Tag: ಶೈಲಜಾ

  • ದ್ವಾರಕೀಶ್‌ರನ್ನು ತುಂಬಾ ಮಿಸ್‌ ಮಾಡಿಕೊಳ್ತಿದ್ದೀನಿ- ಪತ್ನಿ ಶೈಲಜಾ ಭಾವುಕ

    ದ್ವಾರಕೀಶ್‌ರನ್ನು ತುಂಬಾ ಮಿಸ್‌ ಮಾಡಿಕೊಳ್ತಿದ್ದೀನಿ- ಪತ್ನಿ ಶೈಲಜಾ ಭಾವುಕ

    ಸ್ಯಾಂಡಲ್‌ವುಡ್ ನಟ ದ್ವಾರಕೀಶ್ (Actor Dwarakish) ನಿಧನ ಅವರ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಸುಮಾರು ವರ್ಷಗಳಿಂದ ಅವರು ಮಾತನಾಡದೇ ಇರುವ ಮಾತುಗಳನ್ನು ಹೇಳಿದ್ದಾರೆ. ಅವರ ಅಗಲಿಕೆಯಿಂದ ಶಾಕ್ ಆಗಿದೆ ಎಂದು ಪತ್ನಿ ಶೈಲಜಾ (Shailaja) ಮಾತನಾಡಿದ್ದಾರೆ.

    ದ್ವಾರಕೀಶ್ ಅವರನ್ನು ನಮ್ಮ ಕುಟುಂಬದವರು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ಯುಗಾದಿ ಹಬ್ಬಕ್ಕೆ ಊರಿಗೆ ಹೋಗ್ತಿದ್ದೆ, ಆದರೆ ಅವರಿಗೆ ಕಳುಹಿಸೋಕೆ ಮನಸ್ಸು ಇರಲಿಲ್ಲ. ಅಂದು ಸುಮಾರು ವರ್ಷಗಳಿಂದ ಅವರು ಮಾತಾಡದೇ ಇರುವ ಮಾತುಗಳನ್ನಾಡಿದ್ದರು. ಅದೇ ನನಗೆ ಇವತ್ತು ಶಾಕ್ ಆಗ್ತಿದೆ. ನನ್ನನ್ನು ಪ್ರೀತಿಯಿಂದ ಪುಟ್ಟ ಅಂತ ಕರೆಯುತ್ತಿದ್ದರು ಎಂದು ಶೈಲಜಾ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಗುಂಮ್ಟಿ’ ಸಿನಿಮಾಗೆ ಹೀರೋನೇ ನಿರ್ದೇಶಕ

    ಅಂಬುಜಾ ಅಕ್ಕ ಮತ್ತು ಅವರ ಮಕ್ಕಳು ನನ್ನ ಯಾವತ್ತೂ ಬೇರೆಯವರ ಥರ ನೋಡ್ಲಿಲ್ಲ. ಅವರಿಗೆ ನಾನು ಚಿರಋಣಿ ಎಂದು ಮಾತನಾಡಿದ್ದಾರೆ. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಏಳ್ತಿದ್ದವ್ರು ಇವತ್ತು 7 ಗಂಟೆಗೆ ಎದ್ದಿದ್ದೇ ಸೋಜಿಗ. ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿನಿ ಎಂದು ಪತ್ನಿ ಮಾತನಾಡಿದ್ದಾರೆ.

    ಹಿರಿಯ ನಟ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಾಳೆ (ಏ.17) ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಏಳು ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.

  • ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

    ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

    ದ್ವಾರಕೀಶ್ (Dwarakish) ಅವರಿಗೆ ಎರಡು ಮದುವೆ ಆಗಿರೋ ವಿಚಾರ ತುಂಬಾ ಜನರಿಗೆ ಗೊತ್ತಿರಲಿಲ್ಲ. ಜೀ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂಥದ್ದೊಂದು ವಿಚಾರವನ್ನು ಸ್ವತಃ ದ್ವಾರಕೀಶ್ ಹೇಳಿಕೊಂಡಿದ್ದರು. ಆನಂತರ ಮದುವೆ ಆಗಿದ್ದ ಶೈಲಜಾ (Shailaja) ಅವರೇ ಒಂದಷ್ಟು ವಿಷಯಗಳನ್ನು ಜನರ ಮುಂದಿಟ್ಟಿದ್ದರು.

    ದ್ವಾರಕೀಶ್ ಎರಡನೇ ಮದುವೆ ಆದಾಗ ಅವರಿಗೆ 51 ವರ್ಷ. ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಶೈಲಜಾ. ಈ ಭೇಟಿಯೇ ಮುಂದೆ ಪ್ರೀತಿಯಾಗಿ, ಮದುವೆ ಹಂತ ತಲುಪಿತ್ತು.

    ಹಾಗಂತ ಶೈಲಜಾ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದೋರು ಅಲ್ಲ. ಅವರು ಬ್ಯಾಂಕ್ ಉದ್ಯೋಗಿ. ಪ್ರತಿಷ್ಠಿಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಂಗಿಗಾಗಿ ಪಾತ್ರ ಕೇಳಲು ಬಂದವರು ದ್ವಾರಕೀಶ್ ಅವರ ಪ್ರೀತಿಗೆ ಮನಸೋತರು. ಎರಡನೇ ಮದುವೆ ಅಂತ ಗೊತ್ತಿದ್ದರೂ, ಒಪ್ಪಿಕೊಂಡರು.

     

    ಶೈಲಜಾ ಹಾಗೂ ದ್ವಾರಕೀಶ್ ಇಷ್ಟ ಪಡುತ್ತಿರುವ ಮತ್ತು ದ್ವಾರಕೀಶ್ ಮತ್ತೊಂದು ಮದುವೆ ಆಗುವ ವಿಚಾರವನ್ನು ಮೊದಲ ಪತ್ನಿಗೆ (Ambuja) ತಿಳಿಸೋದು ಹೇಗೆ ಎನ್ನುವ ಒದ್ದಾಟ ಇಬ್ಬರದ್ದೂ ಆಗಿತ್ತು. ಆಗಲೇ ದ್ವಾರಕೀಶ್ ಅವರಿಗೆ ಐದು ಮಕ್ಕಳು. ಅಳುಕಿನಿಂದಲೇ ಮೊದಲ ಪತ್ನಿಗೆ ವಿಷಯ ತಿಳಿಸಿದ್ದರು ದ್ವಾರಕೀಶ್. ಆಗ ಮೊದಲ ಪತ್ನಿ ಹೇಳಿದ ಮಾತೆಂದರೆ, ನಿನಗೇನಿಷ್ಟನೋ ಅದು ನನಗಿಷ್ಟ ದ್ವಾರ್ಕಿ ಅಂತ.. ಆಗ ಮದುವೆ ಸಲೀಸಾಗಿ ನಡೆಯಿತು. ಪತ್ನಿ ಮತ್ತು ಮಕ್ಕಳ ಎದುರೇ ಎರಡನೇ ಮದುವೆ ಆಗಿದ್ದರು ದ್ವಾರಕೀಶ್.

  • ರೈತ ಸ್ನೇಹಿ ಯಂತ್ರ ಕಂಡು ಹಿಡಿದ ಸಂಶೋಧಕಿ- ತುಮಕೂರಿನ ಶೈಲಜಾ ವಿಠಲ್ ಪಬ್ಲಿಕ್ ಹೀರೋ

    ರೈತ ಸ್ನೇಹಿ ಯಂತ್ರ ಕಂಡು ಹಿಡಿದ ಸಂಶೋಧಕಿ- ತುಮಕೂರಿನ ಶೈಲಜಾ ವಿಠಲ್ ಪಬ್ಲಿಕ್ ಹೀರೋ

    – ಮಾರುಕಟ್ಟೆ ಬದಲು ನೇರವಾಗಿ ರೈತನ ಕೈಗೆ ಯಂತ್ರ

    ತುಮಕೂರು: ಇಲ್ಲೊಬ್ಬರು ಮಹಿಳೆ ಓದಿದ್ದು ಬಿಎಸ್‍ಸಿ ಕಂಪ್ಯೂಟರ್. ಆದರೆ ಛಾಪು ಮೂಡಿಸಿದ್ದು ಮಾತ್ರ ಮೆಕ್ಯಾನಿಕಲ್ ಕ್ಷೇತ್ರದಲ್ಲಿ. ಅದರಲ್ಲೂ ರೈತರಿಗೆ ಉಪಯೋಗವಾಗುವಂತಹ ಯಂತ್ರೋಪಕರಣಗಳನ್ನ ಸೃಷ್ಟಿಸಿ ಅನ್ನದಾತರಿಗೆ ನೆರವಾಗಿದ್ದಾರೆ. ಈ ಮೂಲಕ ತುಮಕೂರು ನಗರದ ದಿಟ್ಟ ಮಹಿಳೆ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಕೃಷಿ ಯಂತ್ರಗಳ ಪರಿಶೀಲನೆಯಲ್ಲಿ ತೊಡಗಿರುವ ಶೈಲಜಾ ವಿಠಲ್ ತುಮಕೂರಿನ ಸಪ್ತಗಿರಿ ಬಡಾವಣೆ ನಿವಾಸಿ. ಸಂಶೋಧಕಿ ಆಗಿರುವ ಇವರು, 35ಕ್ಕೂ ಹೆಚ್ಚು ವಿವಿಧ ಕೃಷಿ ಯಂತ್ರೋಪಕರಣ ಕಂಡು ಹಿಡಿದಿದ್ದಾರೆ. ತಮ್ಮದೇ ವರ್ಕ್‍ಶಾಪ್‍ನಲ್ಲಿ ಯಂತ್ರೋಪಕರಣ ತಯಾರು ಮಾಡಿಸುತ್ತಾರೆ. ದಾಳಿಂಬೆ ಹಣ್ಣಿನ ಕಾಳು ಬಿಡಿಸುವ ಯಂತ್ರ. ಅಡಿಕೆ ಸಿಪ್ಪೆ ತೆಗೆಯುವ ಯಂತ್ರ, ಹುಣಸೇ ಹಣ್ಣು ಬೀಜ ವಿಂಗಡಿಸುವ ಯಂತ್ರ, ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಯಂತ್ರ. ಈರುಳ್ಳಿ ಬೀಜ ಬಿತ್ತನೆ ಯಂತ್ರ ಹೀಗೆ ಹಲವು ಯಂತ್ರಗಳನ್ನು ಕಂಡು ಹಿಡಿದಿದ್ದಾರೆ.

    ಇವರ ರೈತಪರ ಸಂಶೋಧನೆಗಳಿಗೆ ಕಾರಣವಾಗಿದ್ದು ಆಸ್ಸಾಂನಿಂದ ತಂದಂತಹ ಅಡಿಕೆ ಸುಲಿಯುವ ಯಂತ್ರ. ಸಂಬಂಧಿಕರ ಮನೆಯಲ್ಲಿ ಈ ಯಂತ್ರ ಉಪಯೋಗಿಸುತ್ತಿದ್ದರು. ಆದರೆ ಅದರಿಂದ ನಿರೀಕ್ಷಿತ ಪ್ರಯೋಜನ ಆಗಿರಲಿಲ್ಲ. ಈ ಘಟನೆಯಿಂದ ಶೈಲಜಾ ವಿಠಲ್‍ಗೆ ರೈತರು ಎದುರಿಸುತ್ತಿರುವ ಸಂಕಷ್ಟಗಳ ಅರಿವಾಯಿತು. ಕೂಡಲೇ ಕೃಷಿ ಉಪಯೋಗಿ ಯಂತ್ರಗಳ ಅನ್ವೇಷಣೆಯಲ್ಲಿ ತೊಡಗಿದ್ರು.

    450 ರೂ.ಗಳಿಂದ ಹಿಡಿದು 15 ಲಕ್ಷ ರೂ. ಮೌಲ್ಯದ ಯಂತ್ರಗಳನ್ನು ಶೈಲಜಾ ತಯಾರಿಸಿದ್ದಾರೆ. ಆದರೆ ಇವುಗಳನ್ನು ಮಾರುಕಟ್ಟೆಗೆ ಬಿಟ್ಟಿಲ್ಲ. ಬೇಕಿದ್ದವರು ನೇರವಾಗಿ ಶೈಲಜಾ ಮನೆಗೆ ಹೋಗಿ ಖರೀದಿಸಬೇಕು. ಈ ಯಂತ್ರಗಳಿಗೆ ವಿದೇಶದಲ್ಲೂ ಭಾರೀ ಬೇಡಿಕೆ ಇದೆ. ಅಗ್ಗದ ದರದಲ್ಲಿ ರೈತರಿಗೆ ಯಂತ್ರಗಳನ್ನು ಬಿಕರಿ ಮಾಡುತ್ತಾರೆ ಎಂದು ಯುವ ರೈತ ಕುಶಾಲ್ ಹೇಳುತ್ತಾರೆ.

    ಯಂತ್ರಮಹಿಳೆ ಶೈಲಜಾ ವಿಠಲ್‍ಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

  • ಎಚ್‍ಡಿಡಿ ಕುಟುಂಬದಲ್ಲಿ ಅಳಿಯ, ಅತ್ತೆ ಮಧ್ಯೆ ಟಿಕೆಟ್ ಲೆಕ್ಕಾಚಾರ ಶುರು

    ಎಚ್‍ಡಿಡಿ ಕುಟುಂಬದಲ್ಲಿ ಅಳಿಯ, ಅತ್ತೆ ಮಧ್ಯೆ ಟಿಕೆಟ್ ಲೆಕ್ಕಾಚಾರ ಶುರು

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರ ಕುಟುಂಬದಲ್ಲಿ ಅಳಿಯ ಹಾಗೂ ಅತ್ತೆ ನಡುವೆ ಟಿಕೆಟ್ ಲೆಕ್ಕಾಚಾರ ನಡೆಯುತ್ತಿದೆ.

    ನಿಖಿಲ್ ಜೊತೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಹೋದರಿ ಶೈಲಜಾ ಅವರ ಹೆಸರು ಕೇಳಿ ಬಂದಿದೆ. ನಿಖಿಲ್‍ಗೆ ಮುನ್ನವೇ ಕೆ.ಆರ್ ಪೇಟೆಯಲ್ಲಿ ಅತ್ತೆ ಶೈಲಜಾ ಓಡಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೆ ಒಂದು ಕೈ ನೋಡೋಣ ಎನ್ನುವುದು ಶೈಲಜಾ ಅವರಿಗೆ ಆಸೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಶೈಲಜಾ ಅವರ ಸ್ಪರ್ಧೆ ಬಗ್ಗೆ ಕಾರ್ಯಕರ್ತರಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಆದರೆ ನಿಖಿಲ್ ಎಂಟ್ರಿಯಿಂದ ಯಾರಿಗೆ ಟಿಕೆಟ್ ಎನ್ನುವುದು ದೊಡ್ಡ ಗೊಂದಲ ಶುರುವಾಗಿದೆ.

    ಕುಮಾರಸ್ವಾಮಿ ಅವರು ಸಹೋದರಿ ಶೈಲಜಾ ಜೊತೆ ಹೆಚ್ಚಿನ ಆತ್ಮೀಯತೆ ಹೊಂದಿದ್ದಾರೆ. ಅಲ್ಲದೆ ಕಷ್ಟ-ಸುಖ ಏನೇ ಇದ್ದರೂ ಸಹೋದರಿ ಶೈಲಜಾ ತಮ್ಮ ಕುಮಾರಸ್ವಾಮಿ ಅವರ ಜೊತೆ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಕುಮಾರಸ್ವಾಮಿ ಮಗನಿಗಾಗಿ ಸಹೋದರಿ ಶೈಲಜಾ ಕ್ಷೇತ್ರ ತ್ಯಾಗ ಮಾಡುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ.

    ಒಟ್ಟಿನಲ್ಲಿ ರಾಜಕೀಯ ವಲಯದಲ್ಲಿ ಟಿಕೆಟ್ ಲೆಕ್ಕಾಚಾರ ಪ್ರಾರಂಭವಾಗಿದೆ. ಸದ್ಯ ದೇವೇಗೌಡರ ನಿರ್ಧಾರವೇ ಅಂತಿಮವಾಗಿದೆ.