Tag: ಶೆರ್ಲಿನಾ ಚೋಪ್ರಾ

  • ರಣವೀರ್ ನಗ್ನಶೂಟ್ ಓಕೆ, ನಾನಾದರೆ ಕ್ಯಾರೆಕ್ಟರ್ ಲೆಸ್: ಶೆರ್ಲಿನ್ ಚೋಪ್ರಾ ನೋವು

    ರಣವೀರ್ ನಗ್ನಶೂಟ್ ಓಕೆ, ನಾನಾದರೆ ಕ್ಯಾರೆಕ್ಟರ್ ಲೆಸ್: ಶೆರ್ಲಿನ್ ಚೋಪ್ರಾ ನೋವು

    ಬಾಲಿವುಡ್ ನಟ ರಣವೀರ್ ಸಿಂಗ್ ನಗ್ನ ಫೋಟೋಶೂಟ್ ಮಾಡಿಸಿಕೊಂಡು ಸಖತ್ ಸುದ್ದಿ ಆಗಿದ್ದರು. ಈ ಕಾರಣಕ್ಕಾಗಿ ಅವರು ಪೊಲೀಸ್ ಸ್ಟೇಶನ್ ಮೆಟ್ಟಿಲು ಕೂಡ ಹತ್ತಬೇಕಾಯಿತು. ನಗ್ನತೆಯ ಅಶ್ಲೀಲತೆಯನ್ನು ಸಮಾಜಕ್ಕೆ ತೋರಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ಕೂಡ ದಾಖಲಾಯಿತು. ಆದರೂ, ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮಾಧಾನ ಆದಂತೆ ತೋರುತ್ತಿಲ್ಲ. ಹಾಗಾಗಿ ರಣವೀರ್ ನಗ್ನ ಫೋಟೋ ಶೂಟ್ ಬಗ್ಗೆ ಅವರು ಕಾಮೆಂಟ್ ಮಾಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಶೆರ್ಲಿನಾ, ಈ ನಗ್ನತೆಯ ಕುರಿತಾಗಿ ಹೆಣ್ಣು ಮತ್ತು ಗಂಡಸನ್ನು ಕಾಣುವ ಬಗೆಯ ಕುರಿತು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಗಂಡಸು ನಗ್ನನಾದರೆ ಸಮಾಜ ಏನೂ ಅನ್ನುವುದಿಲ್ಲ. ಓಕೆ ಅಂದು ಮುಂದೆ ಸಾಗುತ್ತದೆ. ಅದೇ ಹೆಂಗಸು ಈ ರೀತಿ ಮಾಡಿದರೆ, ಅವಳನ್ನು ಕಾಣುವ ರೀತಿಯೇ ಬೇರೆ ಎಂದಿದ್ದಾರೆ. ನಗ್ನದ ವಿಷಯದಲ್ಲಿ ಗಂಡು, ಹೆಣ್ಣು ಸರಿಯಾದ ರೀತಿಯಲ್ಲೇ ಕಾಮೆಂಟ್ ಬರಬೇಕು ಅಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.

    ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ಮಾಡಿಸಿಕೊಂಡಾಗ ಸಾಕಷ್ಟು ಜನರು ಅವರ ಬೆಂಬಲಕ್ಕೆ ನಿಂತರು. ಕೆಲವರಂತೂ ಅದೇ ಹಾದಿಯಲ್ಲೇ ಹೋಗಿ ಅವರೂ ಹಾಗೆಯೇ ಫೋಟೋ ಶೂಟ್ ಮಾಡಿಸಿಕೊಂಡರು. ಆದರೆ, ಈ ಹಿಂದೆ ನನಗೆ ಯಾರೂ ಬೆಂಬಲ ನೀಡಲಿಲ್ಲ. ನಗ್ನ ಫೋಟೋ ಶೂಟ್ ನಲ್ಲಿ ಭಾಗಿಯಾದಾಗ ನನ್ನನ್ನು ಕ್ಯಾರೆಕ್ಟರ್ ಲೆಸ್ ಎಂದು ಜರಿದರು. ಯಾರಿಗೆಲ್ಲ ಹೋಲಿಸಿದರು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ರೂಪೇಶ್ ಶೆಟ್ಟಿ ಹೇಳೋದೇನು?

