Tag: ಶೋಭಾಕರಂದ್ಲಾಜೆ

  • ಗದ್ದೆಗಿಳಿದು ಭತ್ತ ನಾಟಿ ಮಾಡಿದ ಶೋಭಾ ಕರಂದ್ಲಾಜೆ

    ಗದ್ದೆಗಿಳಿದು ಭತ್ತ ನಾಟಿ ಮಾಡಿದ ಶೋಭಾ ಕರಂದ್ಲಾಜೆ

    -ಮಂಡ್ಯದಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ

    ಮಂಡ್ಯ: ಕೇಂದ್ರ ಸಚಿವೆಯಾದ ಬಳಿಕ ಮಂಡ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವೆ ಶೋಭಾ ಕರಂದ್ಲಾಜೆ ಸಕ್ಕರೆ ನಾಡಿನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಆರಂಭಿದ್ದಾರೆ. ಈ ವೇಳೆ ರೈತ ಮಹಿಳೆಯರೊಂದಿಗೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ.

    ಪ್ರಧಾನಿ ಮೋದಿ ಆಶಯದಂತೆ ಕೇಂದ್ರ ಸಚಿವರುಗಳು ದೇಶಾದ್ಯಂತ ಜನಾಶೀರ್ವಾದ ಯಾತ್ರೆ ಆರಂಭಿಸಿದ್ದು, ಮಂಡ್ಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದ್ದಾರೆ. ಶೋಭಾಕ ರಂದ್ಲಾಜೆಗೆ ಮದ್ದೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿ, ಬೈಕ್  ರ‍್ಯಾಲಿ ನಡೆಸಿದ್ಧಾರೆ. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

    ಮಂಡ್ಯಗೆ ಆಗಮಿಸಿದ ಸಚಿವೆ ಹೊನಗಾನಹಳ್ಳಿಗೆ ಭೇಟಿ ಕೊಟ್ಟು ರೈತ ಮಹಿಳೆಯರೊಂದಿಗೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ. ಅಲ್ಲದೇ ನಾಟಿ ಯಂತ್ರೋಪಕರಣಕ್ಕೆ ಚಾಲನೆ ನೀಡಿ ನಾಟಿ ಯಂತ್ರದ ಮೇಲೆ ಕುಳಿತು ಸಂತಸಪಟ್ಟಿದ್ದಾರೆ. ಸಚಿವ ನಾರಾಯಣಗೌಡ ನಾಟಿ ಯಂತ್ರ ಚಲಾಯಿಸಿದ್ರು, ಬಳಿಕ ರೈತರೊಂದಿಗೆ ಉಪಹಾರ ಸೇವಿಸಿ ರೈತರ ಕಷ್ಟಗಳನ್ನ ಆಲಿಸಿದ್ದಾರೆ. ನಾಟಿ ಮಾಡಿದ ಬಳಿಕ ಸಾತನೂರು ಗ್ರಾಮದ ಆಲೆಮನೆಯೊಂದಕ್ಕೆ ಭೇಟಿ ಕೊಟ್ಟ ಸಚಿವೆ ಸ್ವತಃ ಗಾಣಕ್ಕೆ ಕಬ್ಬನ್ನ ಹಾಕಿ ಕಬ್ಬು ನುರಿದು, ಸಾವಯವ ಬೆಲ್ಲದ ತಯಾರಿ ಬಗ್ಗೆ ರೈತರಿಂದ ಮಾಹಿತಿ ಪಡೆದು ಮಂಡ್ಯ ಬೆಲ್ಲದ ಸಿಹಿ ಸವಿದಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈಗೆ ಸಿಗದೆ ದ್ರಾಕ್ಷಿ ಹುಳಿ ಅಂತಾರೆ, ಸಿದ್ದರಾಮಯ್ಯಗೆ ಅಧಿಕಾರವಿಲ್ಲ, ಅದಕ್ಕಾಗಿಯೆ ಬೊಮ್ಮಾಯಿ ಸರ್ಕಾರ ಹೆಚ್ಚುದಿನ ಉಳಿಯಲ್ಲ ಅಂತಿದ್ದಾರೆ. ನಮ್ಮ ಸರ್ಕಾರ ಇರುತ್ತೆ, ಒಳ್ಳೆಯ ಕೆಲಸ ಮಾಡುತ್ತೆ ಎಂದು ಮಾಜಿ ಸಿಎಂ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ. ನಮ್ಮ ಹಾಗೂ ರಾಜ್ಯದ ನಿಲುವು ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟ ನಿಲುವಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡೋದು ತಪ್ಪಿಸಲು ಸಾಧ್ಯವಿಲ್ಲ. ನ್ಯಾಯಾಧೀಕರಣದ ಸೂಚನೆಯಂತೆ ತಮಿಳುನಾಡಿಗೆ ನಿಗದಿಯಾಗರುವ ನೀರು ತಪ್ಪಲ್ಲ ಎಂದರು.

    ಸಕ್ಕರೆ ನಾಡಿಗೆ ಬಂದ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ ಮೂಲಕ ರೈತರ ಸಮಸ್ಯೆಯಾಲಿಸುವ ಪ್ರಯತ್ನ ಮಾಡಿದ್ದಾರೆ. ಆದರೇ ಆಡಳಿತರೂಢ ಬಿಜೆಪಿ ಪಕ್ಷದ ಕಾರ್ಯಕರ್ತರು ಸಚಿವರನ್ನ ಸ್ವಾಗತ ಕೋರುವ ಭರದಲ್ಲಿ ಕೋವಿಡ್ ನಿಯಮವನ್ನೆ ಗಾಳಿಗೆ ತೂರಿದ್ದು ವಿಪರ್ಯಾಸವೆ ಸರಿ.

