Tag: `ಶೇರ್ಷಾ’

  • ‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ (Kiara Advani) ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ನಟಿಸಲು ಸಜ್ಜಾಗಿದ್ದಾರೆ. ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ಒಪ್ಪಿದ್ದಾರೆ ಎನ್ನಲಾದ ಸುದ್ದಿಯೊಂದು ಬಿಟೌನ್‌ನಲ್ಲಿ ಹರಿದಾಡುತ್ತಿದ್ದಾರೆ. ಇದನ್ನೂ ಓದಿ:ಸೂಚನ್‌ ಶೆಟ್ಟಿ ನಟನೆಯ ‘ಒಂದು ತಾತ್ಕಾಲಿಕ ಪಯಣ’ ಚಿತ್ರದ ಟ್ರೈಲರ್‌ ಔಟ್

    ಸೂಪರ್ ಹಿಟ್ ‘ಶೇರ್ಷಾ’ (Shershaah) ಸಿನಿಮಾದಿಂದಲೇ ರಿಯಲ್ ಲೈಫ್‌ನಲ್ಲೂ ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಸಿ ಮದುವೆಯಾದರು. ಈ ಸಿನಿಮಾ ಬಳಿಕ ಮತ್ತೆ ಯಾವಾಗ ಜೊತೆಯಾಗಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

    ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ ಇದೀಗ ಸಿದ್ಧಾರ್ಥ್ ಮತ್ತು ಕಿಯಾರಾ ಜೊತೆ ಹೊಸ ಸಿನಿಮಾ ಮಾಡಲು ಚರ್ಚಿಸಿದ್ದಾರೆ ಎನ್ನಲಾಗಿದೆ. ಲವ್ ಸ್ಟೋರಿ ಸಿನಿಮಾ ಆಗಿದ್ರೂ ಸಾಕಷ್ಟು ಟ್ವಿಸ್ಟ್‌ಗಳಿರುವಂತಹ ವಿಭಿನ್ನ ಕಥೆಗೆ ಈ ಜೋಡಿಯೇ ಸರಿ ಎಂದು ನಿರ್ಮಾಣ ಸಂಸ್ಥೆ ಸಿದ್ಧಾರ್ಥ್ ದಂಪತಿಯನ್ನು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಹಾಗಾದ್ರೆ ಸದ್ಯ ಹರಿದಾಡುತ್ತಿರುವ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಕಾದುನೋಡಬೇಕಿದೆ.

    ಅಂದಹಾಗೆ, 2021ರಲ್ಲಿ ತೆರೆಕಂಡ ‘ಶೇರ್ಷಾ’ ಸಿನಿಮಾದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದರು. ಈ ಚಿತ್ರಕ್ಕೆ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿದ್ದರು.

  • ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ

    ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ

    ಬಾಲಿವುಡ್ (Bollywood) ಜೋಡಿ ಸಿದ್-ಕಿಯಾರಾ (Siddarth Malhotra-Kiara Advani) ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಹಸೆಮಣೆ ಏರುವ ಮೂಲಕ ಗುಡ್ ನ್ಯೂಸ್ ನೀಡಿದ್ದ ಈ ಜೋಡಿ ಈಗ ಮತ್ತೆ ಸಿನಿಮಾ ವಿಚಾರವಾಗಿ ಸಿಹಿಸುದ್ದಿ ನೀಡಿದ್ದಾರೆ.

    ಸಿದ್-ಕಿಯಾರಾ ಜೋಡಿ `ಶೇರ್‌ಷಾ’ ಸಿನಿಮಾದ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದರು. ಈ ಸಿನಿಮಾದಿಂದ ಕ್ಯೂಟ್ ಕಪಲ್ ಆಗಿ ಹೈಲೈಟ್ ಆಗಿದ್ದರು. ಶೇರ್‌ಷಾ ಸಿನಿಮಾದಿಂದಲೇ ಇಬ್ಬರಿಗೂ ಪ್ರೇಮಾಂಕುರವಾಗಿ ಮದುವೆಯಾದರು. ಈಗ ಮತ್ತೆ ತೆರೆಯ ಮೇಲೂ ರೊಮ್ಯಾನ್ಸ್ ಮಾಡೋದ್ದಕ್ಕೆ `ಶೇರ್‌ಷಾ’ ಜೋಡಿ ರೆಡಿಯಾಗಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ರೊಮ್ಯಾಂಟಿಕ್ ಆಗಿ ಪ್ರೇಮಿಗಳ ದಿನ ಆಚರಿಸಿದ ಯಶ್- ರಾಧಿಕಾ

