Tag: ಶೋಭ ಕರಂದ್ಲಾಜೆ

  • ರಾಹುಲ್ ಆರೋಗ್ಯದ ಪ್ರದರ್ಶನ ಮಾಡ್ತಿದ್ರೆ, ಮೋದಿ ದೇಶ ರಕ್ಷಣೆ ಮಾಡ್ತಿದ್ದಾರೆ: ಶೋಭಾ ಕರಂದ್ಲಾಜೆ ವ್ಯಂಗ್ಯ

    ರಾಹುಲ್ ಆರೋಗ್ಯದ ಪ್ರದರ್ಶನ ಮಾಡ್ತಿದ್ರೆ, ಮೋದಿ ದೇಶ ರಕ್ಷಣೆ ಮಾಡ್ತಿದ್ದಾರೆ: ಶೋಭಾ ಕರಂದ್ಲಾಜೆ ವ್ಯಂಗ್ಯ

    ಹಾಸನ: ರಾಹುಲ್‍ಗಾಂಧಿ ಅವರು, ಅವರ ಆರೋಗ್ಯದ ಪ್ರದರ್ಶನವನ್ನು ಮಾಡುತ್ತಿದ್ದು, ಅದು ಕೇವಲ ದೈಹಿಕ ಆರೋಗ್ಯ ಮಾತ್ರ. ಅವರ ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಲಾಭವಿಲ್ಲ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.

    ಹಾಸನಾಂಬೆ (Hassanambe) ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‍ಗಾಂಧಿ (Rahul Gandhi) ಅವರ ಆರೋಗ್ಯ ಪ್ರದರ್ಶನ ಮಾಡುತ್ತಿದ್ದಾರೆ, ಅದು ಕೇವಲ ದೈಹಿಕ ಆರೋಗ್ಯ ಮಾತ್ರ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi)ಅವರು ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಭಾರತಕ್ಕೆ ಹೊರ ದೇಶದಲ್ಲಿ ಗೌರವ ಸಿಗುವಂತೆ, ದೇಶದಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ದೀರ್ಘಾಯುಷ್ಯ ಶಕ್ತಿಯನ್ನು ಕೊಡಬೇಕು ಎಂದು ಆಶಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳು ಶಿಸ್ತು ಮೀರಿದರೆ ದಂಡ, ಕೆಲಸದಿಂದ ವಜಾ – ಸರ್ಕಾರದಿಂದ ನಿಯಮ ಜಾರಿ

