ್ಟಿ ನೀಡಿದ್ದಾರೆ.

    ಅಗಸ್ಟ್ 20 ರಂದು ಭಾರತ ಮೂಲದ ಶಮಿಯಾ ಆರ್ಜೂ ಅವರನ್ನು ಹಸನ್ ಅಲಿ ಮದುವೆಯಾಗಿದ್ದರು. ದುಬೈನ ಅಟ್ಲಾಂಟಿಸ್ ಪಾಮ್ ಜಮೈರಾ ಪಾರ್ಕ್ ಹೋಟೆಲ್‍ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಸದ್ಯ ಈ ದಂಪತಿಯನ್ನು ವಿವಾಹಕ್ಕೆ ಶುಭ ಕೋರಿರುವ ಸಾನಿಯಾ ಮಿರ್ಜಾ ಹಾಗೂ ಶೋಯಿಬ್ ಮಲಿಕ್ ದಂಪತಿ ದುಬೈನ ತಮ್ಮ ನಿವಾಸದಲ್ಲಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಡಿನ್ನರ್ ಪಾರ್ಟಿ ವೇಳೆ ತೆಗೆದ ಫೋಟೋಗಳನ್ನು ಶಮಿಯಾ ಆರ್ಜೂ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮಗೇ ನೀಡಿದ್ದ ಆತಿಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೇ ಶಮಿಯಾ ಆರ್ಜೂ ಹರ್ಯಾಣದ ನೂಹ ಜಿಲ್ಲೆಯವರಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ.

    ಅಂದಹಾಗೇ ಸಾನಿಯಾ ಮಿರ್ಜಾ ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್‍ರನ್ನು 2010 ಏಪ್ರಿಲ್ ನಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ 10 ತಿಂಗಳ ಗಂಡು ಮಗು ಕೂಡ ಇದೆ. ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಪಾಕ್ ತಂಡ ಹೊರಬಿದ್ದ ಬಳಿಕ ಮಲಿಕ್ ಏಕದಿನ ಕ್ರಿಕೆಟ್‍ಗೆ ವಿವಾದಯ ಹೇಳಿದ್ದರು. ಇತ್ತ ಮಗುವಾದ ಬಳಿಕ ಟೆನ್ನಿಸ್ ನಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸಿರುವ ಸಾನಿಯಾ ಮಿರ್ಜಾ ದೇಹದ ತೂಕವನ್ನು ಇಳಿಸಿಕೊಂಡು ಸುದ್ದಿಯಾಗಿದ್ದರು.

  • ಏಕದಿನ ಕ್ರಿಕೆಟ್‍ಗೆ ಶೋಯೆಬ್ ಮಲಿಕ್ ನಿವೃತ್ತಿ, ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದ ಸಾನಿಯಾ

    ಏಕದಿನ ಕ್ರಿಕೆಟ್‍ಗೆ ಶೋಯೆಬ್ ಮಲಿಕ್ ನಿವೃತ್ತಿ, ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದ ಸಾನಿಯಾ

    ಲಂಡನ್: ಪಾಕಿಸ್ತಾನದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಅವರು ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದು ಈ ಕುರಿತು ಟ್ವೀಟ್ ಮಾಡಿರುವ ಶೋಯೆಬ್ ಪತ್ನಿ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪತಿಯ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

    ಶುಕ್ರವಾರ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ನಂತರ ಶೋಯೆಬ್ ಮಲ್ಲಿಕ್ ಅವರು ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದರು. ಈ ಮೂಲಕ 20 ವರ್ಷಗಳ ತನ್ನ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ. ಇದಕ್ಕೆ ಟ್ವಿಟ್ಟರ್ ಮೂಲಕ ಅಭಿಪ್ರಾಯ ತಿಳಿಸಿರುವ ಪತ್ನಿ ಸಾನಿಯಾ ಮಿರ್ಜಾ ಅವರು ಎಲ್ಲ ಕಥೆಗೂ ಅಂತ್ಯ ಎಂಬುದು ಇರುತ್ತದೆ. ಆದರೆ ಜೀವನದಲ್ಲಿ ಪ್ರತಿಯೊಂದು ಅಂತ್ಯವು ಹೊಸ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.