    ಶೆರ್ಲಿನಾ ಚೋಪ್ರಾರನ್ನು ಯಾರು ಕ್ಯಾರೆಕ್ಟರ್ ಲೆಸ್ ಎಂದು ಜರಿದಿದ್ದರೋ, ಅವರು ಕೂಡ ನನ್ನಂತೆಯೇ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಆವಾಗ ಅವರು ಅದನ್ನು ಕರೆದುಕೊಂಡಿದ್ದು ಗ್ಲಾಮರ್ ಅಂತ. ಈ ಉದ್ಯಮದಲ್ಲಿ ತಮಗೆ ಬೇಕಾದಾಗ ಒಂದು ರೀತಿ, ಬೇಡವಾದಾಗ ಮತ್ತೊಂದು ರೀತಿ ಕಾಣುವ ಜನರಿದ್ದಾರೆ ಎಂದು ತಮ್ಮ ಅಳಲನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಶೆರ್ಲಿನಾ.

    Live Tv
    [brid partner=56869869 player=32851 video=960834 autoplay=true]

  • ಅಶ್ಲೀಲ ವೀಡಿಯೋ ಪ್ರಕರಣ: ಶಿಲ್ಪಾ ಶೆಟ್ಟಿ ಪತಿಗೆ ನಿರೀಕ್ಷಣಾ ಜಾಮೀನು ಮಂಜೂರು

    ಅಶ್ಲೀಲ ವೀಡಿಯೋ ಪ್ರಕರಣ: ಶಿಲ್ಪಾ ಶೆಟ್ಟಿ ಪತಿಗೆ ನಿರೀಕ್ಷಣಾ ಜಾಮೀನು ಮಂಜೂರು

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮೇಲೆ ಅಶ್ಲೀಲ ವೀಡಿಯೋ ಹಂಚಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಾಗಿತ್ತು. ತಮಗೆ ನಿರೀಕ್ಷಣಾ ಜಾಮೀನು ಸಿಗುವತನಕ ಮುಖಮುಚ್ಚಿಕೊಂಡೇ ಓಡಾಡುವುದಾಗಿ ಶಪಥ ಮಾಡಿದ್ದರು. ಕೊನೆಗೂ ಇಂದು ಸುಪ್ರೀಂ ಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೇವಲ ರಾಜ್ ಕುಂದ್ರಾಗೆ ಮಾತ್ರವಲ್ಲ, ನಟಿಯರಾದ ಶೆರ್ಲಿನಾ ಚೋಪ್ರಾ ಮತ್ತು ಪೂನಂ ಪಾಂಡೆಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ನಿರೀಕ್ಷಾ ಜಾಮೀನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಕೆ.ಎಂ. ಜೋಸೆಫ್ ಅವರಿದ್ದ ಪೀಠ ಆರೋಪಿಗಳು ತನಿಖೆಗೆ ಸಹಕರಿಸುವಂತೆ ಸೂಚಿಸಿದೆ. ಕುಂದ್ರಾ ಪರ ವಕೀಲರು ‘ಈಗಾಗಲೇ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳು ತನಿಖೆಗೂ ಸಹಕರಿಸುತ್ತಿದ್ದಾರೆ. ಹಾಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕುಂದ್ರಾ ಪರ ವಕೀಲರು ಮನವಿ ಮಾಡಿದ್ದರು. ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಅಶ್ಲೀಲ ವಿಡಿಯೋ ಹಂಚಿಕೆ ಕುರಿತಂತೆ ಭಾರತೀಯ ದಂಡ ಸಂಹಿತೆ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನದ ಕಾಯ್ದೆಯ ಅಡಿಯಲ್ಲಿ ಕುಂದ್ರಾ ಮತ್ತು ಇತರ ನಟಿಯರ ಮೇಲೆ ಎಫ್‍.ಐ.ಆರ್ ದಾಖಲಾಗಿತ್ತು. ಈ ಹಿಂದೆಯೇ ಕುಂದ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈಗ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೂಲಕ ಬಿಗ್ ರಿಲೀಫ್ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ಲ್ಲದ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತಾರೆ ನಟಿಯರಾದ ರಾಖಿ ಸಾವಂತ್ (Rakhi Sawant) ಮತ್ತು ಶೆರ್ಲಿನ್ ಚೋಪ್ರಾ (Sherlina Chopra). ಮದುವೆ, ಬಾಯ್ ಫ‍್ರೆಂಡ್, ಬ್ರೇಕಪ್ ಎನ್ನುತ್ತಾ ದಿನಕ್ಕೊಂದು ಸದ್ದು ಮಾಡುವ ಚಾಳಿ ರಾಖಿಗಿದ್ದರೆ, ಮೀಟೂ ಕಾರಣದಿಂದಾಗಿ ಶೆರ್ಲಿನ್ ಚೋಪ್ರಾ ಇತ್ತೀಚೆಗಂತೂ ಸಾಕಷ್ಟು ಸುದ್ದಿ ಆಗುತ್ತಿದ್ದಾಳೆ. ಈ ಇಬ್ಬರ ನಡುವೆ ಯಾವತ್ತೂ ಕೋಲ್ಡ್ ವಾರ್ ಇದ್ದೇ ಇದೆ. ಇದು ಮತ್ತೊಮ್ಮೆ ಸಾಬೀತಾಗಿದೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಶೆರ್ಲಿನ್ ಚೋಪ್ರಾ, ಖಡಕ್ಕಾಗಿಯೇ ರಾಖಿಗೆ ಸಂದೇಶವೊಂದನ್ನು ನೀಡಿದ್ದಾರೆ. ರಾಖಿ ನಾನ್ ಸೆನ್ಸ್ ಎಂದು ಮೂದಲಿಸಿದ್ದಾರೆ. ರಾಖಿ ಮೂರ್ನಾಲ್ಕು ತಿಂಗಳಿಗೊಮ್ಮೆ ಬಾಯ್ ಫ್ರೆಂಡ್ ಬದಲಾಯಿಸುತ್ತಾಳೆ. ಗಂಡನನ್ನೂ ಬದಲಾಯಿಸುತ್ತಾಳೆ. ಆಕೆ ಡುಮ್ಮಿ (Dummy). ಜಿಮ್ ಮುಂದೆ ಓಡಾಡುತ್ತಾಳೆಯೇ ಹೊರತು, ಜಿಮ್ ನಲ್ಲಿ ಕಷ್ಟ ಪಡಲ್ಲ ಎಂದು ಕಾಮೆಂಟ್ ಮಾಡಿದ್ದಾಳೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

