ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರಿಗೆ ವಿಚಿತ್ರ ಆಸೆ ಇದೆಯಂತೆ. ಆ ಆಸೆಯನ್ನು ಅವರು ಕಾಮಿಡಿ ವಿತ್ ಕಪಿಲ್ ಶೋನಲ್ಲಿ (Kapil Sharma) ಹೇಳಿಕೊಂಡಿದ್ದಾರೆ. ಸಮಯದ ಪಾಲನೆ ಬಗ್ಗೆ ಸದಾ ಮಾತನಾಡುವ ಆಮೀರ್, ಈ ಕಾರ್ಯಕ್ರಮಕ್ಕೆ (Show) ಸಮಯ ಹೊಂದಿಸಿಕೊಂಡು ಭಾಗಿಯಾಗಿದ್ದಾರೆ. ಜೊತೆಗೆ ತಮ್ಮ ವಿಚಿತ್ರ ಆಸೆಯೊಂದನ್ನು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಆಮೀರ್ ಅವರಿಗೆ ಇರುವ ಆಸೆಯಂದರೆ, ಶಾರ್ಟ್ಸ್ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ಆಗಿದೆ. ಆದರೆ, ಅದಕ್ಕೆ ಅವರ ಮಕ್ಕಳು ಬಿಡುವುದಿಲ್ಲವಂತೆ. ನನ್ನ ಮಕ್ಕಳು ನನ್ನ ಮಾತನ್ನು ಕೇಳೋದಿಲ್ಲ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಪ್ರಶಸ್ತಿ ಸಮಾರಂಭಕ್ಕೆ ತಾವು ಏಕೆ ಹೋಗುವುದಿಲ್ಲ ಎನ್ನುವುದನ್ನೂ ಹೇಳಿದ್ದಾರೆ.
ಆಮೀರ್ ಖಾನ್ ಬಾಲಿವುಡ್ ಕಂಡ ಬುದ್ದಿವಂತಹ ನಟ, ನಿರ್ಮಾಪಕ. ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದರು. ಈಗಲೂ ಇಬ್ಬರ ಜೊತೆಯೂ ಬಲು ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಅಗತ್ಯ ಬಿದ್ದಾಗ ಭೇಟಿ ಮಾಡುತ್ತಾರೆ. ಜೊತೆಗೆ ಮಕ್ಕಳನ್ನು ಜತನದಿಂದ ಕಾಪಾಡಿದ್ದಾರೆ. ಹಾಗಾಗಿ ಶೋನಲ್ಲಿ ಯಾವೆಲ್ಲ ವಿಚಾರಗಳನ್ನು ಅವರು ಹೇಳಿಕೊಳ್ಳಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.
ಸದ್ಯ ಪ್ರೊಮೋ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಪೂರ್ತಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ.
ಇಂದಿನಿಂದ ಓಟಿಟಿಯಲ್ಲಿ ಶುರುವಾಗುತ್ತಿರುವ ಬಿಗ್ ಬಾಸ್ ಶೋಗೆ ಕ್ಷಣಗಣನೆ. ನಿನ್ನೆ ಇಡೀ ರಾತ್ರಿ ಮತ್ತು ಇವತ್ತು ಬೆಳಗ್ಗೆಯಿಂದ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಅನ್ನು ಸುದೀಪ್ ನಡೆಸಿಕೊಟ್ಟಿದ್ದಾರೆ. ಈಗಷ್ಟೇ ಅದರ ಚಿತ್ರೀಕರಣ ಮುಗಿಸಿಕೊಂಡು, ಓಟಿಟಿಯಲ್ಲಿ ತಮ್ಮ ನಿರೂಪಣೆ ಈ ಬಾರಿ ಹೇಗೆ ಬಂದಿದೆ ಎನ್ನುವುದನ್ನು ನೋಡಲು ಸ್ವತಃ ಕಿಚ್ಚ ಕಾಯುತ್ತಿದ್ದಾರೆ. ಈಗಾಗಲೇ ಕೆಲವು ತುಣುಕುಗಳನ್ನು ವೂಟ್ಸ್ ನಲ್ಲಿ ಹಾಕಲಾಗಿದ್ದು, ಈ ಬಾರಿ ಎಂದಿಗಿಂತಲೂ ಮನೆ ವಿಶೇಷವಾಗಿದೆ.
ಈ ಮನೆಯ ಒಳಗೆ ಈಗಾಗಲೇ ಸುದೀಪ್ ಮತ್ತು ಗಾಯಕ ಕಂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕೂಡ ಹೋಗಿದ್ದಾರೆ. ಇಬ್ಬರೂ ಒಟ್ಟಾಗಿ ಬಿಗ್ ಬಾಸ್ ಮನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಕನ್ಫೆಷನ್ ರೂಮ್, ಗಾರ್ಡನ್ ಏರಿಯಾ, ಹಾಲ್, ಕಿಚನ್ ರೂಮ್ ಹೀಗೆ ಎಲ್ಲವನ್ನೂ ಸುತ್ತಾಡಿದ ಸುದೀಪ್, ಅವುಗಳ ಪರಿಚಯವನ್ನು ವಿಶೇಷವಾಗಿ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ
ಗಾರ್ಡನ್ ಏರಿಯಾವನ್ನು ಪರಿಚಯ ಮಾಡಿಕೊಡುತ್ತಾ, ‘ವಿಶ್ವದಲ್ಲೇ ಅತೀ ಹೆಚ್ಚು ಗುದ್ದಾಟ ನಡೆಯುವುದು ಇದೇ ಜಾಗದಲ್ಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಅಡುಗೆ ಮನೆಯನ್ನು ‘ಅಡುಗೆ ಮನೆಯಲ್ಲಿಯೇ ಅತೀ ಹೆಚ್ಚು ಬೆಂಕಿ ಬೀಳುವುದು’ ಎಂದು ಹೇಳುವ ಮೂಲಕ ಈ ಹಿಂದಿನ ಜಗಳವನ್ನು ನೆನಪಿಸಿದರು ಸುದೀಪ್, ಇದಕ್ಕೆ ವಾಸುಕಿ ಧ್ವನಿ ಗೂಡಿಸಿ ‘ಈ ಅಡುಗೆ ಮನೆಯಲ್ಲೇ ಎಲ್ಲರೂ ಕಳ್ಳರಾಗಿ ಬಿಡ್ತಾರೆ’ ಎನ್ನುತ್ತಾ ಏನೆಲ್ಲ ಕದಿಯುತ್ತಾರೆ ಎನ್ನುವುದನ್ನು ವಿವರಿಸುತ್ತಾರೆ.
ಇಡೀ ಮನೆ ಈ ಬಾರಿ ಕಲರ್ ಫುಲ್ ಆಗಿದೆ. ಕಳೆದ ಸೀಸನ್ ಗಿಂತಲೂ ಈ ಸಲ ಬಣ್ಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ನಾನಾ ರೀತಿಯ ಬಣ್ಣಗಳಿಂದ ದೊಡ್ಮನೆ ಸಿಂಗಾರಗೊಂಡಿದೆ. ಕಂಟೆಸ್ಟೆಂಟ್ ಗಳು ಕೂರುವುದಕ್ಕಾಗಿ ಕೆಂಪು ಬಣ್ಣದ ಅರ್ಧ ವೃತ್ತಾಕಾರದ ಸೋಫಾ ಹಾಕಲಾಗಿದೆ. ಲೀವಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ದೊಡ್ಡ ಮುಖದಾಕೃತಿ ಇಡಲಾಗಿದೆ. ಇದನ್ನು ನೋಡಿದ ಸುದೀಪ್, ಥೇಟ್ ನನ್ನ ತರಹವೇ ಇದೆ ಎಂದು ಛೇಡಿಸುತ್ತಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರತಿಯೊಬ್ಬರಿಗೂ ಏನೋ ಒಂದು ರೀತಿಯಲ್ಲಿ ಹಿಂಜರಿಕೆ. ಕಾರಣ, ಕಾಫಿಗೆ ಫಿಲ್ಟರ್ ಇದ್ದರೆ ಕರಣ್ ಗೆ ಈ ಫಿಲ್ಟರ್ ಕಡಿಮೆ. ಹಾಗಾಗಿಯೇ ವೈಯಕ್ತಿಕ ವಿಚಾರಗಳನ್ನೆಲ್ಲ ಅವರು ಕೆದುಕುತ್ತಾ ಹೋಗುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನಿಷ್ಠ ಮಾನದಂಡ ಒಂದಷ್ಟು ವಿವಾದಿಗಳನ್ನು ಅತಿಥಿಗಳು ಮೈಮೇಲೆ ಹಾಕಿಕೊಂಡರಬೇಕು.
