Tag: ಶೆಫಾಲಿ ರಜ್ದಾನ್ ದುಗ್ಗಾಲ್

  • ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್(Shefali Razdan Duggal) ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

    ಭಾರತದ ಕಾಶ್ಮೀರ ಮೂಲದ ಶೆಫಾಲಿ ತಮ್ಮ ಚಿಕ್ಕ ಪ್ರಾಯದಲ್ಲೇ ಅಮೆರಿಕಗೆ ಹೋಗಿ, ಅಲ್ಲಿ ಸಿನ್ಸಿನಾಟಿ, ಚಿಕಾಗೊ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ಬೆಳೆದರು.

    ಶೆಫಾಲಿ ತಮ್ಮ 50ನೇ ವಸಂತದಲ್ಲಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಇವರು ಅನುಭವಿ ರಾಜಕೀಯ ಕಾರ್ಯಕರ್ತೆ, ಮಹಿಳಾ ಹಕ್ಕುಗಳ ವಕೀಲೆ ಹಾಗೂ ಮಾನವ ಹಕ್ಕುಗಳ ಪ್ರಚಾರಕಿ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಸ್ಯಾನ್ ಫ್ರಾನ್ಸಿಸ್ಕೋ ಸಮಿತಿಯ ಸದಸ್ಯೆಯಾಗಿರುವ ದುಗ್ಗಾಲ್ ವಾಕ್ ಫಾರೆಸ್ಟ್ ವಿಶ್ವವಿದ್ಯಾಲಯದ ಲೀಡರ್‌ಶಿಪ್, ಕ್ಯಾರೆಕ್ಟರ್ ಕೌನ್ಸಿಲ್‌ನ ಸದಸ್ಯರೂ ಆಗಿದ್ದಾರೆ. ರಾಷ್ಟ್ರೀಯ ನಾಮನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಎಮ್‌ಎ ಪೊಲಿಟಿಕಲ್ ಕಮ್ಯೂನಿಕೇಶನ್ (ರಾಜಕೀಯ ಸಂವಹನ) ಪದವೀಧರರಾಗಿರುವ ಶೆಫಾಲಿ, ಮಿಯಾಮಿ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಶನ್ (ಸಮೂಹ ಸಂವಹನ) ವ್ಯಾಸಂಗವನ್ನೂ ಮಾಡಿದ್ದಾರೆ.

    ಶೆಫಾಲಿ 2008ರಲ್ಲಿ ಬರಾಕ್ ಒಬಾಮಾ ಅವರ ಅಧ್ಯಕ್ಷೀಯ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಹಿಲರಿ ಕ್ಲಿಂಟನ್‌ರ ಅಧ್ಯಕ್ಷೀಯ ಪ್ರಚಾರದೊಂದಿಗೂ ಸಂಬಂಧ ಹೊಂದಿದ್ದರು. ಹೀಗೆ ರಾಜಕೀಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದ ಇವರನ್ನು ಉತ್ತರ ಕ್ಯಾಲಿಫೋರ್ನಿಯಾ ಸ್ಟೀರಿಂಗ್ ಸಮಿತಿ ಹಾಗೂ ವುಮೆನ್ ಫಾರ್ ಹಿಲರಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿತ್ತು.