    ನಂತರ, ಭಾರತ್ ಜೋಡೋ (Bharat Jodo Yatre) ಆಗಬೇಕಿರುವುದು ಭಾರತದ ಒಳಗೆ ಅಲ್ಲ, ಭಾರತ ಜೋಡೋ ಆಗಬೇಕಿರುವುದು ಪಾಕ್ ವಶಪಡಿಸಿಕೊಂಡಿರುವ ಕಾಶ್ಮೀರದಲ್ಲಿ (Kashmir), ಯಾವ ಪಾಕಿಸ್ತಾನಕ್ಕೆ (Pakistan) ಅವತ್ತಿನ ಕಾಂಗ್ರೆಸ್ ಸರ್ಕಾರದ (Congress) ಅವಧಿಯಲ್ಲಿ ಬಿಟ್ಟುಕೊಟ್ಟರು. ಕಾಂಗ್ರೆಸ್ ಈ ದೇಶದ ಆಡಳಿತ ನಡೆಸುವ ಸಂದರ್ಭದಲ್ಲಿ ಭಾರತದ ಒಂದು ಭಾಗ ಇವತ್ತು ಪಾಕ್ ಆಕ್ರಮಿತ ಕಾಶ್ಮೀರ ಆಗಿದೆ. ದೇಶದ ಬಹುಭಾಗ ಚೀನಾಕ್ಕೆ ಹೋಗಿದೆ, 1992 ರಲ್ಲಿ ಧೀಮ್‍ಥಾನವನ್ನು ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟರು, ಇಂತಹ ಜಾಗದಲ್ಲಿ ಭಾರತ್ ಜೋಡೋ ಆಗಬೇಕಿದೆ. ಭಾರತ ಜೋಡೋ ಆಗಿಯೇ ಇದೆ, ನಾವೆಲ್ಲರೂ ಚೆನ್ನಾಗಿ ಇದ್ದೀವಿ, ನಮಗೇನು ಸಮಸ್ಯೆಯಿಲ್ಲ, ಭಾರತದ ಒಳಗೇನು ಸಮಸ್ಯೆಯಿಲ್ಲ. ಭಾರತದ ಗಡಿಭಾಗದಲ್ಲಿ ಭಾರತ ಜೋಡೋ ಕೆಲಸ ಆಗಬೇಕಿದೆ, ಆ ಕೆಲಸವನ್ನು ಆವತ್ತಿನ ಕಾಂಗ್ರೆಸ್ ಮಾಡಿದ್ದರೆ, ಇವತ್ತು ಭಾರತ್ ಜೋಡೋದ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ. ರಾಹುಲ್‍ಗಾಂಧಿ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ, ಅವರು ಹೋಗಬೇಕಿರುವುದು ಕಾಶ್ಮೀರ, ಹಿಮಾಲಯ ಜಾಗದಲ್ಲಿ, ಆಗ ಭಾರತ್ ಜೋಡೋ ಆಗುತ್ತದೆ ಎಂದು ಟೀಕಿಸಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷ ಕೂಡ ಹಾಸನಾಂಬೆ ದರ್ಶನ ಮಾಡಿದ್ದೇನೆ. ವರ್ಷಕ್ಕೊಮ್ಮೆ ಮಾತ್ರ ರಾಜ್ಯದ, ದೇಶದ ಜನರಿಗೆ ದೇವಿಯ ದರ್ಶನ ಸಿಗುತ್ತದೆ. ಅದಕ್ಕಾಗಿ ಜನರು ಬರುತ್ತಾರೆ, ನಮ್ಮ ಸರ್ಕಾರ ಇದ್ದಾಗ ಹಾಸನಾಂಬೆ ದೇವಾಲಯದ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇವೆ. ಆ ತಾಯಿಯ ಆಶೀರ್ವಾದದಿಂದ ಬರುವಂತಹ ದಿನಗಳಲ್ಲಿ ಭಕ್ತಾಧಿಗಳಿಗೆ ಹೆಚ್ಚಿನ ಸೌಲಭ್ಯವನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಮುಖ್ಯವಾಗಿ ದೂರದಿಂದ ಬರುವವರಿಗೆ ವಸತಿ, ಶೌಚಾಲಯದಂತಹ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ, ದೇಶ ಸುಭಿಕ್ಷವಾಗಬೇಕು, ದೇಶದ ರಕ್ಷಣೆ ಆಗಬೇಕು, ಇವತ್ತು ಮಳೆ ಚೆನ್ನಾಗಿ ಆಗುತ್ತಿದೆ, ಮಳೆಯಿಂದ ಹಾನಿಯು ಆಗುತ್ತಿದೆ. ಆದ್ದರಿಂದ ತಾಯಿ ಹಾಸನಾಂಬೆ ಸಮೃದ್ಧಿಯನ್ನು ಕೊಡಬೇಕು, ಯಾವುದೇ ಅನಾಹುತ ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಆರಂಭ – ಸಕ್ಕರೆ ಇಲಾಖೆ ತೀರ್ಮಾನ

    ಎಲ್ಲಾ ಭಕ್ತಾಧಿಗಳನ್ನು ರಕ್ಷಣೆ ಮಾಡುವಂತಹ ಹೊಣೆಯನ್ನು ತಾಯಿಗೆ ಬಿಡುತ್ತಿದ್ದೇವೆ. ದೇಶಕ್ಕೆ ಒಳ್ಳೆಯದು ಮಾಡಲಿ, ಸಮೃದ್ಧಿಯಾಗಿರಲಿ, ದೇಶದ ರಕ್ಷಣೆ ಆಗಲಿ, ಎಲ್ಲಾ ಜನರು ಸುಖವಾಗಿರುವಂತಹ ಪ್ರಾರ್ಥನೆಯನ್ನು ಮಾಡಿದ್ದೇನೆ. ನರೇಂದ್ರಮೋದಿ ಅವರು ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಭಾರತಕ್ಕೆ ಹೊರ ದೇಶದಲ್ಲಿ ಗೌರವ ಸಿಗುವಂತೆ ಹಾಗೂ ದೇಶದಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ದೀರ್ಘಾಯುಷ್ಯ, ಶಕ್ತಿಯನ್ನು ಕೊಡಬೇಕು. ನಮ್ಮ ಸರ್ಕಾರಕ್ಕೆ ದೇಶದ ಜನರ ರಕ್ಷಣೆ ಮತ್ತು ಅಭಿವೃದ್ಧಿ ಮಾಡಲು ಶಕ್ತಿ ಕೊಡಬೇಕೆಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾನ ಮರ್ಯಾದೆ ಇದ್ರೆ ಕೆಲಸ ಮಾಡ್ಲಿ, ಹೋಟೆಲ್‍ನಲ್ಲಿ ಕೂತು ಮಜಾ ಮಾಡೋದಲ್ಲ; ರೇವಣ್ಣ ಕಿಡಿ