ಕೇವಲ ವಿವಾದಗಳು ಮಾತ್ರವಲ್ಲ, ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಬೇಕು. ಬೆಡ್ ರೂಮ್ ವಿಷಯದಿಂದ ಹಿಡಿದು ತಾವು ಹಾಕುವ ಒಳಉಡುಪುಗಳ ಬಣ್ಣದ ವಿಷಯವನ್ನೂ ಕರಣ್ ಸಡನ್ನಾಗಿ ಮಾತನಾಡುತ್ತಾರೆ. ಅದಕ್ಕೆ ಉತ್ತರಿಸಲೇಬೇಕು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಲಿಬ್ರಿಟಿಗಳು ಒಪ್ಪುವುದಿಲ್ಲ. ಬರಲೇಬೇಕು ಎಂಬ ಒತ್ತಡವಿದ್ದರೆ ಸಂಭಾವನೆಗೆ ಡಿಮಾಂಡ್ ಮಾಡಲಾಗುತ್ತದೆ. ಇಂಥದ್ದೇ ಸಂಭಾವನೆ ಕಾರಣಕ್ಕಾಗಿ ರಣಬೀರ್ ಕಪೂರ್ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ
ಈಗಾಗಲೇ ಹಲವು ಕಂತುಗಳನ್ನು ಚಿತ್ರೀಕರಿಸಿರುವ ಕರಣ್ ಜೋಹಾರ್, ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಅವರನ್ನೂ ಆಹ್ವಾನಿಸಿದ್ದರಂತೆ. ಆದರೆ, ಈ ಕಾರ್ಯಕ್ರಮಕ್ಕೆ ಬರಲು ರಣಬೀರ್ ಒಪ್ಪಿಲ್ಲ. ಬರುವುದಾದರೆ ಕೋಟಿ ಲೆಕ್ಕದಲ್ಲಿ ಸಂಭಾವನೆ ನೀಡಬೇಕು ಎಂದು ಕೇಳಿದ್ದಾರಂತೆ. ಹಾಗಾಗಿಯೇ ರಣಬೀರ್ ಕೈ ಬಿಟ್ಟು ಕೇವಲ ಆಲಿಯಾ ಭಟ್ ಅವರನ್ನಷ್ಟೇ ಕಾರ್ಯಕ್ರಮಕ್ಕೆ ಕರೆಯಿಸಿಕೊಂಡಿದ್ದಾರೆ. ಆ ಎಸಿಸೋಡ್ ಶೂಟಿಂಗ್ ಆಗಿದೆ. ಆಲಿಯಾ ಸಖತ್ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ ಎನ್ನುವ ಸುದ್ದಿಯಿದೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ ನಡೆಸಿಕೊಡುತ್ತಿದ್ದ ಕಾಫಿ ವಿತ್ ಕರಣ್ ಕಾರ್ಯಕ್ರಮ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಈ ಶೋನಿಂದಾಗಿ ಅನೇಕ ಗಾಸಿಪ್ ಗಳು ಬಾಲಿವುಡ್ ನಲ್ಲಿ ಹುಟ್ಟಿಕೊಂಡಿದ್ದವು. ಅಲ್ಲದೇ, ನೇರವಂತಿಕೆ ಮಾತಿನಿಂದಾಗಿ ಈ ಕಾರ್ಯಕ್ರಮ ಯಶಸ್ಸಿ ಆಗಿತ್ತು. ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಈ ಶೋನಲ್ಲಿ ಭಾಗಿಯಾದ ಹೆಗ್ಗಳಿಕೆ ಇದರದ್ದು. ಈ ಬಾರಿ ಕರಣ್, ಈ ಕಾರ್ಯಕ್ರಮವನ್ನು ಓಟಿಟಿಗಾಗಿ ಮಾಡುತ್ತಿದ್ದಾರೆ.
ಈ ಶೋ ದಕ್ಷಿಣದ ಖ್ಯಾತ ನಟಿ ಸಮಂತಾ ಅವರ ಎಪಿಸೋಡ್ ನಿಂದ ಶುರುವಾಗುತ್ತಿದೆ ಎಂದು ಹೇಳಲಾಗಿತ್ತು. ಅಲ್ಲದೇ ಈ ಶೋನಲ್ಲಿ ಅವರು ಭಾಗಿಯಾಗಿದ್ದು, ಆ ಕಂತನ್ನು ಶೂಟ್ ಮಾಡಲಾಗಿದೆ ಎಂದೂ ಸುದ್ದಿ ಆಯಿತು. ಆದರೆ, ಈವರೆಗೂ ಸಮಂತಾ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲವಂತೆ. ಆಯೋಜಕರಿಗೆ ಶೋನಲ್ಲಿ ಭಾಗವಹಿಸಲು ಕರೆ ಬಂದಿದ್ದರೂ, ಇನ್ನೂ ಅವರು ಒಪ್ಪಿಕೊಂಡಿಲ್ಲ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ
ಸಮಂತಾ ಅವರ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಅಲ್ಲದೇ ಡಿವೋರ್ಸ್ ನಂತರ ಅವರ ಜೀವನ ನಾನಾ ತಿರುವುಗಳನ್ನು ಪಡೆದುಕೊಂಡಿದೆ. ಈ ಎಲ್ಲದರ ಕುರಿತು ಸಮಂತಾ ಅವರಿಂದ ಬಾಯ್ಬಿಡಿಸುವ ಯೋಚನೆ ಕರಣ್ ಅವರಿಗಿತ್ತು. ಈ ಎಪಿಸೋಡ್ ಮೂಲಕ ಶೋ ಶುರುವಾದರೆ, ಗ್ರ್ಯಾಂಡ್ ಓಪನಿಂಗ್ ಸಿಗಲಿದೆ ಎಂದು ನಂಬಲಾಗಿತ್ತು. ಅದು ನಿಜವೂ ಆಗಿತ್ತು. ಆದರೆ, ಈವರೆಗೂ ಸಮಂತಾ ಶೂಟಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಗೊತ್ತಾಗಿದೆ.
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಅನೇಕ ಧಾರಾವಾಹಿ, ಸಿನಿಮಾಗಳಿಗೆ ಬ್ರೇಕ್ ಇದ್ದಿದೆ. ಇತ್ತೀಚೆಗೆ ಒಂದೊಂದೆ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದೆ. ಈ ಮಧ್ಯೆ ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ವರ್ಷ ಪ್ರಸಾರವಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ತೆಲುಗಿನಲ್ಲಿ ಬಿಗ್‍ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆದರೆ ಕನ್ನಡದಲ್ಲಿ ಈ ವರ್ಷ ಅಂದರೆ 2020ರಲ್ಲಿ ಬಿಗ್‍ಬಾಸ್ ನಡೆಯುವುದಿಲ್ಲ ಎಂಬ ಸುದ್ದಿ ಪ್ರಕಟವಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳಿನಿಂದ ಬಿಗ್‍ಬಾಸ್ ಆರಂಭವಾಗುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಶೋ ಶುರು ಮಾಡಲು ಸಾಧ್ಯವಾಗಿಲ್ಲ.
