Tag: ಶೃತಿ

  • ಮನಸ್ಸು ನೋಡಿ ಪ್ರೀತಿ ಮಾಡಿದ್ದೇನೆ, ವಿಚ್ಛೇದನ ಕೊಡಲ್ಲ: ರಾಜೇಶ್ ಪತ್ನಿ

    ಮನಸ್ಸು ನೋಡಿ ಪ್ರೀತಿ ಮಾಡಿದ್ದೇನೆ, ವಿಚ್ಛೇದನ ಕೊಡಲ್ಲ: ರಾಜೇಶ್ ಪತ್ನಿ

    ಬೆಂಗಳೂರು: ನಾನು ಅವರ ಫೇಮ್ ನೋಡಿ ಪ್ರೀತಿ ಮಾಡಿ ಮದುವೆಯಾಗಿಲ್ಲ. ಅವರ ಮನಸ್ಸು ನೋಡಿ ಮದುವೆಯಾಗಿದ್ದೇನೆ. ಹೀಗಾಗಿ ನಾನು ಅವರಿಗೆ ವಿಚ್ಛೇದನ ಕೊಡಲ್ಲ ಎಂದು ಕಿರುತೆರೆ ನಟ ರಾಜೇಶ್ ಪತ್ನಿ ಶೃತಿ ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೃತಿ, ಅಂದು ನಾನೇನು ಮಾಡಿಲ್ಲ ಸುಳ್ಳು ಹೇಳುತ್ತಿದ್ದಾಳೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು. ಈಗ ಪೊಲೀಸರು ತನಿಖೆ ಮಾಡಿ ಜಾರ್ಚ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರ ಮಧ್ಯೆ ಗಲಾಟೆಯಾದಗಿನಿಂದ ನಾನು ಒಬ್ಬಳೆ ಇದ್ದೀನಿ. ಇದುವರೆಗೂ ನನಗೆ ಅವರು ಒಂದು ಬಾರಿಯೂ ಫೋನ್ ಮಾಡಿಲ್ಲ. ನನ್ನನ್ನು ಪೊಲೀಸರು ವಿಚಾರಣೆ ಮಾಡಿಲ್ಲ. ನಮ್ಮ ಪೋಷಕರನ್ನು ಪೊಲೀಸರು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ರಾಜೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ-ಬಯಲಾಯ್ತು ನಟನ ಅಸಲಿ ಮುಖ!

    ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿಲ್ಲ. ಆದರೆ ಅವರ ಕಡೆಯಿಂದ ವಿಚ್ಛೇಧನಕ್ಕೆ ಅಪ್ಲೈ ಮಾಡಿದ್ದಾರೆ. ವಿಚ್ಛೇದನ ನೀಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಆದರೆ ನಾನು ವಿಚ್ಛೇದನ ಕೊಡಲ್ಲ. ಅವರ ಜೊತೆಯೇ ನಾನು ಬದುಕಬೇಕು ಎಂದರು.

    ನಾನು ಪ್ರೀತಿ ಮಾಡಿ ಮದುವೆಯಾಗಿದ್ದೇನೆ. ಅವರು ಸೀರಿಯಲ್ ಮತ್ತು ಫೇಮ್‍ನಿಂದ ಈ ರೀತಿ ಮಾಡುತ್ತಿದ್ದಾರೆ. ಆದರೆ ನಾನು ಅವರ ಫೇಮ್ ನೋಡಿ ಮದುವೆಯಾಗಿಲ್ಲ. ಅವರ ಮನಸ್ಸು ನೋಡಿ ಪ್ರೀತಿಸಿ ಮದುವೆಯಾಗಿದ್ದಾನೆ. ಅವರು ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮಿಬ್ಬರ ಮದುವೆಯಾಗಿತ್ತು. ಆದ್ದರಿಂದ ನಾನು ಯಾವುದೇ ಪರಿಹಾರ, ಎಷ್ಟು ಹಣ ಕೊಟ್ಟರು ವಿಚ್ಛೇದನಕ್ಕೆ ಒಪ್ಪಿಕೊಳ್ಳಲ್ಲ ಎಂದು ಶೃತಿ ಅವರು ತಿಳಿಸಿದರು.

    ರಾಜೇಶ್ ಮತ್ತು ಅವರ ಅಮ್ಮ ಪದೇ ಪದೇ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಊಟನೂ ಕೊಡದೆ ಕಿರುಕುಳ ಕೊಡುತ್ತಿದ್ದರು. ನೀನು ನಮಗೆ ಏನು ವರದಕ್ಷಿಣೆ ಕೊಟ್ಟಿಲ್ಲ. ನಮ್ಮ ಮನೆಗೆ ಹೊಂದಿಕೊಳ್ಳುತ್ತಿಲ್ಲ. ನನ್ನ ಮಗನಿಗೆ ಎರಡನೇ ಮದುವೆ ಮಾಡಿಸುತ್ತೇನೆ ಎಂದು ಕಿರುಕುಳ ಕೊಡುತ್ತಿದ್ದರು. ನಾನು ಪ್ರೀತಿಸಿ ಮದುವೆಯಾಗಿದ್ದರಿಂದ ನಮ್ಮ ಪೋಷಕರ ಬಳಿ ಏನು ಹೇಳಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