    ಗಂಡನ 20 ವರ್ಷದ ಕ್ರಿಕೆಟ್ ಜೀವನಕ್ಕೆ ಮೆಚ್ಚುಗೆ ಮಾತನಾಡಿರುವ ಸಾನಿಯಾ, ‘ಪ್ರತಿಯೊಂದು ಕಥೆಯಲ್ಲೂ ಒಂದು ಅಂತ್ಯವಿದೆ. ಆದರೆ ಜೀವನದಲ್ಲಿ ಪ್ರತಿಯೊಂದು ಅಂತ್ಯವು ಹೊಸ ಆರಂಭವಾಗಿದೆ. ನೀವು ಹೆಮ್ಮೆಯಿಂದ ನಿಮ್ಮ ದೇಶಕ್ಕಾಗಿ 20 ವರ್ಷಗಳಿಂದ ಆಟವಾಡಿದ್ದೀರ ಮತ್ತು ನೀವು ತುಂಬಾ ಗೌರವ ಮತ್ತು ನಮ್ರತೆಯಿಂದ ಅದನ್ನು ಮುಂದುವರಿಸಿದ್ದೀರಿ. ಇಜಾನ್ (ಮಗ) ಮತ್ತು ನಾನು ನೀವು ಸಾಧಿಸಿದ ಎಲ್ಲದರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    2019ರ ವಿಶ್ವಕಪ್ ಶೋಯೆಬ್ ಮಲಿಕ್ ಅವರ ಪಾಲಿಗೆ ಸ್ವಲ್ಪ ಕಷ್ಟವಾಗಿತ್ತು. ಏಕೆಂದರೆ ತಾನು ಅಡಿದ 3 ಪಂದ್ಯದಲ್ಲಿ 2 ಬಾರಿ ಶೂನ್ಯಕ್ಕೆ ಔಟ್ ಆಗಿರುವ ಮಲಿಕ್ ಮೂರು ಪಂದ್ಯಗಳಿಂದ ಒಟ್ಟು 8 ರನ್‍ಗಳನ್ನು ಗಳಿಸಿದ್ದರು. ಅವರನ್ನು ಜೂನ್ 16 ರಂದು ನಡೆದ ಭಾರತದ ನಡುವಿನ ಪಂದ್ಯದ ನಂತರ ತಂಡದಿಂದ ಕೈಬಿಡಲಾಗಿತ್ತು.

    ಕೇವಲ ಎರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿರುವುದಕ್ಕೆ ತಂಡ ದಿಂದ ಕೈಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಶೋಯೆಬ್, ‘ನನಗೆ ಇದರ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ ನನ್ನ ಬ್ಯಾಟಿಂಗ್ ಕ್ರಮಕ್ಕೆ ನಾನು ತುಂಬಾ ಹೊಂದಿಕೊಂಡಿದ್ದೆ. ತಂಡಕ್ಕೆ ಬೇಕಾದ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದೇನೆ. ಆದರೆ ನನ್ನನ್ನು ಹಲವು ಬಾರಿ ಕೈಬಿಡಲಾಗಿದೆ, 20 ವರ್ಷದ ಕ್ರಿಕೆಟ್ ಜೀವನದಲ್ಲಿ ನಾನು ಹಲವು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ತಪ್ಪಿಸಿಕೊಂಡಿದ್ದೇನೆ. ಹೀಗಿರುವಾಗ ವಿಶ್ವಕಪ್‍ನಲ್ಲಿ ಅಡಿದ ಎರಡು ಕೆಟ್ಟ ಆಟಗಳ ಬಗ್ಗೆ ಇಲ್ಲಿ ತೀರ್ಮಾನ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ’ ಎಂದು ಹೇಳಿದರು.

    ಪಾಕಿಸ್ತಾನದ ಪರ 287 ಏಕದಿನ ಪಂದ್ಯಗಳನ್ನು ಆಡಿರುವ ಮಲ್ಲಿಕ್, 7,534 ರನ್ ಗಳಿಸಿದ್ದು, 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1898 ರನ್ ಹಾಗೂ 111 ಟಿ20 ಪಂದ್ಯಗಳಿಂದ 2,263 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟಿನಲ್ಲಿ 158 ವಿಕೆಟ್ ಪಡೆದಿರುವ ಶಕೀಬ್, ಟೆಸ್ಟ್ ಕ್ರಿಕೆಟ್‍ನಲ್ಲಿ 32 ವಿಕೆಟ್ ಪಡೆದಿದ್ದಾರೆ.

  • 16 ವರ್ಷಗಳ ಬಳಿಕ ಹಿಟ್ ವಿಕೆಟಾದ ಶೋಯೆಬ್ ಮಲಿಕ್ – ಕಾಲೆಳೆದ ಟ್ವಿಟ್ಟಿಗರು

    16 ವರ್ಷಗಳ ಬಳಿಕ ಹಿಟ್ ವಿಕೆಟಾದ ಶೋಯೆಬ್ ಮಲಿಕ್ – ಕಾಲೆಳೆದ ಟ್ವಿಟ್ಟಿಗರು

    ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಹಿಟ್ ವಿಕೆಟ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದ 47ನೇ ಓವರಿನಲ್ಲಿ ಘಟನೆ ನಡೆದಿದ್ದು, ಮಾರ್ಕ್ ಹುಡ್ ಓವರಿನಲ್ಲಿ ಸ್ಟ್ರೈಕ್ ಎದುರಿಸಿದ್ದ ಮಲಿಕ್ ಕ್ರಿಸ್ ನಿಂದ ಹಿಂದಕ್ಕೆ ಸಾಗಿ ಚೆಂಡನ್ನು ಬಾರಿಸಲು ಯತ್ನಿಸಿದ್ದರು. ಆದರೆ ತೀರ ವಿಕೆಟ್ ಹತ್ತಿರಕ್ಕೆ ತೆರಳಿದ್ದ ಪರಿಣಾಮ ಮಲ್ಲಿಕ್ ಬೀಸಿದ್ದ ಬ್ಯಾಟ್ ವಿಕೆಟಿಗೆ ತಾಗಿತ್ತು.

    ಮಲಿಕ್ ಏಕದಿನ ಪಂದ್ಯದಲ್ಲಿ 2ನೇ ಬಾರಿಗೆ ಹಿಟ್ ವಿಕೆಟ್ ಆಗುತ್ತಿದ್ದು, ಈ ಹಿಂದೆ 2003 ರಲ್ಲಿ ಇದೇ ರೀತಿ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಔಟಾಗುವ ಮುನ್ನ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಮಲಿಕ್ 26 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಗಳಿಸಿದ್ದು, ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದಕೊಂಡಿದೆ.

    ಇತ್ತ ಈ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಮಲಿಕ್‍ರ ಕಾಲೆಳೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ತವರಿನಲ್ಲಿದ್ದ ಮಲಿಕ್ ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯಕ್ಕೆ ಮರಳಿದ್ದರು. ಪರಿಣಾಮ ಮೊದಲ ಮೂರು ಏಕದಿನ ಕ್ರಿಕೆಟ್ ಮತ್ತು ಟಿ20 ಪಂದ್ಯಗಳಿಗೆ ಗೈರಾಗಿದ್ದರು. 10 ದಿನ ರಜೆ ಪಡೆದಿದ್ದ ಮಲಿಕ್ ವೈಯಕ್ತಿಕ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ ಎಂದು ವರದಿಯಾಗಿತ್ತು.

  • ‘ಹೈದರಾಬಾದ್‍ಗೆ ಕಾಲಿಟ್ಟರೆ ಹುಷಾರ್’- ಶೋಯಿಬ್ ಮಲಿಕ್‍ರನ್ನ ಟ್ರೋಲ್ ಮಾಡಿದ ನೆಟ್ಟಿಗರು

    ‘ಹೈದರಾಬಾದ್‍ಗೆ ಕಾಲಿಟ್ಟರೆ ಹುಷಾರ್’- ಶೋಯಿಬ್ ಮಲಿಕ್‍ರನ್ನ ಟ್ರೋಲ್ ಮಾಡಿದ ನೆಟ್ಟಿಗರು

    ಹೈದರಾಬಾದ್: ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ “ಹಮರ ಪಾಕಿಸ್ತಾನ್ ಜಿಂದಾಬಾದ್” ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಭಾರತೀಯ ನೆಟ್ಟಿಗರು ಶೋಯಿಬ್ ರನ್ನು ಟ್ರೋಲ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