ಮಾಹಿತಿ ಪ್ರಕಾರ, ಇನ್ನು ಆರು ತಿಂಗಳು ತಡವಾಗಿ ಬಿಗ್‍ಬಾಸ್ ಶುರುವಾಗಲಿದೆ ಎನ್ನಲಾಗುತ್ತಿದೆ. ಅಂದರೆ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಶುರುವಾಗಲಿದೆ. ಹೀಗಾಗಿ ಸದ್ಯಕ್ಕೆ 2020ರಲ್ಲಿ ಬಿಗ್‍ಬಾಸ್ ಶೋ ಪ್ರಸಾರವಾಗಲ್ಲ. ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದ ಬಿಗ್‍ಬಾಸ್ ಶೋ ತುಂಬಾ ಜನಮನ್ನಣೆ ಗಳಿಸಿತ್ತು. ಆದರೆ ಈಗ ಬಿಗ್‍ಬಾಸ್ ಪ್ರಿಯರಿಗೆ ಇದರಿಂದ ಬೇಸರವಾಗುವ ಸಾಧ್ಯತೆಯಿದೆ.
ಸದ್ಯದ ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಬಿಗ್‍ಬಾಸ್ ಸಹ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ವರ್ಷ ಬಿಗ್‍ಬಾಸ್ ನಡೆಯಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಸಹ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಹೈದರಾಬಾದ್‍ನಲ್ಲಿ ‘ಫ್ಯಾಂಟಮ್’ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಮತ್ತೊಂದೆಡೆ ‘ಕೋಟಿಗೊಬ್ಬ 3’ ಸಿನಿಮಾ ಕೂಡ ರಿಲೀಸ್‍ಗೆ ರೆಡಿಯಾಗಿದೆ.
‘ಬಿಗ್‍ಬಾಸ್ ಸೀಸನ್ 7’ರಲ್ಲಿ ನಟ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಬಿಗ್‍ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಬಿಗ್‍ಬಾಸ್ ಸೀಸನ್ 7 ರಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದ್ದರು.
113 ದಿನಗಳನ್ನು ಕಳೆದಿದ್ದ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನಿಗದಿಪಡಿಸಿದ್ದ 50 ಲಕ್ಷ ರೂ. ಬಹುಮಾನ ಸಿಕ್ಕಿತ್ತು. ಜೊತೆಗೆ ಅಧಿಕವಾಗಿ 11 ಲಕ್ಷ ಸಿಕ್ಕಿತ್ತು. ಹೀಗಾಗಿ ಒಟ್ಟಾಗಿ ಶೈನ್ ಶೆಟ್ಟಿ ಜೇಬಿಗೆ 61 ಲಕ್ಷ ರೂ. ಸೇರಿತ್ತು. ಅಲ್ಲದೇ 61 ಲಕ್ಷ ಹಣದ ಜೊತೆಗೆ ‘ಬಾಸ್‍ಬಾಸ್ ಸೀಸನ್ 7’ ವಿನ್ನರ್ ಪಟ್ಟ ದೊರೆತಿತ್ತು. ಇದಲ್ಲದೇ ಹೊಸ ಮಾಡೆಲ್ ಟಾಟಾ ಆಲ್ಟ್ರೋಜ್ ಕಾರನ್ನು ವಿನ್ನರ್ ಆದ ಶೈನ್ ಶೆಟ್ಟಿಗೆ ನೀಡಲಾಗಿತ್ತು.
ಶಿವಮೊಗ್ಗ: ಶ್ವಾನ ಮತ್ತು ಬೆಕ್ಕು ಎಂದರೆ ಬಹಳಷ್ಟು ಜನರಿಗೆ ಎಲ್ಲಿಲ್ಲದ ಪ್ರೀತಿ. ಅಂತಹ ಶ್ವಾನ ಹಾಗೂ ಬೆಕ್ಕು ಪ್ರಿಯರಿಗಾಗಿಯೇ ಶಿವಮೊಗ್ಗದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಬಣ್ಣ ಬಣ್ಣದ ಉದ್ದ ಕೂದಲಿನ ಬೆಕ್ಕುಗಳು, ಪ್ರೀತಿಯಿಂದ ತಲೆ ಸವರಿದರೆ ಬಾಲ ಅಲ್ಲಾಡಿಸುವ ನಾನಾ ತಳಿಯ ಶ್ವಾನಗಳು ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಜನಮನ ಸೆಳೆಯಿತು. ವಿನೋಬನಗರದ ಡಿವಿಎಸ್ ಕಾಲೇಜಿನ ಆವರಣದಲ್ಲಿ ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಆಯೋಜಿಸಲಾಗಿತ್ತು.
ರಾಜ್ಯದ ವಿವಿಧೆಡೆಗಳಿಂದ ವಿವಿಧ ತಳಿಯ ಸುಮಾರು 250ಕ್ಕೂ ಅಧಿಕ ನಾಯಿ ಹಾಗೂ ಬೆಕ್ಕುಗಳು ಶೋನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದವು. ಪ್ರದರ್ಶನದಲ್ಲಿ ದೇಶಿ ತಳಿಯ ಶ್ವಾನಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಆದರೆ ವಿದೇಶಿ ತಳಿಯ ಶ್ವಾನಗಳಿಗೆ ಪ್ರತಿಯೊಂದು ಶ್ವಾನಕ್ಕೂ 350 ರೂ. ಪ್ರವೇಶ ದರ ನಿಗದಿಪಡಿಸಲಾಗಿತ್ತು.
ಜನರು ವಿವಿಧ ಬಗೆಯ ಶ್ವಾನ ನೋಡಲು ಮುಗಿಬಿದ್ದರು. ಆಯೋಜಕರು ಕರೆದಾಗ ಶ್ವಾನಗಳು ಬಂದು ಪ್ರದರ್ಶನ ಕೊಡುತ್ತಿದ್ದವು. ಪ್ರದರ್ಶನದಲ್ಲಿ ದೇಶಿ, ವಿದೇಶಿ ತಳಿಯ ಸುಮಾರು 250ಕ್ಕೂ ಶ್ವಾನ ಹಾಗೂ ಬೆಕ್ಕುಗಳು ಭಾಗಿಯಾಗಿ ಜನರಿಗೆ ಸಖತ್ ಎಂಜಾಯ್‍ಮೆಂಟ್ ನೀಡಿದವು.
ಪ್ರದರ್ಶನದಲ್ಲಿ ನಾನಾ ತಳಿಯ ಬೆಕ್ಕು, ಶ್ವಾನಗಳನ್ನು ಕಂಡ ಪ್ರಾಣಿ ಪ್ರಿಯರು ಅವುಗಳನ್ನು ಎತ್ತಿ ಮುದ್ದಾಡಿದರು. ಹಲವರು ತಮ್ಮ ನೆಚ್ಚಿನ ಶ್ವಾನ, ಬೆಕ್ಕು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದರೆ, ಮಕ್ಕಳಂತೂ ನಾಯಿ ಬೆಕ್ಕುಗಳನ್ನು ಮುಟ್ಟಿ ಖುಷಿಪಟ್ಟರು.
ಬೆಂಗಳೂರು: ಸ್ಯಾಂಡಲ್‍ವುಡ್‍ನ ಅನೇಕ ಸ್ಟಾರ್ ನಟರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಶೋಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ವಾಹಿನಿ? ಯಾವ ಶೋ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.
ಈ ಹಿಂದೆ ದರ್ಶನ್ ಕಿರುತೆರೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ‘ವೀಕೆಂಡ್ ವಿತ್ ರಮೇಶ್’, ‘ಮಜಾ ಟಾಕೀಸ್’ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಶೋವೊಂದರ ನಿರೂಪಣೆಯನ್ನು ಮಾಡಲಿದ್ದಾರೆ.
ನಟ ದರ್ಶನ್‍ಗೆ ಕಿರುತೆರೆ ಏನು ಹೊಸದಲ್ಲ. ಯಾಕೆಂದರೆ ಎಸ್.ನಾರಾಯಣ್ ನಿರ್ದೇಶನದ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಹೀಗಾಗಿ ದರ್ಶನ್ ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಬಂದು ಇಂದು ಡಿ-ಬಾಸ್ ಆಗಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ದರ್ಶನ್, ಒಡೆಯ, ರಾಬರ್ಟ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.
ಈಗಾಗಲೇ ವೀಕೆಂಡ್ ವಿತ್ ರಮೇಶ್ ಮೂಲಕ ರಮೇಶ್ ಅರವಿಂದ್, ಬಿಗ್‍ಬಾಸ್ ಮೂಲಕ ಸುದೀಪ್, ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್, ಸೂಪರ್ ಮಿನಿಟ್‍ನಲ್ಲಿ ಗಣೇಶ್ ಸೇರಿದಂತೆ ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಚಿತಾ ರಾಮ್, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ ಹೀಗೆ ಅನೇಕರು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮಕ್ಕಳ ಡ್ಯಾನ್ಸ್ ನೋಡಿ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಭಿನಂದಿಸಿದ್ದಾರೆ.
ಈ ವಾರ ಸ್ಯಾಂಡಲ್ ವುಡ್‍ನ ಬೆಸ್ಟ್ ಪೇರ್ ಅಂತಾ ಕರೆಸಿಕೊಳ್ಳುವ ಜೋಡಿಯ ಮಾದರಿಯಂತೆ ಸ್ಪರ್ಧಿಗಳು ನೃತ್ಯ ಮಾಡಬೇಕಿತ್ತು. ಸ್ಪರ್ಧೆಯ ನಿಯಮದಂತೆಯೇ ಸ್ಪರ್ಧಿಗಳಾದ ಸೂರಜ್ ಮತ್ತು ಶ್ರಾವ್ಯ ಜೋಡಿ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯ ಮೇಲೆ ನಟಿ ರಮ್ಯಾ ಅವರ `ಆಕಾಶ್’ ಸಿನಿಮಾ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಕಣ್ಮನ ಸೆಳೆದಿದ್ದರು. ಅವರು ಮಾಡಿದ ವಿಡಿಯೋ ಕ್ಲಿಪ್‍ಯೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ದಿವ್ಯ ಪ್ರಸನ್ನ ಎಂಬವರು ನಟಿ ರಮ್ಯಾರಿಗೆ ಟ್ಯಾಗ್ ಮಾಡಿದ್ದರು.
ವಿಡಿಯೋ ಜೊತೆಗೆ ಈ ಮಕ್ಕಳ ಇಂತಹ ಸುಂದರ ಪ್ರದರ್ಶನವನ್ನು ಇದುವರೆಗೂ ಈ ವೇದಿಕೆಯಲ್ಲಿ ನೋಡಿಲ್ಲ. ಅಷ್ಟೂ ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು.
ಇದೇ ವೇದಿಕೆಯಲ್ಲಿ ಅಭಿಜಾತ್ ಮತ್ತು ವಂಶಿ ಜೋಡಿಯೂ ನಟಿ ರಮ್ಮಾ ಮತ್ತು ನಟ ಕಿಚ್ಚ ಸುದೀಪ್ ಜೋಡಿಯ `ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಹಾಕಿ `ನನ್ನ ಮೆಚ್ಚಿನ ರಮ್ಮಾ ಮತ್ತು ಸುದೀಪ್ ಜೋಡಿ ಮತ್ತೆ ಪರದೆಯ ಮೇಲೆ ಬಂದಿದ್ದಾರೆ. ಮತ್ತೆ ನಿಮ್ಮಿಬ್ಬರನ್ನು ಪರದೆಯ ಮೇಲೆ ನೋಡಲು ಬಯಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದು, ಅದನ್ನು ರಮ್ಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ದಿವ್ಯಪ್ರಸನ್ನ ಅವರ ಟ್ವೀಟ್ ಗೆ ರಮ್ಯಾ “ಈ ಮಕ್ಕಳು ನನಗಿಂತ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ” ಎಂದು ರೀಟ್ವೀಟ್ ಮಾಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಲಿಟಲ್ ಮಾಸ್ಟರ್’ ಶೋ ನಡೆಯುತ್ತಿದೆ. ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತದೆ. ಈ ಶೋನಲ್ಲಿ ನಟಿ ರಕ್ಷಿತ ಪ್ರೇಮ್, ನಟ ವಿಜಯ್ ರಾಘವೇಂದ್ರ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ತೀರ್ಪುಗಾರಾಗಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್ 4ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಳಿ ಉಡುಗೊರೆಯೊಂದನ್ನು ಕೇಳಿದ್ದರು. ಕೊನೆಗೂ ನಟ ಪುನೀತ್ ಅವರು ಕೇಳಿದ ಉಡುಗೊರೆಯನ್ನೇ ನೀಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಟ ಪುನೀತ್ ನಡೆಸಿಕೊಡುತ್ತಿರುವ `ಫ್ಯಾಮಿಲಿ ಪವರ್’ ಶೋನಲ್ಲಿ ಪ್ರಥಮ್ ಮತ್ತು ಕುಟುಂಬ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಮುಗಿದ ಮೇಲೆ ಸುದೀಪ್ ಕೊಟ್ಟ ಎರಡು ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ನೋಟ್ ನ ಭದ್ರವಾಗಿ ಇಟ್ಟುಕೊಂಡಿದ್ದೇನೆ. ಇವತ್ತು ಇಲ್ಲಿ ನಿಮ್ಮ ಜೊತೆ ಸ್ಟೇಜ್ ಗೆ ಬಂದಿದ್ದು ಬಹಳ ಖುಷಿ ಆಗಿದೆ. ಶೋ ಮುಗಿದ ಮೇಲೆ ಈ ಬ್ಲೇಸರ್ ನನಗೆ ಕೊಡಿ, ಮದುವೆಗೋ, ಹನಿಮೂನ್ ವೇಳೆ ಧರಿಸುತ್ತೇನೆ ಎಂದು ಪ್ರಥಮ್ ಕೇಳಿದ್ದರು.
ಪ್ರಥಮ್ ಕೇಳಿದ ತಕ್ಷಣ ಪುನೀತ್ ರಾಜ್ ಕುಮಾರ್ ಓಕೆ ಎಂದಿದ್ದರು. ನಂತರ ಕಾರ್ಯಕ್ರಮದ ಶೂಟಿಂಗ್ ಮುಗಿದ ಮೇಲೆ ಪುನೀತ್ ಕೊಟ್ಟ ಮಾತಿನಂತೆ ಪ್ರಥಮ್ ಗೆ ತಮ್ಮ ಬ್ಲೇಸರ್ ಕೊಟ್ಟಿದ್ದಾರೆ. ಪುನೀತ್ ಧರಿಸಿದ್ದ ಬ್ಲೇಸರ್ ಸಿಕ್ಕಿದ್ದಕ್ಕೆ ಪ್ರಥಮ್ ಕೂಡ ತುಂಬಾ ಖುಷಿಯಾಗಿದ್ದಾರೆ. ಪ್ರಥಮ್ ಕುಟುಂಬದವರ ಜೊತೆ ಸ್ಪರ್ಧಿಯಾಗಿ ಬಿಗ್ ಬಾಸ್ ಸ್ಪರ್ಧಿ ಸಮೀರಾಚಾರ್ಯ ಕುಟುಂಬವರು ಶೋನಲ್ಲಿ ಭಾಗವಹಿಸಿದ್ದರು.