    ಕೊನೆಗೆ ಇವರ ಕಿರುಕುಳ ಸಹಿಸಿಕೊಳ್ಳಲಾಗದೇ ಮನೆಯಲ್ಲಿ ಹೇಳಿದೆ. ಆಗ ನಮ್ಮ ತಂದೆ ಎರಡು ಬಾರಿ ಮಾತನಾಡಿ ಸರಿ ಮಾಡಲು ಪ್ರಯತ್ನಿಸಿದ್ದರು. ಆದರೂ ರಾಜೇಶ್ ಕೇಳಿಲ್ಲ. ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮ ಕುಟುಂಬಕ್ಕೆ ಧಾರಾವಾಹಿ ಬೇಡ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಿಲ್ಲ. ಈಗ ಸೀರಿಯಲ್, ಫೇಮ್‍ನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಶೃತಿ ತಿಳಿಸಿದರು.

    https://www.youtube.com/watch?v=z83AFF9LPEY

  • ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

    ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

    ಹುಬ್ಬಳ್ಳಿ: ನನ್ನಿಂದಲೇ ಪ್ರೇರಣೆಗೊಂದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ನಟಿ ಶೃತಿ ಕಿಡಿಕಾರಿದ್ದಾರೆ.

    ಕುಂದಗೋಳ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಅತ್ತು ಅತ್ತು ಹೆಸರು ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನನ್ನಿಂದಲೇ ಪ್ರೇರಣೆ ಪಡೆದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ದಾರೆ.

    ನಾನು ಅತ್ತು ಅಭಿಮಾನಿಗಳನ್ನು ಮಾಡಿಕೊಂಡಿದ್ದೇನೆ ಎಂದು ಜನ ಅಂದಿದ್ದಕ್ಕಾಗಿಯೇ ಜೆಡಿಎಸ್ ಕಾಂಗ್ರೆಸ್ ನಲ್ಲಿ ಬಹಳ ಜನ ಇಂದು ಅಳುತ್ತಿದ್ದಾರೆ. ಆದರೆ ನಮಗೆ ಅಳುವ ನಾಯಕರು ಬೇಕಾಗಿಲ್ಲ. ಕಣ್ಣೀರು ಒರೆಸುವ ನಾಯಕರು ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದರು.

    ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ:
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕುಂದಗೋಳ, ಚಿಂಚೊಳಿ ಗೆದ್ದರೆ ನಾವು 106 ಆಗ್ತೀವಿ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇನ್ನೂ ಎರಡ್ಮೂರು ಜನ ಬಂದರೆ ಮುಂದೆ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ ಮತ್ತು ಅವರ ಕಂಪನಿಯನ್ನು ಮನೆಗೆ ಕಳುಹಿಸಬೇಕಿದೆ. 166 ತಾಲೂಕಿನಲ್ಲಿ ಭೀಕರ ಬರಗಾಲ ಇದೆ. ಆದರೂ ಸಚಿವ, ಮುಖ್ಯಮಂತ್ರಿ ಬರಗಾಲ ಪ್ರದೇಶಕ್ಕೆ ಹೋಗಿಲ್ಲ. ಅದಕ್ಕಾಗಿಯೇ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಆರು ಸಾವಿರ ಕೊಡುವ ಯೋಜನೆ ಮೋದಿ ಮಾಡಿದ್ದಾರೆ. ಹೆಣ್ಣುಮಕ್ಕಳು ಹುಟ್ಟಿದರೆ ಕಣ್ಣೀರು ಹಾಕುವ ಕಾಲ ಇತ್ತು. ಅದರೆ ನಾನು ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟ ಬಳಿಕ ಹೆಣ್ಣು ಮಕ್ಕಳ ನೋಡುವ ದೃಷ್ಟಿ ಬದಲಾಯಿತು. ಆದರೆ ಕುಮಾರಸ್ವಾಮಿ ಆ ಯೋಜನೆ ಚಿವುಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಂಪನಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡದೇ ಹೋದರೆ, ಅಧಿವೇಶನ ಆರಂಭವಾದಾಗ ಕುಮಾರಸ್ವಾಮಿ ಮೂಗು ಹಿಡಿದು ಕೇಳುತ್ತೇನೆ. ಸಾಲ ಮನ್ನಾ ಮಾಡು ಇಲ್ಲವೇ ಅಧಿಕಾರ ಬಿಟ್ಟು ತೊಲಗು ಎಂದು ಹೇಳುತ್ತೇನೆ. ರೈತರ ಸಾಲಮನ್ನಾ ಆಗುವವರೆಗೂ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

    ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

    ಹಾವೇರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ. ಇದರಿಂದ ಭಯಗೊಂಡು ಈ ರೀತಿ ಅವರೆಲ್ಲ ಮತನಾಡುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಟೀಕಿಸುವವರ ವಿರುದ್ಧ ನಟಿ, ಬಿಜೆಪಿ ಮುಖಂಡೆ ಶೃತಿ ಕಿಡಿಕಾರಿದ್ದಾರೆ.

    ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಸಂಸದ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸ್ಟಾರ್‍ಗಳು ಮಂಡ್ಯ ಪ್ರಚಾರಕ್ಕೆ ಬಂದ್ರೆ ಸೇರಿದ ಜನಸಾಗರ ನೋಡಿ ಜೆಡಿಎಸ್‍ನವರಿಗೆ ಭಯ ತಂದಿದ್ದಾರೆ. ಜೆಡಿಎಸ್ ಪಕ್ಷದವರು ದುಡ್ಡುಕೊಟ್ಟು ಜನರನ್ನು ನಟರ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ ಎಂದರು.

    ಸುಮಲತಾ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ಮಹಿಳೆಗೆ ಇಷ್ಟೊಂದು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಯಾರು ಕ್ಷಮಿಸೋದಿಲ್ಲ. ಸುಮಲತಾ ಜನರ ಧ್ವನಿಯಾಗುವ ಸಲುವಾಗಿ ತನ್ನ ನೋವಿನಲ್ಲೂ ರಾಜಕಾರಣಕ್ಕೆ ಬಂದಿದ್ದಾರೆ. ಮಹಿಳೆಯನ್ನು ಮುಖ್ಯವಾಹಿನಿಗೆ ತಂದು, ಬೆಳೆಸುವಂತಹ ಕೆಲಸ ಮಾಡಬೇಕು. ಆದರೆ ಸಿಎಂ ಕುಮಾರಸ್ವಾಮಿ ತನ್ನ ಮಗನ ಗೆಲುವಿಗಾಗಿ ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ.

    ಮುಖದಲ್ಲಿ ನೋವು ಕಾಣ್ತಿಲ್ಲ ಅನ್ನೋ ಕುಮಾರಸ್ವಾಮಿಹಾಗೂ ಗಂಡ ಸತ್ತು ನಾಲ್ಕೈದು ದಿನ ಆಗಲಿಲ್ಲ ಅನ್ನೋ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ಇಬ್ಬರಿಗೂ ಶೋಭೆ ತರೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು.

  • ಮೈತ್ರಿ ಸರ್ಕಾರದ ವಿರುದ್ಧ ನಟಿ ಶೃತಿ ವಾಗ್ದಾಳಿ

    ಮೈತ್ರಿ ಸರ್ಕಾರದ ವಿರುದ್ಧ ನಟಿ ಶೃತಿ ವಾಗ್ದಾಳಿ

    ತುಮಕೂರು: ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ವಾಗ್ದಾಳಿ ನಡೆಸಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ನಾನು ಚೌಕಿದಾರ್ ಅಭಿಯಾನಕ್ಕೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುರ್ಚಿಗಾಗಿ ಒದ್ದಾಡುತ್ತಿದ್ದಾರೆ. ಅವರು ಮಗನ ಗೆಲುವಿಗಾಗಿ ಮಂಡ್ಯಕ್ಕೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಅತಂತ್ರ ಸ್ಥಿತಿ ಇದೆ ಅಂದ್ರು.

    ತುಮಕೂರಲ್ಲಿ ಮುದ್ದಹನುಮೇಗೌಡ ನಾಮಪತ್ರ ಹಿಂಪಡೆದಿದ್ದಾರೆ. ಯಾವುದೇ ಕಾರಣಕ್ಕೆ ನಾಮಪತ್ರ ಹಿಂಪಡೆಯಲ್ಲ ಎಂದು ಕಣ್ಣೀರು ಹಾಕಿದ್ದರು. ಇಷ್ಟೆಲ್ಲಾ ಆದ ಮೇಲೂ ಇದೀಗ ಅವರು ನಾಮಪತ್ರ ಯಾಕೆ ವಾಪಸ್ ಪಡೆದ್ರು ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಯಾರದ್ದೋ ದೊಡ್ಡ ಪ್ರಭಾವವಿದೆ ಎಂದು ವಾಗ್ದಾಳಿ ನಡೆಸಿದರು. ಮೈತ್ರಿ ಸರ್ಕಾರ ಬಂದಾಗಿನಿಂದಲೂ ನಾಯಕರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿ ಎಂದು ಶೃತಿ ಮನವಿ ಮಾಡಿಕೊಂಡರು.

