Tag: ಶೃತಿ ನಾಯ್ಡು

  • ವಜ್ರಮುಖಿ ಆಡಿಯೋ & ಟ್ರೈಲರ್ ನೋಡಿದಿರಾ?

    ವಜ್ರಮುಖಿ ಆಡಿಯೋ & ಟ್ರೈಲರ್ ನೋಡಿದಿರಾ?

    ಬೆಂಗಳೂರು: ಪಿ.ಎಂ. ಶಶಿಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹಾರರ್ ಚಿತ್ರ ವಜ್ರಮುಖಿ. ಇದಕ್ಕೂ ಮೊದಲು ಡೇಸ್ ಆಫ್ ಬೋರಾಪುರ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಎನ್. ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಹೊರಬರುತ್ತಿದೆ. ಟ್ರಯಾಂಗಲ್ ಲವ್ ಹಾರರ್ ಕಥಾನಕ ಹೊಂದಿರೋ ಈ ಚಿತ್ರದಲ್ಲಿ ನಟಿ ನೀತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಸಂಜನಾ ನಾಯ್ಡು ಹಾಗೂ ದಿಲೀಪ್ ಪೈ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಫಿಲಂ ಛೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಕರಿಸುಬ್ಬು ಹಾಗೂ ಶಿಲ್ಪಾ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಡಿಯೋ ರಿಲೀಸ್ ಮಾಡಿದರು.

    ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ ಶಶಿಕುಮಾರ್ ಮಾತನಾಡಿ, ಈ ಹಿಂದೆ ಸಿಂಗದೂರು ಚೌಡೇಶ್ವರಿ ಎಂಬ ಭಕ್ತಿಪ್ರಧಾನ ಚಿತ್ರ ನಿರ್ದೇಶಿಸಿದ್ದೆ. ಈಗ ವಜ್ರಮುಖಿ ಎನ್ನುವ ಹಾರರ್ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಇದು ಹಾರರ್ ಲವ್ ಟ್ರೈಯಾಂಗಲ್ ಚಿತ್ರ. ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ ಎಂದು ಹೇಳಿದರು. ನಟಿ ನೀತು, ದಿಲೀಪ್, ಮೇಘನಾ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು.

  • ಐದು ಜನರ ಹಿಂದೆ ಜಗ್ಗಾಡಬೇಡಿ ಅಂದ್ರು ಜಗ್ಗಣ್ಣ!

    ಐದು ಜನರ ಹಿಂದೆ ಜಗ್ಗಾಡಬೇಡಿ ಅಂದ್ರು ಜಗ್ಗಣ್ಣ!

    ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಇರುವುದು ಬರೀ ಐದು ಜನ ಹೀರೋಗಳಷ್ಟೇನಾ? ಯಾರೇ ಉತ್ತಮ ಸಿನಿಮಾ ಮಾಡಿದರೂ ಪ್ರೇಕ್ಷಕರು ಅವರ ಕೈಹಿಡಿಯಬೇಕು. ಚೆಂದಗೆ ಸಿನಿಮಾ ಮಾಡಿದವರಿಗೆ ಬೆನ್ನು ತಟ್ಟಬೇಕು. ನನಗಿದ್ದ ಕ್ವಾಲಿಟಿಗೆ ನನ್ನನ್ನು ಯಾರು ತಾನೆ ಹೀರೋ ಮಾಡಲು ಬರುವಂತಿತ್ತು? ನಾನು ಧೈರ್ಯ ಮಾಡಿ ನನ್ನ ಭಾವನ ಜೊತೆ ಸೇರಿ ಭಂಡ ನನ್ನ ಗಂಡ ಸಿನಿಮಾ ಮಾಡಿದೆ. ಸಿನಿಮಾವನ್ನು ಜನ ಕೈ ಹಿಡಿದರು. ಇವತ್ತು ನಾನು ಮುಂದಿನ ಪೀಳಿಗೆಗೆ ಒಂದಿಷ್ಟು ಸಲಹೆ ನೀಡಲಿಕ್ಕಾದರೂ ಕೂರುವಂತಾಗಿದೆ. ನಮ್ಮ ನೆಲದಲ್ಲಿ ಅದ್ಭುತ ಪ್ರತಿಭೆಗಳಿವೆ. ಹೊಸಬರ ಕೈ ಹಿಡಿದರೆ ಅವರೂ ಮುಂದೊಂದು ದಿನ ತಮ್ಮ ಮುಂದಿನ ಪೀಳಿಗೆಗೆ ಒಂದಿಷ್ಟು ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಆಂಧ್ರದಲ್ಲಿ ನೋಡಿದರೆ ನಾಲ್ಕು ಜನ, ತಮಿಳುನಾಡಿನಲ್ಲೂ ನಾಲ್ಕೇ ಜನ, ಕೇರಳಕ್ಕೆ ಹೋದರೆ ಅಲ್ಲಿ ಮೂರು ಮತ್ತೊಂದು ಜನರೇ ಚಿತ್ರರಂಗದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಐದು ಜನ ಹೀರೋಗಳನ್ನೇ ಹಿಡಿದುಕೊಂಡು ಜಗ್ಗಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದೆ ಬೇರೆಯವರನ್ನೂ ಪ್ರೋತ್ಸಾಹಿಸಿ…’ ಇದು ನವರಸ ನಾಯಕ ಜಗ್ಗೇಶ್ ನುಡಿಗಳು.

    ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಜಗ್ಗೇಶ್ ಅವರನ್ನು ಹೊರತುಪಡಿಸಿದರೆ ಮಿಕ್ಕವರೆಲ್ಲರೂ ಬಹುತೇಕ ನವ ಪ್ರತಿಭೆಗಳು. ಈ ಚಿತ್ರದಲ್ಲಿ ಹೊಸ ಕಲಾವಿದರ ಜೊತೆಗೆ ಅಭಿನಯಿಸಿದ್ದು ಜಗ್ಗೇಶ್ ಅವರಿಗೆ ಮತ್ತಷ್ಟು ಹುರುಪು ತುಂಬಿದೆಯಂತೆ. ಶೃತಿ ನಾಯ್ಡು ನಿರ್ಮಾಣದ, ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಇದೇ ತಿಂಗಳು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ಮಧುಬಾಲಾ ಮತ್ತು ಸುಧಾರಾಣಿ ಕೂಡಾ ನಟಿಸಿದ್ದಾರೆ.

    https://twitter.com/premierpadmini/status/1100342311660093440

  • ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಶೃತಿ ನಾಯ್ಡು ಸ್ಯಾಂಡಲ್ ವುಡ್‍ಗೆ ಎಂಟ್ರಿ!

    ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಶೃತಿ ನಾಯ್ಡು ಸ್ಯಾಂಡಲ್ ವುಡ್‍ಗೆ ಎಂಟ್ರಿ!

    ಬೆಂಗಳೂರು: ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ಮಾಪಕಿ ಶೃತಿ ನಾಯ್ಡು ಇದೀಗ ಸ್ಯಾಂಡಲ್ ವುಡ್ ನಿರ್ಮಾಪಕಿಯಾಗಿದ್ದಾರೆ.

    ಪತಿ ರಮೇಶ್ ಆ್ಯಕ್ಷನ್ ಕಟ್ ಹೇಳುತ್ತಿರೋ ಚಿತ್ರಕ್ಕೆ ಶೃತಿ ನಾಯ್ಡು ಹಣ ಹೂಡುತ್ತಿದ್ದಾರೆ. ಶೃತಿ ನಾಯ್ಡು ಪತಿ ರಮೇಶ್ ಗಗನ ಇಂದ್ರ ನಿರ್ದೇಶನದಲ್ಲಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಮೂಡಿ ಬರಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಮಧುಬಾಲಾ ಅಭಿನಯಿಸುತ್ತಿದ್ದಾರೆ.

    ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಪ್ರೀಮಿಯರ್ ಕಾರ್ ಜೊತೆಗೆ ಫೋಟೋಶೂಟ್ ಮಾಡಲಾಗಿದ್ದು, ಮಹೇಂದ್ರ ಸಿಂಹ ಫೋಟೋಗ್ರಫಿಯಲ್ಲಿ ಜಗ್ಗೇಶ್ ಹಾಗೂ ಕಿರುತೆರೆ ನಟ ಪ್ರಮೋದ್ ಸಖತ್ ಪೋಸ್ ನೀಡಿದ್ದಾರೆ. ಸದ್ಯ ಏ. 18 ಕ್ಕೆ ಚಿತ್ರಕ್ಕೆ ಮೂಹೂರ್ತ ಫಿಕ್ಸ್ ಮಾಡಲಾಗಿದೆ.