Tag: ಶೆಹಬಾಜ್‌ ಶರೀಫ್‌

  • ಭಾರತದೊಂದಿಗಿನ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಲು ಪಾಕ್‌ ಬಯಸುತ್ತೆ: ಪ್ರಧಾನಿ ಶೆಹಬಾಜ್

    ಭಾರತದೊಂದಿಗಿನ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಲು ಪಾಕ್‌ ಬಯಸುತ್ತೆ: ಪ್ರಧಾನಿ ಶೆಹಬಾಜ್

    ನವದೆಹಲಿ: ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಭಾರತದೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.

    ಕಾಶ್ಮೀರಿಗಳಿಗೆ ಬೆಂಬಲ ತೋರಿಸುವ ವಾರ್ಷಿಕ ಪಾಕಿಸ್ತಾನಿ ಕಾರ್ಯಕ್ರಮವಾದ ಕಾಶ್ಮೀರ ಒಗ್ಗಟ್ಟಿನ ದಿನದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕ್ ಆಕ್ರಮಿತ ಕಾಶ್ಮೀರ (POK) ಅಸೆಂಬ್ಲಿಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಷರೀಫ್ ಅವರು ಶಾಂತಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟರು. ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್‌ ಸಹಿ

    ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು. ಭಾರತವು 2019, ಆ.5ರ ಚಿಂತನೆಯಿಂದ ಹೊರಬಂದು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಸಂವಾದವನ್ನು ಪ್ರಾರಂಭಿಸಬೇಕು ಎಂದು ಷರೀಫ್ ಹೇಳಿದರು.

    ಭಾರತ ಮತ್ತು ಪಾಕಿಸ್ತಾನ ನಡುವಿನ ಹಳಸಿದ ಸಂಬಂಧಗಳನ್ನು ಸರಿಪಡಿಸಲು ಏಕೈಕ ಮಾರ್ಗವೆಂದರೆ ಅದು ಮಾತುಕತೆ. 1999 ರ ಲಾಹೋರ್ ಘೋಷಣೆಯಲ್ಲಿ ಉಲ್ಲೇಖಿಸಿದಂತೆ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಸಹಿ ಹಾಕಲಾದ ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ಇದನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ

    ಭಾರತವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ಪ್ರಧಾನಿ ಷರೀಫ್ ಆರೋಪಿಸಿದರು. ಇದು ಈ ಪ್ರದೇಶದಲ್ಲಿ ಶಾಂತಿಯನ್ನು ತರುವುದಿಲ್ಲ ಎಂದು ಪ್ರತಿಪಾದಿಸಿದರು. ಭಾರತವು ಬುದ್ಧಿವಂತರಾಗಿರಬೇಕು. ಮುಂದುವರಿಯಲು ಏಕೈಕ ಮಾರ್ಗವೆಂದರೆ ಶಾಂತಿ ಎಂದು ಅವರು ಹೇಳಿದರು. ಕಾಶ್ಮೀರ ಸಮಸ್ಯೆಗೆ ಏಕೈಕ ಪರಿಹಾರವೆಂದರೆ ವಿಶ್ವಸಂಸ್ಥೆಯ ನಿರ್ಣಯದ ಅಡಿಯಲ್ಲಿ ಸ್ವಯಂ ನಿರ್ಣಯದ ಹಕ್ಕು ಎಂದು ಅವರು ಪ್ರತಿಪಾದಿಸಿದರು.

    ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವೆಂದು ಪರಿಗಣಿಸುವ ವ್ಯಾಪಕ ವಿಶ್ವಸಂಸ್ಥೆಯ ಸದಸ್ಯತ್ವವನ್ನು ಪಡೆಯುವಲ್ಲಿ ವಿಫಲವಾಗಿದೆ. ಇದನ್ನೂ ಓದಿ: ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

  • ಕಾಶ್ಮೀರವನ್ನ ಪ್ಯಾಲೆಸ್ತೀನ್‌ಗೆ ಹೋಲಿಸಿದ ಪಾಕ್ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

    ಕಾಶ್ಮೀರವನ್ನ ಪ್ಯಾಲೆಸ್ತೀನ್‌ಗೆ ಹೋಲಿಸಿದ ಪಾಕ್ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

    ನವದೆಹಲಿ: ಕಾಶ್ಮೀರ ಭಾರತದ ಅವಿಭಾಜ್ಯ. ಈ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಅಡ್ಡಿಪಡಿಸಲು ಪಾಕಿಸ್ತಾನ ಭಯೋತ್ಪಾದನೆಯನ್ನು ಬಳಸಿಕೊಂಡಿದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದಕ್ಕೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ.

    ಭಾರತದ (India) ಪರವಾಗಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಭಾವಿಕಾ ಮಂಗಳಾನಂದನ್, ಜಗತ್ತಿಗೆ ತಿಳಿದಿರುವಂತೆ ಪಾಕಿಸ್ತಾನವು (Pakistan) ತನ್ನ ನೆರೆಹೊರೆಯವರ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ‌‌. ನಮ್ಮ ಸಂಸತ್ತು, ನಮ್ಮ ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆ ಸ್ಥಳಗಳು ಮತ್ತು ತೀರ್ಥಯಾತ್ರೆಯ ಮಾರ್ಗಗಳ ಮೇಲೆ ದಾಳಿ ಮಾಡಿದೆ. ಇಂತಹ ದೇಶವು ಹಿಂಸೆಯ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

    ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆಯೊಂದಿಗೆ ಯಾವುದೇ ಒಪ್ಪಂದ ಸಾಧ್ಯವಿಲ್ಲ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯು ಅನಿವಾರ್ಯವಾಗಿ ಪರಿಣಾಮಗಳನ್ನು ಆಹ್ವಾನಿಸುತ್ತದೆ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೊತೆಗಿನ ಪಾಕಿಸ್ತಾನದ ಹಿಂದಿನ ಒಡನಾಟ ಮತ್ತು ಪ್ರಪಂಚದಾದ್ಯಂತದ ಭಯೋತ್ಪಾದಕ ಘಟನೆಗಳಲ್ಲಿ ಪಾಕಿಸ್ತಾನ ನಿಜವಾಗಿಯೂ ಏನೆಂದು ಜಗತ್ತು ಸ್ವತಃ ನೋಡುತ್ತಿದೆ ಎಂದು ಭಾರತ ಹೇಳಿದೆ.

    ಇದಕ್ಕೂ ಮೊದಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪಾಕಿಸ್ತಾನ ಪ್ರಧಾನಿ ಷರೀಫ್, ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪರಿಸ್ಥಿತಿಯನ್ನು ಪ್ಯಾಲೆಸ್ತೀನ್‌ಗೆ (Palestine) ಹೋಲಿಸಿದರು. ಜನರು ತಮ್ಮ ಸ್ವಾತಂತ್ರ್ಯ ಮತ್ತು ಸ್ವಯಂ-ನಿರ್ಣಯದ ಹಕ್ಕಿಗಾಗಿ ಒಂದು ಶತಮಾನದಿಂದ ಹೋರಾಡಿದ್ದಾರೆ‌. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಆರ್ಟಿಕಲ್ 370 ರ ರದ್ದತಿಯನ್ನು ಭಾರತಕ್ಕೆ ಹಿಮ್ಮೆಟ್ಟಿಸಲು ಅವರು ಕರೆ ನೀಡಿದರು. ಇದೇ ವೇಳೆ ಕಾಶ್ಮೀರಿ ಜನರ ಇಚ್ಛೆಗೆ ಅನುಗುಣವಾಗಿ ಮಾತುಕತೆಗೆ ಒತ್ತಾಯಿಸಿದರು. ಇದನ್ನೂ ಓದಿ: ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ವಾಯು ದಾಳಿ – ಉಗ್ರರ ಮುಖ್ಯಸ್ಥನೇ ಇಸ್ರೇಲ್ ಗುರಿ

  • ಪಾಕ್‌ ಪಿಎಂ ಶೆಹಬಾಜ್‌ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ

    ಪಾಕ್‌ ಪಿಎಂ ಶೆಹಬಾಜ್‌ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ

    ನವದೆಹಲಿ: ಎಸ್‌ಸಿಒ (SCO) ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಯೋತ್ಪಾದನೆ (Terrorism) ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಉಪಸ್ಥಿತಿಯಲ್ಲೇ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಟಾಂಗ್‌ ಕೊಟ್ಟಿದ್ದಾರೆ.

    ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಟೀಕಿಸಲು ಬಣ ಹಿಂಜರಿಯಬಾರದು ಎಂದು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವರ್ಚುವಲ್ ಶೃಂಗಸಭೆಯಲ್ಲಿ ಮೋದಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಅವರ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

    ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ. ಇಂತಹ ಗುಂಪುಗಳ ಬೆದರಿಕೆಯನ್ನು ಎದುರಿಸಲು ಪರಸ್ಪರ ಸಹಕಾರವನ್ನು ವಿಸ್ತರಿಸಬೇಕು ಎಂದು ಜಾಗತಿಕ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ಹೋರಾಡೋಣ. ಅದು ಯಾವುದೇ ಸ್ವರೂಪದಲ್ಲೇ ಇರಲಿ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಂದ್ವ ನಿಲುವು ಇರಬಾರದು ಎಂದು ಹೇಳಿದ್ದಾರೆ.

    ಭಾರತದ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಭಾಗವಹಿಸಿದ್ದರು. ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ಮೋದಿ ಅವರು ವಿವಿಧ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆಂಕಿ – 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರ 2ನೇ ದಾಳಿ

    ವಿವಾದಗಳು, ಉದ್ವಿಗ್ನತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿರುವ ವಿಶ್ವದ ಎಲ್ಲಾ ದೇಶಗಳಿಗೆ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ದೊಡ್ಡ ಸವಾಲಾಗಿದೆ. ಅದನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನ ಇರಬೇಕು ಎಂದು ಮೋದಿ ಪ್ರತಿಪಾದಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ಇಸ್ಲಾಮಾಬಾದ್: ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ತಲೆದೂರಿರುವ ಸಂದರ್ಭದಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಅವರ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೇ ರಾಜಕೀಯ ಬಿಕ್ಕಟ್ಟು ಕೂಡ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಪಾಕ್‌ ಪ್ರಧಾನಿ ಕ್ರಿಕೆಟ್‌ ವೀಕ್ಷಿಸಿ ಎಂಜಾಯ್‌ ಮಾಡುತ್ತಿದ್ದಾರೆಂದು ದೇಶದ ಜನತೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ʼಪವರ್‌ ಹಿಟ್ಟಿಂಗ್‌ ಮಾಡಿದ ಮತ್ತೊಬ್ಬ ಅಫ್ರಿದಿʼ ಎಂದು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸಂಬಂಧಿಸಿದಂತೆ ಶಾಹೀನ್ ಅಫ್ರಿದಿಯನ್ನು ಹಾಡಿಹೊಗಳಿ ಪಾಕ್‌ ಪ್ರಧಾನಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಮತ್ತೊಂದು ಟ್ವೀಟ್‌ನಲ್ಲಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸ್ಥಳೀಯ ಸರ್ಕಾರ ಮತ್ತು ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಪಾಕ್‌ ಪ್ರಧಾನಿ ಟ್ವೀಟ್‌ಗೆ ದೇಶದ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಕಡೆ ಗಮನಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಪ್ರಧಾನಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಮಿಸ್ಟರ್ ಪ್ರಧಾನ ಮಂತ್ರಿಗಳು ಕ್ರಿಕೆಟ್ ನೋಡುವುದರಲ್ಲಿ ನಿರತರಾಗಿದ್ದಾರೆ. ಏಕೆಂದರೆ ಪಾಕಿಸ್ತಾನವು ಅತ್ಯಧಿಕ ಹಣದುಬ್ಬರ ದರವನ್ನು ದಾಖಲಿಸಿದೆ. ಇದುವರೆಗೆ IMFನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ. ತಾಯ್ನಾಡಿಗಾಗಿ ಕಳೆದ 11 ತಿಂಗಳಲ್ಲಿ ನಿಮ್ಮ ಉತ್ತಮ ಸೇವೆಗಳಿಗೆ ತುಂಬಾ ಧನ್ಯವಾದಗಳು ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

  • ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು

    ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು

    ವಾಷಿಂಗ್ಟನ್: ಭವಿಷ್ಯದ ಭಯೋತ್ಪಾದನಾ ಬೆದರಿಕೆಗಳನ್ನು ನಿಯಂತ್ರಿಸಲು ಎಫ್-16 ಫೈಟರ್ ಜೆಟ್ (F-16 fighter Jet) ಪಡೆಯ ಸುಸ್ಥಿರ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನಕ್ಕೆ (Pakistan) 3,500 ಕೋಟಿ (450 ಮಿಲಿಯನ್ ಡಾಲರ್) ಮೊತ್ತದ ಸೇನಾ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.

    2018ರಲ್ಲಿ ತಾಲಿಬಾನ್ (Taliban) ಮತ್ತು ಹಕ್ಕಾನಿ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ವಿಫಲವಾದ ಪಾಕಿಸ್ತಾನಕ್ಕೆ ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 15,000 ಕೋಟಿ ನೆರವನ್ನು ತಡೆಹಿಡಿದಿದ್ದರು. ಅದಾದ ಬಳಿಕ ಪಾಕ್‌ಗೆ ಅಮೆರಿಕ ನೀಡುತ್ತಿರುವ ಮೊದಲ ನೆರವು ಇದಾಗಿದೆ. ಇದು ಪಾಕಿಸ್ತಾನ ಅಮೆರಿಕ (US) ದ್ವಿಪಕ್ಷಿಯ ಸಂಬಂಧದ ಭಾಗವಾಗಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಎಫ್-16 ಸಹಾಯಕವಾಗಲಿದೆ. ಈ ನೆರವಿನ ಅಡಿಯಲ್ಲಿ ಯಾವುದೇ ಸಾಮರ್ಥ್ಯದ ಶಸ್ತ್ರಾಸ್ತ್ರ ಯುದ್ಧ ಸಾಮಗ್ರಿಗಳನ್ನು ಒಳಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    2019ರಲ್ಲಿ ಬಾಲಾಕೋಟ್ ದಾಳಿಯ ನಂತರ ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನ ಇದೇ ವಿಮಾನವನ್ನು ಬಳಲು ಮುಂದಾಗಿತ್ತು. ಜೊತೆಗೆ ಅಂದಿನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಅನ್ನು ಹೊಡೆದುರುಳಿಸಲು ಪಾಕಿಸ್ತಾನ AIM-120 C-5 AMRAAM (Advanced Medium-Range Air-to-Air Missile) ಬಳಸಿತ್ತು. ಅಮೆರಿಕ ಪಾಕಿಸ್ತಾನಕ್ಕೆ ಈ ಕ್ಷಿಪಣಿಯನ್ನು ಉಗ್ರರ ವಿರುದ್ಧ ಬಳಸಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಈ ಷರತ್ತು ಉಲ್ಲಂಘಿಸಿ ಭಾರತದ ವಿರುದ್ಧ ಪ್ರಯೋಗಿಸಿತ್ತು.

    ಸದ್ಯ ಪಾಕಿಸ್ತಾನ ವಾಯುಪಡೆಯು ಎಫ್-16 ಫೈಟರ್ ಜೆಟ್ ಹಾಗೂ ಸೇನಾ ಬೆಂಬಲ ಕೋರಿದ ನಂತರ ಯುಎಸ್ ಕಾಂಗ್ರೆಸ್ ಸಂಭವನೀಯ ಮಾರಾಟದ ಕುರಿತು ಬುಧವಾರ ಮಾತುಕತೆ ನಡೆಸಿದೆ. ಇದರಿಂದಾಗಿ ವಿಮಾನ, ಇಂಜಿನ್, ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ನ ಮಾರ್ಪಾಡುಗಳ ಬೆಂಬಲವನ್ನೂ ಪಾಕಿಸ್ತಾನ ಒಳಗೊಂಡಿರಲಿದೆ. ಜೊತೆಗೆ ಜೆಟ್‌ಗಳು ಹಾಗೂ ಅದರ ಇಂಜಿನ್ ಬಿಡಿ ಭಾಗಗಳ ದುರಸ್ತಿ ಮತ್ತು ವಾಪಾಸಾತಿ, ವರ್ಗೀಕರಿಸದ ತಂತ್ರಾಂಶಗಳ ಬೆಂಬಲವನ್ನೂ ಪಾಕ್ ಒಳಗೊಂಡಿರಲಿದೆ.

    Shehbaz Sharif

    ಪಾಕ್ ಎಫ್-16 ಹಿನ್ನೆಲೆ:
    ಪಾಕಿಸ್ತಾನವು 1980 ರಿಂದ ಎಫ್-16 ಜೆಟ್‌ಗಳನ್ನು ಮಾರಾಟ ಮಾಡುವ ಹಾಗೂ ನವೀಕರಿಸಿದ ನೀತಿಯ ಅಡಿಯಲ್ಲಿ ಯುಎಸ್ ಮಿಲಿಟರಿಯ ಸಹಾಯದ ಭಾಗವಾಗಿದೆ. 1981ರಲ್ಲಿ ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಆಕ್ರಮಣದ ನಂತರ ಎಫ್ -16 ಜೆಟ್‌ಗಳನ್ನು ಯುಎಸ್ ಪಾಕಿಸ್ತಾನಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿತು. ಇದನ್ನೂ ಓದಿ: ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    ವರದಿಗಳ ಪ್ರಕಾರ 1986 – 1990ರ ನಡುವೆ ಪಾಕಿಸ್ತಾನದ ಎಫ್-16 ಜೆಟ್‌ಗಳು ಕನಿಷ್ಠ 10 ಅಫ್ಘಾನ್ ಮತ್ತು ಸೋವಿಯತ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು ಹಾಗೂ ವಿಮಾನಗಳನ್ನ ಹೊಡೆದುರುಳಿಸಿವೆ. 1990ರ ದಶಕದಲ್ಲಿ ನಡೆದ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಬೆಳವಣಿಗೆಯಿಂದಾಗಿ ಅಮೆರಿಕ ಅಸಮಾಧಾನಗೊಂಡಿತು. ಬಳಿಕ ಅಮೆರಿಕ ಎಫ್-16 ಜೆಟ್‌ಗಳ ವಿತರಣೆಯನ್ನು ತಡೆಹಿಡಿದಿತ್ತು.

    Live Tv
    [brid partner=56869869 player=32851 video=960834 autoplay=true]

  • 1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ

    1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ

    ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ದಿನೇ ದಿನೇ ಪರಿಸ್ಥಿತಿ ಕ್ಷೀಣಿಸುತ್ತಿದೆ. ಇದರಿಂದ ಜನಸಾಮಾನ್ಯರೂ ಪರದಾಡುವಂತಾಗಿದೆ. ಇದೀಗ ನೆರೆಯ ಪಾಕಿಸ್ತಾನದಲ್ಲೂ ಅದೇ ಪರಿಸ್ಥಿತಿ ಎದುರಾಗುತ್ತಿದೆ.

    ಆದಾಯದ ಬಹುಪಾಲನ್ನು ಸೇನೆಗೆ ಖರ್ಚು ಮಾಡುವ ಪಾಕಿಸ್ತಾನದಲ್ಲಿ ಇದೀಗ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಖಾದ್ಯ ತೈಲ, ತುಪ್ಪ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    Shehbaz Sharif

    ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಖಾದ್ಯ ತೈಲ ಬೆಲೆ ಗಗನಕ್ಕೇರಿದೆ. ಖಾದ್ಯ ತೈಲ ಒಂದೇ ಸಮನೇ 208 ರೂಪಾಯಿ ಹಾಗೂ ತುಪ್ಪದ ಬೆಲೆ ಪ್ರತಿ ಕೆಜಿಗೆ 213 ರೂಪಾಯಿ ಹೆಚ್ಚಾಗಿದೆ. ಇದರಿಂದ ಖಾದ್ಯ ತೈಲ 1 ಕೆಜಿಗೆ 555 ರೂಪಾಯಿ ಆಗಿದ್ದರೆ, 1 ಕೆಜಿ ತುಪ್ಪದ ಬೆಲೆ 605 ರೂಪಾಯಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ 500 ರಿಂದ 540 ರೂಪಾಯಿ ಇದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯ ಸರಿದೂಗಿಸಲು ಆಮದು ಮೇಲೆ ನಿರ್ಬಂಧ ಹೇರಿದೆ. ಆದರೂ ಪರಿಸ್ಥಿತಿ ಹದಗೆಡುತ್ತಿದೆ.

    ಇಂಡೋನೇಷಿಯಾದ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿದ ಬಳಿಕ ಪಾಕಿಸ್ತಾನದಲ್ಲಿ ಖಾದ್ಯ ತೈಲ ಹಾಗೂ ತುಪ್ಪದ ಬೆಲೆ ಶೇ.300 ರಷ್ಟು ಏರಿಕೆಯಾಗಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ

    ಪಾಕ್ ರೂಪಾಯಿ ಬೆಲೆ ಪಾತಾಳಕ್ಕೆ: ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಪಾಕ್‌ನಲ್ಲಿ ರೂಪಾಯಿಯ ಮೌಲ್ಯ ದಾಖಲೆ ಪ್ರಮಾಣದ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆ ಪಾಕಿಸ್ತಾನ ಪ್ಯಾಕೇಜ್ ಮಾತುಕತೆ ನಡೆಸುತ್ತಿದೆ. ಇದರ ನಡುವೆ ರೂಪಾಯಿ ಶೇ.7 ರಷ್ಟು ಕುಸಿತವಾಗಿದೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಆರ್ಥಿಕ ಬಿಕ್ಕಟ್ಟು, ವಿದೇಶಿ ಸಾಲ, ವಿದೇಶಿ ವಿನಿಮಯ ಕೊರತೆ, ರೂಪಾಯಿ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಪಾಕಿಸ್ತಾನ ಎದುರಿಸುತ್ತಿದೆ. ಇದರ ನಡುವೆ ಮುಂದಿನ ಹಣಕಾಸು ವರ್ಷದಲ್ಲಿ ಅಮೆರಿದಿಂದ ಪಡೆದಿರುವ 21 ಶತಕೋಟಿ ವಿದೇಶಿ ಸಾಲ ಮರುಪಾವತಿಸಬೇಕಿದೆ. ವಿದೇಶಿ ವಿನಿಮಯ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ತಲೆ ಮೇಲೆ ಕೈಹೊತ್ತು ಕೂತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆ ಸಾಲಕ್ಕೆ ಮಾತುಕತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.