Tag: ಶೋಧ ಕಾರ್ಯ

  • ಯುಗಾದಿ ಹಬ್ಬಕ್ಕೆಂದು ಬಂದಿದ್ದ ಲೈಟ್ ಬಾಯ್ – ಹುಡುಗಿ ವಿಚಾರಕ್ಕೆ ಹತ್ಯೆ

    ಯುಗಾದಿ ಹಬ್ಬಕ್ಕೆಂದು ಬಂದಿದ್ದ ಲೈಟ್ ಬಾಯ್ – ಹುಡುಗಿ ವಿಚಾರಕ್ಕೆ ಹತ್ಯೆ

    ಚಾಮರಾಜನಗರ: ಪ್ರೇಮ ವಿಚಾರಕ್ಕೆ ಲೈಟ್ ಬಾಯ್ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    boy, dark and light - image #5141808 on Favim.com

    ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿ ಪ್ರೇಮ ವಿಚಾರಕ್ಕೆ ಜಗಳ ಅತಿರೇಕಕ್ಕೆ ಹೋಗಿದ್ದು, ಹೊಸೂರು ಬಡಾವಣೆಯ ಚಿಕ್ಕರಾಜು(30) ಕೊಲೆಯಾಗಿದ್ದಾನೆ. ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದ ಚಿಕ್ಕರಾಜು ಹಬ್ಬಕ್ಕೆ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.  ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ

    ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿದ್ದ ಯುವತಿಯನ್ನು ಚಿಕ್ಕರಾಜು ಪ್ರೀತಿ ಮಾಡುತ್ತಿದ್ದ. ಈ ವಿಚಾರ ಯುವತಿಯ ಸಂಬಂಧಿಕರಿಗೆ ತಿಳಿದಿದ್ದು, ಇದನ್ನು ವಿರೋಧಿಸಿ ಚಿಕ್ಕರಾಜುನನ್ನು ಪ್ರಶ್ನಿಸಿದ್ದಾರೆ. ಆದರೆ ಚಿಕ್ಕರಾಜು ಇದನ್ನು ವಿರೋಧಿಸಿದ್ದಾನೆ.

    POLICE JEEP

    ಪರಿಣಾಮ ವೀರಭದ್ರನಾಯ್ಕ, ಯುವತಿ ತಂದೆ ಮಹದೇವನಾಯ್ಕ, ಸಹೋದರರಾದ ಕಿರಣ್, ಅಭಿಷೇಕ್ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೃತ್ಯ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಸ್ತುತ ಈ ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ: ಕೆಲಸ ಮಾಡುತ್ತಿದ್ದ ವೇಳೆ ಮೆಷಿನ್‍ಗೆ ವೇಲ್ ಸಿಲುಕಿ ಯುವತಿ ಸಾವು

    ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ.

  • ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ಸಾವು

    ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ ಸಾವು

    – 24 ಗಂಟೆ ಕಳೆದರೂ ಶವಕ್ಕಾಗಿ ಶೋಧ

    ಚಾಮರಾಜನಗರ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಲವತ್ತ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ಹೊಂಗನೂರು ಗ್ರಾಮದ ಲೋಕೇಶ್(15) ತನ್ನ ಸ್ನೇಹಿತರೊಂದಿಗೆ ಈಜಲು ಬೆಲವತ್ತ ಕೆರೆಗೆ ಹೋಗಿದ್ದನು. ಆದರೆ ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಶವಕ್ಕಾಗಿ ಸ್ಥಳೀಯರು ಭಾನುವಾರದಿಂದಲೂ ಹುಡುಕಾಟ ನಡೆಸುತ್ತಿದ್ದಾರೆ. 24 ಗಂಟೆ ಕಳೆದರೂ ಸಹ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.

    24 ಗಂಟೆ ಕಳೆದರೂ ಸ್ಥಳಕ್ಕೆ ನುರಿತ ಈಜುದಾರರನ್ನ ಕರೆಸಿ ಶವಪತ್ತೆ ಮಾಡದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಬಾಲಕನ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.