Tag: ಶೇಫೀಲ್ಡ್

  • ಕೊಟ್ಟ ಮಾತು ಉಳಿಸಿಕೊಂಡ ಮಾರ್ಕ್ ವಿಲಿಯಮ್ಸ್ – ಚಾಂಪಿಯನ್‍ಶಿಪ್ ಗೆದ್ದ ಬಳಿಕ ಬೆತ್ತಲೆ ಸುದ್ದಿಗೋಷ್ಠಿ

    ಕೊಟ್ಟ ಮಾತು ಉಳಿಸಿಕೊಂಡ ಮಾರ್ಕ್ ವಿಲಿಯಮ್ಸ್ – ಚಾಂಪಿಯನ್‍ಶಿಪ್ ಗೆದ್ದ ಬಳಿಕ ಬೆತ್ತಲೆ ಸುದ್ದಿಗೋಷ್ಠಿ

    ಶೇಫೀಲ್ಡ್: ವಿಶ್ವ ಸ್ನೂಕರ್ ಚಾಂಪಿಯನ್‍ಶಿಪ್‍ನ ಇತಿಹಾಸದಲ್ಲೇ ಅತ್ಯಂತ ಕಠಿಣ ಫೈನಲ್ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಗೆದ್ದು ಬೀಗಿದ ಮಾರ್ಕ್ ವಿಲಿಯಮ್ಸ್, ದಾಖಲೆಯ ಮೂರನೇ ಬಾರಿಗೆ ಚಾಂಪಿಯನ್‍ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಇಂಗ್ಲೆಂಡ್‍ನ ಶೇಫೀಲ್ಡ್ ನಲ್ಲಿ ನಡೆದ ಜಿದ್ದಾಜಿದ್ದಿನ ಅಂತಿಮ ಹಣಾಹಣಿಯಲ್ಲಿ ವಿಲಿಯಮ್ಸ್, ನಾಲ್ಕು ಬಾರಿಯ ಚಾಂಪಿಯನ್ ಜಾನ್ ಹಿಗ್ಗಿನ್ಸ್ ವಿರುದ್ಧ 18-16 ಅಂತರದಲ್ಲಿ ರೋಚಕವಾಗಿ ಗೆದ್ದು ಇತಿಹಾಸ ನಿರ್ಮಿಸಿದರು. 42 ವರ್ಷದ ವಿಲಿಯಮ್ಸ್, ಬರೋಬ್ಬರಿ 15 ವರ್ಷದ ಬಳಿಕ ಮತ್ತೆ ಚಾಂಪಿಯನ್‍ಪಟ್ಟಕ್ಕೇರುವ ಮೂಲಕ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಮತ್ತೊಂದೆಡೆ ನಾಲ್ಕು ಬಾರಿಯ ಚಾಂಪಿಯನ್ ಜಾನ್ ಹಿಗ್ಗಿನ್ಸ್ ಸತತ ಎರಡನೇ ವರ್ಷವೂ ಫೈನಲ್‍ನಲ್ಲಿ ನಿರಾಸೆ ಅನುಭವಿಸಿದರು. ಕಳೆದ ವರ್ಷ ಮಾರ್ಕ್ ಸೆಲ್ಬಿಗೆ ಹಿಗ್ಗಿನ್ಸ್ ಶರಣಾಗಿದ್ದರು.

    ಬೆತ್ತಲೆ ಸುದ್ದಿಗೋಷ್ಠಿ:
    ಚಾಂಪಿಯನ್‍ಶಿಪ್‍ಗೂ ಮೊದಲು, ತಾನು ಗೆದ್ದರೆ ಬೆತ್ತೆಲೆಯಾಗಿ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಮಾರ್ಕ್ ವಿಲಿಯಮ್ಸ್ ಮಾತು ಕೊಟ್ಟಿದ್ದರು. ಚಾಂಪಿಯನ್‍ಶಿಪ್ ಮುಗಿದ ಬಳಿಕ ಟವಲ್ ಸುತ್ತಿ ಮಾಧ್ಯಮ ಕೊಠಡಿಗೆ ಆಗಮಿಸಿದ ವಿಲಿಯಮ್ಸ್, ಕೂತ ಬಳಿಕ ಟವಲ್‍ನ್ನೂ ತೆಗೆದು ಕೂಡ ಪಕ್ಕದಲಿದ್ದ ಆಸನದಲ್ಲಿರಿಸಿದರು. ಆದರೆ ಮಾಧ್ಯಮಗಳ ಲೋಗೋ ಇದ್ದ ಟೇಬಲ್‍ಗೆ ಹಾಕಲಾಗಿದ್ದ ಬಟ್ಟೆ ವಿಲಿಯಮ್ಸ್ ಮಾನ ಕಾಪಾಡಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಲಿಯಮ್ಸ್, ಇಲ್ಲಿ ತುಂಬಾ ಚಳಿಯಾಗುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಕ್ಷಣವನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ನಾನು ಈ ಬಗ್ಗೆ ಕನಸನ್ನಷ್ಟೇ ಕಂಡಿದ್ದೆ. ಅದೀಗ ನನಸಾಗುತ್ತಿದೆ. ಮುಂದಿನ ವರ್ಷವೂ ನಾನೇ ಗೆದ್ದರೆ ಮತ್ತೆ ನಗ್ನನಾಗಿಯೇ ನಿಮ್ಮ ಮುಂದೆ ಬರುತ್ತೇನೆ ಎಂದು ವಿಲಿಯಮ್ಸ್ ಹೇಳಿದರು.