Tag: ಶೈಲೆಂದರ್

  • ಡಿಕೆಶಿ ಸೂಚನೆಯಂತೆ ಹಣ ಸಾಗಿಸಿದ್ದೇನೆ ಎಂದ ಆಪ್ತ ಆಂಜನೇಯ!

    ಡಿಕೆಶಿ ಸೂಚನೆಯಂತೆ ಹಣ ಸಾಗಿಸಿದ್ದೇನೆ ಎಂದ ಆಪ್ತ ಆಂಜನೇಯ!

    ನವದೆಹಲಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನನದಲ್ಲಿ ನಾನು 5 ಕೋಟಿ ರೂ. ಹಣವನ್ನು ಸಾಗಿಸಿದ್ದೇನೆ ಎಂದು ಎಚ್.ಆಂಜನೇಯ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

    ರಾಷ್ಟ್ರೀಯ ಸುದ್ದಿ ವಾಹಿನಿ ‘ಟೈಮ್ಸ್ ನೌ’ಗೆ ನಿನ್ನೆ ದೆಹಲಿಯ ಡಿಕೆಶಿ ನಿವಾಸದ ಮೇಲೆ ಮಾಡಿದ ದಾಳಿಯ ವೇಳೆ ಐಟಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರತಿ ಸಿಕ್ಕಿದ್ದು ಇದರಲ್ಲಿ ಆಂಜನೇಯ ಹಣದ ಮೂಲದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಸುದ್ದಿ ಪ್ರಸಾರ ಮಾಡಿದೆ.

    ಹೇಳಿಕೆಯಲ್ಲೇನಿದೆ?: ಶೈಲೇಂದರ್ 1 ಕೋಟಿ ರೂ., 2.5 ಕೋಟಿ ರೂ., 1.5 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಹಣವನ್ನು ತಂದಿದ್ದರು. ಕಳೆದ ವಾರ 1.60 ಕೋಟಿ ರೂ. ಹಣವನ್ನು ನಾನೇ ಸಾಗಿಸಿದೆ. ಸಚಿವ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ನಾನು ಹಣವನ್ನು ಬಿ2/107 ಮನೆಯಿಂದ ಬಹ/201 ಮನೆಗೆ ಸಾಗಿಸಿದ್ದೇನೆ. ಆದರೆ ಈ ಹಣವನ್ನು ನನ್ನ ಮೂಲಕವೇ ಯಾಕೆ ಸಾಗಿಸಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ಪ್ರಶ್ನಾವಳಿಗೆ ಆಂಜನೇಯ ಸಹಿ ಹಾಕಿದ್ದಾರೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.

    ಡಿಕೆಶಿ ದೆಹಲಿಗೆ ಹೋಗಿದ್ದು ಯಾಕೆ?: ಇಂಧನ ಸಚಿವ ಡಿಕೆ ಶಿವಕುಮಾರ್ ಆಗಸ್ಟ್ 1ರಂದು ದೆಹಲಿಗೆ ಆಗಮಿಸಿದ್ದರು. ಜೆಟ್ ಏರ್ ವೇಸ್ ವಿಮಾನದಲ್ಲಿ ಆಗಮಿಸಿದ್ದ ಶಿವಕುಮಾರ್ ದೆಹಲಿಯ ಏರೋಸಿಟಿಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಹಣ ಸಂದಾಯವಾಗಿದೆಯಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆಯಂತೆ. ಐಟಿ ದಾಳಿ ವೇಳೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಿಂದ 7.5 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ಇದ್ಯಾವುದನ್ನೂ ಐಟಿ ಅಧಿಕಾರಿಗಳು ಇನ್ನೂ ಖಚಿತ ಪಡಿಸಿಲ್ಲ.