    ಕರಣ್ ಜೋಹರ್ (Karan Johar) ಅವರು ಅನೇಕ ಸೆಲೆಬ್ರಿಟಿಗಳ ಮಕ್ಕಳನ್ನು ಲಾಂಚ್ ಮಾಡಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು `ಸ್ಟುಡೆಂಟ್ ಆಫ್ ದಿ ಇಯರ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಕರಣ್ ಪರಿಚಯಿಸಿದರು. ಹೀಗಾಗಿ ಇಬ್ಬರ ಮಧ್ಯೆ ಆಪ್ತತೆ ಇದೆ. ಕಿಯಾರಾ ನಟನೆಯ `ಲಸ್ಟ್ ಸ್ಟೋರಿಸ್’ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಿದರು. ಅಲ್ಲಿಂದ ಕಿಯಾರಾ ಜೊತೆಗೆ ಕರಣ್ ಒಳ್ಳೆಯ ಫ್ರೆಂಡ್‌ಶಿಪ್ ಬೆಳೆಸಿಕೊಂಡರು. ಹೀಗಾಗಿ, ಸಿದ್ದಾರ್ಥ್ ಹಾಗೂ ಕಿಯಾರಾಗೆ ಕರಣ್ ಮೆಂಟರ್ ಕೂಡ ಆಗಿದ್ದಾರೆ.

    ಮದುವೆ ಹಾಗೂ ಆರತಕ್ಷತೆ ಸಂದರ್ಭದಲ್ಲಿ ಕರಣ್ ಜೋಹರ್ ಹಾಜರಿದ್ದರು. ಅವರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ನವದಂಪತಿ ಸಿದ್-ಕಿಯಾರಾ ಜೊತೆ ಅವರು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದಾರ್ಥ್- ಕಿಯಾರಾ ಜೋಡಿ ಜೊತೆಯಾಗಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದಾರೆ. ಇದಕ್ಕೆ ಧರ್ಮ ಪ್ರೊಡಕ್ಷನ್ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಸಿದ್ಧಾರ್ಥ್ – ಕಿಯಾರಾ ಜೋಡಿ: ವಿಡಿಯೋ ವೈರಲ್

    ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಸಿದ್ಧಾರ್ಥ್ – ಕಿಯಾರಾ ಜೋಡಿ: ವಿಡಿಯೋ ವೈರಲ್

    ಬಾಲಿವುಡ್‌ನ ಬೆಸ್ಟ್ ಆನ್‌ಸ್ಕ್ರೀನ್‌ ಕಪಲ್ ಎಂದೇ ಗುರುತಿಸಿಕೊಂಡಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ರಿಯಲ್ ಲೈಫ್‌ನಲ್ಲೂ ಒಂದಾಗಿದ್ದ `ಶೇರ್‌ಷಾ’ ಜೋಡಿಯ ಪ್ರೀತಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಇದೀಗ ಬ್ರೇಕ್ ಆಪ್ ವದಂತಿಯ ನಂತರ ಮತ್ತೆ ಒಟ್ಟಿಗೆ ಸಿದ್ಧಾರ್ಥ್ ಮತ್ತು ಕಿಯಾರಾ ಕಾಣಿಸಿಕೊಂಡಿರೋ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ತೆರೆಯ ಮೇಲೆ ಅಷ್ಟೇ ಅಲ್ಲ, ತೆರೆಯ ಹಿಂದೆ ಕೂಡ ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಯಿದ್ದು, ಕಳೆದ ಒಂದು ತಿಂಗಳಿAದ ಈ ಜೋಡಿಯ ಬ್ರೇಕ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಇದೀಗ ಬ್ರೇಕ್ ವದಂತಿಯ ನಂತರ `ಶೇರ್‌ಷಾ’ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಈದ್ ಔತಣ ಕೂಟವನ್ನ ಆಯೋಜಿಸಲಾಗಿತ್ತು. ಈ ವೇಳೆ ಇಡೀ ಬಾಲಿವುಡ್ ದಂಡೇ ಈದ್ ಔತಣ ಕೂಟದಲ್ಲಿ ಭಾಗಿಯಾಗಿತ್ತು. ಜತೆಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಕೂಡ ಭಾಗಿಯಾಗಿದ್ದಾರೆ. ನಟಿ ಕರಿಷ್ಮಾ ಕಪೂರ್ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಜತೆಗಿನ ಫೋಟೋದಲ್ಲಿ `ಶೇರ್‌ಷಾ’ ಜೋಡಿನೂ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಸಿದ್ದಾರ್ಥ್ ಮತ್ತು ಕಿಯಾರಾ ಒಟ್ಟಿಗೆ ಜತೆಯಾಗಿ ಖುಷಿಯಿಂದ ಔತಣ ಕೂಟಕ್ಕೆ ಹೋಗ್ತಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ: ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

     

    View this post on Instagram

     

    A post shared by ✨~SIDKIARA ~✨ (@peachysiara)

    ಇನ್ನು ಈ ವಿಡಿಯೋ ಮೂಲಕ ಸಿದ್ಧಾರ್ಥ್ ಮತ್ತು ಕಿಯಾರಾ ಬ್ರೇಕ್ ಆಪ್ ವದಂತಿಗೆ ತೆರೆ ಬಿದ್ದಿದೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ಭರದಿಂದ ಒಬ್ಬರನೊಬ್ಬರು ಈ ಜೋಡಿ ಭೇಟಿಯಾಗಿರಲಿಲ್ಲ. ಒಟ್ನಲ್ಲಿ ಬ್ರೇಕ್ ಆಪ್ ಆಗಿದೆ ಅಂತಾ ಬೇಸರ ಮಾಡಿಕೊಂಡಿದ್ದ ಶೇರ್‌ಷಾ ಜೋಡಿಯ ಫ್ಯಾನ್ಸ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಹೀಗೆ ಈ ಜೋಡಿ ಜತೆಯಾಗಿರಲಿ ಅಂತಾ ಫ್ಯಾನ್ಸ್ ಹಾರೈಸುತ್ತಿದ್ದಾರೆ.

  • ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ಬಿಟೌನ್ ಅಡ್ಡಾದಲ್ಲಿ ಬ್ರೇಕಪ್ ಸ್ಟೋರಿಗಳಿಗೇನು ಬರವಿಲ್ಲ. ಅದೆಷ್ಟೋ ಬ್ರೇಕಪ್ ಕಹಾನಿಯನ್ನ ಚಿತ್ರರಂಗ ನೋಡಿದೆ. ಈಗ ಬಾಲಿವುಡ್ ಗಲ್ಲಿಯಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಭಾರೀ ಸುದ್ದಿ ಮಾಡ್ತಿದೆ. ಬಾಲಿವುಡ್‌ ಕ್ಯೂಟ್‌ ಕಪಲ್‌ ಕಿಯಾರಾ ಮತ್ತು ಸಿದ್ಧಾರ್ಥ್‌ ಲವ್‌ಸ್ಟೋರಿಗೆ ಮತ್ತು ಇದೀಗ ಬ್ರೇಕ್ ಬಿದ್ದಿದೆ.

    ಒಂದೊಳ್ಳೆ ಸ್ನೇಹ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ ನಂತರ ವಿದೇಶದವರೆಗೂ ಕೈ ಕೈ ಹಿಡಿದು ಹೋಗುವ ಮಟ್ಟಿಗೆ ಪ್ರೇಂಡ್‌ಶಿಪ್ ಇತ್ತು. ಈಗ ಇದೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್‌ ಲವ್‌ ಕಹಾನಿ ಅಂತ್ಯವಾಗಿದೆ. ಈಗ ʻಶೇರ್ಷಾʼ ಪ್ರೇಮಿಗಳು ನಾನು ಒಂದು ನೀನು ಒಂದು ತೀರಾ ಅಂತಿದ್ದಾರಂತೆ.

    ಬಾಲಿವುಡ್‌ನ ಕ್ಯೂಟ್ ಕಪಲ್ ಆಗಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ ಬಿಟೌನ್ ಹಲವು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದರು. ಕ್ಯಾಮೆರಾ ಕಣ್ಣಿಗೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಬಳಿಕ ಎಲ್ಲಿಯೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಈಗ ಈ ಜೋಡಿ ಭೇಟಿಯಾಗೋದಕ್ಕೂ ಫುಲ್ ಸ್ಟಾಪ್ ಇಟ್ಟಿದೆ. ಯಾವುದರ ಸಹವಾಸವೇ ಬೇಡ ಅಂತಾ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಬ್ರೇಕಪ್‌ಗೆ ಅಸಲಿ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

     

    View this post on Instagram

     

    A post shared by KIARA (@kiaraaliaadvani)

    `ಶೇರ್ಷಾ’ ಚಿತ್ರದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಇವರಿಬ್ಬರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಇವರಿಬ್ಬರು ರಿಯಲ್ ಲೈಫ್‌ನಲ್ಲೂ ಜತೆಯಾದ್ರೆ ಅದೆಷ್ಟು ಚೆನ್ನಾಗಿರುತ್ತೆ ಅಂತಾ ಲೆಕ್ಕಚಾರ ಹಾಕಿದ್ರು. ಇದೀಗ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. ಒಟ್ಟಾರೆ ನೆಚ್ಚಿನ ಜೋಡಿಯ ಬ್ರೇಕಪ್ ಕಥೆ ಕೇಳಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.