    ಮೋದಿಯಿಂದ ಹೆಮ್ಮೆ:
    ಇಲ್ಲಿ ಪ್ರತಿಯೊಬ್ಬರೂ ಕಾವಲುದಾರರು. ಮೋದಿಯವರು ನಿಜವಾದ ಚೌಕಿದಾರ. ದೇಶವನ್ನ ಚೌಕಿದಾರ ಕಾಯುತ್ತಿರುವಾಗ ದೇಶದ ಜನರು ಕೂಡಾ ಚೌಕಿದಾರ್ ಅನ್ನುತ್ತಿದ್ದಾರೆ. ನಾನು ಭಾರತೀಯಳು ಅನ್ನುವ ಹೆಮ್ಮೆ ಹಾಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೂ ಹೆಮ್ಮೆ ಇದೆ. ಆ ಹೆಮ್ಮೆ ಬಂದಿರೋದೇ ಮೋದಿಯವರಿಂದಾಗಿ ಎಂದು ಹೇಳಿದ್ರು.

    ಇಡೀ ವಿಶ್ವದಲ್ಲೇ ಮೋದಿ ಅವರಿಗೆ ಗೌರವ ಸಿಗುತ್ತಿದೆ. ಮಹಿಳಾ ಪರವಾದ ಹಲವು ಕಾರ್ಯಕ್ರಮಗಳನ್ನು ಮೋದಿ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್‍ಗೆ ದೇಶದ ರಕ್ಷಣಾ ಖಾತೆ ಕೊಟ್ಟು ಮಹಿಳೆಯರ ಪ್ರಾಮುಖ್ಯತೆ ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ಬಂದಿರುವ ಅತಂತ್ರ ಸ್ಥಿತಿ ಕೇಂದ್ರದಲ್ಲಿ ಬರಬಾರದು. ಯಾಕಂದ್ರೆ ಇದೀಗ ದೋಸ್ತಿಗಳಲ್ಲಿ ಕುರ್ಚಿಗಾಗಿ ಕಾದಾಟ ನಡೆಯುವುದನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ನವರ ಬಳಿ ಕಪ್ಪು ಹಣ ಇರಬಹುದು. ಅದನ್ನೇ ಈಗ ತಿಂಗಳಿಗೆ ವರ್ಷಕ್ಕೆ 72 ಸಾವಿರ ಪ್ರಣಾಳಿಕೆ ಮಾಡಿದ್ದಾರೆ. ಅದೊಂದು ಸುಳ್ಳಿನ ಕಂತೆಯಾಗಿದೆ ಎಂದು ಟಾಂಗ್ ನೀಡಿದ್ರು.

  • ಪತಿ ಮೇಲೆ ಯಾವುದೇ ಕೋಪವಿಲ್ಲ, ನನ್ನನ್ನು ಕರೆದುಕೊಂಡು ಹೋಗ್ಲಿ : ರಾಜೇಶ್ ಪತ್ನಿ

    ಪತಿ ಮೇಲೆ ಯಾವುದೇ ಕೋಪವಿಲ್ಲ, ನನ್ನನ್ನು ಕರೆದುಕೊಂಡು ಹೋಗ್ಲಿ : ರಾಜೇಶ್ ಪತ್ನಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಅಗ್ನಿಸಾಕ್ಷಿ’ಯ ಅಖಿಲ್ ಪಾತ್ರಧಾರಿಯ ರಾಜೇಶ್ ಧ್ರುವ ವಿರುದ್ಧ ಕಿರುಕುಳ ಆರೋಪ ಪ್ರಕರಣ ದಾಖಲಾಗಿದ್ದು, ಇಂದು ರಾಜೇಶ್ ಅವರ ಪತ್ನಿ ಶೃತಿ ವಿಚಾರಣೆಗೆ ಹಾಜರಾಗಿದ್ದಾರೆ.

