Tag: ಶೋಭಿತಾ

  • ನಾಗಚೈತನ್ಯಗಾಗಿ ಡೇಟಿಂಗ್ ವಿಚಾರ : ನಟಿಯರಿಬ್ಬರ ಕೋಲ್ಡ್ ವಾರ್

    ನಾಗಚೈತನ್ಯಗಾಗಿ ಡೇಟಿಂಗ್ ವಿಚಾರ : ನಟಿಯರಿಬ್ಬರ ಕೋಲ್ಡ್ ವಾರ್

    ತೆಲುಗಿನ ಖ್ಯಾತ ನಟ ನಾಗಚೈತನ್ಯ ನಟಿ ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶೋಭಿತಾ ಮತ್ತು ನಾಗ ಚೈತನ್ಯಗೆ ಟಾಂಗ್ ಕೊಡುವಂತೆ ಈ ಹಿಂದೆ ಸಮಂತಾ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಎಕ್ಸ್ ಗಳ ವಿಚಾರ ಬಿಟ್ಟುಬಿಡಿ ಎನ್ನುವಂತೆ ಟ್ರೋಲ್ ಮಾಡುತ್ತಿದ್ದವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಶೋಭಿತಾ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

    ಸಮಂತಾ ಬರಹಕ್ಕೆ ಪ್ರತ್ಯುತ್ತರ ಎನ್ನುವಂತೆ ಶೋಭಿತಾ ಮಧ್ಯೆದ ಬೆರಳು ತೋರಿಸಿದ್ದಾರೆ. ಹಾಗಾಗಿ ಮತ್ತೆ ನಟಿಯರ ಜಟಾಪಟಿ ಶುರುವಾಗಿದೆ. ಸಮಂತಾ ಕೆಟ್ಟದ್ದಾಗಿ ಪ್ರತಿಕ್ರಿಯೆ ನೀಡದೇ ಇದ್ದರೂ, ಶೋಭಿತಾ ಆ ರೀತಿಯ ವರ್ತಿಸುವುದು ಸರಿಯಲ್ಲವೆಂದು ಸಮಂತಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ, ನಾಗಚೈತನ್ಯ ಅವರನ್ನು ಈ ವಿಷಯದಲ್ಲಿ ಸುಖಾಸುಮ್ಮನೆ ಎಳೆತರಲಾಗುತ್ತಿದೆ ಎಂದು ಅವರ ಅಭಿಮಾನಿಗಳು ಗರಂ ಆಗಿದ್ದಾರೆ.  ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ

    ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರ ಕಳೆದೊಂದು ವಾರದಿಂದ ಸಖತ್ ಸದ್ದು ಮಾಡುತ್ತಿದೆ. ಅವರಿಬ್ಬರೂ ಬರೀ ಡೇಟಿಂಗ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿದೆ. ಅದಕ್ಕೆ ನಾಗಚೈತನ್ಯ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ. ಆದರೂ, ಡೇಟಿಂಗ್ ವಿಚಾರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.

    Live Tv

  • ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ?: ಆ ಹುಡುಗಿಯನ್ನೇ ಓಕೆ ಮಾಡಿದೆಯಂತೆ ಕುಟುಂಬ

    ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ?: ಆ ಹುಡುಗಿಯನ್ನೇ ಓಕೆ ಮಾಡಿದೆಯಂತೆ ಕುಟುಂಬ

    ಟ ನಾಗಚೈತನ್ಯ ಮೊನ್ನೆಯಷ್ಟೇ ಗರ್ಲ್ ಫ್ರೆಂಡ್ ಕಾರಣಕ್ಕಾಗಿ ಸುದ್ದಿಯಾಗಿದ್ದರು. ಈಗ ಅದೇ ಗರ್ಲ್ ಫ್ರೆಂಡ್ ಜೊತೆಯೇ ನಾಗಚೈತನ್ಯ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಮಂತಾರಿಂದ ನಾಗಚೈತನ್ಯ ದೂರವಾದ ಬಳಿಕ, ಈ ನಟಿಯ ಜೊತೆ ಡೇಟಿಂಗ್ ಮಾಡುತ್ತಿದ್ದು, ಅವರನ್ನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಮದುವೆಗೆ ಎರಡೂ ಕುಟುಂಬದ ಸಮ್ಮತಿಯೂ ಇದೆಯಂತೆ.