    ಅದರಲ್ಲೂ ಹೈದರಾಬಾದ್ ಸ್ಥಳೀಯರು ಶೋಯಿಬ್ ಮಲಿಕ್‍ಗೆ ಎಚ್ಚರಿಕೆ ನೀಡಿದ್ದು, ಹೈದರಾಬಾದ್ ನಗರಕ್ಕೆ ಕಾಲಿಟ್ಟರೆ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಕೆಲವರು ಈ ಟ್ವೀಟ್‍ಗೆ ಪತ್ನಿ ಸಾನಿಯಾ ಮಿರ್ಜಾ ಉತ್ತರ ನೀಡಬೇಕು ಎಂದು ಅಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ, ಶಾಸಕ ರಾಜಾ ಸಿಂಗ್ ಅಕ್ರೋಶ ವ್ಯಕ್ತಪಡಿಸಿ ತೆಲಂಗಾಣ ರಾಯಭಾರಿ ಸ್ಥಾನದಿಂದ ಸಾನಿಯಾ ಮಿರ್ಜಾರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಪಾಕಿಸ್ತಾನದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ, ನಮ್ಮ ರಾಜ್ಯ ಬ್ರಾಂಡ್ ಅಂಬಾಸಿಡರ್ ಪತಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಾನಿಯಾ ಮಿರ್ಜಾ ಬದಲಾಗಿ ತೆಲಂಗಾಣದ ರಾಜ್ಯದ ಸ್ಟಾರ್ ಕ್ರೀಡಾಪಟುಗಳಾದ ಪಿವಿ ಸಿಂಧು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಥವಾ ಸೈನಾ ನೆಹ್ವಾಲ್‍ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.

    ಮಲಿಕ್ ಟ್ವೀಟ್‍ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಲವರು, ಮಲಿಕ್‍ಗೆ ಭಾರತಕ್ಕೆ ಬರಲು ಸಾಧ್ಯವಾಗದಂತೆ ಮಾಡಿ ಎಂದು ಸಿಎಂ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ.

    ಫೆ.14 ರಂದು ನಡೆದ ಪುಲ್ವಾಮಾ ದಾಳಿಯ ವೇಳೆ ಉಗ್ರರ ದಾಳಿಯನ್ನು ಖಂಡಿಸಿದ್ದ ಸಾನಿಯಾ ಮಿರ್ಜಾ, ಸಿಆರ್‍ಪಿಎಫ್ ಯೋಧರಿಗೆ ತಮ್ಮ ಬೆಂಬಲ ಇರುವುದಾಗಿ ತಿಳಿಸಿದ್ದರು. ಅಲ್ಲದೇ ತಮಗೆ ಸಾರ್ವಜನಿಕರವಾಗಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿಲು ಇಷ್ಟವಿಲ್ಲ ಎಂದಿದ್ದರು. ಕೆಲವರ ಬಾಯಿ ಮುಚ್ಚಿಸಲು ಈ ಟ್ವೀಟ್ ಮಾಡಿದ್ದಾಗಿ ಆರೋಪಿಸಿದ್ದರು. ಅಲ್ಲದೇ ನಾನು ದೇಶದ ಆಟ ಆಡುವ ಮೂಲಕ ನನ್ನ ದೇಶ ಭಕ್ತಿಯನ್ನು ನಿರೂಪಿಸುತ್ತಿದ್ದೇನೆ. ಭಾರತಕ್ಕೆ ಫೆ.14 ಕಪ್ಪು ದಿನವಾಗಿದ್ದು, ಮತ್ತೆ ಇಂತಹ ಘಟನೆ ನಡೆಯಬಾರದು. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನನ್ನ ವಿರುದ್ಧ ದ್ವೇಷ ಸಾಧಿಸಿ, ನನ್ನನ್ನು ಟ್ರೋಲ್ ಮಾಡಲು ಮಾತ್ರ ನಿಮ್ಮಿಂದ ಸಾಧ್ಯ. ಆದರೆ ಈ ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರನೊಂದಿಗೆ ಸಾನಿಯಾ ಮಿರ್ಜಾ ಫೋಟೋ ವೈರಲ್