    ನನ್ನ ಪತಿ ಮೇಲೆ ಯಾವುದೇ ಕೋಪವಿಲ್ಲ. ಅವರಿಗೆ ಶಿಕ್ಷೆ ನೀಡಬೇಕು ಎಂದು ನಾನು ಅಂದುಕೊಂಡಿಲ್ಲ. ಅವರು ನನ್ನನ್ನು ಕರೆದುಕೊಂಡು ಹೋಗಲಿ ಎಂದು ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಮದ್ಯ ಕುಡಿಯುವಾಗ ಅವರೇ ವಿಡಿಯೋ ಮಾಡಿದ್ದಾರೆ. ಅಲ್ಲದೇ ತಮಾಷೆಗೆ ಮಾಡಿದ್ದು ಎಂದು ಅವರೇ ಒಪ್ಪಿಗೊಂಡಿದ್ದಾರೆ ಎಂದು ಶೃತಿ ಹೇಳಿದ್ದಾರೆ.  ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ನಾನು ಬೇರೆಯವರ ಮುಂದೆ ಕುಡಿಯಲಿಲ್ಲ. ರಾಜೇಶ್ ಅವರು ತಮ್ಮ ತಾಯಿಯನ್ನು ನೋಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಅವರ ತಾಯಿ ಈಗ ಧಾರವಾಡದಲ್ಲಿ ಇದ್ದಾರೆ. ನನ್ನನ್ನು ಅವರು ಈಗ ಕರೆದುಕೊಂಡು ಹೋಗಲಿ. ಸದ್ಯ ವಿಚಾರಣೆಯಲ್ಲಿ ಏನು ಕೇಳುತ್ತಾರೋ ಅದನ್ನು ಹೇಳುತ್ತೇನೆ. ಇಂದು ಕರೆದಿದ್ದರು ಹಾಗಾಗಿ ಬಂದಿದ್ದೇನೆ ಎಂದು ವಿಚಾರಣೆಗೆ ಹಾಜರಾದ ಶೃತಿ ಹೇಳಿದ್ದಾರೆ. ಇದನ್ನೂ ಓದಿ: ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಏನಿದು ಪ್ರಕರಣ?
    ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾಗಿ ಬಳಿಕ ಅವರಿಗೆ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಶೃತಿ ತಮ್ಮ ಪತಿ ರಾಜೇಶ್ ಮೇಲೆ ಆರೋಪ ಮಾಡಿದ್ದಾರೆ. ಮದುವೆ ಆದ ಬಳಿಕ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮದುವೆ ಆದರೂ ನನಗೆ ಮದುವೆಯಾಗಿಲ್ಲ ಎಂದು ಧ್ರುವ ಹೇಳಿಕೊಂಡು ತಿರುಗಾಡುತ್ತಿದ್ದರು. ಇದನ್ನೂ ಓದಿ: ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    ಮದುವೆಯಾದ ಬಳಿಕ ಧ್ರುವ ಬೇರೆ ಯುವತಿಯರ ಜೊತೆ ಅಫೈರ್ ಇಟ್ಟುಕೊಂಡಿದ್ದರು. ಯುವತಿ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಶೃತಿ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಪತ್ನಿ `ಎಣ್ಣೆ’ ಹೊಡೆಯೋ ವಿಡಿಯೋ ಬಿಡುಗಡೆ ಮಾಡಿದ ನಟ ಅಖಿಲ್!

    https://www.youtube.com/watch?v=z83AFF9LPEY

    https://www.youtube.com/watch?v=fczBXKZKrN4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೀಟೂ ಪ್ರಕರಣವನ್ನು ದಿಕ್ಕು ತಪ್ಪಿಸಲು ನನ್ನ ವಿರುದ್ಧ ಆರೋಪ: ಚೇತನ್

    ಮೀಟೂ ಪ್ರಕರಣವನ್ನು ದಿಕ್ಕು ತಪ್ಪಿಸಲು ನನ್ನ ವಿರುದ್ಧ ಆರೋಪ: ಚೇತನ್

    ಬೆಂಗಳೂರು: ನನಗೆ ಕೆಟ್ಟ ಹೆಸರು ತರಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.

    ಅರ್ಜುನ್ ಸರ್ಜಾ ವಿರುದ್ಧ ಸೇಡು ತೀರಿಸಿಕೊಳ್ಳಲು ಶೃತಿ ಹರಿಹರನ್ ಪರವಾಗಿ ಚೇತನ್ ಮತಾನಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಕ್ಕಾಗಿ, ಸಮಾಜದ ಒಳಿತಿಗಾಗಿ ಮತ್ತು ಉತ್ತಮ ಚಿತ್ರರಂಗಕ್ಕಾಗಿ ಹೋರಾಡುವ ಚಳುವಳಿಯನ್ನು ನಿಲ್ಲಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. 10 ಲಕ್ಷ ರೂ. ಹಣವನ್ನ ಮುಂಗಡವಾಗಿ ಪಡೆದಿರುವ ವಿಚಾರವನ್ನ ಕೆಲವರು ಟ್ವಿಸ್ಟ್ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನು ಓದಿ: ಚೇತನ್ ಯಾರು – ಸಾರಾ ಗೋವಿಂದು ಗರಂ

    ಅರ್ಜುನ್ ಸರ್ಜಾ ಅವರು ನನಗೆ ಕೆಲ ವರ್ಷಗಳಿಂದ ಪರಿಚಯ. ಅವರ ಜೊತೆ ನಾನು ಪ್ರೇಮ ಬರಹ ಚಿತ್ರವನ್ನ ಮಾಡಲು ಒಪ್ಪಿಕೊಂಡಿದ್ದು ನಿಜ. ಈ ಚಿತ್ರದ ಸಂಬಂಧ ಫೋಟೋ ಸೆಶನ್, ಪ್ರೀ ಶೂಟ್ ಸಹ ನಡೆದಿತ್ತು. ಆದರೆ ಕಾರಣಾಂತರಗಳಿಂದ ಪ್ರೇಮ ಬರಹ ಸಿನಿಮಾವನ್ನ ನಾನು ಮಾಡಲಿಕ್ಕೆ ಆಗಲಿಲ್ಲ. ಅವತ್ತಿನಿಂದ ಇಲ್ಲಿಯವರೆಗೂ ಸರ್ಜಾ ಅವರ ಜೊತೆ ನಾನು ಸಂಪರ್ಕದಲ್ಲಿ ಇದ್ದೇನೆ. ಶೂಟಿಂಗ್ ಸಮಯದಲ್ಲಿ ಸರ್ಜಾ ಅವರು ಬಹಳ ಪ್ರೊಫೆಶನಲ್ ಆಗಿ ನಡೆದುಕೊಂಡಿದ್ದಾರೆ. ಅವರ ಕುಟುಂಬದವರು ಸಹ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿದರು. ಇದನ್ನು ಓದಿ:  ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ

    ಅರ್ಜುನ್ ಸರ್ಜಾ ಅವರು ನನಗೆ ಯಾವತ್ತೂ ಹಣವನ್ನು ಹಿಂದಿರುಗಿಸುವಂತೆ ಇಲ್ಲಿಯವರೆಗೆ ಕೇಳಲಿಲ್ಲ. ಆದರೆ ಮುಂಬರುವ ಸಿನಿಮಾದಲ್ಲಿ ನಾವಿಬ್ಬರು ಕೆಲಸ ಮಾಡಲು ನಿರ್ಧರಿಸಿದ್ದೇವೆ. ಮುಂಗಡ ಹಣವನ್ನು ತೆಗೆದುಕೊಂಡ ತಕ್ಷಣವೇ ಯಾರು ಸಿನಿಮಾ ಮಾಡಲು ರೆಡಿಯಾಗಿರಲ್ಲ. ಕೆಲವೊಮ್ಮೆ ಹಣ ಪಡೆದು 6 ತಿಂಗಳ ಬಳಿಕವೂ ಕೆಲಸ ಮಾಡುತ್ತಾರೆ ಎಂದರು.

    ಮೋದಿ ವಿರೋಧಿಗಳು ಮತ್ತು ಎಡಪಂಥೀಯರು ಸೇರಿ ಶೃತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ, ನಾನು ಈ ವಿಚಾರದಲ್ಲಿ ರಾಜಕೀಯವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ನಮ್ಮ ಸಂಘಟನೆಯಲ್ಲಿರುವ ವ್ಯಕ್ತಿಗಳೆಲ್ಲರಿಗೂ ಅವರದ್ದೇ ಆದ ಆಲೋಚನೆಗಳು ಮತ್ತು ಅಭಿಪ್ರಾಯಗಳು ಇರುತ್ತದೆ. ಆದರೆ ಎಲ್ಲರ ಗುರಿ ಸಮಾಜದಲ್ಲಿ ಉತ್ತಮ ಚಿತ್ರರಂಗವನ್ನು ಕಟ್ಟುವುದು ಮತ್ತು ಎಲ್ಲರ ಸಮಾನತೆಗಾಗಿ ಹೋರಾಟ ನಡೆಸುವುದು. ನಾವು ಕೇವಲ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ, ಶೋಷಣೆಯ ವಿರುದ್ಧ ಮತ್ತು ನೊಂದವರ ಪರವಾಗಿ ಹೋರಾಟ ನಡೆಸುತ್ತೇವೆ. ಇದರಲ್ಲಿ ಸಮಸ್ಯೆ ಇದ್ದರೆ ನಮ್ಮ ಜೊತೆ ಚರ್ಚೆ ನಡೆಸಲಿ ಎಂದು ಚೇತನ್ ಹೇಳಿದರು.

    ನಟಿ ಶೃತಿ ವಿಚಾರಕ್ಕೆ ಬಂದರೆ, ನಮ್ಮ ಫೈರ್ ಸಂಸ್ಥೆಯಿಂದ ಅವರಿಗೆ ನಾವು ಕಾನೂನುಬದ್ಧ ಬೆಂಬಲವನ್ನ ಕೊಟ್ಟಿದ್ದೇವೆ. ಆದರೆ ಈ ಸಂಬಂಧ ನಾವು ಯಾವುದೇ ವಿಚಾರಣೆಯನ್ನ ನಡೆಸುತ್ತಿಲ್ಲ. ಕೇಸ್ ದಾಖಲಿಸುವುದು ಬಿಡುವುದು ಅವರ ತೀರ್ಮಾನ ಎಂದರು. ಇದನ್ನು ಓದಿ:  ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?

    ನನ್ನ ವಿರುದ್ಧ ಫಿಲಂ ಚೇಂಬರ್ ನಲ್ಲಿ ದೂರು ದಾಖಲಾಗಿದೆ ಎನ್ನುವ ಸುದ್ದಿಯನ್ನು ನಾನು ಕೇಳಲ್ಪಟ್ಟೆ. ಆದರೆ ಇದೂವರೆಗೂ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.  ಇದನ್ನು ಓದಿ:  ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/h6ZAuzr4cXg

    https://youtu.be/nOoBTT1xkpE

  • ಅಭಿಮಾನಿಗಳ ಜೊತೆ ಉಪ್ಪಿ, ಸಮಾಧಿ ಮುಂದೆ ವಿಷ್ಣುದಾದಾ ಬರ್ತ್ ಡೇ ಆಚರಣೆ

    ಅಭಿಮಾನಿಗಳ ಜೊತೆ ಉಪ್ಪಿ, ಸಮಾಧಿ ಮುಂದೆ ವಿಷ್ಣುದಾದಾ ಬರ್ತ್ ಡೇ ಆಚರಣೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನಟಿ ಶೃತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    ನಗರದ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಉಪೇಂದ್ರ ಅವರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 51 ನೇ ಬರ್ತ್ ಡೇ ಆಚರಿಸಿಕೊಂಡರು. ಅಭಿಮಾನಿಗಳು ಅದ್ಧೂರಿಯಿಂದ ರಿಯಲ್ ಸ್ಟಾರ್ ಬರ್ತ್ ಡೇ ಆಚರಣೆ ಮಾಡಿದ್ರು.

    ಸಾಹಸಸಿಂಹ ವಿಷ್ಣುವರ್ಧನ್ ಅವರ 68 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಧಿ ಮುಂದೆ ಕೇಕ್ ಕಟ್ ಮಾಡೋದರ ಮೂಲಕ ಸಂಭ್ರಮಿಸಿದ್ರು. ಇಂದು ಸ್ಯಾಂಡಲ್‍ವುಡ್ ನಟಿ ಶೃತಿ ಸಹ ತಮ್ಮ ಬರ್ತ್‍ಡೇ ಆಚರಿಸಿಕೊಂಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಉಪೇಂದ್ರ, ಸಿನಿಮಾಕ್ಕೆ ಸೇರಿ ಬಳಿಕ ಇದೂವರೆಗೂ ನಾನು ಬರ್ತ್ ಡೇ ಆಚರಿಸಿಕೊಂಡಿಲ್ಲ. ಅಭಿಮಾನಿಗಳೇ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಹೀಗಾಗಿ ಇದು ಅಭಿಮಾನಿಗಳ ದಿನವೆಂದು ನಾನು ಯಾವತ್ತೂ ಹೇಳುತ್ತೇನೆ. ಇಂದು ಉಪ್ಪಿ ಬರ್ತ್ ಡೇ ಆಗಿದೆ. ಇನ್ನು ಮುಂದೆ ಯುಪಿಪಿ ಬರ್ತ್ ಡೇ ಆಗಬೇಕು. ಈಗಿನ ಜನಾಂಗ ಇನ್ನು 50 ವರ್ಷಗಳ ಕಾಲ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಹೀಗಾಗಿ ಇಂದು ಅದಕ್ಕೋಸ್ಕರ ಒಂದು ವೇದಿಕೆ ಮಾಡಿದ್ದೇನೆ. ನಿಮಗೆಲ್ಲರಿಗೂ ಅದರ ಬಗ್ಗೆ ವಿವರವಾಗಿ ವಿಷಯ ತಿಳಿಸುತ್ತೇನೆ ಅಂದ್ರು.

    ಪ್ರಜಾಕೀಯದಲ್ಲಿ ಏಳು-ಬೀಳು ಅನ್ನೋದು ಇಲ್ಲ. ಯಾರು ನಂಬಿಕೆಯಿಟ್ಟು ಮುಂದೆ ಬರುತ್ತಾರೋ ಅವರಿಗೆ ಗೆಲುವು ಅಂತಾನೇ ಅರ್ಥ. ಎಷ್ಟು ವರ್ಷವಾದ್ರೂ ಸತ್ಯ ಹೇಳೋದಕ್ಕೆ ಸೋಲು-ಗೆಲುವು ಇಲ್ಲ. ಯಾವತ್ತಿದ್ರೂ ಇದಾಗಬೇಕು. ಖಂಡಿತ ಒಳ್ಳೆಯದಾಗುತ್ತದೆ. ಇಲ್ಲಿ ಯಾರು ತಪ್ಪು ಮಾಡುತ್ತಿದ್ದಾರೆ ಅಂತ ಹೇಳಲ್ಲ, ಹೀಗಾಗಿ ಅವರೆಲ್ಲರೂ ದೊಡ್ಡವರು. ತುಂಬಾ ವರ್ಷಗಳಿಂದಲೂ ಇರುವವರು, ಆದುದರಿಂದ ನಮಗಿಂತಲೂ ಅವರಿಗೆ ತುಂಬಾನೇ ಅನುಭವ ಇದೆ. ಆದ್ರೆ ಇಲ್ಲಿ ಹೊಸಬರೇ ಮಾಡಬೇಕಾದ್ದರಿಂದ ನಾನು ಹೊಸಬರಿಗೆ ಅಂತಾನೇ ಒಂದು ಪಕ್ಷ ಮಾಡಿದ್ದೇನೆ ಅಂತ ಹೇಳಿದ್ರು.