    ರಾಖಿ ಮೇಲೆ ಶೆರ್ಲಿನ್ ಕೋಪ ಮಾಡಿಕೊಳ್ಳಲು ಕಾರಣ ಸಾಜಿದ್ (Sajid) ಮೇಲೆ ರಾಖಿ ತೋರಿಸಿದ ಅನುಕಂಪ. ಹಿಂದಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಸದ್ಯ ನಿರ್ದೇಶಕ ಸಾಜಿದ್ ಇದ್ದಾನೆ. ಅವನ ಮೇಲೆ ಶೆರ್ಲಿನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಸಾಜಿದ್ ನನ್ನು ಮನೆಯಿಂದ ಆಚೆ ಹಾಕಿ ಎಂದು ಗುಡುಗಿದ್ದಳು. ಅವನೊಬ್ಬ ಅವಿವೇಕಿ ಎಂದೂ ಜರಿದಿದ್ದರು. ಈ ಮಾತಿಗೆ ಸಾಜಿದ್ ಮೇಲೆ ರಾಕಿ ಅನುಕಂಪ ತೋರಿದ್ದರು. ಸಾಜಿದ್ ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು.

    ಸಾಜಿದ್ ಪರ ರಾಖಿ ಸಾವಂತ್ ಬ್ಯಾಟಿಂಗ್ ಮಾಡಿದಳು ಎನ್ನುವ ಕಾರಣಕ್ಕಾಗಿ ಶೆರ್ಲಿನ್ ಇದೀಗ ತಿರುಗಿ ಬಿದ್ದಿದ್ದಾಳೆ. ರಾಖಿ ದೇಹ ಬೆಳೆಸಿದ್ದಾಳೆ. ಅದನ್ನು ಕರಗಿಸಬೇಕು ಅಂತ ಜಿಮ್ ಮುಂದೆ ತಿರುಗುತ್ತಾಳೆ. ಜಿಮ್ ಒಳಗೆ ಹೋಗಬೇಕು, ಮೆಂಬರ್ ಶಿಪ್ ತಗೆದುಕೊಳ್ಳಬೇಕು, ಕಷ್ಟ ಪಡಬೇಕು. ಆಕೆಗೆ ಕಷ್ಟ ಪಡೋದು ಏನು ಅಂತಾನೇ ಗೊತ್ತಿಲ್ಲ ಎಂದು ಕಾಲೆಳೆದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]