  • ಇಂದಿರಾಗಾಂಧಿ ಗೆದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಅಧೋಗತಿ – ಕರಂದ್ಲಾಜೆ ಲೇವಡಿ

    ಇಂದಿರಾಗಾಂಧಿ ಗೆದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಅಧೋಗತಿ – ಕರಂದ್ಲಾಜೆ ಲೇವಡಿ

    ಉಡುಪಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಇಂದು ಅಧೋಗತಿ ಕಂಡಿದೆ. ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಪರಿಸ್ಥಿತಿ ಬಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.

    ಗೋವಾ ಸಿಎಂ ಮನೋಹರ ಪರಿಕ್ಕರ್ ಅವರಿಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಕ್ಷೇತ್ರ ಸಿಕ್ಕರೂ ಜೆಡಿಎಸ್ ಅಭ್ಯರ್ಥಿಗಳಿಗೆ ಹುಡುಕಾಟ ಮಾಡುತ್ತಿದೆ. ಕಾಂಗ್ರೆಸ್ ನಾಯಕರನ್ನು ಪಕ್ಷದತ್ತ ಸೆಳೆಯುತ್ತಿದೆ ಎಂಬ ಮಾಹಿತಿಯಿದೆ. ಈ ಎಲ್ಲಾ ಬೆಳವಣಿಗೆಯನ್ನು ಹೊರತು ಪಡಿಸಿಯೂ ಬಿಜೆಪಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    2019 ರ ಚುನಾವಣೆಯೆಂಬ ಯುದ್ಧವನ್ನು ಬಿಜೆಪಿ ಗೆಲ್ಲುತ್ತದೆ. ಪಕ್ಷದ ಕಾರ್ಯಕರ್ತರು, ಸಂಘ ಪರಿವಾರ ಸೇನಾನಿಗಳಂತೆ ಹೋರಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ 22ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪರಿಕ್ಕರ್ ಅಂತ್ಯಕ್ರಿಯೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡ ಕಾರಣ ಮಂಗಳವಾರ ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು. ಮನೋಹರ್ ಪರಿಕ್ಕರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರು ಭಾಗವಹಿಸಿದ್ದರು.

  • ಬಿಎಸ್‍ವೈ ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದ ಶೋಭಾ ಕರಂದ್ಲಾಜೆ

    ಬಿಎಸ್‍ವೈ ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದ ಶೋಭಾ ಕರಂದ್ಲಾಜೆ

    ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲದ ಹನೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಬಿಎಸ್ ಯಡಿಯೂರಪ್ಪ ಅವರ ಕಾಲೆಳೆದು ಹಾಸ್ಯ ಚಾಟಕಿ ಹಾರಿಸಿದ್ದಾರೆ.

    ಯಡಿಯೂರಪ್ಪ ಅವರಿಗೆ ಗಂಟಲು ಕೆಟ್ಟಿದೆ. ಶುಕ್ರವಾರ ಬಿಎಸ್‍ವೈ ತವರೂರು ಕೆ.ಆರ್.ಪೇಟೆಯಲ್ಲಿ ಉತ್ಸಾಹದಿಂದ ಇದ್ದರು. ಅಲ್ಲಿ ಧೂಳಿನಲ್ಲೂ ಹಲವು ಕಿಲೋಮೀಟರ್ ಪಾದ ಯಾತ್ರೆ ಮಾಡಿದ್ದರು. ಹುರುಪಿನಲ್ಲಿ ತವರೂರಿನಲ್ಲಿ ಮಾತನಾಡಿದ್ದಕ್ಕೆ ಗಂಟಲು ಕೆಟ್ಟಿದೆ. ಗಂಟಲು ಕೆಟ್ಟಿರುವುದಕ್ಕೆ ಹನೂರಿನಲ್ಲಿ ಮಾತನಾಡಲ್ಲ ಎನ್ನುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಗಂಟಲು ಸಮಸ್ಯೆ ನಡುವೆಯೂ ಭಾಷಣ ಮಾಡಿದ ಬಿಎಸ್‍ವೈ, ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಹೋಗುತ್ತಾರೆ. ಮೋದಿ ಉಪವಾಸ ಇದ್ದು ಮಂಜುನಾಥನ ದರ್ಶನ ಮಾಡುತ್ತಾರೆ. ಇದೀಗ ರಾಹುಲ್ ಗಾಂಧಿಗೆ ದೇವಸ್ಥಾನಗಳು ನೆನಪಾಗಿವೆ. ಚುನಾವಣೆ ಹತ್ತಿರ ಬಂದಿರುವುದಕ್ಕೆ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಎಂದು ಗಂಟಲು ಸಮಸ್ಯೆ ನಡುವೆಯೂ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

    ಮಂಡ್ಯದ ಮಳವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಬಿಎಸ್‍ವೈ ಗಂಟಲಿನ ತೊಂದರೆ ಎದುರಿಸಿದ್ದರು. ಈ ವೇಳೆ ಕೇವಲ ನಾಲ್ಕು ನಿಮಿಷ ಮಾತನಾಡಿ ಭಾಷಣ ಮುಗಿಸಿದ್ದರು.