    ಇದೇ ವೇಳೆ ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಿಷ್ಣು ದಾದಾ ಅವರ 69ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತೀ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಭಿಮಾನಿಗಳು ಸೇರಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಬೆಳಗ್ಗೆ ಇತಿಶ್ರೀ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ರಕ್ತದಾನ ಶಿಬಿರ, ಮನರಂಜನಾ ಕಾರ್ಯಕ್ರಮ, ಡೆಂಟಲ್ ಹಾಗೂ ನೇತ್ರದಾನ ಶಿಬಿರಗಳನ್ನು ಮಾಡುತ್ತಿದ್ದೇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟಿ ಶೃತಿ ಪ್ರಚಾರದ ವೇಳೆ ಆತಂಕದ ವಾತಾವರಣ ನಿರ್ಮಾಣ

    ನಟಿ ಶೃತಿ ಪ್ರಚಾರದ ವೇಳೆ ಆತಂಕದ ವಾತಾವರಣ ನಿರ್ಮಾಣ

    ಧಾರವಾಡ: ನಟಿ ಹಾಗು ಬಿಜೆಪಿ ವಕ್ತಾರೆ ಶೃತಿ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

    ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಏಕಕಾಲದಲ್ಲಿ ಎದುರುಗೊಂಡಾಗ ಒಬ್ಬರ ಮೇಲೋಬ್ಬರಂತೆ ಕಾರ್ಯಕರ್ತರು ಪಕ್ಷದ ಪರ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಎರಡು ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಿ ಕಳುಹಿಸಿದ್ರು.

    ಶೃತಿ ಅವರ ಪ್ರಚಾರದ ಸಮಯದಲ್ಲಿಯೇ ಸಚಿವ ವಿನಯ್ ಕುಲಕರ್ಣಿ ಪ್ರಚಾರದ ವೇಳೆ ನಿಗದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಮುಖಾಮುಖಿಯಾದ ಎರಡು ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿರತು.

  • ಸ್ಯಾಂಡಲ್‍ವುಡ್ ನ  ಮೂವರು ದಿಗ್ಗಜರಿಗೆ ಇಂದು ಬರ್ತ್ ಡೇ

    ಸ್ಯಾಂಡಲ್‍ವುಡ್ ನ ಮೂವರು ದಿಗ್ಗಜರಿಗೆ ಇಂದು ಬರ್ತ್ ಡೇ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇಂದು ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

    ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ 67ನೇ ಜಯಂತೋತ್ಸವ. ಕಳೆದ ವರ್ಷದಂತೆ ಈ ವರ್ಷ ಕೂಡ ವಿಷ್ಣುದಾದ ಅವರ ಹುಟ್ಟುಹಬ್ಬವನ್ನ 2 ಕಡೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಿಸಿದ್ರೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ದಾದಗೆ ನಮಿಸಲಿದ್ದಾರೆ.

    ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗ್ಲೇ ಉಡುಗೊರೆ, ಹಾರ, ಕೇಕ್ ಬೇಡ ಅಂತ ಹೇಳಿರೋ ಉಪ್ಪಿ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ. ಉಪ್ಪಿ ಅಭಿನಯದ ಉಪೇಂದ್ರ ಮತ್ತೆ ಹುಟ್ಟಿಬಾ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಕೂಡ ಲಾಂಚ್ ಆಗಲಿದೆ.

    ಇನ್ನೂ ಸ್ಯಾಂಡಲ್‍ವುಡ್ ಚಂದದ ಗೊಂಬೆ ಶೃತಿ ಅವರು 42 ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಓಂ ಸಾಯಿಪ್ರಕಾಶ್ ಸಾರಥ್ಯದ ಅಬ್ಬೆ ತುಮಕೂರು ವಿಶ್ವಾರಾಧ್ಯರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗ್ತಿರೋ ಶೃತಿ ಶೂಟಿಂಗ್ ಸೆಟ್‍ನಲ್ಲಿ ಕುಟುಂಬ ಸಮೇತ ಹುಟ್ಟುಬ್ಬ ಆಚರಿಸಿದ್ದಾರೆ. ವಿಷ್ಣುದಾದ ದೈಹಿಕವಾಗಿ ನಮ್ಮ ಜೊತೆ ಇಲ್ಲವಾದ್ರು ಅಭಿಮಾನಿಗಳ ಮನದಲ್ಲಿ ಅವ್ರು ಎಂದಿಗೂ ಅಮರ. ಬರ್ತ್ ಡೇ ಸಂಭ್ರಮದಲ್ಲಿರೋ ರಿಯಲ್ ಸ್ಟಾರ್ ಉಪ್ಪಿ, ನಟಿ ಶೃತಿ ಅವ್ರು ಇನ್ನಷ್ಟು ಒಳ್ಳೆ ಕೆಲಸ ಮಾಡಿ ಉತ್ತಮ ಹೆಸರುಗಳಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.