    ಮಾನ ಮರ್ಯಾದೆ ಇದ್ರೆ ಕೆಲಸ ಮಾಡ್ಲಿ, ಹೋಟೆಲ್‍ನಲ್ಲಿ ಕೂತು ಮಜಾ ಮಾಡೋದಲ್ಲ; ರೇವಣ್ಣ ಕಿಡಿ

    ಹಾಸನ: ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ರೆ ಜನಹಿತಕ್ಕಾಗಿ ಕೆಲಸ ಮಾಡಲಿ. ಅದನ್ನು ಬಿಟ್ಟು ಹೋಟೆಲ್‍ನಲ್ಲಿ ಮಜಾ ಮಾಡುವುದಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಮೈತ್ರಿ ಸರ್ಕಾರ ಸುಭದ್ರವಾಗಿದೆ. ರಾಜ್ಯದಲ್ಲಿ ಬರಗಾಲದಿಂದ ಜನರು ಕಷ್ಟ ಪಡುತ್ತಿದ್ದಾರೆ. ಯಡಿಯೂರಪ್ಪ ಕೇಂದ್ರ ಸರ್ಕಾರದಿಂದ ಅನುದಾನ ತಂದು ರಾಜ್ಯದ ಹಿತ ಕಾಯಲಿ. ಇಲ್ಲವಾದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ತಮಿಳುನಾಡಿನ ಪಂಚಾಂಗ ಬಂದಿದೆ, ನಮ್ದು ಬಂದ್ಮೇಲೆ ನೋಡಿ ಹೇಳ್ತೀನಿ: ರೇವಣ್ಣ ವ್ಯಂಗ್ಯ

    ರಾಜ್ಯದಲ್ಲಿ ಬರಗಾಲ ಬಂದಿದೆ ಈ ಕುರಿತು ದೇವೇಗೌಡರು ಸಾಕಷ್ಟು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಯಾವುದಕ್ಕೂ ಉತ್ತರ ನೀಡಿಲ್ಲ. ಬಿಜೆಪಿಯವರಿಗೆ ಮಾನ ಮಾರ್ಯಾದೆ ಇದ್ದರೆ ಕಡತಗಳನ್ನು ತೆಗೆದು ನೋಡಲಿ ಎಂದು ಕಿಡಿಕಾರಿದರು.

    ರಾಜ್ಯ ಬಿಜೆಪಿ ಶಾಸಕರನ್ನು ಯಡಿಯೂರಪ್ಪ ಅವರು ಹರ್ಯಾಣದ ರೆಸಾರ್ಟ್‍ನಲ್ಲಿ ಇಟ್ಟು ನೋಡಿಕೊಳ್ಳುತ್ತಿದ್ದಾರೆ. ಬೇಕಾದರೆ ಇನ್ನೂ ಸ್ವಲ್ಪ ದಿನ ಅಲ್ಲಿಯೇ ಇರಲಿ ನಮಗೇನು ಸಮಸ್ಯೆ ಇಲ್ಲ. ಆದ್ರೆ ಹೋಟೆಲ್ ನಲ್ಲಿ ಕೂತು ಮಜಾ ಮಾಡುವುದು ಅಷ್ಟೇ ಮಾಡದೇ ರಾಜ್ಯದ ಜನಹಿತಕ್ಕಾಗಿ ಕೆಲಸ ಮಾಡಲಿ ಅಂತ ರೇವಣ್ಣ ವ್ಯಂಗ್ಯವಾಡಿದರು.