    ಪುತ್ರನೊಂದಿಗೆ ಸಾನಿಯಾ ಮಿರ್ಜಾ ಫೋಟೋ ವೈರಲ್

    ಹೈದರಾಬಾದ್: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಪುತ್ರನೊಂದಿಗೆ ಆಸ್ಪತ್ರೆಯಲ್ಲಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ತಂಡದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್, ಸಾನಿಯಾ ದಂಪತಿಯ ತಮ್ಮ ಮಗುವಿಗೆ ಇಝಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದು, ಇಝಾನ್ ಎಂದರೆ ಅರೇಬಿಕ್ ನಲ್ಲಿ ಗಾಡ್ ಗಿಫ್ಟ್ ಎಂಬರ್ಥವನ್ನು ನೀಡುತ್ತದೆ. ಈ ನಡುವೆ ಅವರ ಮಗುವಿನೊಂದಿಗೆ ಸಾನಿಯಾ ಅವರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೋಯೆಬ್ ಮಲಿಕ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

    https://www.instagram.com/p/BpsmItylELT/

    ಫೋಟೋದಲ್ಲಿ ಸಾನಿಯಾ ಮಿರ್ಜಾ ಆಸ್ಪತ್ರೆಯಿಂದ ಹೊರ ಬಂದಿರುವ ದೃಶ್ಯ ಕಾಣಬಹುದಾಗಿದ್ದು, ಪುತ್ರ ಇಝಾನ್‍ನನ್ನು ಎತ್ತಿಕೊಂಡು, ಬ್ಲಾಕ್ ಅಂಡ್ ವೈಟ್ ಚೆಕ್ಸ್ ಕುರ್ತಾ ಧರಿಸಿರುವ ಸಾನಿಯಾ, ಸ್ಕ್ರಾಪ್ ಸುತ್ತಿಕೊಂಡಿದ್ದಾರೆ. ಈ ಮೊದಲು ಶೋಯೆಬ್ ಮಲ್ಲಿಕ್ ಅವರು ಸಾನಿಯಾ ಗಂಡು ಮಗು ಜನಿಸಿರುವ ವಿಷಯವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದರು. ಅ.30 ರಂದು ಹೈದರಾಬಾದ್ ಬಂಜಾರ ಹಿಲ್ಸ್‍ನಲ್ಲಿರುವ ಆಸ್ಪತ್ರೆಯಲ್ಲಿ ಸಾನಿಯಾ ಮಿರ್ಜಾ ಮಗುವಿಗೆ ಜನ್ಮ ನೀಡಿದ್ದರು.

    ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಿರ್ಜಾಮಲಿಕ್ ದಂಪತಿಗೆ ಇದು ಮೊದಲ ಮಗುವಾಗಿದೆ. ಸಾನಿಯಾ ಗರ್ಭಿಣಿಯಾಗಿದ್ದಾಗ ನನ್ನ ಮಗುವಿಗೆ ಮಿರ್ಜಾ ಹಾಗೂ ಮಲ್ಲಿಕ್ ಮೂಲನಾಮ ಇರುತ್ತದೆ ಎಂದು ಹೇಳಿದ್ದರು. ಬಳಿಕ ತಮ್ಮ ಟ್ವಿಟ್ಟರಿನಲ್ಲಿ ಬೇಬಿ ಮಿರ್ಜಾಮಲ್ಲಿಕ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರಿನಲ್ಲಿ ಸಿಹಿ ಸುದ್ದಿ ನೀಡಿದ್ದರು. ಆದರೆ ಆ ಬಳಿಕ ಮಿರ್ಜಾಮಲಿಕ್ ದಂಪತಿಯ ಮಗು ಎಂಬ ಕೆಲ ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BpijafugaVL/

    https://www.instagram.com/p/Bpipj_sAQnn/