    ಕೇವಲ ಡಿವೋರ್ಸ್ ವಿಚಾರಕ್ಕೆ ಮಾತ್ರ ಸುದ್ದಿಗೆ ಬರುತ್ತಿದ್ದ ನಾಗಚೈತನ್ಯ ಎರಡ್ಮೂರು ವಾರಗಳ ಹಿಂದೆ ತೆಲುಗು ನಟಿ ಶೋಭಿತಾ ಧಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟರು. ಐಷಾರಾಮಿ ಹೋಟೆಲ್ ಗಳಲ್ಲಿ ಭೇಟಿ ಆಗುವ ಮತ್ತು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ವಿಚಾರವೂ ಮುನ್ನೆಲೆಗೆ ಬಂತು. ಇದೀಗ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ವಿಷಯ ಭಾರೀ ಸಂಚಲನವನ್ನುಂಟು ಮಾಡಿದೆ. ಇದನ್ನೂ ಓದಿ:ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

    ಸಮಂತಾ ಮತ್ತು ನಾಗಚೈತನ್ಯ ದೂರುವಾದ ಬಳಿಕವೇ ಶೋಭಿತಾ ಮತ್ತು ನಾಗಚೈತನ್ಯ ತೀರಾ ಹತ್ತಿರವಾಗಿದ್ದರಂತೆ. ಹಾಗಾಗಿ ಸಮಂತಾ ಡಿವೋರ್ಸ್ ವಿಚಾರಕ್ಕೂ ಶೋಭಿತಾಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಶೋಭಿತಾ ಡೇಟಿಂಗ್ ವಿಚಾರ, ಮದುವೆ ವಿಷಯ ಎಲ್ಲವೂ ಗಾಸಿಪ್ ನಂತೆಯೇ ತೇಲಿ ಬರುತ್ತಿವೆ ಹೊರತು ಯಾವುದೇ ರೀತಿಯಲ್ಲಿ ಅಧಿಕೃತ ಹೇಳಿಕೆಗಳಾಗಿಲ್ಲ.

    Live Tv

  • ಅಟೆಂಪ್ಟ್ ಟು ಮರ್ಡರ್ ಹವಾ ಜೋರು!

    ಅಟೆಂಪ್ಟ್ ಟು ಮರ್ಡರ್ ಹವಾ ಜೋರು!

    ಬೆಂಗಳೂರು: ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಚಿತ್ರ ಬಿಡುಗಡೆಯಾಗುವ ಸನ್ನಾಹದಲ್ಲಿದೆ.

    ಅಮರ್ ನಿರ್ದೇಶನದ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಜನರನ್ನು ಸೆಳೆದಿವೆ. ಈಗಾಗಲೇ ರವಿ ದೇವ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಟ್ರೆಂಡ್ ಸೆಟ್ ಮಾಡಿವೆ. ಅಂದಹಾಗೆ ಈ ಕಥೆಯಲ್ಲಿ ವಿಲನ್ ಪಾತ್ರದತ್ತಲೇ ಫೋಕಸ್ ಇರೋದರಿಂದ ವಿಲನ್ ಎಂಟ್ರಿಗೆಂದೇ ವಿಶೇಷವಾದೊಂದು ಹಾಡು ಮಾಡಲಾಗಿದೆಯಂತೆ. ಅದೂ ಕೂಡಾ ಜನರಿಗಿಷ್ಟವಾಗಿದೆ. ಆನಂದ್ ಆಡಿಯೋ ಹೊರ ತಂದಿರೋ ಈ ಹಾಡುಗಳೇ ಚಿತ್ರದ ಬಗ್ಗೆ ಪ್ರೇಕ್ಷಕರನ್ನು ಕಾತರರನ್ನಾಗಿಸುವಲ್ಲಿ ಯಶಸ್ವಿಯಾಗಿವೆ.

    ಇದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯೊಂದನ್ನು ಆಧರಿಸಿದ ಚಿತ್ರ. ಕಾಪೋರೇಷನ್ ವೃತ್ತದಲ್ಲಿ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆದಿತ್ತಲ್ಲಾ? ಅದೇ ಘಟನೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಕಮರ್ಷಿಯಲ್ ಅಂಶಗಳಾಚೆಗೆ ಈ ಚಿತ್ರವನ್ನು ಭಿನ್ನ ಬಗೆಯಲ್ಲಿ ರೂಪಿಸಲಾಗಿದೆಯಂತೆ.

    ಸದ್ಯ ಬಿಡುಗಡೆಯ ಸರದಿಯಲ್ಲಿ ನಿಂತಿರುವ ಚಿತ್ರಗಳಲ್ಲಿ ಅಟೆಂಪ್ಟ್ ಟು ಮರ್ಡರ್ (ಎಟಿಎಂ) ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರವಾಗಿ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ವರ್ಷಾಂತರಗಳ ಹಿಂದೆ ನಡೆದು ದೇಶವನ್ನೇ ಬೆಚ್ಚಿಬೀಳಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ ಅಂತ ನಿರ್ದೇಶಕ ಅಮರ್ ಆರಂಭದಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಅದು ಎಟಿಎಂಗೆ ನುಗ್ಗಿದ ದುಷ್ಕರ್ಮಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವಾ? ಎಂಬ ಪ್ರಶ್ನೆ ಕಾಡೋದು ಸಹಜ. ಆದರೆ ಈ ವಿಚಾರದ ನಿಗೂಢವನ್ನು ಈವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಅದೇ ಘಟನೆಯೇ ಆಗಿದ್ದರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.

    ಇದು ಒಂದು ಕ್ರೈಂ ಓರಿಯಂಟೆಡ್ ಚಿತ್ರ ಎಂಬಂತೆ ಕಂಡರೂ ಈ ಚಿತ್ರದಲ್ಲೆಲ್ಲೂ ಕೊಲೆಗಳನ್ನು ವೈಭವೀಕರಿಸಿಲ್ಲವಂತೆ. ಅಸಲಿಗೆ ಕೊಲೆ ನಡೆಯುತ್ತದಾ ಎಂಬುದನ್ನೇ ಚಿತ್ರ ತಂಡ ಸಸ್ಪೆನ್ಸ್ ಆಗಿಟ್ಟಿದೆ. ಈ ನೈಜ ಘಟನೆಗೆ ಸಿನಿಮಾ ಟಚ್ ನೀಡಿರೋ ನಿರ್ದೇಶಕರು ಅದರ ಜೊತೆಗೆ ನವಿರಾದೊಂದು ಪ್ರೇಮ ಕಥೆಯನ್ನೂ ಹೇಳಿದ್ದಾರಂತೆ. ಈ ಕಾರಣದಿಂದಲೇ ಈ ಚಿತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ಇನ್ನುಳಿದಂತೆ ವಿನಯ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟನಾಗಬೇಕೆಂಬ ಕನಸು ಹೊತ್ತು ಆ ನಿಟ್ಟಿನಲ್ಲಿ ವರ್ಷಾಂತರಗಳ ಕಾಲ ಶ್ರಮ ವಹಿಸಿರುವ ವಿನಯ್ ಎಟಿಎಂ ಚಿತ್ರದ ಮೂಲಕ ಅದು ಕೈಗೂಡಿದ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿರುವ ಧನ್ಯತೆ ವಿನಯ್ ಅವರಲ್ಲಿದೆ. ಈ ಚಿತ್ರದ ಮತ್ತೋರ್ವ ನಟ ಚಂದು ಗೌಡ. ಪ್ರಸ್ತುತ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಇವರ ಪಾತ್ರದ ಹೆಸರೂ ಚಂದು. ಈ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಇವರು ಎರಡು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇವರಿಗಿಲ್ಲಿ ಶೋಭಿತಾ ಎಂಬಾಕೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಐಟಿ ಕಂಪೆನಿ ಹುಡುಗಿಯಾಗಿ ನಟಿಸಿರೋ ಶೋಭಿತಾಗೂ ಇದು ಮೊದಲ ಚಿತ್ರ.