    ಮೈತ್ರಿ ಸರ್ಕಾರ ಬಿಟ್ಟು ಶೋಭಕ್ಕನ್ನ ಯಡಿಯೂರಪ್ಪ ಸರಿಯಾಗಿ ನೋಡಿಕೊಳ್ಳಲಿ, ಅವರಿಗೆ ಕೇಂದ್ರದಲ್ಲಿ ಸಚಿವೆ ಸ್ಥಾನ ಕೊಡಿಸಿ ರಾಜ್ಯದ ಹಿತ ಕಾಯಲಿ. ಯಡಿಯೂರಪ್ಪ ಅವರಿಗೆ ಬಿಡುವಿಲ್ಲ, ಅವರು ಶಾಸಕರನ್ನು ಕಾಯುವ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಶೋಭಾ ಕರಂದ್ಲಾಜೆ ಅವರಿಗಾದರೂ ರಾಜ್ಯದ ಹಿತ ಕಾಯುವ ಕೆಲಸ ವಹಿಸಿಕೊಡಲಿ ಅಂತ ಮೋದಿ ಹಾಗೂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪಗೆ 75 ಪ್ಲಸ್ ಆಗಿದೆ, ಅದ್ಕೆ ಶೋಭಾ ಕೂಡ ಅವ್ರ ಮಾತು ಕೇಳ್ತಿಲ್ಲ: ದಿನೇಶ್ ಗುಂಡೂರಾವ್

    ಯಡಿಯೂರಪ್ಪಗೆ 75 ಪ್ಲಸ್ ಆಗಿದೆ, ಅದ್ಕೆ ಶೋಭಾ ಕೂಡ ಅವ್ರ ಮಾತು ಕೇಳ್ತಿಲ್ಲ: ದಿನೇಶ್ ಗುಂಡೂರಾವ್

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ವಯಸ್ಸು 75 ಪ್ಲಸ್ ಆಗಿದ್ದು, ಹೀಗಾಗಿ ಇವರ ಯಾವುದೇ ಮಾತುಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಕೇಳುತ್ತಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದು, ಅವರು ತಮ್ಮ ಕ್ಷೇತ್ರವನ್ನೇ ಮರೆತಿದ್ದಾರೆ. ಸಂಸದೆಯಾಗಿ 5 ವರ್ಷಗಳಿಂದ ಈ ಭಾಗಗಳಲ್ಲಿ ಯಾವುದೇ ಕೆಲಸಗಳು ಮಾಡಿಲ್ಲ. ಯಾರಾದರೂ ಮೃತಪಟ್ಟರೆ ಆಗ ಕ್ಷೇತ್ರಕ್ಕೆ ಬರುತ್ತಾರೆ. ಪುನರ್ ವಸತಿ ಕೇಂದ್ರದಲ್ಲಿ ಜನ ಹಾಗೂ ಸರ್ಕಾರ ಕೊಟ್ಟ ಆಹಾರವನ್ನು ಸಂತ್ರಸ್ತರಿಗೆ ಬಡಿಸಿ ಪೋಸು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಶೋಭ ಕರಂದ್ಲಾಜೆ ಒಬ್ಬ ಕೀಳುಮಟ್ಟದ ರಾಜಕಾರಣಿಯಾಗಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯ ಎಲ್ಲ ನಾಯಕರು ಬರಿ ಸುಳ್ಳು ಹೇಳುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಯಾವಾಗಲೂ ಬೇರೆ ಬೇರೆ ಕ್ಷೇತ್ರಗಳ ಮೂಲಕ ಸ್ಪರ್ಧೆ ಮಾಡುತ್ತಲೇ ಬಂದಿದ್ದಾರೆ. ಸದ್ಯ ಅವರು ಯಡಿಯೂರಪ್ಪನವರ ಮಾತನ್ನು ಕೇಳುವುದಿಲ್ಲ, ಏಕೆಂದರೆ ಯಡಿಯೂರಪ್ಪನವರ ವಯಸ್ಸು 75 ದಾಟಿದೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv