Tag: ಶೆಹಜಾದ್ ಪೂನಾವಾಲಾ

  • ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷ: ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ ವಾಗ್ದಾಳಿ

    ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷ: ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ ವಾಗ್ದಾಳಿ

    ನವದೆಹಲಿ: ಕಾಂಗ್ರೆಸ್ (Congress) ಮೊದಲು ಭ್ರಷ್ಟಾಚಾರ ಮಾಡುತ್ತದೆ, ಬಳಿಕ ಅದನ್ನು ಮುಚ್ಚಿ ಹಾಕಲು ನಿಯಮಗಳ ತಿದ್ದುಪಡಿ ಮಾಡುತ್ತದೆ, ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷವಾಗಿದೆ. ಅದನ್ನು ತನ್ನ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ (Shehzad Poonawalla) ವಾಗ್ದಾಳಿ ನಡೆಸಿದ್ದಾರೆ.

    ಸಿಬಿಐ (CBI) ತನಿಖೆಗೆ ನೀಡಿದ ರಾಜ್ಯ ಸರ್ಕಾರದ ಸಮ್ಮತಿಯನ್ನು ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನೆಲದೊಂದಿಗೆ ಸಂಬಂಧ ಹೊಂದಿರುವ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಅಧಿಕಾರಕ್ಕೆ ಬಂದ ಕೂಡಲೇ ಭೂ ಕಬಳಿಕೆ ಮಾಡಲು ಆರಂಭಿಸುತ್ತದೆ. ಎಸ್ಸಿ-ಎಸ್ಟಿಗಳ ಭೂಮಿಯನ್ನು ಕಬಳಿಕೆ ಮಾಡುತ್ತದೆ. ಅದಕ್ಕಾಗಿ ಜಮೀನಿನ ಜೊತೆಗೆ ಸಂಬಂಧದ ಹೊಂದಿದ ಪಕ್ಷ ಎಂದು ಹೇಳಿಕೊಳ್ಳುತ್ತದೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಸಿಬಿಐ ತನಿಖಾ ಸಮ್ಮತಿ ವಾಪಸ್ ಪಡೆದಿರುವುದು ಯೋಗ್ಯ ನಿರ್ಣಯ – ಶಾಸಕ ಬಿ.ಆರ್ ಪಾಟೀಲ್

    ಭೂ ಕಬಳಿಕ ಮಾಡಿ ಕಾಂಗ್ರೆಸ್ ಈಗ ಕಾನೂನಿಂದ ಪಾರಾಗಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಸಿಬಿಐ ತನಿಖೆಗೆ ನೀಡಿದ ರಾಜ್ಯ ಸರ್ಕಾರದ ಸಮ್ಮತಿಯನ್ನು ವಾಪಸ್ ಪಡೆದಿದೆ. ಕರ್ನಾಟಕ ಸೇರಿ ಇಡೀ ದೇಶದಲ್ಲಿ ಇದೇ ಮಾದರಿ ಅಳವಡಿಸಿಕೊಂಡಿದೆ. ಭ್ರಷ್ಟಾಚಾರ ಮಾಡಿ ಬಳಿಕ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತದೆ.

    ರಾಜ್ಯಪಾಲರ ಮೇಲೆ ಅನವಶ್ಯಕ ಆರೋಪ ಮಾಡಲಾಗುತ್ತಿದೆ. ದಲಿತ ರಾಜ್ಯಪಾಲರನ್ನು ಅವಮಾನಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕ ಐವಾನ್ ಡಿಸೋಜಾ ಹೊಡೆಯುವ ಬೆದರಿಕೆ ಹಾಕುತ್ತಾರೆ. ಆದರೆ ಹೈಕೋರ್ಟ್ ರಾಜ್ಯಪಾಲರ ನಡೆ ಸರಿ ಎಂದು ಹೇಳುತ್ತದೆ. ಕಾಂಗ್ರೆಸ್‌ನದ್ದು ಮೊಹಬತ್ ಕಾ ದುಖಾನ್ ಅಲ್ಲ, ಭ್ರಷ್ಟಾಚಾರದ ಅಂಗಡಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು, ಒಪಿಎಸ್ ಜಾರಿ: ನಾಸಿರ್ ಹುಸೇನ್

    ಸಿದ್ದರಾಮಯ್ಯ ಈವರೆಗೂ ಯಾಕೆ ರಾಜೀನಾಮೆ ನೀಡಿಲ್ಲ? ಮುಕ್ತ ತನಿಖೆಗೆ ಯಾಕೆ ಅವಕಾಶ ಮಾಡಿ ಕೊಟ್ಟಿಲ್ಲ. ಸಿಎಂ ಹುದ್ದೆಯಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಸಂವಿಧಾನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ. ಇದಕ್ಕೆ ಯಾಕೆ ಉತ್ತರಿಸಿಲ್ಲ? ಖರ್ಗೆ ಅವರು ಜಮೀನು ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. ಸಿಬಿಐ, ಇಡಿ ಮೇಲೆ ಆರೋಪ ಮಾಡುವುದು ಬಿಟ್ಟು ಬಿಡಿ. ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

  • ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರ ಮೇಲೆ ಟಿಎಂಸಿ ಗೂಂಡಾಗಳಿಂದ ದಾಳಿ: ಶೆಹಜಾದ್

    ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರ ಮೇಲೆ ಟಿಎಂಸಿ ಗೂಂಡಾಗಳಿಂದ ದಾಳಿ: ಶೆಹಜಾದ್

    – ಮಮತಾ ಬ್ಯಾನರ್ಜಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು
    – ಸಾಕ್ಷ್ಯ ನಾಶಕ್ಕೆ ಕಟ್ಟಡ ನವೀಕರಣ

    ಬೆಂಗಳೂರು: ಕೋಲ್ಕತ್ತಾದಲ್ಲಿ (Kolkata) ಆರೋಪಿಗಳು, ಬಲತ್ಕಾರಿಗಳ ರಕ್ಷಣಾ ಮಾಡಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ ಮಹಿಳೆಯರು ಭಯಭೀತರಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರ ಮೇಲೆ ಟಿಎಂಸಿ ಗೂಂಡಾಗಳು ದಾಳಿ ಮಾಡಿದ್ದಾರೆ. ಮಹಿಳಾ ವೈದ್ಯರಿಗೆ ಬೆದರಿಸಲಾಗಿದೆ. ನಿಮಗೂ ಇದೇ ರೀತಿ ಅತ್ಯಾಚಾರ ಆಗುತ್ತದೆ ಎಂದು ಹೆದರಿಸಿದ್ದಾರೆ ಎಂದು ಬಿಜೆಪಿ(BJP) ರಾಷ್ಟ್ರೀಯ ವಕ್ತಾರಾ ಶೆಹಜಾದ್ ಪೂನಾವಾಲಾ (Shehzad Poonawalla) ಗಂಭೀರ ಆರೋಪ ಮಾಡಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ (West Bengal)  ವೈದ್ಯಕೀಯ ವಿದ್ಯಾರ್ಥಿನಿ ರೇಪ್ ಅಂಡ್ ಮರ್ಡರ್ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರಕ್ಕೆ ಕೋರ್ಟ್ ಛಾಟಿ ಬೀಸಿದೆ. ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆ ಒಳಗೆ 5-6 ಸಾವಿರ ಜನರ ಗುಂಪು ಸೇರಿತ್ತು. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇದನ್ನು ನಿರ್ಭಯ ಪ್ರಕರಣಕ್ಕೆ ಹೋಲಿಸುತ್ತಿದ್ದಾರೆ. ನಿಜಕ್ಕೂ ಕೋಲ್ಕತ್ತಾದಲ್ಲಿ ನಡೆದ ಅತ್ಯಾಚಾರ ಘಟನೆ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ 70% ಎಫ್‌ಎಸ್‌ಎಲ್ ವರದಿ ಕೈ ಸೇರಿದೆ: ಕಮಿಷನರ್

    ರಾಜ್ಯ ಸರ್ಕಾರದ ಪ್ರಾಯೋಜಿತ ದಾಂಧಲೆ ಅಲ್ಲಿ ನಡೆದಿದೆ. ಸಾಕ್ಷ್ಯ ನಾಶ ಮಾಡುವ ಕೆಲಸ ಮಾಡಿದ್ದಾರೆ. ಸಂದೀಪ್ ಘೋಷ್ ಅವರನ್ನ ಮಮತಾ ಬ್ಯಾನರ್ಜಿ ರಕ್ಷಣೆ ಮಾಡುತ್ತಿದ್ದಾರೆ. ಘಟನೆ ಬಳಿಕ ಬೇರೆಡೆ ವರ್ಗಾಯಿಸಿ ರಕ್ಷಣೆ ಮಾಡಿದ್ದಾರೆ. ಟಿಎಂಸಿ ಎಂದರೆ ತಾನಾಶಾಹಿ. ಬಂಗಾಳದ ಪೊಲಿಸರು ಸಂದೀಪ್ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ರಾಹುಲ್ ಗಾಂಧಿ (Rahul Gandhi) ಸಂವಿಧಾನದ ಪುಸ್ತಕ ಹಿಡಿದು ತಿರುಗುತ್ತಾರೆ. ಬಂಗಾಳದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಘಟನೆ ಬಗ್ಗೆ ಅಲ್ಲಿ ಯಾರೇ ಟ್ವೀಟ್ ಮಾಡಿದರೂ ಪೊಲೀಸರು ನೋಟಿಸ್ ಕೊಡುತ್ತಾರೆ ಎಂದು ದೂರಿದರು. ಇದನ್ನೂ ಓದಿ : ಜನಪ್ರತಿನಿಧಿಯಾಗಿ ಜನರ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದೇನೆ, ತಪ್ಪೇನು ಅಲ್ಲ: ಕೃಷ್ಣಬೈರೇಗೌಡ ಸಮರ್ಥನೆ

    ಘಟನೆ ನಡೆದ ಬಳಿಕ ತಕ್ಷಣ ಕಟ್ಟಡ ನವೀಕರಣಕ್ಕೆ ಮುಂದಾಗಿದ್ದಾರೆ. ಸಾಕ್ಷ್ಯ ನಾಶಕ್ಕೆ ಈ ಕೆಲಸ ಮಾಡಿದ್ದಾರೆ. ಹೈಕೋರ್ಟ್ಗೆ ಪಶ್ಚಿಮ ಬಂಗಾಳದ ಸರ್ಕಾರ ಮತ್ತು ಪೊಲೀಸರ ಮೇಲೆ ಒಂದಿಷ್ಟು ನಂಬಿಕೆ ಇಲ್ಲ. ಮಮತಾ ಬ್ಯಾನರ್ಜಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಜವಾಬ್ದಾರಿ ನಿರ್ವಹಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಹಿಂದೂಗಳ ನಂಬಿಕೆಗೆ ಧಕ್ಕೆ ತರುವುದು ಈ ಒಕ್ಕೂಟದ ಉದ್ದೇಶ ಎಂದು ಕಿಡಿಕಾರಿದರು. ಇದನ್ನೂ ಓದಿ: ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ; ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣ

    ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಕೇವಲ ಒಂದು ಟ್ವೀಟ್ ಮಾಡಿ ಘಟನೆ ಬಗ್ಗೆ ಮೌನವಾಗಿದ್ದಾರೆ. ಮಮತಾ ರಾಜೀನಾಮೆ ಕೇಳುವ ಕೆಲಸ ರಾಹುಲ್ ಮಾಡಿಲ್ಲವೇಕೆ? ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಸೆಕ್ಯುಲರ್ ಮೌನವಿದೆ, ಯಾರು ಬಾಯಿಬಿಡುತ್ತಿಲ್ಲ. ಬಲತ್ಕಾರಿ ಬಚಾವೋ ನಡೆಯುತ್ತಿದೆ. ಟಿಎಂಸಿ, ಸಮಾಜವಾದಿ, ಕಾಂಗ್ರೆಸ್ ಇವರೆಲ್ಲರದ್ದು ಒಂದೇ ಮನಸ್ಥಿತಿ ಎಂದರು. ಇದನ್ನೂ ಓದಿ : ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ

    ಕಾಂಗ್ರೆಸ್ ಅಂದ್ರೆ ಕಟಾಕಟ್ ಲೂಟ್ ಝೂಟ್ ಫೂಟ್ ಮಾಡೆಲ್.1947 ರಿಂದ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಕಟಾಕಟ್ ಲೂಟ್ ಸ್ಕೀಮ್. ಮುಡಾದಲ್ಲಿ ೫ ಸಾವಿರ ಕೋಟಿ ರೂ. ಹಗರಣ ಮಾಡಿದರು. ಪ್ರತಿಭಟನೆಯ ಬಳಿಕ ವಾಪಸ್ ಮಾಡುತ್ತೇನೆ ಎಂದು ಹೇಳುತ್ತಾರೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಆದಿವಾಸಿಗಳ ಹಣ ಲೂಟಿ ಮಾಡಿದ್ದಾರೆ. ಹಗರಣ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. 120 ಕೋಟಿ ರೂ. ಅಕ್ಕಿ ವರ್ಗಾವಣೆ ಹಗರಣ ನಡೆದಿದೆ ಎಂದು ಹೇಳಿದರು. ಇದನ್ನೂ ಓದಿ : Assembly elections 2024: ಜಮ್ಮು-ಕಾಶ್ಮೀರದಲ್ಲಿ 3 ಹಂತ, ಹರಿಯಾಣದಲ್ಲಿ ಅ.1ಕ್ಕೆ ಮತದಾನ

    ರಾಹುಲ್ ಗಾಂಧಿ ದಲಿತ್ ದಲಿತ್ ಎನ್ನುತ್ತಾರೆ. ಕರ್ನಾಟಕದಲ್ಲಿ ದಲ್ ಹಿತ್ ಆಗಿದೆ. ಎಲ್ಲ ಮೌನವಾಗಿದ್ದಾರೆ. ಮೊಟ್ಟೆ ಹಗರಣ ನಡೆಯುತ್ತಿದೆ. ಪ್ಲೇಟ್‌ಗೆ ಹಾಕಿದ ಮೊಟ್ಟೆ ವಾಪಸ್ ಎತ್ತುತ್ತಿದ್ದಾರೆ. ಲೂಟ್ ಮತ್ತು ಝೂಟ್ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಎಲ್ಲ ದರ ಏರಿಕೆ ಮಾಡಲಾಗುತ್ತಿದೆ. ಎಸ್ಸಿ ಸಮುದಾಯದ 14 ಸಾವಿರ ಕೋಟಿ ರೂ. ಗ್ಯಾರಂಟಿಗೆ ಬಳಸಿದರು. ಈ ಬಗ್ಗೆ ರಾಹುಲ್ ಗಾಂಧಿ ಒಂದೇ ಒಂದು ಶಬ್ದ ಮಾತನಾಡಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ : ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಧರಿಸಬೇಕು!